ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, April 28, 2012

ಐದು ಕಾಲಿನ ಮಂಚ ಕುಂಟ ಮಲಗಿದ್ದ !

 
ಅಖಂಡ ಭಾರತದ ಚಿತ್ರ ಕೃಪೆ: ಅಂತರ್ಜಾಲ.
ಐದು ಕಾಲಿನ ಮಂಚ ಕುಂಟ ಮಲಗಿದ್ದ !

ಮೂರು ಎನ್ನುವುದಕ್ಕಿಂತ ಎರಡು ಮತ್ತೊಂದು ಎನ್ನುವುದೇ ಸರಿ ಯಾಕೆಂದರೆ ಇಲ್ಲಿರುವ ವಿಷಯಗಳೇ ಹಾಗಿವೆ. ಜಾಸ್ತಿ ಕಾಲಹರಣ ಮಾಡುವುದಕ್ಕಿಂತ ನೇರವಾಗಿ ನಿಮ್ಮನ್ನು ಅಡಿಗೆಮನೆಗೇ ಕರೆದೊಯ್ದರೆ ಅಲ್ಲಿರುವ ಸಾಮಗ್ರಿ, ಅಡಿಗೆ ತಯಾರಾಗುತ್ತಿರುವ ಕ್ರಮ, ಅಡಿಗೆ ಮಾಡುತ್ತಿರುವವರ ಪ್ರವರ, ಅಡಿಗೆ ಮನೆಯ ಗಬ್ಬು ಎಲ್ಲವೂ ಕಾಣುವುದರಿಂದ ನನ್ನ ಕೆಲಸ ತುಸು ಕಮ್ಮಿಯಾಗುತ್ತದೆ.

ಅಡಿಗೆಮನೆ ಎಂದ ತಕ್ಷಣ ನೆನಪಾಯ್ತು: "ಮೊನ್ನೆ ಒಂದು ವಾರಪತ್ರಿಕೆಯ ಸಂಪಾದಕ ಬರೆದಿದ್ದಾನೆ-ನಾವು ದನಾನಾರು ತಿಂತೀವಿ ಕುರೀನಾರು ತಿಂತೀವಿ ಅದು ನಮ್ಮ ಜನ್ಮಸಿದ್ಧ ಹಕ್ಕು-ನಮ್ಮ ಆಹಾರ, ಹಕ್ಕನ್ನು ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇರುವುದಿಲ್ಲ. ನನ್ನ ಅಮ್ಮ ೮೦ ಕೋಳಿ ಸಾಕಿದ್ದಳು- ಅವುಗಳಿಗೆ ಹೊತ್ತಿನಲ್ಲಿ ಆಹಾರ ಹಾಕಿ ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಳು. ಕತ್ತರಿಸುವಾಗಲೂ ಅವುಗಳಿಗೆ ನೋವಾಗದಂತೇ ಕತ್ತರಿಸುತ್ತಿದ್ದಳು!" --ಈ ಮಹಾಶಯನ ಶಬ್ದಗಳು ಅವನಿಗೇ ಅರ್ಥವಾಗುವುದಿಲ್ಲವೇನೋ !! ಯಾವ ಜೀವಿಗೆ ತನ್ನ ಶರೀರದ ಭಾಗವನ್ನು ಕತ್ತರಿಸುವಾಗ ನೋವಾಗದೇ ಇದ್ದೀತು ? ಎಂಥಾ ಸಂಭಾವಿತ ಮಾತು ಆ ಸಂಪಾದಕನದು. ಇವತ್ತಿನ ಕಾಲಮಾನವೇ ಹಾಗೆ. ಒಂದುಕಾಲದಲ್ಲಿ ತಲ್ವಾರ್ ಹಿಡಿದವರೆಲ್ಲಾ ಇಂದು ಪತ್ರಿಕಾಕರ್ತರಾಗಿದ್ದಾರೆ; ಬಾಯಿಗೆ ಬಂದಿದ್ದನ್ನು ಹೇಳುತ್ತಾರೆ. ವಿಷಯಗಳೇನೂ ಸಿಗದಾಗ ಅಲ್ಪಸಂಖ್ಯಾತರು, ಗೋಹತ್ಯಾ ನಿಷೇಧ, ಅಯೋಧ್ಯೆಯ ರಾಮಮಂದಿರ, ಹಿಂದೂ ಧರ್ಮ, ಸಂಘಪರಿವಾರ-ಇವುಗಳಲ್ಲಿ ಯಾವುದಾದರೊಂದನ್ನು ಆಯ್ದುಕೊಂಡು ಬರಿದೇ ಕುಯ್ಯುತ್ತಾರೆ, ದೇಶದಲ್ಲೇ ಹುಟ್ಟಿದ್ದರೂ ದೇಶದ್ರೋಹಿಗಳಂತೇ ಬದುಕುತ್ತಾರೆ. 

ಮಾಂಸಾಹಾರವನ್ನು ಕೆಲವು ದಿನಗಳಲ್ಲಿ ನಿಷೇಧಿಸಬೇಕು ಎಂದು ಸರಕಾರ ಹೊರಡಿಸಿದ ಕಾಯ್ದೆಗೆ ಅವರ ಅಡ್ಡಿ. " ನಾವೆಲ್ಲಾ ಮೊದಲು ೬ ತಿಂಗಳಿಗೋ ಮೂರು ತಿಂಗಳಿಗೋ ಮಾಂಸ ತಿಂತಾ ಇದ್ವಿ, ಈಗ ದಿನಾ ತಿಂತೀವಿ" ಎನ್ನುವ ಆತನ ಯಾರೋ ಮಿತ್ರ ಬ್ರಾಹ್ಮಣನಂತೆ ಆತ ಅಲ್ಲೆಲ್ಲಿಗೋ ಹೋಗಿಬರುವಾಗ " ಸಾವಿರಾರು ವರ್ಷಗಳಿಂದ ನಮ್ಮನ್ನೆಲ್ಲಾ ನೀವು ಇದರಿಂದ ವಂಚಿಸಿಬಿಟ್ಟಿದ್ದೀರಿ ಈಗಾದರೂ ತಿನ್ನಲು ಬಿಡಿ" ಎಂದು ಮಾಂಸ ತಿನ್ನಲು ಹೋದನಂತೆ, ಹೋಗಲಿ ಬಿಡಯ್ಯಾ ಆತ ನಿನ್ನ ಭಕ್ತ, ನಿನ್ನ ಸಂಗದಿಂದ ಹಾಗೆ ಹೋಗಿದ್ದಾನೆ, ಆದರೆ ಎಲ್ಲರೂ ಹೋದರೆ? ಇವತ್ತು ಮಾಂಸಾಹಾರ ಜಾತಿಯಿಂದ ಗುರ್ತಿಸಲ್ಪಡುವುದಿಲ್ಲ ಎಂಬ ಕಿಂಚಿತ್ ಬುದ್ಧಿಯೂ ನಿನಗೆ ಬೇಡವೇ ?  ಅಪರೂಪಕ್ಕೆ ತಿನ್ನುತ್ತಿದ್ದ ನೀನು ದಿನಾ ತಿನ್ನಲು ಆರಂಭಿಸಿರುವುದು ನೀನು ಯಾವ ಮಟ್ಟಕ್ಕೆ ಸಾಗುತ್ತಿರುವೆ ಎಂಬುದರ ಬಗ್ಗೆ ತಿಳಿಸುತ್ತದೆಯಲ್ಲವೇ?  ದಿನಬೆಳಗಾದರೆ ನಿನಗೂ ನಿನ್ನ ಮನೆ,ಮಕ್ಕಳು-ಮರಿಗಳಿಗೂ  ಹಾಲನ್ನು ನೀಡುವ ಗೋವನ್ನು ತಿನ್ನುವುದು ಸರಿಯೆಂದು ವಾದಿಸುವುವಾಗ ಜೀವಗಳಿಗೆ ಆಗುವ ನೋವಿಗೆ ನಿನ್ನಲ್ಲಿ ಬೆಲೆಯಿಲ್ಲ ಎಂಬುದು ಗೊತ್ತಾಗುತ್ತದೆ. ರಕ್ತಪಾತವನ್ನೇ ಕಂಡು ಅದನ್ನೇ ಉಂಡ ಮನಸ್ಸಿಗೆ ಅದು ಹೇಯ ಎನಿಸುವುದೇ ಇಲ್ಲ! ಆದರೂ ಸಮಾಜದಲ್ಲಿ ಮದಿರೆಗೂ ಮಧುರಾಮೃತಕ್ಕೂ ವ್ಯತ್ಯಾಸ ಇದೆ ಎಂಬುದನ್ನು ನೀನು ಅರಿಯಬೇಕಲ್ಲವೇ ? 

ಒಮ್ಮೆ ಬೆಂಗಳೂರಿನ ಶಿವಾಜಿನಗರದಲ್ಲಿ ನಾನು ಯಾವುದೋ ಕೆಲಸದ ನಿಮಿತ್ತ ಓಡಾಡುತ್ತಿದ್ದೆ. ಗಬ್ಬು ಗಲೀಜು ಮಾಂಸಾಹಾರದ ಹೋಟೆಲ್ ಗಳ ಹಿಂಭಾಗದಲ್ಲಿ ಅನಿವಾರ್ಯವಾಗಿ ತೆರಳುವ ಪ್ರಸಂಗ ಬಂತು. ಅಲ್ಲಿ ನೋಡಿದರೆ ದೇವನಿ ತಳಿಯ ಬಿಳಿಯ, ಅತ್ಯಂತ ಸುಂದರ ಹೋರಿಗರುವನ್ನು ಕಟ್ಟಿಹಾಕಿದ್ದರು. ಬಿಸಿಲು ಹೇಗಿತ್ತೆಂದರೆ ಯಾರೂ ಅಂತಹ ಬಿಸಿಲಲ್ಲಿ ನಿಲ್ಲಲಾರರು. ಯಾರೋ ಒಬ್ಬಾತ ಹುಡುಗ ಅದಕ್ಕೆ ಅದೇನನ್ನೋ ತಿನ್ನಲು ಕೊಟ್ಟ. ಅದು ತಿನ್ನುತ್ತಾ ಇತ್ತು. ಜಾಸ್ತಿ ಓಡಾಡಲೂ ಹಗ್ಗ ಉದ್ದವಿರಲಿಲ್ಲ. ಬಹುಶಃ ಮಾರನೇದಿನ ಅದು ಅನೇಕ ಹೊಟ್ಟೆ ಸೇರಿರುತ್ತದೆ!  ಆ ಕ್ಷಣದಲ್ಲಿ ಆ ಕರುವಿಗೆ ತನಗೆ ಘಟಿಸಬಹುದಾದ ನೋವಿನ ಪರಿವೆಯಿತ್ತೇ? ಇದ್ದರೂ ಕ್ರೂರ ನರರಾಕ್ಷಸರ ಕೈಲಿ ಸಿಕ್ಕಮೇಲೆ ಅದು ತಾನೇ ಏನುಮಾಡಲಾದೀತು. ಹಾಗೆ ನೋಡಿದರೆ ಮೊಲ, ಕುರಿ, ಕೋಳಿಗಳೆಲ್ಲವೂ ನೋವನ್ನು ಅನುಭವಿಸದೇ ಸತ್ತುಹೋಗುತ್ತವೇನು? ಮಾಂಸಾಹಾರ ಭಕ್ಷಿಸುವುದರಿಂದ ಇಂದ್ರಿಯಗಳಮೇಲಿನ ಹತೋಟಿ ಕಮ್ಮಿಯಾಗುತ್ತದೆ. ಪಂಚೇಂದ್ರಿಯಗಳು ತಮ್ಮಿಷ್ಟದಂತೇ ವರ್ತಿಸಲು ತೊಡಗುತ್ತವೆ. ಅದಕ್ಕೇ ಅದನ್ನು ಆದಷ್ಟೂ ಕಮ್ಮಿ ಬಳಸಬೇಕು ಎಂಬುದು ನಮ್ಮ ಸಲಹೆಯಾದರೆ ಎಗರಾಡುವ ಆ ಸಂಪಾದಕನನ್ನು ನೋಡಿ, ವಿದ್ಯಾಭೂಷಣರು ಹಾಡಿದ ’ಐದು ಕಾಲಿನ ಮಂಚ ಕುಂಟ ಮಲಗಿದ್ದ’ ಹಾಡು ನೆನಪಾಯ್ತು, ನೀವೂ ಸ್ವಲ್ಪ ಕೇಳಿಸಿಕೊಳ್ಳಿ, ಅರ್ಥಮಾತ್ರ ನನ್ನಲ್ಲಿ ಕೇಳಬೇಡಿ-ಅದು ನೇವೇ ಚಿಂತಿಸಿ ಗಳಿಸಬೇಕಾದದ್ದು ಎಂಬ ಕರಾರಿನ ಮೇಲೇ ನಿಮಗೆ ಹಾಡು ಕೇಳಿಸುತ್ತಿದ್ದೇನೆ! ಅಂದಹಾಗೇ ಇಂದಿನ ಕೆಲವು ಘಟನೆಗಳು ಈ ಹಾಡಿನ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತವೆ ಎಂಬುದಷ್ಟನ್ನು ಹೇಳಬಲ್ಲೆ!! 
 ೧. ಪಾಕಿಗಳು ಸುಧಾರಿಸುವುದಿಲ್ಲ

ಉಗ್ರ ಕಸಬ್ ವರ್ಷಗಟ್ಟಲೆ ರಾಜೋಪಚಾರ ಪಡೆದು ನಮ್ಮ ಶಿರಸಿ ಮಾರಿಕೋಣ ಕೊಬ್ಬಿದಹಾಗೇ ಕೊಬ್ಬಿದ್ದಾನೆ! ಆತನಿಗೆ ಸರ್ವೋಚ್ಚನ್ಯಾಯಾಲಯ ಜೀವದಾನ ನೀಡಲೂ ಮುಂದಾಗಬಹುದು, ಯಾಕೆಂದರೆ ಭಾರತೀಯರಾದ ನಾವು ಯಾರು ಏನೇ ಮಾಡಿದರೂ ಸಹಿಸಿಕೊಳ್ಳುವವರೇ ಹೊರತು ಅವರಿಗೆ ಬುದ್ಧಿಕಲಿಸುವ ಬುದ್ಧಿ ನಮ್ಮಲ್ಲಿಲ್ಲ. ನಾನು ಬುದ್ಧಿಬಲ್ಲಾದಲಾಗಾಯ್ತು ನೋಡುತ್ತಲೇ ಇದ್ದೇನೆ: ಪಾಕಿಗಳು ಬದಲಾಗಿಲ್ಲ, ಬದಲಾಗಿ ಇಡೀ ಜಗತ್ತಿನಲ್ಲಿ ಉಗ್ರಗಾಮಿಗಳು ಹುಟ್ಟುವುದು ಮತ್ತು ಆಶ್ರಯ ಪಡೆಯುವುದು ಪಾಕಿಸ್ತಾನದಲ್ಲಿ ಎಂದು ಹೇಳಲೇಬೇಕಾಗಿದೆ. ಆರ್ಥಿಕವಾಗಿ ಸ್ವಾವಲಂಬನೆ ಇದ್ದಿದ್ದರೆ ಇಡೀ ಜಗತ್ತನ್ನೇ ನಡುಗಿಸುವ ರಕ್ಕಸರೇ ತುಂಬಿರುವ ಪಾತಕಿಗಳಸ್ಥಾನಕ್ಕೆ ಭಾರತದಲ್ಲಿರುವ ದೇಶದ್ರೋಹಿಗಳ ಅಪರಿಮಿತ ಸಹಕಾರ ಇದೆ. ಇಲ್ಲಿ ದೊಡ್ಡ ಹೂಸು ಬಿಟ್ಟರೂ ಅದು ಪಾಕಿಸ್ತಾನಕ್ಕೆ ಕೇಳಿಸುತ್ತದೆ! ಪಾಕಿಸ್ತಾನ ಕ್ರಿಕೆಟ್ ನಲ್ಲಿ ಗೆದ್ದರೆ ಇಲ್ಲಿರುವ ಪಾತಕಿಗಳು ಪಟಾಕಿ ಹಾರಿಸುತ್ತಾರೆ! ಕಳುಹಿಸಿದವರು ದೂರವಾಣಿ ಕರೆಯ ವಿವರಣೆ ಸಮೇತ ಸಿಕ್ಕಿಬಿದ್ದು, ನೇರವಾಗಿ ತಾವೇ ಹೊಣೆ ಎಂದಮೇಲೂ, ತಾನು ನಿರಪರಾಧಿ ಎಂಬ ಕಸಬ್ ನ ಮಾತಿಗೆ ಏನೆನ್ನಬೇಕು? ಹಾಗೆ ಯಾರಮೇಲೋ ದಾಳಿಮಾಡುವಾಗ ತಾನು ಏನು ಮಾಡುತ್ತೇನೆ ಎಂಬ ಪರಿವೆ ಆತನಿಗಿರಲಿಲ್ಲವೇ? ಮಾಡಬಾರದ ಕೆಲಸ ಮಾಡಿದವರಿಗೆ ತಕ್ಕ ಪ್ರಮಾಣದ ಶಿಕ್ಷೆ ವಿಧಿಸುವುದು ರಾಜಧರ್ಮವಾಗುತ್ತದೆ; ಪ್ರಸಕ್ತ ಕಸಬ್ ಗೆ ಜೀವಾವಧಿ ಶಿಕ್ಷೆ ವಿಧಿಸಿ ಸಾಮಾನ್ಯ ಕಾರಾಗ್ರಹದಲ್ಲಿಟ್ಟು ದುಡಿಸಬೇಕು ಮತ್ತು ನಂತರ ಆತನನ್ನು ಗಲ್ಲಿಗೇರಿಸಬೇಕು-ಇದನ್ನು ನೋಡಿದ ಪಾಕಿ ಯುವಕರು ಮತ್ತೆ ಇಂತಹ ಕೆಲಸಕ್ಕೆ ಮುಂದಾಗಬಾರದಂತಿರಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ. ಮೂರೂ ಹೊತ್ತು ಮಾಂಸಾಹಾರವನ್ನೇ ತಿಂದು ಮನುಷ್ಯತ್ವಕ್ಕೆ ಬೆಲೆಯನ್ನೇ ಕಳೆದ ಜನ ಪಾಕಿಗಳು.


೨. ಹೊಲಗೇಡಾದ ವಿಶ್ವವಿದ್ಯಾಲಯಗಳು

ಸುಮಾರು ಘಟನೆಗಳಾದವು, ಆಗುತ್ತಲೇ ಇವೆ. ವಿಶ್ವವಿದ್ಯಾಲಯಗಳಲ್ಲಿ ಕೆಲಸಮಾಡುವ ಮೇಲ್ದರ್ಜೆಯ ಶಿಕ್ಷಕರಲ್ಲಿ, ಮಹಾಮಹೋಪನ್ಯಾಸಕರಲ್ಲಿ, ಅಧ್ಯಾಪಕರಲ್ಲಿ ಅನೇಕರು ಕಚ್ಚೆಹರುಕರಾಗಿದ್ದಾರೆ. ಹಿಂದೆಲ್ಲಾ ವಿಶ್ವವಿದ್ಯಾಲಯಗಳ ಆ ಸ್ಥಾನಕ್ಕೆ ಗೌರವವೂ ಇತ್ತು; ಅದನ್ನು ಅಲ್ಲಿರುವ ಜನ ಜತನಗೊಳಿಸಿದ್ದರು-ತಮ್ಮ ಕಾಮನೆಗಳನ್ನು ಹಿಡಿತದಲ್ಲಿಟ್ಟಿದ್ದರು. ವಿದ್ಯೆಗೆ ವಿನಯವೇ ಭೂಷಣ ಎಂಬ ಮಾತಿನಂತೇ ನಯ-ವಿನಯ ರೀತಿ-ನೀತಿಗಳಿದ್ದವು. ಇವತ್ತು ಲಾಬಿಮಾಡಿ ಸ್ಥಾನಗಳಿಸುವವರೇ ಜಾಸ್ತಿ ಇರುವುದರಿಂದ ಕೆಲಸವಿಲ್ಲದೇ ಖಾಲೀ ಕುಳಿತು ತಿಂಗಳಿನ ತಾರೀಕಿಗೆ ಸರಿಯಾಗಿ ಸಂಬಳ ಪಡೆಯುವ ಜನ ಸಂಶೋಧನಾ ವಿದ್ಯಾರ್ಥಿನಿಯರು ಸಿಕ್ಕರೆ ಸ್ವಲ್ಪ ಮಜಾ ಪಡೆಯುವ ಹುನ್ನಾರದಲ್ಲಿರುತ್ತಾರೆ! ಕೈಗೊಳ್ಳುವುದು ಸಂಶೋಧನೆ ಎಂದಮೇಲೆ ಮಾರ್ಗದರ್ಶಕರು ಮತ್ತು ಸಂಶೋಧಕರ ಪರಸ್ಪರ ಭೇಟಿ, ಸಂದರ್ಶನ ಇವೆಲ್ಲಾ ಇರುವುದೇನೋ ಸರಿ, ಭೇಟಿಯಲ್ಲೇ ತಮಗೆ ಇಂಥದ್ದನ್ನು ಕೊಟ್ಟರೆ ನಿನಗೆ ಸಹಕಾರ ನೀಡುವುದಾಗಿಯೂ ಇಲ್ಲದಿದ್ದರೆ ಅದು ಹೇಗೆ ಪೂರ್ಣಗೊಳಿಸುತ್ತೀಯೋ ನೋಡುತ್ತೇವೆ ಎಂಬ ಕಲಿಪುರುಷರ ಬುದ್ಧಿಜೀವಿ ವೇಷದ ಹಿಂದೆ ಅರ್ಜುನಸನ್ಯಾಸಿಯಂತಹ ಹಸಿದ ಹುಲಿಯೊಂದು ಕಾದುಕುಳಿತಿರುತ್ತದೆ. ಅನೇಕರು ಇಂತಹ ತೃಷೆಗಳಿಗೆ ಬಲಿಯಾಗಿಯೂ ಸುಮ್ಮನಿದ್ದಾರೆ, ಕೆಲವರು ಮಾತ್ರ ಕಚ್ಚೆಹರುಕರನ್ನು ಬೀದಿಗೆ ಎಳೆದಿದ್ದಾರೆ! ಇನ್ನೂ ಯಾವ ಯಾವ ವಿಶ್ವವಿದ್ಯಾಲಯಗಳಲ್ಲಿ ಅದೆಷ್ಟು ಜನ ಇಂತಹ ಕಚ್ಚೆಹರುಕ ಕಿರಾತಕರು ಇದ್ದಾರೋ; ಸಂಗತಿ ಇನ್ನೂ ಹೊರಬರಬೇಕಾಗಿದೆ.  

೩. ಭಾರತದ ಆರ್ಥಿಕಸ್ಥಿತಿ ನಿಜಕ್ಕೂ ಆತಂಕಕಾರಿಯೇ ? 

ಭಾರತದಲ್ಲಿ ಹೇರಳವಾದ ಸಂಪತ್ತಿದೆ; ಅದು ಎಲ್ಲರಿಗೂ ಗೊತ್ತು! ಬಡವ-ಶ್ರೀಮಂತರ ಅಂತರ ಮಾತ್ರ ಕಮ್ಮಿಯಾಗುವುದಿಲ್ಲ ಯಾಕೆಂದರೆ ಹಣ ವಿದೇಶೀ ಖಜಾನೆಗಳಲ್ಲಿ ಕೊಳೆಯುತ್ತಿದೆ. ಅಮೇರಿಕಾದಂತಹ ದೇಶಗಳು "ನೀವು ಆರ್ಥಿಕವಾಗಿ ದುರ್ಬಲರು" ಎಂದಮಾತ್ರಕ್ಕೆ ನಾವು ಹೆದರಬೇಕಾಗಿಲ್ಲ. ಆದರೆ ಒಂದು ಮಾತು ಸತ್ಯ: ಪಾಕಿಗಳು ಹೇರಳವಾಗಿ ಖೋಟಾನೋಟುಗಳನ್ನು ಭಾರತದಲ್ಲಿ ಚಲಾವಣೆಗೆ ಬಿಟ್ಟಿದ್ದಾರೆ. ಹಣದುಬ್ಬರ ಜಾಸ್ತಿಯಾಗಿ ನಿಗದಿತ ಮಟ್ಟಮೀರಿ ಹತೋಟಿ ಬರದಾಗ ದೇಶದ ಅರ್ಥವ್ಯವಸ್ಥೆ ಕುಸಿದುಹೋಗುತ್ತದೆ. ಅದನ್ನು ಸಾಧಿಸಲೆಂದೇ ಪಾಕಿಗಳು ಆ ಮಾರ್ಗದಲ್ಲೂ ದೊಡ್ಡಯೋಜನೆ ಹಾಕಿಕೊಂಡು ದೇಶದ ನಾಲ್ಕೂ ದಿಕ್ಕುಗಳಲ್ಲಿ ಪ್ರಸಾರವಾಗುವಂತೇ ಖೋಟಾನೋಟುಗಳನ್ನು ಚೆಲ್ಲಿದ್ದಾರೆ. ಕ್ಷಣಿಕ ಆಮಿಷಕ್ಕೆ ಬಲಿಯಾದ ದೇಶದ್ರೋಹಿಗಳು ಪಾಕಿಗಳ ಪ್ರತಿನಿಧಿಗಳಾಗಿ ನಡೆಸುತ್ತಿರುವ ಈ ಕೆಲಸ, ಸರಕಾರವೇ ನಡೆಸುವ ಯಾವ ಘನಕಾರ್ಯಗಳಿಗಿಂತಲೂ ಉತ್ತಮವಾಗಿ ನಡೆಯುತ್ತಿದೆ ಎಂದರೆ ಯಾರೂ ಆಶ್ಚರ್ಯಪಡಬೇಕಿಲ್ಲ! ಮನುಷ್ಯನೇ ತಯಾರಿಸಿದ ವಸ್ತುಗಳ ಪ್ರತಿರೂಪಗಳನ್ನು ಮತ್ತೊಂದು ಮಾನವ ಗುಂಪು ತಯಾರಿಸಲು ಸಾಧ್ಯವಿಲ್ಲವೇ?  ಹಣದುಬ್ಬರ ನಿಯಂತ್ರಿಸಬೇಕೇ? ದೇಶದ್ರೋಹಿಗಳ ಗಣತಿ ನಡೆಯಬೇಕು, ಇಲ್ಲಿ ಮಾರುವೇಷಗಳಲ್ಲಿ ಹುದುಗಿರುವ ಪಾಕಿಗಳ ಮತ್ತು ಅವರ ಗೂಢಚರ್ಯೆಯ ಕೆಲಸಗಳ ಬಣ್ಣ ಬಯಲಾಗಬೇಕು, ಉಗ್ರಗಾಮಿಗಳ ತಂಡವೂ ಸೇರಿದಂತೇ ಮತಾಂಧ ಪಾಕಿಗಳ ಸಂಪೂರ್ಣ ವಿನಾಶವಾಗಬೇಕು, ಬ್ರಷ್ಟ ಮತ್ತು ವೋಟ್ ಬ್ಯಾಂಕಿಂಗ್ ರಾಜಕಾರಣಿಗಳ ದಮನವಾಗಬೇಕು--ಇವಿಷ್ಟು ಸಾಧ್ಯವಾದರೆ ಭಾರತದ ಭವಿಷ್ಯ ಉಜ್ವಲವಾಗುತ್ತದೆ. ನಮ್ಮಲ್ಲಿರುವ ದ್ರೋಹಿಗಳಿಗೆ ಮನೋ ನಿಗ್ರಹವಿಲ್ಲ; ಅರ್ಧರಾತ್ರಿಯಲ್ಲೇ ಐಶ್ವರ್ಯಗಳನ್ನು ಪಡೆಯುವಾಸೆಗೆ ಬಲಿಯಾಗಿ ಪಾಕಿಗಳು ತೋರುವ ಹುಲ್ಲನ್ನು ನೋಡುತ್ತಾ ಮುನ್ನಡೆಯುವ ಪಶುವಾಗಿದ್ದಾರೆ. ಅಣ್ಣಾ ಹಜಾರೆಯಂತಹ ದೇಶಭಕ್ತರ ದಂಡು ಹಳ್ಳಿಹಳ್ಳಿ, ಮಜರೆ ಮಜರೆಗಳಲ್ಲಿ ಕೆಲಸಮಾಡಬೇಕಾದ ಕಾಲ ಇದಾಗಿದೆ; ಪ್ರತಿಯೊಬ್ಬ ಭಾರತೀಯ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಕಾಲ ಇದಾಗಿದೆ!

೪. ಶಾಸಕರು, ಮಂತ್ರಿಗಳು ವಿಧಾನಸಭೆಯಲ್ಲೇ ಬ್ಲೂ ಫಿಲಂ ನೋಡಿದರು!

ನೋಡುತ್ತಾರೆ ಸ್ವಾಮೀ, ನೋಡುವುದಲ್ಲ ಹೀಗೇ ಬಿಟ್ಟರೆ ಅಲ್ಲೇ ನೀಲಿ ಚಿತ್ರಗಳನ್ನು ತಯಾರಿಸಲೂ ಅವರುಗಳು ಮುಂದಾಗಬಹುದು; ಯಾಕೆಂದರೆ ನಮ್ಮ ಸಂವಿಧಾನದಲ್ಲಿರುವ ಲೋಪ ಇದಾಗಿದೆ: ಚುನಾವಣೆಗೆ ನಿಲ್ಲುವವನು ಪಾತಕಿಯಾಗಿಲೀ, ಹುಚ್ಚನಾಗಲೀ ಆಗಿರಬಾರದು ಎಂದಿದೆ. ಆದರೆ ಇವತ್ತಿನ ದಿನ ಚುನಾವಣೆಗಳಿಗೆ ಸ್ಪರ್ಧಿಸುವವರಲ್ಲಿ ಪಾತಕಿಗಳೇ ಹೆಚ್ಚಿಗೆ ಇದ್ದಾರೆ. ಮಾಜಿ ರೌಡಿಗಳೇ ಹಾಲಿ ರಾಜಕಾರಣಿಗಳು ಎಂಬಂತಹ ವಿಪರ್ಯಾಸ ನಮ್ಮದು! ಎಲ್ಲವನ್ನೂ ಬಿಟ್ಟ ಅಂತಹ ಜನರಿಗೆ ಗಂಟುಕದ್ದುಕೊಂಡು ಇಂದ್ರಿಯಸುಖಗಳನ್ನು ಪಡೆದುಕೊಂಡು ಆಗಾಗ ಪರಸ್ಪರ ಅಪಹಾಸ್ಯಕರ ಮಾತುಗಳನ್ನಾಡುತ್ತಾ ರಾಜಕಾರಣಕ್ಕೆ ಇದ್ದ ಘನತೆಯನ್ನು ಕಳೆದುಬಿಟ್ಟಿದ್ದಾರೆ. ಪ್ರಜಾರಾಜಕೀಯ ಎಂಬುದು ಪ್ರಜೆಗಳಿಗೆ ಒಳಿತುಮಾಡುವ ಬದಲು ಪ್ರಜೆಗಳಿಂದ ಬಹಿರಂಗವಾಗಿ ಪಡೆದ ಕರಗಳನ್ನು ತಿಂದುಹಾಕುವ ಉದ್ಯಮವಾಗಿ ಬೆಳೆದಿರುವುದಕ್ಕೆ ಮೂಲ ಕಾರಣ ನಮ್ಮ ಸಂವಿಧಾನದಲ್ಲಿರುವ ಕೆಲವು ದೋಷಗಳಾಗಿವೆ; ಅವುಗಳ ಬದಲಾವಣೆಗೆ ಯಾರೂ ಮನಸ್ಸುಮಾಡಿಲ್ಲ, ಅವು ಪರಿಷ್ಕೃತವಾಗಬೇಕು.

೫. ಗೋಹತ್ಯೆ, ಸಂಘಪರಿವಾರ, ವೈದಿಕಶಾಹಿ ಮತ್ತು ಇತರೆ ಶಬ್ದಗಳು.

ಮಾತೆತ್ತಿದರೆ ಗೋಹತ್ಯೆ ಯಾಕೆ ಮಾಡಬಾರದು ಎಂಬ ಪ್ರಶ್ನೆ. ೨೮-೦೪-೨೦೧೨ರ ಹೊಸದಿಂಗಂತ ದಿನಪತ್ರಿಕೆಯಲ್ಲಿ ಲೇಖಕ ಮುಜಫರ್ ಹುಸೇನ್ ಬರೆದಿದ್ದಾರೆ: ಗೋವನ್ನು ಯಾಕೆ ಹತ್ಯೆಮಾಡಬಾರದು ಮತ್ತು ಯಾಕೆ ಪೂಜಿಸಬೇಕು ಎಂಬುದರ ಕುರಿತಾಗಿ.[ಅದನ್ನು ಅಂತರ್ಜಾಲದಲ್ಲೋ ಅಥವಾ ಇನ್ನೆಲ್ಲೋ ಲಭ್ಯವಿರುವಲ್ಲಿ ಹುಡುಕಿಕೊಂಡು ಓದಿಕೊಳ್ಳಬಹುದಾಗಿದೆ]ಪ್ರಾಚೀನ ಭಾರತದಲ್ಲಿ ಇದ್ದಿದ್ದು ಬರೇ ಸನಾತನ ಧರ್ಮ! ನಂತರ ಹಲವಾರು ಮತಗಳು ಹುಟ್ಟಿದವು. ಆದರೂ ನಿಜವಾದ ಭಾರತೀಯನೊಬ್ಬನಲ್ಲಿ ಆ ಸನಾತನ ಲಕ್ಷಣಗಳು ಹೇಗೆ ಗೋಚರಿಸುತ್ತವೆ ಎಂಬುದಕ್ಕೆ ಮುಜಫರ್ ಹುಸೇನ್, ಡ್ಯಾನಿ ಪಿರೇರಾ ಇಂತಹ ಲೇಖಕರುಗಳು ಉದಾಹರಣೆಗಳಾಗುತ್ತಾರೆ.

ಭಾರತದಲ್ಲಿ ಸಂಘಪರಿವಾರ ಇಲ್ಲದಿದ್ದರೆ ಇಷ್ಟುದಿನದಲ್ಲಿ ಸಂಪೂರ್ಣ ಭಾರತ ಪಾಕಿಸ್ತಾನವೇ ಆಗಿಬಿಡುತ್ತಿತ್ತು. ಭಾರತ ಸ್ವಲ್ಪವಾದರೂ ಭಾರತೀಯತೆಯನ್ನು ಉಳಿಸಿಕೊಂಡಿದ್ದರೆ ಅದು ಸಂಘಪರಿವಾರದ ಅಹರ್ನಿಶಿ ಪರಿಶ್ರಮದಿಂದ ಮಾತ್ರ! ಭಾರೀತೀಯರು ಎನಿಸಿದ ಎಲ್ಲರೂ ಸಂಘಪರಿವಾರದ ಸದಸ್ಯರೇ ಸರಿ. ಅವರು ಯಾವ ಮತಕ್ಕೇ ಸಂಬಂಧಿಸಿರಲಿ ದೇಶಸೇವೆಯಲ್ಲಿ ಮಾತ್ರ ಎಲ್ಲರೂ ಒಗ್ಗಟ್ಟಾಗಿರಬೇಕು.

ವೈದಿಕಶಾಹಿ ಎಂಬ ಪದ ಮೇಲೆ ಹೇಳಿದ ಸಂಪಾದಕನ ರೀತಿಯ ಯವುದೋ ತಲೆಹಿಡುಕ ಹುಟ್ಟುಹಾಕಿದ್ದು! ವೈದಿಕರು ಪ್ರಜೆಗಳಿಗೆ ತೊಂದರೆಮಾಡಲಿಲ್ಲ. ಅದೊಂದು ಅತೀ ತಪ್ಪು ಕಲ್ಪನೆ. ವೈದಿಕರ ಬಗ್ಗೆ ವೈದಿಕರ ಮಡಿಯ ಬಗ್ಗೆ ಕೆಂಡಕಾರುವ ನಾವೆಷ್ಟು ಸಂಭಾವಿತರು ಸ್ವಾಮೀ? ವೈದಿಕರೇ ಮುಂದಾಗಿ ನಿಂತು ಈ ರಾಜ್ಯ/ದೇಶದಲ್ಲಿ ಅದೆಷ್ಟೋ ರಾಜ ಸಂಸ್ಥಾನಗಳಿಗೆ ಧರ್ಮಬೋಧನೆ ಮಾಡಿದರು. ವೈದಿಕಧರ್ಮದಿಂದಲೇ ಕದಂಬರು, ಹಕ್ಕ-ಬುಕ್ಕರು ರಾಜ್ಯವಾಳಿದರು. ಮೌರ್ಯವಂಶದಂತಹ ಉತ್ತಮ ಆಡಳಿತ ನೀಡಿದ ರಾಜ್ಯ ಸ್ಥಾಪಿತವಾಗಿದ್ದು ಚಾಣಕ್ಯನೆಂಬ ಒಬ್ಬ ವೈದಿಕನಿಂದ ! ವೈದಿಕರು ಯಾರನ್ನೂ ತುಳಿಯಲಿಲ್ಲ, ಯಾವುದೋ ಕಾಲಘಟ್ಟದಲ್ಲಿ ಶ್ರೀಂತರಿಂದ ಬಡವರು ನೋವನ್ನು ಅನುಭವಿಸಿರಬಹುದು, ಆದರೆ ವೈದಿಕರು ಮೊದಲಿನಿಂದಲೂ ಬಡವರೇ ಹೊರತು ಶ್ರೀಮಂತರಲ್ಲ! ಪೂಜೆ-ಪುನಸ್ಕಾರಗಳಿಗೆ ಸಂಬಂಧಿಸಿದ ತಮ್ಮ ಅಚರಣೆಗಳಿಂದ ಬೇರೇ ಪಂಕ್ತಿಯಲ್ಲಿ ಊಟಮಾಡಿರಬಹುದೇ ಹೊರತು ವೈದಿಕರು ಇನ್ಯಾವ ತಪ್ಪನ್ನೂ ಎಸಗಲಿಲ್ಲ.

ಇದನ್ನೆಲ್ಲಾ ಓದುತ್ತಿರುವಾಗ ನಿಮಗೆ ’ಐದುಕಾಲಿನ ಮಂಚ ಕುಂಟ ಮಲಗಿದ್ದ’ ಹಾಡಿನ ಧ್ವನ್ಯಾರ್ಥ ಹೊಳೆದಿರಲೂ ಬಹುದು, ಅರ್ಥವಾಗದಿದ್ದ ಪಕ್ಷದಲ್ಲಿ ಮತ್ತೆ ಮತ್ತೆ ಕೇಳಿಸಿಕೊಳ್ಳಿ, ಅರ್ಥಮಾಡಿಕೊಳ್ಳುವ ಪ್ರಯತ್ನ ನಿಮ್ಮಿಂದ ನಡೆಯಲಿ ಎಂಬ ಸಲಹೆಯೊಂದಿಗೆ ನಮ್ಮಲ್ಲೇ ಇರುವ ಐಬುಗಳ ಬಗ್ಗೆ ತಿಳಿಸಿದ್ದೇನೆ. 

11 comments:

 1. ಮಾಂಸಾಹಾರ ಮಾನವನ (ಮೂಲ) ಸಹಜ ಆಹಾರ ಪದ್ಧತಿ!!! ವೈಚಾರಿಕತೆ ಬೆಳೆದಂತೆ ಮಾನವ ಇತರ ಕೆಲವು ತನ್ನ ಸಹಜ ಪದ್ದತಿಗಳನ್ನು (ಗುಹೆಗಳಲ್ಲಿ ವಾಸಿಸುವುದು ಇತ್ಯಾದಿ) ಬದಲಾಯಿಸಿಕೊಂಡು ನಾಗರೀಕನಾಗಿದ್ದಾನೆ. ಆದರೆ-ಇನ್ನೊಂದು ಪ್ರಾಣಿಗೆ (ತನ್ನನ್ನು ಯಾರಾದರೂ ಕತ್ತಿಯಲ್ಲಿ ಕುಯ್ದರೆ ನೋವಾದಂತೆ) ನೋವಾಗಬಹುದು ಎಂಬ ವಿವೇಕದಿಂದ - ಮಾಂಸಾಹಾರ ತ್ಯಜಿಸಲು ಬಾಯಿಚಪಲ ಎಂಬುದು ಅಡ್ಡಬರುತ್ತಿದೆ!!!! ಆದರೆ 'ಬಾಯಿಚಪಲ' ಎಂಬ ಪದ ಉಪಯೋಗಿಸುವ ಬದಲು ಜನ್ಮಸಿದ್ದ ಹಕ್ಕು - ಅದು ಇದು ಎಂದು ಎಂದೆಲ್ಲ ಬಡಬಡಿಸುತ್ತಾರೆ.

  ReplyDelete
  Replies
  1. ಸುಬ್ರಹ್ಮಣ್ಯರೇ, ಜೀವ ವಿಕಾಸವಾದದಲ್ಲಿ ಹೇಳಿದ ಮಂಗನಿಂದ ಮಾನವನಾದ ಎಂಬುದನ್ನಾಗಲೀ, ಆತ ಗುಹೆಗಳಲ್ಲಿ ವಾಸಿಸಿದ್ದ-ಮಾಂಸಾಹಾರಿಯೇ ಆಗಿದ್ದ ಎಂಬುದನ್ನಾಗಲೀ ಒಪ್ಪುವ ಪೈಕಿ ನಾನಲ್ಲ. ಮಾನವನಿಗೆ ಕೋರೆ ಹಲ್ಲುಗಳಿಲ್ಲ! ಮಾಂಸಭಕ್ಷಣೆಗೆ ಮತ್ತು ಜೀರ್ಣಕ್ರಿಯೆಗೆ ತಕ್ಕ ಜೀರ್ಣಾಂಗ ವ್ಯವಸ್ಥೆ ಇಲ್ಲ! ಆದರೂ ಮಾಂಸ ತಿನ್ನುವುದನ್ನು ಹೇಗೋ ಆಮೇಲೆ ಬೆಳೆಸಿಕೊಂಡ. ಹಸಿದ ಹೊಟ್ಟೆಗೆ ಏನೂ ಸಿಗದಾಗ ಪ್ರಾಯಶಃ ಯಾರೋ ಕೆಲವರು ಆರಂಭಿಸಿದ್ದು ಬರುಬರುತ್ತಾ ಅದೇ ಸಂಖ್ಯೆ ಜಾಸ್ತಿಯಾಯ್ತು. ಮಾನವನ ಮೂಲ ಆಹಾರ ಮಾಂಸವಲ್ಲ ಎಂಬುದು ನನ್ನ ನಿಲುವು. ಜನಿಸಿರುವ ಪ್ರತೀ ಜೀವಿಗೂ ಬದುಕುವ ಹಕ್ಕಿದೆಯಷ್ಟೇ? ಬದುಕುವುದೇ ಅವುಗಳ ಜನ್ಮಸಿದ್ಧ ಹಕ್ಕು ಎನಿಸುವಾಗ ಅವುಗಳನ್ನು ಕೊಂದು ತಿನ್ನಲು ಮಾನವನಿಗೆ ಆ ಅಧಿಕಾರ ಎಲ್ಲಿಂದ ಬಂತು? ಮಾತನಾಡಲು ಬಾರದ ಮೂಕ ಅಥವಾ ಅವುಗಳ ಭಾಷೆಗಳಲ್ಲೇ ಮಾತನಾಡುವ ಪ್ರಾಣಿಗಳನ್ನು ನಿರ್ದಯಿಯಾಗಿ, ಕಟುಕನಾಗಿ ಕಡಿದು ತನ್ನ ಆಹಾರಕ್ಕೆ ಬಳಸುವುದು ಎಂತಹ ಅನ್ಯಾಯ ಎನಿಸುವುದಿಲ್ಲವೇ? ಯಾವುದೇ ಪ್ರಾಣಿ, ಪಕ್ಷಿಯನ್ನೂ ಪ್ರೀತಿಯಿಂದ ಸಾಕಿದ್ದರೆ ಆ ವ್ಯಾಮೋಹವೇ ಬೇರೆ ಇರುತ್ತದೆ. ಪ್ರೀತಿಸಿದ ಜೀವಗಳನ್ನು ಹನನ ಮಾಡಲು ಮನಸ್ಸು ಬರುವುದಾದರೂ ಹೇಗೆ? ಇನ್ನು ತಿನ್ನಲೆಂದೇ ಸಾಕುವ ಪದ್ಧತಿಯೇ ಬೇರೆ. ಅಲ್ಲಿ ಬದುಕುವ ಪ್ರಾಣಿ/ಪಕ್ಷಿಗೆ ತನ್ನ ಬದುಕು ಎಲ್ಲಿಯವರೆಗೆ ಎಂಬುದು ಗೊತ್ತಿರುವುದಿಲ್ಲ; ರಾತ್ರಿ ಕಳೆದು ಬೆಳಗು ನೋಡುತ್ತೇವೆ ಎಂಬ ಅನಿಸಿಕೆಯೊ ಇರಲಿಕ್ಕಿಲ್ಲ! ಸಾಕಿದವರನ್ನು ಪ್ರತೀ ಜೀವಿಗಳೂ ಕೃತಜ್ಞತಾ ಭಾವದಿಂದ ನೋಡುತ್ತಿರುತ್ತವೆ, ರಕ್ಷಣೆಮಾಡುತ್ತೇನೆ ಎನ್ನುವ ಕೈಯ್ಯೇ ಕೊಂದು ಭಕ್ಷಿಸಲು ಮುಂದಾಗುವಾಗ ಆ ಜೀವಗಳಿಗೆ ಏನೆನ್ನಿಸಬಹುದು?

   ಯಕ್ಕಶ್ಚಿತವೆನಿಸಿರುವ ಹೆಗ್ಗಣವನ್ನು ಸಾಯಿಸಲಿಕ್ಕೆ ನಾವು ಬೇಸರಿಸುತ್ತೇವೆ, ಕಚ್ಚುವ ಹಾವನ್ನು ಕಾಡಿಗೆ ಜೀವಸಹಿತ ಸಾಗಹಾಕುತ್ತೇವೆ, ಸೊಳ್ಳೆ-ಜಿರಲೆಗಳನ್ನೂ ಕೂಡ ಸಾಯಿಸಬೇಕಲ್ಲಾ ಎಂಬ ಕೊರಗು ನಮ್ಮಂಥವರನ್ನು ಕಾಡುತ್ತಿರುತ್ತದೆ, ನಮಗರಿವಿಲ್ಲದೆಯೇ ಅದೆಷ್ಟೋ ಇರುವೆಗಳ ರೀತಿಯ ಜೀವಗಳ ಹನನ ನಮ್ಮಿಂದ ನಡೆದುಹೋಗುವುದಕ್ಕೆ ಪಶ್ಚಾತ್ತಾಪ ಪಡುತ್ತೇವೆ. ಹೀಗಿರುವಾಗ ಪಕ್ಕದಲ್ಲೇ ಇಟ್ಟುಕೊಂಡು ಸಾಕಿದ ಜೀವಗಳನ್ನು ಹನನ ಮಾಡಲು ಮನಸ್ಸು ಸಿದ್ಧವಾಗುವುದಾದರೆ ಅಂತಹ ಮನುಷ್ಯನ ಮನಸ್ಸು ಎಷ್ಟು ಕ್ರೂರವಾಗಿರಬಹುದು? ನೀವು ಹೇಳಿದ ಒಂದು ಮಾತಂತೂ ಸತ್ಯ-ಜಿಹ್ವಾಚಾಪಲ್ಯ! ಅದನ್ನು ನಿಯಂತ್ರಣದಲ್ಲಿಡಲು ಮಾಂಸಾಹಾರಿಗಳಿಗೆ ಸಾಧ್ಯವಾಗುತ್ತಿಲ್ಲ; ಹೇಗಾದರೂ ಮಾಡಿ ತಿನ್ನುವ ಮನಸ್ಸು ಬಂದುಬಿಡುತ್ತದೆ, ಬೇಕೇ ಬೇಕೆನಿಸುತ್ತದೆ.

   ನನ್ನಲ್ಲಿ ಒಬ್ಬಾತ ಹೇಳಿದ್ದ: ನಾವು ಕೊಲ್ಲುವುದಿಲ್ಲ, ಅಂಗಡಿಗಳಿಂದ ಮಾಂಸವನ್ನು ತರಕಾರಿ ತಂದಹಾಗೇ ತಂದು ಉಪಯೋಗಿಸುತ್ತೇವೆ-ಎಂದು. ಮಾಂಸವನ್ನು ಕೊಂಡಾದರೂ ತರಲಿ ಕೊಂದಾದರೂ ಪಡೆಯಲಿ ಎರಡೂ ಒಂದೇ. ಬಹಳ ವ್ಯತ್ಯಾಸವೇನಿಲ್ಲ. ಬಳಸುವ ವ್ಯಕ್ತಿಯ ಬೇಡಿಕೆಯ ಮೇರೆಗೆ ಅವರ ಪರವಾಗಿ ಕಟುಕ ಆ ಕೆಲಸ ಮಾಡಿರುತ್ತಾನೆ. ಕೊಲೆ ಮಾಡಿದ ವ್ಯಕ್ತಿಗಿಂತ ಹೆಚ್ಚಿನಮಟ್ಟದಲ್ಲಿ ಮಾಡಿಸಿದ ವ್ಯಕ್ತಿಗೆ ಪಾಪಫಲಗಳು ಪ್ರಾಪ್ತವಾಗುತ್ತವೆ! ಈ ಜಗತ್ತಿನಲ್ಲಿ ಶಾಕಾಹಾರ ಲಭ್ಯವೇ ಇಲ್ಲವೆಂದಾದರೆ ಪ್ರಶ್ನೆ ಬೇರೆ. ಶಾಕಾಹಾರದಲ್ಲೂ: ಪುನರುತ್ಫತ್ತಿಗೆ ಕಾರಣವಾಗುವ ಧಾನ್ಯಗಳನ್ನು ನಾಶಪಡಿಸುವ ಪಾಪ ನಮಗೆ ಪ್ರಾಪ್ತವಾಗುತ್ತದೆ; ಆದರೆ ತೀವ್ರ ನೋವನ್ನು ಅನುಭವಿಸಬಲ್ಲ ಮೆದುಳೆಂಬ ರಚನೆ ಅವುಗಳಲ್ಲಿಲ್ಲ. ಶಾಕಾಹಾರವನ್ನು ಯಾಕೆ ಹೇಳಿದರು ಎಂಬುದನ್ನು ಅರ್ಥಮಾಡಿಕೊಳ್ಳಲಾಗದವರು ಬರಿದೇ ಹಾರಾಡುತ್ತೇವೆ, ನಿಮ್ಮ ಅನಿಸಿಕೆಗೆ ಧನ್ಯವಾದಗಳು.

   Delete
 2. ಮಾ೦ಸಾಹಾರದ ಬಗ್ಗೆ ನಿಮಗೇಕೆ ಇಶ್ತೊ೦ದು ಅಸಹನೆ. ಅದು ಅವರವರ ಆಯ್ಕೆಗೆ ಬಿಟ್ಟ ವಿಚಾರ. ಫುಡ್ ಚೈನ್ ಬಗ್ಗೆ ನಿಮಗೇನೂ ಗೊತ್ತಿಲ್ಲ ಎ೦ಬುದು ಈ ಲೆಖನದಿ೦ದ ತಿಳಿಯುತ್ತದೆ. ಸುಮ್ಮನೆ ಸಮಯ ಹಾಳು ಮಾಡಬೇಡಿ. ಪುಳ್ಚಾರ್ ತಿ೦ದು ತೆಪ್ಪಗೆ ಇರಿ. ನೀವು ಸ೦ಘ ಪರಿವಾರದ ಪ್ರವರ್ತಕ ಅಂತ ಎಲ್ಲರಿಗೂ ಗೊತ್ತಿದೆ.
  ಹರದನಹಳ್ಳಿ ಪುಟ್ಟರಾಜು

  ReplyDelete
  Replies
  1. ಸನ್ಮಾನ್ಯ ಹರದನ ಹಳ್ಳಿ ಪುಟ್ಟರಾಜರೇ, ನಿಮ್ಮ ಸಮಯ ಹಾಳುಮಾಳಿಕೊಂಡು ನನ್ನ ಲೇಖನವನ್ನು ಓದಿ ಎಂದು ನಾನು ನಿಮ್ಮನ್ನು ಕರೆದಿಲ್ಲ, ನೀವಾಗಿ ಬಂದಿರಿ, ಓದಿದಿರಿ, ಒಂದಷ್ಟು ವಾಂತಿಮಾಡಿದಿರಿ. ನೀವು ಮಾಂಸಾಹಾರವನ್ನೇ ಇನ್ನೂ ಸಾವಿರಾರು ಜನ್ಮಕ್ಕೂ ತಿನ್ನಿ ಯಾರು ಬೇಡಾ ಅಂದೋರು? ನಾನು ಬರೆದ ಲೇಖನ ಕುತ್ತಿಗೆಯಮೇಲೆ ತಲೆ ಇಟ್ಟುಕೊಂಡ ಮನುಷ್ಯರಿಗಾಗಿ ಮಾತ್ರ! ನಾವು ಸಂಘಪ್ರವರ್ತಕರಾಗಿಯೋ ಪುಳ್ಚಾರ್ ತಿಂದೋ ಇರೋದೂ ಕೂಡ ನಮ್ಮ ಆಯ್ಕೆಯ ವಿಚಾರ, ನಿಮ್ಮನ್ನು ಕೇಳಬೇಕೆ? ಅಥವಾ ಅದಕ್ಕೆ ನೀವು ಹೇಳಬೇಕೆ? ನಿಮಗೆ ಉತರಿಸಬಾರದು ಎಂದುಕೊಂಡೆ, ಆದರೂ ಉತ್ತರಿಸಿದ್ದೇನೆ ಅಷ್ಟೇ. ತಾವು ಹೇಳಿದ ಫುಡ್ ಚೈನ್ ಬಗ್ಗೆ ಅರಿವಿರುವಷ್ಟು ಓದಿಕೊಂಡವ ನಾನಲ್ಲ, ಹೀಗಾಗಿ ನೀವು ಇಂದು ಹೀಗೊಂದು ಇದೆ ಎಂದು ಬೆಳಕು ಹರಿಸಿದಿರಿ. ನಿಮ್ಮ ಬೆಳಕಿನಿಂದಲೇ ಜಗವೂ ಬೆಳಗೀತೇ ಎಂಬುದನ್ನು ಯೋಚಿಸುತ್ತಿದ್ದೇನೆ!

   Delete
 3. ವಿ ಆರ್ ಜಿ ನಿಮಗೇ ನಮೋ ನಮಃ ಜ್ನಾನದ ಪೂರೈಕೆ ಸಾಗತ್ತಿರಲಿ……… ನಿಮ್ಮ ಯಲ್ಲ ಲೇಖನಗಳು ಪ್ರಸ್ತುತತೆಯನ್ನು ಸಾರಿ ಹೇಳುತ್ತವೆ .. ಸಸ್ಯಾಹಾರ ಸಿಗದೇ ಇದ್ದ ಸಂಧರ್ಭದಲ್ಲಿ ಇತರ ಅಹಾರದ ಕಡೇಗೆ ದ್ರಷ್ಟಿ ಸಾಗಬೇಕೇ.. ಹೋರತು….. ನಾಲಿಗೆ ಚಪಲಕ್ಕೆ .. ಪ್ರಾಣಿಗಳನ್ನು ತಿಂದು ಬದುಕುವ ಜನ ೩ ಕ್ಕೆ ಸಿಗದವರು…… ವರನ್ನು ಅವರ ಈ ಯೋಚನೆಯನ್ನು….. ಅವರೊಂದಿಗೆ ಗಂಟು ಮೂಟೆ ಕಟ್ಟಿ…… ಆಪ್ರಿಕಾದ ಹುಲ್ಲುಗಾವಲಿಗೆ ಹೋಗಿ ಬಿಟ್ಟು ಬರಬೇಕು ಅಲ್ಲಿ ಮಾಂಸಾಹಾರಿ food chain bagge lecture ಕೇಳಲು ತುಂಬಾ ವಿದ್ಯಾರ್ಥಿಗಳಿದ್ದಾರೆ……ಹ ಹ
  ಸಂಘ್ ಪರಿವಾರದ ಬಗ್ಗೆ ಮಾತನಾಡಲು ಮೋದಲು ಅದರ ಬಗ್ಗೆ ಗೊತ್ತಿರಬೇಕು ಬೇಕಾಬಿಟ್ಟಿ ಮಾತನಾಡಲು ಅದೇನು…. ನೇಹರುವಿನ ಕಚ್ಚೇಯ ತುದಿಯ ಕಾಂಗ್ರೆಸ್ ಅಲ್ಲ ನೆನೆಪಿರಲಿ

  ReplyDelete
 4. Sir
  can explain songs for us.I am not able to compltely understand

  ReplyDelete
  Replies
  1. Dayanadaji, initially its about 'panchendriyas', remaining you guess, later i will hint you, but i can't explain since it is my condition as i said, it must be analysed accordingly! thanks.

   Delete
 5. don't think that you can get off the hook by deleting comments. now the whole world will come to know what kind of hypocrites you guys are.

  http://rankusa.blogspot.in/

  regs,
  -R

  ReplyDelete
  Replies
  1. ಹೆಸರನ್ನು ಹೇಳಲು ಇಷ್ಟಪಡದೇ ನುಣುಚಿಕೊಳ್ಳುವ ’ಆರ್’ ಎಂಬ ಭಾರತೀಯ ಮಹಾನುಭಾವರೇ, ನಿಮ್ಮ ಪ್ರತಿಕ್ರಿಯೆಗಳನ್ನೇ ಆಗಲೀ ಅಥವಾ ಯಾರದೇ ಪ್ರತಿಕ್ರಿಯೆಗಳನ್ನಾಗಲೀ ಅಳಿಸುವುದು ನನಗೆ ಬೇಕಾಗಿಲ್ಲ; ಹಿಂದೆ ಎಲ್ಲೂ ಹಾಗೆ ಮಾಡಿಲ್ಲ, ಮುಂದೆಯೂ ಹಾಗೆ ಮಾಡುವುದಿಲ್ಲ. ನನ್ನದಾದ ಸ್ವತಂತ್ರ, ನಿರ್ಭೀತ ಅನಿಸಿಕೆಗಳ ತಾಣದಲ್ಲಿ ನನ್ನ ಬರಹಗಳು ಮೂಡುತ್ತವೆ. ಹಸಿದವರಿಗೆ ಮಾಂಸತಿಂದರೆ ಮಾತ್ರ ಹೊಟ್ಟೆ ತುಂಬುತ್ತದೆ ಎನ್ನುವುದಾದರೆ ನನ್ನದೇನೂ ಅಡ್ಡಿ-ಆತಂಕಗಳಿಲ್ಲ. ಮನೋವೈಜ್ಞಾನಿಕಕ್ಕೂ ನಿಲುಕದ ಕೆಲವು ವಿಷಯಗಳನ್ನು ಹಿಂದೆ ಮಹಾತ್ಮರು ತಮ್ಮ ಅನುಭವದ ಮೂಲಕ ತಿಳಿಸಿದ್ದಾರೆ, ಅವುಗಳನ್ನು ಓದುಗರ ಮುಂದಿಟ್ಟಿದ್ದೇನೆ ಅಷ್ಟೇ. ನೀವು ಗೋಮಾಂಸವನ್ನೇ ಭಕ್ಷಿಸಿ ಯಾರು ಬೇಡಾ ಅಂದೋರು. ನನಗೆ ತಿಳಿದ ಮಟ್ಟಿಗೆ ಪ್ರಾಮಾಣಿಕತೆಯಿಂದ ಮಾಹಿತಿಯನ್ನು ಒದಗಿಸುವುದು ನನ್ನ ಹವ್ಯಾಸ.

   ಹಿಂದೆ ನನ್ನ ಹಲವು ಲೇಖನಗಳಲ್ಲಿ ಹೇಳಿದ್ದೇನೆ: ಮಾಂಸಾಹಾರಿಗಳಿಗೆ ನಮ್ಮ ಒತ್ತಾಯವಿಲ್ಲ; ಒತ್ತಡವೂ ಇಲ್ಲ. ಸಗಣಿ ಎಂದು ಹೇಳಿದಾಗಲೂ ಒಬ್ಬ ಅದೇ ಮಹಾಪ್ರಸಾದವೆಂದು ತಿನ್ನುವುದಾದರೆ ತಡೆಯಲಿಕ್ಕೆ ನಾವು ಯಾರು? ಅಷ್ಟಾಗಿ, ಈ ಜಗದ ಜೀವರಾಶಿಗಳೂ ಅಲ್ಲದೇ ಅಣುರೇಣುಗಳಲ್ಲೂ ಭಗವಂತನ ಸಾನ್ನಿಧ್ಯವನ್ನು ಕಾಣಲಿಚ್ಛಿಸುವ ಜನರಲ್ಲಿ ನಾನೂ ಬಬ್ಬ. ಭಗವಂತನ ಒಂದು ಭಾಗವೇ ಆದಮೇಲೆ ಅವನದೇ ಇನ್ನೊಂದು ಭಾಗವನ್ನು ಕಡಿದು ತಿನ್ನಲು ಸಾಧ್ಯವೇ?--ಇದು ತಾತ್ಪರ್ಯವಾಗಿದೆ. ಕೇವಲ ಬರೆಯಬೇಕು ಎಂಬ ಹಪಾಹಪಿಯಿಂದ ಬಹಳ ಬರೆದಿದ್ದೀರಿ, ಇನ್ನೂ ಒಂದಷ್ಟು ಬರೆಯಿರಿ ಅದಕ್ಕೂ ಬೇಡಾ ಎನ್ನುವುದಿಲ್ಲ, ನಿತ್ಯವೂ ಸಾರಿಗೆಯ ಸಾರ್ವಜನಿಕ ಬಸ್ಸುಗಳು ಚಲಿಸುತ್ತವೆ--ಅವು ಹೋಗುವಾಗ ನಮ್ಮನ್ನು ಬಾ ಬಾ ಎಂದು ಕೈಬೀಸಿ ಕರೆಯುವುದಿಲ್ಲ ಅಲ್ಲವೇ? ಬಸ್ಸು ಸಿಗಬೇಕು ಎಂದರೆ ನಾವೇ ಹೋಗಿ ನಿಗದಿತ ಜಾಗದಲ್ಲಿ ನಿಂತು ಪ್ರಯತ್ನಿಸಿ ಹಿಡಿಯಬೇಕು ಮತ್ತು ಗಮ್ಯಸ್ಥಾನವನ್ನು ತಲುಪಬೇಕು. ಇಲ್ಲಿ ಗಮ್ಯಸ್ಥಾನವನ್ನು ಆತ್ಮೋದ್ಧಾರಕ್ಕೆ ಹೋಲಿಸಿದ್ದೇನೆ. ಯಾರೋ ಪುಣ್ಯಾತ್ಮರು ಸಾಧು-ಸಂತ-ಋಷಿಗಳು ತಮ್ಮ ತ್ಯಾಗ[ಐಹಿಕ ಸುಖೋಪಭೋಗಗಳ ತ್ಯಾಗ]ಮತ್ತು ತಪಸ್ಸಿನಿಂದ ಸಿದ್ಧಿಸಿದ ಕೌಶಲದಿಂದ ’ಜ್ಞಾನ’ ಎಂಬ ಬಸ್ಸನ್ನು ಓಡಿಸುತ್ತಿದ್ದಾರೆ. ಅಂತಹ ಬಸ್ಸನ್ನು ಏರಲು ಓದುಗರನ್ನು ಕರೆದೆನೇ ಹೊರತು ಅದು ಕುರುಡ ನಡೆಸುವ ವಾಹನವಲ್ಲ; ಅಲ್ಲಿ ಎಲ್ಲಕ್ಕೂ ನಿಶ್ಚಿತ ಗುರಿಗಳಿವೆ. ಇಷ್ಟೇ ಸಾಕು, ವ್ರಥಾ ನಿಮ್ಮೊಡನೆ ಕಾಲಹರಣಮಾಡುವುದು ನನಗೆ ಹಿಡಿಸುವುದಿಲ್ಲ. ನಿಮ್ಮ ಅನಿಸಿಕೆಗೆ ಮತ್ತು ನಿಮ್ಮ ಆ ದಿವ್ಯಾನುಭೂತಿಗೂ ಅನಂತ ಕೃತಜ್ಞತೆಗಳು, ನಿಮಗೆ ದೇವರು ಒಳ್ಳೇದು ಮಾಡಲಿ ಎಂದು ಹಾರೈಸುತ್ತೇನೆ.

   Delete
 6. PART-2
  ----------

  ಅಷ್ಟಾಗಿ, ಈ ಜಗದ ಜೀವರಾಶಿಗಳೂ ಅಲ್ಲದೇ ಅಣುರೇಣುಗಳಲ್ಲೂ ಭಗವಂತನ ಸಾನ್ನಿಧ್ಯವನ್ನು ಕಾಣಲಿಚ್ಛಿಸುವ ಜನರಲ್ಲಿ ನಾನೂ ಬಬ್ಬ. ಭಗವಂತನ ಒಂದು ಭಾಗವೇ ಆದಮೇಲೆ ಅವನದೇ ಇನ್ನೊಂದು ಭಾಗವನ್ನು ಕಡಿದು ತಿನ್ನಲು ಸಾಧ್ಯವೇ?-----> these are my most favourite lines in what you've written till now! ಏಕೆಂದು ನೋಡೋಣ...

  ಜಗತ್ತಿನ ಚರಾಚರ ವಸ್ತುಗಳಲ್ಲಿ, ಸಕಲ ಜೀವರಾಶಿಗಳಲ್ಲಿ, ಅಣುರೇಣುತೃಣಕಾಷ್ಠದಲ್ಲಿ ಆ ನಿಮ್ಮ 'ಭಗವಂತ'ನೆಂಬುವವನಿರುವನೆಂದರೆ, ಕುರಿಯಲ್ಲೂ, ಕಟುಕನಲ್ಲೂ - ಇಬ್ಬರಲ್ಲೂ ಆತನಿರುವನೆಂದಾಯಿತಲ್ಲವೇ? ಜಗತ್ತಿನ ಪ್ರತಿಯೊಂದು ನಿಯಮವೂ ಭಗವಂತನ
  ಆಜ್ಞೆಗೊಳಪಟ್ಟಿದೆಯೆಂದರೆ, 'ಕುರಿಯನ್ನು ಕೊಲ್ಲು' ಎಂಬುದೂ ಆತನ ಆಜ್ಞೆಯೇ ಎಂದಾಯಿತಲ್ಲವೇ!? ಅರ್ಥಾತ್, ಭಗವಂತನೇ ಭಗವಂತನನ್ನು 'ಕೊಲ್ಲು' ಎಂದು ಹೇಳಿದಂತಾಗಲಿಲ್ಲವೇ? ಹಾಗೂ ಮಾಂಸಾಹಾರಿಗಳು ಆ ಕುರಿಮಾಂಸವನ್ನು ತಿಂದರೆ, ಭಗವಂತನೇ ಭಗವಂತನನ್ನು ಸೇವಿಸಿದಂತೆ, ಅಂದರೆ, ಭಗವಂತ ಭಗವಂತನನ್ನು ಸೇರಿದಂತಾಗಲಿಲ್ಲವೇ? (ಏಕೆಂದರೆ, as per your postulate, ಮಾಂಸಾಹಾರಿಗಳೂ ಈ ಜಗತ್ತಿನ ಒಂದು ಭಾಗವೇ ಆಗಿದ್ದಾರೆ. and therefore, ಅವರಲ್ಲಿಯೂ ಭಗವಂತನಿದ್ದಾನೆ. as they are also made up of ಅಣುs) ಇಂತಹ ಪರಿಸ್ಥಿತಿಯಲ್ಲಿ, ಕಟುಕನಿಗೆ 'ಕುರಿಯನ್ನು ಕೊಲ್ಲಬೇಡ!' ಎಂದು ಹೇಳುವುದು ಭಗವಂತನ ಆಜ್ಞೆಯನ್ನು ಉಲ್ಲಂಘಿಸಿದಂತಾಗುವುದಿಲ್ಲವೇ? ಆತನ ಆಜ್ಞೆಯನ್ನು ಉಲ್ಲಂಘಿಸುವುದು ಮಹಾಪಾಪವಲ್ಲವೇ?? ಹಾಗೂ ಮಹಾಪಾಪಿಗಳಿಗೆ ನರಕಪ್ರಾಪ್ತಿ ಶತಸ್ಸಿದ್ಧವಲ್ಲವೇ ಸ್ವಾಮಿ? ಅದ್ಕೆ ಸಮೇರ, ನಾವು ಅಳ್ಳಿ ಐಕ್ಳು, ಆ ಭಗ್ವಂತ್ನ ಆಜ್ಞೆ ಪಾಲ್ಸಿ, ಮಾವಸ ತಿಂದು ಸರಗಕ್ಕೆ ಓಗೋ try ಮಾಡ್ತಿರೋದು. ಆ ಮಾದೇವ ಕ್ವಾಪ್ಸ್ಕೊಂಡು ಮೂರ್ನೆ ಕಣ್ ಬುಟ್ರೆ ಯಾರ್ಗಾದ್ರು ಎದ್ರುಸೋಕಾಯ್ಥದ?? ಸಿವ ಸಿವ! ಇಂಥಾ ಅಮಾಯ್ಕ ಜನ್ಗಳ ಮ್ಯಾಲೆ ತಮ್ಗ್ಯಾಕ್ರೀ ಬೆಂಕಿತಾಪದಂಥಾ ಕ್ವಾಪ??

  what you have to say to this mate? thanks so much for helping me get this thought! from now onwards, i will ask every theist hypocrite the same question. without you, it wouldn't have been possible....

  ಕೇವಲ ಬರೆಯಬೇಕು ಎಂಬ ಹಪಾಹಪಿಯಿಂದ ಬಹಳ ಬರೆದಿದ್ದೀರಿ---> take a printout of both of our articles and comments on this topic, make any literate+sane person you know to go through them, and ask them which write up is more rational, logical, fact-full, close to reality, (and of course, juicy!)? also "ಕೇವಲ ಬರೆಯಬೇಕು ಎಂಬ ಹಪಾಹಪಿಯಿಂದ ಬಹಳ ಬರೆದಿರುವ ಲೇಖನ ಯಾವುದು?" ಎಂತಲೂ ಕೇಳಿ. if they choose yours, then i accept that i'm a totally screwed up idiot and i will never ever comment on whatever you write. take it from me.

  ಬಸ್ಸು ಸಿಗಬೇಕು....ಯಾರೋ ಪುಣ್ಯಾತ್ಮರು......’ಜ್ಞಾನ’ ಎಂಬ ಬಸ್ಸನ್ನು ಓಡಿಸುತ್ತಿದ್ದಾರೆ.....ಅಂತಹ ಬಸ್ಸನ್ನು ಏರಲು ಓದುಗರನ್ನು ಕರೆದೆನೇ ಹೊರತು ಅದು ಕುರುಡ ನಡೆಸುವ ವಾಹನವಲ್ಲ ---> "ಯಾರೋ ಪುಣ್ಯಾತ್ಮರು" ... ಅಲ್ಲಾ sir, bus ನ ಯಾರು ಓಡಿಸುತ್ತಿದ್ದಾರೆ ಎಂಬುದೇ ತಮಗರಿವಿಲ್ಲ, ಅವರು ಏನೂ ಹೇಳಿದ್ದಾರೆಂಬುದೂ ತಮಗೆ ತಿಳಿದ ಹಾಗಿಲ್ಲ, ಎತ್ತ ಪಯಣ ಎನ್ನುವುದೂ ಗೊತ್ತಿಲ್ಲ, ಇಂಥಾದ್ರಲ್ಲಿ ಕಲಾಸಿಪಾಳ್ಯದಲ್ಲಿ ಕಮೀಶನ್ ಗೋಸ್ಕರ ಕೂಗಿ ಕೂಗಿ ticket book ಮಾಡೋ bus agent ಥರಾ ಕೂಗಾಡ್ತಾ ಇದ್ದೀರಲ್ಲಾ? ಸ್ವಂತ ವಿವೇಚನೆಯಿಲ್ಲದೆ 'ಯಾರೋ' ಹೇಳಿದರು ಅಂತ blind ಆಗಿ ಫಾಲೋ ಮಾಡುವವರನ್ನು 'ಕುರುಡ' ಎಂದಲ್ಲದೆ ಬೇರೆ ಏನೆಂದು ಕರೆಯಲು ಸಾಧ್ಯ? ಅದು ಹಾಳಾಗಿ ಹೋಗಲಿ, ಜ್ಞಾನದಂಥಹ ಉನ್ನತ ವಿಚಾರವನ್ನು ಹೋಗೀ ಹೋಗೀ ದಿನಕ್ಕೆ ಹತ್ತು ಜನರನ್ನ ಹರಿಶ್ಚಂದ್ರ ಘಾಟಿಗೆ speed post ಮಾಡೋ BMTC Bus ಗೆ compare ಮಾಡ್ತೀರಲ್ಲ, ಇದಕ್ಕೆ ಏನೆನ್ನೋಣ...

  ನಿಮಗೆ ದೇವರು ಒಳ್ಳೇದು ಮಾಡಲಿ ಎಂದು ಹಾರೈಸುತ್ತೇನೆ. -----> by now, you must have realized that i am an atheist. ಅಂದರೆ, ನನಗೆ ನಿಮ್ಮ ದೇವರು, ದಿಂಡರು ಮುಂತಾದ hypocrisy ಗಳ ಮೇಲೆ ನಂಬುಗೆಯಿಲ್ಲ (more details in my profile). ಆದರೂ ನಿಮ್ಮ ಹಾರೈಕೆಗೆ ಹೃತ್ಪೂರ್ವಕ ಧನ್ಯವಾದಗಳು!

  ಸಾಕು, ವ್ರಥಾ ನಿಮ್ಮೊಡನೆ ಕಾಲಹರಣಮಾಡುವುದು ನನಗೆ ಹಿಡಿಸುವುದಿಲ್ಲ.-----> lol...thank you so much for all the fun and the thought-provoking discussion!

  take care,

  regs,
  -R

  ReplyDelete
 7. ಭಟ್ಟರೇ!
  ಸಸ್ಯಾಹಾರ, ಅಹಿಂಸೆಯ ಬಗ್ಗೆ ನಿಮ್ಮ ಕಳಕಳಿಗೆ ವಂದನೆಗಳು.
  ವೈಜ್ಞಾನಿಕವಾಗಿ ಮಾನವನ ಶರೀರ ರಚನೆಯನ್ನು ಅಧ್ಯಯನವನ್ನು ಮಾಡಿದಾಗ ಅವನು ಸಸ್ಯಾಹಾರಿ ಎಂದು ನಿಶ್ಚಯವಾಗುತ್ತದೆ.
  ಒಂದು ಹಸುವನ್ನು ಕೊಂದು ತಿಂದರೆ ಹೆಚ್ಚೆಂದರೆ ಒಂದು ಹೊತ್ತಿಗೆ 500 ಜನಕ್ಕೆ ಆಹಾರವಾಗಬಹುದು. ಆದರೆ, ಅದೇ ಗೋವು ತನ್ನ ಇಡೀ ಜೀವಮಾನ ಬದುಕಿದ್ದಲ್ಲಿ ಉತ್ಪತ್ತಿ ಮಾಡುವ ಸಂಪತ್ತಿನಿಂದ ಸುಮಾರು 25000 ಜನಕ್ಕೆ ಒಂದು ಹೊತ್ತಿನ ಆಹಾರವನ್ನು ಒದಗಿಸಬಹುದು. (ಹೆಚ್ಚಿನ ವಿವರಗಳಿಗೆ "ಗೋಕರುಣಾನಿಧಿಃ" ಎಂಬ ಪುಸ್ತಕವನ್ನು ಓದಿ ಅದರಲ್ಲಿರುವ ಅಂಕಿ-ಅಂಶಗಳನ್ನು ಪರಿಶೀಲಿಸಬಹುದು). ಹಾಗಾಗಿ ಇದು ದೇಶದ ಆರ್ಥಿಕ ಸ್ವಾಸ್ಥ್ಯದ ಪ್ರಶ್ನೆ. ದೇಶದ ಆರ್ಥಿಕ ದೃಢತೆಗೆ ದುಡಿಯಬೇಕಾದ್ದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಸ್ವಾತಂತ್ರ್ಯ, ಸ್ವೇಜ್ಛೆಗೆ ಅವಕಾಶವಿಲ್ಲ.
  ಈ ಅಂಶವನ್ನು ಗೌರವಿಸದಿದ್ದರೆ ಅವರನ್ನು "ದೇಶದ್ರೋಹಿ"ಗಳೆಂದಲ್ಲದೆ ಬೇರೆ ಯಾವ ಹೆಸರಿನಿಂದ ಕರೆಯಬೇಕು?!!
  ಬೇರೆಯವರಿಂದ ಹಿಂಸೆಯನ್ನು ನಾವೆಂದೂ ಬಯಸುವುದಿಲ್ಲ. ನಮ್ಮ ವಿಚಾರಕ್ಕೆ ಅಹಿಂಸೆಯನ್ನು ಒಪ್ಪುವ ನಾವು, ಇತರರ ವಿಚಾರಕ್ಕೆ ಅಹಿಂಸೆಯನ್ನು ಪಾಲಿಸಲು ಹಿಂಜರಿಯುವುದಾಗಲೀ, ಪಾಲಿಸದಿರಲು ಕುಂಟುನೆಪಗಳನ್ನು ಹುಡುಕುವುದಾಗಲಿ "ದ್ವಿಮುಖ ನೀತಿ" (Double Standard) ಎನಿಸುತ್ತದೆ, ಪ್ರಾಮಾಣಿಕತೆಯಂತೂ ಅಲ್ಲ!!
  ಯಾವುದೇ ಕಾರಣಕ್ಕೆ ಹಿಂಸೆಯನ್ನು ಒಪ್ಪುವ, ಪ್ರತಿಪಾದಿಸುವ ನಾವು, ಹಿಂಸೆಗೆ ಒಳಗಾದಾಗ ಕೂಗುವ ಹಕ್ಕನ್ನು ಕಳೆದುಕೊಳ್ಳುತ್ತೇವೆ!!

  ReplyDelete