ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, August 29, 2010

ಬೆಳೆಯದ ಪೈರು !!ಬೆಳೆಯದ ಪೈರು
!!

[ ಹಳೆಯಬೇರು-ಹೊಸಚಿಗುರು ತತ್ವದ ಆಧಾರದಲ್ಲಿ, ಇಂಡಿಪಾಪ್ ವಿಧದಲ್ಲಿ ಗಿಟಾರ್ ಹಿಡಿದು ಹಾಡಿಕೊಳ್ಳಲು ಬರುವ ಹಾಡು, ಯಾವುದೇ ಗುರಿಯಿಲ್ಲದೇ ಎಲ್ಲವನ್ನೂ ಪ್ರಯತ್ನಿಸಿ ಮಾಡಲು ಹೊರಟು ವಿಫಲನಾದಾಗ ಏನಾಗುತ್ತದೆ ಎಂದು ತಿಳಿಸುತ್ತದೆ, ಸ್ವಲ್ಪಮಜಾ-ಸ್ವಲ್ಪ ಸಂದೇಶ, ೫೦-೫೦: ಕುಚ್ ಖಟ್ಟಾ- ಕುಚ್ ಮೀಠಾ, ಓದಿ ಎಂಜಾಯ್ ಮಾಡಿ !]


ಹತ್ತಾರು ಪೇಜು ಗೀಚಿ ಗೀಚಿ
ಹರಿದು ಬಿಟ್ಟೆನಾ
ಕುವೆಂಪುವಾಗೆ ಕವಿ ಬೇಂದ್ರೆಯಾಗೆ !
ಮತ್ತಾರು ಸೂತ್ರ ಹೆಣೆದು ಹೆಣೆದು
ಕೂತು ಬಿಟ್ಟೆನಾ
ವಿಜ್ಞಾನಿಯಾಗೆ ನಾಸಾಕ್ಕೆ ಹೋಗೆ !||ಪ||

ಬರಿ ಪಾತ್ರೆ ಏನದಿಲ್ಲ
ಬತ್ತಳಿಕೆ ಖಾಲಿ ಇದ್ಯಲ್ಲ
ಮತ್ತೇನುಮಾಡೆ ತೋಚದಾಗಿ
ಮಂಚಹಿಡಿದು ಮಲಗಿ ಬಿಟ್ಟೆನಾ ಟರಂಟ...ರಂಟ.. ಟರಂಟ ...ರಂಟ || ಅನು ಪ||

ಅತ್ತಿತ್ತ ನೋಡಿ ಕುಣಿದು ಕುಣಿದು
ಕುಸಿದು ಬಿಟ್ಟೆನಾ
ಜಾಕ್ಸನ್ನನಾಗೆ ಪ್ರಭುದೇವನಾಗೆ!
ಸುತ್ತುತ್ತ ಕೊಳಲ ಊದಿ ಊದಿ
ಕಾದು ಬಿಟ್ಟೆನಾ
ಗೋಡ್ಕಿಂಡಿ ಯಾಗೆ ಹರಿಪ್ರಸಾದರಾಗೆ !

ನಡುರಾತ್ರಿ ತಾಲೀಮಿನಲಿ
ನಡುಗಿತ್ತು ಭೂಮಿಯೆಲ್ಲ !
ಪಡಪೋಶಿ ನೀನು ಎಂದಘಳಿಗೆ
ಬೇಸರಾಗಿ ಕಂಡದಾರಿ ಹಿಡಿದುಬಿಟ್ಟೆನಾ ಟರಂಟ...ರಂಟ..
ಟರಂಟ...ರಂಟ ||೧||

ಕತ್ತೆತ್ತಿ ಬಿಡದೆ ಆಡಿ ಆಡಿ
ದಣಿದು ಬಿಟ್ಟೆನಾ
ರೆಹಮಾನನಾಗೆ ಮನೋಮೂರ್ತಿಯಾಗೆ !
ಒತ್ತಟ್ಟಿಗಿಷ್ಟು ಪ್ಯಾಂಟು ಶರ್ಟು
ತಂದು ಇಟ್ಟೆನಾ
ಅಮಿತಾಭನಾಗೆ ಅಮೀರ್ಖಾನನಾಗೆ !

ಸಂಗೀತ ನಟನೆಗಳಲಿ
ಒಟ್ಟಾಯ್ಸಿ ತಿಳಿಯಲಿಲ್ಲ
ಮಂಗಣ್ಣ ನೀನು ಮನೆಗೆ ಹೋಗು
ಎಂದವೇಳೆ ಚಪ್ಲಿಬಿಟ್ಟು ಓಡಿಹೋದೆನಾ ಟರಂಟ..ರಂಟ ಟರಂಟ.. ರಂಟ ||೨||

ಹೊತ್ತಗೆಯ ತೆರೆದು ಓದಿ ಓದಿ
ಕೂಚು ಬಟ್ಟನಾ
ವೈದ್ಯನಾಗೆ ತಂತ್ರಜ್ಞಾನಿಯಾಗೆ !
ಇಪ್ಪತ್ತು ಸರ್ತಿ ನಿಂತು ನಿಂತು
ಬಿದ್ದುಬಿಟ್ಟೆನಾ
ಮಂತ್ರಿಯಾಗೆ ಪ್ರಧಾನಿಯಾಗೆ !

ಓದಿದ್ದು ಹತ್ತಲಿಲ್ಲ
ಇಪ್ಪತ್ತು ಕೋಟಿಯಿಲ್ಲ
ನೀ ವೇಸ್ಟು ಎನಲು ಸೋತಮುಖವ
ಸಣ್ಣಗಾಗಿ ಹೊತ್ತುಬಿಟ್ಟೆನಾ ಟರಂಟ... ರಂಟ ಟರಂಟ... ರಂಟ || ೩ ||

ಉತ್ತುತ್ತ ಹೊಲವ ಬಿತ್ತು ಬಿತ್ತು
ಬೆಳೆಯದಾದೆ ನಾ
ರೈತನಾಗೆ ಅನ್ನಬೇಗೆ ನೀಗೆ !
ಹತ್ತೇರಿ ಮೇಲೆ ಹೋಗಿ ಹೋಗಿ
ತಪವಗೈಯ್ಯದಾದೆ ನಾ
ಸ್ವಾಮಿರಾಮನಾಗೆ ವಿಶ್ವಾಮಿತ್ರನಾಗೆ !

ಹುತ್ತದೊಳಗೆ ಇರುವ ಹಾವು
ಮತ್ತೇರಿ ಮರೆತು ಮೆರೆದು
ನೆತ್ತಿ ಹಿಡಿದು ಕತ್ತಲಾಗೆ
ಅತ್ತುಕರೆದು ಸತ್ತುಹೋದೆನಾ ಟರಂಟ.. ರಂಟ ಟರಂಟ... ರಂಟ || ೪ ||

12 comments:

 1. ಸಾರ್ ವಾವ್ ನಿಮ್ಮ ಕವಿತೆಗೆ ಪಾಪ್ ರೂಪ ಒಳ್ಳೆ ಕಲ್ಪನೆ . ಕವಿತೆ ಚೆನ್ನಾಗಿ ಬಂದಿದೆ.ಸೂಪರ್ .

  ReplyDelete
 2. ಸರ್;ನಿಮ್ಮ ಟರಂಟ---ರಂಟ ----ಟರಂಟ --!!ಸೂಪರ್!ಹೇಗೆ ಬರೀತಿರಿ ಸರ್ ಇದನೆಲ್ಲಾ?ಟ್ರೈನಿಂಗ್ ಏನಾದರೂ ಕೊಡ್ತೀರಾ ?

  ReplyDelete
 3. hha hhaa
  sir,
  idellaa hege hoLeyatte nimage...... soopar.......

  ReplyDelete
 4. ಓಹೋ, ನೀವು pop ಕವನ ಕೂಡ ಬರೆಯುತ್ತೀರಿ! ಟರಂಟ..ರಂಟ!!

  ReplyDelete
 5. ಹಾಡು ಯಾವುದಾದರೇನಂತೆ ಬರೆಯುವುದು ಮುಖ್ಯ. ಖುಷಿಯೆನಿಸಿತು ನಿಮ್ಮ ಹಾಡು

  ReplyDelete
 6. ಛ೦ದೋಬದ್ಧ ಕವಿ ಭಟ್ಟರೇ ಇದೇನಿದು ಪಾಪಿ (ಪಾಪ್) ಕವಿಯಾಗಿ ಬಿಟ್ರಲ್ಲ !!!! Ofcourse ಇದು ಕೂಡ ಚೆನ್ನಾಗಿಯೇ ಇದೆ.

  ReplyDelete
 7. ರಾಗವಿಲ್ಲ,
  ತಾಳವಿಲ್ಲ, ಅನುಕರಣೆಯಲ್ಲೇ
  ಕವಿ-ಗವಿಯಾಗಿ ಬಿಟ್ಟೆ ನಾ ತರ೦ಟ.. ರಂಟ...ರಾ...
  ಕೆಮ್ಮಿ ಕೆಮ್ಮಿ ಕೆಮ್ಮಿ ರೋಗ...
  ಕಿರುಕಿರುಚಿ ಕಿರುಚಿ ರಾಗ....
  ಗೀಚಿಗೀಚಿ ಗೀಚಿ ಕಾವ್ಯ.... ತರ೦ಟ.. ರಂಟ...ರಾ...

  ಶಾನೆ ಸಂದಾಗಿದೆ ಭುದ್ದಿ ಪಾಪ್ ಕವನ. ಇನ್ನೊಂದಿಷ್ಟು ಬರಿರೆಲ್ಲಾ ಮತ್ತಾ...

  ReplyDelete
 8. ಇದೊಂದು ಹೊಸ ಪ್ರಯತ್ನವಷ್ಟೇ, ಬರೆದರೆ ತಪ್ಪೇನೂ ಇಲ್ಲವಲ್ಲಾ? ಹಲ್ವು ಅರ್ಥವೇ ಇಲ್ಲದ ನವ್ಯ ಕಾವ್ಯಗಳಿಗೆ ರೆಕ್ಕೆ-ಪುಕ್ಕ ಹಚ್ಚಿ ಹಾರ್ಲು ಬಿಡುವ ನಾವು ಪಾಪ್ ಅಂದ ತಕ್ಷಣ ಮಡಿವಂತಿಕೆಗೆ ಇಳಿಯುವುದು ಬೇಡ ಅಲ್ಲವೇ ? ಒಂದರ್ಥದಲ್ಲಿ ನಾವು ಬಾತ್ ರೂಮ್ ನಲ್ಲಿ ನಮ್ಮಷ್ಟಕ್ಕೆ ನಾವೇ ಹಾಡಿಕೊಳ್ಳುವ ಹಾಡಿಗೆ ಸಂಗೀತದ ಕೆಲವು ಪರಿಕರಗಳನ್ನು ಅಳವಡಿಸಿದರೆ ಅದು ಇಂಡಿಪಾಪ್ ಆಗುತ್ತದೆ! ನಿಜ ಹೇಳಲೋ ಮೇಲೆ ಬರೆಯುವಾಗ ನಾನೇ ಸುಮ್ಮನೇ ಒಂದು ಟೆಸ್ಟ್ ಡೋಸ್ ಕೊಟ್ಟಿದ್ದೇನೆ! ಹಾಗೆ ಇಂಡಿಪಾಪ್ ಎಂದು ಬರೆದು ಬೋರ್ಡು ಹಾಕದಿದ್ದರೆ ಎಲ್ಲರ ಗಮನ ಬೇರೇ ರೀತಿಯೇ ಆಗಿರುತ್ತಿತ್ತು. ಇರಲಿ ಸುಧಾರಿಸಿಕೊಳ್ಳಿ ಇನ್ನೊಂದೆರಡು ದಿನಗಳಲ್ಲಿ ನಿಮಗೆಲ್ಲಾ ಇನ್ನೂ ಒಂದು ಹೊಸ ಪ್ರಯೋಗ ಮಾಡಿ ತೋರಿಸುವವನಿದ್ದೇನೆ. ತಾವದನ್ನು ಓದಿ ಪ್ರತಿಕ್ರಿಯಿಸಿ,

  ಕೆಲವರು ಮೆಚ್ಚಿದ್ದೀರಿ-ಕೇಳಿದ್ದೀರಿ ಇದೆಲ್ಲಾ ನಿಮಗೆ ಹೇಗೆ ಹೊಳೆಯುತ್ತದೆ, ಇವೆಲ್ಲಾ ತಂತಾನೇ ಹುಟ್ಟಿದ ಕಾವ್ಯಕನ್ನಿಕೆಗಳೇ ಹೊರತು ಯಾವ ಕಾವ್ಯಕ್ಕೂ ನಾನು ಹಠಬಿದ್ದು ಬರೆಯತೊಡಗುವುದಿಲ್ಲ. ಇನ್ನೊಂದು ವಿಶೇಷವೆಂದರೆ ಇದಕ್ಕೆ ಟ್ರೈನಿಂಗ್ ಬ್ರಹ್ಮನೇ ಕೊಡಬೇಕೇ ಹೊರತು ಇದು ಮನಸ್ಸಿನ ಸ್ಥಿತಿಗತಿಗಳಿಗೆ ಸಂಬಂಧಿಸಿದ್ದರಿಂದ ನೇರವಾಗಿ ಕೇವಲ ತರಬೇತಿಯಿಂದ ಸಾಧ್ಯವಿಲ್ಲ[ನೀವು ತಮಾಷೆಗೆ ಹೇಳಿದ್ದರೂ ಇದೇ ಉತ್ತರವೇ!]

  ಪ್ರತಿಕ್ರಿಯಿಸಿದ ಎಲ್ಲಾ ಹಿರಿ-ಕಿರಿಯ ಮಿತ್ರ ಓದುಗರಿಗೆ ಅನಂತ ಧನ್ಯವಾದಗಳು, ನಮಸ್ಕಾರ.

  ReplyDelete
 9. ಓದಲು ತುಸು ಕಷ್ಟವೆನಿಸಿತು..
  (ನಾನೂ ಆಗೊಮ್ಮೆ ಹೀಗೊಮ್ಮೆ ಬ್ಲಾಗ್ ಕಡೆ ಬಂದರೂ ನಿಮ್ಮ ಎಲ್ಲ ಬರಹಗಳನ್ನು ಓದಿ ಕಾಮೆಂಟ್ ನೀಡಿರುತ್ತೇನೆ..)

  ReplyDelete
 10. ಭಟ್ರೇ,

  ಹೊಸ ಪ್ರಯತ್ನ ಅಂತ ತಿಳೀತು..ಯಶಶ್ವಿ ಪ್ರಯತ್ನ....ಆದ ಹೇಗ್ ಬರೀತೀರ ಸರ್, ತುಂಬಾ ತುಂಬಾ ಇಷ್ಟ ಆಯಿತು. Simply Superbbbbbb Sir

  ReplyDelete