ಕವಿ ಸ್ಮರಣೆಯಲ್ಲಿ ಬರೆದ ಕೆಲವು ಚುಟುಕಗಳು, ಹಿರಿಯ ಸ್ನೇಹಿತರೂ ಕವಿ-ಸಾಹಿತಿಗಳೂ ಆದ ಶ್ರೀ ಜಯಂತ್ ಕಾಯ್ಕಿಣಿಯವರಿಗೆ 'ಕುಸುಮಾಗ್ರಜ' ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಕೆಲವು ಕವಿ-ಸಾಹಿತಿಗಳನ್ನು ಕಲೆಹಾಕಿ ನೆನೆಸಲು ಪ್ರಯತ್ನಿಸಿದ ರೀತಿ.
ಕುಸುಮಾಗ್ರಜರು
ಕಾವ್ಯವನು ಬರೆದಂದು ಹಬ್ಬ ಕವಿಮನೆಯಲ್ಲಿ
ದಿವ್ಯ ಮಂಗಳ ಕೂಸ ಹಡೆದ ರೀತಿಯಲಿ
ಭವ್ಯ ಭಾರತದ ಕನಸನು ಹೊತ್ತು ತಾ ಬರೆವ
ನವ್ಯನೋವನು ಮರೆತು | ಜಗದಮಿತ್ರ
ಕುಸುಮಾಗ್ರಜರು
ಕಾವ್ಯವನು ಬರೆದಂದು ಹಬ್ಬ ಕವಿಮನೆಯಲ್ಲಿ
ದಿವ್ಯ ಮಂಗಳ ಕೂಸ ಹಡೆದ ರೀತಿಯಲಿ
ಭವ್ಯ ಭಾರತದ ಕನಸನು ಹೊತ್ತು ತಾ ಬರೆವ
ನವ್ಯನೋವನು ಮರೆತು | ಜಗದಮಿತ್ರ
ಧರ್ಮವೆಂಬುದು ಮನುಜಮತದ ತತ್ವವದಕ್ಕು
ಕರ್ಮವೆಂಬುದು ನಮ್ಮ ಕ್ರಿಯೆಯ ಪ್ರಕ್ರಿಯೆಯು
ನಿರ್ಮಾಣಮಾಡು ನೀ ವಿಶ್ವ ಕುಟುಂಬವನು
ಮರ್ಮವರಿಯುತ ಬದುಕೋ | ಜಗದಮಿತ್ರ
ಕರ್ಮವೆಂಬುದು ನಮ್ಮ ಕ್ರಿಯೆಯ ಪ್ರಕ್ರಿಯೆಯು
ನಿರ್ಮಾಣಮಾಡು ನೀ ವಿಶ್ವ ಕುಟುಂಬವನು
ಮರ್ಮವರಿಯುತ ಬದುಕೋ | ಜಗದಮಿತ್ರ

ಭಾರೀ ಗಾತ್ರದ ಕೊಡುಗೆ ಕನ್ನಡಮ್ಮನಿಗೆ
ಯಾರ ಹಂಗಿಲ್ಲದಲೆ ನಡೆದರವರದೇ ದಾರಿ
ಭೂರಿ ಭೋಜನ ತಲೆಗೆ | ಜಗದಮಿತ್ರ

ಚರಕದಲಿ ತೆಗೆದರದೊ ಹಲವು ನೂಲುಗಳ
ಮರಕತ ಮಾಣಿಕ್ಯ ವೇದ ವೇದಾಂತಗಳ
ಸರಕು ತುಂಬುತ ನೋಡು | ಜಗದಮಿತ್ರ

ಹರನ ಹೃದಯದಿ ಹರಿಯ ಕಂಡರದೋ ತಿಳಿದು
ಬರಿದೇ ಭಾಗವ ಮಾಡಿ ಪೂಜಿಸುವ ಜನರಲ್ಲಿ
ಗುರಿ ತೋರಿದರು ಹದದಿ | ಜಗದಮಿತ್ರ

ಮಂಗಳದ ಅಂಗಳಕೆ ಕಬ್ಬದಾವುಗಳ !
ಮಂಗಳೂರಿನ ಜನತೆ ಸತತ ನೆನೆಯುವಹಾಗೆ
ಬೆಂಗಳೂರನೂ ಮಿಳಿಸಿ | ಜಗದಮಿತ್ರ

ಕಸುವಿನಲ್ಕಡೆದು ಕೊಡಲದುವೆ ಮಹಾಕಾವ್ಯ
ಹಸುವಿನಂದದಿ ಕವಿಯು ಉಪಕಾರಿ ಲೋಕದಲಿ
ಕುಸುಮಾಗ್ರಜರ ನುತಿಸು | ಜಗದಮಿತ್ರ
ಕಾರ೦ತ,ಬೇ೦ದ್ರೆ,ನರಸಿ೦ಹ ಮ೦ಗೇಶ, ವಸುಮತೀಶರ
ReplyDeleteಗುಣ ಕೊಡುಗೆಗಳ ಕುರಿತು ಕವನವಾಗಿಸಿಹರಿ೦ದು,
ಪ್ರತಿದಿನವೂ ತಲೆಗೆ ಬೂರಿ ಭೋಜನವ ಕೊಡುತ,
ಸ೦ತಸದಿ ಬರೆಯುತ್ತ ಸ೦ತಸವ ಕೊಡುತಿಹರು.. ಜಗದ ಮಿತ್ರ.
ಧನ್ಯವಾದಗಳು.
ಅದ್ಭುತವಾಗಿದೆ ನುಡಿನಮನಗಳು.
ReplyDeleteತುಂಬ ಚೆಂದವಿದೆ
ReplyDeleteಎಂದು ಹೇಳಿದೊಡೆ
ಮುಖಸ್ತುತಿ ಎಂದು
ಹೇಳುವವರುಂಟು
ಸುಮ್ಮನಿದ್ದರೆ ಮನವು
ಸುಮ್ಮನಿರುವುದಿಲ್ಲ
ಏನು ಮಾಡಲಿ ಹೇಳಿ ಜಗದಮಿತ್ರ?
ಅತ್ಯ೦ತ ಸರಳವಾಗಿ ಸು೦ದರವಾಗಿ ಬ೦ದಿದೆ ನುದಿನಮನ.ಈ ರೀತಿ ಸರಳ ಸು೦ದರವಾಗಿ ಬರೆಯುವುದೂ ಒ೦ದು ಕಲೆ.ಸರಸ್ವತಿಯ ಸ೦ಪೂರ್ಣ ಕೃಪೆ ನಿಮಗಾಗಿದೆ.ಅಭಿನ೦ದನೆಗಳು.
ReplyDeleteಸಾಹಿತಿಗೆ-ಕಬ್ಬಿಗನಿಗೆ ಕಾವ್ಯವೇ ಆಭರಣ-ಅಲಂಕಾರ, ಅದರ ಆಡುಂಬೊಲದಲ್ಲಿ ಆತ ತನ್ನನ್ನೇ ತಾನು ಕಳೆದುಕೊಳ್ಳುತ್ತಾನೆ; ನಿತ್ಯ ತೃಪ್ತನಾಗಿರುತ್ತಾನೆ. ಇದುವರೆಗೆ ಓದಿದವರಿಗೂ ಹಾಗೂ ಕಾವ್ಯಾತ್ಮಕವಾಗಿ ಪ್ರತಿಕ್ರಿಯಿಸಿದ ಮನಮುಕ್ತಾ, ಸೀತಾರಾಮ್ , ಶ್ರೀಧರ್ ಮತ್ತು ಕು.ಸು.ಮುಳಿಯ ಎಲ್ಲರಿಗೂ ವಂದನೆಗಳು, ನಿಮ್ಮ ಅಭಿಮಾನ ಕನ್ನಡ ಕವಿಜನಸಂದಣಿಗೆ ಸಂದ ಸಮ್ಮಾನ, ಮುಂದೆ ಓಡಲಿರುವ ಎಲ್ಲಾ ಬ್ಲಾಗಿಗರಿಗೆ-ಸ್ನೇಹಿತರಿಗೆ ಧನ್ಯವಾದಗಳು.
ReplyDeleteBalusogasu Jaganmitra mama sakha !!
ReplyDeleteಶ್ರೀಕಾಂತರೇ, ಇಂತಹ ಕಾವ್ಯಗಳನ್ನು ಓದಿ ಆನಂದಿಸುವ ತಮಗೆ ಧನ್ಯವಾದಗಳು
ReplyDeleteಚೆನ್ನಾಗಿದೆ..
ReplyDeleteಓದಿ ಖುಷಿಯಾಗುತ್ತದೆ..
ಧನ್ಯವಾದ ಪ್ರಕಾಶ್ ತಮಗೆ-ಓದಿ ಸುಖಿಸಿದ್ದಕ್ಕೆ, ಈ ಪುಟ್ಟ ಕವಿಯ ಭಾಗ್ಯ ಎನಲೇ ?
ReplyDeleteಎಲ್ಲಾ ಕುಸುಮಾಗ್ರಜರ ಬಗ್ಗೆ ಜಗದಮಿತ್ರ ನಾಗಿ ಕವನ ಬರೆದು ನೀವು ಎಲ್ಲರಿಗೂ ಸನಿಹಮಿತ್ರರಾಗುತ್ತಿದ್ದೀರಿ. ಚೆನ್ನಾಗಿದೆ
ReplyDeleteನಿಮ್ಮ ಬರಹಗಳೆಲ್ಲ ತುಂಬಾ ಚೆನ್ನಾಗಿವೆ.....
ReplyDeleteThanks to Subrahmanya Bhat & also to Chetana Bhat
ReplyDelete