ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, August 10, 2010

ಪುಸ್ಕಿ ಶೇಂಗಾ -ಬೂಂಚಾಣಿ


ಪುಸ್ಕಿ ಶೇಂಗಾ -ಬೂಂಚಾಣಿ
[ಇವತ್ತಿನ ಜನಾಂಗದ ಜವಾಬ್ದಾರಿಗಳು ಎಷ್ಟೆಷ್ಟು , ಯಾವ್ಯಾವರೀತಿ ಎಂಬುದನ್ನು ನೆನೆದು ಈ ಶೇಂಗಾ ತಿನ್ನಿ ]


" ಸಿಗರೇಟು ಸೇದಿ ತುಂಡನ್ನು ಅಲ್ಲೇ ಯಾಕೋ ಬಿಸಾಕ್ದೆ ? "

"ದಾಸರು ಹೇಳಿಲ್ಲವೇ - ಕೆರೆಯ ನೀರನು ಕೆರೆಗೆ ಚೆಲ್ಲಿ "

----------

" ಹುಡುಗಿಯನ್ನು ಲವ್ ಮಾಡಿಬಿಟ್ಟೆಯಲ್ಲ ನೀನು ಖದೀಮ "

" ವೃದ್ಧರಾದ ಅವಳ ತಂದೆಗೆ ಗಂಡು ಹುಡುಕುವ ಭಾರ ಕಮ್ಮಿ ಮಾಡುವ ಸಲುವಾಗಿ ಮಾಡಿದೆ"

" ಬಹ್ಳ ಒಳ್ಳೇ ಕೆಲಸವಪ್ಪಾ ಆದ್ರೆ ಮೊನ್ನೆ ಇನ್ನೊಬ್ಬಳ ಜೊತೆ ಪೇಟೆಯಲ್ಲಿ ಸುತ್ತುತ್ತಾ ಇರುವುದನ್ನು ನೋಡಿದೆ ? "

" ಅವಳಾ ಅವಳು ಸಿಂಪ್ಲಿ ನನ್ನ ಗರ್ಲ್ ಫ್ರೆಂಡು, ಮದುವೆ ಆಗೋದು ಇವಳನ್ನ "

-----------

" ಇಡಿ ಮಾವಿನ್ ಮಿಡಿ ಮಠಕ್ಕೆ ಹೋಗಿದ್ಯಾ ? "

" ಇಲ್ಲ, ಅಲ್ಲಕಣೋ ಅದು ಇಡಿ ಮಾವಿನ್ ಮಿಡಿ ಮಠ ಅಲ್ಲ ನಿಡುಮಾಮಿಡಿ, ಯಾಕಪ್ಪಾ ಅದ್ರ ಬಗ್ಗೆ ಈಗ? "

" ಏನಿಲ್ಲ ಸನ್ಯಾಸಿಗಳು ಯಾರೂ ಬ್ರಹ್ಮಚಾರಿಗಳಲ್ವಂತೆ ಅದ್ಕೇ ಸ್ವಾಮಗೋಳು ಏನಾದ್ರೂ ಮದ್ವೆ ಆಯ್ತಾರ ಇಲ್ಲಾ ಮಡೀಕತಾರ ಕೇಳವಾ ಅಂತ "

-----------

" ದೀಪಿಕಾ ಪಡುಕೋಣೆ ಸಿದ್ಧಾರ್ಥ ಮಲ್ಯನ ಹಿಂದೆ ಬಿದ್ದವ್ಳಂತೆ ? "

" ನೀನೂ ಲಿಕ್ಕರ್ ಬ್ಯಾರನ್ ಆಗಿ ನೂರ್ಜನ್ಮಕ್ಕಾಗುವಷ್ಟು ಕಾಸು ಮಡೀಕಂಡು ಹಾರನ್ ಮಾಡು ಬತ್ತಾಳೆ ನೋಡು! "

----------

" ಬಳ್ಳಾರೀಲಿ ಮುಂದಿನಸರ್ತಿ ಕಾಂಗ್ರೆಸ್ಸೇ ಬರೋದಂತೆ ಸಿದ್ರಾಮಣ್ಣೋರು ಹೇಳ್ಬುಟ್ಟವ್ರೆ ? "

" ಸದ್ಯಕ್ಕಂತೂ ಹಾಗೇ ಇಟ್ಕಾ ಏನಂತೆ ಅದ್ಕೀಗ, ಆಮೇಲೆ ಚುನಾವಣೆ ಬರೂತ್ಲೂವೆ ಎಲ್ಲಾ ಮರ್ತೋತದೆ, ಹೆಂಡ-ದುಡ್ಡು ಒಸಿ ಸಿಕ್ಬುಟ್ರೆ ಯಾವ ಸಿದ್ರಾಮಣ್ಣನೂ ಮತ್ತೆ ಪಾದ ಮಡ್ಗಾಕಿಲ್ಲ ಆ ಕಡೀಕ್ಕೆ "

--------------

" ಜಲಾಸಯ ಎಲ್ಲಾ ಬರ್ತಿ ಆಗ್ಬುಟ್ಟದೆ ಅಂತ ಬಾಗಿನ ರೆಡಿ ಮಾಡ್ಕ ಕುಂತವ್ರೆ ಆದ್ರೂ ಕರೆಂಟ್ ಮಾತ್ರ ಕೊಡಾಕಿಲ್ಲ ನೋಡು ? "

" ರಾಜ್ಕೀಯ್ದೋರು ಜೋರಾಗಿ ಉಚ್ಚೆ ಹೊಯ್ದಿರಾದ್ ಕಂಡ್ರೂ ಬಾಗಿನ ಎತ್ಕಂಡು ಹೊರಟ್ಬುಡ್ತರೆ, ಜಲಾಸಯದಗೆ ನೀರಿಲ್ಲ, ಕಣ್ಣೀರು....ಅಷ್ಟೇಯ ತಿಳ್ಕಾ "

----------

" ನಾನ್ ಯಾರಿಗೂ ಹೆದ್ರೋ ಮರೀನೇ ಅಲ್ಲಾ ಅಂತ ರೇಣುಕಾಚಾರ್ಯ ಹೇಳ್ತವನಂತೆ "

" ನೋಡಿದ್ದೇ ಯಾಕೋ ಮತ್ತೆ ಕೇಳ್ತೀಯಾ ನಿಂಗೇನು ಬೇರೆ ಕೆಲ್ಸಾ ಇಲ್ವಾ, ಇಲ್ಲಾಂದ್ರೆ ಹೇಳು ಜೈಲಕ್ಷ್ಮಮ್ಮನ್ ತಾವ ಕೇಳು ಎಲ್ಲಾ ಸರೀ ಗೊತ್ತಾತದೆ "


------------------

" ಏನ್ಲಾ ಅದು ಮೊಬೈಲ್ನಾಗೆ ಯಾರೋ ಹುಡ್ಗಾ ಹುಡ್ಗಿ ಅದೇನೇನೋ ಮಾಡ್ದಾಂಗಿತ್ತು ? "

" ಅದೆಲ್ಲಾ ನಮ್ಮ ಪ್ರಾಜೆಕ್ಟ್ ಮೀಟಿಂಗು, ನಮ್ಮಪ್ಪ ಬೋ ಒಳ್ಳೇಮನ್ಸ, ಮಗಾ ಲೇಟೆಸ್ಟ್ ಮೊಬೈಲ್ ಕೊಡುಸ್ತೀನಿ ಮುಂದಿನ್ಸಲಾ ಜಾಸ್ತಿ ಮಾರ್ಕ್ ತೆಗಿ ಅಂತೇಳಿ ಕೊಡ್ಸ್ಯವ್ರೆ "

---------------

" ಯಾಕಮ್ಮಾ ದಿನಾ ಇಷ್ಟು ಲೇಟಾಗಿ ಮನೆಗೆ ಬತ್ತೀಯಲ್ಲ, ನೀನೇನು ಹೆಣ್ಣೋ ಗಂಡೋ,ಹೆಣ್ಣೈಕ್ಳು ಬೇಗ ಮನೇ ಸೇರ್ಕೋಬೇಕು ಅಷ್ಟೂ ಗೊತ್ತಾಯಕಿಲ್ವ ನಿಂಗೆ ? "

" ಸಾರಿ ಅಪ್ಪ, ಇವತ್ತೊಂದಿನ ನಂಗೆ ಕಾಲೇಜ್ನಾಗೆ ಎಕ್ಟ್ರಾ ಕ್ಲಾಸ್ ಇತ್ತು ಅದ್ಕೇ ಲೇಟು "

" ಪದ್ಮಮ್ಮನ ಮನೆ ಸೀನು ಹೇಳ್ದ ನೀನು ಅದ್ಯಾರೋ ಲೋಕಿ ಅನ್ನೋವ್ನಜೊತೆ ಎಲ್ಗೋ ಹೋಗಿದ್ಯಂತೆ "

" ಇಲ್ಲಪ್ಪಾ ಆವಯ್ಯಂಗೆ ತನ್ಜೊತೆ ಬಂದಿಲ್ಲಾ ಅಂತ ಹೊಟ್ಟೆಕಿಚ್ಚು ಅದಕ್ಕೇ ಹಾಂಗಾಡ್ತಾನೆ "

16 comments:

  1. ಭಾರೀ ನಗೆ ಸರಕುಗಳ ತರಾವರಿ!
    ಚೆನ್ನಾಗಿದೆ ಭಟ್ಟರೇ!

    ReplyDelete
  2. hahaha oLLe suddigaLa saramaaleyannte jodisiddeeri... supero super

    ReplyDelete
  3. ಸಖತ್ತಾಗಿದೆ ಭಟ್ಟರೇ ,ಜೋಕುಗಳ ಜೋಕಾಲಿ!

    ReplyDelete
  4. ಸೂಪರ್ ಸರ್ , ನಕ್ಕು ನಕ್ಕು ಸಾಕಾಯ್ತು .ಸತ್ಯದ ತಲೆಮೇಲೆ ನಗೆ ಚಟಾಕಿ ಇಟ್ಟು ಸಿಡಿಸಿದಿರಿ ... !
    ದೀಪಿಕಾ,ಮಲ್ಯರ ಚಟಾಕಿ ಓದಿದ್ ಮೇಲೆ ಸುಮ್ನೆ ಕೂತಾಗಲೂ ನಗು ಬರತ್ತೆ ! :D
    ಸಕ್ಕತ್ತಾಗಿವೆ .

    ReplyDelete
  5. ಸಖತ್ತಾಗಿದೆ ಭಟ್ರೇ, ಮುಂದುವರಿಸಿ....

    ReplyDelete
  6. ಸಕ್ಕತ್ತಾಗಿದೆ. :)

    ReplyDelete
  7. ನಿಮ್ಮ ಎಲ್ಲ ಲೇಖನಗಳಿಗಿಂತ ವಿಭಿನ್ನವಾಗಿದೆ.. :-)

    ReplyDelete
  8. ಶೇಂಗಾ ಕಡ್ಲೆ ಬೊಂಬಾಟ್ ಆಗಿದೆ. ಹೀಗೇ ಕೊಡ್ತಾ ಇರಿ. ನಾವು ಮೆಲ್ತಾನೇ ಇರ್ತೀವಿ.
    ("ತಿನ್ನೋರು ತಿಂತಾನೇ ಇರ್ತಾರೆ!")

    ReplyDelete
  9. :) ಸಕ್ಕತ್ ಜೋಕ್ಸು

    ReplyDelete
  10. ಮಾನ್ಯ ಮಿತ್ರ ಓದುಗರೇ, ಇದನ್ನು ಕೇವಲ ತಮಾಷೆಗಾಗಿ ಬರೆದಿದ್ದೊಂದೇ ಅಲ್ಲ, ಇದರ ಹಿಂದೆ ಒಂದೊಂದೂ ಒಂದೊಂದು ಸಂದೇಶವನ್ನು ಹೊತ್ತು ಬಂದಿದೆ, ಮಕ್ಕಳಿಗೆ ಸವಲತ್ತು ಮತ್ತು ಸಂಸ್ಕಾರ ಕೊಡುವಾಗ, ನಾವೇ ಹಲವಾರು ಸಲ ಎಡವದಂತೆ, ಯಾರೋ ಮಠದವರು ಅಸಹ್ಯಕರ ಹೇಳಿಕೆಯನ್ನು ಆಗಾಗ ಕೊಡದಂತೆ, ಜಲಾಶಯಗಳ ಇಂದಿನ ಸ್ಥಿತಿಗತಿ---ಈ ಎಲ್ಲದರ ಬಗ್ಗೆ ಹೇಳಿದ್ದೇನೆ. ಬರೆಯುವಾಗ ಒಮ್ಮೆ ಬರೆಯಲೋ ಬಿಡಲೋ ಎಂಬ ಅನುಮಾನ! ನೀವೆಲ್ಲ ಒಪ್ಪಿದಾಗಲೇ ಧೈರ್ಯ ! ಯಾಕೆಂದರೆ ಎಲ್ಲರೂ ಇದನ್ನು ಇಷ್ಟಪಟ್ಟಾರೋ ಇಲ್ಲವೋ ಎಂಬುದು, ಹಲವರು ಬಂದು ಓದಿದರೂ ತಕ್ಷಣಕ್ಕೆ ಪ್ರತಿಕ್ರಿಯಿಸಲಿಲ್ಲ, ಆ ವಿಷಯದಲ್ಲಿ ನಮ್ಮ ಖ್ಯಾತ ಬ್ಲಾಗ್ ವಿಮರ್ಶಕರಾದ ಶ್ರೀ ಸೀತಾರಾಮ್ ಸಾಹೇಬರು ಗಟ್ಟಿ ಮನಸ್ಸು ಮಾಡಿ ಪ್ರತಿಕ್ರಿಯಿಸಿದರು, ಇರಲಿ, ಮನುಷ್ಯನ ಜೀವನದಲ್ಲಿ ನವರಸಗಳೂ ಅನುಭವಿಸಲು ಬೇಕು, ಯಾವಾಗಲೂ ದೇವೇಗೌಡರ ಥರ ಮುಖ ಗಂಟು ಹಾಕಿಕೊಂಡಿದ್ದರೆ ನೀವೆಲ್ಲ ನಗುವುದನ್ನು ನಾನೊಮ್ಮೆ ನೋಡಬೇಕಲ್ಲ! ಆಗಾಗ ಈ ಟ್ಯಾಬ್ಲೆಟ್ ಕೊಟ್ಟರೆ ಪರವಾಗಿಲ್ಲ ಅನಿಸುತ್ತಿದೆ, ಬತ್ತಳಿಕೆಯಲ್ಲಿ ಜೋಕ್ಸ್ ಏನೂ ಕಮ್ಮಿ ಇಲ್ಲ ! ಆದ್ರೆ ಸಮಯದ ಅಭಾವದಿಂದ ಬರೆಯುವುದೇ ಕಷ್ಟ,

    * ಶ್ರೀ ಸೀತಾರಾಮ್ ತಮಗೆ ಅನಂತ ವಂದನೆಗಳು

    * ಸುಗುಣ ಮೇಡಂ ತಮಗೂ ನಮನಗಳು

    * ಶ್ರೀ ಕೃಷ್ಣಮೂರ್ತಿ ತಮಗೆ ನಾನು ಕೃತಜ್ಞ

    * ರಂಜಿತಾ ಮೇಡಂ ತಮಗೆ ದೀಪಿಕಾ ಜೋಕ್ ಇಷ್ಟವಾಯಿತೆಂದಿರಲ್ಲ, ತಮಗೆ ಆಭಾರಿ

    * ಶ್ರೀ ಪರಾಂಜಪೆ ತಾವು ಸಖತ್ತಾಗಿ ಎಂಜಾಯ್ ಮಾಡಿದ ಹಾಗಿದೆ, ನಮನಗಳು

    * ಶ್ರೀ ವಿ.ರಾ.ಹೆ. ಹೊಸದಾಗಿ ಬಂದಿರಿ, ತಮಗೆ ಸ್ವಾಗತ ಹಾಗೂ ನಮನ (: (: [ನಿಮ್ಮ ಮುಖಹಾಕಿ ನಕ್ಕಿದ್ದೇನೆ ]

    * ಶ್ರೀ ರವಿ ಹೆಗಡೆ ತಾವೂ ಮೊದಲನೇ ಸಲ ಬಂದು ಪ್ರತಿಕ್ರಿಯಿಸಿದಿರಿ, ಸ್ವಾಗತ ಹಾಗೂ ಅಭಿವಂದನೆ.

    * ದಿವ್ಯಾ ಮೇಡಂ, ಬೂಂಚಾಣಿ ಎಂದರೆ ಹುರಿದ ಸಣ್ಣ ಶೇಂಗಾ ಅಂತ-ಇದು ಕೊಂಕಣಿ ಭಾಷಿಕರು ಬಳಸುವ ಶಬ್ಧ, ನಾನು ಕರಾವಳಿ-ಅರೆಮಲೆನಾಡು ಪ್ರದೆಶದವನಾದ್ದರಿಂದ ನಮ್ಮಲ್ಲಿಯ ಪ್ರಾದೇಶಿಕ ಶಬ್ಧಗಳನ್ನು ಉಪಯೋಗಿಸುತ್ತೇನೆ, ಧನ್ಯವಾದ

    * ತೇಜಸ್ವಿನಿ ಮೇಡಂ, ದಯವಿಟ್ಟು ಮೇಲೆ ಉತ್ತರಿಸಿದ್ದೇನೆ ನೋಡಿ, ನಮನಗಳು

    * ಶ್ರೀ ಸುನಾಥ ಸಾಹೇಬರೇ ತಾವು ಹೇಳಿದ್ದು ಅರ್ಥವಾಯಿತು, ರಾಜಕಾರಣಿಗಳು ತಿನ್ನುವುದನ್ನು ಬಿಡುತ್ತಾರೆಯೇ, ಇದರ ಹೊರತು ಬೇರೆ ಗೂಢ ಅರ್ಥವಿದ್ದರೆ ತಿಳಿಸಿ, ತಮಗೆ ಕೃತಜ್ಞನಾಗಿದ್ದೇನೆ.

    * ಶ್ರ್ರೀ ಪಾಲ ತಮ್ಮ ಪ್ರವೇಶ ನಮ್ಮ ಬ್ಲಾಗಿಗೆ ಇಂದು ಹೊಸದು, ತಮಗೆ ಸ್ವಾಗತ ಹಾಗೂ ನಮನ.

    ಗೂಗಲ್ ಬಜ್ಜಿನಲ್ಲಿ ಬಜ್ಜಿ ಬೇಯಿಸಿಕೊಂಡ ಎಲ್ಲಾ ಓದುಗ ಮಿತ್ರರಿಗೂ, ನೇಪಥ್ಯದ ಓದುಗರಿಗೂ ನಮನಗಳು.

    ReplyDelete
  11. ಶ್ರೀ ಶಿವಪ್ರಕಾಶ್ ಹೊಸದಾಗಿ ತಮ್ಮ ಆಗಮನ, ನಿಮಗೆ ಸ್ವಾಗತ ಹಾಗೂ ನಮನ

    ReplyDelete
  12. ಹಾ ಹಾ,, ತುಂಬಾ ಚೆನ್ನಾಗಿ ಇದೆ,,,, ನಿಮ್ಮ ಸರಕುಗಳು......ನೈಸ್....

    ReplyDelete