[ಹಲವು ಸ್ನೇಹಿತರ ಬೇಡಿಕೆ ಇತ್ತು ಚೌತಿಯ ಚಕ್ಕುಲಿ-ಕೋಡುಬಳೆ ತನ್ನಿ ಎಂದು, ನಿಮಗಿದೋ ಕೊಡುತ್ತಿದ್ದೇನೆ,ಕೆಮ್ಮಿಗೆ ನಾನು ಜವಾಬ್ದಾರನಲ್ಲ ! ! ]
ಚಕ್ಕುಲಿ-ಕೋಡುಬಳೆ !!
ಹೊಸತನಕೊಡಬೇಕೆನ್ನುವ ಹಂಬಲ
ಹೊಸೆಯಲು ಕುಳಿತೇ ಕವನವನು
ಮಿಸುಕಾಡುತ ನೊಸಲಲಿ ಬೆವರಿಳಿಯಲು
ಬಸಿದಿರುವೇ ಈ ಕವಿತೆಯನು
ಗೊರಗೊರ ಗಂಟಲ ಸದ್ದಲಿ ಮಧ್ಯದಿ
ಸರಸರ ಹಾಡಲು ಯತ್ನಿಸುತ
"ಹರಹರ ಏನದು ವಿಚಿತ್ರ ಶಬ್ದ ?"
ಭರದಿ ಕೇಳಿದಳು ಮಡದಿಯು ತಾ
ಚಕ್ಕುಲಿ ಕೋಡುಬಳೆಗಳವು ಕುಣಿದವು
ಬಿಕ್ಕಿತು ಮನವು ತಿಂದುದಕೆ !
ಒಕ್ಕೊರಲಲಿ ಮಾತಾಡಲು ಬರದಕೆ
ಪಕ್ಕನೆ ನಕ್ಕಿತು ಬಯಸಿದಕೆ !
ಗಣಗಣ ಗಣಪತಿ ಬಂದಾ ಘಳಿಗೆಯ
ಬಣಬಣ ಎನ್ನಿಸಿ ಕಳಿಸುವುದೇ ?
ಒಣಕೆಮ್ಮಿಗೆ ’ಅತಿಮಧುರ’ ಕಷಾಯವ
ಹಣತೆತ್ತಾದರೂ ಕೊಳ್ಳುವುದೇ !
ದಿನವೂ ಇರುವುದು ಬಜ್ಜಿಪಕೋಡವು
ನನಗೇನದು ಹೊಸತೆನಿಸಿಲ್ಲ!
ಮನವೇ ನಿಲ್ಲಿಸು ಉಜ್ಜಿ ಚಪಲಗಳ
ತನುವಾನೆಯ ಹೋಲುವುದಲ್ಲ !
ಗುರುಗಳೆ,
ReplyDeleteಸೂಪರ್,
ಹೊಸ ವಿಷಯದ ಕವನ, ತುಂಬಾ ಚನ್ನಾಗಿದೆ.
ಭಟ್ಟರೆ,
ReplyDeleteಬಾಯಿ, ಮನಸ್ಸು ಎರಡನ್ನೂ ತೃಪ್ತಿ ಪಡಿಸಿದ್ದೀರಿ...ತುಂಬಾ ಥ್ಯಾಂಕ್ಸ್
ಭಟ್ಟರೆ,
ReplyDeleteಚಕ್ಕುಲಿಗಾಗಿ ಥ್ಯಾಂಕ್ಸ!
ಭಟ್ಟರೇ;ಚಕ್ಕುಲಿ,ಕೋಡುಬಳೆ ಬಾಯಲ್ಲಿ ನೀರು ಬರಿಸುವಂತಿವೆ!
ReplyDelete೪ ನೇ ಪ್ಯಾರಾ ತುಂಬಾ ಇಷ್ಟವಾಯಿತು...
ReplyDeleteಚೆನ್ನಾಗಿದೆ ಸರ್ ಜೀ
ReplyDeletesuper....
ReplyDeleteಪ್ರತಿಕ್ರಿಯಿಸಿದ ಎಲ್ಲರಿಗೂ ಅನಂತ ಕೃತಜ್ಞತೆಗಳು
ReplyDeleteಇನ್ನೊಂದಿಷ್ಟು ಪ್ಲೀಸ್
ReplyDeleteಚೆಂದದ ಕವನ
ReplyDelete