ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, August 14, 2010

ಬೀಡಾಡಿಗಳ ಸ್ವಾತಂತ್ರ್ಯೋತ್ಸವ !!

[ಗಮನಿಸಿ : ನಾಳೆಯ ಸ್ವಾತಂತ್ರ್ಯೋತ್ಸವಕ್ಕೆ ಬೇರೆ ಕೃತಿ ಪ್ರಕಟವಾಗುತ್ತದೆ-ಇದು ಸದ್ಯಕ್ಕೆ ಟೈಂ ಪಾಸ್ ಕಡ್ಲೇಕಾಯಿ ]

ಬೀಡಾಡಿಗಳ ಸ್ವಾತಂತ್ರ್ಯೋತ್ಸವ !!

" ತಲೆಗೆ ರುಮಾಲು ಸುತ್ತದ್ರೆ ಜಾಸ್ತಿ ಬಟ್ಟೆ ಬೇಕಾತದೆ ಅಂತ ಮಾತ್ಮಾ ಗಾಂಧಿ ಟೋಪಿ ಹಾಕ್ಕೊಂಡ್ರು ಹಂಗೇಯ ನೀವೆಲ್ಲಾ ಅದ್ನೇ ಬಳಸಿ ಅಂತದ್ರು "

" ಅದ್ಕೇ ಕಣಪ್ಪಾ ದೇಸದ ಜನವೆಲ್ಲಾ ಸರ್ಯಾಗಿ ಬಟ್ಟೆ ಇಲ್ದೇ ಇರ್ವಾಗ ತಂಗ್ ಮಾತ್ರ ಯಾಕೆ ಎಂದು ಮಲ್ಲಿಕಾ ಸೇರಾವತ್ ಬಟ್ಟೇನೆ ಕಮ್ಮಿ ಮಾಡ್ಬುಟ್ಳು "

---------------

" ಅಲ್ಲಾಲೇ ಆಗಸ್ಟ್ ಹದ್ನೈದು ಯಾವ ಹಬ್ಬ ? "

" ಓ ಅದಾ ಅದೂ ಅದೂ ನಮ್ಮೂರ್ ಮೇಷ್ಟ್ರುಗೋಳೆಲ್ಲ ಬಾವುಟ ಹಾರ್ಸೋ ಹಬ್ಬ, ಯಾವಗ್ಲೂ ಹಾರ್ಸಾಕಿಲ್ಲ ನೋಡು ಅದ್ಕೇಯ ಇಂತಾ ದಿವ್ಸ ಅಂತ ಒಂದಷ್ಟ್ ದಿನ ಮಡೀಕಬುಟ್ಟವ್ರೆ "

---------------

" ರಾಜ್ಯದ ಖಜಾನ್ಯಾಗೆ ದುಡ್ಡೇ ಇಲ್ವಂತೆ ? "

" ಯಾರ್ಲಾ ಹೇಳಿದ್ದು ಹಾಂಗೆಲ್ಲಾ ಮಾಡಕಾಯ್ತದೇನಲೇ ಅದಕ್ಕೇ ಅಲ್ವಾ ಸಮಾವೇಸ ಮಾಡ್ಬುಟ್ಟು ದ್ರುಷ್ಟಿ ಬಳ್ದು ಮತ್ತೊಂದಿಷ್ಟು ಸದ್ಯಕ್ಕಿರ್ಲಿ ಅಂತ ಅಲ್ಲಿಂದಾ ಇಲ್ಲಿಂದಾ ಎಲ್ಲೆಲ್ಲಾತದೋ ಕಿತ್ತಾಂಕಬರ್ರಲೇ ಅಂತ ಓಯಾಸೀಸು ನ ಕಳ್ಸ್ಕತಾರೆ "

" ಅದ್ಯೇನಯ್ಯಾ ಹಂಗಂತೀಯಾ ಓಯಾಸಿಸು ಇರೋದು ಮರ್ಭೂಮಿಲಿ ಅಂತಾ ರಂಗಣ ಮೇಷ್ಟ್ರು ಹೇಳಿದ್ ಮರ್ತ್ಬುಟ್ಟಾ ? "

" ಅದಲ್ಲ ಕಣಲೇ ಗುಗ್ಗು ಓಯಾಸೀಸು ಅಂದ್ರೆ ಇಲ್ಲಿ ಇಂಥಿಂಥಾ ಮಂಕ್ರೀಗೆ ಇಂಥಿಂಥಾ ಸಕ್ಕರೆಟ್ರಿ ಅಂತ ಮಡೀಕತಾರಲ್ಲ ಅವ್ರು ಅವ್ರು "

" ಓ ಆಯ್ ಏ ಎಸ್ ಅನ್ನಪ್ಪಾ ಓಯಾಸೀಸಲ್ಲ ಕಣ್ಲಾ ಅದು "

" ಎರ್ಡೂ ಒಂದೇಯ ನಂಗ್ಯಾಕ್ ಹೇಳ್ತ್ಯಾ ಸುಮ್ಕೆ...ಅಲ್ಲಿ ನೀರಿರ್ದಿದ್ರೆ ಅದು ನೀರ್ ಕೊಡ್ತೈತೆ ಇಲ್ಲಿ ಕಾಸಿರ್ದಿದ್ರೆ ಅವರು ಕಾಸ್ ಮಾಡೋ ಪ್ಲಾನ್ ಕೊಡ್ತಾರಪ್ಪಾ ಅವರ್ನ ಕರ್ದು ’ ಕಾಸೆಲ್ಲಾ ಖಾಲಿ ಆಗೈತೆ ಇಸ್ಯ ನಿಮ್ತಾವನೇ ಇರ್ಲಿ ಬೇಗ ಹುಡಕ್ಕಂಬನ್ನಿ ’ ಅಂದ್ಬುಟ್ರೆ ಮುಗ್ದೇ ಹೋಯ್ತು ತಕ ಎಲ್ಲೆಲ್ಲಿ ಹೆಂಗೆಂಗೆ ಫಿಟಿಂಗ್ ಇಡ್ಬೈದು ಅನ್ನೋ ಐಡಿಯಾನ ತಕಂಬತ್ತವೆ ಕಾಸ್ ಮಾಡಕ್ಕೆ ಮತ್ತೆ ಸುಮ್ನೇನಾ ಅವರ್ನ ಮಡೀಕಳದು ? ನಂಗೇನ್ ಅಷ್ಟೂ ತಲೇ ಇಲ್ಲಾಂತ್ ತಿಳ್ದಾ ಮೂದೇವಿ ? "

--------------

" ಅಣೆಕಟ್ಟೆಲ್ಲಾ ಸೋರ್ತಾ ಅವೆ ಅಂತಾರಲ್ಲಯ್ಯ ? ಅದೇನ್ ಒಸಿ ರಿಪೇರಿ ಮಾಡಾಕಿಲ್ವ ? "

"ನೀ ಕೇಳ್ತಾಲೇ ಇರು ನಾಯೇಳ್ತಾಲೇ ಇರ್ತೀನಿ ರಿಪೇರಿಗೆಲ್ಲಾ ಬಗ್ಗೋ ಸ್ಟೇಜ್ ಪಾಸಾಗ್ಬುಟ್ಟೈತೆ ಮಗಾ ಒಂದೊಂದಕ್ಕೂ ಸ್ವಾತಂತ್ರ ಬಂದಷ್ಟ್ ವೈಸಾಗೈತೆ ಇನ್ನೇನಲ್ಲಿ ಹಣೇಬರ ಹೋದಮ್ಯಾಲೆ ಒಟ್ಗೇ ಹೊಸದಾಗೇ ಮಾಡ್ಬುಟ್ರೆ ಇಂತಿಷ್ಟ್ ಸಾವ್ರ ಕೋಟಿ ಅಂತ ಕೆಡೀಕೋಬೈದು ಎಲ್ಲಿಟ್ಟೆ ತಲೇನಾ ? "

----------------

" ಜನ ಗಣ ಮನ ....ಅನ್ನೋ ಹಾಡೈತಲ್ಲಪ್ಪಾ ಅದೇ ನಾವು ಸ್ಕೂಲಾಗೆ ಹಾಡ್ಲೇ ಬೇಕು ಅಂತ ಬೆಂಚ್ ಮೇಲೆ ನಿಲ್ಸಿ ಮೇಷ್ಟ್ರು ಬಾಯ್ಪಾಠ ಮಾಡ್ಸಿದ್ದು "

" ಏನಾಯ್ತು ಹೇಳು "

" ಏನಿಲ್ಲಾ ನಮ್ ರಾಜ್ಕೀಯದ್ ಜನಕ್ಕೆ ಅದನ್ನ್ ಕೇಳ್ದ್ರೆ ಸಾಕು ಒಳ್ಳೇ ನಿದ್ದೆ ಬತ್ತದಂತೆ ಏನಾದ್ರೂ ತಲೆಬಿಸಿ ಆದ್ರೆ ಆ ಹಾಡ್ನ ಸೀಡಿ ಹಾಕ್ಕಂಡು ಮಲ್ಕಬುಟ್ರೆ ಆಗೋಯ್ತಂತೆ "

" ಅದ್ಕೇನಪ್ಪಾ ಈ ದೇಸ ಹೀಗಿರೋದು ಅವ್ರೂ ಅದ್ನ ಹಾಡಿದ್ದ್ರೆ ಅಮೇರಿಕಾದವ್ರು ತಮ್ಮನ್ನೆಲ್ಲ ಬಿಟ್ಟೋಯ್ತರೆ ಅಂತ ಅದೆಲ್ಲಾ ಏನಿದ್ದ್ರೂ ನೀವ್ಗೋಳು ಹಾಡಿ ನಾವು ಮೊಳಕೈಗೆ ಏನಾರೂ ಕೋಲು ಕೊಟ್ಗಂಡು ನಿಂತ್ಗೋಬುಡ್ತೀವಿ ಅಂತಾರೆ "

" ಅಲ್ಲಾ ನೀ ಹೇಳಿದ್ದು ಸರೀ ಅನ್ನು ಯಾವುದ್ರಾಗ್ ಒಕ್ಕಟ್ಟಿಲ್ದಿದ್ರು ಈ ಹಾಡು ಬರೋದಿಲ್ಲಾ ಅಂತ ಮೊದ್ಲೇ ಗೊತ್ತಿರೋದ್ರಿಂದ ಹಂಗೇ ಪಾಲ್ಟಿ-ಪಕ್ಸನೆಲ್ಲಾ ಮರ್ತು ಹಾಡ್ ಹಾಡುವತ್ಗೆ ಸುಮ್ನಾಯ್ಕಂತವೆ ನೋಡು "

----------------

" ಸೆಂಟ್ರಲ್ ನೋರು ಅದೇನೋ ಆಹಾರ ಹಾಳಮಾಡವ್ರಂತೆ "

" ಸೆಂಟ್ರಲ್ಲು ಅಂದ್ರೆ ಬಟ್ಟೆ ಬರೆ ಸಿಗೋ ದೊಡ್ಡ ಸಾವ್ಕಾರ್ರ ಜಾಗ ಕಣಪ್ಪಾ ಅಲ್ಲೇಲ್ಲಾ ಅವ್ರು ಯಾಪಾರ ಮಾಡಕೇ ಅಂತ್ಲೇ ಕೂತಿರಾದು ಅದೇನ್ ಹಾಳ್ಮಾಡ್ಕಂಡು ಲಾಸ್ ಮಾಡ್ಕಳಕಲ್ಲ ಅಷ್ಟೂ ಗೊತ್ತಾಯಾಕಿಲ್ವೆ ಗೂಬೆನ್ ತಂದು "

" ಅದಲ್ಲಲೇ ನಾ ಹೇಳಿದ್ದು ಕೇಂದ್ರ ಸರ್ಕಾರ ಆಹಾರ ಹಾಳಮಾಡದೆ ಅಂತಾವ "

" ಅದೆಲ್ಲಾ ಎಷ್ಟೋ ಆತದೆ ಬಿಡಪ್ಪಾ ಯಾಕ್ ಸುಮ್ನೇ ಉಚ್ಚೇಲ್ ಗಾಳ ಹಾಕ್ತೀಯ ದೊಡ್ ಮನ್ಸ ಆಗ್ಬೇಕು ಅಂದ್ರೆ ಇಂತಾ ಚಿಕ್ಪುಟ್ ಇಸ್ಯಾನೆಲ್ಲಾ ನಂತಾವ ಕೊರೀತಾ ಇರ್ಬಾರ್ದು ನಾ ನೋಡು ಹೇಂಗಿದ್ದೆ ಈಗೊಂದಾರ್ತಿಂಗ್ಳು ಅಲ್ಲೀ ಇಲ್ಲೀ ಒಸಿ ಅವ್ರಿವ್ರ ಜೊತೆ ಸಲ್ಪ ಓಡಾಡ್ದೆ ನೋಡು ಹೆಂಗಿವ್ನಿ ಈಗ....ನೀನು ಕಲ್ತ್ಕೊಳಲೇ ಇಲ್ಲಾಂದ್ರೆ ಇಲ್ಲೇ ಕುಂತಿರು ಅವ್ರಿವ್ರ ತಾವ ಅರ್ಧ ಬೀಡಿ ಕೇಳ್ಕೋತ "

-------------------

" ಬೆಂಗ್ಳೂರ್ ತುಂಬಾ ಒಂಟೆಗ್ಳು ಬಂದ್ಬುಟ್ಟವಂತೆ "

" ಹಾಂ ಇನ್ನೊಂದ್ ೨೫ ದಿನ ಇರ್ತವೆ ಅಷ್ಟೇಯ ಬ್ರಮ್ಮ ಬರ್ದ್ಬುಟವ್ನೆ ಅವುಗ್ಳ ಹಣೇಬರ ತೀರೋಗದೆ ಗೊತ್ತಿಲ್ದೇ ಬಬಲ್ ಗಮ್ ತಿನ್ನೋ ಹಂಗೆ ಮೂತಿ ತಿರ್ಗಿಸ್ಕೋತ ಅಡ್ಡಾಡ್ತವೆ ಪಾಪ ..... ಹೊಟ್ಟೆಗೂ ಸರಿ ಐತೋ ಇಲ್ವೋ "

-------------------

" ಅದೇನೋ ೬೪ನೇ ಸ್ವಾತಂತ್ರ ಅಂದ್ರು ಟೀವಿನಾಗೆ ? "

" ಅಷ್ಟೂ ಗೊತ್ತಾಯಕಿಲ್ವೇನೋ ನಿಂಗೇ ಚಮ್ಚಾ ತಗಂಡು ತಿನ್ನಸ್ಬೇಕು ಆದ್ರೆ ಚಮಚಾಗಿರಿ ಮಾತ್ರ ಮಾಡಕ್ ಬಲ್ನನ್ಮಗ ನೀನು ...ಅದೂ ನಮ್ ಗಾಂಧೀಜಿ ಇದ್ರಲ್ಲಾ ಆವಯ್ಯಾ ಹೋಗಿ ಅಷ್ಟ್ ವರ್ಸ ಆಯ್ತೂ ಅಂತ ಇನ್ನಾರು ತಿಳ್ಕೋ ಬರೇ ಬಿಟ್ಟಿಲ್ ತಿಂದಾಗಲ್ಲ... ನಾನೂ ಒಂದ್ಕಿತಾ ಅದೇನ್ ಮಾಡಾರು ಅಂತ ನೋಡಾಕೋಗಿದ್ನ ಒಂದ್ಕಿತಾ ಹೊರ್ಗಡೀಕೆ ಬಾವುಟ ಹಾರ್ಸ್ಬುಟ್ಟಿದ್ದೆ ಆಮೇಲೆ ಸುರು ಹಚ್ಕಬುಟ್ರು ಕಣ್ಲಾ..ಆವಯ್ಯನ್ ಬಗ್ಗೆ ಮಾತಾಡಿದ್ದೇ ಮಾತಾಡಿದ್ದು .. ಹಂಗಂತೆ ಹಿಂಗಂತೆ...ಆದ್ರೆ ಆವಯ್ಯನ್ ಥರ ಒಬ್ಬ್ರಾದ್ರೂ ಉಪ್ಪಿನ್ ಸತ್ಯಾಗ್ರಹ ಮಾಡದ್ರ ? "

" ಮಾಡ್ದ್ರಲ್ಲಪ್ಪಾ ನೀ ಎಲ್ಲಿದ್ದೆ ’ ಟಾಟಾ ಉಪ್ಪು ದೇಸದ ಉಪ್ಪು ’ ಅಂತ ಟೀವಿನಾಗೆ ಆ ಪಾಟಿ ಒದರ್ತಾಇದ್ರು ಅದೂ ಬಿಟ್ಟು ಮೊನ್ನೆ ನಮ್ ಕೈಯ್ಯೋರು ಕಾಲೆಳ್ಕೋತ ಬಳ್ಳಾರಿ ತಂಕ ಕ್ವಿಂಟಾಲ್ಗಟ್ಲೆ ಡ್ರೈಫ್ರೂಟ್ಸ್ ತಿಂದಿಲ್ವೆ...ನಂಗೇನು ತಿಳ್ಯಾಕಿಲ್ಲ ಅನ್ಬೇಡ ನೀನು ನಾನು ಒಸಿ ತಿಳ್ಕಂಡಿದೀನಿ ನೆಪ್ಪಿರ್ಲಿ "

------------

" ವರಮಾಲಕ್ಸ್ಮಿ ಹಬ್ಬ ಬಂತಲ್ವಾ ? "

" ಹೌದು ಯಾಕಪ್ಪಾ ಹೆಂಗುಸ್ರ ಹಬ್ಬ ನಿಂಗೆ ಯಾದಾರೂ ಮಾಲಕ್ಸ್ಮೀನ ಕಂಡ್ಕೊಂಡಿದೀಯೋ ಏನ್ಕತೆ ? "

" ಅಯ್ಯೋ ನಿನ್ ಮನೆಕಾಯೋಗ ನಾ ಹೇಳಿದ್ದು ಸುಸ್ಮಮ್ಮ ಬರ್ತಾರಲ್ಲ ಬಳ್ಳಾರಿಗೆ ಅಂತಾವ "

" ಬತ್ತಾರೆ ಬತ್ತಾರೆ ಮಕ್ಳವ್ರೆ ನೋಡು ಒಸಿ ನೋಡ್ಕಂಡು ತಲೆಮೇಲೆ ಕೈಯ್ಯಿಟ್ಟು ಆಮೇಲೆ ಮಾಲಕ್ಸ್ಮೀನ ಬಳ್ಳಾರೀಲೇ ಕೂರ್ಸಿ ಹೊಂಟೋಗ್ಬುಡ್ತರೆ ಆಕಡೀಕೆ ನಮ್ ರಾಮ್ಲು ಹೋದ್ರೆ ಅಮ್ಮಂಗೆ ಮನೆ ಖರ್ಚಿಗಿರ್ಲಿ ಅಂತ ಸಲ್ಪ ನಿಪ್ಪಟ್ಟು ಕೋಡ್ಬಳೆ ಜೊತೆ ಮಾಲಕ್ಸ್ಮೀ ಬಾಗಿನನೂ ಕೊಟ್ಬುಟ್ ಬತ್ತಾನೆ "

------------------

" ಇದ್ಯಾಕಣ್ಣಾ ನಿಮ್ಮನೇಲಿ ಬಣ್ ಬಣ್ದ ಬ್ರಸ್ಸು ಹಲ್ಲುಜ್ಜಾಕೆ ಬೋ ಸುಧಾರ್ಸ್ದೋರು ಬೆಳಿಗ್ಗೆಲೇ ಒಂದ್ ಬಣ್ಣದ್ದು ಇನ್ನು ಮದ್ಯಾನ್ಕೆ ಇನ್ನೊಂದ್ ಬಣ್ಣದ್ದು ಸೈಂಕಾಲ ಮತ್ತೊಂದು ಬಣ್ಣದ್ದು "

" ಇದಾ ಇಸ್ಯಾ ನೀ ಬಂದಾವಾಗ್ಲೇ ಅಂದ್ಕೊಂಡೆ ಏನಾರೂ ಮಾಡ್ತೀಯಾ ಅಂತ ಗಬ್ ನನ್ಮಗ್ನೆ ಅದ್ಕೇ ಎಲ್ಲಾ ಬ್ರಸ್ಸು ಬೀಡಿ ವಾಸ್ನೆ ಅಂತವೆ ಹೆಂಗುಸ್ರು "

----------------------

" ಏನ್ಲಾ ಹಿಂಗ್ಯಾಕ್ ನಿನ್ ಮುಖ ನಾಟ್ಕಕ್ಕೆ ಬಣ್ಣ ಹಚ್ದಂಗೈತೆ ? "

" ಅಷ್ಟೂ ಗೊತ್ತಾಯಾಕಿಲ್ವ ನೀವೆಲ್ಲಾ ಹಚ್ಕತೀರಲ್ಲ ಕಿರೀಮು ಅಂಥದ್ದೇ ಒಂದ್ನ ಕಂಡ್ಬುಟ್ನಾ ಬಿಡ್ದೇ ಸಲ್ಪ ಹಚ್ಚ್ಕೊಂಡಿವ್ನಿ ನೋಡು ಸಖತ್ತಾಗೈತಲ್ವಾ ? "

" ಯಾವ ಕಿರೀಮು ತೋರ್ಸು ನೋಡವಾ "

" ಅದು ಕಾಲ್ಗೇಟಲೇ ಅದು ಹಲ್ಲುಜ್ಜೋದು ಕಣ್ಲಾ ಮಕಕ್ಕಲ್ಲಾ ಅದು "


---------------------

" ಬಿಹಾರ್ದಗೆ ರಾಬರಿ ದೇವಿ ......"

" ರಾಬರಿ ಅಲ್ಲಪ್ಪಾ ರಾಬ್ಡಿ ದೇವಿ ಹನ್ನೋ "

" ಹಾಂ ರಾಬ್ಡಿ ದೆವೀನೂ ಆವಯ್ಯ ಮೇವುತಿಂದು ಕಿವೀಲಿ ಹುಲ್ ಬೆಳ್ಸವ್ನಲ್ಲಾ ಲಾಲೂ ಅವ್ನೂನೂ ಎಲ್ದೂ ಜನ ರಾಸ್ಥ್ರು ಗೀತೆ ಹಾಡುವಾಗ ಕುಂತೇ ಇದ್ರಂತೆ ? "

" ಗಣಿಯಂತೂ ಇಲ್ಲಾ ಅಲ್ಲಿ ಅದಕ್ಕೇ ಧಣಿಗಾರ್ಕೆ ತೋರ್ಸುವಾ ಅಂತ ಕುಂತಿದ್ರಂತೆ ಏನಾಯ್ತಪ್ಪ ಕುಂತ್ಕಂಡ್ರೇನು ಮಲೀಕಂಡ್ರೇನು ನಿಂಗೇನ್ ತೊಂದ್ರೆ ಬಿಡು "

----------------------

" ಇನ್ನೇನ್ಲಾ ಇಸ್ಯಾ ? "

" ಏನಿಲ್ಲಾ ಕಣಪ್ಪಾ ಎಲ್ಡೆಲ್ಡ್ ದಿನಕ್ಕೂ ನೀನು ಹಿಂಗೇ ಅಲೀತಾ ಬಾ ನಾನೂ ಬತ್ತೀನಿ ಅದೂ ಇದೂ ಅಂತ ಮಾತಾಡ್ಬುಟ್ಟು ಹಂಗೇ ಸಲ್ಪ ಸಂಕ್ರಣ್ಣನ್ ತಾವ ಸಲ್ಪ ಇಸ್ಗಂಡು ಒಳೀಕ್ಬಿಟ್ಟು ಹೊಂಟೋಗ್ವ "

" ಅಂದಂಗೆ ಮರ್ತೇ ಬಿಟ್ಟೆ ಕಣಪ್ಪಾ ನಮ್ ಹೆಮ್ಮೆಲ್ಲೇ ಬರಹೇಳವ್ರೆ ಬಾವುಟಹಾರ್ಸಕೆ, ಬಾವುಟ ಹಾರ್ಸೂತ್ಲೂವೆ ನಾವೆಲ್ಲಾ ಅಲ್ಲೇ ಪಕ್ಕಕ್ಕೆ ನಾವು ಕೂತ್ಗಂಬುದು ಕೊರೀವರ್ ಕೊರ್ಕತರೆ ಅದ್ಯೇನೇನೋ ಒದರ್ಕತರೆ ನಮ್ಗದೆಲ್ಲಾ ಯಾಕ್ಬೇಕಪ್ಪಾ ಹೋದವ್ರ್ ಹೋದ್ರು ಇದ್ದವ್ರು ಸುಮ್ಕಿರೋದು ಬಿಟ್ಟು ಅವ್ರಹಂಗೆ ಇವ್ರ ಹಿಂಗೆ ಅಂತಾನೇ ಇರಾದು ಪ್ರತೀ ಸಲಿ ಅದೇ ಪ್ಲೇಟು ಬದ್ಲಾಯಕೇ ಇಲ್ಲ ಹೋಗ್ಲಿ ಬಿಡು ಆದಾದ್ ಮ್ಯಾಲೆ ಪಾಲ್ಟಿ ಅದೆ ಅಂತ ನಮ್ ಹೆಮ್ಮೆಲ್ಲೆ ಕಣ್ಮಡದವ್ರೆ ....ಹೋಗ್ ಕೂತಿರೋತು ಕೈಗೊಂದ್ ನೂರ್ರುಪಾಯ್ ಮಡೀಕಾ ಅಂತ ಕೊಟ್ಟಾಗ ಇಸ್ಕಳದು ಸಲ್ಪ ತುಂಡ್ ತಿಂದು ಒಂದು ಕ್ವಾರ್ಟ್ರು ಏರಿಸ್ಗೊಂಬುಟ್ರೆ ಎಲ್ಲಾ ಫ್ರೀಡಮ್ಮು "

10 comments:

 1. ಸೂಪರ್ ಸರ್.... ಇದನ್ನೆಲ್ಲಾ ಎಲ್ಲಿಂದ ಬರೆಯುತ್ತಿರಿ ಸರ್... ಹಾಟ್ಸ್ ಆಫ.......

  ReplyDelete
 2. ವ್ಯ೦ಗ್ಯ ಭರಿತ ಹಾಸ್ಯ.

  ReplyDelete
 3. ‘ವ್ಯಂಗ್ಯದ ಕಿಡಿಗಳು’!

  ReplyDelete
 4. ಇಂದು ನಿಮ್ಮ ಸ್ವಾತಂತ್ರೋತ್ಸವ ನಿಮಿತ್ತ ವಿಶೇಷ ಲೇಖನ ನಿರೀಕ್ಷೆಯಲ್ಲಿದ್ದೇನೆ.

  ReplyDelete
 5. super sir....sakkat aagi baredidhira....

  ReplyDelete
 6. ಸಮಯದ ಅಭಾವದಿಂದ ನಿಮಗೆಲ್ಲಾ ಧನ್ಯವಾದ ಸಮರ್ಪಿಸಲು ವಿಳಂಬವಾಗಿದ್ದಕ್ಕೆ ಕ್ಷಮೆಕೋರಿ ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಕೋರುತ್ತಿದ್ದೇನೆ

  * ಶ್ರೀ ದಿನಕರ್ , ಇದು ಆಲೋಚನಾ ಮಗ್ನ ಮನಸ್ಸಿಗೆ ತಂತಾನೇ ಬರುತ್ತದೆ, ತಮಗೆ ಆಭಾರಿಯಾಗಿದ್ದೇನೆ.

  * ಪ್ರಭಾಮಣಿ ಮೇಡಂ, ನಮ್ಮ ಇಂದಿನ ಜನಾಂಗ ಹಾಸ್ಯರಸವನ್ನು ಜಾಸ್ತಿ ಆಸ್ವಾದಿಸಲು ಇಷ್ಟಪಡುತ್ತದೆ, ಈ ಮೂಲಕ ಕೆಲವು ಮಾಹಿತಿ ತಲ್ಪಿಸೋಣ ಎಂದು ಪ್ರಯತ್ನಿಸಿದೆ, ತಮಗೆ ಧನ್ಯವಾದಗಳು.

  * ಶ್ರೀ ಸುನಾಥ್ ಸಾಹೇಬರೇ ತಮಗೆ ನಮನಗಳು

  * ಶ್ರೀ ಶ್ರೀಧರ್ ನೀವು ನಿರೀಕ್ಷಿಸುತ್ತಿದ್ದ ಲೇಖನ ಪ್ರಕಟಪದಿಸಿದ್ದೇನೆ, ನಮಸ್ಕಾರಗಳು

  * ಶ್ರೀ ಮಹೇಶ್, ತಮ್ಮ ಅನಿಸಿಕೆಗೆ ನನ್ನ ಹಲವು ನೆನಕೆಗಳು.

  ReplyDelete
 7. ನಕ್ಕು ನಕ್ಕು ಸಾಕಾಯ್ತು! ಹಾಸ್ಯಾಯಣದಲ್ಲಿ ನಮ್ಮೆಲ್ಲರಲ್ಲಿನ ನಡುವಿನ ದ್ವಂದ್ವಗಳನ್ನ ಮಾರ್ಮಿಕ ಹಾಸ್ಯ ಕಿಡಿಗಳನ್ನಾಗಿಸಿ ಸಿಡಿಸಿದ್ದಿರಾ....
  ಅತ್ಯುತ್ತಮ ಲೇಖನ. ತಮಗೊಂದು ನಮಸ್ಕಾರ.

  ReplyDelete
 8. ಅನಂತ ಧನ್ಯವಾದಗಳು ಸೀತಾರಾಮ್ ಸಾಹೇಬರೇ

  ReplyDelete