ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, February 14, 2010

ಚುಟುಕಗಳು

ಹಿರಿಯ ಕವಿ ದಿ|| ಶ್ರೀ ಡಿ.ವಿ.ಗುಂಡಪ್ಪನವರನ್ನು ನೆನೆಯುತ್ತ ಅವರ ಹಾದಿಯಲ್ಲಿ ಪ್ರಯತ್ನಿಸಿದ ಚುಟುಕಗಳು. ಶ್ರೀಯುತರ ಬಗೆಗೆ ತಾವು 'ಕವಿನೆನೆಪುಗಳು' ಮಾಲಿಕೆಯಲ್ಲಿ ಮುಂದೆ ಓದಲಿದ್ದೀರಿ.

ಚುಟುಕಗಳು

ಬದುಕುವ ಮೂರ್ಕಾಲ ಹಬ್ಬಿರಲಿ ಸ್ನೇಹದಲಿ
ಕೆದಕುತ್ತ ಕಳೆಯೋಣ ಎಲ್ಲ ಸಿಹಿನೆನಪು
ಅದುಬೇಡ ಇದುಬೇಡ ಎನ್ನುವುದದೇ ಬೇಡ
ಕದವ ತಟ್ಟುತ ತೆರೆಯೋ| ಜಗದಮಿತ್ರ


ರವಿಚಂದ್ರಬುಧ ಗುರುವು ರಾಹು ಕೇತುಗಳೆಲ್ಲ
ಭುವಿಯ ಕಬ್ಬದಿ ನಿನಗೆ ದಾರಿದೀಪಗಳು
ಕವಿವ ಕತ್ತಲೆಯ ಕಾರ್ಮೋಡಗಳ ಸರಿಸುತ್ತ
ಭವದ ಸಂಕಷ್ಟ ಮರೆ | ಜಗದಮಿತ್ರ


3 comments:

  1. ವಾಹ್..! ನಮೋನ್ನಮಃ ನಿಮಗೆ. ಸೊಗಸಾಗಿದೆ..ಅರ್ಥಪೂರ್ಣವಾಗಿವೆ. ಇನ್ನಷ್ಟು ಬರಲಿ

    ReplyDelete
  2. ಭಟ್ ಸರ್,
    ತುಂಬಾ ತುಂಬಾ ಚೆನ್ನಾಗಿದೆ.......

    ReplyDelete
  3. ಸುಬ್ರಹ್ಮಣ್ಯರು ನಮಿಸಿ ಜವಾಬ್ದಾರಿ ಹೆಚ್ಚಿಸಿದ್ದಾರೆ, ನಿಮ್ಮ ನಮನವನ್ನು ನಾರಾಯಣಸರಣೆಯೊಂದಿಗೆ ಅಲ್ಲಿಗೇ ತಲ್ಪಿಸಿದ್ದೇನೆ, ದಿನಕರ ಅವರಿಗೂ ಧನ್ಯವಾದ. ಇಂದಿನ ಬಿಕನಿ ತೊಟ್ಟ ನವ್ಯ-ಕಾವ್ಯಗಳ ಮಧ್ಯೆ ಇವೆಲ್ಲ ಹಲವ್ರಿಗೆ ರುಚಿಸುವುದಿಲ್ಲ; ಅರ್ಥವೂ ಆಗುವುದಿಲ್ಲ, ಬಹುಶಃ ನಮ್ಮ ನಿಮ್ಮಂಥ ಸಮಾನ ಮನಸ್ಕರಿಗೆ ಅರ್ಥವಾಗಿರುತ್ತದೆ, ಕೆಲವ್ರು ಅರ್ಥವಾದರೂ ಪ್ರತಿಕ್ರಿಯಿಸುವುದಿಲ್ಲ, ಇನ್ನು ಕೆಲವರಲ್ಲಿ ಪ್ರತಿಕ್ರಿಯಿಸಿಯೇ ಅಭ್ಯಾಸವಿರುವುದಿಲ್ಲ, ಒಟ್ಟಾರೆ ನಮ್ಮ ಜನರಿಗೆ ಇವತ್ತೂ ಒಳ್ಳೊಳ್ಳೆಯ ರೀತಿಯಲ್ಲಿ ಬರೆಯಬಹುದು ಎಂಬುದನ್ನು ಎಲ್ಲಾರೀತಿಯ ಸಾಹಿತ್ಯಿಕ ಕೃತಿಗಳಿಂದ ಉದಾಹರಣಾರ್ಥವಾಗಿ ತೋರಿಸಲು ಪ್ರಯತ್ನಿಸಿದ್ದೇನೆ, ನನ್ನೊಡನೆ ನೀವೆಲ್ಲ ಬರುವಿರಲ್ಲವೇ?

    ReplyDelete