ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, September 23, 2010

ಚಕ್ಕುಲಿ-ಕೋಡುಬಳೆ !!


[ಹಲವು ಸ್ನೇಹಿತರ ಬೇಡಿಕೆ ಇತ್ತು ಚೌತಿಯ ಚಕ್ಕುಲಿ-ಕೋಡುಬಳೆ ತನ್ನಿ ಎಂದು, ನಿಮಗಿದೋ ಕೊಡುತ್ತಿದ್ದೇನೆ,ಕೆಮ್ಮಿಗೆ ನಾನು ಜವಾಬ್ದಾರನಲ್ಲ ! ! ]

ಚಕ್ಕುಲಿ-ಕೋಡುಬಳೆ !!

ಹೊಸತನಕೊಡಬೇಕೆನ್ನುವ ಹಂಬಲ
ಹೊಸೆಯಲು ಕುಳಿತೇ ಕವನವನು
ಮಿಸುಕಾಡುತ ನೊಸಲಲಿ ಬೆವರಿಳಿಯಲು
ಬಸಿದಿರುವೇ ಈ ಕವಿತೆಯನು

ಗೊರಗೊರ ಗಂಟಲ ಸದ್ದಲಿ ಮಧ್ಯದಿ
ಸರಸರ ಹಾಡಲು ಯತ್ನಿಸುತ
"ಹರಹರ ಏನದು ವಿಚಿತ್ರ ಶಬ್ದ ?"
ಭರದಿ ಕೇಳಿದಳು ಮಡದಿಯು ತಾ

ಚಕ್ಕುಲಿ ಕೋಡುಬಳೆಗಳವು ಕುಣಿದವು
ಬಿಕ್ಕಿತು ಮನವು ತಿಂದುದಕೆ !
ಒಕ್ಕೊರಲಲಿ ಮಾತಾಡಲು ಬರದಕೆ
ಪಕ್ಕನೆ ನಕ್ಕಿತು ಬಯಸಿದಕೆ !

ಗಣಗಣ ಗಣಪತಿ ಬಂದಾ ಘಳಿಗೆಯ
ಬಣಬಣ ಎನ್ನಿಸಿ ಕಳಿಸುವುದೇ ?
ಒಣಕೆಮ್ಮಿಗೆ ’ಅತಿಮಧುರ’ ಕಷಾಯವ
ಹಣತೆತ್ತಾದರೂ ಕೊಳ್ಳುವುದೇ !

ದಿನವೂ ಇರುವುದು ಬಜ್ಜಿಪಕೋಡವು
ನನಗೇನದು ಹೊಸತೆನಿಸಿಲ್ಲ!
ಮನವೇ ನಿಲ್ಲಿಸು ಉಜ್ಜಿ ಚಪಲಗಳ
ತನುವಾನೆಯ ಹೋಲುವುದಲ್ಲ !

10 comments:

  1. ಗುರುಗಳೆ,
    ಸೂಪರ್,
    ಹೊಸ ವಿಷಯದ ಕವನ, ತುಂಬಾ ಚನ್ನಾಗಿದೆ.

    ReplyDelete
  2. ಭಟ್ಟರೆ,

    ಬಾಯಿ, ಮನಸ್ಸು ಎರಡನ್ನೂ ತೃಪ್ತಿ ಪಡಿಸಿದ್ದೀರಿ...ತುಂಬಾ ಥ್ಯಾಂಕ್ಸ್

    ReplyDelete
  3. ಭಟ್ಟರೆ,
    ಚಕ್ಕುಲಿಗಾಗಿ ಥ್ಯಾಂಕ್ಸ!

    ReplyDelete
  4. ಭಟ್ಟರೇ;ಚಕ್ಕುಲಿ,ಕೋಡುಬಳೆ ಬಾಯಲ್ಲಿ ನೀರು ಬರಿಸುವಂತಿವೆ!

    ReplyDelete
  5. ೪ ನೇ ಪ್ಯಾರಾ ತುಂಬಾ ಇಷ್ಟವಾಯಿತು...

    ReplyDelete
  6. ಚೆನ್ನಾಗಿದೆ ಸರ್ ಜೀ

    ReplyDelete
  7. ಪ್ರತಿಕ್ರಿಯಿಸಿದ ಎಲ್ಲರಿಗೂ ಅನಂತ ಕೃತಜ್ಞತೆಗಳು

    ReplyDelete
  8. ಇನ್ನೊಂದಿಷ್ಟು ಪ್ಲೀಸ್

    ReplyDelete