ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, June 12, 2010

ಗದ್ದೆಯಲಿ ಹೀಗೊಮ್ಮೆ



ಗದ್ದೆಯಲಿ ಹೀಗೊಮ್ಮೆ

ಕಟ್ಟ ಕದಿರಿನ ಸೊಂಪಾದ ಗದ್ದೆಯಲ್ಲಿ

ಮಟ್ಟ ಮೀರದ ಮಾರುತ ನಗುವ ಚೆಲ್ಲಿ

ಸದ್ಯ ಏನಾಯ್ತು ನೋಡುವಾ ಘಳಿಗೆಯಲ್ಲಿ
ಮಧ್ಯ ಮಿಂಚುಳ್ಳಿ ಮೀನಿಗಾಗಿ ಹುಡುಕಿತಲ್ಲಿ


ಬಿಳಿಯ ಬೆಳ್ಳಕ್ಕಿ ಬಣ್ಣದ ರಾಶಿಯಲ್ಲಿ
ಎಳೆಯ ಮೀನುಗಳ ತಾವೆಳೆದು ಕೊಕ್ಕಿನಲ್ಲಿ


ದೂರ ಮರದಲ್ಲಿ ಮುದ್ದು ಗಿಣಿ ಸಾಲಿನಲ್ಲಿ
ಹಾರುತಲ್ಲಲ್ಲಿ ನಲಿನಲಿವ ಹರುಷದಲ್ಲಿ

ಒಂಟಿ ಮಾಮರದ ಟೊಂಗೆಗಳ ಸಂದಿನಲ್ಲಿ
ಕಂಠದಿಂಪಿನಲಿ ಕೋಗಿಲೆಯು ಹಾಡಿತಲ್ಲಿ

ಯಾರೂ ತರದಿರಲಿ ಅಡಚಣೆಯ ನಡುವಿನಲ್ಲಿ
ಸಾರು ಅನ್ನಕ್ಕೆ ರಜಹಾಕಿ ಕೂರ್ವೆನಿಲ್ಲಿ

5 comments:

  1. ಚಂದದ ಚಿತ್ರಗಳು ,ಅಂದದ ಬರಹ.

    ReplyDelete
  2. ಹಾಡಿಕೊಂಡು ಕೈತಟ್ಟಿ ಕುಣಿಯಬಹುದಾದ ಗೀತೆ, ಎಂಜಾಯ್ ಮಾಡಿದಿರಲ್ಲ ! ಸರ್ವಶ್ರೀ ಡಾ|ಕೃಷ್ಣಮೂರ್ತಿ, ಕುಸು ಮುಳಿಲಾಯ, ಪ್ರವೀಣ್ ತಮಗೆಲ್ಲರಿಗೂ ಮತ್ತು ನೇಪಥ್ಯದ ಎಲ್ಲಾ ಓದುಗರಿಗೂ ನಮನಗಳು.

    ReplyDelete
  3. ತು೦ಬಾ ಚೆ೦ದದ ಕವನ. ಅನ್ನ-ಸಾರನು ಮರೆತು ಹಾಡುತ್ತಾ ಕುಣಿಬೇಕೆನಿಸಿತು.

    ReplyDelete