ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, June 2, 2013

ಸಾಫ್ಟ್ ವೇರ್ ಬೆಳದಿಂಗಳಮನೆಗೆ ಬಿಸಿಲು ಪ್ರವೇಶಿಸುತ್ತಿದೆ!

 
ಚಿತ್ರಋಣ : ಅಂತರ್ಜಾಲ 
ಸಾಫ್ಟ್ ವೇರ್ ಬೆಳದಿಂಗಳಮನೆಗೆ ಬಿಸಿಲು ಪ್ರವೇಶಿಸುತ್ತಿದೆ!
                                                      
ಏರುಜವ್ವನೆಯಲ್ಲಿ ಆದ ದಿಡೀರ್ ಬದಲಾವಣೆಯಂತೇ ತೊಂಬತ್ತರ ದಶಕದಲ್ಲಿ ಇಡೀ ಜಗತ್ತಿಗೇ ಸರಕ್ಕನೆ ಚುರುಕುಮುಟ್ಟಿಸಿದ್ದು ಗಣಕಯಂತ್ರರಂಗ. ತಂತ್ರಜ್ಞಾನದಲ್ಲಿ ಪ್ರತಿದಿನ ನಡೆಯುತ್ತಿದ್ದ ಪರಿಶೀಲನೆ ಮತ್ತು ಪರಿಶೋಧನೆಗಳಿಂದ ನವನವೀನ ಮಾದರಿಯ ಹಾರ್ಡ್ ವೇರ್ ಗ್ಯಾಜೆಟ್ ಗಳೂ ಮತ್ತು ಅವುಗಳನ್ನು ಬಳಸಿಕೊಳ್ಳಲು ವಿವಿಧ ತೆರನಾದ ತಂತ್ರಾಂಶಗಳೂ ಸಿದ್ಧಗೊಳ್ಳುತ್ತಲೇ ನಡೆದವು. ಜನಸಾಮಾನ್ಯರಿಗೆ ಈ ಬೆಳವಣಿಗೆ ತೀರಾ ಅತಿರೇಕ ಎಂಬಷ್ಟು ವೇಗೋತ್ಕರ್ಷ ಪಡೆದುಕೊಂಡು, ನಿನ್ನೆ ಇದ್ದದ್ದು ಇಂದಿಲ್ಲ, ಇಂದಿದ್ದು ನಾಳೆ ಇಲ್ಲ ಎಂಬ ಮಟ್ಟಕ್ಕೆ ವ್ಯತ್ಯಾಸಗಳು ಜರುಗುತ್ತಿದ್ದವು. ಜಗತ್ತು ಹೊಸತನ್ನು ಸ್ವಾಗತಿಸಿತು, ಆದರೆ ಭಾರತದಂತಹ ಮಧ್ಯಮವರ್ಗ ಜಾಸ್ತಿ ಇರುವ ದೇಶಗಳಲ್ಲಿ, ಬದಲಾವಣೆಗೆ ಒಗ್ಗಿಕೊಳ್ಳುವ ಹಂತದಲ್ಲಿ, ಆ ದಿಸೆಯಲ್ಲಿ ತೆರಬೇಕಾದ ಹಣವನ್ನು ನೆನೆಸಿಕೊಂಡು ಅಲ್ಲಲ್ಲಿ ಕೆಲವರು ಕೆಮ್ಮಿದರೆ, ತಾವು ಜೀವಮಾನದಲ್ಲೇ ಎಣಿಸಿರದ ಐದಂಕಿಯ ಸಂಬಳವನ್ನು ತಮ್ಮ ಮಕ್ಕಳು 25ನೇ ವಯಸ್ಸಿನಲ್ಲೇ ಪಡೆದುಕೊಳ್ಳುತ್ತಿರುವುದನ್ನು ಕಂಡು ಹಲವರು ಹೆಮ್ಮೆಪಟ್ಟುಕೊಂಡರು. ತಂತ್ರಾಂಶ ತಯಾರಿಕೆಯಲ್ಲಿ ಇಡೀ ಜಗತ್ತಿಗೇ ಭಾರತ ಗುರುವೆನಿಸಿತು, ಅಗ್ರಮಾನ್ಯವೆನಿಸಿತು. ಪಿ.ಯೂ.ಸಿ ಮುಗಿಸಿದ ಮಕ್ಕಳನ್ನು ಹೇಗಾದರೂ ಮಾಡಿ ಕಂಪ್ಯೂಟರ್ ಸೈನ್ಸ್ ಓದಿಸಿಬಿಟ್ಟರೆ ಒಳ್ಳೆಯ ಆದಾಯದಿಂದ ಉತ್ತಮ ಜೀವನ ನಡೆಸಬಹುದು ಎಂಬ ಧೋರಣೆ ಜನಮಾನಸದಲ್ಲಿ ನಿಂತು, ಯಾರನ್ನೇ ಕೇಳಿದರೂ "ಕಂಪ್ಯೂಟರ್ ಸೈನ್ಸ್" ಎನ್ನುತ್ತಿದ್ದರು!

ನೂತನ ತಂತ್ರಜ್ಞಾನಗಳ ಆವಿಷ್ಕಾರದಿಂದ ಮತ್ತು ಅಳವಡಿಕೆಯಿಂದ ಪ್ರತಿಯೊಂದು ರಂಗವೂ ಹೊಸ ಮಾರ್ಪಾಡುಗಳನ್ನು ಕಂಡಿತು. ಭಾರತದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಕೆಲವು ಸಾಫ್ಟ್ ವೇರ್ ಕಂಪನಿಗಳು ಹುಟ್ಟಿ, ಬಹುಬೇಗ ಅಂಬೆಹರೆದು, ಎದ್ದುನಿಂತು ಅಮೆರಿಕಾದಂತಹ ರಾಷ್ಟ್ರಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು, ತಂತ್ರಾಂಶ ತಯಾರಿಸಿಕೊಡುವ ಹಂತಕ್ಕೆ ಉದ್ಯಮ ಬೆಳೆದುನಿಂತಿತು! ಸಾಫ್ಟ್ ವೇರ್ ಎಂದರೇನೆಂಬುದನ್ನು ಅರ್ಥವಿಸಿಕೊಳ್ಳಲಾಗದೇ ಅದೊಂದು ಪ್ರಾಡಕ್ಟ್ ಕೂಡ ಆಗಬಲ್ಲದು ಎಂಬುದನ್ನು ಒಪ್ಪಿಕೊಳ್ಳದ ಬ್ಯಾಂಕಿಂಗ್ ಸಿಬ್ಬಂದಿ, ಚಿಗುರುತ್ತಿದ್ದ ಹೊಸ ಸಾಫ್ಟ್ ವೇರ್ ಕಂಪನಿಗಳಿಗೆ ಸಾಲನೀಡಲು ಹಿಂಜರಿಯುತ್ತಿದ್ದವರು, 3-4ವರ್ಷಗಳಲ್ಲಿ ಆ ಕುರಿತು ಹಲವು ಕಮ್ಮಟಗಳಲ್ಲಿ ಭಾಗವಹಿಸಿ, ಬ್ಯಾಂಕಿಂಗ್ ಕ್ಷೇತ್ರಕ್ಕೇ ಸಾಫ್ಟ್ ವೇರ್ ಬಳಸಿಕೊಂಡು ಹೇರಳ ಸಾಲ ಸೌಲತ್ತನ್ನು ಧಾರಾಳವಾಗಿ ನೀಡಿದರು. ಸಿವಿಲ್, ಮೆಕಾನಿಕಲ್, ಇಲೆಕ್ಟ್ರಿಕಲ್, ಬ್ಯಾಂಕಿಂಗ್, ಮ್ಯಾನ್ಯುಫ್ಯಾಕ್ಚರಿಂಗ್, ಟ್ರೈನಿಂಗ್, ಡಿಸೈನಿಂಗ್ ಹೀಗೇ ಯಾವುದೇ ಕ್ಷೇತ್ರಗಳನ್ನು ತೆಗೆದುಕೊಂಡರೂ ಆ ಎಲ್ಲಾ ರಂಗಗಳಲ್ಲೂ ಕಂಪ್ಯೂಟರ್ ಅಳವಡಿಕೆ ಪ್ರಾಶಸ್ತ್ಯ ಪಡೆದುಕೊಂಡು, ಜಡ್ಡುಹಿಡಿದಿದ್ದ ಹಳೆಯ ಜಾಯಮಾನಕ್ಕೆ ಸಡ್ಡುಹೊಡೆದು ಪ್ರತಿಯೊಂದು ರಂಗವೂ ಮೈಕೊಡವಿ ನಿಂತಿತು. ಬೆಂಗಳೂರಿನಂಥಾ ನಗರಗಳಲ್ಲಿ ಎಲ್ಲಿ ನೋಡಿದರೂ ಸಾಫ್ಟ್ ವೇರ್ ಕಂಪನಿಗಳ ಬಸ್ಸುಗಳು ಓಡಾಡುವುದು ಕಂಡಿತು. ನವನವೀನ ವಿನ್ಯಾಸಗಳ, ಅಂಬರ ಚುಂಬಿತ ಕಟ್ಟಡಗಳು ಎದ್ದುನಿಂತವು.   

ಸಾಫ್ಟ್ ವೇರ್ ರಫ್ತು ವ್ಯವಹಾರದಿಂದ ದೇಶಕ್ಕೂ ರಾಜ್ಯಕ್ಕೂ ಆದಾಯ ಹೆಚ್ಚಿತು.  ಅಂತೂ ಜಗತ್ತು ಶತಶತಮಾನಗಳಲ್ಲಿ ಕಂಡರಿಯದ ಭವ್ಯ ಬದಲಾವಣೆ ಕೇವಲ ದಶಕವೊಂದರಲ್ಲೇ ಘಟಿಸಿಬಿಟ್ಟಿತು! ಬೆಳೆದ ತಂತ್ರಜ್ಞಾನಕ್ಕೆ ತಕ್ಕಂತೇ, ಸಾಫ್ಟ್ ವೇರ್ ಕಂಪನಿಗಳಲ್ಲಿ ಕೆಲಸ ಹುಡುಕುತ್ತಾ ಎಂಜಿನೀಯರಿಗಳು ಮತ್ತು ಅವರೆಲ್ಲರ ಕೆಲಸಕ್ಕೆ ಪೂರಕ ಸಹಾಯಕರಾಗಿ ಇನ್ನಿತರ ಕೆಲಸಗಳನ್ನು ನಡೆಸಿಕೊಡುವ ಸಿಬ್ಬಂದಿಗಳು, ದೇಶದ ಹಲವೆಡೆಗಳಿಂದ ಬೆಂಗಳೂರಿನತ್ತ ಮುಖಮಾಡಿದರು. ಅಷ್ಟೇ ಏಕೆ, ವಿದೇಶೀ ಯುವಜನತೆ ಕೆಲಸ ಹುಡುಕುತ್ತ ಭಾರತಕ್ಕೆ-ಬೆಂಗಳೂರಿಗೆ ಬಂದಿತು. ಅಹೋರಾತ್ರಿ ಕೆಲಸಗಳು ನಡೆಯಹತ್ತಿದವು. ಕೆಲಸದ ಹೊರೆಯನ್ನು ಬಿಟ್ಟರೆ ಸಿಗುವ ಅಧಿಕ ಸಂಬಳವನ್ನು ನೆನೆದೇ ಖುಷಿಗೊಳ್ಳುತ್ತಿದ್ದ  ಎಂಜಿನೀಯರುಗಳು ಸ್ವಂತಕ್ಕೆ ಕಾರು-ಬಂಗಲೆ ಇತ್ಯಾದಿ ವ್ಯವಸ್ಥೆಗಳನ್ನು ಖರೀದಿಸಲು ಮನಮಾಡಿದರು. ಅಗತ್ಯಕ್ಕೆ ತಕ್ಕಂತೇ ಅಥವಾ ತುಸು ಅಧಿಕವಾಗಿಯೇ ಕ್ರೆಡಿಟ್ ಕಾರ್ಡುಗಳೂ, ಎ.ಟಿ.ಎಂ ಸೌಲಭ್ಯಗಳೂ ಸಹ ಆವಿರ್ಭವಿಸಿದವು. "ವಾರ ಪೂರ್ತಿ ದುಡಿಯುತ್ತೇವೆ, ವಾರಾಂತ್ಯದಲ್ಲಿ ಮೋಜು-ಮಜಾ ಇರಲಿ" ಎಂಬ ಅಮೆರಿಕನ್ ಸ್ಟೈಲ್ ಬೆಂಗಳೂರಿನಲ್ಲೂ ಕಂಡುಬಂತು; ದುಂದುಗಾರಿಕೆ ವಿಪರೀತವಾಯ್ತು.

ಸಾಫ್ಟ್ ವೇರ್ ಜನರೆಂದರೆ ಬೇರೇ ಯಾವುದೋ ಪ್ಲಾನೆಟ್ ನಿಂದ ಕೆಳಗಿಳಿದವರು ಎಂಬ ರೀತಿಯಲ್ಲಿ ಎಂಜಿನೀಯರುಗಳು ನಡೆದುಕೊಳ್ಳುತ್ತಿದ್ದರು; ಜನಸಾಮಾನ್ಯರೊಟ್ಟಿಗೆ ಎಂದೂ ಯಾವ ಸಭೆ-ಸಮಾರಂಭಗಳಲ್ಲೂ ಬೆರೆಯುತ್ತಿರಲಿಲ್ಲ. ಸ್ವತಃ ಅದೇ ವೃತ್ತಿಯಲ್ಲಿ ಇದ್ದರೂ ಇಂಥಾ ದರ್ಪ-ದುರಹಂಕಾರವನ್ನು ದೂರದಿಂದ ನೋಡುತ್ತಲೇ ಇದ್ದವನು ನಾನು. ಐಶಾರಾಮೀ ಉತ್ಪನ್ನಗಳನ್ನು ಖರೀದಿಸುತ್ತಿದ್ದ ಆ ಜನರಲ್ಲಿ ಇಲ್ಲದ್ದೇ ಇಲ್ಲ! ತರಾವರಿ ಬಟ್ಟೆಗಳು, ಫಾರಿನ್ ಸೆಂಟುಗಳು, ದುಬಾರಿ ಬೆಲೆಯ ಕ್ಯಾಮೆರಾಗಳು-ಸೆಲ್ ಫೋನ್ ಗಳು ಹೀಗೇ ಕೊಳ್ಳುಬಾಕತನ ಕೂಡ ಹೆಚ್ಚುತ್ತಲೇ ಇತ್ತು. ಕೆಲವರ ಅಕೌಂಟಿನಲ್ಲಿ ಸಾಲದ ಲೆಕ್ಕ ಹೆಚ್ಚುತ್ತಲೇ ಇದ್ದರೂ ಹೊರಜಗತ್ತಿಗೆ ಅವರು ಶ್ರೀಮಂತರಾಗೇ ಕಾಣುತ್ತಿದ್ದರು. ರಸ್ತೆಬದಿಯಲ್ಲಿ ಎಳನೀರು ಮಾರುತ್ತಿದ್ದ ವ್ಯಕ್ತಿಗೆ ನೂರರ ನೋಟುಕೊಟ್ಟು, ಎರಡು ಎಳನೀರನ್ನು ಆತ ಕಾರಿಗೆ ಏರಿಸಿಕೊಟ್ಟಮೇಲೆ, ಚಿಲ್ಲರೆ  ಕೇಳದೇ ಸರ್ರನೆ ಗ್ಲಾಸು ಏರಿಸಿಕೊಂಡು ಬುರ್ರನೆ ಹೊರಟು ಮಾಯವಾಗುವ ಮಂದಿ ಅಕ್ಷರಶಃ ಶೋಕಿಲಾಲಾಗಳು ಎಂದರೆ ತಪ್ಪಾಗಲಿಕ್ಕಿಲ್ಲ. ಹಣ್ಣು-ತರಕಾರಿ ಅಂಗಡಿಗಳವರು ಮಿಕ್ಕಿದ ಗಿರಾಕಿಗಳನ್ನು ಅಲಕ್ಷ್ಯಿಸಿ, ಸಾಫ್ಟ್ ವೇರ್ ಎಂಜಿನೀಯರುಗಳನ್ನು ಅತಿ ದೂರದಿಂದಲೇ ಗುರುತಿಸಿ, ಅವರ ಕಾರು ಬಂದು ನಿಲ್ಲುತ್ತದೆ ಎನ್ನುವಾಗಲೇ ಸೆಲ್ಯೂಟ್ ಹೊಡೆದು ಸ್ವಾಗತಿಸುತ್ತಿದ್ದರು! ವ್ಯಾಪಾರಿಗಳಿಗೆ ಅಂಥಾ ಎಂಜಿನೀಯರುಗಳು ದೇವಮಾನವರಂತೇ ಕಾಣುತ್ತಿದ್ದರೋ ಏನೋ.   

’ಏ’ ಸೈಡ್ ಮುಗಿಯಿತು, ಈಗ ’ಬಿ’ ಸೈಡ್ ನೋಡೋಣ: ಯಾವ ರಂಗ ಅತೀಶೀಘ್ರವಾಗಿ ಉತ್ತುಂಗ್ಗಕ್ಕೆ ಏರುತ್ತದೋ ಆ ರಂಗ ಅಷ್ಟೇ ಶೀಘ್ರವಾಗಿ ದೊಪ್ಪೆಂದು ನೆಲಕ್ಕೆ ಕುಸಿಯುತ್ತದೆ ಎಂಬುದು ಕೆಲವು ಅನುಭವಿಕರ ಮಾತು; ’ಅನುಭವ ಇರುವಲ್ಲಿ ಅಮೃತತ್ವ ಇದೆ’ ಎಂಬ ನಾಣ್ನುಡಿಯನ್ನು ಎಲ್ಲೋ ನೋಡಿದ ನೆನಪು, ಆದಕಾರಣ ಅನುಭವಿಗಳ, ಅನುಭಾವಿಗಳ ಅನುಭವಕ್ಕೆ ನಾವು ತಲೆಬಾಗಲೇ ಬೇಕು. ಭಾರತಕ್ಕೆ ಅದರಲ್ಲೂ ಕರ್ನಾಟಕಕ್ಕೆ ’ಸಾಫ್ಟ್ ವೇರ್ ಕಿಚನ್ ಅಫ್ ದಿ ವರ್ಲ್ಡ್’ಎಂಬ ಕಿರೀಟವನ್ನು ತಂದುಕೊಟ್ಟ ಸಾಫ್ಟ್ ವೇರ್  ಕಂಪನಿಗಳ ಭವಿಷ್ಯ ಡೋಲಾಯಮಾನವಾಗಿದೆ. ಇದಕ್ಕೆ ಕಾರಣಗಳು ಪ್ರಮುಖವಾಗಿ ಎರಡು: ಮೊದಲನೆಯದು, ಜಾಗತಿಕ ಮಟ್ಟದಲ್ಲಿ ಸಾಫ್ಟ್ ವೇರ್ ಪ್ರಾಜೆಕ್ಟುಗಳು ಮಾಡುವುದಕ್ಕೆ ಉಳಿದಿರುವುದು ಕಮ್ಮಿ. ಎರಡನೆಯದು, ತಂತ್ರಾಂಶ ತಯಾರಿಕಾ ಸಂಸ್ಥೆಗಳ ನಡುವಣ ಪೈಪೋಟಿ ತೀರಾ ಹೆಚ್ಚಿದೆ. ಡಿಮಾಂಡ್ ವರ್ಸಸ್ ಸಪ್ಲೈ ನಲ್ಲಿ ಸಪ್ಲೈ ಜಾಸ್ತಿಯಾದಾಗ ಡಿಮಾಂಡ್ ಕಮ್ಮಿಯಾಗುತ್ತದೆ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯ. ಈಗ ಡಿಮಾಂಡ್ ಕಮ್ಮಿಯಾಗಿದೆ, ಸಪ್ಲೈ ಹೇಗಿದೆ ಎಂದರೆ ಇನ್ನೆರಡು ವರ್ಷಗಳು ಸಂದರೆ ಸಾಫ್ಟ್ ವೇರುಗಳನ್ನು ತಳ್ಳುಗಾಡಿಯಲ್ಲಿ ಇಟ್ಟುಕೊಂಡು ಮಾರಬೇಕಾದ ಸ್ಥಿತಿ ಇದೆ!! 

ಜಾಗತಿಕ ಮಾರುಕಟ್ಟೆಯಲ್ಲಿ ಏನಾಗುತ್ತಿದೆ ಎಂಬ ಕುತೂಹಲವಿಲ್ಲದ ಜನ ಇನ್ನೂ ಮಕ್ಕಳನ್ನು ಸಾಫ್ಟ್ ವೇರ್ ಎಂಜಿನೀಯರುಗಳನ್ನಾಗಿ ಮಾಡುತ್ತಲೇ ಇದ್ದಾರೆ; ಸಾಫ್ಟ್ ವೇರ್ ಎಂಬುದು ನೋಟು ಮುದ್ರಿಸುವ ಯಂತ್ರ ಇದ್ದಹಾಗೇ ಎಂಬ ಲೆಕ್ಕಾಚಾರದಲ್ಲೇ ಅವರಿದ್ದರೆ, ತಮ್ಮ ’ರಂಗದ ಹಿರಿಯಣ್ಣ’ಗಳು ದಶಕದಿಂದ ಅನುಭವಿಸುತ್ತಿದ್ದ ಸೌಲತ್ತು, ಸೌಲಭ್ಯ ಮತ್ತು ಹಣದಮೇಲೆ ಕಣ್ಣಿಟ್ಟು, ಅಂಥದ್ದನ್ನೇ ಪಡೆಯುವ ಕನಸು ಕಾಣುತ್ತಿರುವ ಎಳೆವಯಸ್ಸಿಗರನ್ನು ಕಂಡರೆ ಒಳಗೊಳಗೇ ಖೇದವಾಗುತ್ತದೆ! ಅಳಿಯನಾಗುವವ ಸಾಫ್ಟ್ ವೇರ್ ಎಂಜಿನೀಯರಾಗಿರಬೇಕೆಂಬ ಆಸೆ ವಧುಗಳ ಪಾಲಕರಿಗಿದ್ದರೆ, ಗಂಡನಾಗುವವ ಸಾಫ್ಟ್ ವೇರ್ ಎಂಜಿನೀಯರ್ ಆಗಿರದಿದ್ದರೆ ಬದುಕೇ ಬರಡು ಎಂಬಂಥಾ ಮನೋಗತ ವಧುಗಳದಾಗಿದೆ! ಆದರೆ ಸಾಫ್ಟ್ ವೇರ್ ಕಂಪನಿಗಳಿಗೆ ಜಾಗತಿಕ ಹಿನ್ನಡೆಯ ಬಿಸಿ ಆಗಲೇ ತಟ್ಟಿದೆ. ಅದರ ಪರಿಣಾಮವಾಗಿ, ಅಧಿಕ ಸಂಬಳ ತೆಗೆದುಕೊಳ್ಳುವ ನುರಿತ ಹಿರಿಯ ಎಂಜಿನೀಯರುಗಳನ್ನು ಉಪಾಯವಾಗಿ ಮನೆಗೆ ಕಳಿಸುತ್ತಿದ್ದಾರೆ, ಅವರ ಜಾಗಕ್ಕೆ ಅವರ ಕೆಳದರ್ಜೆಯವರನ್ನು ಕೂರಿಸಿ, ಖಾಲಿ ಬೀಳುವ ಜಾಗಕ್ಕೆ ಹೊರಗಿನಿಂದ ಹೊಸಬರನ್ನು ’ಸದ್ಯಕ್ಕೆ ತರಬೇತಿ’ ಎಂಬ ಕಾರಣವೊಡ್ಡಿ ಬಿಟ್ಟಿಯಾಗಿಯೋ ಅಥವಾ ಕಮ್ಮಿ ಸಂಬಳಕ್ಕೋ ಭರ್ತಿಮಾಡಿಕೊಳ್ಳುತ್ತಿದ್ದಾರೆ-ಆದರೆ ಅಪಾಯಿಂಟ್ ಮೆಂಟ್ ಆರ್ಡರ್ ಇರುವುದಿಲ್ಲ! ’ಅಪಾಯಿಂಟ್ ಮೆಂಟ್ ಆರ್ಡರ್’ ಸಿಗದ ದೊಡ್ಡ ಕಂಪನಿಗಳ ಕೆಲಸ ಯಾವತ್ತಾದರೊಂದು ದಿನ ಹೊರದಬ್ಬುವ ಅಪಾಯದಿಂದ ತಪ್ಪಿದ್ದಲ್ಲ ಎಂಬುದು ಎಷ್ಟೋ ನವ ಎಂಜಿನೀಯರುಗಳಿಗೆ ಗೊತ್ತಿಲ್ಲ.  

2001ರಲ್ಲಿ ಒಮ್ಮೆ ಅತೀವ ಹಿನ್ನಡೆಯಾಗಿತ್ತು ಆದಕ್ಕೆ ಹೊಸ ಪ್ರಾಜೆಕ್ಟ್ ಗಳಿಲ್ಲದ್ದು ಕಾರಣವಾಗಿರಲಿಲ್ಲ, 2008-09ರಲ್ಲಿ ಇನ್ನೊಮ್ಮೆ ಹಿನ್ನಡೆ ಜರುಗಿತು, ಅದೂ ಕೂಡ ಅಮೆರಿಕಾದ-ಜಗತ್ತಿನ ಆರ್ಥಿಕತೆಯ ಕುಸಿತದಿಂದ ಹೀಗಾಗಿದೆ ಎಂದು ಅಂದಾಜಿಸಲಾಯ್ತು. ಆಗೆಲ್ಲಾ ನಡೆದಿದ್ದು ಅಲ್ಪಪ್ರಮಾಣದ ಸಾಫ್ಟ್ ವೇರ್ ಪ್ರಳಯ, ಆದರೆ ಎದುರಾಗುತ್ತಿರುವುದು ಪೂರ್ಣಪ್ರಮಾಣದ ಪ್ರಳಯ; ಈ ಪ್ರಳಯದಲ್ಲಿ ಬಹುತೇಕ ಸಾಫ್ಟ್ ವೇರ್ ಕಂಪನಿಗಳು ಬಾಗಿಲು ಹಾಕುತ್ತವೆ ಎಂಬುದು ತಜ್ಞರ ಮುಂಧೋರಣೆ. ಆ ಸಂಭವನೀಯತೆಯನ್ನು ಎದುರಿಸಲು ನಮ್ಮ ಸಾಫ್ಟ್ ವೇರ್ ಎಂಜಿನೀಯರುಗಳು ಮಾನಸಿಕ ಸಿದ್ಧತೆ ನಡೆಸಿದ್ದಾರೆಯೇ? ಗೊತ್ತಿಲ್ಲ. ಯಾಕೆಂದರೆ ಅವರಿನ್ನೂ ’ಮಾನವ’ರಾಗುವುದರಲ್ಲೇ ಇದ್ದಾರೆ; ಆಗಿಲ್ಲ. ಸಾಫ್ಟ್ ವೇರ್ ರಂಗದಿಂದ ಆಚೆ ಬಂದರೆ ಜಗತ್ತಿನಲ್ಲಿ ಇನ್ನೇನು ಮಾಡಬಲ್ಲೆವೆಂಬುದೂ ಅವರಿಗೆ ತಿಳಿದಿಲ್ಲ. ತಮ್ಮ ರಂಗದ ಕೆಲವು ಜನರನ್ನು ಬಿಟ್ಟರೆ ಪರ್ಯಾಯ ಜೀವ-ಜಗತ್ತಿನ ಪರಿಚಯ ಅವರಿಗಿದ್ದಂತಿಲ್ಲ. ಕಂಪನಿಗಳನ್ನು ನಡೆಸುವವರು ಹೇಗೋ ಸುಧಾರಿಸಿಕೊಳ್ಳುತ್ತಾರೆ ಅದು ಬೇರೇ ಪ್ರಶ್ನೆ. ಆದರೆ ಎಂಜಿನೀಯರುಗಳು  ಎಲ್ಲಿಗೆ ಹೋಗುತ್ತಾರೆ? ಯಾವ ಕೆಲಸವನ್ನು ಮಾಡುತ್ತಾರೆ? ಕಡಿಮೆ ಸಂಬಳವನ್ನು ಒಪ್ಪಿಕೊಳ್ಳುತ್ತಾರೆಯೇ? ಕಡಿಮೆ ಸಂಬಳ ತೆಗೆದುಕೊಂಡರೆ ಅವರು ಅದಾಗಲೇ ಮಾಡಿಕೊಂಡ ಸಾಲ-ಬಡ್ಡಿ-ಚಕ್ರಬಡ್ಡಿಗಳನ್ನು ತೀರಿಸಲು ಸಾಧ್ಯವೇ? ಇದಕ್ಕೆಲ್ಲಾ ಚಿಂತಕ ಸಮಾಜ ಉತ್ತರ ಕಂಡುಕೊಳ್ಳಬೇಕಾಗಿದೆ; ಯಾಕೆಂದರೆ ಸಾಫ್ಟ್ ವೇರಿನವರಿಗೆ ಸದ್ಯ ನಾವ್ಯಾರೂ ಏನೂ ಅಲ್ಲದಿದ್ದರೂ ಅವರೆಲ್ಲಾ ನಮ್ಮ ಸಮಾಜದ ಭಾಗವೆಂಬ ಭಾವನೆ ನಮ್ಮಲ್ಲಿ ಇನ್ನೂ ಇದೆಯಲ್ಲಾ?   

ಇನ್ನು ದೇಶದ ಆರ್ಥಿಕತೆ ಇಂದು ಪ್ರಮುಖವಾಗಿ ಸಾಫ್ಟ್ ವೇರ್ ರಫ್ತು ವಹಿವಾಟುಗಳನ್ನೇ ಅವಲಂಬಿಸಿದೆ. ಸಾಫ್ಟ್ ವೇರ್ ಬಿಟ್ಟರೇನೇ ಮಿಕ್ಕುಳಿದ ರಂಗಗಳು ಎಂಬಷ್ಟು ಆದ್ಯತೆಯನ್ನು ನೀಡಲಾಗಿರುವುದರಿಂದ ಸಾಫ್ಟ್ ವೇರ್  ರಫ್ತು ವ್ಯವಹಾರ ಕ್ಷೀಣಿಸಿದಾಗ ಅಥವಾ ನಿಂತಾಗ ದೇಶದ ಆರ್ಥಿಕತೆಯ ಮೇಲೂ ಕೂಡ ಸಾಕಷ್ಟು ಋಣಾತ್ಮಕ ಪರಿಣಾಮ ಉಂಟಾಗುತ್ತದೆ. ಜಾಗತಿಕ ಮಟ್ಟದಲ್ಲಿ ಹೊಸ ಹೊಸ ತಂತ್ರಜ್ಞಾನಗಳು ಹುಟ್ಟಿದರೂ ಕೂಡ, ಮತ್ತೆ ಸಾಫ್ಟ್ ವೇರಿಗೆ ಮೊದಲಿನ ಡಿಮಾಂಡ್ ಬರುವುದಿಲ್ಲ. ಮ್ಯಾಂಟೆನನ್ಸ್ ಕೆಲಸಕ್ಕೆ ಸೀಮಿತ ಸಿಬ್ಬಂದಿ ಸಾಲುವುದರಿಂದ ಕಂಪನಿಗಳು ಮತ್ತೆ ಹೊಸತನವನ್ನು ಕಂಡುಕೊಳ್ಳುವ ಯಾವುದೇ ಸಾಧ್ಯತೆಗಳು ಕಾಣುತ್ತಿಲ್ಲ. ತಾಂತ್ರಿಕತೆ ಬೆಳವಣಿಗೆ ಹೆಚ್ಚಿ ಕೊನೆ ಮಟ್ಟವನ್ನು ತಲ್ಪಿದ್ದಾಗಿದೆ. 25ವರ್ಷಗಳ ಹಿಂದೆ ಸಿವಿಲ್ ಎಂಜಿನೀಯರಿಂಗ್ ಇದೇ ಅನಾಹುತವನ್ನು ಅನುಭವಿಸಿತ್ತು. ಅದು ಸಿವಿಲ್ ಆಗಿರುವುದರಿಂದ ಬದುಕಿನ ಅನಿವಾರ್ಯ ಭಾಗವಾಗಿ ಮತ್ತೆ ಹಾಗೇ ನಿಂತಿತು, ನಶಿಸಲಿಲ್ಲ. ಆದರೆ ಜೀವನದ ಅನಿವಾರ್ಯತೆಗಳ ಆದ್ಯತೆಯಲ್ಲಿ ಸಾಫ್ಟ್ ವೇರ್ ಸೇರುವುದಿಲ್ಲ, ಸಾಫ್ಟ್ ವೇರ್ ಇಲ್ಲದೆಯೂ ಜನತೆ ಬದುಕಬಲ್ಲದು ಅಲ್ಲವೇ?  ಈ ಎಲ್ಲಾ ದೃಷ್ಟಿಕೋನದಿಂದ, ’ಸಾಫ್ಟ್ ವೇರ್ ವಹಿವಾಟು ರಹಿತ ದೇಶ’ವನ್ನು ಕಲ್ಪಿಸಿಕೊಳ್ಳಲು ದೇಶದ ಆರ್ಥಿಕ ತಜ್ಞರು ತಯಾರಾಗುವ ಕಾಲ ಸನ್ನಿಹಿತವಾಗಿದೆ. ಬೆಳದಿಂಗಳ ಅರಮನೆಯಾಗಿದ್ದ ಸಾಫ್ಟ್ ವೇರ್ ರಂಗಕ್ಕೆ ಬಿಸಿಲು ಸೋಕಿದ ಪರಿ ಇದಾಗಿದೆ. 


45 comments:

  1. ಒಂದು ಕಾಲದಲ್ಲಿ (ಇವತ್ತೂ ಸಹ ಅಲ್ಲಲ್ಲಿ!!) ಜ್ಯೋತಿಷಿಗಳು ನಾಳೆ ಪ್ರಳಯ ಎಂದು ಭಯ ಹುಟ್ಟಿಸುತ್ತಿದ್ದರು , ಅದೇ ಮಾದರಿಯ ಲೇಖನ ಇದು !!
    ಮಾಡುವುದಕ್ಕೆ ಇನ್ನೇನು ಉಳಿದಿಲ್ಲ .. ! ಸ್ವಾಮಿ ಜಗತ್ತು ಹೇಗೆ ಸ್ಥಿರ ಅಲ್ಲವೋ , ಹಾಗೆ ಎಲ್ಲ ಉದ್ಯಮಗಳೂ ಪ್ರವಹಿಸುವ ಮಾಧ್ಯಮಗಳೇ !! ಬೇಸಿಗೆಯಲ್ಲಿ ನಾಡಿಯ ಹರಿವು ಕಡಿಮೆ ಆಗಬಹುದು, ಹಾಗಂತ ನದಿಯೇ ಇಲ್ಲ ಅದೊಂದು ಹಳ್ಳ ಎನ್ನಲಾಗುವುದೇ? ಹಾಗೆ ಅದನ್ನು "under estimate" ಮಾಡಿದರೆ ಮಳೆಗಲದ್ದಲ್ಲಿ ಅದರ ರಭಸಕ್ಕೆ ಕೊಚ್ಚಿ ಹೋಗಬೇಕಾಗುವುದು !!
    ಮಾಡುವುದಕ್ಕೆ ಸಮಯ ಸಾಲುತ್ತಿಲ್ಲ ಎಲ್ಲಿ ನಮ್ಮ ಸಮಯ ಮತ್ತು ಹಣವನ್ನು ವಿನಿಯೋಗಿಸೋಣ ಎನ್ನುವ ಯೋಚನೆಯೋದನೆ ಕಂಪನಿಗಳು ಕುಳಿತಿವೆ ಹೊರತು ಮಾಡಲು ಕೆಲಸ ಇಲ್ಲದೆ ಅಲ್ಲ ಎಂದು ನನಗನಿಸುವುದಿಲ್ಲ ..

    ಎಲ್ಲೋ ನಾಲ್ಕು ಜನ ದರ್ಪ ತೋರಿದರು ಎಂದ ಮಾತ್ರಕ್ಕೆ ಎಲ್ಲರು ಹಾಗೆಯೇ ಎಂದು ಹೇಗೆ ತೀರ್ಮಾನಿಸಿದಿರಿ? ಸಭ್ಯರಾಗಿ, ದರ್ಪವಿಲದೆ ಸಮಾಜದ ಒಳಿತಿಗಾಗಿ ಹಣವನ್ನೂ ಸಮಯವನ್ನೂ ಮೀಸಲಿಟ್ಟ ತಂತ್ರಜ್ಞರನ್ನು ತೋರಿಸುತ್ತೇನೆ , ಬನ್ನಿ ನನನ್ ಜೊತೆಗೆ.!! ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ಇತ್ತು ತೂಗಬಾರದು ಎನ್ನುವ ಹಿತವಚನವನ್ನ ತಮ್ಮಂತಹ ಹಿರಿಯರಿಂದ ನಾವು ಕೇಳಬೇಕು ಹೊರತು, ನಾವು ಅದನ್ನು ಹೆಳುವನ್ತಾಗಬರದಿತ್ತು..
    ಇನ್ನು ಒಂದು ವಿಶೇಷ ಎಂದರೆ, ಈ ಸಾಫ್ಟ್ವೇರ್ ಉದ್ಯಮವನ್ನು ಬಯ್ಯುವವರಿಗೆ, ಅದನ್ನು ಹಿಯಾಲಿಸಲೂ ಬಯ್ಯಲೂ ಎಲ್ಲ ಕರ್ಯಕ್ಕೋ ಮತ್ತೆ ಅವಲಂಬನೆ ಇರುವುದು "SOFTWARE "ಗೆ ಎನ್ನುವುದು ಸೋಜಿಗ !



    ReplyDelete
    Replies
    1. ನಿಮ್ಮ ಪ್ರಶ್ನೆಗಳಿಗೆ ಮುಂದಿನ ೫-೬ ವರ್ಷಗಳಲ್ಲಿ ಸಂಪೂರ್ಣ ಉತ್ತರ ಲಭಿಸಲಿದೆ! ಆಗ ನಿಮ್ಮ ಜ್ಯೋತಿಷಿಗಳು ನೀವು ಎಲ್ಲರೂ ಒಟ್ಟಾಗಿ ಏನು ಮಾಡಬೇಕೆಂದು ಚಿಂತಿಸಬಹುದು, ವ್ಯಾವಹಾರಿಕ ಮುಂಧೋರಣೆ ಮತ್ತು ಜಾಗತಿಕ ಮಾರುಅಕಟ್ಟೆ ಪರಿಶೀಲನೆಯಿಂದ ಇದನ್ನೆ ಬರೆದಿದ್ದೇನೆ-ಯಾವುದೇ ಸ್ವಂತ ಲಾಭಕ್ಕಾಗಿ ಅಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ವಿಪರೀತ ಪೈಪೋಟಿ[ಅನ್ ಹೆಲ್ದಿ] ನಡೆಯುತ್ತಿದೆ ಎಂದು ಪ್ರಮುಖ ಮ್ಯಾಗಜ಼ಿನ್ ಗಳೂ ಕೂಡ ಹೇಳಿವೆ, ಪ್ರಮುಖ ಕಂಪನಿಗಳ ಆಡಳಿತ ಪ್ರಮುಖರು ಅದನ್ನು ಒಪ್ಪಿಕೊಂಡಿದ್ದಾರೆ. ಕಲವೇ ಉತ್ತರಹೇಳುವಾಗ ನಾನೇಕೆ ಮತ್ತೆ ತಲೆಹಾಕಲಿ? ನಿಮ್ಮ ಅನಿಸಿಕೆ ನಿಮಗಿರಲಿ,, ನನ್ನದು ಸಾರ್ವಜನಿಕ ಮತ್ತು ಸಾರ್ವತ್ರಿಕ ಮುಖದ ಅಭಿಪ್ರಾಯ. ಆರ್ಥಿಕ ತಜ್ಞರ ವೋಟಿಂಗ್ ಗೆ ಹಾಕಿ ನಿಮಗೆ ಉತ್ತರ ಸಿಗಬಲ್ಲುದು!

      Delete
    2. Sorry,

      Please don't get me wrong. How much do you know about computer science and the jobs it creates? Do you know about internet of things, linked data, ubiquitous computing, data science...... If the internet boom is over, these new fields would fuel the growth for the coming years in the field of computer science.

      The energy sector boom that started in 17th century has not yet stopped. Of course it has taken different forms !! It was coal before, then it was electricity and later was oil and gas and now its ethanol, solar, wind etc. The sector would remain alive as long as people are heavily dependent on the existence of this sector.

      Similarly the computer science (i.e storage and processing of human/ machine generated data for zillions of applications in the real world where such processing and storage of data is based on strong theoretical foundations) field would see the growth coming from new areas. Of course, existing infrastructures on which you depend from the moment you get up till you sleep are all created and managed by so called computer engineers. They need to go to office everyday and do their job( research/ product development/ testing/ customer support / whatever) so that the human beings can get the service they are currently getting on a daily basis !!!!

      Europe and US ( and of course India) have estimated that millions of engineers/testers/scientists with programming skills, analytic skills and research skills are required for the above mentioned fields. If we can raise the standards of the engineers we produce in India, we would see more growth and of course not less. Recession in Europe (2 million people are currently unemployed) and US (9% unemployment) have slowed down the growth everywhere in the world and not just India. But if you talk to a mechanical engineer/civil engineer, he/she will tell how the recession has affected them. So we don't need to emphasize only on the effects of recession on IT. You will find dumb/stupid/arrogant people in every field. This is not limited to software !!! Go and read some business magazines, talk to top managers in the field and then write an article :) If you just looked around and found 100 people and generalized based on that, it would be stupid and not statistically meaningful and of course not significant.

      Do you know about the positive perception of Europeans and US managers about India and Bangalore? Go and do some field study about the presence of IT companies in Bangalore.


      And how can you predict things for 5-6 years. Are you a global head for a fortune 500 company or something.(Even those managers don't predict with certainty. They always say 'probably' and always talk about next 6 months to 1 year in spite of having all the data and the brains to process such data to derive meaningful insights of a situation)

      And FYI, astrology is a profound science. Though 99% of astrologers are bullshit and 1% are highly accurate and crystal clear, you don't have to underestimate the science behind it. It's the most exciting piece of science I have ever come across.

      Delete
    3. Vinod, I decide not to answer your call, since time will heal all the factors! Probably you may become fortune 500 company head who knows, only crystal clear astrologer can tell it you.

      Delete

    4. Why do you decide not to answer? Because you don't want or you can't or even though you answer, there would be logical flaws ?
      Instead of such a short meaningless answer, can you answer inline. There are 7 short paragraphs I have posted !! FYI http://en.wikipedia.org/wiki/Posting_style

      And in fact, I am a PhD researcher. I stand a better CHANCE of heading SOME group in a fortune 500 company :) I have visited more than 10 countries for industrial and academic purposes.So, I think I know bit more than you. :)
      I would keep you posted about my growth :)
      Cheers.

      Delete
    5. Mr. Vinod, you said “ I am a PhD researcher. I stand a better CHANCE of heading SOME group in a fortune 500 company :) I have visited more than 10 countries for industrial and academic purposes.So, I think I know bit more than you. :), I would keep you posted about my growth”

      I really don’t know how you had adjudged over my online profile!! Anyway I feel there are many PhD fellows [who have better achievements & experience than you] not only you who can head fortune 500 companies! Anyway, for people like you it is space to declare that you are so & so I hope.

      I told I won’t answer your call, for which I need not again show the reasons for the same. It is my choice whether I can answer or not to. You may read my other replies that is sufficient for you. Best of luck !

      Delete
  2. Non-Sense. Thantramshada pramukyatheya Arivina korathe eddu kaanuttide. intha adugolajji kathegalu halli katteya tea angadiya munde ninthu vyartha harateyanthide.

    ReplyDelete
    Replies
    1. Hope my reply to the 1st comment will apply here!

      Delete
  3. ee lekhana, yaava adhaara da mele baredaro gottilla. Vichaaragalu tumba hindulidanate kaanuttide. Software athava Information Technology ennuvudu innoo Balyavastheyallide. Ee tantrajnana ivattu tumba anveshanegalannu huttu haakuttide. Ee dina yaavade rangadallooo software na prabhava illade kelasa nadeyuttilla. Ee ella rangagallu innooo hechina anveshanegalu aaguttale ive, mattu aaguttale iruttave.
    Haagagi, ellivarege jeevana ee bhoomi mele iruvudo, alliya varege software mattue information technology abhivruddhi honduvadaste horatu, idakke antya/anya illa.
    eee lekhana tumba kalape mattadagittu, innu mundeyaadaroo swalpa aalochisi, sathya amshagalannu alavadasi prabhuddhavaagi bareyabekaagi vinanthi.

    ReplyDelete
    Replies

    1. ಸಾಫ್ಟ್ ವೇರ್ ಎಂಜಿನೀಯರುಗಳಿಗೆ ಈ ಬರಹದಿಂದ ಬಹಳ ಮರ್ಮಾಘಾತವಾಗಿದೆಯೆಂಬುದು ನನಗೆ ಅರ್ಥವಾಗಿದೆ; ಅದಕ್ಕೆ ನನ್ನ ವಿಷಾದವೂ ಇದೆ, ಟೈಟಾನಿಕ್ ಮುಳುಗುವಾಗ ಅದರ ಉಪ್ಪರಿಗೆಯಲ್ಲಿ ಸಂಗೀತಗೋಷ್ಟಿ ನದೆಯುತ್ತಲೇ ಇತ್ತು!! ಇನ್ನೂ ಇನ್ನೂ ಇನ್ನೂ ಗಿಟಾರು ಮೊರೆಯುತ್ತಲೇ ಇತ್ತು, ಆದರೆ ಕಾಲ ಸರಿದುಹೋಗುತಿತ್ತು! ಸುಡುವ ಬೆಂಕಿಯನ್ನು ಒಡಲಲ್ಲಿ ಬಚ್ಚಿಟ್ಟುಕೊಂಡು ಬದುಕಲು ನಿಸರ್ಗ ಎಷ್ಟುಕಾಲ ಅವಕಾಶನೀಡಬಲ್ಲದು?

      Delete
  4. Replies
    1. Thank you, hope you have realised the reality what I have focused about, SEs must gather the courage to rebuild their carrier in other areas, other than software.

      Delete
  5. ಇಂದಿನ ಸಾಫ್ಟ್ವೇರ್ ಕಂಪೆನಿಗಳ, ಮತ್ತು ದೊಡ್ಡ ಸಂಖ್ಯೆಯ ಸಂಬಳವನ್ನು ತೆಗೆದುಕೊಳ್ಳುವವರ
    ಸ್ಥಿತಿಯನ್ನು ಯಥಾವತ್ತಾಗಿ ಬರೆದಿದ್ದೀರಿ.. ಇದು ನಿಜ.

    ReplyDelete
    Replies
    1. ಕಂಡಿದ್ದನ್ನು ಹೇಳಿದ್ದೇನೆ, ಅದು ನನ್ನ ಸ್ವಭಾವ, ಸಭೆ-ಸಮಾರಂಭಗಳಲ್ಲಿ ಸುಮ್ಮನೇ ಕೂತು ಎಲ್ಲರಮಾತು ಗಮನಿಸಿ ತೀರ್ಮಾನಿಸುವುದು ನನ್ನ ಗ್ರಾಹ್ಯ ಮೂಲಗಳಲ್ಲಿ ಒಂದಂಶ. ಧನ್ಯವಾದ.

      Delete
  6. Yavudoo hesare kellilada Uddime Media Networks nali HR agiruva V.R.Bhattare,swalpa technology yannu thilidu mataduvudu olithu.Summane time sikkithendu yeneno bareyabediri.Technology yannavudu hariyuva neerina hage,hariyuva neerinalli kadime aguthadeye horathu,baridhaguvudilla.Davavittu edanna artha malikolli.

    ReplyDelete
  7. This comment has been removed by the author.

    ReplyDelete
  8. This comment has been removed by the author.

    ReplyDelete
  9. sir tumba olle vishyada bagge tiliskottiddira danyavadagalu e reethi janaralli munna hecharike moodisuvudu olleyadu great work sir

    ReplyDelete
  10. ಸಾರ್ ನೀವು ಬರೆದಿದ್ದನ್ನು ಹೊಪ್ಪಲೇ ಬೇಕು. ನಮ್ ತಮ್ಮ ಕಳ್ದ ವರ್ಸ ಕೆಲಸ ಕಲ್ಕೊಂಡ. ಅವನಿಗೆ ಅಂತದೇ ಕೆಲ್ಸ ಬೇಕು ಅಂತ ಅಲ್ದೂ ಅಲ್ದೂ ಸುಸ್ತಾದ. ಈಗ ಐಸ್ ಕ್ರೀಮ್ ಪಾರ್ಲರ್ ಮಡೀಕೊಂಡಿದಾನೆ. ಅರೀದೋರು ಏನೇ ಕೆಟ್ಟದಾಗಿ ನಿಮ್ ಲೇಖನದ ಬಗ್ಗೆ ಬೊಗಳುದ್ರೂ ನೀವೇಳೊ ವಿಸ್ಯ ಬಾಳ ಕರೆಟ್ಕಾಗಿರ್ತದೆ ಸಾರ್. ಎಸ್ಟಂದ್ರೂ ನಮ್ ಗುರುಗೊಳಲ್ವೇ ?

    ReplyDelete
  11. Nanu obba software engineer, Neevu helida hage nanilla vadroo, bahala hage maduvaru iddare. Adare nenapidi, Sarkari naukari embudu biddiyulla bada brahmanarige gagana kusuma vaada sandarbadallia (Krupe reservation) Software ond oasis ante kadiddu sullalla tane ? Esto jana bada bramhana hudugara uddara agiddu kooda idarinda tane ? Ona ahankara pradarshisi meredaduva jana ella kade iddare bidi, tamma ee lekhana antaha janarige seemitha vaagali endu bayasuttene.

    ReplyDelete
  12. This comment has been removed by the author.

    ReplyDelete
  13. software ಸಮುದ್ರ ಇದ್ದ ಹಾಗೆ.. ಇದು ಎಂದೂ ಮುಳುಗುವ ದೋಣಿ ಖಂಡಿತಾ ಅಲ್ಲ...

    ReplyDelete
    Replies
    1. ಇದ್ದುದನ್ನು ಇವತ್ತಲ್ಲಾ ನಾಳೆ ಒಪ್ಪಲೇ ಬೇಕು. ಊರಿಗೆ ಬಂದ ನಾರಿ ನೀರಿಗೆ ಬರದೇ ಹೋಗಬಹುದು, ಯಾಕೆಂದರೆ ಈಗ ಕೆರೆ-ಬಾವಿಗಳೇ ಇಲ್ಲ-ಇಲ್ಲವಾಗುತ್ತಿವೆ, ಬತ್ತುತ್ತಿವೆ! ಆದರೆ ಸಾಫ್ಟ್ ವೇರ್ ರಂಗ ಹಾಗಲ್ಲ, ಫಿಲಿಪ್ಸ್ ಕಂಪನಿಯನ್ನು ಯಾವುದೋ ಖರೀದಿಸಿ ಈಗ ಆ ಕಂಪನಿಯೂ ಬಾಗಿಲು ಹಾಕಿರುವಾಗಲೇ ನಿಮಗೆ ಅದರ ಮರ್ಮ ಅರ್ಥವಾಗಬೇಕು. ಈ ಜಗತ್ತಿನಲ್ಲಿ ಜಾಗತಿಕ ಬಂಡವಾಳ ಶಾಹಿಗಳಿಗೆ-ಹಣವಿದ್ದವರಿಗೆ ಸುಲಭದ ದಂಧೆ ಎಂದರೆ ಸಾಫ್ಟ್ ವೇರ್, ಅಂತದರಲ್ಲಿ ಜಾಗತಿಕ ಕುಳಗಳೇ ಶಟರ್ ಎಳೆಯುತ್ತಿರುವಾಗ ಭಾರತೀಯ ಕಂಪನಿಗಳು ಯಾವಲೆಕ್ಕ? ಮುಂದೊಂದು ದಿನ ಮನೆಯ ಗೋಡೆಗಳಿಗೆ ಬಣ್ಣಬಳಿಯುವ ಕೆಲಸದಂತೇ ಈ ಕೆಲಸ ಆಗುತ್ತದೆ! ಎಲ್ಲರೂ ಯಜಮಾನರೇ ಎಲ್ಲರೂ ತಯಾರಕರೇ, ಆದರೆ ಯಾರಿಗೂ ಏನೂ ವರ್ಕೌಟ್ ಆಗುವುದಿಲ್ಲ.

      ಈಗಾಗಲೇ ಜಗತ್ತಿನಾದ್ಯಂತ ಸಾಫ್ಟ್ ವೇರ್ ಕಂಪನಿಗಳು ಅಣಬೆಗಳ ರೀತಿ ಹುಟ್ಟಿಕೊಂಡಿವೆ. ಭಾರತೀಯ ಕಂಪನಿಯೊಂದು ತನ್ನ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ಮುಂದಾಗಿ [ನಷ್ಟದಲ್ಲಿದ್ದರೂ], ಬಿಟ್ಟು ಹೋಗುತ್ತಿರುವ ಸಾವಿರಾರು ನೌಕರರನ್ನು ಉಳಿಸಿಕೊಳ್ಳಲು ೧೦% ಸಂಬಳ ಹೆಚ್ಚಿಸಿದೆ![ಕುರುರಾಯ, ಕುರುಕ್ಷೇತ್ರದಲ್ಲಿ ಅಳಿದುಳಿದ ಸೈನ್ಯವನ್ನು ಮತ್ತೆ ಎಬ್ಬಿಸಿ, ಉತ್ಸಾಹ ತುಂಬಿ ಯುದ್ಧಕ್ಕೆ ಸನ್ನದ್ಧವಾಗುವ ರೀತಿಯಂತೇ ನನಗದು ಕಾಣುತ್ತಿದೆ! ಇದು ಕೇವಲ ಸನ್ನಿವೇಶದ ಹೋಲಿಕೆಯಷ್ಟೇ ಬಿಟ್ಟರೆ, ಗುಣ-ಸ್ವಭಾವ-ನೀತಿಗೆ ಸಂಬಂಧಿಸಿದ ಹೋಲಿಕೆಯಲ್ಲ ಎಂಬುದು ನೆನಪಿರಲಿ] ಉತ್ತಮ ನೌಕರರನ್ನು ಅಲ್ಲೇ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಅದರ ಮುಖ್ಯಸ್ಥರೇ ಹೇಳಿದ್ದಾರೆ. ಸದರೀ ಮುಖ್ಯಸ್ಥರೇ ಮತ್ತೆ ಚುಕ್ಕಾಣಿ ಹಿಡಿದರೂ ಮೊದಲಿನ ರೂಪ, ಗತ್ತು, ಗೈರತ್ತು ಬರಲು ಸಾಧ್ಯವಿಲ್ಲ ಎಂಬುದು ಸಾರ್ವತ್ರಿಕವಾಗಿ ಮತ್ತು ಜಾಗತಿಕ ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ. ಯಾವುದೇ ಆಗಲಿ ಒಂದು ಮಿತಿಯಲ್ಲಿರಬೇಕು, ಅತಿಯಾದಾಗ ಅದು ಬುಡಮೇಲಾಗುತ್ತದೆ-ಅದು ನಿಸರ್ಗ ನಿಯಮ. ಇನ್ನು ಕೆಲವೇ ತಿಂಗಳುಗಳಲ್ಲಿ ರೀಯಲ್ ಎಸ್ಟೇಟ್ ಕಥೆ ನೋಡಿ !! ನೀವು ನೋಡುತ್ತಲೇ ಇರಿ, ನಮ್ಮಂಥವರು ಹೇಳುತ್ತಲೇ ಇರುತ್ತಾರೆ, ನಡೆಯುವುದು ಸಮಾಜಕ್ಕೆ ಕಾಣುತ್ತಲೇ ಇರುತ್ತದೆ, ಆಗ ತೀರ್ಮಾನಕ್ಕೆ ಬರೋಣ.

      Delete
  14. nimmondige mondu vaada madutta kulitukollalu samayavilla. Bahusha nimage sikkiruva ella software mandiyoo hagirabahudu. adare nanna circle nalli iruva ella software janaru tumba maanveeya moulyavulla janaru.

    ReplyDelete
    Replies
    1. Thanks a lot Mr.Manjunath, I too don't have that amount of time to spare !! bye

      Delete
  15. ಸಾಫ್ಟ್ ವೇರ್ ಉದ್ಯಮದಲ್ಲಿ ಸದ್ಯಕ್ಕೆ ತಲ್ಲಣ ಇರುವುದಂತೂ ನಿಜ. ಬಹುಶ ಇದಕ್ಕೆ ನೀವು ಹೇಳಿದ ಬಾಕಿ ಕಾರಣಗಳಿಗಿಂತಲೂ ತೀವ್ರ ಪೈಪೋಟಿಯೇ ಮುಖ್ಯ ಕಾರಣವೆಂದು ನನಗೆ ಕಾಣುತ್ತಿದೆ. ಒಂದು ವೇಳೆ ಐಟಿ ಯಲ್ಲಿ ಈಗಿರುವಸ್ಟೇ ಕೆಲಸ ನಿರಂತರವಾಗಿ ಹರಿದು ಬಂದರೂ ಸದರಿಂದ ಈ ಮೊದಲು ಗಳಿಸಿದ ಲಾಭ ಗಳಿಸುವುದು ಕನಸಸ್ಟೆ. ಈಗಾಗಲೇ ರುಮೇನಿಯ, ಹಂಗೇರಿ, ಫಿಲಿಪ್ಪೈನ್ಸ್ ಇತ್ಯಾದಿ ದೇಶಗಳು ಮಾಹಿತಿ ತಂತ್ರಜ್ಞಾನ (It services, not only call center or BPO)ಸೇವೆಗಳನ್ನು ಭಾರತಕ್ಕಿಂತ ಕಡಿಮೆ ವೆಚ್ಚದಲ್ಲಿ ಒದಗಿಸಲು ಆರಂಭಿಸಿವೆ. ಪ್ರತಿ ವರ್ಷ ನಮ್ಮ ಕಾಲೇಜುಗಳಿಂದ ಹೊರಬರುತ್ತಿರುವ low skilled ಇಂಜಿನಿಯರುಗಳ ಸಂಖ್ಯೆ ನೋಡಿದರೆ ಬೆಚ್ಚಿ ಬೀಳುವ೦ತಾಗುತ್ತದೆ. ಈ ಪ್ರಮಾಣದಲ್ಲಿ ಉದ್ಯೋಗ ಒದಗಿಸಲು ಯಾವುದೇ ಉದ್ದಿಮೆಯಿಂದ ಸಾಧ್ಯವೇ? ಅಷ್ಟೆ ಅಲ್ಲ, ೧೦ ವರ್ಷದ ಹಿಂದೆ ಐಟಿ ಇಂಜಿನಿಯರು ಪಡೆಯುತ್ತಿದ್ದ starting salary ಗೂ ಇಂದಿನ starting salary ಗೂ ಅಂಥಾ ದೊಡ್ಡ ವ್ಯತ್ಯಾಸವಿಲ್ಲ. ಆದರೆ ಬಾಕಿ ಸಾಂಪ್ರದಾಯಿಕ ಉದ್ಯೋಗಗಳಲ್ಲಿ ಇದು ಗಮನಾರ್ಹ ಏರಿಕೆ ಕಂಡಿದೆ. ಸ್ವಲ್ಪ ಕಣ್ಣು ಬಿಟ್ಟು ನೋಡಿದರೆ ಐಟಿ ಕನಸುಗಳಲ್ಲಿ ಮುಳುಗಿರುವವ್ರಿಗೂ ಇದು ಅರ್ಥವಾದೀತು.

    ReplyDelete
    Replies
    1. 10 varshagala hinde, bengalooralli product tayarisuva companygalu berelu enikeyaste ittu. Abbabba endare Cisco athava IBM... Namagella software or IT ennuva shabdha huttiddu Wipro haagoo Infosys emba bharateeya companygala udayavaadaga. Aadare ivarella yaaroo product or innovation kelasakke yashasvi aagi kai haakalilla. Haageye salary kooda kadime ittu.
      Aaadare, eega bengaloorinalli product company gala sankhye hecchagide. Eeega starting salary 10 varsha hindina starting salary ge holisidare elarinda hattu pattu jaasti aagide. Software product tayarisuva company galu benagaloorinalli tumbi hogiddaare. Modalu 2-3 companygalittu.eega, Intel, Brocade, Juniper, EMC, Netapp, Broadcom, Qualcomm, Nokia, Brocade, LSI, Vmware, Sandisk, Samsung, Emulex, Oracle, Citrix, Yahoo, Google, Amazon, Microsoft, Wallmart, heege list beleyuttale hoguttade.
      haagagi, ee negative thinking inda yaavade reetiya olitilla. This positively, there is a lot to be done using software and its abilities. Its ocean of opportunities and after working in software industry for 14 years now, I feel, its still the beginning.This experience has made me feel that software has a lot more to deliver to this society. Take a real problem to solve and software is there for you help.

      Delete
  16. ಏನೇ ಇದ್ದರೂ ಸುಮಾರು ೧೫-೨ ವರ್ಷಗಳಿಂದ ಮೀಸಲಾತಿ ಇಲ್ಲದ ಮಧ್ಯಮ ವರ್ಗಕ್ಕೆ ದೊಡ್ಡ ಮಟ್ಟಿನ ಆಸರೆ ಕೊಟ್ಟದ್ದು ಇದೇ ಐಟಿ ಉದ್ಯಮ. ಇದರೊಳ ಹೊಕ್ಕ ಹಲವರು 'ಅರ್ಧ ರಾತ್ರಿ ಕೊಡೆ ಹಿಡಿಯುವಂತೆ' ವರ್ತಿಸಿದ್ದು ನಿಜವಾದರೂ ಐತಿ ಉದ್ಯೋಗಿಗಳೆಲ್ಲರೂ ಹಾಗೆ ವರ್ತಿಸುತ್ತಾರೆಂಬನಿರ್ಧಾರ ಸರಿಯಲ್ಲವೇನೋ?

    ReplyDelete
  17. ನಿಮ್ಮ ಮಾತುಗಳಲ್ಲೇ ಉತ್ತರಗಳೂ ಇರುವುದರಿಂದ ನನ್ನ ಉತ್ತರಗಳ ಅನಿವಾರ್ಯತೆ ಇಲ್ಲಿ ಕಾಣುತ್ತಿಲ್ಲ. ಸಾವಿರಾರು ಕಂಪನಿಗಳು ಭೋರ್ಗರೆದು ಮುನ್ನುಗ್ಗುತ್ತಿರುವ ಜಾಗತಿಕ ಮಟ್ಟದಲ್ಲಿ ಅನೇಕ ಜಾಗತಿಕ ಕಂಪನಿಗಳ ಹೆಸರನ್ನೂ ಯಾದಿಮಾಡಿದ್ದೀರಿ-ಅವೆಲ್ಲಾ ಭಾರತೀಯ ಮೂಲದ ಕಂಪನಿಗಳಲ್ಲ! ಅಡುಗೆಯವರು ಜಾಸ್ತಿ ಊಟಮಾಡುವವರು ಕಮ್ಮಿ ಆದಾಗ, ಡಾಕ್ಟರುಗಳೇ ಜಾಸ್ತಿ ಪೇಶಂಟ್ಸ್ ಕಮ್ಮಿ ಎಂದಾದಾಗ, ಸಪ್ಲೈ ಜಾತಿ ಡಿಮಾಂಡ್ ಕಮ್ಮಿ ಆದಾಗ ಏನಾಗುತ್ತದೆ ಎಂಬುದನ್ನು ಮೂಢರೂ ತುಸುಮಟ್ಟಿಗೆ ಬಲ್ಲರು. ಇನ್ನು ಮೀಸಲಾತಿ ರಾಜಕೀಯದಲ್ಲಿ ತಮ್ಮ ಬುದ್ಧಿಮಟ್ಟದಿಂದ ಅನೇಕರು ದುಡಿಮೆಮಾಡಿದರು ಎಂಬುದನ್ನು ಒಪ್ಪಿಕೊಳ್ಳದ ಅನ್ಯ ಮನಸ್ಕ ನಾನಲ್ಲ. ಆದರೆ ಬಹುತೇಕ ಸಾಫ್ಟ್ ವೇರ್ ನವರು ಅನ್ಯಗ್ರಹಗಳಿಂದ ಬಂದವರಂತೇ ನಡೆದುಕೊಳ್ಳುತ್ತಿದ್ದರು ಎಂಬುದನ್ನು ನಾನು ಮತ್ತೆ ಮತ್ತೆ ಹೇಳುತ್ತೇನೆ-ಇದು ಹಲವರ ಜೀವನಾನುಭವ ಹೇಳಿದ ಸತ್ಯ! ಮಿಕ್ಕಿದಂತೇ ಪಾಸಿಟಿವ್ ಥಿಂಕಿಂಕ್ ನೆಗೆಟಿವ್ ಥಿಂಕಿಂಗ್ ಎನ್ನುವುದಕ್ಕಿಂತಾ, ಗಡ್ಡಕ್ಕೆ ಬೆಂಕಿಬಿದ್ದಾಗ ಬಾವಿ ತೋಡುವುದಕ್ಕಿಂತಾ ಮೊದಲೇ ಅದಕ್ಕೆ ತಯಾರಿ ನಡೆಸಿಕೊಂಡರೆ ಹನ್ನೊಂದನೇ ತಾಸಿನಲ್ಲಿ ಒದ್ದಾಡುವುದು, ತಲೆಕೆಡಿಸಿಕೊಳ್ಳುವುದು ತಪ್ಪುತ್ತದೆ, ಇದನ್ನು ಔದ್ಯಮಿಕ ಜಗತ್ತು ಫೋರ್ ಕಾಸ್ಟಿಂಗ್ ಎನ್ನುತ್ತದೆ. ಇದಕ್ಕೂ ಹೆಚ್ಚಿನದನ್ನು ನಿಮಗ್ಯಾರಿಗೂ ಹೇಳುವುದು ಬೇಕಿಲ್ಲ ಎನಿಸುತ್ತದೆ.

    ReplyDelete
    Replies
    1. Nimage demand and supply bagge yaava aadhaara sikkideyo endu gottatuttilla.
      Nanage doretiruva aadhaarada prakaara, eegina software companygalu 50% gu kadime demand ge supply maadalu shakyaraagiddare. Demand heechuttale hoguttideye horatu, kadime aagilla. Haagagi ee demand annu poornagolisalu ee ella companygalu ivattu hosa anveshanegalannu maaduttiddare. Ivattina technology inda eegiruva demand annu poornagolisalu saadhyavaaguttilla. Haagagi, software company galu Demand and Supply race alli hindulididdare. Ee backwardness eegina mitigalalli tumba hecchiruvudarinda highly skilled engineers na avashyakathe ideyaste horatu, software industry dolaayamana stitiyallilla.
      Ondantu Sathya: Namma bharatadalliruva saviraaru engineering college inda hora baruva engineers skillset level alli hinde biddiddare. Haagagi, ivaryaru ivattina demands ge match aaguttilla.Software industry ennuvudu, halavaru tilidante typing industry alla. Illi bhuddivantarige maatra sthana. Namma bharatinda ivattu yaake yaaavade olle product horabaruttilla? Yaake ee US companygalu maatra ee race nalli munnade saadhisiddare? ee prashnegalagige uttara kandu hidiyabeku. Adara badalu summane software industry biddu hoguttade, benki hidiyuttade endalla light talks maaduvadu nanna prakara waste.
      Nanna hattira ivattu ondu 10 ideas ide..namma deshada kelavondu problems annu solve maadalikke. AAdare, we dont have skills to solve the problem. Naanu kelasa maaduva company yaalli prati varsha IIT galinda ondastu engineers seruttare. Aadare, ivaru IITs alli best alla. IITs best are in USA. Nanna company hattira maadlikke tumba kelsa ide, aadare sariyaada jana illa! Maadlikke bekaadastu ide, aadare maadoru yaaru? Demand ide swamy...but supply illa. Apple ge demand iruvaga, bale hannu kottare yaaru tintaare swamy? Neeve yochisi nodi.
      Howdu neevu heluvudaralli ondu amsha nija. Baale hannige demand kadime aagide!
      Problem is about availability of right skills to cater to demand. There is opportunity for thousands of companies today to solve so many problems around. But, where are those people who can meet this demand? I have to tell this with deep regret that, India is far behind in this race to supply right skilled people.

      Delete
  18. ಸ್ವಾಮಿ, ಗಣಕ ತಂತ್ರಜ್ಞಾನ ಬಂದಿದ್ದೇ ಜನರ (ಎಲ್ಲಾ ಜನರ... ಕೇವಲ ಸಾಫ್ಟ್ವೇರ್ ಇಂಜಿನಿಯರುಗಳ ಅಲ್ಲ..) ಸೋಮಾರಿತನದಿಂದಾಗಿ ಮತ್ತು ಅವರಲ್ಲಿ ಗಣಿತದ ಬಗ್ಗೆ ಇರುವ ದೋಷಗಳಿಂದಾಗಿ (ಅದರಿಂದ ತೊಂದರೆಗಳಾಗದಂತೆ ನೋಡಿಕೊಳ್ಳಲು ಮತ್ತು ನಂತರ ಅದರ ದುರುಪಯೋಗಪಡೆದುಕೊಳ್ಳಲು).

    ಉದಾಹರಣೆ: Industrial Revolution ಅಗಿದ್ದೆ ಜನರು ಹೆಚ್ಚು ಹೆಚ್ಚು ತಯಾರು ಮಾಡಲು ಮತ್ತು ಅತೀ ಕಡಿಮೆ ಶಕ್ತಿಯನ್ನು (ದೈಹಿಕವಾಗಿ) ಬಳಸಲು. ಇದನ್ನು ಒಂದು ತರಹದ ಸೋಮಾರಿತನ ಎಂದೇ ಕರೆಯಬಹುದು ತಾನೆ? ಇದರ ಮುಂದಿನ ಹಂತ ಗಣಿತಕ್ಕೆ ಅನ್ವಯವಾಗುವಂಥದ್ದು. ಮೊದಮೊದಲು Calculator ಗಳ ಬಳಕೆಯಿಂದ ಶುರುವಾದ ಗಣಿತದ್ವೇಷ (ಅಥವಾ ದೋಷ) ಮುಂದೆ ಅನೇಕ ಕಾಂಡಗಳಾಗಿ ಬೆಳೆದುನಿಂತಿತು. ಇದರ ಉಪಯೋಗ ಕೇವಲ Calculator ಕಂಡು ಹಿಡಿದವರಿಗಾಗಿ ಎಂದು ಹೇಳುತ್ತೀರ? ಸಾಮಾನ್ಯ ಜನರೂ ಇದನ್ನು ಬಳಸುತ್ತಾರೆ. ಇದೇ ರೀತಿ, ಸಾಫ್ಟ್‍ವೇರ್ ಕೂಡ ಎಷ್ಟೋ ಕಠಿಣ (ವೆನಿಸುವ) ಕೆಲಸಗಳನ್ನು ಕಡಿಮೆ ಸಮಯದಲ್ಲಿ, ಹೆಚ್ಚು ಖಚಿತವಾಗಿ ಹಾಗೂ ಕಡಿಮೆ ತಪ್ಪುಗಳಿಂದ ಮಾಡುತ್ತದೆ. ಈ ದಿನ ಒಬ್ಬ ರೈತ ತನ್ನ ಹಳ್ಳಿಯಿಂದ ಒಂದು ಅರ್ಜಿಯನ್ನು ಬರೆದು (ಗಣಕಯಂತ್ರದಲ್ಲಿ) ಸಲ್ಲಿಸಿದರೆ, ಅದನ್ನು ಪರಿಷ್ಕರಿಸುವುದು ಒಂದು ಸಾಫ್ಟ್‍ವೇರು. ಅದನ್ನು ಬರೆಯುವುದು ಅದರ ಇಂಜಿನಿಯರುಗಳು. ಕೆಲವೇ ಕ್ಷಣದಲ್ಲಿ ಆ ರೈತನಿಗೆ ಇದರ ಪ್ರಯೋಜನವುಂಟು.

    ಮೊಬೈಲ್ ಫೋನುಗಳಿಲ್ಲದಿದ್ದರೆ (ಅಥವಾ ಫೋನುಗಳೇ ಇಲ್ಲದಿದ್ದಲ್ಲಿ) ನೀವು ಕಾಲ್ನಡಿಗೆಯಲ್ಲಿ ಹೋಗಿ ಸಮಾಚಾರ ಮುಟ್ಟಿಸಬೇಕಾಗಿತ್ತು. ಆದರೆ, ಜನರಲ್ಲಿ (ಎಲ್ಲರಲ್ಲೂ), ಸೋಮಾರಿತನ ಎದ್ದು ಎದ್ದು ನಿಂತಿದೆ. ಎಷ್ಟು ಕಡಿಮೆ ಶಕ್ತಿ ಬಳಸಿದರೆ ಅಷ್ಟು ಒಳ್ಳೆಯದು ಎಂಬುದು ನಮ್ಮ ನಿಮ್ಮೆಲ್ಲರ ಆಶೆ. ಸಮಸ್ತ ಜನರು ಸಾಫ್ಟ್ವೇರುಗಳಿಗೆ ಶರಣು ಹೊಡೆಯುತ್ತಿದ್ದಾರೆ. ನೀವೂ ಇದಕ್ಕೆ ಹೊರತಲ್ಲ. (ಇಲ್ಲದಿದ್ದಲ್ಲಿ, ನಿಮ್ಮ ಈ ಲೇಖನ ನಮಗೆ ಮುಟ್ಟಲು ಒಂದೆರಡು ದಿನಗಳಾದರೂ ಬೇಕಾಗಿರುತ್ತಿತ್ತು. ಪತ್ರಿಕೆಯಲ್ಲಿ ಪ್ರಕಟಿಸಿದ ನಂತರ).

    SE ಗಳಿಗೆ ಡಿಮ್ಯಾಂಡ್ ಹೇಗೆ ಹೆಚ್ಚಿತು? ಎಂಬ ಪ್ರಶ್ನೆಗೆ ಉತ್ತರ ಮೇಲೆ ಹೇಳಿದ್ದೇನೆ. ನಮ್ಮ ಕೆಲಸವನ್ನು ಕಡಿಮೆ ಮಾಡುವವರು ಇದ್ದರೆ, ಮತ್ತು ಕಡಿಮೆ ಮಾಡಲು ಅವಕಾಶ ಇದ್ದರೆ ಯಾರು ತಾನೆ ಬಳಸುವುದಿಲ್ಲ ಹೇಳಿ ? ನಿಮ್ಮ ಕೆಲಸವನ್ನು ನೀವು ಆಳಿಗೆ ಹೇಳಿದರೂ ಇದೇ ಅರ್ಥ ತಾನೆ?

    ಈಗ ಹೇಳಿ ಡಿಮ್ಯಾಂಡ್ ಎಲ್ಲಿಂದ? ಈ ಡಿಮ್ಯಾಂಡ್ ಕಡಿಮೆಯಾಗುತ್ತಿದೆ ಅಂತ ನಿಮಗೆ ಅನ್ನಿಸುತ್ತಿದೆಯಾ? ಜನರು ತಮ್ಮ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಲು ಮತ್ತು (ಕಷ್ಟಪಟ್ಟು) ದುಡಿಯಲು ಮುಂದಾಗುತ್ತಿದ್ದಾರೆಯೇ? ನಾನೂ ಅವರನ್ನು ಭೇಟಿ ಮಾಡಲು ಇಚ್ಛಿಸುತ್ತೇನೆ.

    ಗೋವಿಂದ ಪದಕಿ.

    ReplyDelete
    Replies
    1. ಪದಕಿಗಳೇ ಅಂತೂ ಬಂದಿರಿ, ನೀವು ಹೇಳಿದ್ದರಲ್ಲಿ ಹಲವನ್ನು ಒಪ್ಪುತ್ತೇನೆ, ಆದರೆ ಪೈಪೋಟಿಯ ವಿಷಯ ಮತ್ತು ಹೊಸ ಆವಿಷ್ಕಾರಗಳನ್ನು ಬಿಟ್ಟು! ಈಗೇನಾಗಿದೆ ನಿಮಗೆ ಗೊತ್ತಿದೆ. ಜನ ಎಲ್ಲರೂ ಆಳಸಿಗಳೇ ಆದರೂ ಕೂಡ ಕೆಲಸವನ್ನು ಯಾರು ಅತಿ ಕಮ್ಮಿ ಖರ್ಚಿನಲ್ಲಿ ಮಾಡಿಕೊಡುತ್ತಾರೆ ಎಂದು ಹುಡುಕುತ್ತಾರೆ. ಕೆಲಸ ಮಾಡಿಕೊಡುವ ಜನ ಬೆಲೆಯಲ್ಲಿ ಪೈಪೋಟಿಗೆ ಇಳಿಯುತ್ತಾರೆ, ತತ್ಪರಿಣಾಮ ಏನಾಗುತ್ತದೆ? ಬೆಲೆ ಕಮ್ಮಿ ಆಗುತ್ತದೆ, ಬೆಳ ಕಮ್ಮಿ ಇಟ್ಟುಕೊಂಡಾಗ ಕಂಪನಿಗೆ ಲಾಭ ಎಷ್ಟಿರುತ್ತದೆ ? ಈಗ ಸಿಗುವುದಕ್ಕಿಂತಾ ಕಮ್ಮಿ, ಲಾಭ ಕಮ್ಮಿ ಬಂದಾಗ ಕಂಪನಿ ಖರ್ಚು-ವೆಚ್ಚಗಳನ್ನು ಹೇಗೆ ನಿಭಾಯಿಸುತ್ತದೆ ? ಕಾಡಿನಲ್ಲಿ ಬಿದಿರು ಕಮ್ಮಿಯಾದಾಗ ಆಹಾರ ಹುಡುಕುತ್ತಾ ಆನೆಗಳು ನಾಡಿಗೆ ಬಂದವು! ನಾಡಿನ ಆನೆಗಳಾದ ಸಾಫ್ಟ್ ವೀರ ಕಂಪನಿಗಳ ಹೊಟ್ಟೆಗೆ ಎಲ್ಲಿಯ ಬಿದಿರು ? ಅಥವಾ ಸಿಗುವ ಬಿದಿರು ಸಾಕೇ ? ಗೊತ್ತಿಲ್ಲ, ಗೊತ್ತಾಗುವಾಗ ಏನಾಗುತ್ತದೆ ? ಕೆಲಸಗಾರರಲ್ಲಿ ಕಡಿತವಾಗುತ್ತದೆ! ಕೆಲಸಗಾರರಲ್ಲಿ ಕಡಿತದೊಂದಿಗೆ ಸಂಬಳ ಕೂಡ ಕಮ್ಮಿಯಾಗುತ್ತದೆ !! ಈಗಾಗಲೇ ಮೊದಲಿನ ರೀತಿಯ ಸಂಬಳ ಇಲ್ಲ ಅಲ್ಲವೇ ? ಮುಂದಿನದನ್ನು ನೀವೇ ಯೋಚಿಸಿ!

      Delete
    2. ಭಟ್ರೆ, ಬಹಳ ಹಿಂದೆ Graduate ಆಗಿದ್ರೆ ಸಾಕು.. ಒಂದು ಒಳ್ಳೆ ಹೈ ಕ್ಲಾಸ್ ನೌಕರಿ ಸಿಗುತ್ತಾ ಇತ್ತು. ಆಮೇಲೆ, Specializations ಗಳು ಬಂದ್ವು. ಕೇವಲ ಗ್ರಾಜುಯೇಟ್ ಆಗಿದ್ರೆ ಸಾಲಲ್ಲ ಅಂತ... Accountancy ಕಲಿತ ಒಬ್ಬ ವ್ಯಕ್ತಿಗೆ ಒಳ್ಳೆ ಕಂಪನಿಯಲ್ಲೊ ಅಥವಾ ಸರ್ಕಾರದಲ್ಲೊ ಬಹಳ ಚೆನ್ನಾಗಿರುವ ಕೆಲಸ ಸಿಗ್ತಾ ಇರ್ತಿತ್ತು. ಈಗ Accountancy ಕಲಿತವನಿಗೂ ಡಿಮ್ಯಾಂಡ್ ಕಡಿಮೆ ಆಗಿಲ್ಲ. ಅವನು ಇನ್ನಷ್ಟು ಹೆಚ್ಚು ವಿಷಯಗಳಲ್ಲಿ ಪರಿಣತಿ ಹೊಂದಿ ಬೇರೆ ಇನ್ನೇನೊ (ಅಕೌಂಟಂಸಿಯಲ್ಲೇ) ಕೆಲಸವನ್ನು ಹುಡುಕಿಕೊಳ್ಳುತ್ತಾನೆ. ಆದ್ದರಿಂದ ಈ ಜಾಗತಿಕ ಪೈಪೋಟಿ ಯಾವ ಕೆಲಸವನ್ನೂ ತೆಗೆದುಹಾಕಲ್ಲ. ಆದರೆ, ಅದೇ ಹಾದಿಯಲ್ಲಿ, ಮುಂದೆ ಯಾವ ಯಾವ ಕೆಲಸಗಳು ಬರಬಹುದು ಎಂಬುದರ ಬಗ್ಗೆ ನಮಗೆ ಎಚ್ಚರಿಕೆ ಕೊಡುತ್ತದೆ. ಸಾಫ್ಟ್ವೇರ್ ಇಂಜಿನಿಯರುಗಳಿಗೂ ಇದು ಅನ್ವಯಿಸುತ್ತದೆ. ಈಗ ಕೇವಲ BASIC ಲ್ಯಾಂಗ್ವೇಜ್‍ನಲ್ಲಿ ನಾನು ಪರಿಣಿತ ಅಂತ ಕೆಲಸ ಹುಡುಕಿದರೆ, ಬಹುಶಃ ಒಂದೆರಡು ಕಡೆ ಕೆಲಸ ದೊರಕಬಹುದು. ಆದರೆ, C/C++/Python/Java/Ruby/ ಮತ್ತನೇಕ ಕಂಪ್ಯೂಟರ್ ಭಾಷೆಗಳು ಬಂದಿವೆ. ಅನೇಕ ವಿಷಯಗಳಲ್ಲಿ ಸಂಶೋಧನೆಗಳು ನಡೆಯುತ್ತಿವೆ. Artificial Intelligence, Neural Networks, BigData, Embedded Systems, Data Mining, ಇವೆಲ್ಲ ಈಗಿನ ಕಾಲದ ವಿಷಯಗಳು. ಅನೇಕ ಕಡೆಗಳಲ್ಲಿ ಇದರ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಕೇವಲ ಮೊಬೈಲ್ ಬಳಸಿಯೇ ಎಲ್ಲ ಕೆಲಸಗಳನ್ನು (ಸಾಮಾನ್ಯ ವ್ಯಕ್ತಿಗೆ ಬೇಕಾಗುವ ಕೆಲಸಗಳು) ಮಾಡುವ ದಿಕ್ಕಿನಲ್ಲಿ ಸಾಫ್ಟ್ವೇರು ಯುಗ ನಡೆಯುತ್ತಿದೆ. Near Field Communication ಎಂಬ ತಂತ್ರಜ್ಞಾನದಿಂದ ನೀವು ನಿಮ್ಮ ಮೊಬೈಲೆನಿಂದಲೇ ದುಡ್ಡನ್ನು ಕಳಿಸಬಹುದು (ಕೊಡಬಹುದು). ಒಂದು ಅಂಗಡಿಗೆ ಹೋಗುವಾಗ ನೀವು ಕೇವಲ ಮೊಬೈಲ್ ತೆಗೆದುಕೊಂಡು ಹೋದರೆ ಸಾಕು. ಪರ್ಸೂ ಬೇಡ. ಕ್ರೆಡಿಟ್‍ಕಾರ್ಡ್‍ಗಳೂ ಬೇಡ. NFC ಬಳಸಿ ನೀವು Payment ಮಾಡಬಹುದು.

      ಸಾರಾಂಶ ಇಷ್ಟೇ: ಯಾವುದೇ ವ್ಯಕ್ತಿ ಒಂದೇ ಒಂದು Skill ಬಳಸಿ ಬಹಳ ದೂರ ಸಾಗಲಾರ. ಅನೇಕ ವಿದ್ಯೆಗಳನ್ನು ಮೈಗೂಡಿಸಿಕೊಂಡಿರಬೇಕು. ಅನೇಕ ವಿಷಯಗಳಲ್ಲಿ ಆಸಕ್ತನಾಗಿರಬೇಕು. ಮುಂದೆ ಇದು ಅವನನ್ನು ಕಾಪಾಡುತ್ತದೆ. ಇದು ಅಸಾಫ್ಟ್‍ವೇರ್ ಇಂಜಿನಿಯರುಗಳಿಗೂ ಹಾಗೂ ಎಲ್ಲರಿಗೂ ಅನ್ವಯವಾಗುವಂಥದ್ದು.

      ಕೆಲವರು ಒಂದೇ ಒಂದು ವಿಷಯದಲ್ಲಿ ಇರಬೇಕು ಅಂತ ಹಠ ಹಿಡಿದು ಮುಂದಿನ ಜೀವನದ ಏರುಪೇರುಗಳಿಗೆ ತಾವೇ ಕಾರಣವಾಗುತ್ತಾರೆ.

      Education is not just once. It is through out the life. We need to adapt to changes.

      ಇದು ಎಲ್ಲರಿಗೂ ಅನ್ವಯಿಸುತ್ತದೆ.

      Delete
    3. ಬಹಳ ಶ್ರಮ ತೆಗೆದುಕೊಂಡು ಹಲವನ್ನು ವಿವರಿಸಿದ್ದೀರಿ, ಅದಕ್ಕೆ ನಿಮ್ಮನ್ನು ಮೆಚ್ಚುತ್ತೇನೆ. ಆದರೆ ನನ್ನ ಇರಾದೆ ಇರುವುದು ಇವತ್ತು ಹೊಸ ಟೆಕ್ನಾಲಜಿ ಎನಿಸಿದ್ದು ನಾಳೆ ಹಳೆಯದಾಗೇ ಆಗುತ್ತದೆ. ಕೆಲವು ವೈದ್ಯರು ಎಂ.ಬಿ.ಬಿ.ಎಸ್ ಬಾಂಬೇ ಎಂದು ಹಾಕಿಕೊಳ್ಳುತ್ತಾರೆ. ಅಂದಕಾಲತ್ತಿಲ್ ಆ ಕಾಲೇಜಿಗೆ ಅಷ್ಟು ಡಿಮಾಂಡಿತ್ತು, ಇಂದು ಬೆಂಗಳೂರಿನಲ್ಲೇ ಅದಕ್ಕೂ ಚೆನ್ನಾಗಿ ಕಲಿಸುವ ತಂತ್ರಜ್ಞಾನ ಇದೆ ಅಲ್ಲವೇ? ಹಾಗಿರುವಾಗ ಪದವಿಯ ಬಗ್ಗೆ ಅವರು ಹಾಕಿಕೊಳ್ಳುವುದನ್ನು ಗಮನಿಸಿ ನಾನು ನನ್ನೊಳಗೇ ನಕ್ಕಿದ್ದಿದೆ.

      ಇನ್ನು ನಾನು ಹೇಳಹೊರಟಿದ್ದು ರೆಮ್ಯುನರೇಷನ್ ವಿಷಯ. ಅದನ್ನು ಗಮನಿಸಿ. ೧೯೯೨ ರಲ್ಲಿ ಯಾರೋ ಗಣಕಯಂತ್ರ ಖರೀದಿಸಿ ಬಳಸದೇ ಹಾಗೇ ಮುಚ್ಚಿಟ್ಟರು, ಅವರಿಗೆ ಬಳಸಲು ಗೊತ್ತಿರಲಿಲ್ಲ. ೧೯೯೮ರಲ್ಲಿ ಅವರು ಯಾರನ್ನೋ ಕೇಳಿದರು: "ನನ್ನಲ್ಲೊಂದು ಕಂಪ್ಯೂಟರ್ ಇದೆ, ಅದಕ್ಕೆ ಒಂದೂಕಾಲು ಲಕ್ಷ ತೆತ್ತಿದ್ದೇನೆ, ಯಾರನ್ನು ಕೇಳಿದರೂ ಈಗ ಅದಕ್ಕೆ ಬೆಲೆಯೇ ಇಲ್ಲ ಎನ್ನುತ್ತಾರೆ, ಏನುಮಾಡಲಿ?" ಎಂದು. ಗಣಕಯಂತ್ರಕ್ಕೆ ೯೨ರಲ್ಲಿ ಇದ್ದ ಬೆಲೆ ೯೮ರಲ್ಲಿ ಇರಲಿಲ್ಲ, ಹಾಗಂತ ಯಂತ್ರ ಇನ್ನೂ ಹೊಸದಾಗೇ ಇತ್ತು! ಸ್ವಲ್ಪ ಧೂಳು ಮುಸುಕಿತ್ತು. ಟೆಕ್ನಾಲಜಿ ಬದಲಾದುದರಿಂದ ಗಣಕಯಂತ್ರಕ್ಕೆ ಬೆಲೆಯಿರದೇ ಹೋಯ್ತು. ನೀವು ಹೇಳಿದ ವಿಷಯಗಳನ್ನು ನಾನೂ ಬಲ್ಲೆ, ಯಾಕೆಂದರೆ ನಾನೂ ನಿಮ್ಮೊಡನೆಯೇ ನಿಮ್ಮ ರಂಗದಲ್ಲೇ ಇದ್ದೇನೆ. ಆದರೆ ಟೆಕ್ನಾಲಜಿ ಕಲಿಯಲಾಗದ ವಿಷಯವಲ್ಲ, ಹಲವರು ಕಲಿತೇ ಕಲಿಯುತ್ತಾರೆ. ಬ್ರಹ್ಮಗಂಟು ಎನಿಸಿದ ಮೊನೊಪೊಲಿ ಟೆಕ್ನಾಲಜಿ ಈಗ ಯಾವುದೂ ಇಲ್ಲ! ಅದು ಈ ಕ್ಷೇತ್ರದಲ್ಲೊಂದೇ ಅಲ್ಲ, ಎಲ್ಲಾ ಕ್ಷೇತ್ರಗಳಲ್ಲೂ. ೪೦ ವರ್ಷಗಳ ಹಿಂದಿನ ಜಗತ್ತನ್ನು ಗಮನಿಸಿ, ಅಲ್ಲಿ ಪೈಪೋಟಿ ಬಹಳ ಕಮ್ಮಿ ಇತ್ತು, ಉದ್ಯಮಿಗಳು ಮಾಡಿದ್ದನ್ನೇ ಜನ ಸ್ವೀಕರಿಸಿದರು. ಆದರೆ ಇಂದು ಹಾಗಲ್ಲ, ಕ್ವಾಲಿಟಿ ಪಕ್ಕಾ ಇರಬೇಕು-ಬೆಲೆ ಕಮ್ಮಿ ಇರಬೇಕು. ಈ ಎರಡೂ ಇನ್ ವರ್ಸ್ಲಿ ಪ್ರೊಪೊರ್ಶನಲ್ ಎಂಬುದು ಇಲ್ಲಿನವರೆಗಿನ ಹೇಳಿಕೆಯಾಗಿತ್ತು. ಪೈಪೋಟಿ ಜಾಸ್ತಿಯಾದಾಗ, ಆ ಮಾತು ಸಿಂಧುವಾಗುವುದಿಲ್ಲ. ಲಾಭಾಂಶವನ್ನು ಜಾಸ್ತಿ ನಿರೀಕ್ಷಿಸಿದರೆ ಇನ್ಯಾರೋ ಆರ್ಡರ್ ತೆಗೆದುಕೊಂಡು ಮಾಡಿಕೊಡುತ್ತಾರೆ, ನಾವು ಕಣ್ಣುಕಣ್ಣು ಬಿಡ್ತಾ ಕೂತೇ ಇರಬೇಕಾಗುತ್ತದೆ. ಹೀಗಾಗಿ ಸಂಬಳದ ವಿಷಯದಲ್ಲಿ ಈ ಮುಂದೆ ಮೊದಲಿನ ಹಾಗೇ ನಡೆಯುವ ಸಾಧ್ಯತೆಗಳನ್ನು ನಾನು ಸಾರಾ ಸಗಾಟಾಗಿ ತೆಗೆದುಹಾಕುತ್ತಿದ್ದೇನೆ. ನಿಮಗೀಗ ಅರ್ಥವಾಗಿರಬಹುದು ಎಂದುಕೊಳ್ಳುತ್ತಿದ್ದೇನೆ.

      Delete
  19. Munde Baruttiruva, yavude technologygala Knowledge illade barediruva Blog.
    Better to concentrate on what you are doing right now, than becoming famous for wrong thing

    ReplyDelete
  20. ಭಟ್ರು ಸಾರ್
    ಬೋ ದಿನ ಆಗೋಗಿತ್ತು ನಿಮ್ ಬ್ಲಾಗ್ ನೋಡಿ. ಏನೋಪ್ಪಾ ನೀವು ಯಾವಾಗ್ಲೂವೇ ಕಾಪ್ಲಿಕೇಶನ್ ಇಚಾರಕ್ಕೆ ಕೈ ಹಾಕೋರು, ನೀವು ಯೋಳಿದ್ದು ಸರಿನೇ ಅಲ್ಲಾ ಅನ್ನೋರ್ದೊಂದು ದೊಡ್ಡ ಗುಂಪೇ ಇರುತ್ತೆ. ಆದ್ರೂ ನೀವು ಯೋಳಿದ್ರಲ್ಲಿ ಒಸಿ ಸತ್ಯ ಐತೆ. ಹಾಗಂತ ನಾನೂವೆ ಪೋರ್ತಿ ವೋಟು ನಿಮ್ಗೆ ಆಕಾಕಿಲ್ಲ. ಇನ್ನೈದು ವರ್ಸ್ ದಾಗೆ ಟೈಟಾನಿಕ್ ತರ ಸಾಪ್ತೇರು ಇಂಡಸ್ಟ್ರಿ ಮುಳುಗೇ ಹೋಗುತ್ತೆ ಅಂತೀರಲ್ಲ. ಈಗಷ್ಟೆ ಹೊಸ ಸುದ್ದಿ ಬನ್ದೈತೆ. ಇನ್ನೊಂದು ಹೊಸ IT ಪಾರ್ಕು ಬೆಂಗ್ಳೂರ್ ನಾಗೆ ಆಗುತ್ತಂತೆ ದೇವನಹಳ್ಳಿ ಕಡೆ ೨೮೦೦ ಎಕರೆ ನಲ್ಲಿ ಇದಾಗುತ್ತಂತೆ . ಅದ್ಕೆ ಸಿದ್ರಾಮಣ್ಣೊ ಹೂ ಅಂದವ್ನೆ. ಅದೇ ನ್ ಕಥೆನೊ ನಂಗೊತ್ತಿಲ್ಲಪ್ಪ ನಾನಂತೂ ಹಳ್ಳಿ ಹೈದ. ನಮ್ ದ್ಯಾವಣ್ನನ ಮನಿತಾವ ಹೊಗಿಬರುತ್ನಿ. ಅವ್ನೇನನ್ತಾನೊ ನೊಡುಮಾ.

    ReplyDelete
    Replies
    1. ಇದು ನಿಮಗೆ ಅರ್ತ ಆಯಾಕಿಲ್ಲ ಸಿವಾ , ಬುಟ್ಬುಡಿ ಸುಮ್ಕೆ ದ್ಯಾವಣ್ನನ ಮನಿತಾವ ಏನಾರ ಬಿದ್ದೈತ ನೋಡಿ-ಇಸ್ಕಳಿ, ಬಾಳಾ ಜನೀಕೆ ಕೊಟ್ಟವರೆ ಅಂತ ಕೇಳೀನಿ.

      Delete
  21. ಇಲ್ಕೇಳಪ್ಪ ಭಟ್ಟಣ್ಣ ---- ನನ್ನೇನು ಗುಗ್ಗು ಅಂದ್ಕೊಂಡ್ಯಾ ಸುಮ್ಕಿರಲೇ ತಮ್ಮಾ ನಾನೂ ಒಸಿ ತಿಳ್ಕೊಂದಿವ್ನಿ, ನೀನೊಬ್ನೆ ಬುಧ್ಯಂತ ಅಂತ ತಿಳ್ಕೊಬ್ಯಾಡಾ, ಒಸಿ ಅತ್ಲಾಗೆ ಇತ್ಲಾಗೆ ನೋಡ್ಕೊಂಡು ಮಾತ್ನಾಡು. ಆಮ್ಯಾಕೆ ಸಿಗ್ತಿವ್ನಿ. ಸಂದಾಗಿರು

    ReplyDelete
    Replies
    1. ಹೈದಣ್ಣಾ, ಯಾಕಪ್ಪಾ ಕಾಡ್ತೀಯಾ? ಹಿಂದೊಮ್ಮೆ ನಿಲುಮೆಯಲ್ಲಿ ಕಾಡಿದ್ಯಲ್ಲ ಗೊತ್ತಿಲ್ಲ ಅಂದ್ಕೊಂಡ್ಯಾ? ನಾವು ಟೆಕ್ನಾಲಜಿಗಳ ಮಾತಾಡುತ್ತಿದ್ದೇವೆ, ಒಸಿ ನೋಡು, ನೀನೂ ಸಾಫ್ಟ್ ಚೇರ್ ಎಂಜಿನೀರ್ ಆಗೀವಂತೆ ಕಣೋ!! ಮತ್ತೆ ಕಿತಾಪತಿ ಮಾಡ್ಬ್ಯಾಡ ಆಯ್ತಾ? ಜಾಣ...

      Delete
  22. I feel this article is written keeping one aspect of software industry and generalised to entire industry.
    Few points:
    1. Salaries for right skilled people in Software industry is doubling and not decreasing at all.
    2. There is a huge demand for right skilled people, which majority of the companies are not able to hire.
    3. Successful software companies are not making money by competition among others. Instead, by providing solutions to problems of life. Yes, in some cases problems are created than it actually existed.
    4. As I said in of my posts in this thread, there is a huge bunch of problems to solve in this world using software and innovations related to it. Today, there are so many doctors around using high technological methods to diagnose and treat patients. Software has helped them a big deal and there is much more to do if you consider health industry itself. Like wise, there are so many problems around the globe, which can be solved with the help of right technology and software would help in many cases. So as long as problems are there, you need to find solutions. One way to provide solutions is through right Software bundled with a hardware/machine.
    Innovation of machine happened to help human to do more work in short period of time and increase productivity. Accomplish more in ones life span and evolve further. They were not invented to make humans lazy. Now, if some people are lazy due to software/machines, then its their mistake and its not good to generalize such things.
    If I were you, I would try to see how we can increase the skill sets of the people who are graduating from Indian Colleges? How can we make them think and find solutions for various problems around.
    So, please don't take any offence. Its purely your perception about this Industry and not the reality indeed. Reality is that there is much more to do. Most of these companies are trying to manage show with existing skill and catering to existing demands. Since, too many people around are trying to provide solutions for a single problem, we are seeing a bit of slowness. There are few companies who have diversified their area of interests and trying to cater to various demands. However, they are all again limited by the skilled engineers. There is a big gap between requirements and availability in the area of skills. Unfortunately, our engineering colleges where computer sciences are learnt, they don't teach how to think to solve a problem. They are teaching c, C++, Java algorithms etc. Yes, these are basic needs (like ABCD in english). It's time that these colleges teach how to use them solve a problem or at least kindle that fire in each of these engineers to identify a problem that can be solved using what he/she learning. In USA, many of these companies start in the College itself. Students get equipped to take up a problem and find solutions when they get graduated. Here, since our old days, we are good at 'mugging'. I know I'm generalized bit more, but that's mostly the case.
    Its matter of skilled engineers and not opportunities/competitions for Software Industry.
    That's it.

    I m writing all these because I m seeing a wrong perception is being built about the overall industry. I m not writing this because I m hurt by your views about my Industry. Personally speaking, it gave me an opportunity to think about what you have written and see why you have expressed in this way. I wanted to pin point actual problem and not the perception expressed in this article. What ever you have written are side effects of the problem and not the problem itself.
    Ignorance is bliss, but spreading it is not.

    ReplyDelete
    Replies
    1. Skill-set & demand are two phases which you can treat them separately. I may be a best cook at my disposal, if there is no demand or low demand for cooking work, I am a not getting paid what I am suppose to get paid, I am paid according to market trends irrespective of my skills-set. I agree that there are researches for new products, accordingly there are innovations in software, but the boom won’t be of this much. When it sells better the scale would be better and vice-versa. At a point it reaches to a low level where no one gets nothing out of the job! Or only hand-mouth type remuneration may be paid.

      Many a times we fail to adjudge what is wrong & what is right, the right thing what we have done is taking-up software jobs-a midst, the right thing what we can do is, keeping the options open to quit the type of job to nurture ourselves in other specialties where such 'peons' or the like can't even approach with their merit! Article is a warning for every Sr software professional to get ready. Hope you understand it!!

      Delete
  23. My response mightbe too old for this article. But still I am overwhelmed by the response for this article which more than the article itself.
    One thing I want to say is though I am a post graduate, I am quite illiterate in this area. But I would like to say one thing. Software people are not arrogant as before(if it is a fact!). Every person who graduates strives hard to look for a job. The income of an average engineer is not quite promissing now when compared with other fields.
    I have listened to my engineer friends who express both positive and negative sides of this job. Thus I personally felt it is just the way they perceive. Even if it a recession, a potential engineer can survive his job.
    Unfortunately most people work just for a living but or the love of work. This attitude makes lot of differcece
    However I dont know much about these aspects. So thanks for both the points of view. I am even happy that software engineers get this much of time to read and comment. So nice.

    ReplyDelete
  24. My response mightbe too old for this article. But still I am overwhelmed by the response for this article which more than the article itself.
    One thing I want to say is though I am a post graduate, I am quite illiterate in this area. But I would like to say one thing. Software people are not arrogant as before(if it is a fact!). Every person who graduates strives hard to look for a job. The income of an average engineer is not quite promissing now when compared with other fields.
    I have listened to my engineer friends who express both positive and negative sides of this job. Thus I personally felt it is just the way they perceive. Even if it a recession, a potential engineer can survive his job.
    Unfortunately most people work just for a living but or the love of work. This attitude makes lot of differcece
    However I dont know much about these aspects. So thanks for both the points of view. I am even happy that software engineers get this much of time to read and comment. So nice.

    ReplyDelete