ವ್ಯಾಕುಲತೆ
ಕನಸಿನಲ್ಲಿ ಕಂಡ ಚಿತ್ತಾರಗಳನ್ನು
ನೆನಪಿಗೆ ಕರೆದು ಸೋತೆ
ಅವು ಪೂರ್ತಿ ಬರಲೊಲ್ಲವು ನಾನು ಬಿಡಲೊಲ್ಲೆ
ಬರದ-ಬಿಡದ ಈ ಬಂಧದ ನಡುವೆ
ಹರಿದು ಚಿಂದಿಯಾದ ಕೆಲವು ಹೊರಬಂದವು
ಅವು ಮೂರ್ತವಲ್ಲ ಅಮೂರ್ತವೂ ಅಲ್ಲ
ಆಕಸ್ಮಿಕವಲ್ಲ ಅನಿರೀಕ್ಷಿತವೂ ಅಲ್ಲ
ಹಲವರ ಸಭೆಯನಡುವೆ ಕೂತೆ
ಹೆದರಿ ಹೊರಬರುವ ನನ್ನ ನಿರೀಕ್ಷೆ ಫಲಿಸಲಿಲ್ಲ
ಯಾರೂ ಇಲ್ಲದ ಏಕಾಂತದಲ್ಲಿ ತಪಗೈದೆ
ಅವು ಮತ್ತದೇ ಸ್ವಸ್ಥಾನದಲ್ಲಿ ನಿಂತು
ಎಳನೀರಿನ ಬೊಂಡದ ಸಣ್ಣ ತೂತಿನೊಳಗೆ
ಕೈ ಸಿಗಿಸಿಕೊಂಡು ಹೊರತರಲಾರದ
ಮಂಗನ ಮರಿಯಂತೇ ಕಂಡವು !
ಸಣ್ಣಗೆ ಇನ್ನೊಮ್ಮೆ ಪ್ರಯತ್ನಿಸಿದೆ
ಬಾಟಲೊಳಗೆ ಸಿಕ್ಕು ಅದರ ಬಾಯಿಂದ
ಹೊರಬರದ ದೊಡ್ಡ ವಸ್ತುವಿನಂತೇ
ಮೇಣಕ್ಕೆ ಕಾಲು ಸಿಲುಕಿ ಒದ್ದಾಡುತ್ತಿರುವ
ನೊಣಗಳಂತೇ ಕಂಡವು!
ಇನ್ನೊಮ್ಮೆ ಪ್ರಯತ್ನಿಸಿದೆ
ರಾವಣ ಲಿಂಗವನ್ನು ತಿರುತಿರುವಿ ಕಿತ್ತೆಸೆಯಲು
ಮಹಾಬಲೋ ಮಹಾಬಲೋ ಎಂದು
ಕೂಗಿದ ಆ ಅಸುರೀ ಧ್ವನಿ
ಎಲ್ಲೆಲ್ಲೂ ಮಾರ್ದನಿಸಿತು.
ಆತ್ಮಲಿಂಗವನ್ನೇ ಆ ರಾವಣ ಬಿಟ್ಟನಂತೆ
ಈ ನಡುವೆ ಇದೆಲ್ಲಾ ಏನು ಮಹಾ ಎಂದುಕೊಂಡೆ
ಹಾಗೇ ಸುಮ್ಮನಿದ್ದುಬಿಟ್ಟೆ
ಈಗ ಹಾಯಾಗಿದ್ದೇನೆ
ಮನಸ್ಸು ನಿರುಂಬಳವಾಗಿದೆ
ಏಕಾಂತವೂ ಬೇಡ ಲೋಕಾಂತವೂ ಬೇಡ
ನಂಗೆ ಬೇಕಾದ ಮನೋಲೋಕವನ್ನು
ಪ್ಲಗ್ ಆಂಡ್ ಪ್ಲೇ ಮಾಡುತ್ತೇನೆ
ಅಲ್ಲಿ ನಲಿವಿದೆ ಸದಾ ಶಾಂತಿಯಿದೆ
ಬರುವಿರೇ ನನ್ನೊಟ್ಟಿಗೆ ?
ತಿಳಿಯಲು ಆ ಪ್ರಶಾಂತಿಯ ಅರಸೊತ್ತಿಗೆ!
ಭಟ್ಟರೆ,
ReplyDeleteಶಾಂತಿಸಾಧನೆಯ ಮಂತ್ರವನ್ನು ಸರಿಯಾಗಿ ಕವನಿಸಿದ್ದೀರಿ. ನಿಮ್ಮೊಡನೆ ಖಂಡಿತವಾಗಿಯೂ ಬರುತ್ತೇನೆ!
'ಬರುವಿರೇ ನನ್ನೊಟ್ಟಿಗೆ ?
ReplyDeleteತಿಳಿಯಲು ಆ ಪ್ರಶಾಂತಿಯ ಅರಸೊತ್ತಿಗೆ!'
ಅರ್ಥಪೂರ್ಣ ಸಾಲುಗಳ ಸು೦ದರ ಕವನ. ಅಭಿನ೦ದನೆಗಳು.
This comment has been removed by the author.
ReplyDeleteಹಾಯ್ ಸರ್
ReplyDeleteನಿಮ್ಮ ಕವನ ಅರ್ಥಪೂರ್ಣವಾಗಿದೆ.ಓದಿ ಸಂತಸವಾಯಿತು.ಧನ್ಯವಾದಗಳು
ನಿವು ಪ್ರೀ ಇದ್ದಾಗ ನನ್ನ www.yeshu-kanasu.blogspot.com ಬ್ಲಾಗಿಗೆ ಬೇಟಿ ಕೊಡಿ ಸರ್ ,
ಧನ್ಯವಾದಗಳೋಂದಿಗೆ
ನಿಮ್ಮ ಕನಸು,
Thanks to all, ellarigoo dhanyavaadagalu
ReplyDelete