ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, December 12, 2011

ಅನ್ನ-ನೀರು ಇರುವವರೆಗೂ ಕನ್ನಡ !

ಅನ್ನ-ನೀರು ಇರುವವರೆಗೂ ಕನ್ನಡ !
[ಮೊನ್ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನಲ್ಲಿ,ಗುಂಗಿನಲ್ಲಿ ಬರೆದ ಒಂದು ಹಾಡು ನಿಮಗರ್ಪಿತ :]

ಚಿನ್ನದಾ ರನ್ನದಾ ಕನ್ನಡದಾ ತೇರನು
ಮುನ್ನಡೆಸುವುದಕೆ ಜಾಣ ಬೇಗ ಬಾ
ನಿನ್ನೆ ಇಂದು ನಾಳೆ ಎಂದು ಮೂರುದಿನದ ಜಾತ್ರೆಯಲ್ಲ
ಅನ್ನ-ನೀರು ಇರುವವರೆಗೂ ಕನ್ನಡ !

ಹಲವು ಸಾಧುಸಂತರು ಬಲಕೆ ದೇಶಭಕ್ತರು
ಗೆಲುವಿಗಾಗಿ ದುಡಿದರು ರಥವನೆಳೆದು ಖ್ಯಾತರು
ಒಲವಿನಿಂದ ಕೂಡಿದ ತವರು-ತಾಯಿ ಮನೆಯಿದು
ಚೆಲುವಿನಲ್ಲಿ ಚೆಲುವಿದು ನಮ್ಮ ಹೆಮ್ಮೆ ಕನ್ನಡ

ಪದಪದದಲು ಹಾಸ್ಯ ಹೊನಲು ಹದಪಾಕದ ಭಾಷೆಯು
ಕದವ ತೆರೆದು ಕೊಟ್ಟರು ಜ್ಞಾನಪೀಠ ಸರಸತಿ
ಮುದದಿ ಮೋದಗೊಳ್ಳುವಾ ಎಮ್ಮ ಮುದ್ದು ಕನ್ನಡ
ಗದುಗಿನಾರಣಪ್ಪನ ಹೃದಯ ಕದ್ದ ಕನ್ನಡ

ಅವರೆ ಎಂದರೊಮ್ಮೆ ಅದುವೆ ಬೇಳೆಯ ಹೆಸರಾಯಿತು
ಅವರೆ ಎಂಬ ಪ್ರತ್ಯಯವು ಹೆಸರಪಕ್ಕ ಕುಳಿತಿತು
ಅವರೆ ಎಂಬ ಸರ್ವನಾಮ ಬಹಳ ಬಳಕೆಲಿರುವುದು
ಅವರೆ ? ಪದದ ಸ್ವಾರಸ್ಯವು ಇಲ್ಲಿ ನಮಗೆ ತಿಳಿಯಿತು

ಕವಿಗಳಾಡಿ ಹೊಗಳಿದಾ ಸದಭಿರುಚಿಯ ವಾಙ್ಮಯ
ಗವಿಗಳಲ್ಲು ಗೋಪುರದಲು ಮೆರೆವ ರೀತಿ ವಿಸ್ಮಯ
ರವಿಕಾಣದ ಮೂಲೆಯನೂ ಕಾಣಿಸಿಹುದೀ ಕನ್ನಡ
ಪವಿತ್ರವು ಪರಿಶುದ್ಧವು ಪರಿಶೋಭಿಪ ಕನ್ನಡ

10 comments:

 1. ಭಟ್ಟರೆ,
  ನಿಮ್ಮ ಕನ್ನಡಪ್ರೀತಿಗೆ ಹಾಗು ಚಂದದ ಕವಿತೆಗೆ ಶರಣು,ಶರಣು!

  ReplyDelete
 2. ಚೆನ್ನಾಗಿದೆ ಭಟ್ಟರೇ....

  ನಿನ್ನೆ ಇಂದು ನಾಳೆ ಎಂದು ಮೂರುದಿನದ ಜಾತ್ರೆಯಲ್ಲ
  ಅನ್ನ-ನೀರು ಇರುವವರೆಗೂ ಕನ್ನಡ

  ಎಂಬ ಸಾಲು ತುಂಬಾ ಇಷ್ಟ ಆಯಿತು .

  ReplyDelete
 3. sir tumba chenagiro kavite....

  kannada kaleya sundara varanane...


  Dayavittu keshmisi sir english alli comment maadidakke...

  ReplyDelete
 4. ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ವಂದನೆಗಳು.

  ReplyDelete
 5. Bhatre....

  sundara kavana...nimma kannada premakke nannadondu chikka salaam...

  ReplyDelete