ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, November 13, 2010

ಹಣ್ಣು ಬೇಕೇ ಹಣ್ಣು?


ಎಲ್ಲಾ ಹಿರಿಕಿರಿಯ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು

ಹಣ್ಣು ಬೇಕೇ ಹಣ್ಣು ?

ಪಪ್ಪಾಂ ಪಿಪ್ಪೀಂ ಪೀಂ ಪೀಂ
ರಪ್ಪಾಂ ರಿಪ್ಪೀಂ ರೀಂ ರೀಂ
ಚಪ್ಪಾಂ ಚಿಪ್ಪೀಂ ಚೀಂ ಚೀಂ
ಅಚ್ಚೂ ಮೆಚ್ಚೂ ಧಾಂ ಧೂಂ

ಹಣ್ಣು ಬೇಕೇ ಹಣ್ಣು ?
ಬಣ್ಣ ಬಣ್ಣದ ಹಣ್ಣು
ಅಣ್ಣ ಅಪ್ಪ ಅಮ್ಮ
ಕೊಳ್ಳಿರೆಲ್ಲಾ ಹಣ್ಣು

ಸೇಬು ಮಾವು ಬಾಳೆ
ಹಲಸು ಸೀಬೆ ಕಿತ್ತಳೆ
ಸೀತಾಫಲ ಅನಾನಸ್ಸು
ತುಂಬುತಾವೆ ಮನಸ್ಸು

ಬನ್ನಿರಮ್ಮಾ ಕೊಳ್ಳಿ
ಬನ್ನಿರಣ್ಣಾ ತಗೊಳಿ
ಬನ್ನಿರೆಲ್ಲಾ ಬೇಗ
ಹಣ್ಣು ತಿನ್ನೋ ಯೋಗ !

ಗಾಡಿಯನ್ನು ನಾನು
ದೂಡಿಕೋತ ಮುಂದೆ
ಹಾಡಿಕೊಂಡು ಸಾಗಿ
ಆಡುತೇನೆ ಬೀಗಿ

5 comments:

  1. ಬಾಲ್ಯದ ನೆನಪುಗಳನ್ನು ಸವಿಯುವಂತ ಕವನ ಸರ್ ಧನ್ಯವಾದಗಳು..

    ReplyDelete
  2. ಚೆನ್ನಾಗಿದೆ, ರಾಗವಾಗಿ ಹಾಡುವ೦ತಿದೆ.

    ReplyDelete