ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, January 3, 2011

ಸೂತ್ರಧಾರಗೊಂದನೆ


ಸೂತ್ರಧಾರಗೊಂದನೆ

ಇಗೋ ನಿನಗೆ ವಂದನೇ
ತಗೋ ಸದಾಭಿನಂದನೇ

ಮುನ್ನ ನೋವನೆಲ್ಲ ಮರೆತು
ನನ್ನ ಮನದಿ ಭಾವತಳೆದು
ಚೆನ್ನಾಗಿಹ ಶಬ್ದಗಳನು
ತಿನ್ನಬಡಿಸುವಾತನೇ

ರನ್ನ ಪಂಪ ಹರಿಹರಾದಿ
ಚಿನ್ನದಂಥ ಕವಿಗಳಿಂದ
ಕನ್ನವಿಟ್ಟು ಜನರಹೃದಯ
ಜೊನ್ನ ಸಮಯದೊಯ್ದನೇ !

ಅನ್ನನೀರು ಬಿಟ್ಟು ಅಳುವ
ಸೊನ್ನೆಯಾದ ಹಲವು ಮನಕೆ
ಕೆನ್ನೆ ಚಿವುಟಿ ಮುದವನೀಡಿ
ಪನ್ನದಲ್ಲಿ ಅಳೆದನೇ

ಹೊನ್ನು ಹೆಣ್ಣು ಮಣ್ಣಿಗೆಲ್ಲಾ
ಮನ್ನಣೆಯನು ನೀಡದಂತೇ
ಬೆನ್ನು ತಟ್ಟಿ ಬುದ್ಧಿಹೇಳಿ
ಚೆನ್ನುಡಿಯಲಿ ನಗುವನೇ

ಹುನ್ನಾರದ ಹುಳುಕು ಮನಕೆ
ನಿನ್ನೆ ಮೊನ್ನೆ ಗಳನು ತಿಳಿಸಿ
ಸನ್ನೆಯಲೇ ತಿದ್ದಿ ತೀಡ್ವ
ನನ್ನೊಡೆಯನೇ ವಂದನೇ

6 comments:

  1. ಅಂತರಂಗದ ಒಡೆಯ ಹಾಗು ಗೆಳೆಯನಿಗೆ ಹೊಸ ವರ್ಷದ ಆದಿಯಲ್ಲಿ ವಂದನೆ ಸಲ್ಲಿಸುವ ಈ ಕವನ ನಮಗೆಲ್ಲರಿಗೂ ಮಾದರಿಯಾಗಿದೆ. ಸದಾಭಿನಂದನೆ ಎಂದು ಹೇಳುವಾಗ ‘ಸತ್+ಅಭಿನಂದನೆ’ ಹಾಗು ‘ಸದಾ+ಅಭಿನಂದನೆ’ ಎನ್ನುವ ನಿಮ್ಮ ಚಾತುರ್ಯ ಪ್ರಶಂಸನೀಯ. ನಿಮಗೆ ಹೊಸ ವರ್ಷದ ಶುಭಾಶಯಗಳು. ನಮ್ಮೆಲ್ಲರ ಒಡೆಯನಿಗೆ, ನಿಮ್ಮ ಜೊತೆಗೇ ಪ್ರಣಾಮಗಳು.

    ReplyDelete
  2. ಭಟ್ಟರೇ, ಹೊಸ ವರುಷದ ಶುಭಾಶಯಗಳು.

    ReplyDelete
  3. ಅನ್ನನೀರು ಬಿಟ್ಟು ಅಳುವ
    ಸೊನ್ನೆಯಾದ ಹಲವು ಮನಕೆ
    ಕೆನ್ನೆ ಚಿವುಟಿ ಮುದವನೀಡಿ
    ಪನ್ನದಲ್ಲಿ ಅಳೆದನೇ"
    ಚೆನ್ನಾಗಿದೆ...

    ReplyDelete
  4. ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ನಮನಗಳು, ಧನ್ಯವಾದಗಳು.

    ಹೊಪದಾಗಿ ಬ್ಲಾಗಿಗೆ ಲಿಂಕಿಸಿಕೊಂಡ ಸುರೇಶ ಬಾಗಲ್ ಮತ್ತು ರತ್ನಾ ಅವರಿಗೆ ಸ್ವಾಗತ ಹಾಗೂ ನಮನ.

    ReplyDelete