ದೇಹದ ಶುದ್ಧಿಗೆ, ಸ್ವಚ್ಛತೆಗೆ ಸ್ನಾನ ಹೇಗೆ ಬೇಕೋ ಹಾಗೇ ಮನಸ್ಸನ್ನು ಶುದ್ಧೀಕರಿಸಲು ಧ್ಯಾನದ ಅವಶ್ಯಕತೆಯಿದೆ. ಆಗಾಗ ಆಗಾಗ ಅನುಕೂಲವಾದಾಗ ಇದ್ದಲ್ಲೇ ಇದ್ದು ಭಾವ ತನ್ಮಯತೆಯಿಂದ ಮನಸ್ಸನ್ನು ಬಂಧಿಸಿ ಹಿಡಿದುಕೊಂಡು ನಮಗೆ ಇಷ್ಟವಾದ ಒಂದು ಶಕ್ತಿಯನ್ನೂ ದೇವರನ್ನೋ ನೆನೆದು, ನಾವೇನು ಮಾಡುತ್ತಿದ್ದೇವೆ ಎಂಬ ವರದಿಯನ್ನು ಒಪ್ಪಿಸುವ ಕೆಲಸ ಸಾಗುತ್ತಿರಬೇಕು. ಜಗಮೆಚ್ಚುವ ಮುನ್ನ ಮನ ಮೆಚ್ಚಬೇಕು, ಮನ ಮೆಚ್ಚುವ ಮುನ್ನ ನಮ್ಮೊಳಗಿನ ಆ ಆಂತರ್ಯದ ಕೂಗು ಆತ್ಮದ ಮೆಚ್ಚುಗೆಯ ಕೂಗು [echo] ಬರಬೇಕು. ನಾವೆಲ್ಲೇ ಕೆಲಸಮಾಡಲಿ ಕೆಲಸದ ಪರಿಯನ್ನು ಅದರಹಂತವನ್ನು ನಮ್ಮ ಮೇಲಧಿಕಾರಿಗಳಿಗೆ ವರದಿಯ ರೂಪದಲ್ಲಿ ಒಪ್ಪಿಸುತ್ತೇವೆ ಅಥವಾ ನಾವೇ ನಡೆಸುವ ವ್ಯವಹಾರವಾದರೆ ಅದನ್ನುಸರಿಯಾಗಿ ಅವಲೋಕಿಸುತ್ತೇವೆ ಹೇಗೋ ಹಾಗೇ ನಮ್ಮದಲ್ಲದ ಈ ಬದುಕೆಂಬ ನೌಕರೀ ವೃತ್ತಿಯಲ್ಲಿ ನಮಗೆ ಕಾಣದ ಮೇಲಧಿಕಾರಿಕರೆದಿದ್ದಾನೆ, ಕರೆದಿರುತ್ತಾನೆ-ಅವನ ಆ ಅವ್ಯಕ್ತ ಕರೆಯನ್ನು ಅರ್ಥೈಸಿ ಅವನಿಗೆ ಆಗಾಗ ನಮ್ಮ ದೈನಂದಿನ ಕೆಲಸದ ವರದಿಒಪ್ಪಿಸಿದರೆ ಆತ ಮುಂದೆ ಹೇಗೆ ಹೋಗಬೇಕೆಂದು, ಹೇಗೆ ಮಾಡಬೇಕೆಂದು, ಯಾವುದನ್ನು ಎತ್ತಿಕೊಳ್ಳಬೇಕೆಂದು, ಯಾವುದುಬೇಡವೆಂದು ಎಲ್ಲವನ್ನೂ ನಮ್ಮ ಮನದ ಮೂಲಕ ಆದೇಶಿಸುತ್ತಾನೆ. ಅವನು ಬೇಡವೆಂದ ಕೆಲಸ ಮಾಡಿನೋಡಿ ಅಲ್ಲಿ ನಾವುಸೋಲುತ್ತೇವೆ, ಅವನ ಪರವಾನಿಗೆ ಸಿಕ್ಕ ಕೆಲಸದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ, ಯಾಕೆಂದರೆ ಫಲಾಫಲಗಳ ಹಿಡಿತ ಅವನ ಕೈಲೇಇದೆ. ಅವನು ಬೇಡವೆಂದಾಗ ನೀವು ಬಾವಿ ತೋಡಿದರೆ ನೀರು ಸಿಗುವುದಿಲ್ಲ, ಯವುದೋ ಕೆಲಸಕ್ಕೆ ಹಠಹಿಡಿದು ಹೋದರೆವಿಜಯಿಯಾಗುವುದಿಲ್ಲ! ಅಂದಮೇಲೆ ನಮ್ಮ ಮೇಲೆ ನಮ್ಮ ನಿಯಂತ್ರಣವೆಷ್ಟು ಆತನ ನಿಯಂತ್ರಣವೆಷ್ಟು ? ಅಲ್ಲವೇ?
ನಿವೇದನೆ
ಎನ್ನ ಚಿತ್ತದ ವೃತ್ತಿ ಚಿನ್ನದ ಹರಿವಾಣದೊಳಿಟ್ಟು
ಘನ್ನ ಮಹಿಮನೆ ಅರ್ಪಿಸುವೆ ನಿನ್ನ ಪದಕೆ
ಮುನ್ನ ಮಾಡಿದ ಕರ್ಮಬಂಧನವ ತೆಗೆದಿಟ್ಟು
ಘನ್ನ ಮಹಿಮನೆ ಅರ್ಪಿಸುವೆ ನಿನ್ನ ಪದಕೆ
ಮುನ್ನ ಮಾಡಿದ ಕರ್ಮಬಂಧನವ ತೆಗೆದಿಟ್ಟು
ಚೆನ್ನಾಗಿಡುತ ಹರಸೋ ಜೀವನದೀ ಪಥಕೆ
ಇಂದು ನಿನ್ನೆಯದಲ್ಲ ನನ್ನ ನಿನ್ನಯ ಒಸಗೆ
ಕಂದುಮಸುಕದ ಲೋಹದಲ್ಲದಾ ಬೆಸುಗೆ
ಸಂದ ಕಾಲವದೆಷ್ಟೋ ನೊಂದ ಸಮಯವದೆಷ್ಟೋ
ಎಂದು ದರುಶನ ಈವೆ ಜೀವನಾಟಕಕೆ ?
ದೇಹದೀ ಮನೆಯಲ್ಲಿ ಹೃದಯ ತೊಟ್ಟಿಲ ಕಟ್ಟಿ
ಮಾಯದಾ ಮನದ ಜೋಗುಳವ ಹಾಡೀ
ನೋಯದಿರಲೀ ನಿನ್ನ ನಾಜೂಕು ಕಾಯವದು
ವಾಯಿದೆಯ ಮಿತಿಯಿಡದೆ ಜೋಪಾನ ಮಾಡಿ
ನರನಾಡಿಗಳ ಹುರಿಯ ಹಗ್ಗವನು ಹಿಡಿಯುತ್ತ
ಕರದಿ ತೂಗುತ ಹೇಳಲೆ ಹಲವು ಕಥೆಯ ?
ವರ ವಿರಂಚಿಯೇ ನಿನ್ನ ಅರಿವಿಗಿರದೇನಿಹುದು ?
ಬರಿದೇ ಸುಮ್ಮನೇ ಅದುವೆ ಕಳೆಯಲೀ ವ್ಯಥೆಯ
ಆಜಾನು ಬಾಹು ಕಮನೀಯ ಲೋಚನ ನಿನ್ನ
ಜೂಜಾಟದಲಿ ಬೇಗ ಸೋಲಿಸುವ ತವಕ
ಗಾಜಿನಾ ಬಿರಡೆಯಂತಿಹ ಜೀವದೀ ದೇಹ
ಕೋಜಾಗರೀ ಹಾಡಿ ನುತಿಸುವಾ ತನಕ
------
ಇಂದು ನಿನ್ನೆಯದಲ್ಲ ನನ್ನ ನಿನ್ನಯ ಒಸಗೆ
ಕಂದುಮಸುಕದ ಲೋಹದಲ್ಲದಾ ಬೆಸುಗೆ
ಸಂದ ಕಾಲವದೆಷ್ಟೋ ನೊಂದ ಸಮಯವದೆಷ್ಟೋ
ಎಂದು ದರುಶನ ಈವೆ ಜೀವನಾಟಕಕೆ ?
ದೇಹದೀ ಮನೆಯಲ್ಲಿ ಹೃದಯ ತೊಟ್ಟಿಲ ಕಟ್ಟಿ
ಮಾಯದಾ ಮನದ ಜೋಗುಳವ ಹಾಡೀ
ನೋಯದಿರಲೀ ನಿನ್ನ ನಾಜೂಕು ಕಾಯವದು
ವಾಯಿದೆಯ ಮಿತಿಯಿಡದೆ ಜೋಪಾನ ಮಾಡಿ
ನರನಾಡಿಗಳ ಹುರಿಯ ಹಗ್ಗವನು ಹಿಡಿಯುತ್ತ
ಕರದಿ ತೂಗುತ ಹೇಳಲೆ ಹಲವು ಕಥೆಯ ?
ವರ ವಿರಂಚಿಯೇ ನಿನ್ನ ಅರಿವಿಗಿರದೇನಿಹುದು ?
ಬರಿದೇ ಸುಮ್ಮನೇ ಅದುವೆ ಕಳೆಯಲೀ ವ್ಯಥೆಯ
ಆಜಾನು ಬಾಹು ಕಮನೀಯ ಲೋಚನ ನಿನ್ನ
ಜೂಜಾಟದಲಿ ಬೇಗ ಸೋಲಿಸುವ ತವಕ
ಗಾಜಿನಾ ಬಿರಡೆಯಂತಿಹ ಜೀವದೀ ದೇಹ
ಕೋಜಾಗರೀ ಹಾಡಿ ನುತಿಸುವಾ ತನಕ
------