ಸ್ವಚ್ಛ ಕನ್ನಡ
[ವಿಶ್ವ ಕನ್ನಡ ಸಮ್ಮೇಳನದಲ್ಲಿ ಖುದ್ದಾಗಿ ಭಾಗವಹಿಸಲು ಆಗದ ಕಾರಣ ಇಲ್ಲಿಂದಲೇ ಕನ್ನಡಮಾತೆಯನ್ನು ನೆನೆಸಿಕೊಳ್ಳುವ ಪ್ರಯತ್ನಮಾಡಿದ್ದೇನೆ ]
ನಂದನದ ಸಿರಿ ಭೋಗ ತುಂಬಿದ
ನಮ್ಮ ನಾಡಿದು ಕನ್ನಡ
ಚಂದನದ ಪರಿಮಳವ ತೀಡಿದ
ಹೆಮ್ಮೆಯಾ ಸಿರಿಗನ್ನಡ
ಭರತಭೂಮಿಯ ಕುವರಿಯಾಗಿ
ದಕ್ಷಿಣದಿ ನೆಲೆನಿಂತಿದೆ
ತರತರದ ಪ್ರತಿಭೆಗಳನೀಯುತ
ದಶದಿಸೆಯಲೂ ಚಲಿಸಿದೆ!
ಕಲೆಯು ಸಂಗೀತಗಳು ಸಾಹಿತ್ಯಾ
-ಭಿರುಚಿಯನು ಹೊಂದಿದಾ
ನೆಲೆಯು ನಿಪುಣರ ಬೀಡು ಸುಮಧುರ
ಸಂಸ್ಕೃತಿಯು ಬಲು ಚಂದದಾ
ಕೋಶಬರೆದಾ ದೇಶಕಟ್ಟಿದ
ಹಲವು ಹೈದರ ಅಂಗಳ
ಶೇಷವಿರದರೂ ಕೀರ್ತಿಮೆರೆದಿಹ
ಭಾಷೆ ನಿರತಗೆ ಮಂಗಳ
ಅಚ್ಚ ಕನ್ನಡ ಸ್ವಚ್ಛ ಕನ್ನಡ
ಅಚ್ಚುಮೆಚ್ಚಿನ ಕನ್ನಡ
ತುಚ್ಛವಾದವು ಉಳಿದ ಭಾಷೆಗಳ್
ಪಚ್ಚೆ ನಮ್ಮಯ ಕನ್ನಡ
ಅಚ್ಚ ಕನ್ನಡ ಸ್ವಚ್ಛ ಕನ್ನಡ
ReplyDeleteಅಚ್ಚುಮೆಚ್ಚಿನ ಕನ್ನಡ
ನಮ್ಮೆಲ್ಲರ ಕನ್ನಡ
ಬೆಲ್ಲದಚ್ಚಿನ ಕನ್ನಡ
ಭಟ್ಟರೆ,
ReplyDeleteಕನ್ನಡಪ್ರೀತಿಯ ದ್ಯೋತಕವಾಗಿದೆ ನಿಮ್ಮ ಈ ಗೀತೆ. ಕನ್ನಡಮಾತೆಗೆ ನಿಮ್ಮೊಡನೆ ನನ್ನ ನಮನಗಳನ್ನೂ ಸಲ್ಲಿಸುತ್ತೇನೆ.
ಇದು ನಮ್ಮೆಲ್ಲರ ಗೀತೆ.ನಮ್ಮನ್ನೆಲ್ಲ ಪೊರೆದ ಕನ್ನಡ ತಾಯಿಗೆ ನಮನ.
ReplyDeleteಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಅನಂತ ನಮನಗಳು
ReplyDeleteBhatre,
ReplyDeleteSuperbb sir, gunugunisuva haage ide...