ಬೇಕು ಮುಂಗಡ !
ಜೀವ ಜಡದ ಹೃದಯವನ್ನು ಒಮ್ಮೆ ಸಾರಿಸಿ ದೇವ ದೇಹದೊಳಗೆ ನಿನ್ನ ಕರೆದು ಕೂರಿಸಿ |
ಭಾವಮಿಳಿತ ಮನಸದೆಂಬ ಹೂವ ಏರಿಸಿ
ಜಾವಜಾವಕೊಮ್ಮೆ ಪೂಜೆ ಭಕುತಿ ಪೇರಿಸಿ ||
ರಾಮ ಕೃಷ್ಣ ಬುದ್ಧ ಕಲ್ಕಿ ಹಲವು ರೂಪದಿ
ನೇಮ ನಡೆಸಿ ಮೆರೆವೆ ಹರಿಯೇ ಜಗದ ಕೂಪದಿ |
ನಾಮ ನೆನೆಯಲೆಮಗೆ ಸಮಯವಿರದು ತಾಪದಿ !
ಹೇಮ ಗಿರಿಗಳವನು ಬಯಸಿ ಆಡೆ ಚೌಪದಿ !!
ಬಲಿಗೆ ಒಲಿದೆ ದಾನ ಪಡೆದು ಹಿಂದೆ ಭುವಿಯಲಿ
ಕಲಿಯನೊಲಿದು ತಂದು ಜಡಿದೆ ಭವಕೆ ಕಹಿಯಲಿ !
ಸುಲಿಗೆ ಮೋಸ ಚೋರತನಗಳಧಿಕ ದಿನದಲಿ
ಒಲವು ಪ್ರೀತಿ ನಲುಗಿನಿಂತು ನೋಡುತಿರುವಲಿ ||
ಧರ್ಮ ಜಾತಿ ಮತಗಳೆಂಬನೇಕ ಪಂಗಡ
ಕರ್ಮವೆಮಗೆ ಸಾಗಬೇಕು ಅದರ ಸಂಗಡ |
ಮರ್ಮವರಿಯದಾದೆವಯ್ಯ ತತ್ವ ಹಿಂಗಡ
ಶರ್ಮ ಶೇಖ ಪೌಲಿಗೆಲ್ಲ ಬೇಕು ಮುಂಗಡ !
ಭಾವಮಿಳಿತ ಮನಸದೆಂಬ ಹೂವ ಏರಿಸಿ
ಜಾವಜಾವಕೊಮ್ಮೆ ಪೂಜೆ ಭಕುತಿ ಪೇರಿಸಿ ||
ರಾಮ ಕೃಷ್ಣ ಬುದ್ಧ ಕಲ್ಕಿ ಹಲವು ರೂಪದಿ
ನೇಮ ನಡೆಸಿ ಮೆರೆವೆ ಹರಿಯೇ ಜಗದ ಕೂಪದಿ |
ನಾಮ ನೆನೆಯಲೆಮಗೆ ಸಮಯವಿರದು ತಾಪದಿ !
ಹೇಮ ಗಿರಿಗಳವನು ಬಯಸಿ ಆಡೆ ಚೌಪದಿ !!
ಬಲಿಗೆ ಒಲಿದೆ ದಾನ ಪಡೆದು ಹಿಂದೆ ಭುವಿಯಲಿ
ಕಲಿಯನೊಲಿದು ತಂದು ಜಡಿದೆ ಭವಕೆ ಕಹಿಯಲಿ !
ಸುಲಿಗೆ ಮೋಸ ಚೋರತನಗಳಧಿಕ ದಿನದಲಿ
ಒಲವು ಪ್ರೀತಿ ನಲುಗಿನಿಂತು ನೋಡುತಿರುವಲಿ ||
ಧರ್ಮ ಜಾತಿ ಮತಗಳೆಂಬನೇಕ ಪಂಗಡ
ಕರ್ಮವೆಮಗೆ ಸಾಗಬೇಕು ಅದರ ಸಂಗಡ |
ಮರ್ಮವರಿಯದಾದೆವಯ್ಯ ತತ್ವ ಹಿಂಗಡ
ಶರ್ಮ ಶೇಖ ಪೌಲಿಗೆಲ್ಲ ಬೇಕು ಮುಂಗಡ !
ಸುಲಲಿತವಾದ, ಸುಂದರ ಕವನ!
ReplyDeleteಕವನ ಕೆಲವರಿಗೆ ಕೇವಲ ಭಕ್ತಿಗೀತೆಯಾಗಿ ಕಾಣಿಸಿರಲೂ ಸಾಕು, ಓದಿದ, ಪ್ರತಿಕ್ರಿಯಿಸಿದ ಸುಧೀಂಧ್ರರೇ ತಮಗೂ ಹಾಗೂ ಓದಿದ ಮಿಕ್ಕುಳಿದವರಿಗೂ ಕೃತಜ್ಞನಾಗಿದ್ದೇನೆ.
ReplyDeleteಕವನ ತುಂಬಾ ಚೆನ್ನಾಗಿದೆ.
ReplyDelete