ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, September 8, 2010

ಬಾಲ ಗಣೇಶ

ಇಡಗುಂಜಿ ಶ್ರೀ ಮಹಾಗಣಪತಿ


ಬೆಂಗಳೂರಿನ ದೊಡ್ಡ ಗಣಪತಿ


ದಗಡು ಸೇಥ್ ಹಲವಾಯಿ ಗಣಪತಿ, ಮುಂಬೈ [ಉತ್ಸವಕ್ಕಾಗಿ ಮಾತ್ರ ಪ್ರತಿಷ್ಠಾಪಿತ ]


ಬಾಲ ಗಣೇಶ
[ನಿಮಗೊಂದು ಮಂತ್ರವನ್ನು ಹಾಡಿನಲ್ಲೇ ತೋರಿಸಿಕೊಡುತ್ತಿದ್ದೇನೆ! ಇದು ಮಹಾಗಣಪತಿಗೆ ನಾನಿತ್ತ ಮೋದಕ ]

ಎಳೆಬಾಳೆಗಿಡಗಳಾ ಒಳಗಿನಾ ಮಂಟಪದಿ
ಹೊಳೆವ ಪೀತಾಂಬರದ ಗಣಪತಿಯು ಕುಳಿತು
ನಳಿನಮುಖಿಯರು ಎತ್ತಿ ಮಂಗಳವ ಬೆಳಗುತಿರೆ
ಕಳೆಯೆಂಥದದು ನೋಡಲೆರಡಕ್ಷಿ ಸಾಕೆ ?

ಮಳೆಯ ಮಾರುತಗಳವು ಕೊಳೆತೊಳೆದು ಈ ಭುವಿಯ
ಸೆಳೆತಂದು ಭಾದ್ರಪದ ರಂಗೋಲಿ ಬರೆದು
ಬಿಳಿಯುಡುಗೆ ಅರ್ಚಕರು ಸಡಗರದಿ ಓಡಾಡಿ
ಇಳೆಯಾಯ್ತು ಸ್ವರ್ಗದಾ ಇಂದ್ರನರಮನೆಯು!

ಬಳೆಯು ಅರಿಶಿನ ಕುಂಕುಮ ಅಕ್ಷತೆಗಳಿಟ್ಟು
ಸುಳಿದಿಟ್ಟ ಫಲವ ನಿವೇದಿಸಿ ಶ್ರೀಗೌರಿಗೆ
ಬಳಗ ಸಹಿತದ ನಮ್ಮ ಬಾಲಗಣೇಶನಿಗೆ
ಬೆಳಗುತಾ ಧೂಪ ದೀಪದಾರತಿಗಳ

ಒಳಗೆ ಧ್ಯಾನಿಸಿ ನಮ್ಮ ಮುನಿಜನರು ಇತ್ತಪದ
ಬೆಳೆವ ಮಹಾಗಣಪತಿಗೆ ’ಓಂ’ ಕಾರ ರೂಪ
ಬೆಳೆತೆಗೆದು ಕಡೆದಿರಿಸಿದಾಮಂತ್ರ ’ಗಂ’ ಕಾರ
ನಳನಳಿಸುತ್ತಿರುವ ಬೆನಕ ’ಗ’ಜಮುಖಗೆ

ಘಳಿಗೆಯಲಿ ಶಿವನಿತ್ತ ಗಣನಾಯಕನ ಸ್ಥಾನ
ಅಳಿವಿರದ ಬಾಲಕನ ಅ’ಣ’ಕಿಸುತ ಮೊದಲು
ಬಳುವಳಿಯು ವಿವಿಧ ಬಂದಿತ್ತಲ್ಲಿ ಗಣ’ಪ’ನಿಗೆ
ಒಳಿತಾಯ್ತು ಕರಿಕೊಮೊಗದ ಅ’ತ’ರಾಸ ಪ್ರಿಯಗೆ

ಬಳಿದು ದೃಷ್ಟಿಯನಲ್ಲಿ ನಿವಾಳಿಸುತ ಎಸೆ’ಯೇ’
ನಳಿದೋಳುಗಳ ನೀವಿ ಓಕುಳಿಯ ಹಾ’ನ’
ಗೆಳೆಯದೇವರ ದಂಡು ಘೋಷಿಸಿತು ಆದ್ಯತೆಯ
ಬಳಿಸಾರಿ ಸುಮುಖನಿಗೆ ಜಯ ನಮೋ ನ’ಮಃ’

ಓದುಗ ಮಿತ್ರರೇ ಗಣಪತಿಯೇ ಬಗ್ಗೆ ಮತ್ತೆ ಹೊಸದಾಗಿ ಹೇಳಬೇಕೇ ? ಆತನ ವಿಗ್ರಹ ತರುವಾಗ ಶುರುವಾಗುವ ಆ ಆಪ್ತತೆ ವಿಗ್ರಹ ವಿಸರ್ಜನೆಯೇ ಬೇಡ ಎನಿಸುವಷ್ಟರ ಮಟ್ಟಿಗೆ ಹಬ್ಬುತ್ತದೆ, ಆದ್ರೂ ಅದು ನಡೆಸಲೇ ಬೇಕಾದ ವಿಧಿವಿಧಾನ, ಅನಿವಾರ್ಯ.
ತಮಗೆಲ್ಲ ಗೌರೀ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ,
ಮುಸ್ಲಿಂ ಬಾಂಧವರಿಗೆ ರಂಜಾನ್ ಶುಭಾಶಯಗಳು

ಗೌರೀ ಗಣೇಶ ಹಬ್ಬದ ಪ್ರಯುಕ್ತ 'ನಿಮ್ಮೊಡನೆ ವಿ.ಆರ್.ಭಟ್ ' ಕಾರ್ಯಾಲಯಕ್ಕೆ ೧೪ ನೇ ತಾರೀಕಿನ ವರೆಗೆ ರಜಾ ಇರುತ್ತದೆ, ೧೫ ರಿಂದ ಮತ್ತೆ ಎಂದಿನಂತೆ ಮುಂದುವರಿಯುತ್ತದೆ. ಅಲ್ಲಿಯವರೆಗೆ ನನ್ನ ಹಳೆಯ ಕೃತಿಗಳನ್ನು ಇಷ್ಟಪಡುವವರು ಓದಬಹುದು, ಈ ಬ್ಲಾಗಿನಲ್ಲಿ ಪ್ರಾರಂಭವಾದ ೯ ತಿಂಗಳಲ್ಲಿ ಇದು ಇನ್ನೂರನೇ ಕೃತಿ !

19 comments:

 1. ಭಟ್ರೆ ನಿಮಗೂ ಗಣೇಶ ಚವತಿಯ ಶುಭ ಹಾರೈಕೆಗಳು
  ನಿಮ್ಮದು ಅಗಾಧ ವೇಗ ಒಂದು ಕಾಮೆಂಟ ಹಾಕೋಣ ಅಂತ ಬಂದ್ರೆ ಇಲ್ಲಿಯ ವೈವಿಧ್ಯನೋಡಿ ದಂಗಾದೆ
  ಖಂಡಿತವಾಗಿಯೂ ನಿಮ್ಮದು ಅಖಂಡ ಉತ್ಸಾಹ ಆ ಉತ್ಸಾಹಕ್ಕೆ ತಲ್ರ್ ಬಗಿ ನಮಿಸಿರುವೆ...

  ReplyDelete
 2. Sir
  ಗೌರೀ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ,

  olleya kavana habbakke

  ReplyDelete
 3. ಭಟ್ಟರೆ,
  ನಿಮಗೂ ಸಹ ಗಣೇಶನ ಹಬ್ಬದ ಶುಭಾಶಯಗಳು.

  ReplyDelete
 4. ನಿಮಗೆಲ್ಲರಿಗೂ ಗೌರೀ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.

  ReplyDelete
 5. ಸರ್ ನಿಮಗೂ ಸಹ ಗಣೇಶನ ಹಬ್ಬದ ಶುಭಾಶಯಗಳು... :)

  ReplyDelete
 6. ಗಣೇಶ ಸರ್ವರಿಗೂ ಒಳಿತನ್ನುಂಟು ಮಾಡಲಿ ಎಂದು ಕೇಳಿಕೊಳ್ಳುತ್ತಾ ಅವನ ಬಗ್ಗೆ ಉತ್ತಮ ಕವನ ಹೊಸೆದದ್ದಕ್ಕೆ ತಮ್ಮನ್ನು ಅಭಿನಂದಿಸುತ್ತಿದ್ದೇನೆ.

  ReplyDelete
 7. ಭಟ್ರೆ,
  ಬಾಲಗಣಪ ವೇದಸುಧೆಗೆ ಯಾಕೆ ಬರಲಿಲ್ಲ? ಇಲ್ಲೇ ದರ್ಶನ ಪಡೆದೆ.ನಿಮ್ಮ ಹಾಡನ್ನು ಗುನುಗುಟ್ಟುತ್ತಲೇ ಇವತ್ತಿನ ಎಲ್ಲಾ ಕೆಲಸ ಸಾಗಿದೆ. ಎಲ್ಲರಿಗೂ ಗೌರಿ-ಗಣೇಶ ಸನ್ಮಂಗಳವನ್ನುಂಟುಮಾಡಲಿ.

  ReplyDelete
 8. bhatre,

  kavana chennagide, nimagoo habbada subhashayagalu...

  ReplyDelete
 9. ಭಟ್ ಸರ್,
  ನಿಮಗು ಹಬ್ಬದ ಶುಭಾಶಯ.......

  ReplyDelete
 10. ಸರ್, ಗೌರಿ-ಗಣೇಶ ಹಬ್ಬಕ್ಕೆ ಹಾರ್ದಿಕ ಹಾಗೂ 200ನೇ ಕೃತಿಯನ್ನು ಪುರೈಸಿದ್ದಕ್ಕೆ ಆತ್ಮೀಯ ಶುಭಾಶಯಗಳು.

  ReplyDelete
 11. ನಿಮಗೆಲ್ಲರಿಗೂ ಗೌರೀ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.

  ReplyDelete
 12. ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಸರ್,

  ReplyDelete
 13. ಸರ್ವರಿಗೂ ಗಣೇಶ ಹಬ್ಬಕ್ಕೆ ನನ್ನದೊಂದು ಪುಟ್ಟ ಶುಭಾಷಯ....
  ಇನ್ನೂ ನಿಮ್ಮಿಂದ ಕೃತಿಗಳ ಕೃಷಿಯಾಗುತ್ತಿರಲಿ.. ಶುಭಾಶಯಗಳು..

  ReplyDelete
 14. ವಿ.ಆರ್. ಭಟ್ರೇ ,
  ೨೦೦ ನೇ ಕೃತಿಗೆ ಅಭಿನಂದನೆಗಳು.
  ಹಾಗೂ
  ಗೌರೀ ಗಣೇಶ ಹಬ್ಬದ ಶುಭಾಶಯಗಳು.

  ReplyDelete
 15. ತಮಗೂ ಸಹ ಹಬ್ಬದ ಶುಭಾಶಯಗಳು. ನಿಮ್ಮ ಸಾಹಿತ್ಯ ಸೇವೆ ಹೀಗೆ ಮುಂದುವರೆಯಲಿ. ನಿಮ್ಮ 200 ರ ಸಾಧನೆಗೆ ಅಭಿನಂದನೆಗಳೊಂದಿಗೆ.

  ReplyDelete
 16. ಬರೀ ಇನ್ನೂರು ಅಲ್ಲ ಅರಡೂ ಸಾವಿರವಾಗಲಿ ನಿಮ್ಮ ಬರಹಗಳು. ಶುಭಾಶಯಗಳು ನಿಮಗೂ.

  ReplyDelete
 17. ಪ್ರತಿಕ್ರಿಯಿಸಿದ ಎಲ್ಲಾ ಓದುಗ ಮಿತ್ರರಿಗೆ ಅನಂತ ಧನ್ಯವಾದಗಳು.

  ReplyDelete
 18. ಶಿವಶಂಕರ ಯಳವತ್ತಿ ಮತ್ತು ಆನಂದ ಈ ಈರ್ವರು ಹೊಸದಾಗಿ ಬ್ಲಾಗಿಗೆ ಲಿಂಕಿಸಿಕೊಂಡಿದ್ದಾರೆ, ಅವರೀರ್ವರಿಗೂ ಸ್ವಾಗತ ಮತ್ತು ನಮನಗಳು

  ReplyDelete