ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, November 30, 2010

ರಂಗೀ ನಿನ್ ಕಂಡಮ್ಯಾಗ

ಚಿತ್ರಋಣ : ಅಂತರ್ಜಾಲ
ರಂಗೀ ನಿನ್ ಕಂಡಮ್ಯಾಗ

[ಇದೊಂದು ಹೊಸತನದ ಗೀತೆ, ಹರೆಯದ ಹುಡುಗ ಚಳಿಯಲ್ಲಿ ಸುಂದರವಾದ ಹುಡುಗಿಯನ್ನು ಕಂಡು ತನ್ನೊಳಗೇ ತಾನು ಗುನುಗುನಿಸಿ ರಾಗವಾಗಿ ಹಾಡಿಕೊಳ್ಳುವ ಸನ್ನಿವೇಶ. ಗುರು ಬೇಂದ್ರೆಯವರ ಒಂದು ಪಿಂಚ್ ಕೊಟ್ಟು ಜನಪದ ಶೈಲಿಯಲ್ಲಿ ಹೊಸೆದ ಹಾಡು[ಫ್ಯುಶನ್]. ಹರೆಯದ ಮಿತ್ರರೆಲ್ಲಾ ಒಮ್ಮೆ ಕುಣಿಯಲಿ ಎಂಬ ಭಾವನೆಯಿಂದ ಪ್ರಕಟಿಸುತ್ತಿದ್ದೇನೆ. ]


ರಂಗೀ ನಿನ್ ಕಂಡಮ್ಯಾಗ
ಮಂಗನಂತಾಗಿ ಹೋದೆ
ಅಂಗಳದ ತುಂಬಾ ನವಿಲ್ ಕುಣಿದು
ಬಂಗಾರದಂಥಾ ನಿನ್ನ
ಚಂಗನೇ ಹಿಡಿದೆತ್ಕೊಂಡು
ರಂಗಿನಾ ಕೆಂಪು ತುಟಿಗೆ ತುಟಿಯ ಹಿಡಿದು

ಮಂಗಳದಾ ಮೂಗುತಿಯಲ್ಲಿ
ಸಿಂಗಾರಕೆ ಚಂದದ ಹರಳು
ಸಂಗಾತಿಯಾಗಿ ಜತೆಗೆ ಬರುತೀಯಾ ?
ತಿಂಗಳು ಹರಡಿದ ರಾತ್ರಿ
ತೆಂಗಿನ ತೋಟದ ನಡುವೆ
ಕಂಗು ವೀಳೆಯದೆಲೆ ತರುತೀಯಾ?

ರಿಂಗಣಿಸುವ ಕಾಲಿನಗೆಜ್ಜೆ
ಮುಂಗುರುಳಿನ ತೂಗುಯ್ಯಾಲೆ
ಮುಂಗಾರು ಮಳೆಯ ಸುರಿಸಿ ಎದೆಯೊಳಗೆ
ನಿಂಗೇನ್ ಗೊತ್ ನನ್ ಪರಿಪಾಟ ?
ಅಂಗಾಂಗದಾ ಹೊಯ್ದಾಟ
ಭಂಗವದು ಹೇಳತೀರ ಮನದೊಳಗೆ !

ರಂಗೇರಿಸೊ ಈ ಚಳಿಯಲ್ಲಿ
ಕಂಗೊಳಿಸುವ ರೂಪ ನೆನೆದು
ತುಂಗಾನದಿಗೆ ನೆಗಸು ಬಂದಂತೇ !
ರಂಗೀ ಎನ್ನುತ್ತಾ ಕರೆದು
ಪುಂಗಿ ಊದುತ್ತ ದಣಿದು
ನಿಂಗಾಗಿ ಬಾಳಾ ದಿನ ಕಾದುಕುಂತೇ !

ಹಂಗ್ಯಾಕ ಮಾಡ್ಲಾಕ ಹತ್ತಿ ?
ಹೀಂಗ ನೀ ಬಾರಾ ಇಲ್ಲಿ
ಹೆಂಗಾದ್ರೂ ನಾವು ಮುಂದೆ ಒಂದೇನ
ನಂಗಂತೂ ನೀನ ಬೇಕು
ನಿಂಗೂ ನನ್ ಸಂಗಾ ಬೇಕು
ಮಂಗಳವಾದ್ಯ ಬೇಗ ತರಸ್ತೇನ !



4 comments:

  1. ಭಾಳ ಛಲೋ..ಅದರಿ..ಭಾಶಾದ್ ಮ್ಯಾಲ ಮಸ್ತ್ ಹಿಡಿತ ಅದ...
    ಮತ್ತ ..ಮ೦ಗಳವಾದ್ಯ ತರಸ್ರಲ ಲಗೂನ....!

    ಅನ೦ತ್

    ReplyDelete
  2. fusion ಚೆನ್ನಾಗಿದೆ. ಯಾಕೋ ಇತ್ತೀಚಿಗೆ ಭಟ್ಟರಲ್ಲಿ ಶೃ೦ಗಾರ ರಸ ಉಕ್ಕಿ ಹರಿಯುತ್ತಿರುವ೦ತಿದೆ. ಇನ್ನಷ್ಟು ಇ೦ತಹದು ಹೊರಬರಲಿ.

    ReplyDelete
  3. ಮನಸ್ಸನ್ನು ಮತ್ತೇರಿಸುವ ಕವನವಿದು. ಇಂತಹ ಕವನಗಳಿಗೆ ಕುಣಿದಾಡುವ ಸ್ವಾಗತ.

    ReplyDelete
  4. ಅನಂತರಾಜ್ ಸರ್ ನಾನು ಮಂಗಳವಾದ್ಯ ತರಿಸಿ ಆಗೇದ, ಇನ್ನು ನಮ್ಮ ಬಳಗದ ಯುವಕ್ರದಾರಲ್ಲ ಅವ್ರೀಗ್ ಹೀಳ್ಲೀ ಹತ್ತೀನಿ--ಬೇಗ ತರಸ್ರಲಾ ಅಂತ, ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ನಮಸ್ಕಾರಗಳು

    ReplyDelete