tag:blogger.com,1999:blog-7404581753587306740.post7021981060159914059..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ದೀಪಕ ರಾಗದ ಬೆನ್ನತ್ತಿ....... V.R.BHAThttp://www.blogger.com/profile/09758057544159366234noreply@blogger.comBlogger6125tag:blogger.com,1999:blog-7404581753587306740.post-26747095625468246592019-12-07T02:13:20.830-08:002019-12-07T02:13:20.830-08:00ರಾಜಾ ವಿಕ್ರಮಾದಿತ್ಯ ಮತ್ತು ಬೇತಾಳನ ಬಗ್ಗೆ ತಿಳಿಸಿದ್ದಕ್ಕೆ...ರಾಜಾ ವಿಕ್ರಮಾದಿತ್ಯ ಮತ್ತು ಬೇತಾಳನ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳುಎನ್ ರವಿಕುಮಾರ್https://www.blogger.com/profile/17587526745263569724noreply@blogger.comtag:blogger.com,1999:blog-7404581753587306740.post-83030413569921639632013-11-26T10:13:17.196-08:002013-11-26T10:13:17.196-08:00ರಾಗ ಅನ್ನುವ ಪದವು ಸಂಗೀತ ಸಂಬಂಧಿಯಾಗಿ ಮೊದಲು ಕಾಣಿಸಿಕೊಳ್ಳ...ರಾಗ ಅನ್ನುವ ಪದವು ಸಂಗೀತ ಸಂಬಂಧಿಯಾಗಿ ಮೊದಲು ಕಾಣಿಸಿಕೊಳ್ಳುವುದು ಮತಂಗನ ಬೃಹದ್ದೇಶಿಯಲ್ಲಿ. ಇದು ಸುಮಾರು 4-5 ಶತಮಾನಕ್ಕಿಂತ ಹಿಂದಿನದಲ್ಲ. ಪುಸ್ತಕದಲ್ಲಿ ಪ್ರಸಕ್ತಿ ಬರುವ 50-100 ವರ್ಷ ಮೊದಲಿಂದಲೂ ಆ ಬಳಕೆ ಬಂದಿತ್ತು ಅಂತಲೇ ಇಟ್ಟುಕೊಂಡರೂ, ಅದನ್ನ ಶಕ ಪ್ರವರ್ತಕ ವಿಕ್ರಮಾದಿತ್ಯನ ಕಾಲಕ್ಕೆ (ಕ್ರಿ ಪೂ 1ನೇ ಶತಮಾನ) ಕೊಂಡೊಯ್ಯುವುದು ಕಷ್ಟ. ಗುಪ್ತರ ಚಂದ್ರಗುಪ್ತ ವಿಕ್ರಮಾದಿತ್ಯನ ಕಾಲಕ್ಕಾದರೆ, ಅದು ಹೊಂದಲೂ ಬಹುದು. hamsanandihttps://www.blogger.com/profile/15560853535208005782noreply@blogger.comtag:blogger.com,1999:blog-7404581753587306740.post-16103929196238219582013-11-26T08:53:46.369-08:002013-11-26T08:53:46.369-08:00ಕ್ಷಮಿಸಿ ಭಟ್ಟರೆ. ನಾನು ವಿಕ್ರಮಾದಿತ್ಯನ ಕಾಲದಲ್ಲಿ ಸಂಗೀತವ...ಕ್ಷಮಿಸಿ ಭಟ್ಟರೆ. ನಾನು ವಿಕ್ರಮಾದಿತ್ಯನ ಕಾಲದಲ್ಲಿ ಸಂಗೀತವಿರಲಿಲ್ಲ, ಹಾಡುತ್ತಿರಲಿಲ್ಲ ಅಂತ ಹೇಳಲಿಲ್ಲ. ಆಗ "ರಾಗ" ಅನ್ನುವ ಹೆಸರಿನ ಬಳಕೆಯಾಗುತ್ತಿರಲಿಲ್ಲ. ಗ್ರಾಮ (ಷಡ್ಜ, ಮಧ್ಯಮ, ಗಾಂಧಾರ) , ಭಾಷಾ (ವಿಭಾಷಾ, ಅಂತರಭಾಷಾ), ಜಾತಿ - ಈ ಮೊದಲಾದುವುಗಳಿಂದ ಕೂಡಿತ್ತು. ಹಾಗಾಗಿ, 'ದೀಪಕ' ರಾಗವನ್ನು ಹಾಡದೇ, ದೀಪಕ 'ಜಾತಿ' ಯನ್ನು ಹಾಡಿದ್ದಿರುವ ಪ್ರಸಕ್ತಿ ಇರಬಹುದು. hamsanandihttps://www.blogger.com/profile/15560853535208005782noreply@blogger.comtag:blogger.com,1999:blog-7404581753587306740.post-26548671759113025442013-11-25T23:39:41.865-08:002013-11-25T23:39:41.865-08:00ರಾಮಪ್ರಸಾದರೇ, ತಾವು ಹೇಳಿದ್ದು ಸತ್ಯ. ನಾನೇ [ಕಾಳಿದಾಸನ-ವಿ...ರಾಮಪ್ರಸಾದರೇ, ತಾವು ಹೇಳಿದ್ದು ಸತ್ಯ. ನಾನೇ [ಕಾಳಿದಾಸನ-ವಿಕ್ರಮಾರ್ಕನ ಕಾಲಗಳ]ಆ ಬಗ್ಗೆ ಗಂಟೆಗಟ್ಟಲೆ ಚಿಂತನೆ ಮಾಡಿದ್ದಿದೆ, ನಂತರ ವರಾಹಮಿಹಿರನ ಕಾಲವೂ ಮಧ್ಯೆ ಎಡತಾಕಿದೆ. ಈ ಶ್ಲೋಕ ನಂತರದಲ್ಲಿ ಯಾವ ರೀತಿ ಹೊಸೆಯಲ್ಪಟ್ಟಿತು ಎಂಬುದು ಗೊತ್ತಿಲ್ಲ. ಮೇಲಾಗಿ ವಿಕ್ರಮಾದಿತ್ಯ ಎಂಬ ಅರಸರು ಇಬ್ಬರು ಮೂವರು ಆಳಿದ್ದಾರಾದ್ದರಿಂದ ನಂತರದ ವಿಕ್ರಮಾದಿತ್ಯರಲ್ಲೊಬ್ಬನ ಆಸ್ಥಾನದಲ್ಲಿ ನವಮಣಿಗಳಿ ಇದ್ದಿರಬಹುದು. ಆದರೆ ಒಂದನೇ ಶತಮಾನದ ವಿಕ್ರಮಾದಿತ್ಯನೇ ಶಕಪುರುಷನೂ ಮತ್ತು ಶನಿಪೀಡನೆಗೊಳಗಾದವನು ಎಂಬುದಕ್ಕೆ ಆಧಾರಗಳು ಪುರಾಣಾಂತರ್ಗತವಾಗಿವೆ. ಶನಿಪೀಡನೆಗೊಳಗಾದ ವಿಕ್ರಮಾದಿತ್ಯನೇ ’ದೀಪಕ ರಾಗ’ ಹಾಡಿದ ಎಂದೂ ಹೇಳಿಕೆಯಿರುವುದರಿಂದ ಆ ಕಾಲದಲ್ಲಿ ರಾಗ ಪ್ರಪತ್ತಿಗಳು ಇರಲಿಲ್ಲವೆಂಬುದನ್ನು ಮಾತ್ರ ನಾನು ಒಪ್ಪುವುದಿಲ್ಲ[ಸಾಮಗಾನ ಆಗಲೇ ಇತ್ತು]. ಈ ಕುರಿತು ಶತಾವಧಾನಿಗಳಿಗೆ ತಿಳಿಸಿದ್ದೇನೆ, ಸಂಶೋಧಿಸಬೇಕು, ಧನ್ಯವಾದಗಳು. V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-23759834576755972262013-11-25T17:26:50.564-08:002013-11-25T17:26:50.564-08:00ದೀಪಕ ರಾಗದ ಯು-ಟ್ಯೂಬ್ ಕೊಂಡಿಗಳಿದೆ ಧನ್ಯವಾದಗಳು. ಈ ರಾಗವು...ದೀಪಕ ರಾಗದ ಯು-ಟ್ಯೂಬ್ ಕೊಂಡಿಗಳಿದೆ ಧನ್ಯವಾದಗಳು. ಈ ರಾಗವು ಹೆಚ್ಚಾಗಿ ಇಂದು ಬಳಕೆಯಿಲ್ಲದಿದ್ದರೂ, ಅದಕ್ಕೆ ಕಾರಣಗಳನ್ನು ಹುಡುಕುವುದೂ ಅಷ್ಟೇನೂ ಕಷ್ಟವಲ್ಲ. ನಮ್ಮ ಸಂಗೀತದಲ್ಲಿ ರಾಗಗಳು ಕಾಲಕಾಲಕ್ಕೆ ಪ್ರಸಿದ್ಧಿಯನ್ನು ಪಡೆಯುವುದೂ ಆಗುತ್ತಾ ಬಂದಿದೆ. ಒಂದೇ ರಾಗಕ್ಕೆ ಬೇರೆ ಬೇರೆ ಲಕ್ಷಣಗಳಿರುವುದೂ, ಒಂದೇ ಲಕ್ಷಣವಿರುವ ರಾಗಕ್ಕೆ ಬೇರೆ ಬೇರೆ ಹೆಸರಿರುವುದೂ ಉಂಟು. ಈಗ ನೀವು ಹಾಕಿದ ಕೊಂಡಿಗಳಲ್ಲೇ ಇರುವ ದೀಪಕ ರಾಗವೂ ಹಾಗೆ - ಮೊದಲ ಕೊಂಡಿಯಲ್ಲಿರುವುದು ಪೂರ್ವಿ ಥಾಟಿನ ರಾಗವಾದರೆ, ಎರಡನೆಯದು, ಖಮಾಚ್ ಥಾಟಿಗೆ ಸೇರಿದೆ. ಹಾಗಾಗಿ, ವಿಕ್ರಮಾದಿತ್ಯ ಹಾಡಿರಬಹುದಾದ ದೀಪಕ ರಾಗ ಇಂತಹದೇ ಅಂತ ಹೇಳುವುದು ಕಷ್ಟಸಾಧ್ಯ. ಅಲ್ಲದೇ, ವಿಕ್ರಮಾದಿತ್ಯನ ಕಾಲದಲ್ಲಿ ಸಂಗೀತದಲ್ಲಿ ಇನ್ನೂ ರಾಗ ಅನ್ನುವ ಹೆಸರೇ ಬಂದಿರುವ ಸಾಧ್ಯತೆ ಕಡಿಮೆ. ಆಗಿನ್ನೂ ಗ್ರಾಮ-ಜಾತಿ-ಸಂಗೀತದ ಕಾಲ ಅನ್ನಿ.<br /><br />ಅದಲ್ಲದೇ ಕಾಳಿದಾಸನು ಒಂದನೇ ಶತಮಾನದ ಆಸುಪಾಸಿನ ವಿಕ್ರಮಾದಿತ್ಯನಕಾಳದಲ್ಲೂ ಇದ್ದು, ಹನ್ನೊಂದನೇ ಶತಮಾನದ ಧಾರಾನಗರದ ಪರಮಾರ ಭೋಜನ ಕಾಲದಲ್ಲೂ ಬದುಕಿದ್ದ ಅನ್ನುವುದನ್ನು ಸಂಬಲಸಾಧ್ಯ. ಇನ್ನೂ, ಭೋಜನೆಂಬ ಹೆಸರಿನ ರಾಜನೊಬ್ಬ ವಿಕ್ರಮಾದಿತ್ಯನಿದ್ದ ಕಾಲದಲ್ಲೇ ಇದ್ದರೆ (ಅಥವಾ ಹತ್ತಿಪ್ಪತ್ತು ವರ್ಷಗಳ ನಂತರ) ಅದು ಒಬ್ಬಬಹುದಾದ ಮಾತು. ನವಮಣಿಗಳೆಲ್ಲಾ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದುದ್ದು ಅನ್ನುವುದೂ ಕೂಡ ಸ್ವಲ್ಪ ವಿವರಿಸಲಿಕ್ಕೆ ಕಷ್ಟವೇ. ಯಾಕಂದರೆ, ಅವರಲ್ಲೊಬ್ಬನಾದ ವರಾಹಮಿಹಿರನು ಒಂದನೇ ಶತಮಾನದಲ್ಲಿರಲಿಕ್ಕೆ ಸಾಧ್ಯವೇ ಇಲ್ಲವಲ್ಲ. ಹಾಗಾಗಿ, ಈ ಶ್ಲೋಕವನ್ನು ಪುರಾವೆಯಾಗಿ ತೆಗೆದುಕೊಳ್ಳುವುದು ಕಷ್ಟ. ಒಂದುವೇಳೆ, ಯಾರೋ ವಿಕ್ರಮಾದಿತ್ಯನ ಆಸ್ಥಾನದಲ್ಲಿ ಅವನಿದ್ದರೂ, ಅದು ಶಕಪ್ರವರ್ತಕ ವಿಕ್ರಮಾದಿತ್ಯನಾಗಿರಲಾರ. <br />hamsanandihttps://www.blogger.com/profile/15560853535208005782noreply@blogger.comtag:blogger.com,1999:blog-7404581753587306740.post-56318911330600750222013-11-12T00:23:28.701-08:002013-11-12T00:23:28.701-08:00thankssssssssssssss a lot thankssssssssssssss a lot ganesh chinthamanihttps://www.blogger.com/profile/04987297641043395665noreply@blogger.com