ಆಸೆ
ಬಡತನಕೆ ಹಸಿವು ಸಿರಿತನಕೂ ಹಸಿವು
ಬಿಡಿಸಿನೋಡಲು ವಿಷಯವಸ್ತುವದು ಬದಲು
ಎಡಬಿಡದೆ ಅದುಬೇಕು ಇದುಬೇಕು ತನಗೆಂದು
ಬಡಬಡಿಸಿ ನೋಯದಿರು | ಜಗದಮಿತ್ರ
ಅಂಗಡಿಗಳಿಹವಿಲ್ಲಿ ಸ್ವರ್ಗಸೀಮೆಯ ಥರದಿ
ಅಂಗಳಕೆ ಕರೆಯುವರು ಅದೂ ಇದೂ ಎನುತ
ಬಂಗಾರ ಮುತ್ತು ರತ್ನಗಳಷ್ಟೇ ಬದುಕಲ್ಲ
ಸಿಂಗಾರ ಸದ್ಗುಣವು | ಜಗದಮಿತ್ರ
ವೇಗದಲಿ ಗಳಿಸುತ್ತ ಜಾಗ ಪಡೆಯುವ ಆಸೆ
ಬೇಗ ಸ್ವಂತದ್ದೆಂಬ ಮನೆ ಕಟ್ಟುವಾಸೆ
ಭೋಗಿಸಲು ಅದು ಸಾಲ ಮತ್ತೆ ವಾಹನ ಬೇಕು
ತ್ಯಾಗಿಗಳು ಬೆರಳೆಣಿಕೆ | ಜಗದಮಿತ್ರ
ಗುಣಕೆ ಗೌರವವಿಲ್ಲ ಮನಕೆ ಮನ್ನಣೆಯಿಲ್ಲ
ಒಣಜಂಬ ಬಲುಜೋರು ಬಲು ಕಾರುಬಾರು
ಕುಣಿಯುವರು ಕುಡಿಯುತ್ತ ಹುಡುಗ-ಹುಡುಗಿಯರ್ ರಾತ್ರಿ
ಕಣಕಣದಿ ಕಾಮಿಸುತ | ಜಗದಮಿತ್ರ
ಇರಗೊಡದು ಈ ಕಾಲ ಮಳೆಯಿಲ್ಲ ಬೆಳೆಯಿಲ್ಲ
ಬರೇ ಪಂಚೆ ಪಟ್ಟೆ ಸೀರೆಯನುಟ್ಟು ತಿರುಗೆ
ಅರಿದಿನಿತು ಹೊಲದಲ್ಲಿ ಕೃಷಿಕಾರ್ಯವಂ ಮಾಡು
ತಿರೆಯ ಮರೆಯದೆ ನಿತ್ಯ | ಜಗದಮಿತ್ರ
ದಿನಕೊಂದು ಹೊಸ ಯಾತ್ರೆ ಜನಕೊಂದು ಹೊಸ ಮಾತ್ರೆ
ಕನವರಿಸಿದಾಗೆಲ್ಲ ಕೈಗೆ ಕಮಲ ದಳ
ಮನೆಯೇನು ಮಠವೇನು ಬಿಡದ ಜಾಗವದುಂಟೆ
ನೆನೆದು ನುಂಗುವರೆಲ್ಲ | ಜಗದಮಿತ್ರ
ಬಣ್ಣಹಚ್ಚಿದ ಬೆಡಗು ಈ ಜೀವ ಈ ಭಾವ
ಕಣ್ಣು ಮೂಗು ಬಾಯಿ ಕಿವಿಯು ಚರ್ಮವದು
ಅಣ್ಣ ಕೇಳೈ ನಿನ್ನ ಕೈಯ್ಯೊಳಿರೆ ವಾಂಛಿತವು
ಮಣ್ಣಾದರೂ ಕೀರ್ತಿ | ಜಗದಮಿತ್ರ
jagadamitrana badukasaara bahala arthapurnavagide. kollubakatana; galisabekemba durase; vastugala melina prreti; sambhandhagalodane aneeti; krushikaarya nirlakshya; alasya jeevana, bhoga vilaasada jeevana mattu tinnubakatanadee arogya hadagedisi nitya maatreya nungo jeevanashaili; -heege jevanadalli nammannu naave kaledukolluvaga jagada mitrana mukhantara e kavana hoseyisi chatietinalli neeti heliddiraa,,, dhanyavadagalu.
ReplyDeleteThank you Sir
ReplyDeletebhgattare shivaprakash lekhanada nimma comment-ge maru pratikriye haakiddini nodree...
ReplyDeletematte charvaakaa yaru???
Manjunath K.S ennuvavara buzz ge obba 'chaarvaka muni' uttaara kottiddane, yaaru ant gottilla !
ReplyDeleteಒಳ್ಳೆ ಕವನಕ್ಕೆ ಧನ್ಯವಾದಗಳು...
ReplyDeleteಧನ್ಯವಾದಗಳು ಮಹೇಶ್ ಸರ್
ReplyDeleteವಿ.ಆರ್,ಭಟ್..
ReplyDeleteಉತ್ತಮ ಕವನ...
ನಿಮ್ಮ "ಜಗದಮಿತ್ರನ" ಆಶಯ ನಮ್ಮೆಲ್ಲರದೂ ಆಗಿದೆ...
ಅಭಿನಂದನೆಗಳು...
ಜಗದಮಿತ್ರನ ಮೂಲಕ ಬದುಕಿನ ಸಾರವನ್ನು ತಿಳಿಹೇಳುವ ನಿಮ್ಮ ಯತ್ನ ಸೂಪರ್, ತು೦ಬಾ ಇಷ್ಟವಾಯಿತು.
ReplyDeleteಜಗದಮಿತ್ರನ ವಚನಗಳು ಅದ್ಭುತವಾಗಿವೆ ಸರ್...
ReplyDeletetumba chennagide aase sahukararigu ide badavarigu ide nija...
ReplyDeleteಜಗದಮಿತ್ರನ ಮಾತು ವೇದಾಂತ ವಾಗುತ್ತದೆ, ನೋಡಿ ಇದೆಲ್ಲ ಬಹುತೇಕರಿಗೆ ಇಷ್ಟವಾಗೋದೇ ಇಲ್ಲ.
ReplyDelete* ಶ್ರೀ ಪ್ರಕಾಶ ಹೆಗಡೆ, ಜಗದಮಿತ್ರನ ಮಾತು ಇಷ್ಟಪಟ್ಟಿರಿ, ತಮಗೆ ವಂದನೆ
* ಶ್ರೀ ಪರಾಂಜಪೆ ಸೂಪರ್ ಎಂದಿರಿ, ನಿಮಗೆ ಕೃತಜ್ಞ
* ಪ್ರಗತಿ ಮೇಡಂ ಅದ್ಬುತ ವಕಾಹನಗ್ಲು ಎಂದಿರಿ, ಧನ್ಯವಾದ
* ಸುಗುಣ ಮೇಡಂ, ಬಡವರಿಗೂ ಸಿರಿವಂತರಿಗೂ ಆಸೆ ಇದ್ದೇ ಇದೆ ಎಂದು ಒಪ್ಪಿದಿರಿ, ನಮಸ್ಕಾರ.
ಓದಿದ, ಓದದ, ನೇಪಥ್ಯದಲ್ಲಿ ಓದಿದ, ಗೂಗಲ್ ಬಜ್ಜಿನಲ್ಲಿ ಓದಿದ ಎಲ್ಲರಿಗೂ ನಮನಗಳು