ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, August 3, 2010

ಅಜ್ಞಾನ


ಚಿತ್ರ ಕೃಪೆ : ಅಂತರ್ಜಾಲ

ಅಜ್ಞಾನ

ಕನ್ನಡಿಯ ಪಕ್ಕದಿ ಕೂತು
ಗುಬ್ಬಚ್ಚಿ ಬಿಂಬಕೆ ಸೋತು
ಕುಕ್ಕುತ್ತ ಕೊಕ್ಕದು ನೋವು
ಗೊತ್ತಿಲ್ಲದೆ ಮನಕದು ಕಾವು !

ನಿನ್ನಿರುವಿಕೆ ಬ್ರಹ್ಮಾಂಡದಲಿ
ನೋಡುತ ನಾವ್ ಬೇರೆನುತಿರಲು
ಕಾಣೆವು ಅದ್ವೈತವನಲ್ಲಿ
ಕನಸದು ಅರ್ಥೈಸುವುದೆಲ್ಲಿ ?

ಬೆಳಗಾಗೆ ಸೂರ್ಯನು ಬರುವ
ಇರುಳಾಗೆ ಚಂದಿರನಿರುವ
ಈ ಲಾಂದ್ರಗಳೊಳಗಡೆಯಲ್ಲಿ
ಏನಿಹುದದು ತಿಳಿಯದು ಇಲ್ಲಿ !

ಹಿಮಪಾತವು ಒಂದೆಡೆಯಲ್ಲಿ
ಶರಧಿಗಳವು ಬೇರೆಡೆಯಲ್ಲಿ
ಕರವೀರ ಜಾಜಿ ಪುನ್ನಾಗ
ಮರೆವೆವು ನೀನಿತ್ತ ವೈಭೋಗ !

ಇರುವೆಯಿಂದ ಎಂಬತ್ತು ಕೋಟಿ
ಹರಿವು ದೊಡ್ಡ ಇರುವುದೆ ಸಾಟಿ ?
ಬರಗಾಲವು ಕೆಲಭಾಗದಲಿ
ಅನುಗಾಲವು ಚಿಂತಿಪುದಿಲ್ಲಿ !

6 comments:

  1. ಕವನ ಸೊಗಸಾಗಿ ಮೂಡಿ ಬಂದಿದೆ.

    ReplyDelete
  2. ಅದ್ವೈತ ಸಿದ್ಧಾಂತದ ತಿರುಳನ್ನು ಚೆನ್ನಾಗಿ ವ್ಯಕ್ತಪಡಿಸಿದ್ದೀರಿ. ಶಂಕರಾಚಾರ್ಯರ "ವಿಶ್ವಂ ದರ್ಪಣದೃಶ್ಯಮಾನನಗರೀ ತುಲ್ಯಂ ನಿಜಾಂತರ್ಗತಮ್" ಎನ್ನುವ ಶ್ಲೋಕ ನೆನಪಾಯಿತು.

    ReplyDelete
  3. ಬಹುತೇಕರು ಈ ಕವನ ಓದಿದಾಗ ಈತನಿಗೆ ಸುಮ್ಮನೇ ಕೆಲಸವಿಲ್ಲ, ಒಟ್ಟಾರೆ ಬರೆದಿದ್ದಾನೆ ಎಂದುಕೊಳ್ಳುತ್ತಾರೆ, ಈ ಕವನಕ್ಕೆ ಸ್ಫೂರ್ತಿ ನನ್ನ ಎಳವೆಯಲ್ಲಿ ಗುಬ್ಬಿಯೊಂದು ಕನ್ನಡಿಯಲ್ಲಿ ಜಗಳವಾಡುತ್ತಿದ್ದ ಬಗೆ! ಕನ್ನಡಿಯಲ್ಲಿ ತನ್ನದೇ ಪ್ರತಿಬಿಂಬ ಅದು ಎನ್ನುವುದು ತಿಳಿಯದೇ ಅದರೊಟ್ಟಿಗೇ ಜಗಳವಾಡುತ್ತದೆ ಹೇಗೋ ಹಾಗೇ ನಾವೂ ಕಾಣುವ ಈ ಜಗದಲ್ಲಿ ಹಲವು ಸರ್ತಿ ನಮ್ಮ ಪ್ರತಿಬಿಂಬವನ್ನೇ ಸಾಂಕೇತಿಕವಾಗಿ ಬೇರೆ ಬೇರೆ ರೂಪಗಳಲ್ಲಿ ಪರಮಾತ್ಮನಾಗಿ ಕಾಣುತ್ತಿರುತ್ತೇವೆ, ನಮ್ಮ ಆತ್ಮಕ್ಕೂ ಪರಮಾತ್ಮಕ್ಕೂ ಅಂತರವಿದ್ದರೂ ಬೆಂಕಿಯಿಂದ ಬೇರ್ಪಟ್ಟ ಕಿಡಿ ಪುನಃ ದೊಡ್ಡ ಬೆಂಕಿಯನ್ನೇ ಸೃಜಿಸಲು ಸಾಕು ಅಲ್ಲವೇ ? ಹಾಗೇ ಪರಮಾತ್ಮನಲ್ಲಿ ನಮ್ಮ ಆತ್ಮದ ಅನುಭೂತಿಯನ್ನು ನಿವೇದಿಸಿಕೊಂಡಾಗ ಆತ್ಮ-ಪರಮಾತ್ಮಗಳು ಬೇರೆ ಎಂದು ನಮಗನಿಸುವುದಿಲ್ಲ-ಇದು ದಿವ್ಯಾನುಭೂತಿ, ಸಾಮಾನ್ಯಕ್ಕೆ ಎಲ್ಲರಿಗೂ ನಿಲುಕುವಂತಹುದಲ್ಲ, ಇದರ ಮತಿತಾರ್ಥವನ್ನು ಗ್ರಹಿಸಿದ ಶ್ರೀಯುತ ಸುಧೀಂಧ್ರರೇ ನಿಮಗೆ ಸಾಷ್ಟಾಂಗ ವಂದನೆ, ಇದು ನಿಮ್ಮ ಓದಿನ ಅಗಾಧತೆಯನ್ನು ಸಾಕ್ಷೀಕರಿಸುತ್ತದೆ.

    * ಶ್ರೀ ಪ್ರವೀಣ್ ತಮಗೂ ಒಂದನೆ

    * ಶ್ರೀ ಕೃಷ್ಣಮೂರ್ತಿ ತಮಗೂ ನಮಸ್ಕಾರ

    * ಸುಗುಣ ಮೇಡಂ ತಮಗೂ ಧನ್ಯವಾದ

    * ಶ್ರೀ ಸುಧೀಂಧ್ರ ದೇಶಪಾಂಡೆ, ತಮಗೆ ಮತ್ತೊಮ್ಮೆ ನಮಸ್ಕಾರ.

    ಓದಿದ, ಓದಲಿರುವ ಎಲ್ಲರಿಗೂ ವಂದನೆಗಳು

    ReplyDelete
  4. ಅದ್ವೈತ್ಯದ ಸಿದ್ದಾ೦ತವನ್ನು ಸರಳವಾಗಿ ಕವನದಲ್ಲಿ ಇಳಿಸಿದ್ದಿರಾ...
    ಚೆಂದದ ಕವನ.

    ReplyDelete