ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, March 14, 2010

ನಲ್ಲೆಯ ಕೂಡ ಕಳೆವಾರೆ ಒಂದು ದಿನ

ಒಂದು ಭಾನುವಾರ ಹೆಂಡತಿ ಮಕ್ಕಳೊಂದಿಗೆ ಕಳೆಯಲು ಸಮಯವೇ ಇಲ್ಲ ನಮಗೆ ! ಬೆಳಿಗ್ಗೆ ಎದ್ದರೆ ಎಂತೆಂತಹ ವೇಷಗಳನ್ನು ಎದುರಿಸಬೇಕು! ಯಾರ್ಯಾರಿಗೆ ಉತ್ತರಿಸಬೇಕು? ಯಾರ್ಯಾರನ್ನು ಹಾಗೇ ಕಳಿಸಬೇಕು ಇದೆಲ್ಲಾ ತಲೆಯಲ್ಲಿ. ತಿಂಡಿ-ಊಟ ಮಾಡುವಾಗಲೇ ಬೆಲ್ಲು, ಓಹೋ ಯಾರೋ ಬಂದ್ರು ಓಡು ಬಾಗಿಲು ತೆಗಿ ಇದೇ ರಗಳೆ, ಈ ನಡುವೆ ನಡು ನಡುವೆಯೇ ಹೊರಳಿ ಹೊರಳಿ ಹುಟ್ಟಿದ್ದು ಕುರ್ಕುರ್ರೆ ಥರದ ಕಂಗ್ಲೀಷ್ ಹಾಡು [ಕನ್ನಡ-ಇಂಗ್ಲೀಷ್ ಮಿಶ್ರಿತ ಅಂಥ] ಬಹಳ ಹೇಳುವುದೇಕೆ, ಇದೆಲ್ಲಾ ನೀವೂ ಅನುಭವಿಸುವ ಊಟದಲ್ಲಿ ನಡುವೆ ಕೆಲವೊಮ್ಮೆ ಸಿಗುವ ಕಲ್ಲಿನ ಥರ!
ನಲ್ಲೆಯ
ಕೂಡ ಕಳೆವಾರೆ ಒಂದು ದಿನ


ನಲ್ಲೆಯ ಕೂಡ ಕಳೆವಾರೆ ಒಂದು ದಿನ
ಬೆಲ್ಲ ದಂತಹ ಈ ದಿನ
ಅಲ್ಲುಂಟು ಹಲವು ಕಾಣಿಸದಂತ ಅಡತಡೆಯು
'ಕಲ್ಲು ಸಿಗುವ ಊಟದ' ಮನ

ಬರುವ ಹಲವರಿಗೇನು ಭಾನುವಾರವೇ ಬೇಕೇ ?
ಬರಿದೇ ತೊಂದರೆ ಕೊಡಲು ತಿಳಿಯದಾಯ್ತೆ ?
ಕರಿಮೋಡ ಮುಸುಕಿದ ರೀತಿ ಕೆಲಸಗಳು
ಸರಿಹೋಯ್ತು ಇನ್ನೆಲ್ಲಿ ಕುರುಕುರುಕಲು ?

ಹಾಲಿನವ ಬಂದ ಎಣಿಸುತ ಹೋದನಾಗಷ್ಟೇ
ಪೇಪರವ ಬಂದ ಲೆಕ್ಕವ ತೆಗೆಯುತಾ
ರಸ್ತೆ ಕಸದವ ಬಂದ ಅಕ್ಕಾ -ಅಮ್ಮಾ ಎನುತ
ರೊಚ್ಚೆ ಮಗುವಿನದು ಏನೋ ನೆನೆಯುತಾ

'ಅನ್ನದಾನಕೆ ಕೊಡಿರಿ' ಬಂದರಣ್ಣಮ್ಮ ಜನ
ಮುನ್ನ ವಯ್ದಿಹರು ತಿಳಿಯದೆ ಅವರಿಗೆ ?
ಸಣ್ಣ ಹೆಲ್ಪನು ಕೇಳಿ ಸುಬ್ರಾಯ ತಾ ಬಂದ
ಅಣ್ಣಾ ನಮಸ್ಕಾರ ಹೇಗಿದ್ರಿ ಎನುತಾ

ಪಕ್ಕದಾಕೆಗೆ ಎಲ್ಲೋ ಹೋಗುವಾ ಅರ್ಜೆಂಟು
ಸಿಕ್ಕ ಕೆಲಸದ ಲಿಸ್ಟು ರೆಡಿ ತಂದು ತಾನು
ಚೊಕ್ಕಮನದಲಿ ನನ್ನ ಹೆಂಡತಿಯ ಕೈಲಿಕ್ಕಿ
ಬೊಕ್ಕತಲೆಯನ ಕೂಡ ಬುರ್ರನೋಡಿದಳು

" ಏನ್ರೀ ಈ ದಿನ ಅಲ್ಲಿ ಹೊಸ ಸೇಲು-ಡಿಸ್ಕೌಂಟು
ಹೋಗಿ ಬರುವಾ " ಎನಲು ಆಸೆಯಿಂದವಳು
" ಬನ್ರೀ ಇಲ್ಲೇ ನಮ್ಮ ಭಾವಮೈದುನನ ಮದುವೆ"
ಬೇಗ ಕರೆದರು ಗೌಡ್ರು ಭಾವ ಭಂಗಿಯೊಳು

ಮಗನ ಆಟಕೆ ಬೇಕು ಮಿಕ್ಕ ಇಷ್ಟೇ ಇಷ್ಟು
ಮಘಮಘಿಸುವಾ ಸಮಯವೂ
ಗಗನದೆತ್ತರ ರಾಶಿ ಆಟಿಗೆಯ ವಸ್ತುಗಳು
ನಗೆ ಮುಖವು ಬಾಡುವುದು ಮಿತಿಹೇರಲು

8 comments:

 1. ನಿಮ್ಮ ಭಾನುವಾರವನ್ನು ನಾನು ಹಾಳು ಮಾಡುವುದಿಲ್ಲ .ಕುರ್ ಕುರೆ ಭಾವಗೀತೆ ತುಂಬಾ ಚೆನ್ನಾಗಿತ್ತು .ಅದನ್ನು ಹೇಳಲು ಬಂದೆ ಅಷ್ಟೇ

  ReplyDelete
 2. ನಿಮ್ಮ ಭಾನುವಾರವನ್ನೂ ನಾನು ಹಾಳುಮಾಡುವುದಿಲ್ಲ ಅಂತಲೇ ಈ ಹಾಡು, ತಮಗೆ ಧನ್ಯವಾದ

  ReplyDelete
 3. ಭಾನುವಾರವನ್ನು ಹಾಳುಮಾಡಬಾರದೆಂದೇ ತಡವಾಗಿ ಬಂದೆ :). ಭಾನುವಾರಕ್ಕೂ ಒಂದು ಕವನ..ಚೆನ್ನಾಗಿದೆ..

  ReplyDelete
 4. ವಾರದಲ್ಲಿ ಯಾವ ವಾರವೂ ಆಲಸ್ಯ ಬೇಡ ಎಂದು ಅನಾರೋಗ್ಯವಾದಾಗಲೂ ಬರೆದಿದ್ದಿದೆ, ಇಂದು ಆರೋಗ್ಯದಲ್ಲೇ ಇದ್ದೇನೆ ಆಪ್ರಶ್ನೆ ಬೇರೆ, ತಮ್ಮ ಹರುಷವನ್ನು ಬಂದು ಹೇಳಿದಿರಲ್ಲ, ನಾಳೆ ತಮಗೊಂದು ಹೊಸ ರೀತಿ ಕಾವ್ಯ ಕೊಡುವವನಿದ್ದೇನೆ, ನಿರೀಕ್ಷಿಸಿ,ಧನ್ಯವಾದಗಳು

  ReplyDelete
 5. ಬಾನುವಾರ, ನಿಮಗ್ಯಾಕೆ ಸುಮ್ಮನೆ ತೊಂದರೆ ಅಂತ ಸೋಮವಾರ ಬಂದಿದ್ದೇನೆ. ಹೇಗೆ, ಆರಾಮಾಗಿ ನಿದ್ದೆ ಹೊಡೆದ್ರಾ ಇಲ್ಲ ಶಾಪಿಂಗು ಮಾಲು ಅಂತ ಸುತ್ತದಿದ್ರಾ?
  ಏನೇ ಇರ್ಲಿ, ಬಾನುವಾರನೂ ಬಿಡದೆ ಅದರ ಮೇಲೊಂದು ಕವನ ಬರೆದ್ರಲ್ಲಾ! ತುಂಬಾ ಚೆನ್ನಾಗಿದೆ.

  ReplyDelete
 6. ನಿಮಗೆ ಭಾನುವಾರ, ನನಗೆ ಅದು ಅತೀ ಕೆಲಸದ ವಾರ, ಮಧ್ಯೆಯೇ ಬರೆದಿದ್ದೇನೆ, ಆನಂದಿಸಿದ್ದಕ್ಕೆ ಧನ್ಯವಾದ ಪ್ರವೀಣ್

  ReplyDelete
 7. ನಾನು ಹೆಚ್ಚು ಕೆಲಸ ಮಾಡುವದೇ ರಜಾ ದಿನದಲ್ಲಿ. ವಾರವೀಡಿ ಕೂಡಿಟ್ಟ ಮನೆಯ ಹಲವಾರು ಕೆಲಸಗಳನ್ನು ಮಾಡೋ ದಿನ. ಹಾಗಾಗಿ ಆ ದಿನ ಪೂರ್ತಿ ಸುಸ್ತೋ ಸುಸ್ತು.ಆದರು ಮಧ್ಯಾಹ್ನ ಒ೦ದು ಸಣ್ಣ ನಿದ್ದೆ ತೆಗೆವ ಆಶೆ ಇಡೇರೋಲ್ಲ ನೋಡಿ. ಜೊತೆಗೆ ಯಾರದರೂ ಬ೦ದರೇ ಸಾಕು ಮನೆಯ ಕೆಲಸ ಮು೦ದಿನ ವಾರಕ್ಕೆ ಹೋಗುತ್ತವೆ. ಆದರೂ ಅವಿವಾರದ ಮಜ ಮನೆಯ ಬಾಸ್-ನ ಅದೇಶದ೦ತೆ ಅಲ್ಲವೇ ಅದಕ್ಕೇ ಸಿಕ್ಕೋ ಸ೦ಭಾವನೆ ಕಛೇರಿಲ್ಲಿ ಸಿಗೋಲ್ಲಾ ನೋಡಿ ಅದಕ್ಕೆ ರವಿವಾರದ ಕೆಲಸ ಉತ್ಸಾಹದಿ೦ದ ಸಾಗುತ್ತೆ. ಅಲ್ಲವೇ!! ತಮ್ಮ ಲೇಖನ ಮತ್ತು ಕವನ ತು೦ಬಾಸ್ ಚೆನ್ನಾಗಿ ಮೂಡಿದೆ.

  ReplyDelete
 8. ತಮ್ಮ ವೈಯಕ್ತಿಕ ಅಭಿಪ್ರಾಯ ಕೂಡ ಅದೇ ಇರುವಾಗ ನಾನದನ್ನು ಸ್ವಲ್ಪ ಕಾವ್ಯಾತ್ಮಕವಾಗಿಸಲು ಪ್ರಯತ್ನಿಸಿದೆ ಅಷ್ಟೇ ಹೊರತು ಬಹಳ ವಿಶೇಷ ವೆನಿಲ್ಲಾ, ಇದೊಂಥರಾ ಕುರ್ಕುರೆ ಹಾಡು, ಮನೆಯಲ್ಲಿ ಸಹಜವಾಗಿ ಗುನುಗಿದ್ದು;ಅದನ್ನೇ ಬರೆದಿದ್ದೇನೆ, ಧನ್ಯವಾದಗಳು

  ReplyDelete