ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, September 6, 2010

ಬೀಸಿ ಬಂದ ಮಂದಮಾರುತ


ಬೀಸಿ ಬಂದ ಮಂದಮಾರುತ

ಬೀಸಿ ಬಂದ ಮಂದಮಾರುತ
ನೇಸರನು ಉದಿಸೆ
ಪೂಸುತಿದ್ದ ಪರಿಮಳಾಮೃತ !

ಏಸು ದಿನವು ಕಳೆದವಿಲ್ಲಿ
ಭೂಸುರರು ನಾವ್ ನಲುಗಿಹೋಗಿ
ಕೂಸುಗಳವು ಆಡುವಂತೆ
ಹಾಸಿ ಪಾರದರ್ಶಕದಲಿ !

ಸೋಸುತಿದ್ದ ರೈತಜನಕೆ
ಬೀಸದೇ ಆ ಹಗಲಿನಲ್ಲಿ
ಕೇಸರಿ ಕಸ್ತೂರಿ ಗಂಧ
ಈಸು ದಿನಕೆ ಒಮ್ಮೆ ಇತ್ತ !

ಕಾಸು ಇರುವ ಜನರು ತಮ್ಮ
ತ್ರಾಸು ಕಳೆಯಲೆಂದು ಪಂಕ
ಬೀಸಿಕೊಳಲು ವಿದ್ಯುತ್ತಿರದೆ
ಬೇಸರಾಗಿ ಕುಳಿತವೇಳೆ !

ಸಾಸಿರದಾ ದೇಶಗಳಲಿ
ಬೀಸಿ ಬೀಸಿ ಹಸಿದು ತನ್ನ
ಭೂಸತಿಂದು ದಣಿವು ಮರೆಯೆ
ಆಸುರೇಂದ್ರನಲ್ಲಿ ಕಳೆದ !

ವಾಸಿಯಾಗದಂತ ರೋಗ
ಘಾಸಿಗೊಳಿಸೆ ಹಲವು ಜನರ
ವಾಸುಕೀಶದಯದಿ ಬೀಸಿ
ವಾಸಿಮಾಡಲೆಂದು ಬಯಸಿ !

14 comments:

  1. ಮ೦ದಮಾರುತ ಬೀಸಿದ ಹಾಗಾಯಿತು! ಚ೦ದದ ಕವನ.

    ReplyDelete
  2. ನಿಜಕ್ಕೂ ಕವನದಲ್ಲಿ ಮಂದಮಾರುತವಿದೆ.

    ಮತ್ತೆ...
    ದಿನಪತ್ರಿಕೆಯಲ್ಲಿ ಬರು ಎಲ್ಲ ಲೇಖನಗಳೂ ಉಪಯುಕ್ತವಲ್ಲ
    ಯಾಕೆಂದರೆ ಉಪಯುಕ್ತ ಲೇಖನಗಳನ್ನು ಅವರು ಪ್ರಕಟಿಸುವುದು ಬಹಳ ಕಮ್ಮಿ
    ಅನುಪಯುಕ್ತ ಲೇಖನಗಳನ್ನು ದೊಡ್ಡ ಚಿತ್ರದೊಂದಿಗೆ ಪ್ರಕಟಿಸುವುದು
    ದೊಡ್ಡ ಸಂಖ್ಯೆಯಲ್ಲಿ ಪ್ರಸಾರವಾಗುವ ಪತ್ರಿಕೆಗಳ ಗುರುತು..
    ಇದು ಅವರ ನಿಜವಾದ ಬಣ್ಣ.

    ReplyDelete
  3. ಸಾಕ್ಷರವ ಸುಮಧುರವಾಗಿ ಬಳಸಿ, ಪ್ರಾಸಬಧ್ದ್ಢವಾಗಿ ಹೆಣೆದ ಮ೦ದಮಾರುತದ ಹ೦ದರ.. ಸು೦ದರವಾಗಿದೆ.

    ಅನ೦ತ್

    ReplyDelete
  4. ಎಂತೆಂತಹ ಛಂದಸ್ಸುಗಳೆಲ್ಲ ನಿಮ್ಮ ಬೆರಳ ತುದಿಯಲ್ಲಿ ಇವೆಯಲ್ಲ ಎಂದು ಅಚ್ಚರಿಯಾಗುತ್ತದೆ!

    ReplyDelete
  5. ಬಹಳ ಚೆಂದದ ಕವನ, ಮಂದಮಾರುತ ವಾಸಿಯಾಗದ ರೋಗವನ್ನು ವಾಸಿ ಮಾಡಲಿ ಜೊತೆಗೆ ಮನಸ್ಸಲ್ಲಿ ಕುಳಿತ ಕೊಳೆತ ಜಿಡ್ಡನ್ನು ತೆಗೆದು ಆಹ್ಲಾದ ನೀಡಲಿ..!

    ReplyDelete
  6. ನಿಮ್ಮ ಕವನ ಓದಿ ಮ೦ದಮಾರುತ ಬೀಸಿದ ಅನುಭವ ಆಯ್ತು, ತು೦ಬಾ ಚೆನ್ನಾಗಿದೆ.

    ReplyDelete
  7. ಚೆನ್ನಾಗಿದೆ ಸರ್.

    ReplyDelete
  8. ಕಾಸು ಇರುವ ಜನರು ತಮ್ಮ
    ತ್ರಾಸು ಕಳೆಯಲೆಂದು ಪಂಕ
    ಬೀಸಿಕೊಳಲು ವಿದ್ಯುತ್ತಿರದೆ
    ಬೇಸರಾಗಿ ಕುಳಿತವೇಳೆ !

    very nice lines sir,

    ReplyDelete
  9. ಸೊಗಸಾದ ಕವನ .೨,೩ ಪ್ಯಾರ ತುಂಬಾ ಹಿಡಿಸಿತು.ಭಟ್ರೇ.

    ReplyDelete
  10. ಪ್ರತಿಕ್ರಿಯಿಸಿದ ಎಲ್ಲಾ ಮಿತ್ರರಿಗೆ ವಂದನೆಗಳು, ನೇಪಥ್ಯದ ಎಲ್ಲಾ ಓದುಗರಿಗೂ ಸಹ ವಂದನೆಗಳು

    ReplyDelete
  11. Bhatre,

    Tumbaa sundara kavana, dhanyavadagalu...

    ReplyDelete
  12. ಕವನದಂತೆ ಚಿತ್ರವೂ ಸಹ ಮನಸ್ಸಿಗೆ ಬಲು ಮುದ ನೀಡಿತು. ಅಭಿನಂದನೆಗಳು.

    ReplyDelete
  13. 'ಕಾಸು ಇರುವ ಜನ..."ಸೊಗಸಾಗಿದೆ..

    ReplyDelete