ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, February 13, 2010

ಪ್ರೀತಿ ಶಾಶ್ವತ

[ಚಿತ್ರ ಕೃಪೆ : ಅಂತರ್ಜಾಲ ]


ಪ್ರೀತಿ ಶಾಶ್ವತ

ನಾನು ಅವಳು ಕಂಡೆವು
ಕಣ್ಣಿನಲ್ಲೇ ಕೊಂಡೆವು
ನೆನಪಿನಲ್ಲೇ ಉಳಿದೆವು ಬಹಳಕಾಲವೂ

ಕಾಲ ಕೆಳೆದು ಹೋಯಿತು
ಶುಭ ಘಳಿಗೆಯು ಬಂದಿತು
ಮತ್ತೆ ಭೇಟಿಯಾದೆವೂ-ಆಗುತ್ತಿದ್ದೆವೂ

ಪಾರ್ಕಿನಲ್ಲಿ ಸುಮ್ಮನೇ
ತಬ್ಬಿಕೊಂಡು ಭಿಮ್ಮನೆ
ಪ್ರೀತಿಯಲ್ಲಿ ಕಳೆದೆವೂ ಬಹಳ ದಿನಗಳೂ

ಅಪ್ಪ ಕಣ್ಣು ಬಿಟ್ಟರು
ಅಮ್ಮ ಮುದುಡಿ ಅತ್ತರು
ಯಾರು ಜೀವ ತೆತ್ತರೂ ಬಿಡಿಸದಾ ಋಣ !

ಮಾವ ಬೀಸಿ ಅಸ್ತ್ರವ
ಅಗಲಿಸಲಿಕೆ ಶಸ್ತ್ರವ
ಏರಿ ಮೇಲೆ ಹಾರಲೂ ಬಗ್ಗದಾ ಕ್ಷಣ!

ಏನಿದಂತ ಪ್ರೀತಿಯು
ಇದಕೆ ಯಾವ ರೀತಿಯು
ಕೇಳಲಿಲ್ಲ ನಮ್ಮಯಾ ಮಧುರ ಮನಗಳು!

ಮಂಜಹನಿಯು ಮರಕತ
ಮುಂಜಾವಲಿ ನೆನೆಯುತ
ಗುಂಜಿಸಿದ ದಿನಗಳಾ ನೆನಪು ಶಾಶ್ವತ

ನಿಮ್ಮ ಜೊತೆಯಿಲಿದ್ದರೆ
ಮರೆವುದೆಲ್ಲ ತೊಂದರೆ
ಎಂದುಕೊಂಡು ಸವಿದೆವು ವರುಷವರುಷವೂ

ನಾವು ಈಗ ಇಬ್ಬರು
ನಮಗೆ ಕೀರ್ತಿಗೊಬ್ಬರು
ಬಂದಮೇಲೆ ಆಯಿತೂ ಪ್ರೀತಿ ಶಾಶ್ವತ

2 comments:

  1. ವಾವ್,
    ಚೆಂದಿದೆ ನಿಮ್ಕವನ :)
    -ಸವಿತ

    ReplyDelete
  2. ಸವಿತಾ ಅವರೇ ಏನೋ ದೇವರು ಕೊಟ್ಟ ಸಮಯದಲ್ಲಿ ನನ್ನ ವನವನ್ನು ಸ್ವಲ್ಪ ಒಪ್ಪ ಓರಣವಾಗಿಡಲು ಪ್ರಯತ್ನಿಸುತ್ತಿದ್ದೇನೆ, ತಮಗೆ ಧನ್ಯವಾದಗಳು

    ReplyDelete