ಹಿಂದೊಮ್ಮೆ ಗುರುವಿನ ಬಗ್ಗೆ ಬರೆದಿದ್ದೆ, ಇಂದು ಜಗದಮಿತ್ರ ಮತ್ತೊಮ್ಮೆ ತನ್ನ ಶೈಲಿಯಲ್ಲಿ ಸದ್ಗುರುವಿನ ವರ್ಣನೆ ಮಾಡಹೊರಟಿದ್ದಾನೆ. ಗುರುವಿನ ಬಗ್ಗೆ ಬರೆದಷ್ಟೂ ಕಮ್ಮಿಯೇ ಯಾಕೆಂದರೆ ಆ ತತ್ವವೇ ಹಾಗೆ;ಆ ಪದವೇ ಒಂದು ಬ್ರಹ್ಮ ಬೋಧ ಪದ. ಗುರು ಅಂದರೆ ಯಾರು ಎಂತ ತಿಳಿಯ ಹೊರಟರೆ ಅದು ಮೂಲ ಪರಬ್ರಹ್ಮನನ್ನು ತಲುಪುತ್ತದೆ, ಆ ಪರಬ್ರಹ್ಮನೇ ಗುರು! ಹಾಗಾದರೆ ನಾವು ನೋಡುವ ಗುರುಗಳೆನಿಸಿದವರೆಲ್ಲ ಪರಬ್ರಹ್ಮರೇ ? ಅವರೆಲ್ಲ ಪರಬ್ರಹ್ಮನ ಅವತರಣಿಕೆ ಕಂಡುಕೊಳ್ಳ ಹೊರಟ ಅವನ ಸಂಪೂರ್ಣ ಅನುಯಾಯಿಗಳು.
ಒಂದು ಶ್ಲೋಕ ನೋಡಿ --
ಆದಿನಾರಾಯಣನಿಂದ ಪ್ರಾರಂಭವಾಗಿ ಬ್ರಹ್ಮಾಣ ಮತ್ತು ವಶಿಷ್ಠರಿಂದ ಮುಂದುವರಿಸಲ್ಪಟ್ಟು ಶ್ರೀರಾಮ ಮತ್ತು ಮಾರುತಿಯಿಂದಲೂ ಆಚರಿಸಲ್ಪಟ್ಟು ಸಮರ್ಥ ರಾಮದಾಸರಿಂದಲೂ ಮತ್ತು ಶ್ರೀಧರ ಸ್ವಾಮಿಗಳಿಂದಲೂ ಹಾಗೇ ಮುಂದುವರಿಯಿತು. ಇದು ಒಂದು ಪರಂಪರೆ.
ಇನ್ನೊಂದು ನೋಡಿ --
ಒಂದು ಶ್ಲೋಕ ನೋಡಿ --
ಆದಿನಾರಾಯಣಂ ವಿಷ್ಣುಂ ಬ್ರಹ್ಮಾಣಂಚ ವಶಿಷ್ಠಕಂ |
ಶ್ರೀರಾಮಂ ಮಾರುತಿಂ ವಂದೇ ರಾಮದಾಸಂಚ ಶ್ರೀಧರಂ ||
ಶ್ರೀರಾಮಂ ಮಾರುತಿಂ ವಂದೇ ರಾಮದಾಸಂಚ ಶ್ರೀಧರಂ ||
ಆದಿನಾರಾಯಣನಿಂದ ಪ್ರಾರಂಭವಾಗಿ ಬ್ರಹ್ಮಾಣ ಮತ್ತು ವಶಿಷ್ಠರಿಂದ ಮುಂದುವರಿಸಲ್ಪಟ್ಟು ಶ್ರೀರಾಮ ಮತ್ತು ಮಾರುತಿಯಿಂದಲೂ ಆಚರಿಸಲ್ಪಟ್ಟು ಸಮರ್ಥ ರಾಮದಾಸರಿಂದಲೂ ಮತ್ತು ಶ್ರೀಧರ ಸ್ವಾಮಿಗಳಿಂದಲೂ ಹಾಗೇ ಮುಂದುವರಿಯಿತು. ಇದು ಒಂದು ಪರಂಪರೆ.
ಇನ್ನೊಂದು ನೋಡಿ --
ಸದಾಶಿವಸಮಾರಂಭಾಂ ಶಂಕರಾಚಾರ್ಯ ಮಧ್ಯಮಾಂ |
ಅಸ್ಮದಾಚಾರ್ಯಪರ್ಯಂತಾಂ ವಂದೇ ಗುರು ಪರಂಪರಾಮ್ ||
ಅಸ್ಮದಾಚಾರ್ಯಪರ್ಯಂತಾಂ ವಂದೇ ಗುರು ಪರಂಪರಾಮ್ ||
ಇಲ್ಲಿ ಸದಾಶಿವನಿಂದ ಪ್ರಾರಂಭಿಸಲ್ಪಟ್ಟು ಶಂಕರಾಚಾರ್ಯರಿಂದ ಮುಂದುವರಿಸಲ್ಪಟ್ಟು ನಮ್ಮ ಈಗಿನ ಆಚಾರ್ಯರುಗಳ ವರೆಗೆ ಎಲ್ಲರನ್ನೂ ಹೆಸರಿಸುತ್ತದೆ. ಪರಂಪರೆ ಯಾವುದೇ ಇದ್ದರೂ ಗುರುವಿನ ಮೂಲ ಪರಬ್ರಹ್ಮನನ್ನು ಸಂಬೋಧಿಸುತ್ತದೆ. ಗುರು ಎಂದರೆ ಮೊದಲಾಗಿ ಸನ್ಯಾಸಿ, ಒಂದೇ ಅಕ್ಷರ ಕಲಿಸಿದಾತನೂ ಗುರು ಎನ್ಸಿಕೊಂಡರೂ ಆ ಗುರು ಲೌಕಿಕ ಗುರುವಾಗಿರುವುದರಿಂದ ಗುರುವೆನ್ನುವ ಪದದ ಸಂಪೂರ್ಣ ಅರ್ಥ ಅವರಿಗೆಲ್ಲ ಅನ್ವಯಿಸುವುದಿಲ್ಲ. ಇಹದ ನಡೆಗೆ ವಿದಾಯ ಹೇಳಿ ಪರದ ಪದವನ್ನು,ಪರಮ ಪದವನ್ನು ಬಯಸುವಾತನೇ ಗುರು. ಇಲ್ಲಿ ನಾವೆಣಿಸಲಾರದಷ್ಟು ತ್ಯಾಗ ಇದೆ, ತನ್ನ ಜೀವನವನ್ನು ಸಂಪೂರ್ಣವಾಗಿ ತಪಸ್ಸಿಗೆ ಮೀಸಲಿಡುವ ಅರ್ಪಣೆಯಿದೆ,ಅರಿಷಡ್ವರ್ಗಗಳನ್ನು ಮೆಟ್ಟಿನಿಲ್ಲುವ ದಾರ್ಷ್ಟ್ಯತೆ ಇದೆ, ಎಂತಹ ಪ್ರಲೋಭನೆಗೂ ಒಳಗಾಗದೆ ನಿರಂತರ ಪರಮಾತ್ಮನ ಅನುಸಂಧಾನ ಮಾಡುವ ತಾದಾತ್ಮ್ಯತೆ ಇದೆ, ಕಾಣ ಬರುವ ಆರ್ತರ-ದುಃಖಿತರ ಕಣ್ಣೀರೊರೆಸುವ ಮಾನವೀಯತೆಯಿದೆ, ಭಗವಂತನ ತಡವಾಗುವ ದರುಶನಕ್ಕೆ ಕಾದು ನಿಲ್ಲುವ ಸಹನೆಯಿದೆ.
ಎಲ್ಲೋ ಯಾರೋ ನಾವು ಅಪರೂಪಕ್ಕೊಮ್ಮೆ ಸಭೆ ಸಮಾರಂಭಗಳಲ್ಲಿ ಗುರುಗಳನ್ನು ನೋಡಿದಾಗ, ಅವರಿಗೆ ಎಲ್ಲರೂ ಕಾಣಿಕೆ ಸುರಿವಾಗ,ಹಣ್ಣು-ಹಂಪಲು ಇತ್ತು ನಮಿಸುವಾಗ,ಮೆರವಣಿಗೆಯಲ್ಲಿ ಕರೆದೊಯ್ಯುವಾಗ, ಭವ್ಯವಾದ ಆಸನದಲ್ಲಿ ಅವರು ಕುಳಿತಾಗ ನಮಗೂ ಅನಿಸುತ್ತದೆ, ಕಾವಿ ತೊಟ್ಟರೆ ಎಷ್ಟು ಸುಖವಪ್ಪಾ ಎಂದು !
ಆದರೆ ನಿಜವಾಗಿ ಅವರು ಅವುಗಳ್ಯಾವುದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅದೆಲ್ಲ ಅವರಿಗೆ ಗೌಣ. ಸಮುದ್ರದ ದಂಡೆಯಲ್ಲೇ ಇದ್ದರೂ ಉಪ್ಪಿನ ಬಳಕೆ ಇಲ್ಲ, ಅದು ಅವರಿಗೆ ಸಲ್ಲ. ಹೀಗೇ ಇರುವ ಬರುವ ಎಲ್ಲವನ್ನೂ ತ್ಯಜಿಸಿ ತನ್ನ ದಂಡ,ಕಮಂಡಲು ಮತ್ತು ಜಪಮಾಲೆ ಇವಿಷ್ಟನ್ನೇ ಆಸ್ತಿ ಎಂಬಂತೆ ರಕ್ಷಿಸಿಕೊಳ್ಳುತ್ತ ಇಡೀ ದಿನ ಆಂತರ್ಯದಲ್ಲಿ ಭಗವಂತನ ಧ್ಯಾನದಲ್ಲಿ ಲೀನವಾಗಿರುವವರು ಗುರುಗಳಾಗಿರುತ್ತಾರೆ. ಇಂತಹ ಗುರು ಪದ ಪೂರ್ವಜನ್ಮದ ಸುಕೃತದಿಂದಲೇ ಯೋಗದಿಂದಲೇ ಬರಬೇಕೆ ಹೊರತು ಕಂಡವರೆಲ್ಲಾ ಸನ್ಯಾಸಿಯಾಗಲು ಸಾಧ್ಯವಿಲ್ಲ. ಕಾವಿ / ಕೇಸರಿ ಬಣ್ಣ ಅಲೌಕಿಕ ಆನಂದವನ್ನು ಕೊಡುತ್ತದೆ, ಅದು ಅಪೌರುಷೇಯವನ್ನು ಬಿಂಬಿಸುತ್ತದೆ,ವೈರಾಗ್ಯವನ್ನು ಎತ್ತಿ ತೋರುತ್ತದೆ. ಅದಕ್ಕಾಗಿ ಸನ್ಯಾಸಿಗಳು ಕಾವಿಬಟ್ಟೆಯನ್ನು ಧರಿಸುತ್ತಾರೆ. ಇಸ್ತ್ರಿ ಇರದ, ಅಲಂಕಾರ ಇರದ ಬಟ್ಟೆಯನ್ನು ಹಾಗೇ ಹೇಗೋ ಸುತ್ತಿಕೊಳ್ಳುತ್ತಾರೆ, ಆ ಸುತ್ತಿಕೊಳ್ಳುವಿಕೆ ಕೂಡ ಲಕ್ಷಣವಾಗಿರುವುದಿಲ್ಲ, ಯಾಕೆಂದರೆ ವಿರಾಗಿಗಳಿಗೆ ಬಟ್ಟೆಗಳನ್ನೆಲ್ಲ ಶಿಸ್ತಾಗಿ ಉಡುವ ಹಂಬಲ ಇರುವುದಿಲ್ಲ. ನೋಡುವ ಭಕ್ತರ ಕಣ್ಣಿಗೆ ಗುರುವಿನ ಬಾಹ್ಯ ಸೌಂದರ್ಯ ಚೆನ್ನಾಗಿ ಕಾಣದಿರಲಿ ಎಂಬುದೂ ಒಂದು ಕಾರಣ.
ಹೇಗೆ ಭೂಮಿ ತನ್ನ ಮೈಯ್ಯನ್ನೇ ಸುತ್ತಿಕೊಳ್ಳುತ್ತಾ ಸೂರ್ಯನನ್ನು ಸುತ್ತುತ್ತಿರುತ್ತದೋ ಹಾಗೆಯೇ ಸನ್ಯಾಸಿಗಳು ತಮ್ಮ ಆತ್ಮೋದ್ಧಾರದ ಜೊತೆ ಜೊತೆಗೆ ಅನೇಕರಿಗೆ ಮಾರ್ಗದರ್ಶಿಸುವ, ಹರಸುವ, ಸಂಸ್ಕಾರ ಕೊಡುವ, ತಿದ್ದುವ-ತೀಡುವ, ಸನ್ಮಾರ್ಗ ಬೋಧಿಸುವ, ಆರ್ತರ ಕಣ್ಣೀರು ಒರೆಸುವ, ಸಂಕಷ್ಟಗಳಿಂದ ಅವರನ್ನು ದೈವೀಕೃಪೆ ದೊರಕಿಸಿ ಪಾರಾಗಿಸುವ ಸ್ವಭಾವವನ್ನು ಹೊಂದಿರುತ್ತಾರೆ. ಇಂತಹ ಸಮಯ ಅನೇಕಸಲ ತಮ್ಮ ತಪಸ್ಸಿನ ಶಕ್ತಿಯನ್ನು ಭಾಗಶಃ ತನ್ನ ಭಕ್ತರಿಗೆ ಧಾರೆ ಎರೆಯುತ್ತಾರೆ. ಅದರ ಪರಿಣಾಮವೇ ಅನೇಕರಿಗೆ ಅವರವರ ಸಮಸ್ಯೆಗಳು ನಿವಾರಿಸಲ್ಪಡುತ್ತವೆ. ನೌಕೆಗೆ ನಾವಿಕ ಮುಖ್ಯ ಹೇಗೋ ಹಾಗೇ ಜೀವನ ನೌಕೆಗೆ ಗುರುವೇ ನಾವಿಕರು ಎಂದರೆ ಅದು ತಪ್ಪಲ್ಲ! ಕೆಲವೊಮ್ಮೆ ಅನಿವಾರ್ಯತೆಯಲ್ಲಿ ತಾವು ಪಡೆದ ಅತಿ ಮಾನುಷ ಶಕ್ತಿಯಿಂದ ಕೆಲವು ಗೂಢ, ಕ್ಲಿಷ್ಟ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಾರೆ.
ಜೀವನದಲ್ಲಿ ಸದ್ಗುರುವನ್ನು ಪಡೆಯಲೂ ಯೋಗಬೇಕು, ಅವರ ಅಪ್ಪಣೆ ಸಿಗಬೇಕು. ಗುರುವನ್ನು ಕಾದು ದರ್ಶನ ಮಾಡಬೇಕು.ಜನರ ಅಹವಾಲುಗಳನ್ನು ಸ್ವೀಕರಿಸಿ ಅವರ ಕಷ್ಟಗಳನ್ನೆಲ್ಲ ತಾನು ಅನುಭವಿಸವಂತೆ ಪಡೆದು, ಹರಸುವ ಎಲ್ಲ ತಾಯಿಗೂ ಮಿಗಿಲಾದ ತಾಯ್ತನ ಮೆರೆಯುವ ಗುರು ಲೋಕದ ಅತಿ ಶ್ರೇಷ್ಠ ವ್ಯಕ್ತಿ, ಪರಬ್ರಹ್ಮನ ವಿರಾಟ್ ಸ್ವರೂಪಗಳಲ್ಲಿ ಒಂದು ರೂಪ. ಅಂತಹ ಗುರುವನ್ನು ಜಗದಮಿತ್ರ ಸದಾ ನೆನೆಯುತ್ತಾನೆ.
ಗುರು ತತ್ವ
ಇಹದ ಬದುಕಿನ ಬವಣೆ ಕಿತ್ತೊಗೆಯ ಬಯಸುತ್ತ
ಗಹನವಾಗಿಹ ನಿರ್ವಿಷಯ ಧ್ಯಾನಿಸುತ
ಸಹನ ಮೂರುತಿಯಾಗಿ ಅರಿಗಳಂ ನಿಗ್ರಹಿಸಿ
ಬಹಳ ತ್ಯಾಗವ ಗೈವ | ಜಗದಮಿತ್ರ
ತನ್ನಾಪ್ತರಂ ತಂದೆ-ತಾಯ್ಗಳಂ ತೊರೆಯುತ್ತ
ಮುನ್ನ ಎಲ್ಲರನೊಮ್ಮೆ ಮನದಿ ಧ್ಯಾನಿಸುತ
ಘನ್ನ ಮಹಿಮನ ನೋಳ್ಪ ಹೊಸದಾದ ಒಸಗೆಯಲಿ
ತನ್ನತನವನು ತೊರೆವ | ಜಗದಮಿತ್ರ
ಆಟಪಾಠದ ದಿನವ ಬದಿಗಿರಿಸಿ ನೋಂಪಿಯಲಿ
ಕಾಟಕಾಂಬರನ ರೂಪವ ನಿಲಿಸಿ ಮನದಿ
ಕೋಟಿ ಹಲವನು ಮೀರಿ ತನ್ನಾತ್ಮ ವೀಣೆಯಂ
ಮೀಟಿ ತಂತಿಯ ಮೆರೆವ | ಜಗದಮಿತ್ರ
ಬಣ್ಣ ದಿರಿಸುಗಳೆಲ್ಲ ಬದಿಗಿರಿಸಿ ಸಣ್ಣನೆಯ
ಚಣ್ಣ ಕೌಪೀನ ಕಾವಿಯ ಶಾಟಿ ಧರಿಸಿ
ಕಣ್ಣನೀರನು ಒರೆಸೆ ಜಗದಿ ಹಲವರಿಗಾಗಿ
ಅಣ್ಣ ತೆರೆದನು ಶಾಲೆ | ಜಗದಮಿತ್ರ
ಸತತ ಓಂಕಾರವನು ಹೃದಯಕಮಲದಿ ಹುದುಗಿ
ಪತಿತ ಪಾವನ ಪದವ ನಿತ್ಯ ನೋಡುತಲಿ
ಕಥಿತ ದೃಷ್ಟಾಂತಗಳ ಸಾಕಾರತೋರ್ಪಡಿಸಿ
ಮಥಿತ ಮೊಸರಿನ ತೆರದಿ | ಜಗದಮಿತ್ರ
ನಿಜದ ನೆಲೆ ಅರಿವೆಡೆಗೆ ಸುಜನಹೃದಯದಿ ಯತ್ನ
ರಜ ಸತ್ವ ತಾಮಸದ ಗಡಿಯ ಮೀರುತಲಿ
ಅಜ ಹರಿ ಹರರನ್ನು ಭಜಿಸಿ ಒಂದೇ ಪದದಿ
ಸಜೆಯ ಬಿಡಿಸುವ ನೋಡ | ಜಗದಮಿತ್ರ
ಗುರುವು ತನದೇ ಅರಿವು ನಿರ್ವಿಣ್ಣ ರೂಪದಲಿ
ಧರೆಯ ಹಂಗನು ತೊರೆವ ಭವದ ಬದುಕಿನಲಿ
ಪರಮಹಂಸ ಎಂಬ ಸ್ಥಿತಿಯ ಭುಂಜಿಸತೊಡಗಿ
ಹರಸಿ ಎಲ್ಲರ ಪೊರೆವ | ಜಗದಮಿತ್ರ
ಗಹನವಾಗಿಹ ನಿರ್ವಿಷಯ ಧ್ಯಾನಿಸುತ
ಸಹನ ಮೂರುತಿಯಾಗಿ ಅರಿಗಳಂ ನಿಗ್ರಹಿಸಿ
ಬಹಳ ತ್ಯಾಗವ ಗೈವ | ಜಗದಮಿತ್ರ
ತನ್ನಾಪ್ತರಂ ತಂದೆ-ತಾಯ್ಗಳಂ ತೊರೆಯುತ್ತ
ಮುನ್ನ ಎಲ್ಲರನೊಮ್ಮೆ ಮನದಿ ಧ್ಯಾನಿಸುತ
ಘನ್ನ ಮಹಿಮನ ನೋಳ್ಪ ಹೊಸದಾದ ಒಸಗೆಯಲಿ
ತನ್ನತನವನು ತೊರೆವ | ಜಗದಮಿತ್ರ
ಆಟಪಾಠದ ದಿನವ ಬದಿಗಿರಿಸಿ ನೋಂಪಿಯಲಿ
ಕಾಟಕಾಂಬರನ ರೂಪವ ನಿಲಿಸಿ ಮನದಿ
ಕೋಟಿ ಹಲವನು ಮೀರಿ ತನ್ನಾತ್ಮ ವೀಣೆಯಂ
ಮೀಟಿ ತಂತಿಯ ಮೆರೆವ | ಜಗದಮಿತ್ರ
ಬಣ್ಣ ದಿರಿಸುಗಳೆಲ್ಲ ಬದಿಗಿರಿಸಿ ಸಣ್ಣನೆಯ
ಚಣ್ಣ ಕೌಪೀನ ಕಾವಿಯ ಶಾಟಿ ಧರಿಸಿ
ಕಣ್ಣನೀರನು ಒರೆಸೆ ಜಗದಿ ಹಲವರಿಗಾಗಿ
ಅಣ್ಣ ತೆರೆದನು ಶಾಲೆ | ಜಗದಮಿತ್ರ
ಸತತ ಓಂಕಾರವನು ಹೃದಯಕಮಲದಿ ಹುದುಗಿ
ಪತಿತ ಪಾವನ ಪದವ ನಿತ್ಯ ನೋಡುತಲಿ
ಕಥಿತ ದೃಷ್ಟಾಂತಗಳ ಸಾಕಾರತೋರ್ಪಡಿಸಿ
ಮಥಿತ ಮೊಸರಿನ ತೆರದಿ | ಜಗದಮಿತ್ರ
ನಿಜದ ನೆಲೆ ಅರಿವೆಡೆಗೆ ಸುಜನಹೃದಯದಿ ಯತ್ನ
ರಜ ಸತ್ವ ತಾಮಸದ ಗಡಿಯ ಮೀರುತಲಿ
ಅಜ ಹರಿ ಹರರನ್ನು ಭಜಿಸಿ ಒಂದೇ ಪದದಿ
ಸಜೆಯ ಬಿಡಿಸುವ ನೋಡ | ಜಗದಮಿತ್ರ
ಗುರುವು ತನದೇ ಅರಿವು ನಿರ್ವಿಣ್ಣ ರೂಪದಲಿ
ಧರೆಯ ಹಂಗನು ತೊರೆವ ಭವದ ಬದುಕಿನಲಿ
ಪರಮಹಂಸ ಎಂಬ ಸ್ಥಿತಿಯ ಭುಂಜಿಸತೊಡಗಿ
ಹರಸಿ ಎಲ್ಲರ ಪೊರೆವ | ಜಗದಮಿತ್ರ