ಹನಿ ಹನಿ ನೀರ ಹನಿಯಾ ಸಿಂಚನಾ.......
ಇವತ್ತು ಮತ್ತೇನೂ ಬರೆಯಲಾರದ ಕೆಲಸದೊತ್ತಡ. ಅದಕ್ಕೇ ಬಹಳದಿನಗಳಿಂದ ಪೆಂಡಿಂಗ್ ಇದ್ದ ನಮ್ಮ ಕಂಗ್ಲೀಷ್ ಹನಿಗವನದ ಡುಂಡಿರಾಜರ ಹನಿಗವನವೊಂದನ್ನು ಬೇರೇ ಬೇರೇ ವ್ಯಕ್ತಿಗಳಿಗೆ ಅಳವಡಿಸಿ ಸ್ವಲ್ಪ ಮಜಾ ತಗೊಳ್ಳೋಣ ಬನ್ನಿ -
ಕಾಮುಕ ಶಿಕ್ಷಕನಿಗೆ ಕೊಟ್ಟಾಗ ಅದು ಮಾರ್ಪಾಟಾಗಿದ್ದು ಹೀಗೆ:
ಕ್ಲಾಸಿನಲ್ಲಿ ಸಿಕ್ಕಳು
ಪಾಠಕೇಳಿ ನಕ್ಕಳು
ಏನೇನೋ ಅಂತಾವೆ ಮಾಧ್ಯಮದ ನನ್ಮಕ್ಕಳು !
ಹುಣಿಸೆ ಮುಪ್ಪಾದರೂ ಹುಳಿ ಮುಪ್ಪಲ್ಲ ಅಂತಾರಲ್ಲ ಅದ್ಕೇ ನೋಡೋಣ ಅಂತ ಎಮ್. ಎಫ್. ಹುಸೇನ್ ಎಂಬ ಹುಚ್ಚುಕಲಾವಿದನಿಗೆ ಕೊಟ್ಟಾಗ :
ಕುಂಚಕೆಂದು ಸಿಕ್ಕಳು
ಕೊಂಚ ಬಿಚ್ಚಿ ನಿಂತಳು
ಮಂಚನೆನೆದು ಬಾ ಎನ್ನಲು ಮಿಂಚಿ ಮಾಯವಾದಳು !
ದಾರಿಯಲ್ಲಿ ಸಿಕ್ಕ ಕಂಜೂಸಿ ಅಂಗಡಿಯಾತನಿಗೆ ಕೇಳಿದಾಗ :
ಮೊನ್ನೆ ತಾನೇ ಸಿಕ್ಕಳು
ಎರಡು ಮೂರು ಮಕ್ಕಳು
ಸಾವಿರ್ ರೂಪಾಯ್ ಸಾಲ ಪಡೆದು ನಂಗೇ ಕೈಕೊಟ್ಟಳು !
ನಿಂತಿದ್ದ ಕ್ಯಾಬ್ ಡ್ರೈವರ್ ಹತ್ತಿರ ಕೇಳಿದಾಗ :
ಎಂಥಾ ಫಿಗರು ಸಿಕ್ಕಳು !
ಕುಂತು ನೋಡಿ ನಕ್ಕಳು
ನಿಂತಾಗ ಲೋ ಜೀನ್ಸಗೆ ಕಾಣಿಸ್ತದೆ ಹೊಕ್ಕಳು !
ಟೆಂಟಿನ ಹುಡುಗನ ವ್ಯವಹಾರ ನೋಡಿ :
ಟೆಂಟಿನಲ್ಲಿ ಸಿಕ್ಕಳು
ಸೊಂಟ ಕುಣಿಸಿ ನಕ್ಕಳು
’ನೆಂಟಸ್ತಿಕೆ’ ಮಾಡೋಕ್ಮುಂಚೆ ’ಕಟ್ಟು ತಾಳಿ’ ಎಂದಳು
ಪಂಕ್ಚರ್ ಶಾಪ್ ಹುಡುಗನ ಅಹವಾಲು :
ಪಂಕ್ಚರ್ ಹಾಕ್ವಾಗ್ ಸಿಕ್ಕಳು
ಬಾಗಿ ನಿಂತು ನಕ್ಕಳು
೨೦ರ ನೋಟು ಕೊಟ್ಟು ಥ್ಯಾಂಕ್ಸ್ ಎಂದುಬಿಟ್ಟಳು
[ಅಹಾಹಾಹಾ ಎಂಥೆಂಥಹಾ ಅತಿರಥರಯ್ಯ ನಮ್ಮ ಮೌಲ್ಯಯುತ ಶೈಕ್ಷಣಿಕ ರಂಗದಲ್ಲಿ, ದಿನಕ್ಕೊಂದು ಹೊಸ ವಾರ್ತೆ! ಇದಕ್ಕೆಲ್ಲಾಕಾರಣ ಅಪಾತ್ರರಿಗೆ ಕೇವಲ ವಿದ್ಯಾರ್ಹತೆ ಅವಲಂಬಿಸಿ ಸ್ಥಾನ ಕೊಟ್ಟಿದ್ದು ಅನಿಸುವುದಿಲ್ಲವೇ?] ಯಲಹಂಕ ಬಿ.ಇ.ಓ ತಿಮ್ಮೇಗೌಡನಕಥೆ :
ಬೆಳ್ಳಬೆಳ್ಳಗಿದ್ದಳು
ವಿಧವೆಯೆಂದು ಹೇಳ್ದಳು
’ಒಳ್ಳೆದಾಯ್ತು ಬಾ’ ಎಂದರೆ ಹೋಗಿ ದೂರು ಕೊಟ್ಟಳು !
ನಿಮ್ಮೆಲ್ಲರ ’ಗೌರವ’ಕ್ಕೆ ಅದಾಗಲೇ ಪಾತ್ರನಾದ ಬಿಡದಿ ನಿತ್ಯಾನಂದ ಉವಾಚ :
ರಂಜಿತಾ ಇಲ್ಲಿದ್ದಳು
ಅಂಜುತಲೇ ನಕ್ಕಳು
ನಂಜಿಲ್ಲದೆ ’ಸೇವೆ’ ’ಮುಕ್ತವಾಗಿ’ ನಡೆಸಿಕೊಟ್ಟಳು !
’ಬ್ರಾಡ್ ಮೈಂಡೆಡ್’ ಎನಿಸಿಕೊಂಡ ಬಿ.ಪಿ.ಓ ದವರಿಗೆ :
ಬಿ.ಪಿ.ಓ ದಲ್ಲಿ ಸಿಕ್ಕಳು
ಒಪಿನಿಯನ್ನು ಕೊಟ್ಟಳು
ಅಪರೂಪಕ್ಕೊಮ್ಮೆ ’ಅದಕೆ’ ಅನುವುಮಾಡಿಕೊಟ್ಟಳು.
ನೆಟ್ಟಿನ ಮಹಿಮೆ :
ನೆಟ್ಟಿನಲ್ಲಿ ಸಿಕ್ಕಳು
ಭೆಟ್ಟಿಯಾಗುತಿದ್ದಳು
ಹೊಟ್ಟೆಬರಿಸಿ ಬಿಟ್ಟಮೇಲೆ ಇನ್ನೊಬ್ಬಳು ಸಿಕ್ಕಳು !
ಮತ್ತೆ ಸಿಗೋಣ ಬಾಯ್ ಬಾಯ್ !!!