ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, January 23, 2012

ಖಾಲೀ ಕೊಡವಾದರೂ ಪರವಾಗಿಲ್ಲ ಭಾಗಶಃ ತುಂಬಿದ ಕೊಡವಾಗಬೇಡಿ!


ಖಾಲೀ ಕೊಡವಾದರೂ ಪರವಾಗಿಲ್ಲ ಭಾಗಶಃ ತುಂಬಿದ ಕೊಡವಾಗಬೇಡಿ!

ಲಜ್ಜೆಗೇಡಿಗಳಿಗೆ ಮತ್ತೊಂದು ಹೆಸರು ಮಹಾತ್ಮರನ್ನು ದೂಷಿಸುವವರು ಎಂದೂ ಆಗಬಹುದು. ಈಗಿನ ಪತ್ರಿಕೆಗಳನ್ನು ನೋಡಿದರೆ ಮತ್ತು ಅದರಲ್ಲಿ ಬರೆಯುವ ಕೆಲವರನ್ನು ನೋಡಿದರೆ ವಿಷಯದ ವಿವೇಚನೆ ಇಲ್ಲದೇ ಕೇವಲ ಏಕಮುಖದಿಂದ ಬರೆಯುವುದು ಕಾಣುತ್ತದೆ. ಆಳವಾದ ಅಧ್ಯಯನದ ಕೊರತೆ ಒಂದು ಕಡೆಗಾದರೆ ವಿವಾದದಿಂದ ಓದುಗರನ್ನು ತನ್ನತ್ತ ಸೆಳೆಯುವ ತಂತ್ರಕೂಡ ಇದಾಗಿದೆ ಎಂಬುದು ಯಾರಿಗಾದರೂ ತೋರಿಬರುವ ಸಂಗತಿ. ಹಿಂದಕ್ಕೆ ಪತ್ರಿಕೆಗಳ ಮತ್ತು ಮಾಧ್ಯಮ ವಾಹಿನಿಗಳ ಸಂಖ್ಯೆ ಕಮ್ಮಿ ಇದ್ದಾಗ ವರದಿಗಾರರು ಅಲ್ಲಿಲ್ಲಿ ಏನನ್ನಾದರೂ ಹೆಕ್ಕಿ ತರುತ್ತಿದ್ದರು. ಇವತ್ತು ಅವುಗಳ ಸಂಖ್ಯೆ ಜಾಸ್ತಿಯಾಗಿ ’ಹುಲ್ಲುಗಾವಲು’ ಬರಿದಾಗಿದೆ, ಬಾವಿಯಲ್ಲಿ ನೀರಿನ ಸೆಲೆ ಕಮ್ಮಿ ಇದೆ-ಮೊದಲು ಹೋದವರಿಗೆ ಆದ್ಯತೆ ಇರುತ್ತದೆ. ಆದಗ್ಯೂ ಬಡಿದಾಡಿಕೊಂಡು ತಮ್ಮದೇ ಎಕ್ಸ್‍ಕ್ಲೂಸಿವ್ ವರದಿ ಎಂದು ಬೋರ್ಡು ಹಾಕಿಕೊಂಡು ಬಿತ್ತರಿಸುವ ಪತ್ರಿಕೆಗಳು/ವಾಹಿನಿಗಳು ಇನ್ನೊಂಡೆಡೆ ಅದೇ ವಿಷಯ ಪ್ರಸ್ತಾಪವಾಗುತ್ತಿರುವುದನ್ನು ಓದುಗರು/ವೀಕ್ಷಕರು ತಿಳಿದಿಲ್ಲ/ಕಂಡಿಲ್ಲ ಎಂದು ಹೀಗೆ ಗೂಬೆ ಕೂರಿಸುವ ಕೆಲಸ ತಪ್ಪು. ಕೆಲವು ಕಾಯಂ ಬರಹಗಾರರಿಗೆ ಕೆಲವು ವಾರಗಳಲ್ಲಿ ವಿಷಯವೇ ಇರುವುದಿಲ್ಲ! ಆಗೇನು ಮಾಡುವುದು? ಮಹಾತ್ಮರ ಚರಿತ್ರೆಗಳನ್ನೂ ಕೆದಕಿ ಅಲ್ಲಿನ ಚಿಕ್ಕ ವಿಷಯಗಳನ್ನು ’ಇಲಿ’ ಬದಲಿಗೆ ’ಹುಲಿ’ ಮಾಡಿ ಹೇಳುವುದು ಅವರ ಕರ್ಮ! ಸಸಾರ ನೋಡಿ ಕೇವಲ ಒಂದಕ್ಷರದ ಬದಲಾವಣೆ-ಅಲ್ಲೂ ಕೂಡ ಅಷ್ಟೇ ಕೇವಲ ದೂಷಣೆ, ಜನರಿಗೆ ಗೊತ್ತಿಲ್ಲದ ವಿಷಯಗಳನ್ನು ತಾನು ಆಕರಗಳ ಆಳದಿಂದ ಎತ್ತಿ ಹೇಳುತ್ತಿದ್ದೇನೆ ಎಂಬ ಹಮ್ಮು-ಬಿಮ್ಮು.

ದಿನಪತ್ರಿಕೆಯೊಂದರಲ್ಲಿ ಕೆಲದಿನಗಳ ಹಿಂದೆ ವಿವೇಕಾನಂದರ ಬಗ್ಗೆ ಒಬ್ಬರು ಬರೆದಿದ್ದಾರೆ. ಪಾಪ ಅವರಿಗೆ ಅಷ್ಟಾಗಿ ವಿವೇಕ ಜಾಗ್ರತಗೊಳ್ಳಲಿಲ್ಲ ಎನಿಸುತ್ತದೆ. ನನ್ನ ಗೆಳೆಯರ ಬಳಗದಲ್ಲಿ ಅವರೂ ಇದ್ದಾರೆ, ಹಾಗಂತ ಸ್ನೇಹಿತರೋ ಮನೆಯವರೋ ತಪ್ಪು ಮಾಡಿದರೆ ಅದನ್ನು ಒಪ್ಪುವ ಜಾಯಮಾನ ನನ್ನದಲ್ಲವಲ್ಲಾ! ನದೀಮೂಲ ಋಷಿ ಮೂಲ ಮತ್ತು ಸ್ತ್ರೀ ಮೂಲಗಳನ್ನು ಕೆದಕಬಾರದು ಎಂದು ಹಿಂದೆಯೇ ಶಾಸ್ತ್ರಕಾರರು ಬರೆದಿದ್ದಾರೆ. ಅಲ್ಲಿ ನಮಗೆ ಬೇಡದ ವಿಷಯಗಳೂ ಇರಬಹುದು. ಹಂಸಕ್ಷೀರ ನ್ಯಾಯದಂತೇ ಕೇವಲ ಬೇಕಾದ್ದನ್ನು ಪಡೆದು ಬೇಡದ್ದನ್ನು ಬಿಡುವ ಚಾಕಚಕ್ಯತೆ ನಮ್ಮಲ್ಲಿರಬೇಕು. ಅದಕ್ಕೆಂತಲೇ ಭಗವಂತ ನಮಗೆ ’ತಲೆ’ ಕೊಟ್ಟಿದ್ದಾನೆ. ನಾವೆಲ್ಲಾ ಶಾಲೆಗೆ ಹೋಗುವಾಗ ಓದಿದ್ದನ್ನು ಮರೆತು ಏನೇನೋ ತಪ್ಪು ಉತ್ತರಗಳನ್ನು ಹೇಳಿದರೆ ಮಾಸ್ತರು " ತಲೆಯಲ್ಲಿ ಏನಿದೆಯಪ್ಪಾ ಕೊಳೆತ ಬಟಾಟೆ ಇದ್ಯೋ ಅಥವಾ ಕೊಳೆತ ಉಳ್ಳಾಗಡ್ಡೆ[ಈರುಳ್ಳಿ]ನೋ ? " ಎನ್ನುತ್ತಿದ್ದರು. ಬರಹಗಾರರ ತಲೆಯಲ್ಲಿ ಇವತ್ತು ಏನಿದೆ ಎಂದು ಅವರೇ ಕೇಳಿಕೊಳ್ಳಬೇಕಾಗಿದೆ. ನಿನ್ನೆ ಒಬ್ಬರು ರಾಂಟ್ RANT ಶಬ್ದ ಬಳಸಿದ್ದರು. ಹಾಗೆಂದರೆ ನಾವೆಲ್ ಎಂದೂ ಅಥವಾ ವಾಂತಿಯೆಂದೂ ಅರ್ಥವಾಗುತ್ತದೆ. ನಿಮಗೆ ಹೇಗೇ ಬೇಕೋ ಹಾಗೆ ಅರ್ಥಮಾಡಿಕೊಳ್ಳಬಹುದು! ಚೆನ್ನಾಗಿದ್ದರೆ ನಾವೆಲ್ ಎನಿಸಿ ಮರು ಮರು ಮುದ್ರಣ ಕಾಣಬಹುದಾದ ಕೃತಿ ಓದಲಾಗದ ರೀತಿ ಇದ್ದರೆ ಅದನು ರಾಂಟ್ ಎನ್ನಬಹುದಾಗಿದೆ. ಅಂತಹ ರಾಂಟ್‍ಗಳ ಸಾಲಿಗೆ ತನ್ನ ಬರಹ ಇನ್ನೊಂದು ಸೇರ್ಪಡೆಯೇ ಎಂಬ ತಜ್ಜನಿತ[ಅಲ್ಲಲ್ಲೇ ಹುಟ್ಟಿದ] ಆತ್ಮಾವಲೋಕನ ಕ್ರಿಯೆ ಬರಹಗಾರನಿಗೆ ಇದ್ದರೆ ಬರಹಗಾರ ಗೆಲ್ಲಬಹುದು, ಅಥವಾ ಆಕ್ಷಣಕ್ಕೆ ಬರಹಗಾರ ಕಿಸೆ ಭರ್ತಿಮಾಡಿಕೊಳ್ಳಬಹುದೇ ಹೊರತು ಅದು ಪರೋಕ್ಷ ಸಮಾಜದ ದಾರಿತಪ್ಪಿಸಿದ ನಯವಂಚಕ ಮಾರ್ಗದಿಂದ ಬಂದ ಹಣ ಎನಿಸಿಕೊಳ್ಳುತ್ತದೆ!

ಯಾವುದೇ ವಿಷಯವಸ್ತುವನ್ನು ವಿಶ್ಲೇಷಿಸುವಾಗ ನಮಗೆ ಅದರಲ್ಲಿ ಪ್ರೌಢಿಮೆ ಇದೆಯೇ ಎಂಬುದು ಪ್ರಮುಖವಾಗಿ ನೋಡಬೇಕಾದ ಅಂಶ. ವಿವೇಕಾನಂದರ ಒಂದು ಪುಸ್ತಕವನ್ನೂ ಸರಿಯಾಗಿ ಓದದ ವ್ಯಕ್ತಿ ವಿವೇಕಾನಂದರ ಕುರಿತು ಬರೆಯುವುದು ಹೇಗೆ? ಹಿರಿಯ ಮಿತ್ರರಾದ ಶ್ರೀ ಆರ್. ಗಣೇಶರ ಪುಸ್ತಕವೊಂದರ ಕುರಿತು ನಾನು ಬರೆಯುವಾಗ ಅವರು ನನಗೆ ಹೇಳಿದ್ದಿಷ್ಟು : " ಭಟ್ಟರೇ, ಪುಸ್ತಕವನ್ನು ಓದದೇ ಅದರ ಬಗ್ಗೆ ವಿಶ್ಲೇಷಿಸುವುದು ಸರ್ವದಾ ತಪ್ಪು. ಅದು ನಾನೇ ಬರೆದದ್ದಿರಲಿ ಮತ್ತೊಬ್ಬ ಬರೆದಿದ್ದಿರಲಿ." ಎಂತಹ ಔಚಿತ್ಯಪೂರ್ಣ ಮಾತು. ಹಾಗಂತ ನಾನೊಬ್ಬ ವಿಮರ್ಶಕನೆಂಬ ಬೋರ್ಡು ಹಾಕಿಕೊಂಡವನಲ್ಲ. ಮಾಧ್ಯಮಗಳ ಕಛೇರಿಯಲ್ಲಿ ಕುರ್ಚಿ ಅಲಂಕರಿಸಿಲ್ಲ. ಆದರೂ ಅವರು ನನ್ನಲ್ಲಿ ಹೇಳಿದ್ದು ಹಾಗೆ. ಪ್ರಾಯಶಃ ’ತುಂಬಿದ ಕೊಡ ತುಳುಕಿವುದಿಲ್ಲ’ ಎಂದಿದ್ದು ಗಣೇಶ್ ರಂಥವರನ್ನು ನೋಡಿಯೇ ಇರಬೇಕು. ತುಂಬಿದ ಕೊಡವೊಂದೇ ಅಲ್ಲ, ಖಾಲೀ ಕೊಡವೂ ತುಳುಕುವುದಿಲ್ಲ ಎಂಬ ಇಂದಿನ ಹುಡುಗಾಟಿಕೆಯ ಉತ್ತರವನ್ನು ಮೊದಲಾಗಿಯೇ ಪರಿವೀಕ್ಷಿಸಿ ಅದಕ್ಕೂ ಹೇಳಿಬಿಡುತ್ತಿದ್ದೇನೆ: ಖಾಲೀ ಕೊಡವಾದರೂ ಪರವಾಗಿಲ್ಲ, ಭಾಗಶಃ ತುಂಬಿದ ಕೊಡ ಮಾತ್ರ ಆಗಬೇಡಿ! ಗೊತ್ತಿಲ್ಲದ ವಿಷಯಗಳಲ್ಲಿ ಮೂಗು ತೂರಿಸಿ ಬರೆಯಬೇಡಿ ಎಂಬುದು ಆ ಮಿತ್ರರಿಗೆ ನನ್ನ ಸಲಹೆ. ಈಗ ನೀವೆಲ್ಲಾ ಓದುತ್ತಿರುವಂತೇಯೇ ಅವರೂ ಇದನ್ನು ಓದುತ್ತಿರಬಹುದು, ಅವರ ಪಾಡಿಗೆ ಅವರಿಗೆ ಜ್ಞಾನೋದಯವಾಗಬಹುದು ಎಂದುಕೊಳ್ಳುತ್ತೇನೆ.

ವಿವೇಕಾನಂದರು ಹುಟ್ಟಾ ಬ್ರಾಹ್ಮಣ ಜಾತಿಯವರಲ್ಲ. ಹಿಂದೂ ಸಂಪ್ರದಾಯವನ್ನು ಮುರಿದು ಸನ್ಯಾಸ ಸ್ವೀಕರಿಸಿದರು, ಅವರಿಗೆ ಒಂದಲ್ಲಾ ಎರಡಲ್ಲಾ ಮೂವತ್ತೊಂದು ಕಾಯಿಲೆಗಳಿದ್ದವು, ಅವರು ಮಾಂಸಾಹಾರಿಯಾಗಿದ್ದರು, ಅವರಿಗೆ ಎಳವೆಯಲ್ಲೇ ಮುಪ್ಪು ಆವರಿಸಿತ್ತು, ಯಾರಾದರೂ ಮೈಯ್ಯನ್ನು ಮುಟ್ಟಿದರೂ ನೋವು ಎನ್ನುತ್ತಿದ್ದರು, ಕೂದಲು ಪ್ರಾಯದಲ್ಲೇ ಹಣ್ಣಾಗಿತ್ತು. ಸನ್ಯಾಸಿಯಾಗಿಯೂ ಅವರು ಮ್ಲೇಚ್ಛರ ಮನೆಯಲ್ಲಿ ಊಟಮಾಡುತ್ತಿದ್ದರು, ಏಸು ಬದುಕಿದ್ದರೆ ಅವನ ಪಾದವನ್ನು ಕಣ್ಣಹನಿಯಿಂದಲ್ಲ ಹೃದಯದ ರಕ್ತದಿಂದ ತೊಳೆಯುತ್ತಿದ್ದೆ ಎಂದ ಹಿಂದೂ ವಿರೋಧಿಗಳು -ಮುಂತಾಗಿ ಸಿಕ್ಕ ಸಿಕ್ಕ ಹಾಗೇ ಹಲುಬಿದ್ದಾರೆ ಅವರ ಅಂಕಣದಲ್ಲಿ. ಸ್ವಾಮೀ ವಿವೇಕಾನಂದರು ಅವರ ಶರೀರಧರ್ಮಕ್ಕೆ ತಕ್ಕಂತೇ ಏನನ್ನೋ ಮಾಡಿರಲಿ ಆದರೆ ಅವರು ಕೊಟ್ಟ ಸುದೀರ್ಘ ಪ್ರಬಂಧಗಳಲ್ಲಿ ಒಂದನ್ನಾದರೂ ನೀವು ಓದಿ ಅರ್ಥೈಸಿಕೊಂಡಿರೇ? ಖಂಡಿತಾ ಇಲ್ಲ! ನೀವು ಓದಿದ್ದು ಎರಡೇ ವಾಕ್ಯ. ಮೊದಲನೆಯದು " ನೀನು ನಿನ್ನನ್ನು ತಿದ್ದಿಕೋ ಜಗತ್ತಿನಲ್ಲಿ ಒಬ್ಬ ಮೂರ್ಖನ ಸಂಖ್ಯೆ ಕಡಿಮೆಯಾದೀತು" ಇನ್ನೊಂದು " ಎದ್ದೇಳಿ ಯುವಕರೇ ಭಾರತದ ಕಲಿಗಳೇ ಏಳಿ ಎಚ್ಚರಗೊಳ್ಳಿ" ಇವೆರಡು ವಾಕ್ಯಗಳಲ್ಲೇ ಮೊದಲನೇ ವಾಕ್ಯ ನಿಮಗೆ ರುಚಿಸಲಿಲ್ಲ, ಎರಡನೆಯದು ಜೀರ್ಣವಾಗಲಿಲ್ಲ! ಹೀಗಿರುವಾಗ ವಿವೇಕಾನಂದರ ಬಗ್ಗೆ ಯಾರೋ ವಿದೇಶೀ ಮಹಿಳೆ ಬರೆದಿದ್ದಳು ಎಂದೆಲ್ಲಾ ಆಧಾರ ಕೊಡುತ್ತಾ ಇಲ್ಲಸಲ್ಲದ್ದನ್ನು ನೀವು ಬರೆದಿದ್ದು ನೋಡಿದರೆ ನೀವು ’ಜ್ಞಾನದ ಆಗರ’ ಎಂಬುದು ಸಾಬೀತಾದ ವಿಷಯದಂತೇ ಕಾಣುತ್ತದೆ! ಸಂಶಯವಿಲ್ಲ.

ಬಹಳ ಹಿಂದೆಯೇ ನಾನು ಬರೆದಿದ್ದೆ, ಬರಹಗಾರರಲ್ಲಿ ಎರಡು ವಿಧ. ಹೊಟ್ಟೆಪಾಡಿನ ಬರಹಗಾರರು ಮತ್ತು ಉತ್ತಮ ಬರಹಗಾರರು ಎಂದು ಮೊದಲನೆಯವರು ಪತ್ರಿಕೆಗಳಲ್ಲೋ ಮಾಧ್ಯಮಗಳಲ್ಲೋ ಕೂತು ’ಜಾಗ ತುಂಬಿಸುವ’ ಕೆಲಸ ಮಾಡಿಕೊಡುತ್ತಾರೆ. ಎರಡನೇ ವರ್ಗದವರು ಸಮಾಜಮುಖಿಗಳಾಗಿ ಅಲ್ಲಲ್ಲಿ ಅಲ್ಲಲ್ಲಿ ತಮ್ಮ ಬರಹಗಳನ್ನು ಪ್ರಕಟಿಸುತ್ತಾ ಆಗಬೇಕಾದ ಕೆಲಸಕ್ಕೆ ಸಂದೇಶ ರವಾನೆ ಮಾಡುತ್ತಿರುತ್ತಾರೆ. ಸದ್ರೀ ಲೇಖಕರು ಮೊದಲನೆಯ ಗುಂಪಿಗೆ ಸೇರಿದವರಾಗಿದ್ದು ಈ ಲೇಖನವನ್ನೋದುತ್ತಿದ್ದಂತೆಯೇ ಅವರ ಚೇಲಾಗಳು ಫ್ಯಾನುಗಳು ವಿಚಿತ್ರ ಕಾಮೆಂಟುಗಳನ್ನು ಹಾಕುವುದು ನಿರೀಕ್ಷಿತವೇ. ಅದಕ್ಕೆಲ್ಲಾ ಹೆದರಿ ಬರೆಯದೇ ಇರುವ ವ್ಯಕಿ ನಾನಂತೂ ಅಲ್ಲ. ’ದಿನೇಶ’ನ ಕಿರಣ ಮೈಮೇಲೆ ಬಿದ್ದಾಗಿನಿಂದ ಆ ಸೂರ್ಯನ ಹೆಸರನ್ನು ಹಾಳುಗೆಡಹುವ ಜನರನ್ನು ಕಂಡರೆ ನನಗೆ ಎಲ್ಲಿಲ್ಲದ ಕೋಪ ಬರುತ್ತದೆ.

ಕಸದಿಂದ ರಸ ಎಂಬುದಕ್ಕೆ ಗೋವು ಸಾಕ್ಷಾತ್ ಉದಾಹರಣೆ. ಕಸವನ್ನೇ ತಿಂದು ಅಮೃತತುಲ್ಯ ’ಹಾಲು’ ಎಂಬ ರಸವನ್ನು ಅದು ಕೊಡುವುದರಿಂದ ಹೀಗೆ ಹೇಳುತ್ತಿದ್ದೇನೆ. ಗೋವಿನ ಕೆಚ್ಚಲಲ್ಲಿ ರಕ್ತವನ್ನು ಬಯಸುವ ಕೆಲಜನ ಅದು ಹಾಲು ಕೊಡುತ್ತಿರುವುದಕ್ಕೆ ಅದನ್ನೇ ಬೈಯ್ಯುತ್ತಾರೆ. ಸಂತ-ಮಹಂತರು ಗೋವಿನ ಹಾಗೇ ಇರುತ್ತಾರೆ. ವಿವೇಕಾನಂದರೂ ಇದಕ್ಕೆ ಹೊರತಾಗಿರಲಿಲ್ಲ. ತಮ್ಮಲ್ಲಿನ ದೌರ್ಬಲ್ಯಗಳನ್ನು ಅವರು ರಾಮಕೃಷ್ಣರಲ್ಲಿ ಹೇಳಿಕೊಂಡರು. ಆಹಾರ ಅವರ ಜನ್ಮಮೂಲದಿಂದ ಬಂದಿದ್ದಾದ್ದರಿಂದ ಕೆಲ ಮಟ್ಟಿಗೆ ಅವರು ಮಾಂಸಾಹಾರವನ್ನು ಭುಂಜಿಸಿರಬಹುದು. ನಮ್ಮ ಅವತಾರಗಳಲ್ಲಿ ರಾಮ, ಕೃಷ್ಣ ಇವರೆಲ್ಲಾ ಮಾಂಸಾಹಾರಿಗಳೇ ಆಗಿದ್ದರು ಸ್ವಾಮೀ. ಆದರೆ ನಾವು ಅವರನ್ನು ದೇವರೆಂದು ಪೂಜಿಸುತ್ತಿಲ್ಲವೇ? ಭಗವಂತ ಅವರಾಗಿ ಅವತಾರ ಎತ್ತಲಿಲ್ಲವೇ? ಇನ್ನು ನನಗೆ ಪರೋಕ್ಷವಾಗಿ ವೇದವನ್ನು ಓದಲು ಪ್ರೇರೇಪಿಸಿದವರು ಮಹರ್ಷಿ ಮಹೇಶ್ ಯೋಗಿ ! ಅವರ ಪಾಠಶಾಲೆಯಲ್ಲೇ ನಾನು ಪ್ರಥಮವಾಗಿ ಕಲಿತಿದ್ದು. ತಿಂಗಳಿಗೆ ಹನ್ನೊಂದು ರೂಪಾಯಿ ಕೊಟ್ಟು ಕಲಿಸಿದರು ಆ ಮಹಾತ್ಮ! ಜನ್ಮ ಮೂಲದಿಂದ ಮಹೇಶ್ ಯೋಗಿ ಬ್ರಾಹ್ಮಣ ಕುಲದವರಲ್ಲಾ ಸ್ವಾಮೀ! ಅವರು ಯಾರು ಎಂಬುದು ಮುಖ್ಯವಲ್ಲ- ಅವರ ಕೊಡುಗೆ ಮುಖ್ಯ. ವಿರಾಗಿಯಾಗಿ, ಸನ್ಯಾಸಿಯಾಗಿ ಮಹೇಶ್ ಯೋಗಿ ಸಾಧನೆಮಾಡಿ ಸ್ವಿಟ್ಜರ್ಲ್ಯಾಂಡ್ ನಲ್ಲಿ ಅನೇಕವರ್ಷಗಳ ಕಾಲ ಧರ್ಮದ ಪುನರುತ್ಥಾನ ಕ್ರಿಯೆಯನ್ನು ನಡೆಸಿದರು. ಇವತ್ತಿಗೂ ಅವರು ಗುರುವೆಂಬ ಭಾವ ನನ್ನಲ್ಲಿದೆ. ಮಹರ್ಷಿ ವಾಲ್ಮೀಕಿ ಒಬ್ಬ ಬೇಡನಾಗಿದ್ದರು. ಮಹರ್ಷಿ ವಿಶ್ವಾಮಿತ್ರರು ಮೊದಲು ಕ್ಷತ್ರಿಯರಾಗಿದ್ದರು. ಇಲ್ಲೆಲ್ಲಾ ನಾವು ಋಷಿ ಮೂಲವನ್ನು ಕೆದಕಲಿಲ್ಲ, ಅವೇ ಕಾಣಿಸಿದವು. ಸ್ವಾಮಿ ವಿವೇಕಾನಂದರ ಮೂಲ ಕೂಡ ಹುದುಗಿಸಿಟ್ಟ ಗೌಪ್ಯದ ವಿಷಯವೇನಲ್ಲ. ಅದನ್ನು ಮೊದಲು ಮನಗಾಣಬೇಕಾದ್ದು ನೀವು.

ಸನ್ಯಾಸಿಯಾದ ಮಾತ್ರಕ್ಕೆ ಈ ಜನ್ಮಕ್ಕೆ ಅಂಟಿದ ಕಾಯಿಲೆಗಳು ವಿನಾಶವಾಗಿಬಿಡುವುದಿಲ್ಲ. ಹಿಂದಿನ ಕರ್ಮಫಲಗಳನ್ನು ಆತ ಅನುಭವಿಸಲೇ ಬೇಕಾಗುತ್ತದೆ. ದೃಷ್ಟಾಂತವೊಂದನ್ನು ಹೇಳುತ್ತಿದ್ದೇನೆ: ಒಮ್ಮೆ ಭಗವಾನ್ ಶ್ರೀಧರರು ಕಾಶಿಯಲ್ಲಿರುವಾಗ ಅವರಿಗೆ ರಕ್ತಬೇಧಿ ಆರಂಭವಾಗಿತ್ತು. ಹತ್ತಿರ ಇದ್ದ ಶಿಷ್ಯರು ಏನೇ ಉಪಚರಿಸಿದರೂ ಅದು ಕಮ್ಮಿಯೇ ಆಗಿರಲಿಲ್ಲ. ಇನ್ನೇನು ಕೃಶಕಾಯರಾಗಿ ಗುರುಗಳು ದೇಹವನ್ನೇ ವಿಸರ್ಜಿಸುವರೋ ಎಂಬ ಹಂತ ತಲ್ಪಿತ್ತು. ಶಿಷ್ಯರ ಒತ್ತಾಯದ ಮೇರೆಗೆ ಲೋಟವೊಂದರಲ್ಲಿ ನೀರನ್ನು ತರಿಸಿದ ಶ್ರೀಧರರು, ಶಿಷ್ಯನ ಕೈಲೇ ಆ ಲೋಟವನ್ನಿರಿಸಿ ಅವರೇ ರಚಿಸಿದ " ನಮಃ ಶಾಂತಾಯ ದಿವ್ಯಾಯ....." ಎಂಬ ಮಂತ್ರವನ್ನು ನೂರೆಂಟಾವರ್ತಿ ಪಠಿಸಲು ಹೇಳಿದರು. ಪ್ರತೀ ಹೊತ್ತಿಗೂ ನೂರೆಂಟಾವರ್ತಿ ಹಾಗೆ ಪಠಿಸುತ್ತಾ ನೀರನ್ನು ಕುಡಿಸುತ್ತಾ ಇದ್ದ ಅಲ್ಲಿದ್ದ ಶಿಷ್ಯ. ವಾರದಲ್ಲಿ ಕ್ರಮೇಣ ಹಂತಹಂತವಾಗಿ ರಕ್ತಬೇಧಿ ನಿಲ್ಲುತ್ತಾ ಬಂತು! ನಾನು ನೋಡಿದ ಅನೇಕ ಸನ್ಯಾಸಿಗಳೂ ಮಹಾನ್ ತಪಸ್ವಿಗಳೂ ತಮ್ಮ ಶರೀರಕ್ಕೆ ಒದಗಿದ ಕಾಯಿಲೆಯನ್ನು ಹಾಗೆ ಇದ್ದಕ್ಕಿದ್ದಲ್ಲೇ ಮಂಗಮಾಯ ಮಾಡುವುದಿಲ್ಲ, ಬದಲಾಗಿ ಎಲ್ಲರಂತೇಯೇ ಅನುಭವಿಸೇ ಹಿಂದಿನ ಋಣವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ ರಮಣ ಮಹರ್ಷಿಗಳೂ ಶಿರಡೀ ಸಾಯಿಬಾಬರೂ ಉದಾಹರಣೆಗಳಾಗುತ್ತಾರೆ. ರಮಣ ಮಹರ್ಷಿಗಳಿಗೆ ಹುಣ್ಣಾಗಿ ಹುಣ್ಣಿನಲ್ಲಿ ಹುಳಗಳೂ ಓಡಾಡುತ್ತಿದ್ದವು! ಹುಣ್ಣಿನ ಹುಳಗಳನ್ನು ಅವರು ನಾಶಪಡಿಸುತ್ತಿರಲಿಲ್ಲ, ಬದಲಿಗೆ ಅವು ಋಣದಿಂದ ಮುಕ್ತಿ ಕೊಡುತ್ತಿವೆ ಎನ್ನುತ್ತಿದ್ದರು!

ಅನೇಕಾವರ್ತಿ ಹೇಳುತ್ತಲೇ ಬಂದಿದ್ದೇನೆ. ವಿವೇಕಾನಂದರಂತಹ ಕುಲೀನ ಕ್ಷತ್ರಿಯ ಸನ್ಯಾಸಿಯನ್ನು ಸಮಾಜ ಒಪ್ಪಿಕೊಂಡಿದ್ದು ಯಾಕೆಂದರೆ ಅವರ ಆಳವಾದ ಅಧ್ಯಯನ ಮತ್ತು ಅಧ್ಯಾಪನಕ್ಕಾಗಿ. ರಾಮಕೃಷ್ಣರು ಮಗುವಿನಲ್ಲಿನ ಸಾಮಾಜಿಕ ಕಳಕಳಿಯನ್ನು ನೋಡಿ ಸನ್ಯಾಸವನ್ನು ನೀಡಿದರು; ಶಕ್ತೀಪಾತ ಯೋಗವೆಂಬ ಸಿದ್ಧಿಯಿಂದ ತಾವು ಪಡೆದಿದ್ದ ಪರಿಪೂರ್ಣ ಜ್ಞಾನವನ್ನು ವಿವೇಕಾನಂದರಿಗೆ ಅನುಗ್ರಹಿಸಿದರು. ವಿವೇಕಾನಂದರ ಬಾಳಿನ ಆ ತಿರುವಿನ ನಂತರ ವಿವೇಕಾನಂದರು ಇಡೀ ವಿಶ್ವಕ್ಕೇ ಅಧ್ಯಾಪನ ನಡೆಸಿದರು! ವಿಶ್ವವಂದ್ಯರಾದರು. ಕಮಲದ ಹುಟ್ಟು ಕೆಸರಲ್ಲೇ ಹೊರತು ಸಾಮಾನ್ಯ ನೀರಿನಲ್ಲಿ ಆಗುವುದಿಲ್ಲ. ಕೆಸರಲ್ಲಿ ಹುಟ್ಟಿತೆಂದು ದೇವರಿಗೆ ಅದನ್ನು ಅರ್ಪಿಸುವುದಿಲ್ಲವೇ? ದೇವರು ಅದನ್ನೇ ತನ್ನ ಕುಳಿತುಕೊಳ್ಳುವಿಕೆಗೂ ತನ್ನ ಹೊಕ್ಕಳಿನಿಂದ ಹೊರಹೊರಡಿಸಿ ಅದರಲ್ಲಿ ಬ್ರಹ್ಮನ ಕೂತುಕೊಳ್ಳುವಿಕೆಗೂ ಕಾರಣನಾದನಲ್ಲವೇ? ಸ್ವಾರಸ್ಯ ಹೀಗಿದೆ: ಮನೆಗಳಲ್ಲಿ ನಾವು ಚಪ್ಪಲಿ ಇಡುವಲ್ಲಿ ದೇವರ ಚಿತ್ರಪಟಗಳನ್ನು ಇಡುವುದಿಲ್ಲ. ಆದರೆ ಚಮ್ಮಾರನೊಬ್ಬ ತನ್ನ ಅಂಗಡಿಯಲ್ಲಿ ಚಪ್ಪಲಿಗಳ ಪಕ್ಕದಲ್ಲೇ ಚಿಕ್ಕ ಜಾಗದಲ್ಲಿ ದೇವರ ಪಟ ಇಟ್ಟು ಪೂಜಿಸುತ್ತಾನೆ. ಅದರಂತೇ ಆ ಯಾ ವೃತ್ತಿಯವರು ತಮಗಿರುವ ಜಾಗದಲ್ಲೇ ಭಗವಂತನಿಗೂ ಒಂದು ಪುಟ್ಟ ಜಾಗ ಕೊಡುತ್ತಾರಲ್ಲಾ ಆ ಮನದ ಭಕ್ತಿಯನ್ನು ಭಗವಂತ್ ಅಪೇಕ್ಷಿಸುತ್ತಾನೆ, ನಿರೀಕ್ಷಿಸುತ್ತಾನೆ. ಸಪ್ತರ್ಷಿಗಳ ಅಂಶವೊಂದು ಜಾರಿ ನರೇಂದ್ರನಾಥ[ವಿವೇಕಾನಂದರ ಪೂರ್ವಾಶ್ರಮದ ಹೆಸರು]ನ ಜನನವಾಯಿತೆಂಬ ಹೇಳಿಕೆಯಿದೆ. ಮಹಾತ್ಮರು ಮಿಕ್ಕವರ ಹಾಗೇ ಬಹಳಕಾಲ ಇಲ್ಲೇ ಉಳಿಯುವುದಿಲ್ಲ. ಬಂದ ಸಂಕಲ್ಪ ಸಿದ್ಧಿಯಾದಮೇಲೆ ಅವರು ಹೊರಟುಹೋಗುತ್ತಾರೆ.

೩೯ ವರ್ಷ ೫ ತಿಂಗಳು ೨೪ ದಿನ ಬದುಕಿದ್ದೂ ಆ ಕಾಲದಲ್ಲೇ ಇಷ್ಟೆಲ್ಲಾ ಹೆಸರುಗಳಿಸಲು ಕಾರಣ ಅವರ ಆಂಗ್ಲ ಭಾಷಾ ಪ್ರೌಢಿಮೆ ಎನ್ನುವ ಈ ಲೇಖಕ ವಿವೇಕಾನಂದರು ತರಗತಿಯಲ್ಲಿ ಶತ ದಡ್ಡರಾಗಿದ್ದರು ಎನ್ನುತ್ತಾನೆ. ಖೇತ್ರಿ ಮಹಾರಾಜರ ಮಾಸಿಕ ವೇತನದಿಂದ ವಿವೇಕಾನಂದರ ಅಮ್ಮ ಬದುಕು ನಡೆಸಿದರು ಎನ್ನುತ್ತಾನೆ. ಸನ್ಯಾಸಿಗೆ ಸಂಸಾರದ ಬಂಧವಿಲ್ಲ. ಅಷ್ಟಕ್ಕೂ ವಿವೇಕಾನಂದರು ಅವರಮ್ಮನಿಗೆ ಏಕಮಾತ್ರ ಸಂತಾನ ಎಂದೇನೂ ಇರಲಿಲ್ಲ. ಉಳಿದ ಹತ್ತು ಮಕ್ಕಳು ಏನು ಮಾಡಿದರು ಸರ್ ? ಅಮ್ಮನನ್ನು ಮರೆತುಹೋದರೇ? ವಿವೇಕಾನಂದರು ನಿರುದ್ಯೋಗಿಯಾಗಿದ್ದು ಹರಕಲು ಬಟ್ಟೆ ತೊಟ್ಟು ಕಲ್ಕತ್ತಾದ ಬೀದಿಗಳಲ್ಲಿ ಸುತ್ತುತ್ತಿದ್ದರಂತೆ ಎಂದಿರಲ್ಲಾ ಸನ್ಯಾಸಿಗಳಿಗೆ ತಪಸ್ಸು, ಅಧ್ಯಯನ ಮತ್ತು ಸನ್ಮಾರ್ಗ ಬೋಧನೆ ಬಿಟ್ಟು ಬೇರೇನು ಉದ್ಯೋಗ ಇರುತ್ತದೆ ?

ವಿವೇಕಾನಂದರ ವಿವೇಕ, ಅವರ ಅಗಾಧ ಜ್ಞಾನ, ಧರ್ಮಾಂಧತೆಯ ವಿರುದ್ಧದ ಅವರ ಧೋರಣೆ, ಘನತರ ವಿಷಯಗಳನ್ನೂ ಸುಲಭವಾಗಿ ಎಲ್ಲರಿಗೂ ಅರಿವಾಗುವಂತೇ ತಿಳಿಸಿಕೊಡುವ ಜಾಣ್ಮೆ, ಇತಿಹಾಸದ ಅರಿವು, ಪ್ರಸಕ್ತ ವಿದ್ಯಮಾನಗಳ ಅರಿವು ಇದೆಲ್ಲಾ ಇದ್ದು ಅವರು ಬರೆದ ಬೃಹತ್ ಸಂಹಿತೆಗಳನ್ನು ಅರ್ಥಮಾಡಿಕೊಳ್ಳಲಾಗದವರು ಆಗಲೂ ಇದ್ದರು, ಈಗಲೂ ಇದ್ದಾರೆ. ಹೇಗೆ ಮೂಲ ಭಗವದ್ಗೀತೆ ಎಲ್ಲರಿಗೂ ಅರ್ಥವಾಗುವುದು ಕಷ್ಟಸಾಧ್ಯವೋ ಹಾಗೆಯೇ ವಿವೇಕ ವಾಣಿ ಎಲ್ಲರಿಗೂ ರುಚಿಸುವುದಿಲ್ಲ, ಅರ್ಥವಾಗುವುದಿಲ್ಲ. ದೇಹ ದಾರ್ಡ್ಯತೆಯ ಬಗ್ಗೆ ಹಾಗೆ ತೊಂದರೆಯಿತ್ತು ಹೀಗೆ ಕೊಸರೊಂದಿತ್ತು ಎಂದು ಸರ್ಟಿಫಿಕೇಟ್ ಕೊಟ್ಟಿದ್ದೀರಲ್ಲ ಅವರ ನಿಲುವನ್ನು ಚಿತ್ರದಲ್ಲಾದರೂ ಸರಿಯಾಗಿ ಒಮ್ಮೆ ನೋಡಿದ್ದೀರೇ ? ವಾರಗಳ ಕಾಲ ಸ್ನಾನ ಮಾಡದ ವ್ಯಕ್ತಿ ಕುಂತಲ್ಲೇ ನಾರುವ ಹಾಗೇ ನಿಮ್ಮಂಥಾ ’ಮಹಾಜ್ಞಾನಿಗಳು’ವಾಸನೆ ಹೊಡೆಯುತ್ತಿರುವುದು ಸುತ್ತಲ ಜನರಿಗೆ ಕೂತುಕೊಳ್ಳಲಿಕ್ಕೆ ಆಗುತ್ತಿಲ್ಲ! ಇನ್ನು ಮೇಲಾದರೂ ತಾನೇ ಪಂಡಿತ, ತನ್ನ ಶಂಖದಿಂದ ಬಂದಿದ್ದೇ ತೀರ್ಥ ಎಂಬ ನಿಮ್ಮ ಲಹರಿಯನ್ನು ಕೈಬಿಟ್ಟು ಲೋಕಮುಖರಾಗಿ ವಿವೇಚಿಸಿ ಬರೆಯಿರಿ ಎಂದು ಉನ್ನತ ಶಬ್ದಗಳಲ್ಲಿ ಗೌರವಿಸಿ ಬರೆದಿದ್ದೇನೆ. ಅರ್ಧ ತುಂಬಿದ ಅಥವಾ ಭಾಗಶಃ ತುಂಬಿದ ಕೊಡವಾದರೆ ಬಹಳ ಕಷ್ಟ; ಜನ ಹಿಡಿದು ಬಡಿದೂಬಿಡಬಹುದು! |ಅಲ್ಪವಿದ್ಯಾ ಮಹಾಗರ್ವೀ .....ಕೇಳಿದ್ದೀರಲ್ಲಾ ?

[ಮಾಹಿತಿಗೆ ೧೬.೧.೨೦೧೨ ರ ಕನ್ನಡ ದಿನಪತ್ರಿಕೆಯೊಂದನ್ನು ನೀವು ಬಳಸಿಕೊಳ್ಳಬಹುದು; ಲೇಖನ ಯಾವುದಕ್ಕೆ ಉತ್ತರ ಎಂಬುದು ತಮಗೂ ಸರಿಯಾಗಿ ತಿಳಿಯುತ್ತದೆ]


19 comments:

 1. ಲೇಖನ ಓದಿದಾಗಿನಿಂದ ಒಂಥರಾ ಕಸಿವಿಸಿ ಇತ್ತು ಸರ್.
  ನೀವು ಅದರ ಬಗ್ಗೆ ಅಂದು ಕೊಂಡಿದ್ದೆ.
  ಅದರ ಬಗ್ಗೆ ಬರೆದದ್ದು ಸರಿಯಾಯಿತು ಸರ್.
  ಇದೆ ಥರದ ಅಭಿಪ್ರಾಯವನ್ನು ನನ್ನ ಮಿತ್ರರೂ ಹಂಚಿಕೊಂಡಿದ್ದರು.
  ಮಹಾನ್ ವ್ಯಕ್ತಿಗಳ ದೋಷಗಳನ್ನೇ ಪಟ್ಟಿ ಮಾಡಿ ಮಹಾನ್ ಆಗ ಬೇಕೆಂಬ ಚಪಲ
  ಬೆಳೆಯುತ್ತಿದೆ ಏನೋ ಸರ್?
  ಸ್ವರ್ಣಾ

  ReplyDelete
 2. ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ|
  ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ||
  ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ|
  ಶಾಸ್ತ್ರತನದಿಂದಲ್ಲ -ಮಂಕುತಿಮ್ಮ...||

  ReplyDelete
 3. ಭಟ್ಟರೇ ನಿಮ್ಮ ಬರಹ ಚಾಟಿಯೇ ಸರಿ . ಸರಿಯಾಗಿ ಬರೆದಿದ್ದೀರಿ.
  ಮಾಡಲು ಕೆಲಸವಿಲ್ಲದೇ ಬರೆದಿರುವವರ ಕೆಲಸ ಅದು ಎನ್ನಿಸತ್ತೆ ನನಗೆ.
  ವಿವೇಕಾನಂದರೂ ಮನುಷ್ಯರೇ. ಆದರೆ ವಿಚಾರಗಳಿಂದ ಪ್ರಸಿದ್ದರಾದವರು. ಅವರ ವಯಕ್ತಿಕ ಬದುಕಿಗೂ ಪಾಂಡಿತ್ಯಕ್ಕೂ ಏನು ಸಂಭಂಧ.
  ವಿಶ್ವದೆಲ್ಲಡೆ ಭಾರತೀಯ ಸಂಸ್ಕೃತಿ ಶ್ರೇಷ್ಠವಾದದ್ದು ಎಂದು ಸಾರಿ ನಾವೆಲ್ಲಾ ತಲೆ ಎತ್ತುವಂತೆ ಮಾಡಿದ ಮಾಹಾನ್ ಪುರುಷ ವಿವೇಕಾನಂದ.

  ReplyDelete
 4. ಭಟ್ ಸರ್ ಲೇಖನ ನಾನು ಓದಿದ್ದೆ ಹಾಗೂ ಅದೇ ವಿಷಯವಾಗಿ ನಾನು ಬ್ಲಾಗ್ ಸಹ ಬರೆದಿದ್ದೆ.ದಿನೇಶ್ ನನಗೆ ಪರಿಚಯವಿಲ್ಲ.ಹಾಗಂತ ಲೇಖನದಲ್ಲಿ ತಿರುಳಿಲ್ಲದೇ ಇಲ್ಲ
  ವಿವೇಕರು ನಮ್ಮಲ್ಲಿ ಅಡಗಿದ್ದ ಜಾತೀಯತೆ ಮೂಢನಂಬಿಕೆ ವಿರುದ್ಧ ಹೋರಾಡಿದ್ದರು. ವಿಪರ್ಯಾಸವೆಂದರೆ ಅವರು ಬೋಧಿಸಿದ ಮೌಲ್ಯಗಳನ್ನು ಮರೆತು ಅವರು ಹೇಳಿದ
  ನೀತಿ ಎಲ್ಲ ಮರೆತು ಅವರ ಪ್ರತಿಮೆ ಚೌಕದಲ್ಲಿ ನಿಲ್ಲಿಸಿ ನಾವು ಎಡವಿದ್ದೇವೆ.. ಸರ್ ನಿಮ್ಮ ಲೇಖನ ಅದರ ಆಶಯದಬಗ್ಗೆ ಎರಡು ಮಾತಿಲ್ಲ ಅಧ್ಯಯನ ಮುಖ್ಯ ಈ ಮಾತು ಸರಿ.

  ReplyDelete
 5. ಪ್ರಜಾವಾಣಿ,ಪತ್ರಿಕೆಯ ಈ "ಮಟ್ಟು"ವಿನ ಲೇಖನ ನಾನೂ ಓದಿದೆ.ಛೇ ಇಷ್ಟು ಕೆಟ್ಟದಾಗಿ ಬರೆಯಲು ಸಾಧ್ಯವೇ..?ಎಂದು ನನಗನ್ನಿಸಿತ್ತು.
  ನನ್ನ ಪತ್ರಕರ್ತ ಮಿತ್ರನಿಗೆ ಈ ಲೇಖನ ತೋರಿಸಿ ಹೀಗೂ ಉಂಟೇ.?ಎಂದು ಕೇಳಿದೆ.ಲೇಖಕನ ಹೆಸರು ನೋಡಿದವನೇ..".ಇವನೋ
  ಅದಕ್ಯಾಕೆ ಅಷ್ಟು ತಲೆ ಬಿಸಿ, ಅವನ ಲೇಖನಕ್ಕೆ ಯಾರೂ ಬೆಲೆ ಕೊಡುವುದೇ ಇಲ್ಲ..ಅವನು "ಲೆಪ್ಟಿಸ್ಟ್ ".ಅವರೆಲ್ಲಾ ಪ್ರಚಾರಕ್ಕಾಗಿ ಆ ರೀತಿ
  ಬರೆಯುತ್ತಾ ಇರುತ್ತಾರೆ.ಗಂಭೀರ ವಿಷಯವೇ ಅಲ್ಲ"ಎಂದು ಹೇಳಿದ.

  ReplyDelete
 6. ಸ್ವಾಮಿ ಭಟ್ಟರೇ, ಆ ಅ೦ಕಣಕಾರರಿಗೆ ಸ್ವಲ್ಪ ಬುದ್ಧಿ "ಮಟ್ಟು" ಅನ್ಸುತ್ತೆ. ವಿವೇಕರು ದಡ್ಡರು, ಮಾ೦ಸಾಹಾರಿ, ಧೂಮಪಾನಿ, ರೋಗಗ್ರಸ್ತ ಹೀಗೆ ಅದೇನೇ ಆಗಿದ್ದರೂ ಅವೆಲ್ಲವನ್ನೂ ಮೀರಿ ಪರಮಹ೦ಸರ ಶಿಷ್ಯತ್ವ ಪಡೆದು ತಮ್ಮ ನ್ಯೂನತೆ ಗಳನ್ನು ಮೆಟ್ಟಿ ಜಗತ್ತಿಗೆ ಕೊಟ್ಟ ಸ೦ದೇಶ ಮಾತ್ರ ಇ೦ದು ಪ್ರಸ್ತುತವಾಗಬೇಕು. ಅವರನ್ನು ಹಿ೦ದೂ ಧರ್ಮ ಪ್ರಚಾರಕ ಎ೦ದು ಬಿ೦ಬಿಸುವುದಾಗಲೀ, ಅಥವಾ ಇನ್ನಾವುದೋ ಕುತರ್ಕದಿ೦ದ ಹೀಗಳೆಯುವುದಾಗಲೀ ಸಲ್ಲದು. Every saint has a past, every sinner has a future, ಎ೦ಬುದು ಆ ಪತ್ರಕರ್ತರಿಗೆ ಗೊತ್ತಿಲ್ಲವೆನಿಸುತ್ತದೆ. ನಮ್ಮ ಇ೦ದಿನ ಪತ್ರಕರ್ತ-ಬರಹಗಾರರಿಗೆ "ಭೂತ" ದ ಬಗ್ಗೆ ಆಸಕ್ತಿ, ಅವರಿಗೆ ವರ್ತಮಾನ ಮತ್ತು ಭವಿಷ್ಯತ್ಕಾಲದ ಬಗ್ಗೆ ಆಸ್ಥೆ ಕಮ್ಮಿ. ನಮ್ಮ-ನಿಮ್ಮಲ್ಲಿ ಅಭಿಪ್ರಾಯ ಭೇಧ ಗಳಿರಬಹುದು, ಆದರೆ ನಿಮ್ಮ ಲೇಖನದ ಒಟ್ಟು ಆಶಯಕ್ಕೆ ನನ್ನ ಒಪ್ಪಿಗೆ ಇದೆ.

  ReplyDelete
 7. ಭಟ್ಟರೆ,
  ನನ್ನ ಸುದೈವದಿಂದ ಆ ಪತ್ರಿಕೆಯನ್ನಾಗಲೀ, ಆ ಲೇಖನವನ್ನಾಗಲೀ ನಾನು ಓದಿಲ್ಲ. ನಿಮ್ಮ ಲೇಖನದ ಮೂಲಕ ಇದೀಗ ತಿಳಿದು ಬಂದಿತು. ಹುಚ್ಚಾಸ್ಪತ್ರೆಯಲ್ಲಿದ್ದವನು ಹೊರಗಿನವರಿಗೆಲ್ಲ ಹುಚ್ಚರು ಎಂದು ಕರೆದಂತೆ ಇದೆ ಈ ದೈನೇಶವಾಣಿ!

  ReplyDelete
 8. ದೇಸಾಯರೇ, ನಿಮ್ಮಲ್ಲಿ ಯಾಕೆ ಆ ದ್ವಂದ ಎಂದು ನನಗೆ ತಿಳಿಯುತ್ತಿಲ್ಲ. ಪುರಾಣ
  ಇತಿಹಾಸಗಳಲ್ಲಿನ ಮಹಾಪುರುಷರ ಮೂಲ ಕೆದಕುವ ಗುಂಪಿಗೆ ನೀವು ಸೇರಿದಿರೋ ಅಥವಾ ಅಂಥವರು ಕೊಟ್ಟ ಮಹಾನ್ ಕೃತಿಗಳ ಬಗ್ಗೆ, ಜೀವನಸೂತ್ರಗಳ ಬಗ್ಗೆ ಆಸಕ್ತರಾಗಿರುವಿರೋ ನನಗೆ ಅರ್ಥವೂ ಆಗುತ್ತಿಲ್ಲ. ಪತ್ರಿಕೆಯ ಲೇಖನದಲ್ಲಿ ಹುರುಳಿಲ್ಲದೇ ಇಲ್ಲಾ ಎನ್ನುತ್ತೀರಿ ನಾನು ಹೇಳಿದ್ದಕ್ಕೂ ಹೌದು ಎನ್ನುತ್ತೀರಿ -ಎರಡನ್ನೂ ಏಕಕಾಲಕ್ಕೆ ಒಪ್ಪುವ ನೀವು ಯಾವ ನಿಲುವಿಗೆ ಬದ್ಧರು ? ದ್ವಂದ್ವ ನಿವಾರಿಸಿಕೊಳ್ಳಿ ಅಮೇಲೆ ಮಾತಾಡೋಣ.
  ----
  ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

  ReplyDelete
 9. ತುಂಬಾ ತುಂಬಾ ಒಳ್ಲೆಯ ಲೇಖನ.... ಸರಿಯಾಗಿ ಹೇಳಿದ್ದೀರೀ....
  ಆ ದಿನೇಶ್ ಅಮಿನ್ ’ಮೆಟ್ಟು’ ಒಬ್ಬ ಸಮಯ ಸಾದಕ.... ಜೊತೆಗೆ ಅವನಿಗೆ ಮೇಲುವರ್ಗ-ಕೆಳವರ್ಗ ಅಂತ ನಮ್ಮೆಲ್ಲರನ್ನೂ ಒಡೆದು ಸಮಾಜವನ್ನು ಬೇರೆಮಾಡುತ್ತಿರುವ ಬುದ್ದಿ(ಇಲ್ಲದ)ಜೀವಿಗಳ ಒಂದಷ್ಟು ತಿಕ್ಕಲು ಬಡ್ಡಿಮಕ್ಕಳ ಬೆಂಬಲ...

  ಧನ್ಯವಾದಗಳು SIR

  ReplyDelete
 10. ನಿಮ್ಮ ಮೇಷ್ಟ್ರು ಹೇಳಿದಾಗೆ ನಿಮ್ಮ ತಲೆಯಲ್ಲಿ ಏನಿದೆಯಪ್ಪಾ ಅಂದ್ರೆ ಕೊಳೆತ ಬಟಾಟೆ ಇದೆ ಅಂತ ಹೇಳಬಹುದು.

  ReplyDelete
 11. ನೀವು ಹೇಳಿದ್ದು ನಿಜ ಭಟ್ಟರೇ, ಸ್ವಾಮಿ ವಿವೇಕಾನಂದರ ಬಗ್ಗೆ ಬರೆಯುವ ಅರ್ಹತೆ ಆ ಪತ್ರಕರ್ತರಿಗೆ ಇಲ್ಲ. ಅಂತಹ ಹಿರಿಯ ಪತ್ರಕರ್ತರಿಂದ ಇಂತಹ ಕೀಳು ಮಟ್ಟದ ಬರಹವನ್ನು ನಾನಂತೂ ನಿರೀಕ್ಷಿಸಿರಲಿಲ್ಲ. ಅವರ ಆ ಕೊಳಕು ಲೇಖನವನ್ನು ಓದಿ ದಂಗುಬಡಿದಂತಾಗಿತ್ತು. ಆದರೆ ಸ್ವಾಮಿ ವಿವೇಕಾನಂದರ ಬಗ್ಗೆ ಇಂತಹ ಕೀಳು ಮಟ್ಟದ ಕುಹಕಿಗಳ ಮಾತಿ ಇದೇ ಮೊದಲಲ್ಲ. ಆದರೆ ಎಲ್ಲವೂ ನಾಯಿ ಬೊಗಳಿದಂತಾಗಿತ್ತು. ಅಷ್ಟೇ. ಈಗ ಇದೂ ಒಂದು ಸೇರ್ಪಡೆಯಷ್ಟೇ. ಏನಕೇನ ಪ್ರಕಾರೇಣ ಪ್ರಸಿದ್ಧಿ ಪಡೆಯಬೇಕೆಂಬ ಆಸೆಯಿಂದ ಇಂತಹ ನೀಚ ಕೃತ್ಯಕ್ಕೆ ಆ ಪತ್ರಕರ್ತರು ಕೈ ಹಾಕಿದ್ದಾರೆ. ಬೇರೆ ಏನೂ ಬೇಡ. ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿಯನ್ನು ಒಮ್ಮೆ ಸಾವಧಾನವಾಗಿ ಓದಿಕೊಂಡಿದ್ದರೆ ಸಾಕಿತ್ತು. ಬಹುಶಃ ಇಂತಹ ಪೆದ್ದುತನದ ಕೆಲಸಕ್ಕೆ ಅವರು ಮುಂದಾಗುತ್ತಿರಲಿಲ್ಲ. ಇನ್ನಾದರೂ ಆ ಮಹಾನುಭಾವ ಶ್ರೀ ರಾಮಕೃಷ್ಣಾಶ್ರಮಕ್ಕೆ ಹೋಗಿ ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿಯನ್ನು ಓದಿ, ಒಂದಷ್ಟು ವಿವೇಕ ಬೆಳೆಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ.
  ಕೇಶವ ಪ್ರಸಾದ್.ಬಿ.ಕಿದೂರು, ಪತ್ರಕರ್ತ

  ReplyDelete
 12. Dinesh A Mattu bareda lekhana ninnantaha jativadi hagu shoshaka brahmanara tikakke hasi menasu iridante agide. adakkene ishtondu bobbe hakta iddira. eshtadaru saviraru varshagalinda shoodraru mattu dalitarannu shoshisutta banda kulavallave nimmadu. nimminda intaha pratikriye baruvudu sahajave

  ReplyDelete
 13. ಎರಡನೇ ಅನಾನಿಮಸ್ಸರೇ, ನಿಮಗೆ ನಿಮ್ಮತನವೇ ಇಲ್ಲದೇ ಅನಾನಿಮಸ್ಸಾಗಿ ನಿಮ್ಮ ಅಂಡಿಗೆ ನೀವೇ ಬೆಲ್ಲ ಸವರಿಕೊಂಡು ಬೇರೆಯವರು ನೆಕ್ಕಲಿ ಎಂದು ಬ್ರಹ್ಮಾಂಡ ತಿರುಗಿ ಬೊಗಳಿದರೂ ಕರೆಯುವುದು ಎರಡೇ ಅಕ್ಷರದ ಪ್ರಾಣಿಯ ಹೆಸರು! ಆ ಪ್ರಾಣಿಗಾದರೂ ಒಂದು ರೀತಿ-ನೀತಿ ಇದೆ, ನಿಮಗದಿಲ್ಲ ಎಂಬುದು ನಿಮ್ಮ ಕೊಳೆತ ಕುಂಬಳಕಾಯಿಯ ತಲೆ ಹೇಳುತ್ತದೆ! ನಿಮ್ಮ ನೇರಕ್ಕೆ ಯಾರೂ ಕುಣಿಯುವುದಿಲ್ಲಾ ಎಂಬ ತಿಕ್ಕಲುತನಕ್ಕೆ ಈ ಪ್ರತಿಕ್ರಿಯೆ ನಿಮ್ಮದು, ಅದನ್ನು ಲೇಖನದಲ್ಲೇ ಹೇಳಿದ್ದೇನೆಲ್ಲಾ -ನಿರೀಕ್ಷಿಸಿಯೇ ಇದ್ದೇನೆ, ನಿಮಗೆ ನಿಮ್ಮತನವಿದ್ದರೆ ನೇರ ನಿಮ್ಮ ಹೆಸರನ್ನು ಹಾಕಿ ಮರ್ಯಾದೆಯಾಗಿ ಬದುಕಿ.

  ReplyDelete
 14. bhatre menasu swalpa jastiye kharavagide anisutte. nimage devastanagalli uta maduvaga pratyeka panktiye beku. alli hindugalu nenapaguvudilla nimage. bare janivara nenapagodu. nimmantaha jativadigalinda shoodraru-dalitaru enu olledannu nireekshisoke agolla. innoo nimma jayamana badalagade hodalli ondu dina dalitaru mattu shoodraru nimma andige bare menasinakayi matravalla, berenanno turukisuttare nodi. paristhiti kai tappuva modalu sari darige banni. a eradu aksharada nayigadaru swalpa niyattu ide. neevu adakkintalu kade annodannu nimma blognalli sakashtu torisiddiri

  ReplyDelete
 15. ಹಿಂದೆಬಿದ್ದ ಮಹಾಶಯ ಅನಾನಿಮಸ್ಸರೇ, ನಿಮ್ಮನ್ನು ನೀವು ತಿದ್ದಿಕೊಂಡಿದ್ದೀರಲ್ಲಾ ಸಾಕು, ನನಗೆ ನಿಮ್ಮ ಬುದ್ಧಿವಾದ ಬೇಕಿಲ್ಲ! ಅರ್ಥಮಾಡಿಕೊಳ್ಳಿ ನಾನು ಎಲ್ಲವನ್ನೂ ಕಾರಣೀಭೂತವಾಗಿ ವಿವರಿಸಿದ್ದೇನೆ. ಇಲ್ಲಿ ಜಾತಿಯ ಪ್ರಶ್ನೆಗಿಂತಾ ಕೆಲವು ನಿರ್ದಿಷ್ಟ ಕಾರಣಗಳು ಹೇಗೆ ಇವೆ ಎಂಬುದನ್ನು ಸ್ಪಷ್ಟವಾಗಿ ಕತ್ತೆಗೂ ಅರ್ಥವಾಗುವ ರೀತಿ ವಿವರಿಸಿದ್ದೇನೆ. ಹೀಗಾಗಿ ಯಾರದೋ ಮೆಣಸಿನಕಾಯಿ ಸೀಗೇಕಾಯಿ ಇದಕ್ಕೆಲ್ಲಾ ಹೆದರುವ ಸ್ವಭಾವ ನನ್ನದಲ್ಲ. ನಿಮ್ಮ ಹೆಸರು, ವಿಳಾಸ, ದೂರವಾಣಿ ನಮೂದಿಸಿ, ಮಾತನಾಡುತ್ತೇನೆ, ಸುಮ್ನೇ ಯಾವಗಲೋ ಪುಸಕ್ಕನೆ ಬಂದು ಓಡಿಹೋಗಿ ಮತ್ತೆ ಇಲ್ಲದ ಏನೇನೋ ಬರೆಯಬೇಡಿ, ಇಷ್ಟು ಸಾಕು-ನೀವು ಏನೇ ತುರಿಸು ಎಂದರೂ ನಿಮಗೆ ತುರಿಸಿಕೊಡುವ ಜನ ನಾನಲ್ಲ, ನಿಮಗೆ ಇನ್ಯಾರೋ ತುರಿಸಿಕೊಡುತ್ತಾರೆ, ಆ ದಿನ ಬರುತ್ತದೆ. ಅಲ್ಲಿನ ತನಕ ಕಾಯುತ್ತಿರಿ.

  ReplyDelete
 16. nannannu nanu tiddi kollalu nimma tara jativadadalli nanu mulugilla. samajadalli nimma tara dwesha bittolla. jati prashne vichara ettidaga nimage kharavenisuttade. yakandare nimage badalagalu manassilla. samajadalli ade hindina jativadi shoshane munduvarisalu havanisuttiruvavaru neevu. heegagi jati vichara bandaga odi hoguttiri. nanu eno illaddanu bareyuttene. adare neevu? ade jativada, brahmanya... dalitaru-shoodraru-brahmanaru-alpasankyataru onde vedike adi baruvante maduva yavudadaru baraha nimminda bareyalu adite? modalu heege madi. matte yarannu yaru turisikodabeku anta nirdharisona...

  ReplyDelete
 17. loper coments. dinsh good writer. he study more books regarding vivekanda. jati hege kelsa madutte annodakke idu expample. nimm jatiya hne baharve idu. punny nanu nimm hage lopar jatiylli huttilla.

  ReplyDelete
 18. nimma jatiy patrkrtar tanda ega duddin hinde biddide. kidura yen madiddane annodu gottu. satty yawaglu khi maraya. muccukonudu iri rss chaddi makkla.

  ReplyDelete
 19. Dinesh is impartial and Much better Writer than u Mr Bhat

  ReplyDelete