ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, September 15, 2010

ಪಿರೂತಿ ಮಾಡ್ಲೇನ ಚಿನ್ನ?

ಚಿತ್ರ ಋಣ : ಅಂತರ್ಜಾಲ

ಪಿರೂತಿ ಮಾಡ್ಲೇನ ಚಿನ್ನ?

ಪಿರೂತಿ ಮಾಡ್ಲೇನ ಚಿನ್ನ ನಿನ್ನ
ಪಿರೂತಿ ಮಾಡ್ಲೇನ ?

ಕಾರಿಲ್ಲಾ ಬಂಗ್ಲಿಲ್ಲಾ ಬರಿಗೈ ದಾಸಾ ನಾ
ವಾರೀ ಕಣ್ಣಾಗೊಂದಷ್ಟ್ ನಿನ್ ಕಂಡೇನ
ವಾರಕ್ಮುಂಚೇನೆ ಮನಸ್ಕದ್ಯಲ್ಲ ನೀ
ಯಾರ್ಗೂ ಹೇಳ್ಬ್ಯಾಡ್ ಮತ್ತ ಹಿಂಗೈತಿ ಅಂತ !

ಸಾಲೀ ಕಲಿತಿಲ್ಲ ತಗಿ ವಾಲಿ ಓದಿಲ್ಲ
ನೀಲೀ ಬಣ್ಣದ ಬುಸ್ ಕೋಟು ನನ್ನಾಸ್ತಿ
ಕಾಲ ಹೊಸ್ತಾಗಿದ್ರು ನಾ ಮಾತ್ರ ಹಳ್ಬ
ಗಾಲಿ ಎರಡಾದ್ರೆ ಹ್ಯಾಂಗಾದ್ರೂ ಬದ್ಕೋಣ !

ಅದ್ಯೇನ್ ಮಿಂಚು ಅಂತೀಯ ನಿನ್ನ ಕಣ್ಣಾಗ
ಉದ್ಯಾನ್ ಎಕ್ಸ್ ಪ್ರೆಸ್ ರೈಲು ಸುರ್ರಂತ ಸರಿದಾಂಗ
ಉದ್ಯೋಗ ನಾ ದಿನಾ ಹೀಂಗ ಅದೂಇದೂ ಮಾಡಾಂವ
ಬಾಧ್ಯಸ್ಥಳಾಗ್ತೀಯೇನ ನನ್ನ ಬದ್ಕೀಗ ?

ಪ್ರತಿನಿತ್ಯ ನೀ ಆ ಕಡಿ ಹೋಗ್ತೀಯಲ್ಲ
ವೃತಗಿತ ಐತೇನ್ ಅಲ್ಲಿ ಅದ್ಯಂತಾ ಕೆಲ್ಸ ?
ದೃತರಾಷ್ಟ್ರನಂತೆ ನನ್ ನೀ ನೋಡ್ವಲ್ಯಾಕ ?
ಧೃತಿಗೆಟ್ಟಂವ ಇಂವ ಅಂತ ತಿಳ್ದೀಯೇನ್ ಮತ್ತ ?

ನಿಂಗೀ ಅಂದ್ ಕರೀಲೇನು ಪಿರೂತಿಯಿಂದಾನ ?
ಅಂಗಳ್ದಾ ತುಂಬೆಲ್ಲ ನಿನ್ ಚಿತ್ರ
ನೋಡೇನ !
ಭಂಗಬರದಂಗ ಬಾರ ನೋಡ್ತೀನಾಗಾಗ
ನಂಗೊಮ್ಮಿ ದ್ಯಾವ್ರು ಹರಸಿಲ್ಲ ಅಂವ್ಗೇನೈತಿ ರೋಗ ?

ಅಣ್ಣಾ ಅನಬ್ಯಾಡ್ ಮತ್ತ ತಂಗಿ ನೀನಲ್ಲ
ಸಣ್ಣ್ಕಿದ್ರೂ ನನ್ನಾಕಿ ನೀನೇ ಬಿಲಕುಲ್ಲ !
ಸೊಣ್ಕ್ಮಾತಾಗ ಸಿಟ್ಟಾಗಿ ಸಿಡುಕ್ಯಾಡಬ್ಯಾಡ
ಬಣ್ಣ ಹಚ್ತೀಯೇನ ನನ್ ಬದಕ್ನಾಗ ನೋಡ !

16 comments:

  1. ಹಾಡಿನಲ್ಲಿ ಹಳ್ಳಿಯ ಸೊಗಡು ಸೊಗಸಾಗಿ ಬಂದಿದೆ.ಪ್ರೀತಿ ತಿಳಿಸುವುದಕ್ಕೆ ಭಾಷೆ ಹೇಗಿದ್ದರೇನು?ಅಲ್ಲವೇ ಭಟ್ಟರೇ?

    ReplyDelete
  2. ಹಾಡಿನ ಭಾಷೆ ಚನ್ನಾಗಿದೆ ..ಜೊತೆಗೆ ನಿಮ್ಮ ಉಪಮೇಗಳು ಕೂಡ ...ಅದ್ಯೇನ್ ಮಿಂಚು ಅಂತೀಯ ನಿಮ್ಮ ಬರವಣೆಗೆಯಲ್ಲಿ...
    ಉದ್ಯಾನ್ ಎಕ್ಸ್ ಪ್ರೆಸ್ ರೈಲು ಸುರ್ರಂತ ಸರಿದಾಂಗ...:)

    ReplyDelete
  3. ಬಾಳ್ ಚಲೋ ಐತ್ರಿ..

    ReplyDelete
  4. ಭಟ್ಟರೆ,
    ನಿಮ್ಮ ಪ್ರೀತಿ ಈಗ ದೇಸಿ ನುಡಿಯಲ್ಲಿ ಹರೀತಾ ಇದೆ. ನಿಮಗೆ ಯಶಸ್ಸು ಖಂಡಿತ!

    ReplyDelete
  5. ಭಟ್ ಸರ್,
    ಎನ್ ಬರೀಲಿ ಅಂತ ಗೊತ್ತಾಗ್ತಾ ಇಲ್ಲ.... ನಿಮಗೆ ಇದೆಲ್ಲಾ ಹ್ಯಾಗೆ ಹೊಳ್ಯತ್ತೆ.....? ನಮ್ಗು ಸ್ವಲ್ಪ ಹೆಳ್ಕೊಡಿ ಸರ್ರ್..... ತುಮ್ಬಾ ಚಂದೈತ್ರೀ......

    ReplyDelete
  6. chenaagide sir..

    swarta, HaNa-ishwarya, kaaru-bangale, Akaara-vikaara galinda tumbi hogiruva indina premigalannu naachisuvantide sir... pritiya moulyada saralateyannu chennagi heliddira sir...

    ReplyDelete
  7. ಸೊಗಸಾದ ಕವನ ಭಟ್ಟರೇ, ಏಕ್ ದಂ flashbackಗೆ ಹೋದಿರೋ ಹೇಗೆ?

    ಮತ್ತೆ, ನನ್ನ ಬ್ಲಾಗಿನ ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಅಲ್ಲಿ ಪ್ರತಿಕ್ರಿಯಿಸಿದರೆ ತಮಗೆ ತಲುಪುವುದೋ ಇಲ್ಲವೋ ಎಂದು ಅದನ್ನೇ ಇಲ್ಲೂ ಹಾಕುತ್ತಿದ್ದೇನೆ. "ಕೆಲವೊಮ್ಮೆ ಪ್ರತಿಕ್ರಿಯೆಗೆ ಸ್ಪಂದನ ಕೂಡ ಕಾಣಿಸಲಿಲ್ಲ" - ಆಶ್ಚರ್ಯ! ನನ್ನ ಎಲ್ಲಾ ಬ್ಲಾಗುಗಳ ಬಹುತೇಕ ಎಲ್ಲಾ ಪ್ರತಿಕ್ರಿಯೆಗಳಿಗೂ ಸ್ಪಂದಿಸಿದ್ದೇನಲ್ಲ! ಅದರಲ್ಲೂ ಬರುವುದೇ ಅಲ್ಲೊಂದು ಇಲ್ಲೊಂದು ಪ್ರತಿಕ್ರಿಯೆಯಾದ್ದರಿಂದ ಅವುಗಳಿಗೆ ಸ್ಪಂದಿಸಲು ಸಮಯದ ಅಭಾವವೇನೂ ಕಾಣದು :)

    ಇರಲಿ, ನಿಮ್ಮ ಎರಡನೆಯ ಮಾತಂತೂ ನಿಜ. ಎದ್ದು ತುಸು ಬ್ಲಾಗು ಸುತ್ತಾಡುವಷ್ಟೂ ಚಟುವಟಿಕೆಯಿಲ್ಲದ ಸೋಮಾರಿತನ ನನ್ನಲ್ಲಿ ಮನೆಮಾಡಿರುವುದಂತೂ ನಿಜ :) ಜೊತೆಗೆ ವಿಪರೀತ ಸಮಯದ ಒತ್ತಡವೂ! ತಮ್ಮ ಈ ಮಾತು ಅದಕ್ಕೆ ಮದ್ದು.

    ಹಾಗಂತ ನಾನು ಸುತ್ತಾಡುವುದೇ ಇಲ್ಲವೆಂದೇನು ಇಲ್ಲ. ಆದರೆ ನಾನು ಓದುವುದಕ್ಕಿಂದ ಓದಬೇಕೆಂದು ಪಟ್ಟಿಮಾಡಿಟ್ಟುಕೊಳ್ಳುವುದೇ ಹೆಚ್ಚು. ಬರೆಯುವವರು ಅಷ್ಟೊಂದು ವಿಪರೀತ ವೇಗವಾಗಿ ಬರೆಯುತ್ತಾ ಹೋದರೆ ನಾನಾದರೂ ಏನು ಮಾಡುವುದು? ;)

    ReplyDelete
  8. ಅಗ್ಗದೀ ಮಸ್ತ್ ಐತ್ರೀ ಸರ್ .. :-)

    ReplyDelete
  9. ಭಟ್ಟರೇ

    ನಿಮ್ಮ ಕವನದ ಮ್ಯಾಗ್ ಪಿರೂತಿ ಬಂತು ನೋಡ್ರಿ

    ಏನು ಭೆಶಾಗಿ ಬರದಿರ್ರಿ

    ReplyDelete
  10. ಏನು ಭಟ್ರ ಭಾರಿ ಅದಬಿಡ್ರಿ ಆದ್ರ ಭಾಷಾ ಇನ್ನೂ ಜವಾರಿಯಾಗಬೇಕಿತ್ತ ನೋಡರಿ..

    ReplyDelete
  11. ಪ್ರತಿಕ್ರಿಯಿಸಿದ ಎಲ್ಲಾ ಒದುಗ ಮಿತ್ರರಿಗೂ ಅನಂತಾನಂತ ಧನ್ಯವಾದಗಳು.

    ಶ್ರೀ ಉಮೇಶ್ ದೇಸಾಯರ, ಇದು ಈಗಿನ್ನೂ ಸುರುವಾಗೇತಿ ಬರ್ತಾ ಬರ್ತಾ ಜವಾರಿಯಾಗ್ಲೆಂದು ಹರಸ್ರಲ, ನಿನ್ನಿ ಯಾಕೋ ನಮ್ ಸುನಾಥ ಸಾಹೇಬ್ರು ಬೇಂದ್ರೆ ನೆನೆಪು ಮಾಡ್ಸಿದ್ರು, ಆ ನೆನಪ್ನ್ಯಾಗ ಭಾಷಿ ಬಂದದ ನೋಡ್ರೀ, ಸಲ್ಪು ಮದ್ದತ್ ಮಾಡೀರೇನು, ತುಸು ಜಾಸ್ತಿ ಕಲೀತೀನಂತೆ! ಧನ್ಯವಾದ

    ReplyDelete
  12. ಪಿರೂತಿ ತುಂಬಿದ್ದು ಚಂದೈತೆ ಬಿಡಿ..

    ReplyDelete
  13. Bhatre,
    balaa chalo aithri, ista aitu kanri....

    ReplyDelete