ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, March 17, 2010

'ವಿಕೃತಿ'ಯಲ್ಲಿ ಸಿಕ್ಕ ವಿಕೃತ ಕಲಾವಿದ



Naked Bharatmata - Hussain has shown naked woman

ಮುಸ್ಲಿಂ ಬಾಂಧವರು ಕ್ಷಮಿಸಬೇಕು, ಇವತ್ತಿನ ಕೃತಿ ಅವರಬಗ್ಗೆ ಹೇಳಿದ್ದಲ್ಲ, ಬದಲಾಗಿ ಕಲಾವಿದ ಎನ್ನಿಸಿಕೊಂಡ ಮೂರ್ಖನೊಬ್ಬ ಕಲೆಯ ಹೆಸರಲ್ಲಿ ಕುಲಗೆಡಿಸಿದ ಆತನ 'ಕಲೆಯ' ಕಲೆ ಬಗ್ಗೆ ಬರೆದಿದ್ದೇನೆ. ಇದು ಬಟ್ಟೆಯ ಮೇಲಾದುದಾದರೆ ತೊಳೆಯಬಹುದಿತ್ತು, ಮನಸ್ಸಿಗೆ ಆದ ಕಲೆ ! ಮನಸ್ಸಿಗೆ ಎಳೆದ ಬರೆ ! ಇಂಥವರೂ ಇರುತ್ತಾರೆ ನಮ್ಮಲ್ಲಿ, ಕಳ್ಳ ಕಾವಿಗಳಿಗೂ ಇವರಿಗೂ ಬಹಳ ಅಂತರವಿಲ್ಲ ! ಅವರು ಕಾವಿ ವೇಷ ಹಾಕಿದ್ದರೆ ಇವರು ಜೀನ್ಸ್ ಹಾಕಿದ್ದಾರೆ,ಖಾದಿ ಹಾಕಿದ್ದಾರೆ ಅಷ್ಟೇ ! ಅಲ್ಲಿ ದೇವರ ಹೆಸರಲ್ಲಿ ಬೂಟಾಟಿಕೆ ಇಲ್ಲಿ ಕಲೆಯ ಹೆಸರಲ್ಲಿ ಸಲ್ಲದ ನಡವಳಿಕೆ ! ಎರಡೂ ವಿಕೃತವೇ ಇದು ನಮಗೆ ಬಂದ ಮೊದಲ 'ವಿಕೃತಿ'ಯ ವಿಕೃತ ! ಹಾಸ್ಯಸ್ಪದವೇ ಓದಬನ್ನಿ ----



Naked Draupadi.



Mother Teresa fully clothed




Muslim poets Faiz, Galib are shown well-clothed




Photo of MF Hussain




Naked Saraswati




M.F. Hussain's Mother fully clothed



Full Clad Muslim King and naked Hindu Brahmin. The above painting clearly indicates Hussain's



Goddess Lakshmi naked on Shree Ganesh's head



Hussain's Daughter well clothed

'ವಿಕೃತಿ'ಯಲ್ಲಿ ಸಿಕ್ಕ ವಿಕೃತ ಕಲಾವಿದ


Goddess Durga in sexual union with Tiger



Well clothed Muslim Lady.


Naked Lord Hanuman and Goddess Sita sitting on thigh of Ravana


ಸಂಗೀತ-ಸಾಹಿತ್ಯ-ಕಲೆ ಎಂಬುದು ಒಳ್ಳೆಯ ದಿಕ್ಕಿನತ್ತ ಸಾಗಿದರೆ ಅದು ತರುವ ಸಂತೋಷ ಅಪಾರ. ಅದರಿಂದ ಜನಮಾನಸಕ್ಕೆ ಉಂಟಾಗುವ ಒಳ್ಳೆಯ ಪರಿಣಾಮವೂ ಅಪಾರ. ಅದಕ್ಕೇ ನಮ್ಮ ಸಂಸ್ಕೃತದಲ್ಲಿ

|| ಸಂಗೀತ-ಸಾಹಿತ್ಯ-ಕಲಾ ವಿಹೀನಾಂ ಸಾಕ್ಷಾತ್ ಪಶೂನಾಂ ಪರಪುಚ್ಚ ವಿಹೀನಃ ||

ಎಂದಿದ್ದಾರೆ ಅಂದರೆ ಈ ಮೂರರ ಗಂಧ-ಗಾಳಿ ಯಾರಿಗೆ ಇರುವುದಿಲ್ಲವೋ ಅಂಥವರು ಪಶುವಿಗೂ ಕಡೆ ಎಂದಿದ್ದಾರೆ-ಪ್ರಾಜ್ಞರು. ಯಾರ ಜೀವನದಲ್ಲಿ ಇವುಗಳಲ್ಲಿ ಆಸಕ್ತಿ ಇರುವುದಿಲ್ಲವೋ ಅವರ ಜೊತೆ ಬದುಕುವುದು ಮತ್ತು ಒಡನಾಡುವುದು ಕೂಡಾ ಕಷ್ಟದ ಕೆಲಸ. ತಾಳ್ಮೆಯಿಂದ ಅವಲೋಕಿಸಿ ಇವುಗಳ ರಸಾಸ್ವಾದನೆ ಮಾಡಿದಾಗ ನಮಗಿರುವ ಹೆಚ್ಚಿನ ರಕ್ತದೊತ್ತಡ, ಸಕ್ಕರೆ ಕಾಯಿಲೆ, ನರ ದೌರ್ಬಲ್ಯ, ಮಾನಸಿಕ ಕ್ಲೀಷೆ,ಕ್ಲೇಶ, ಅಸಮಾಧಾನ, ಅಸಂತೋಷ, ಕ್ಷಣಿಕ ಮನೋ ವಿಕೃತಿಗಳು, ಕೋಪ-ತಾಪ, ಗೊತ್ತಿರದ ವಿಷಯಕ್ಕೆ ಗೊಂದಲ, ಏನೋ ಆತಂಕ ಇನ್ನೂ ಹಲವಾರು ದುಗುಡಗಳು ನಿವಾರಿಸಲ್ಪಡುತ್ತವೆ. ಇದಕ್ಕೆ ಉದಾಹರಣೆಯಾಗಿ ಒಂದು ಚಿಕ್ಕ ಮಗುವಿನ ಅಳುವನ್ನು ನಿಲ್ಲಿಸುವಾಗ, ಮಗುವನ್ನ್ನು ನಿದ್ದೆಮಾಡಿಸುವಾಗ ಅಮ್ಮ ಹಾಡನ್ನು ಹಾಡುತ್ತಾಳೆ. ಬಹಳ ಸಂಪರ್ಕ ಮಾಧ್ಯಮಗಳಿರದ ಆ ಕಾಲದಲ್ಲೇ ನಮ್ಮ ಜನಪದರು ಹಾಡಿದರು

ಕಾಡೀಗಚ್ಚಿದ ಕಣ್ಣು ತೀಡೀ ಮಾಡಿದ ಹುಬ್ಬು
ಮಾವೀನ ಹೋಳು ನಿನ ಕಣ್ಣು
ಮಾವೀನ ಹೋಳು ನಿನ ಕಣ್ಣು ಕಂದಮ್ಮ
ಮಾವ ಬಣ್ಣಿಸೀ ಕರೆದಾನ

ಕೂಸು ಇದ್ದ ಮನಿಗೆ ಬೀಸಣಿಕೆ ಯಾತಕ್ಕ
ಕೂಸು ಕಂದಮ್ಮ ಒಳ ಹೊರಗ
ಕೂಸು ಕಂದಮ್ಮ ಒಳ ಹೊರಗ ಆಡಿದರ
ಬೀಸಣಿಕೆ ಗಾಳೀ ಸುಳಿದಾS


ಅಂದರೆ ನಾವು ತಿಳಿಯಬೇಕು ಸಂಗೀತ-ಸಾಹಿತ್ಯ-ಕಲೆ ಎಂಬುದು ನಮ್ಮೆಲ್ಲರ ಬದುಕಿನ ಹಾಸು-ಹೊಕ್ಕು, ನಮ್ಮ ಮನಸ್ಸಿನಲ್ಲಿ ಅಚ್ಚೊತ್ತು ಉಳಿವ ಬಣ್ಣದ ರಂಗೋಲಿಗಳವು. ನನ್ನ ಪ್ರೀತಿಯ ಕವಿಗಳಲ್ಲಿ ಒಬ್ಬರಾದ ಶ್ರೀಯುತ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ಕವನ ತಾವು ಕೇಳಿರುತ್ತೀರಿ --

ಮಲಗೋ ಮಲಗೆನ್ನ ಮರಿಯೇ
ಬಣ್ಣದ ನವಿಲಿನ ಗರಿಯೇ
ಎಲ್ಲಿಂದ ಬಂದೆ ಈ ಮನೆಗೆ ?
ನಂದನ ಇಳಿದಂತೆ ಭುವಿಗೆ

ಕವಿ ಬಾಲ್ಯವನ್ನು ಬಹಳ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ ಈ ಕಾವ್ಯದಲ್ಲಿ. ಇದರಲ್ಲಿ ಮುಂದೆ ಎಲ್ಲಿಯವರೆಗೆ ಹೇಳಿದ್ದಾರೆಂದರೆ ಮಗುವಿನ ಸೌಂದರ್ಯ [ಎಲ್ಲರೂ ಸಹಜವಾಗಿ ಹೇಳುವುದು ಮೊಸಹೊಗುವುದಕ್ಕೆ ನಾಮಹಾಕಿಸಿಕೊಳ್ಳುವುದು ಅಂತ, ಅದಕ್ಕೆತಿರುಪತಿ ನಾಮ ಅಂತಲೂ ಅನ್ನುವುದಿದೆ !] ತಿರುಪತಿ ತಿಮ್ಮಪ್ಪನಿಗೇ ಮೂರು ನಾಮ ಹಾಕುವಷ್ಟು ಎಂದು! ಅಂದರೆ ಕವಿಯ ಕಲ್ಪನೆ ನೋಡಿ, ಇದು ಒಂದು ಅದ್ಬುತ ರಸಾನುಭೂತಿ ! ಹೀಗೇ ಸಂಗೀತ-ಸಾಹಿತ್ಯ-ಕಲೆಗಳು ಸಮಾಜದ ಒಳಿತನ್ನು ವರ್ಣಿಸಲು, ಸಂಸ್ಕೃತಿಯನ್ನು ಎತ್ತಿಹಿಡಿಯಲು ಉಪಯೋಗವಾಗಬೇಕೆ ಹೊರತು ಅವು ವಿಕೃತಿಯ ದಾರಿ ಹಿಡಿದರೆ ಆಗ ಸಮಾಜದಲ್ಲಿ ಋಣಾತ್ಮಕ ಸಂದೇಶ ಹೊಮ್ಮುತ್ತದೆ, ಅದು NEGATIVE ENERGY ಆಗಿ ಪರಿಣಮಿಸುತ್ತದೆ. ಅಂತಹ ಋಣಾತ್ಮಕತೆಯನ್ನು ಸೃಜಿಸುವ-ಪೋಷಿಸುವ-ಬೆಳೆಸುವ 'ಕಲೆ' ನಮ್ಮ ಸಮಾಜದ ಕೆಲವು ಸ್ತರಗಳಲ್ಲಿ ಕಂಡುಬಂದಿದೆ. ಇದಕ್ಕೆ ಉದಾಹರಣೆ ಎಂದರೆ ರಾಷ್ಟ್ರೀಯ ಮಟ್ಟದಲ್ಲಿ ಕಲಾವಿದ[ಅವರ ಕಲೆ ದೇವರಿಗೆ ಪ್ರೀತಿ!] ಎನಿಸಿಕೊಂಡ ಒಬ್ಬ ವ್ಯಕ್ತಿ ಇಂತಹ ಕೆಟ್ಟ ಭಾವನೆಗಳು ಕೆರಳುವಂತಹ ಚಿತ್ರಗಳನ್ನು ಗೀಚಿದ್ದಾರೆ! ಯಾರು ಎಂದಿರೇ ? ಆ ಕೆಟ್ಟ ಕ-ಲಾವಿದನೇ M.F.HUSSAIN


ಹುಣಿಸೆ ಮುದುಕಾದರೂ ಹುಳಿ ಮುಪ್ಪೇ ಎನ್ನುವಂತೆ ಇನ್ನೂ ಕಾಮದಿಚ್ಛೆ ಹೊಂದಿರುವ ಮುದಿ ಹಂದಿಗಳಲ್ಲಿ ಇದೂ ಒಂದು. ಇಷ್ಟು ಹೇಳಲು ಕಾರಣ ಅವರು ಇತ್ತೇಚೆಗೆ ಚಿತ್ರಿಸಿದ ಕೆಲವು ಚಿತ್ರಗಳು. ಅವುಗಳನ್ನು ತಮ್ಮೆಲ್ಲರ ಅವಲೋಕನೆಗೆ ಇಲ್ಲಿ ಸಾಧ್ಯವಾದಷ್ಟು ಬಿತ್ತರಿಸುತ್ತಿದ್ದೇನೆ. ನಾನು ಹುಸೇನ್ ಬಗ್ಗೆ ಲೇಖನ ಹಾಕುತ್ತಿರಲಿಲ್ಲ, ಸ್ನೇಹಿತ ಕೆರೆಮನೆ ಶಿವಾನಂದ ಹೆಗಡೆಯವರು ನಿನ್ನೆ ಮತ್ತೆ ಮಿಂಚಂಚೆ ಕಳಿಸಿ ಇದರ ಬಗ್ಗೆ ಬರೆದರೆ ಒಳ್ಳೆಯದೆಂಬ ಅಭಿಪ್ರಾಯ ಸೂಚಿಸಿದರು, ಅವರ ಹಾಗೂ ಸರಿಸುಮಾರು ಸಾವಿರ ಸಂಖ್ಯೆಯ ಸ್ನೇಹಿತರು ಈ ವಿಷಯದ ಸಲುವಾಗಿ ನನಗೆ ಮಿಂಚಂಚೆ ಕಳಿಸುತ್ತಲೇ ಇದ್ದಾರೆ-ಈ ಎಲ್ಲರ ಇಚ್ಛೆಯಂತೆ ಅಂತೂ ಇಂದು ಬರೆಯೋಣ ಅಂತ ಬರೆದಿದ್ದೇನೆ.

ಇದರ ಬಗ್ಗೆ ಬರೆಯಲು ಮನಸ್ಸಿರಲಿಲ್ಲ, ಯಾಕೆಂದರೆ ಮುದುಕನೊಬ್ಬ ನಟೀಮಣಿಯರ ಹಿಂದೆ ಬಿದ್ದು ನಗೆಯಾಡುತ್ತ ಅವರ ಸಾಮೀಪ್ಯಕ್ಕೆ, ಆವರ ದೇಹ ಗಂಧಕ್ಕೆ-ಚಂದಕ್ಕೆ, ಅವರ ಕಡೆಗಣ್ಣ ಕುಡಿನೋಟಕ್ಕೆ, ಅವರು ಎಳೆಯ Low Jeans ಪಡ್ಡೆ ಹುಡುಗರ ಮೇಲೆ ಬಿಡುವ ಕುಡಿನೋಟಕ್ಕೆ, ಅವರ ಜೊತೆಗಿನ ಸಲ್ಲಾಪಕ್ಕೆ, ಅವರ ಪ್ರೀತಿಯ ಮೈ ಸೋಕಿಗೆ, ಶೋಕಿಗೆ, ಅವರು ಬೀಸಿದ ನಗೆಯ ಅಲೆಯ ಹಿಂದೆ ಕಳೆದುಹೋಗಿ ತನ್ನನ್ನೇ ತಾನು ಹುಡುಕಿಕೊಳ್ಳುವ ಸಮಸ್ಯೆ ಎದುರಿಸುತ್ತ ಅಂತೂ ಅವರನ್ನಪ್ಪಿ ಮುದ್ದಾಡುವ ಮುಪ್ಪಿನ 'ಕಾಮ ವಾಂಛೆ'ಗೆ, ತನ್ನ ತೋಳ್ತೆಕ್ಕೆಯಲ್ಲಿ ಬಹುಕಾಲ ಅವರನ್ನು ಬಂಧಿಸಬೇಕೆಂಬ ಹುಚ್ಚು ಕುದುರೆಯ ಹೆಗಲೇರಿದ ಬೊಚ್ಚು ಬಾಯಿಯ ಬೊಂಬಾಯಿ ಮನುಷ್ಯನ ಬಗ್ಗೆ ಬರೆಯಬೇಕೆ ? ಆದರೂ ನಿಮ್ಮೆಲ್ಲರ ಸಲುವಾಗಿ ನವ್ಯ ಕಾವ್ಯವನ್ನೂ ಬರೆದಿದ್ದೇನೆ, ಓದಿಕೊಳ್ಳಿ ಇದು ನಮ್ಮ ಹುಚ್ಚು ಹುಸೇನರ ಹಚ್ಚಹಸನಾದ ಹುಚ್ಚಿನ ಕಲೆ !


ಹುಸೇನಗೊಂದು ಹುಚ್ಚು ಕವನ

ಎಂ. ಎಫ್.ಹುಸೇನನೋ ಎಮ್ಮೆಪುಸೇನನೋ ಅರಿಯದಾದೆ
ಹಮ್ಮಿನಲ್ಲಿ ಎಳೆದ ಗೆರೆಗಳಿಗೆ
ಅರ್ಥವಿರದ ಅಸಂಬದ್ಧಗಳಿಗೆ !
ದಮ್ಮು ಎಳೆಯುತ್ತ ಬರೆದ ತನ್ನ 'ಮಾನಸಿಕ ಹುಣ್ಣುಗಳಿಗೆ'
ಸುಮ್ಮನೇತಕೆ ಜನ ಕರೆವರು ನಿನ್ನ ಕಲಾವಿದನೆಂದು ?

ನೀನೇನೋ ಬರೆವೆಯೋ ಮಂಕೆ ?
ಬರೆದಿದ್ದೆಲ್ಲ ಒಪ್ಪಿಕೊಳ್ಳಲೇ ಬೇಕೇ ?
ನಿನಗೆ ರಾಜಕೀಯದವರ ಬೆಂಬಲವೇ?
ನೀನೂ ಒಬ್ಬ ಕಲಾವಿದನೇ?
ನನಗ್ಯಾಕೋ ಡೌಟು !
ಯಾರು ಹೇಳಿದರಯ್ಯ ನೀನೊಬ್ಬ ಕಲಾವಿದನೆಂದು ?
ನೋಡಿದರೆ ಹೇಳಬಹುದು ನೀನೊಬ್ಬ ತಲೆಹಿಡುಕನೆಂದು !

ನಿನಗೊಂದು ಕವನವೇ ಛೆ !
ನಿನಗೇಕೆ ಅದು ವೇಸ್ಟು ?
ನೀನೊಬ್ಬ ತರಲೆ ಬುರುಡೆ
ನೀನೊಬ್ಬ ಅರಳು-ಮರಳು
ನೀನೊಬ್ಬ ತಿಳಿಗೇಡಿ !
ಹಿಂದೀ ಚಿತ್ರನಟಿಯರ ಹಿಂದೆ ಬಿದ್ದ ಸೋಗಲಾಡಿ !
ಅವರ ಚಿತ್ರವನ್ನು ಗಜಗಾಮಿನಿಯಾಗಿ ಬರೆಯುವ
ಮುದುಕಾದರೂ ಇನ್ನೂ ಚಾಲ್ತಿಯಲ್ಲಿ ಇಟ್ಟಿರುವ 'ಮಶಿನ್ನು' ನಿನ್ನದು !

ಏನಯ್ಯ
ನಿನಗೆ ಕೆಲಸವಿಲ್ಲವೇ ?
ಬೇರೆಲ್ಲಾ ಚಿತ್ರಗಳಿಗೆ ಬಟ್ಟೆ
ನಿನಗೆ ಬೇಡದ ಚಿತ್ರಗಳು ವಿವಸ್ತ್ರ ?
ಹಿಂದೂ ದೇವತೆಗಳನ್ನು ಗುತ್ತಿಗೆ ಹಿಡಿದೆಯೇನೋ ತಲೆಹಿಡುಕ ?
ಓಡು ದೇಶವ ಬಿಟ್ಟು ಖಾಲೀಮಾಡು
ನೀನಿದ್ದರೆ ತಲೆ ಚಿಟ್ಟು
ನೀನು ತಲೆಯ ಹೊಟ್ಟು !
ನೀನು ದೇಶಕಂಡ ತರಲೆ ವಿಕೃತ ಕಲಾವಿದ
ದೇಶದ ದುರಂತಕ್ಕೆ ನಾಂದಿ ಹಾಡಬಹುದಾದ ನಿನಗೆ
ಇನ್ನೂ ಮಣೆಹಾಕಿದರೆ ಆ ಮಣೆಹಾಕುವವರಿಗೂ ಧಿಕ್ಕಾರ!
ನಿನಗೆ ಮೊದಲೇ ಧಿಕ್ಕಾರ!
ಇದು ಸಾಕಾಗಲ್ಲ
ಬೀದಿಗಿಳಿದು ಗುಲ್ಲೆಬ್ಬಿಸಿ ಮಾರಿ ಬಿಡಿಸಿದರೇನೆ
ಸ್ವಲ್ಪ ......
ತಾಗಬಹುದೇನೋ ನಿನಗೆ
ಇಲ್ಲದಿರೆ ನಿನ್ನ ' ಕಲೆಯ ಸೊಬಗು '
ಆ ಹುಚ್ಚುತನ ಹೆಚ್ಚುತ್ತಲೇ ಹೋಗುವ ನಿರೀಕ್ಷೆ !
ಹಳೇ ಪೊರಕೆ ಚಪ್ಪಲಿಗಳೇ ಬೇಕೇ ?
ಬಾಯಿ ಮಾತು ಸಾಕೆ ?
ಹೋಗು ಹೋಗೆಲೋ ಮೂರ್ಖ
ನೀನೂ ಕ-ಲಾವಿದ ?? !!!!


ಜಗದಮಿತ್ರ ಬಂದು ಕೊನೆಗೊಮ್ಮೆ ಹಾಡಿದ್ದಾನೆ------------

ಸಂಗೀತ ಸಾಹಿತ್ಯ ಕಲೆಗಳೆಲ್ಲವು ನಿನ್ನ
ಅಂಗಾಂಗಗಳು ಬದುಕ ತುಂಬಿ ನೀ ಬದುಕೆ
ಭಂಗತಾರದ ರೀತಿ ಬಳಸು ನೀ ಅವುಗಳನು
ನುಂಗದದು ಮಿತಿಮೀರೆ | ಜಗದಮಿತ್ರ


11 comments:

  1. ಸದ್ಯಕ್ಕೆ ಈ ಮಹಾನುಭಾವ ದೇಶದಿಂದ ಆಚೆಗಿದ್ದಾನೆ. "ಎಲ್ಲಿದ್ದರೂ ತಾನು ಭಾರತೀಯನೇ" ಎಂದು ಬೇರೆ ಹೇಳಿಕೊಂಡಿದ್ದಾನೆ. ಇವನನ್ನು ಮತ್ತೆ ದೇಶಕ್ಕೆ ಸೇರಿಸುವುದೇ ಮಹಾಪರಾಧ. ಒಂದನ್ನು ಮುಚ್ಚಿಟ್ಟು-ಇನ್ನೊಂದನ್ನು ಬಿಚ್ಚಿಡುವ ಈತನು ವಿಕೃತ ಮನುಷ್ಯನೇ ಸರಿ. ಕೇಂದ್ರಸರ್ಕಾರ ವಿಶೇಷ ಕ್ರಮ ತೆಗೆದುಕೊಳ್ಳಬೇಕಿದೆ ಈತನ ಮೇಲೆ. ಕೆಲವು ಚಿತ್ರಗಳನ್ನು ಮಾತ್ರ ನೋಡಿದ್ದೆ...ಇಲ್ಲಿ ನೀವು ಇನ್ನಷ್ಟು ಕೊಟ್ಟ ಮೇಲೆ...ವಾಕರಿಕೆ ಬರುವಂತಾಗುತ್ತಿದೆ.....ಧಿಕ್ಕಾರ ಆ ’ಕೊಲಾವಿದನಿಗೆ’ !.

    ReplyDelete
  2. ಈ ಪುಣ್ಯಾತ್ಮನ ಬಗ್ಗೆ ಹೇಳೋದೆ ಬೇಡ. ಈಗ ದೇಶಾ೦ತರ ಹೋಗಿ ತಲೆತಪ್ಪಿಸಿಕೊ೦ಡಿದ್ದಾನೆ, ಅವನು ತನ್ನ ಪಾಸ್-ಪೊರ್ಟ್ ಹಿ೦ದುರಿಗಿಸಿದರೇ ನಮ್ಮ ದೇಶದಲ್ಲಿ ಎಲ್ಲಾ ಹಾಳಾಗೋಯ್ಥು ಅನ್ನುವ ಹಾಗೇ ಮಾಧ್ಯಮ ಹಾಗೂ ಸರಕಾರ ಇತ್ತೀಚೆಗೆ ವರ್ತಿಸಿದವು. ಅವನನ್ನ ರಹಪತ್ರ-ಹಿ೦ದುರಿಗಿಸದ೦ತೆ ಮನ ಒಲಿಸಲು ರಾಯಭಾರಿಗಳೇ ಪ್ರಯತ್ನಿಸಿದರೂ ಅದೂ ಸುಮಾರೂ ನಾಲ್ಕುಗ೦ಟೆಗಳ ಕಾಲ. ಸಧ್ಯ ಹುಸೇನಿ ಮನ ಬದಲಿಸಲಿಲ್ಲ ಏಕೆ೦ದರೆ ಬದಲಿಸಿ ಭಾರತಕ್ಕೆ ಬ೦ದಿದ್ದರೇ ಜನ ಅವನಿಗೆ ಕಜ್ಜಾಯ ನೀಡಲು ತಯಾರಾಗಿದ್ದರೆ೦ದು. ಅವನೊಬ್ಬ ವಿಕೃತ ಮನಸ್ಸಿನ ಕಲಾವಿದ(?). ಅವನ ಬಗ್ಗೆ ತಮ್ಮ ಲೇಖನ ಸೂಕ್ತವಾಗಿದೆ. ಕವನವ೦ತೂ ಚೆನ್ನಾಗಿ ಮೂಡಿದೆ. ಅವನ ನಗ್ನ ಚಿತ್ರಗಳ ಬಗ್ಗೆ ಇಲ್ಲಿ ಹೋರಾಟ ನಡೆಸುವರನ್ನು ಹಿ೦ದೂಮೂಲಭೂತವಾದಿಗಳೆ೦ದು(wikipedia) ಬರೆಯಲಾಗಿದೆ.
    Some important links :
    1. http://www.hindujagruti.org/activities/campaigns/national/mfhussain-campaign/paintings.php
    2. http://en.wikipedia.org/wiki/M._F._Husain#cite_note-24

    ReplyDelete
  3. ಇದ್ದುದನ್ನು ಇದ್ದಂತೆ ಹೇಳಿದ ತಸ್ಲೀಮಾಳಿಗೆ ಎಲ್ಲಿದ್ದರೂ ಪ್ರಾಣ ಭಯ, ಸತ್ಯವಾಡಿದರೆ ದೊಂಬಿ ಗಲಾಟೆ, ಹುಚ್ಚಾಪಟ್ಟೆ ಭಾರತೀಯರ(ಹಿಂದುಗಳ) ಭಗವಂತನನ್ನು ಚಿತ್ರಿಸಿದ ಹುಸೇನನಿಗೆ ಮಾತ್ರ ಮುಸ್ಲಿಂ ದೇಶದಲ್ಲಿ ಶ್ರೀ ರಕ್ಷೆ... ಹಿಂದು ಉಗ್ರಗಾಮಿಗಳು ತಯಾರಾದರೆ ಮಾತ್ರ ಧರ್ಮ ಯುದ್ಧ ಸಾಧ್ಯವೇ ಹೇಗೆ?? ಪೊಳ್ಳು ಸನ್ಯಾಸಿಗಳು, ಸುಳ್ಳು ರಾಜಕಾರಣದವರು, ಹೇಡಿ ಜನರು ಇರುವವರೆಗೂ ಎಲ್ಲವೂ ಹೀಗೇ ಇರುವುದಂತೂ ಗ್ಯಾರಂಟಿ.

    ReplyDelete
  4. ಯಾರೇ ಆಗಲಿ ಅವರವರ ಭಾವನೆಗಳಿಗೆ, ಭಕುತಿಗೆ ದಕ್ಕೆ ತರಬಾರದು ಈ ಮೇಲಿನ ಚಿತ್ರಗಳನ್ನು ನೋಡಿ ಸಂಕಟವಾಯಿತು..... ಮನುಷ್ಯ ಯಾರೇ ಆಗಲಿ ಅವರಿಗೆ ಇಷ್ಟವಿಲ್ಲವೆಂದರೆ ಬಿಟ್ಟುಬಿಡಬೇಕು ಅದನ್ನು ಅಣಕಿಸುವ ಅಗತ್ಯವಿಲ್ಲ..... ಯಾವ ಧರ್ಮ,ಜಾತಿ ಏನೇ ಆಗಲಿ ಅವರದೇ ಭಾವ ತುಂಬಿರುತ್ತೆ ಎನ್ನುವುದನ್ನು ಅರಿಯಬೇಕು...
    ಈ ವಿಷಯ ಒಂದು ರೀತಿ ಮನಸಿನಶಾಂತಿ ಕೆಡಿಸುತ್ತದೆ...ಬೇಸರದ ಸಂಗತಿ ಕೂಡ...

    ReplyDelete
  5. ನೋಡಿ ಎಂಥ ಕಾಲ ಬಂದೋದಗಿದೆ ಯಾರನ್ನಾ ನಾವು ದೈವಿ ಸ್ಥಾನದಲ್ಲಿಟ್ಟು ದಿನಬೇಳಗಾದರೆ ನಮ್ಮನ್ನು ಸಲಹೋ ಎಂದು ಗೋಗೆರೆಯುವ ನಮ್ಮ ದೇವರುಗಳನ್ನು ಈ ರೀತಿಯಿಂದಲೂ ನೋಡಬಹುದಾದ ಕಾಲ .ಛೇ! ನಿಜವಾಗಲೂ ವಾಕರಿಕೆ ತರುವಂಥಾ ಕಾರ್ಯ ..ತಮ್ಮ ತಂದೆ - ತಾಯಿಗಲನ್ನಾ ಈ ರೀತಿ ಚಿತ್ರಿಸಿದ್ದರೆ ಹೇಗಿರುತ್ತಿತ್ತು ? ಯಾವ ನೆಲದಲ್ಲಿ ಉಣ್ಣುತ್ತಾನೋ ಅಂಥಹ ನಾಡಿನೆಲ್ಲೆ ಈ ತರಹದ ಕೃತ್ಯೆಗೆ ಕೈಹಾಕಿದ ಆ ಮಹಾಪುರುಷನಿಗೆ ಧಿಕ್ಕಾರವಿರಲಿ . .ನಿಜವಾಗ್ಲೂ ರಕ್ತಾ ಕುದಿತಾ ಇದೆ . .

    ReplyDelete
  6. ನನ್ನ ವೈಯಕ್ತಿಕ ಅಭಿಪ್ರಾಯ - ಹಿಂದೂಸ್ಥಾನದ ಜನತೆ ರಾಜಕೀಯ ವ್ಯವಸ್ಥೆಯನ್ನು ಶುದ್ಧೀಕರಿಸಲು ಶುದ್ಧಹಸ್ತರಾದ, ಮಾನವೀಯ ಮೌಲ್ಯವುಳ್ಳ -ಹೃದಯವುಳ್ಳ, ಸ್ವಾರ್ಥರಹಿತ-ಅರ್ಥನಿರಪೇಕ್ಷಿತ ಜನರು ಆಡಳಿತವನ್ನು ಕೈಗೆ ತೆಗೆದುಕೊಳ್ಳ ಬೇಕು, ಯಾರು ಹಿಂದೂಸ್ಥಾನದ ಮೂಲ ಸಂಸ್ಕೃತಿಯನ್ನು ಒಪ್ಪುವುದಿಲ್ಲವೋ, ಅದನ್ನು ಹೀಗಳೆಯುತ್ತಾರೋ,ಅಲ್ಲಗಳೆಯುತ್ತಾರೋ ಅಂಥವರನ್ನು ದೇಶದಿಂದ ಬಹಿಷ್ಕರಿಸಿ ಹೊರಗೋಡಿಸಬೇಕು, ಎಲ್ಲಾ ದೇಶಗಳಲ್ಲೂ ಅಲ್ಲಲ್ಲಿನ ಮೂಲ ಸಂಸ್ಕೃತಿಗೆ ಗೌರವ ಕೊಡದವರನ್ನು ಅವರು ಶಿಕ್ಷೆಗೆ ಗುರಿಪಡಿಸುತ್ತಾರೆ, ವಿಪರ್ಯಾಸವೆಂದರೆ ನಮ್ಮ ಇನ್ಪೋಸಿಸ್ ಕ್ಯಾಂಪಿನಲ್ಲಿ ಕೆಲಸ ಮಾಡುವ ವಿದೇಶೀ ಹುಡುಗರು ನಾಡಗೀತೆಯನ್ನು ಅಣಕಿಸಿ/ಅವಮಾನಿಸಿ ಮೆರೆಯುತ್ತಾರೆ-ಇಂಥವರನ್ನು ನಾವು ಸಾಕುವವರೆಗೆ ದೇಶದ ಉದ್ಧಾರ ಸಾಧ್ಯವಿಲ್ಲ. ಯಾರು ಪಾಕಿಸ್ತನಾದಿ ದೇಶಗಳಿಗೆ ಹಿನ್ನೆಲೆಯಿಂದ,ಬೇಹುಗಾರಿಕೆಯಿಂದ ಬೆಂಬಲಕೊಡುತ್ತಾರೋ ಅಂಥವರನ್ನು ಘೋರ ಶಿಕ್ಷೆಗೆ ಒಳಪಡಿಸಬೇಕು-ಅದು ಕಡ್ಡಾಯವಾಗಬೇಕು. it must be merciless. ಹೀಗೇ ಕುತ್ಸಿತ ರಾಜಕಾರಣದ ಕಪಿಮುಷ್ಠಿಯಿಂದ ಬಿಡುಗಡೆಗೊಂಡ ಬಳಿಕ ಇಡೀ ದೇಶದ ಆಯಕಟ್ಟಿನ ಸ್ಥಳಗಳನ್ನು ಗೋಮೂತ್ರದಿಂದ ತೊಳೆಯಬೇಕು-ಇದರ ಅರ್ಥ ನಿಮಗಾಗಬಹುದು, ಹೀಗೇ ಸಂಪೂರ್ಣ ರಾಜಕೀಯದ ಹೊಲಸು ನಿರ್ನಾಮವಾಗಬೇಕು, ಅಂದಾಗ ಮಾತ್ರ ದೇಶದ ಉದ್ಧಾರ ಸಾಧ್ಯ. ಎಲ್ಲಿಯವರೆಗೆ ಗೋವುಗಳನ್ನು ತಿನುವುದನ್ನು ನಿಲಿಸುವುದಿಲ್ಲವೋ ಅಲ್ಲಿಯವರೆಗೆ ನಾವು ಮನುಷ್ಯರೇ ಅಲ್ಲ! ಅಲ್ಲಿಯವರೆಗೆ ವಿಕೃತ ಕಾಮಿಗಳು, ವಿಕೃತ ಕಲಾವಿದರು, ವಿಕೃತ ಶಿಕ್ಷಕರು ಎಲ್ಲವೂ ವಿಕೃತವೇ ಜಾಸ್ತಿ.

    ಒಬ್ಬ ರಾಧಾಕೃಷ್ಣನ್, ಒಬ್ಬ ಸರ್ದಾರ್ ಪಟೇಲ್, ಒಬ್ಬ ಲೋಕಮಾನ್ಯ ತಿಲಕ್, ಒಬ್ಬ ಗಾಂಧಿ ಇಂತಹರು ಬೇಕೇ ಹೊರತು ನಮಗೆ ಇಂದಿನ ರಾಜಕಾರಣಿಗಳ ಮುಖವೊಂದೂ ಸರಿಯಿಲ್ಲ. ರಾಜಕೀಯದಲ್ಲಿ ಸಂವಿಧಾನದ ತಿದ್ದುಪಡಿ ರಾಜೆಕೀಯೇತರ ನಿಸ್ವಾರ್ಥ ಅಪ್ಪಟ ದೇಶಪ್ರೇಮಿಗಳ ಒಂದು ಸಮಿತಿಯಿಂದ ನಡೆಯಬೇಕು.ಕಾಲಬದಲಾಗಿದೆ, ಅಂದಿನ ತರಾತುರಿಯಲ್ಲಿ ರಚಿಸಿದ ಸಂವಿಧಾನದ ಕರಡು ಇಂದು ಬರೇ ಕಾನೂನಿಗೆ ಕಳ್ಳಕಿಂಡಿ ಒದಗಿಸುವ ಸೋಪಾನವಾಗಿದೆ -ನಮ್ಮ ಪ್ರಸಕ್ತ ರಾಜಕೀಯದವರಿಗೆ, ಕೇಳಿ ಅವರಲ್ಲಿ-ಯಾರಿಗೂ ಅದನ್ನು ತಿದ್ದುವಿಕೆ ಬೇಕಾಗಿಲ್ಲ-ಹಾಗೊಮ್ಮೆ ಆದರೆ ತಮ್ಮ ಬೇಳೆ ಬೇಯುವುದಿಲ್ಲ! ಅಮೇರಿಕಾದಲ್ಲಿ ಇರುವ ರೀತಿ ದೇಶದುದ್ದಗಲ ಎರಡೇ ಪಕ್ಷಗಳಿರಬೇಕು, ಇವತ್ತಿನ ಸಾವಿರದೆಂಟು ಪಕ್ಷಗಳನ್ನೆಲ್ಲ ನೀರಲ್ಲಿ ಹಾಕಬೇಕು, ಅಂದಾಗ ಚುನಾವಣೆಗೂ ಒಂದು ಮಾನ್ಯತೆ, ರಾಷ್ಟ್ರಾಧ್ಯಕ್ಷರಿಗೂ ಒಂದು ಗೌರವ, ಒಳ್ಳೆಯ ಆಡಳಿತ ನಿರೀಕ್ಷಿಸಲು ಸಾಧ್ಯ. ಇವತ್ತಿನ ಸ್ಥಿತಿ ಇದ್ದರೆ ದೇಶ ತನ್ನನ್ನೇ ತಾನು ಮಾರಿಕೊಳ್ಳುವ ಸ್ಥಿತಿ ದೂರವಿಲ್ಲ. ಸ್ವಾರ್ಥರಾಜಕಾರಣಿಗಳಿಗೆ ತಮ್ಮ ಗಂಟು-ಸ್ಥಾನಮಾನ ಬಿಟ್ಟರೆ ಇನ್ನುಳಿದದ್ದು ಯಾಕೆ ಹೇಳಿ? ಅದು ಬಿಡಿ ದೇಶಪೂರ್ತಿ ಓಡಾಡಿ ಒಬ್ಬನೇ ಒಬ್ಬ ರಾಜಕಾರಣಿಯ ಬಾಯಲ್ಲಿ 'ಜನಗಣ ಮನ ಮತ್ತು ಒಂದೇ ಮಾತರಂ ' ಈ ಎರಡು ಹಾಡನ್ನು ಹಾಡಿಸಿ, ನಿಮಗೇ ತಿಳಿಯುತ್ತದೆ. ಇಂಥವರು ನಮ್ಮನ್ನು ಆಳುತ್ತಿದ್ದಾರೆಂದರೆ ಇಲ್ಲಿ ಅನೇಕ ಎಮ್ಮೆಪುಸೇನರು ಬರುತ್ತಾರೆ, ಅನೇಕ ದಾವೂದರು ಹಳ್ಳದಲ್ಲಿ ಅಡಗಿರುತ್ತಾರೆ, ಅನೇಕ ಡೆಡ್ಲಿ ಗಳು ಶಾಶ್ವತ ಬಿಡಾರ ಹೂಡಿ ದೇಶದ ಸರ್ವನಾಶಕ್ಕೆ ಕಾರಣರಾಗುತ್ತಾರೆ.

    ಇನ್ನು ಎಮ್ಮೆಪುಸೇನ ನೆಂಬ ಕಾಮದಾಹದ ಮುಡಿ ಹಂದಿಗೆ ನೀವು ಮರಳಿ ಬರಲು ಅವಕಾಶ ಕೊಟ್ಟರೆ ಅದು ಮತ್ತೊಂದು ದುರಂತವನ್ನು ಮನೆಗೆ ಆಹ್ವಾನಿಸಿದಂತೆ, ಅಂತಹ ಕಲೆಯೇ ಇಲ್ಲದ ಗೀಚುವಿಕೆಗೆ ಕಲೆ ಎಂಬ ಹೆಸರುಕೊಟ್ಟಿದ್ದು ಯಾರು ಎಂಬುದೇ ನನಗೆ ಅರ್ಥವಾಗುತ್ತಿಲ್ಲ! ಅದೂ ವಿಶ್ವಮಟ್ಟದ ಖ್ಯಾತಿ ಕೊಡುವಷ್ಟು ಆತ ಏನು ಬಿಡಿಸಿದ? ಅರ್ಥವಾಗದ ಹುಚ್ಚು ಗೆರೆಗಳ ರಾಶಿ, ಮಾತಂಧ ರಾಕ್ಷಸೀ ಮನೋವೃತ್ತಿಯಿಂದ ದೇಶದಲ್ಲೇ ಹುಟ್ಟಿ ಬೆಳೆದು ಇಲ್ಲಿನ ಉಪ್ಪನ್ನವನ್ನೇ ತಿಂದಿದ್ದರೂ ದೇಶವನ್ನು ಕಡೆಗಣಿಸಿದ ಅಂತಹ ನೀಚ ರಕ್ಕಸನಿಗೆ ಮತ್ತೆ ನಮ್ಮ ರಾಯಭಾರಿ ಕಚೇರಿಯಿಂದ ಬರುವಂತೆ ಆಹ್ವಾನ, ಬರಲಿ ಬರಲಿ, ರಾಜಕಾರಣಿಗಳೇ ಬರಲಿ ಹುಸೇನ, ನಾವೂ ಕಾದಿದ್ದೇವೆ, ಮೊನ್ನೆಯಷ್ಟೇ ಹೋಳಿ ಮುಗಿಸಿದ ನಮಗೆ ಇನ್ನೂ ಕಾಮದಹನ ಬಾಕಿ ಇದೆ- ಅದು ಬಾಕಿ ಇರುತ್ತದೆ, ಹುಸೇನ ಬರುವವರೆಗೆ! ಪ್ರತಿಯೊಬ್ಬ ಹಿಂದೂಸ್ಥಾನದ ಪ್ರಜೆಯು ಹುಸೇನನ ಬರುವಿಕೆಗೆ ಕಾದಿದ್ದಾನೆ, ನಮ್ಮ ಅಂತಃಶಕ್ತಿ ಇನ್ನೂ ಪೂರ್ತಿ ಕರಗಿಲ್ಲ;ಕರಗುವುದೂ ಇಲ್ಲ, ಎಂದಿದ್ದರೂ ನಾವು ಭಾರತೀಯರು, ಎಂದಿದ್ದರೂ ನಾವು ಹಿಂದೂಸ್ಥಾನಿಗಳು.

    ಜೈ ಹಿಂದ್
    ಜೈ ಹಿಂದ್
    ಜೈ ಹಿಂದ್

    ಪ್ರತಿಕ್ರಿಯಿಸಿದ ಸುಬ್ರಹ್ಮಣ್ಯ, ಸೀತಾರಾಮ್, ಸಾಗರಿ, ಮನಸು ಮತ್ತು ಸಂಜು ಈ ಎಲ್ಲರಿಗೂ, ಓದಿದ -ಓದದ -ಓದುವ ಎಲ್ಲರಿಗೂ ಧನ್ಯವಾದಗಳು, ಮತ್ತೆ ಹುಸೇನರು ಹುಟ್ಟಿಬರದಿರಲಿ, ನಮಸ್ಕಾರ.

    ReplyDelete
  7. First, thanks and belated ugadi wishes to you. Yes, this subject is passing via email also. I remember one article in Times of India very recently about "Hussain quitting Indian Citizenship & we are not taking care of great artist" etc. Don't remeber the date and author. if these are really his paintings, i am glad that he quit india.

    ReplyDelete
  8. ಕಲೆ ಎನ್ನುವುದನ್ನು ವ್ಯಕ್ತಿಪಡಿಸಲು ಬೇಕಾದಷ್ಟು ಮಾರ್ಗಗಳಿವೆ
    ಪ್ರತಿಭೆ ಬೆಳಗಲು ಕೆಟ್ಟ ಮಾರಗ್ವೆ ಬೇಕಿಲ್ಲ
    ರೆಹಮಾನ್ ಎಂಬ ಸಂಗೀತ ಗಾರ ನಮಗೆ ಹೆಮ್ಮೆ
    ಆದರೆ ದೇವರ ಹೆಸರಿನಲ್ಲಿ ಹುಸೇನ್ ಸಾಹೇಬರ ಚಿತ್ರಗಳು ಹಿಂದೂ ಧರ್ಮಕ್ಕೆ ಕಳಂಕ
    ಇದೊಂದು ಸಂಕುಚಿತ ಮನೋಭಾವದ ಅತಿರೇಕವೇ ಸರಿ
    ಎಲ್ಲಿಯವರೆಗೆ ಹಿಂದುಗಳಾದ ನಾವು ಶಾಂತ ಪ್ರಿಯರಾಗಿರುತ್ತೆವೆಯೋ ಅಲ್ಲಿಯವರೆಗೆ ನಮ್ಮ ಮೇಲೆ ಎಲ್ಲ ಅವಮಾನಗಳು ನಡೆಯುತ್ತಿರುತ್ತವೆ
    ರವಿ ಶಂಕರ್ ಗುರುಜಿ ಹೇಳಿದಂತೆ ಹುಸೇನ್ ಗೆ ಧೈರ್ಯ ವಿದ್ದರೆ ಮುಸ್ಲಿಂ ದೇವರುಗಳ ಬಗೆಗೆ ಹೀಗೆ ಚಿತ್ರಿಸಿ ಕತಾರ ಪೌರತ್ವ ಉಳಿಸಿಕೊಳ್ಳಲಿ
    ಚಿತ್ರ ನೋಡಿ ತುಂಬಾ ಸಂಕಟವಾಗುತ್ತಿದೆ

    ReplyDelete
  9. ವಿ.ಆರ್.ಬಿ. ನಾನು ನನ್ನ ಅಭಿಪ್ರಾಯದ ಸ್ಪಷ್ಠ ಚಿತ್ರಣವನ್ನು ಸುನಾಥ್ ಸರ್ ರ ಬ್ಲಾಗಿನ ಪ್ರತಿಕ್ರಿಯೆ ಮೂಲಕ ಹಾಕಿದ್ದೆ...ಯಾರಿಗೂ ಇನ್ನೊಂದು ಧರ್ಮದ ಅಷ್ಟೇಕೆ ವ್ಯಕ್ತಿಯ ಭಾವನೆಗಳೊಂದಿಗೆ ಹೀನಾಯವಾಗಿ ಅಥವಾ ಧಕ್ಕೆಯಾಗುವಂತೆ ವರ್ತಿಸುವ ಹಕ್ಕಿರುವುದಿಲ್ಲ...ನನ್ನ ಪ್ರಕಾರ ಯಾವುದೇ ಜನಮಾನಸದಲ್ಲಿ ಉದ್ವೇಗ, ಹಿಂಸೆಗೆ ಎಡೆಮಾಡುವವನು ಯಾವ ಆತಂಕವಾದಿಗಿಂತಾ ವಿಭಿನ್ನನಲ್ಲ....ಅಂತಹವರ ಕೃತ್ಯ ಖಂಡನೀಯ...ಇದೊಂದು ವಿಕೃತ ಮನಸು ಎನ್ನದೇ ವಿಧಿಯಿಲ್ಲ...ರಾವಣ ರಾಜನೀತಿಯನ್ನು ಅರಿದು ಕುಡಿದವ, ವೇದಪಾರಂಗತ....ಆದ್ರೆ ಮಾಡಿದ್ದು ಮಣ್ಣು ತಿನ್ನುವ ಕೆಲಸ...ಅದಕ್ಕೆ ಶಿಕ್ಷೆಗೊಳಗಾದ.... ಇಸ್ಲಾಂ ಧರ್ಮದ ತಿರುಳನ್ನು ತಿರುಚುವ ಮುಲ್ಲಾಗಳಿಂದಲೇ...ಅಮಾಯಕರ ಹತ್ಯೆಯಮೂಲಕ ಜೆಹಾದ್ ಸಾರುವವರೇ ಇಸ್ಲಾಂ ನ ಮೂಲ ಶತೃಗಳು...ಇತರ ಧರ್ಮೀಯರ ಬಗ್ಗೆ ಎಲ್ಲೂ ಕೀಳು ಭಾವನೆಯ ಬಿತ್ತರ ಇಸ್ಲಾಂ ಮಾಡಿಲ್ಲ....ಸ್ವತಃ ಮೊಹಮದರನ್ನು ಯಹೂದಿ ಮುದುಕಿ ಅವಾಚ್ಯ ಬೈಯುತ್ತಿದ್ದಳಂತೆ..ಮುಗುಳ್ನಕ್ಕು ಅವರು ಮಸೀದಿಗೆ ಹೋಗುತ್ತಿದ್ದರಂತೆ...ಹೀಗಿರುವಾಗ ಒಂದೆರಡು ದಿನ ಕಾಣದಾದ ಆಕೆಯ ಬಗ್ಗೆ ಕುತೂಹಲಗೊಂಡು ವಿಚಾರಿಸಿದಾಗ ಆಕೆ ಅನಾರೋಗ್ಯದಿಂದ ನರಳುತ್ತಿರುವುದಾಗಿ ತಿಳಿದು ಆಕೆಯ ಗುಡಿಸಿಲಿಗೆ ಹೋದರಂತೆ..ಆರೋಗ್ಯ ವಿಚಾರಿಸಿ ಸಮಾಧಾನ ಮಾಡಿ ಬಂದಾಗ ಅವರ ಒಬ್ಬ ಶಿಷ್ಯ ~ ಆಕೆಯಲ್ಲಿಗೆ ನೀವು ಏಕೆ ಹೋದಿರು ಗುರುವೇ..ಆಕೆ ನಿಮ್ಮನ್ನು ದಿನವೂ ಬೈಯುತ್ತಿದ್ದಳು, ಎಂದಾಗ ಅದು ಆಕೆಯ ಧರ್ಮ..ನನ್ನ ಧರ್ಮ..ಕಷ್ಟದಲ್ಲಿರುವವರ ಬಗ್ಗೆ ಮರುಗು..ನಿನ್ನ ಕೈಲಾದ ಸಹಾಯ ಮಾಡು ಎನ್ನುವುದು...ಎಂದರಂತೆ....ಅವರು ಹಾಕಿಕೊಟ್ಟ ಧರ್ಮಮಾರ್ಗ ಖಂಡಿತಾ ಈ ಮುಲ್ಲಾಗಳು ..ಜೆಹಾದಿಗಳು ಹೇಳುವಂತಲ್ಲ...ಎನ್ನುವುದೇ ನನ್ನ ನಂಬಿಕೆ......

    ReplyDelete
  10. ಸನ್ಮಿತ್ರರಾದ ಡಾ| ಗುರುಮೂರ್ತಿ ಮತ್ತು ಡಾ| ಆಜಾದ್ ಇಬ್ಬರನ್ನೂ ಅಭಿನಂದಿಸುತ್ತಿದ್ದೇನೆ, ನಾನು ಬರೆಯಬಾರದೆಂದು ಸುಮಾರು ಏಳೆಂಟು ತಿಂಗಳು ಕಳೆದಿದ್ದೇನೆ, ಕೊನೆಗೆ ಮತ್ತೆ ಮತ್ತೆ ದಿನಾಲೂ ಮಿಂಚಂಚೆ ಬರುತ್ತಲೇ ಇದೆ, ತಡೆಯಲಾರದೆ ಆದಷ್ಟೂ ಸಂಕ್ಷಿಪ್ತವಾಗಿ ಬರೆದಿದ್ದೇನೆ, ಹುಸೇನನ ವೆಬ್ಸೈಟ್ ನಲ್ಲಿ ನೇರ ಪ್ರತಿಕ್ರಿಯೆ ಹಾಕಲು ಹೋಗಿ ಸೋತೆ ! ಅದು ಕೆಲಸಮಾಡುತ್ತಿಲ್ಲ. ನೀವೆಲ್ಲ ಹೇಳಿದ್ದನ್ನೇ ಈ ಮೇಲೆ ಬರೆದಿದ್ದೇನೆ. ಈ ವಿಷಯದಲ್ಲಿ more evolved & enlightened ಆಗಿರುವ ನಿಮಗೆಲ್ಲ ಹೊಸದಾಗಿ ಹೇಳುವ ಅವಶ್ಯಕತೆಯಿಲ್ಲ. ಆದರೆ ಬರವಣಿಗೆಯಲ್ಲಿ ಕೂಡ ಎಷ್ಟೋ ಮಂದಿ ಹೆದರಿ ಬರೆಯಲೂ ಹೋಗುತ್ತಿಲ್ಲ, ಈ ಕೃತಿ ಪ್ರಕಟ ಆದಮೇಲೆ ನನ್ನ ಮೇಲ್ ಬಾಕ್ಸ್ ಫುಲ್ ಆಗುವಷ್ಟು ಪ್ರತಿಕ್ರಿಯೆ ಹರಿಯುತ್ತಿದೆ, ಇದರ ಅರ್ಥ ನಮ್ಮ ಸಾತ್ವಿಕ ಭಾರತೀಯರ ಕೋಪ ಒಳಗೆ ಹಾಗೇ ಕುದಿಯುತ್ತಿದೆ-ಇನ್ನೂ ತಣ್ಣಗಾಗಿಲ್ಲ ! ಇಂತಹ ವಿಕೃತರನ್ನು ನೇರವಾಗಿ ಮಟ್ಟಹಾಕುವ ಸಂಸ್ಕೃತಿ ಬರಲಿ, ನಮಗೆ ಎಲ್ಲಾ ಧರ್ಮವೂ ಒಂದೇ, ಆದರೆ ಮಾನವನಾಗಿ ಮಿಕ್ಕುಳಿದವರ ಧರ್ಮದ ಮೂಲಕ್ಕೆ ಕೈಹಾಕಿ ಅವಹೇಳನಮಾಡುವುದು, ಅದನ್ನ ತಿರುಚುವುದು ಯಾರಿಗೂ ಸಲ್ಲದ್ದು. ಇದನ್ನು ಯಾರೇ ಮಾಡಿದರೂ ಸಹಿಸದಿರೋಣ. ಇದರ ಬೆಳವಣಿಗೆಗೆ ಹೊಲಸು ರಾಜಕೀಯ ಪರಿಸ್ಥಿತಿಯೂ ಕಾರಣ, ಆಳುವ ಪ್ರಭುಗಳು ಶುದ್ಧಹಸ್ತರಾಗಿದ್ದಾಗ ಎಲ್ಲರೂ ಅದನ್ನೇ ಅನುಸರಿಸುತ್ತಾರೆ- ಬಗ್ಗಡದಲ್ಲಿ ಹೇಗೆ ಸೊಳ್ಳೆಗಳು,ಕೀಟಾಣುಗಳು ಹುಟ್ಟುತ್ತವೆಯೋ ಹಾಗೆ. ಒಬ್ಬ ಯಕ್ಕಶ್ಚಿತ ತಲೆಹಿಡುಕ ಮುದುಕನನ್ನು ರಾಯಭಾರಿ ಕಚೇರಿ ಪುನಃ ಬರುವಂತೆ ನಾಗರಿಕ ಹಕ್ಕನ್ನು ಕೊಟ್ಟು ಕರೆಯುತ್ತದೆ, ಒಂದು ಪತ್ರಿಕೆ 'ಎಂಥಾ ಒಳ್ಳೆಯ ಕಲಾವಿದನನ್ನು ಕಳೆದುಕೊಂಡೆವು ' ಎಂದು ಬರೆಯುತ್ತದೆ-ಇದು ನಡೆಯುವುದು ನಮ್ಮ ಭಾರತದಲ್ಲಿ ಮಾತ್ರ! ಇದನ್ನೆಲ್ಲಾ ಸರಿಪಡಿಸಲು ಮೊದಲು ರಾಜಕಾರ್ಯ ಸರಿಯಾಗಿ ನಡೆಯಬೇಕು ಎಂದು ಹೇಳಿದ್ದೇನೆ. ಹಿಂದೆ ನಮ್ಮಲ್ಲಿ ರಾಜಾ ರವಿವರ್ಮನಂಥ ಕಲಾವಿದರಿದ್ದರು, ರೆವರೆಂಡ್ ರೋರಿಕ್ ಅನ್ನುವ ವಿದೇಶೀ ಮೂಲದ ಕಲಾವಿದರಿದ್ದರು, ನಮ್ಮ ಕನ್ನಡದವರೇ ಆದ ವೆಂಕಟಪ್ಪ ಇದ್ದರು-ಯಾರೂ ಇಂತಹ ಅಪಚಾರವೆಸಗಲಿಲ್ಲ; ಅವರ ಕೃತಿಗಳು ಇಂದಿಗೂ ಮಾನ್ಯ. ಹೀಗಾಗಿ ಇಂಥವರು ಬರಲಿ,ಹುಸೇನನ ಥರ 'ಹುಸೇನರು' ಬರದಿರಲಿ ಎಂದು ಹಾರೈಸಿ ಮತ್ತೊಮ್ಮೆ ತಮಗೆ ವಿನಮ್ರನಾಗಿ ನಿಂತಿದ್ದೇನೆ.

    ReplyDelete
  11. ಮರೆತಿದ್ದೆ, ಕೃಷ್ಣ ಮೂರೂರ ಅವರೂ ಒಳ್ಳೆಯ ಪ್ರತಿಕ್ರಿಯೆ ನೀಡಿದ್ದಾರೆ, ಅವರಿಗೂ ಧನ್ಯವಾದಗಳು

    ReplyDelete