ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, February 8, 2013

ಮೋದಿಯೇ ಪ್ರಧಾನಿಯಾಗಬೇಕು ಯಾಕೆಂದರೆ.......

ಚಿತ್ರಗಳ ಋಣ: ಅಂತರ್ಜಾಲ 
ಮೋದಿಯೇ ಪ್ರಧಾನಿಯಾಗಬೇಕು ಯಾಕೆಂದರೆ.......

ಚಿಕ್ಕವನಿರುವಾಗ ಎರಡು ವಿಷಯಗಳನ್ನು ಬಹಳವಾಗಿ ಬಯಸುತ್ತಿದ್ದೆ; ಒಂದು ಭೀಮಸೇನ್ ಜೋಶಿಯವರ ಹಾಡು, ಇನ್ನೊಂದು ಜಗನ್ನಾಥರಾವ್ ಜೋಶಿಯವರ ಭಾಷಣ. ಅವರವರ ಕ್ಷೇತ್ರಗಳಲ್ಲಿ ಇಬ್ಬರೂ ಅಸೀಮ ಸಾಧಕರೇ. ಈ ಇಬ್ಬರೂ ಬಾಯ್ದೆರೆದರೆ ಎದುರಿಗೆ ಕುಳಿತ ಅಷ್ಟೂ ಮಂದಿ ಗಪ್ ಚುಪ್! ಒಬ್ಬರ ಹಾಡಿನ ಶೈಲಿ ಮತ್ತು ಆ ಕಂಠಸಿರಿಯ ಸೊಬಗು ಅಂಥಾದ್ದು, ಮತ್ತೊಬ್ಬರ ಅಸ್ಖಲಿತ ವಾಗ್ಝರಿಯ ಓಘ ಅಂಥಾದ್ದು. ನೆಹರೂ ಶಾಹಿಯ ಅಳಿವಿಗಾಗಿ ಮತ್ತು ದೇಶದ ಉಳಿವಿಗಾಗಿ ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಹುಟ್ಟಿಕೊಂಡದ್ದು ಜನಸಂಘ. ಆಕೆಯ ಸರ್ವಾಧಿಕಾರೀ ಧೋರಣೆ ಹೇಗಿತ್ತೆಂದರೆ ಮೀಸಾ ಕಾಯ್ದೆ ಜಾರಿಮಾಡಿದ ಏಕೈಕ ಪ್ರಧಾನಿಯೆನಿಸಿ, ವಾಜಪೇಯಿ, ಜಯಪ್ರಕಾಶ್ ನಾರಾಯಣ್ ಮೊದಲಾದ ಮುತ್ಸದ್ಧೀ ದೇಶಭಕ್ತರನ್ನು ಜೈಲಿಗೆ ಕಳಿಸಿ, ಪ್ರಪಂಚದ ಎಲ್ಲೆಡೆಯಿಂದಲೂ ಛೀಮಾರಿ ಹಾಕಿಸಿಕೊಂಡಾಕೆ.  ತಮಗೆ ಕೊಡಮಾಡಿದ ಪದ್ಮಭೂಷಣ ಪ್ರಶಸ್ತಿಯನ್ನು ಶಿವರಾಮ ಕಾರಂತರು ಇದೇ ಕಾರಣಕ್ಕೆ ಮರಳಿಬಿಸುಟಿದ್ದರು ಎಂಬುದನ್ನು ನೆನಪಿಸಿಕೊಳ್ಳಬೇಕು. ಆಡಳಿತಪಕ್ಷವಾಗಿದ್ದ ಕಾಂಗ್ರೆಸ್ ದುರಾಡಳಿತಕ್ಕೆ ಬೇಸತ್ತ ದೇಶಭಕ್ತ ಸ್ವಾತಂತ್ರ್ಯ ಯೋಧರೂ ಮತ್ತು ಯುವ ದೇಶಭಕ್ತರನೇಕರು ಸೇರಿ ರೂಪುಗೊಂಡ ಸಂಘಟನೆ ಈ ಜನಸಂಘ. ಜನಸಂಘದ ಸಕ್ರಿಯ ಸದಸ್ಯರಲ್ಲಿ ಜಗನ್ನಾಥರಾವ್ ಜೋಶಿ ಒಬ್ಬರು. ಕಾಲಾನಂತರ ಜನಸಂಘ ಜನತಾಪಕ್ಷವಾಯ್ತು, ಮತ್ತೆ ಇಬ್ಭಾಗವಾಗಿ ಜನತಾಪಕ್ಷ ಮತ್ತು ಭಾರತೀಯ ಜನತಾಪಕ್ಷವೆಂದು ಕರೆಯಲ್ಪಟ್ಟಿತು. ಹೀಗೆ ಜನಸಂಘ ಒಡೆದಾಗ ಉನ್ನತ ಮನಸ್ಕರಾಗಿದ್ದ ಹಲವರು ಭಾರತೀಯ ಜನತಾಪಕ್ಷವೆಂಬ ಹೆಸರಿನಲ್ಲಿ ಗುರುತಿಸಿಕೊಂಡರು. ರಾಜಕೀಯ ದೊಂಬರಾಟಗಳ ಆರಂಭದ ಆ ಕಾಲಘಟ್ಟದಲ್ಲಿ ಇಂದಿರಾ-ರಾಜಕೀಯದ ಹೊಲಸನ್ನು, ಸ್ವಾರ್ಥಪರತೆಯನ್ನು, ಅಧಿಕಾರ ದಾಹವನ್ನು, ಸರ್ವಾಧಿಕಾರೀ ಧೋರಣೆಯನ್ನು, ದೇಶದ ಹಿತಾಸಕ್ತಿ ಕಡೆಗಣಿಸಲ್ಪಟ್ಟಿದ್ದನ್ನು  ಹೊರಗೆ-ಸಮಾಜಕ್ಕೆ ಎತ್ತಿ ತೋರಿಸಿದವರಲ್ಲಿ ಪ್ರಮುಖರು ಜಗನ್ನಾಥರಾವ್ ಜೋಶಿ. ಹೋಗಿ ತಲ್ಪಬಹುದಾದ ದೂರದಲ್ಲಿ ಅವರ ಭಾಷಣಗಳು ಏರ್ಪಟ್ಟಿದ್ದರೆ, ವಾಹನ-ಸಾರಿಗೆ ಅನುಕೂಲ ಸಿಗುವಂತಿದ್ದರೆ ನಾನೆಂದೂ ಹೋಗದೇ ತಪ್ಪಿಸಿಕೊಂಡವನಲ್ಲ; ಬರೀ ನಾನೇಕೆ ನನ್ನಂತಹ ಅನೇಕ ಮಕ್ಕಳು, ನಡುವಯಸ್ಕರು, ಮುದುಕರು ಎಲ್ಲಾ ಸೇರಿದಂತೇ ತಾಲೂಕಿಗೆ ತಾಲೂಕೇ ಎದ್ದುಬಂದ ರೀತಿ ಜನ ಜಮಾಯಿಸಿ ಅವರ ಮಾತುಗಳನ್ನು ಕೇಳುತ್ತಿದ್ದರು. ಶಕ್ತಿಯೆಲ್ಲಾ ಉಡುಗಿಹೋಗಿ ನೋವು ಕೆಣಕಿರುವ ಮುದುಕರ ಕಾಲಮಂಡಿಗಳಲ್ಲೂ, ನವಚೈತನ್ಯ ಉಕ್ಕಿಬಂದು ನೋವೇ ಮಾಯವಾಗುವಂಥಾ ಕೀಲೆಣ್ಣೆ ಹಾಕುವ ರೀತಿಯ ಮಾತು ಜನರನ್ನು ಮೋಡಿಮಾಡಿತ್ತು; ಮೇಲಾಗಿ ಜೋಶಿ ನಿಸ್ಪೃಹ-ನಿಸ್ವಾರ್ಥ ದೇಶಭಕ್ತರಾಗಿದ್ದರು.  

ಅವರು ಇನ್ನೂ ಜೀವಿತದಲ್ಲಿರುವಾಗಲೇ ಕಾಶ್ಮೀರದ ಗಲಭೆಗಳು ಆರಂಭವಾಗಿ ಇಂದಿರಾ ಸಂಚಾಲಿತ ಕಾಂಗ್ರೆಸ್ಸು ಮುಸ್ಲಿಮರ ಆರೈಕೆಗಾಗಿ/ಓಲೈಕೆಗಾಗಿ ಅದನ್ನು ’ಪಾಕ್ ಅಕ್ಯುಪಾಯ್ಡ್ ಕಾಶ್ಮೀರ’ ಎಂದು ಘೋಷಣೆಮಾಡಿಬಿಟ್ಟಿತ್ತು. ಅಂತಹ ಪಿ.ಓ.ಕೆಗೆ ಮುಸಲ್ಮಾನರು ಇಂದು ಕರೆಯುವುದು ’ಏಜೆಕೆ’ ಎಂದು-ಅದರರ್ಥ ಆಝಾದ್ ಜಮ್ಮು-ಕಾಶ್ಮೀರ್! ಅರಬರು/ಮೊಘಲರು ಭಾರತಕ್ಕೆ ಬಂದಮೇಲೆ ಹಲವೆಡೆ ಮುಸಲ್ಮಾನರನ್ನು ಬಲಾತ್ಕಾರದಿಂದ ’ತಯಾರಿಸಲಾಯ್ತು’. ತಯಾರಾದ ಮುಸ್ಲಿಮರಿಗೆ ಖುರಾನ್ ಮಾತ್ರ ಜಗತ್ತಿನ ನಿಜವಾದ ಗ್ರಂಥ ಮತ್ತು ಅಲ್ಲಾಹ್ ಮಾತ್ರವೇ ದೇವರೆಂದು ತಲೆಗೆ ತುಂಬಿ, ಜಿಹಾದ್ ತಂತ್ರವನ್ನೇ ಸದಾ ಬೋಧಿಸಲಾಯ್ತು. ಆ ಕೆಲಸ ಭಾಗಶಃ ಅವರ ಖುರಾನ್ ನಲ್ಲೇ ಹೇರ್ಳಲ್ಪಟ್ಟಿದೆ! ಪಿ.ಓ.ಕೆ.ಗಿಂತ ಕೆಲವು ಮೈಲಿಗಳ ದೂರದಲ್ಲಿ ಝೀಲಮ್ ನದಿಯೆಂದು ಮುಸಲರು ಕರೆಯುವ ನದಿಯ ದಡದಲ್ಲಿ ಮುಸ್ಲಿಂ ಜನವಸತಿ ಇತ್ತು-ಈಗಲೂ ಇದೆ. ಸೀರ್ ಜಾಗಿರ್ ಮತ್ತು ಸಾಪೋರ್ ಮೊದಲಾದ ಪ್ರದೇಶಗಳು ಈಗಲೂ ಅದದೇ ಮುಸ್ಲಿಂ ಹೆಸರುಗಳಲ್ಲಿವೆ[ಅಲ್ಲಿನ ಮೂಲನಿವಾಸಿಗಳು ಕಾಶ್ಮೀರಿ ಪಂಡಿತರಾಗಿದ್ದು ಮೊದಲಿನ ಹಿಂದೂ ಹೆಸರುಗಳು ಈಗಿಲ್ಲ] ಇಂಥಾ ಸಾಪೋರ್ ಹಳ್ಳಿಯಲ್ಲಿ ಹಬೀಬುಲ್ಲಾ ಮತ್ತು ಆಯೇಶಾ ದಂಪತಿಗೆ ೪ ಜನ ಗಂಡುಮಕ್ಕಳು. ಸಣ್ಣ ರೀತಿಯಲ್ಲಿ ಸರಕುಸಾಗಣೆ ಮತ್ತು ನಾಟಾಗಳನ್ನು ಮಾರುವ ವೃತ್ತಿಯಲ್ಲಿ ತೊಡಗಿದ್ದ ಹಬೀಬುಲ್ಲಾ ಸತ್ತಾಗ, ಅಫ್ಜ಼ಲ್ ಎಂಬಾತ ಹತ್ತರ ಎಳೆಹುಡುಗ. ೭೦ ರ ದಶಕದಲ್ಲಿ ಆರ್ಥಿಕವಾಗಿ ಆ ಪ್ರದೇಶದಲ್ಲಿ ಸುಸ್ಥಿತಿಯಲ್ಲಿತ್ತೆಂದು ಅಲ್ಲಿನ ಜನರೇ ಒಪ್ಪಿಕೊಳ್ಳುವಹಾಗೇ, ಅವರ ಮನೆಯಲ್ಲಿ ಅದಾಗಲೇ ಟಿವಿ ಇತ್ತು, ಮನೆಯವರಿಗೆ ಓಡಾಡಲು ಅಂಬಾಸಿಡರ್ ಕಾರೂ ಇತ್ತು! ತೀರಾ ಹರೆಯದಲ್ಲೇ ಹಬೀಬುಲ್ಲಾ ಕಾಯಿಲೆಯಿಂದ ಸತ್ತುಹೋದಮೇಲೆ ಮನೆಯ ಆರ್ಥಿಕ ಜವಾಬ್ದಾರಿ ಹಿರಿಯ ಮಗ ಐಜಾಜ್ ಎಂಬಾತನಿಗೆ ಬಂತು. ಅಫ್ಜಲ್ ಗಿಂತ ೭-೮ ವರ್ಷ ದೊಡ್ಡವನಾದ ಆತ ವೆಟರ್ನರಿ ಇಲಾಖೆಯಲ್ಲಿ ನೌಕರಿ ಹಿಡಿದು ಜೊತೆಗೆ ನಾಟಾ ಮಾರಾಟವನ್ನೂ ಇಟ್ಟುಕೊಂಡು ಕುಟುಂಬ ನಿರ್ವಹಣೆಗೆ ದುಡಿಯಹತ್ತಿದ. ತಮ್ಮ-ಅಫ್ಜಲ್ ವಿದ್ಯೆ ಕಲಿಯುವುದಕ್ಕೆ ಬೇಕಾದ ಅನುಕೂಲತೆಗಳನ್ನು ಆತ ಕಲ್ಪಿಸಿಕೊಟ್ಟದ್ದರಿಂದ ಅಫ್ಜಲ್ ಶಾಲೆಗೆ ಹೋಗುತ್ತಿದ್ದ. ಪ್ರನ್ನತ್ ಸೂರಿ, ರತನ್ ಲಾಲ್, ತ್ರಿಲೋಕಿನಾಥ ರೈನಾ, ಪ್ರಶಾಂತ್ ಗುರ್ಟೂ ಮೊದಲಾದ ಕಾಶ್ಮೀರಿ ಪಂಡಿತರು ಉತ್ತಮವಾದ ಪಾಠಗಳನ್ನೇ ಹೇಳಿಕೊಡುತ್ತಿದ್ದರು. 

ಪಾಪಿ ಅಫ್ಜಲ್ ಗುರು 
[ಈ ಲೇಖನ ಪ್ರಕಟಗೊಂಡ ದಿನವೇ ಈತನನ್ನು ಗಲ್ಲಿಗೇರಿಸಿದ್ದು ಕಾಕತಾಳೀಯ!]

ಪಂಡಿತರು ಅದಾಗಲೇ ತಮ್ಮ ಮೂಲನೆಲೆಗಳನ್ನು ಕಳೆದುಕೊಳ್ಳುತ್ತಾ ಬಂದಿದ್ದರೂ, ಯಾವುದೇ ದ್ವೇಷಾಸೂಯೆ ಇಟ್ಟುಕೊಳ್ಳದೇ, ದೂರದ ತಮ್ಮ ನೆಲೆಗಳಿಂದ ಬಂದು ಹಾಗೆ ಶಾಲೆಗಳಲ್ಲಿ ಪಾಠಮಾಡುವುದನ್ನು ಬುದ್ಧಿವಂತನಾದ ಅಫ್ಜಜ್ ಚೆನ್ನಾಗಿಯೇ ಕಲಿತುಕೊಳ್ಳತೊಡಗಿದ್ದ. ರಾಷ್ಟ್ರೀಯ ಹಬ್ಬಗಳಲ್ಲಿ ನಡೆಸುವ ಸಂಭ್ರಮದ ಆಚರಣೆಗಳಲ್ಲಿ ವಿದ್ಯಾರ್ಥಿಗಳ ಸಮೂಹಕ್ಕೆ ಕಮಾಂಡರ್ ಆಗಿ ಕಾರ್ಯ ನಿರ್ವಹಿಸಿದವನು ಅಫ್ಜಲ್. ಅವನ ಶಿಸ್ತು, ಚುರುಕುತನಕ್ಕೆ ಶಿಕ್ಷಕರು ಮಾರುಹೋಗಿದ್ದರು, ಅವನಲ್ಲಿನ ಪ್ರತಿಭೆಯನ್ನು ಗುರುತಿಸಿ ಅವನ ಬೆಳವಣಿಗೆಗೆ ಮಹತ್ವವನ್ನೇ ಕೊಟ್ಟಿದ್ದರು. ರಜಾದಿನಗಳಲ್ಲಿ ಕೆಲವೊಮ್ಮೆ ತಿರುಗಾಡುತ್ತಾ ಪಿ.ಓ.ಕೆ ಕಡೆಗೆ ತೆರಳುತ್ತಿದ್ದ ಅಫ್ಜಲ್ ಅಲ್ಲಿ ಕೆಲವುಜನ ಬಂದೂಕಿನ ಕಸರತ್ತು ನಡೆಸುವುದನ್ನು ನೋಡಿ ಅದನ್ನು ತಾನೂ ನಡೆಸಲು ಆಸಕ್ತನಾದ. ಅದಕ್ಕೆ ಕಾರಣವೂ ಇತ್ತು: ಆ ನದೀಕಣಿವೆಯಲ್ಲಿ ಅದಾಗಲೇ ಓಮರ್ ಮುಖ್ತಾರ್ ಎಂಬಾತ ’ಜಮ್ಮು ಅಂಡ್ ಕಾಶ್ಮೀರ್ ಲಿಬರೇಶನ್ ಫ್ರಂಟ್’ಸ್ಥಾಪಿಸಿದ್ದು, ತನ್ನ ನಿರ್ದೇಶನದ ’ಲಯನ್ ಆಫ್ ದಿ ಡೆಸರ್ಟ್’ ಸಿನಿಮಾವನ್ನೂ ತೋರಿಸಲು ಹರಿಬಿಟ್ಟಿದ್ದ, ಅದನ್ನು ಅಫ್ಜಲ್ ಸದಾ ವೀಕ್ಷಿಸುತ್ತಿದ್ದ. ಮುಸ್ಲಿಂ ಸಮುದಾಯದ ಶಿಕ್ಷಕನೊಬ್ಬ ತನ್ನ ಜನಾಂಗದ ಸಲುವಾಗಿ ಏಕಾಂಗಿಯಾಗಿ ಹೋರಾಡುತ್ತಾ ಕೊನೆಗೆ ಎಲ್ಲಾ ಜನಾಂಗಗಳ ವಿರುದ್ಧ ಜಯವನ್ನು ಸಾಧಿಸಿಬಿಡುತ್ತಾನೆ ಎಂಬ ಸಂದೇಶವಿರುವ ಆ ಸಿನಿಮಾವನ್ನು ಇಂಡಿಯಾ ನಿಷೇಧಿಸಿದೆ. ಅಲ್ಲೇ ಅಫ್ಜಲ್ ಅದರಿಂದ ಪ್ರೇರಿತನಾಗಿ, ಜಮಾತ್-ಏ-ಇಸ್ಲಾಮಿ ಎಂಬ ಸಂಘಟನೆಗೆ ಸೇರುತ್ತಾನೆ. ಅಲ್ಲಿ ಸೇರಿದ ಬಹಳಜನರು ಹಿಜಬುಲ್ ಮುಜಾಹಿದೀನ್ ಎಂಬಂತಹ ಕೆಲವು ಉಗ್ರ ಸಂಘಟನೆಗಳವರೇ ಆಗಿದ್ದು, ಅವರೆಲ್ಲರ  ಪರಿಚಯವಾಗಿ ಅವರಿಂದ ತರಬೇತಿ ಆರಂಭವಾಯ್ತು. ಕಾಶ್ಮೀರಿ ಪಂಡಿತರಿಂದ ಸನ್ಮಾರ್ಗದಲ್ಲಿ ಡಾಕ್ಟರ್ ಆಗುವಂತೇ ಪ್ರೇರೇಪಣೆ ಪಡೆದಿದ್ದ ಅಫ್ಜಲ್ ಗೆ   ವರಸೆಯಲ್ಲಿ ಚಿಕ್ಕಪ್ಪನಂತಿರುವ ಒಬ್ಬ ಡಾಕ್ಟರು ಸಹಾಯ ಮಾಡಿ ಮೆಡಿಕಲ್ ಕಾಲೇಜಿಗೂ ಸೇರಿಸಿದ್ದರು. ಅನಿರೀಕ್ಷಿತವಾಗಿ ಆ ವೈದ್ಯರು ಸತ್ತುಹೋದಮೇಲೆ ಅಫ್ಜಲ್ ಗೆ ಮುಂದಿನ ಓದಿನಲ್ಲಿ ಆಸಕ್ತಿ ಕಡಿಮೆಯಾಯ್ತು.

ಮುನ್ನ ಇಂತಿದ್ದ ಈ ಅಫ್ಜಲ್,  ಮುಸ್ಲಿಂ ಮತಾಂಧರ ತರಬೇತಿ ಶಿಬಿರಕ್ಕೆ ಕಾಯಂ ಹೋಗಿಬರತೊಡಗಿದ. ಅಲ್ಲಿಂದ ಒಂದಷ್ಟು ಕಾಸು-ಕಾಂಚಾಣ ಕೈಲಿ ಬರತೊಡಗಿತು, ಜೊತೆಗೆ ಚಿಕ್ಕವನಿರುವಾಗಲೇ ಬಯಸಿದ್ದ ಗನ್ ಕೂಡ ದೊರೆತಿತ್ತು! ಎಮ್.ಬಿ.ಬಿ.ಎಸ್ ಮಾಡಲಾಗದಿದ್ದರೂ ಮುಂದೆ ಓದಬೇಕೆಂಬ ಆಸೆ ಇಟ್ಟುಕೊಂಡಿದ ಅಫ್ಜಲ್ ಡೆಲ್ಲಿಗೆ ಬಂದುಬಿಟ್ಟ. ಅಲ್ಲಿ ಮುಕ್ತವಿಶ್ವವಿದ್ಯಾಲಯದ ಮೂಲಕ ಪದವಿ ಪಡೆದುಕೊಂಡ. ಆ ಹೊತ್ತಿಗಾಗಲೇ ಹರೆಯ ಉಕ್ಕಿ ಹರಿಯುತ್ತಿದ್ದಾರಿಂದ ತಾಯಿಯ ಕಡೆಯ ಸಂಬಂಧಿ ತಬಸ್ಸುಮ್ ಎಂಬಾಕೆಯನ್ನು ಮದುವೆಯಾದ. ನಂತರ ೧೯೯೯ರಲ್ಲಿ ಒಂದು ಮಗುವೂ ಜನಿಸಿದ್ದು ಮಗುವಿಗೆ ಗಾಲಿಬ್ ಎಂದು ನಾಮಕರಣ ಮಾಡಿದ. ಸಂಸತ್ತಿನ ಮೇಲೆ ನಡೆದ ದಾಳಿಯ ಸಂಬಂಧ ಅಫ್ಜಲ್ ನನ್ನು ಪೋಲೀಸರು ೨೦೦೧ ರಲ್ಲಿ ಬಂಧಿಸಿದರು. ಆತನೇ ಅಫ್ಜಲ್ ಗುರು! ಆತನ ಹೆಂಡತಿ, ತಾಯಿ, ಅಣ್ಣ, ಎಲ್ಲರೂ ಹೇಳುವುದು ಒಂದೇ ಮಾತು: "ಆತ ಯಾರಿಗೂ ಹೆದರುವುದಿಲ್ಲ, ಆತನನ್ನು ಅಲ್ಲಾಹುವೇ ರಕ್ಷಿಸುತ್ತಾನೆ"-ಎಂದು. ಅದರರ್ಥ ಅಫ್ಜಲ್ ಗುರು ಸಂಸತ್ತಿನಮೇಲೆ ದಾಳಿ ಮಾಡಿದ್ದು ಸರಿಯೇ ಇದೆಯೆಂದೂ ಆಗಬಹುದು ಅಥವಾ ದಾಳಿಯಲ್ಲಿ ಅವನು ಭಾಗಿಯಾಗಿಲ್ಲ ಎಂಬ ಸುಳ್ಳುವಾದವೂ ಇರಬಹುದು. ಅಫ್ಜಲ್ ಗುರುವಿನ ತಾಯಿ ಕಳೆದ ಸಪ್ಟೆಂಬರ್ ನಲ್ಲಿ ಗತಿಸಿದಳಂತೆ. ಹೆಂಡತಿ-ಮಗ ೨೦೦೧ ರಲ್ಲೇ ಆಕೆಯ ತವರುಮನೆ ಸೇರಿದ್ದು ಮಗ ಓದುತ್ತಿದ್ದಾನೆ. ಎಳೆಯ ಮಕ್ಕಳ ಮನಸ್ಸಿನಲ್ಲೇ ಪ್ರತ್ಯೇಕತೆಯ ಕಹಳೆಯೂದಿ ಮುಸ್ಲಿಂ ಜಿಹಾದಿಗಳು ಅವರನ್ನು ತರಬೇತುಗೊಳಿಸಿದರೆ ಎಂಥವರೂ ಹೇಗಾಗಿಬಿಡುತ್ತಾರೆ ಎಂಬುದಕ್ಕೆ ಅಫ್ಜಲ್ ಗುರುವಿನ ಜೀವನವೇ ಸಾಕ್ಷಿ. ದೆಹಲಿ ಕೋರ್ಟು, ದೆಹಲಿ ಹೈಕೊರ್ಟು ಎಲ್ಲಾ ಈತನಿಗೆ ಗಲ್ಲುಶಿಕ್ಷೆ ವಿಧಿಸಿವೆ-ಆದರೆ ಇನ್ನೂ ಜಾರಿಗೊಂಡಿಲ್ಲ!! ಗಲ್ಲಿಗೇರಿಸದಿರಲು ಸಲ್ಲಿಸಿರುವ ಮನವಿಯಲ್ಲಿ ಅಫ್ಜಲ್ ಹೇರ್ಳಿದ್ದು " ತನ್ನದಲ್ಲದ ತಪ್ಪಿಗಾಗಿ ವಿಧಿಸಿದ ಗಲ್ಲುಶಿಕ್ಷೆಯನ್ನು ತಾನೇಕೆ ಅನುಭವಿಸಬೇಕು?" ಎಂಬುದಾಗಿಯೇ ಹೊರತು ತಪ್ಪುಮಾಡಿದ್ದೇನೆ ಕ್ಷಮೆಮಾಡಿಬಿಡಿ ಎಂಬ ವಿನಂತಿ ಅಲ್ಲಿಲ್ಲ! ಪ್ರಸಕ್ತ ಸರಕಾರದ ರಕ್ಷಣಾಮಂತ್ರಿಗಳು ಇನ್ನೂ ಅದನ್ನು ನಿರ್ಧರಿಸಿಲ್ಲ! ಪ್ರಜಾತಂತ್ರದ ಮೂಲ ದೇವಸ್ಥಾನವೆನಿಸಿದ ಸಂಸತ್ ಭವನದ ಮೇಲೇ ದಾಳಿಯಿಟ್ಟರೂ ಶಿಕ್ಷೆ ವಿಧಿಸಲು ಮೀನ-ಮೇಷ ಎಣಿಸುತ್ತಿರುವುದು ವಿಷಾದನೀಯ. ಗಲ್ಲು ಶಿಕ್ಷೆ ವಿಧಿಸದಿದ್ದರೂ ಆಶ್ಚರ್ಯವೇನಿಲ್ಲ ಯಾಕೆಂದರೆ ಇದು ಸದ್ಯಕ್ಕೆ ಭಾರತವಲ್ಲ ಕಾಂಗ್ರೆಸ್ ದುರಾಡಳಿತದ ಇಂಡಿಯಾ !!

ರಾಮ ಹುಟ್ಟಿದ್ದು, ಬದುಕಿದ್ದು, ತಂದೆಯ ಆಜ್ಞೆಯನ್ನು ಪಾಲಿಸಿದ್ದು, ರಾವಣನನ್ನೂ ಸೇರಿದಂತೇ ಅನೇಕ ದುಷ್ಟಶಕ್ತಿಗಳನ್ನು ನಾಶಮಾಡಿದ್ದು, ಪ್ರಜಾರಂಜಕನಾಗಿ ಆಡಳಿತ ನಡೆಸಿದ್ದು, ಆರೋಪ ಮುಕ್ತವಾಗಲು ಸೀತೆಯನ್ನೇ ಪರಿತ್ಯಜಿಸಿ ಪುನಃ ಬಳಲಿದ್ದು, ವಾಲ್ಮೀಕಿಯ ಅಶ್ರಮದಲ್ಲಿ ನಲಿದಾಡುತ್ತಿದ್ದ ಇಬ್ಬರು ಮಕ್ಕಳನ್ನು ಕಂಡು-ತಂದೆಯಾಗಿ ಅವರನ್ನು ಪಾಲಿಸುವ ಹೊಣೆಗಾರಿಕೆಯನ್ನು ಅಲ್ಲೀವರೆಗೆ ಹೊರಲಾಗದ್ದಕ್ಕೆ ಪರಿತಪಿಸಿದ್ದು, ಮರಳಿಬರಬೇಕಾದ ಸೀತೆ ಭೂಗರ್ಭದಲ್ಲಿ ವಿಲೀನವಾಗಿ ಹೋದಾಗ ಪತ್ನಿವಿಯೋಗ ಸಹಿಸಿ ಮಕ್ಕಳನ್ನು ಸಂತೈಸಿದ್ದು, ಕಾಲನ ಕಾಲ ಸನ್ನಿಹಿತವಾಗಿ-ಏಕಾಂತದಲ್ಲಿದ್ದ ರಾಮನೊಡನೆ ಮಾತುಕತೆ ಬಯಸಿ ದೂರ್ವಾಸರು ಅಡಿಯಿಟ್ಟು-ಕಾಲ ವಿಧಿಸಿದ ಶರತ್ತನ್ನು ಮುದ್ದಿನ ತಮ್ಮ ಲಕ್ಷ್ಮಣ ಅನಿವಾರ್ಯವಾಗಿ ಮುರಿದಾಗ ಆತನಿಗೆ ದೇಹಾಂತ ಶಿಕ್ಷೆಯನ್ನು ಹಿಂದೆಮುಂದೆ ನೋಡದೆ ಜಾರಿಗೊಳಿಸಿದ್ದು, ಶಬರಿಯ ಭಕ್ತಿ, ಹನುಮನ ಸೇವೆ, ಅಳಿಲಿನ ಅಳಿಲುಸೇವೆ, ಸುಗ್ರೀವ-ವಿಭೀಷಣಾದಿಗಳ ಸಖ್ಯ ಎಲ್ಲವನ್ನೂ ಪಡೆದಿದ್ದು, ಸಮಯ ಸನ್ನಿಹಿತವಾದಾಗ ಪೀಠಕ್ಕೆ ಅಂಟಿಕೊಳ್ಳದೇ, ಅಧಿಕಾರದ ಮೋಹಕ್ಕೆ ಒಳಗಾಗದೇ ತನ್ನ ಅವತಾರ ಸಮಾಪ್ತಿಯನ್ನೇ ಆವಾಹಿಸಿ ಸರಯೂನದಿಯಲ್ಲಿ ಶ್ರೀರಾಮ ತನ್ನನ್ನೇ ತಾನು ಕೊನೆಗೊಳಿಸಿಕೊಂಡು ’ರಾಮಾಯಣ’ ಎಂಬ ಕಾವ್ಯವಾಗಿದ್ದು-ಕಥೆಯಾಗಿದ್ದು ಎಲ್ಲವೂ ಇಲ್ಲಿಯೇ: ಇದೇ ಇಂಡಿಯಾ ಹಿಂದೆ ಭಾರತವಾಗಿದ್ದಾಗಲೂ ಭರವರ್ಷವಾಗಿದ್ದಾಗಲೂ ಇದ್ದ ಇದೇ ಅಯೋಧ್ಯೆಯಲ್ಲಿಯೇ. ಆದರೆ ಅಯೋಧ್ಯೆಯನ್ನು ಸುಲಭವಾಗಿ ಬಳಸುವ ಹಕ್ಕುಮಾತ್ರ ಹಿಂದೂಗಳಿಗಿಲ್ಲ. ಮುಸ್ಲಿಮರ ಬಾಬರಿ ದಂಡೆತ್ತಿ ಬಂದು ಅಯೋಧ್ಯೆಯಲ್ಲಿದ್ದ ಅನಾದಿಯ ರಾಮ ಮಂದಿರವನ್ನು ಕೆಡವಿ ಮಸೀದಿಯಂತೇ ಗೋಪುರಗಳನ್ನು ಕಟ್ಟಿದ, ಬಾಬರಿ ಮಸೀದಿ ಎಂದ-ಅದನ್ನೇ ’ಇಂಡಿಯಾ’ವನ್ನು ಆಳಿದ ನೆಹರೂ ಮನೆತನದ ಸರಕಾರ ಒಪ್ಪಿಕೊಂಡಿತು-ಅಂದಿನಿಂದ ಇಂದಿನವರೆಗೂ ಬಹುಸಂಖ್ಯಾಕ ಹಿಂದೂಗಳ ಇಚ್ಛೆಗೆ ವಿರುದ್ಧವಾಗಿಯೇ ತನ್ನ ನಡೆಯನ್ನು ಕಾಪಾಡಿಕೊಂಡು ಬಂದಿತು. 

ಒಡೆದು ಹೋದ ಜನಮತದಲ್ಲಿ, ಹಳೆಯದಾದ ಸಂವಿಧಾನದ ದೋಷಗಳಿಂದ ಕೂಡಿದ ವಾತಾವರಣದಲ್ಲಿ, ದೇಶವ್ಯಾಪಿ ಮನೆಗೊಂದೆಂಬಂತೇ ಪ್ರಾದೇಶಿಕ ಪಕ್ಷಗಳು ಜನಿಸಿದವು. ಪ್ರಜಾತಂತ್ರ ನಡೆಸುವ ಸಾರ್ವತ್ರಿಕ ಚುನಾವಣೆಗಳಲ್ಲಿ ಯಾವ ಪಕ್ಷವೂ ದೊಡ್ಡ ಪಕ್ಷವಾಗಿ ಹೊರಹೊಮ್ಮದೇ, ಬಹುಮತಗಳಿಸಲಾಗದೇ ಹಲವುಪಕ್ಷಗಳ ಅಪವಿತ್ರ ಮೈತ್ರಿಕೂಟಗಳು ಸೇರಿ ಸಮ್ಮಿಶ್ರ ಸರಕಾರವನ್ನು ನಡೆಸುತ್ತಾ, ಆಗಬೇಕಾದ ಯಾವ ಅಭಿವೃದ್ಧಿಯನ್ನೂ ಕಾಣದೇ, ವಿದೇಶೀ ಬಂಡವಾಳಶಾಹಿಗಳನ್ನು ಕರೆದು-ವಿದೇಶೀ ಸಾಲಗಳನ್ನು ಪಡೆದು ಇಂದು ಪ್ರಜಾ-ಅತಂತ್ರವಾದ ಇಂಡಿಯಾದಲ್ಲಿ ನೆಲೆಸಿದ್ದೇವೆ. ಹೀಗಿರುವಾಗ ಸಂಖ್ಯೆಯಲ್ಲಿ ವೃದ್ಧಿಸಿ ’ಮುಸ್ಲಿಂ ಅಲ್ಪಸಂಖ್ಯಾತರು’ ಎಂದು ಬೋರ್ಡು ಬರೆದುಕೊಂಡು ಕೂತವರ ಮತಗಳನ್ನು ಗುತ್ತಿಗೆ ಹಿಡಿದುಬಿಟ್ಟರೆ ತಮ್ಮದೇ ಮೇಲುಗೈ ಆಗಬಹುದೆಂಬ ಆಸೆಯಿಂದಲೂ, ಗೆದ್ದು ಅಧಿಕಾರ ಹಿಡಿದರೆ ಒಂದಷ್ಟು ಕಬಳಿಸಬಹುದೆಂಬ ಅಭಿಲಾಷೆಯಿಂದಲೂ ಕೆಲವು ಪಕ್ಷಗಳವರು ಮುಸ್ಲಿಮರನ್ನು ಓಲೈಸತೊಡಗಿದರು. "ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವುದಕ್ಕೆ ಬಿಡಬೇಡಿ" ಎಂದು ಇಂಥಾ ಜನರೇ ಹೇಳಿಕೊಟ್ಟರು, ಅಷ್ಟೇ ಅಲ್ಲ-ತಾವು ಗೆದ್ದರೆ ರಾಮಮಂದಿರ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂತಲೂ ಸಾರಿಕೊಳ್ಳುತ್ತಾ ಬಂದರು. ದೇಶವ್ಯಾಪಿ ಇರುವ ಹಿಂದೂ ವಸಾಹತುಗಳ ಮೇಲೆ, ಹಿಂದೆ ಮೊಘಲರ ಕಾಲದಲ್ಲಿ, ಉಳಿದ ಮುಸ್ಲಿಂ ದೊರೆಗಳ ಕಾಲದಲ್ಲಿ ಘಟಿಸಿದ್ದ ದಾಳಿಗಳಿಂದ ಘೋರ ದುರಂತವನ್ನು ಕಂಡ ದೇವಸ್ಥಾನಗಳ ಪುನರ್ನಿರ್ಮಿತಿಗೆ ಪ್ರಜಾ-ಅತಂತ್ರದ ಆಳರಸರಲ್ಲೇ ಅನೇಕರು ಕ್ಯಾತೆ ಗೆತೆದರು, ಅಡ್ಡಗಾಲು ಹಾಕಿದರು. ಐತಿಹಾಸಿಕ ದೇವಸ್ಥಾನಗಳು, ಪೂಜಾಮಂದಿರಗಳು ಸ್ವಾತಂತ್ರ್ಯ ಬಂದ ೬೭ ವರ್ಷಗಳೂ ಹಾಗೇ ಹಾಳುಬಿದ್ದುಕೊಂಡೇ ಇವೆ ಎಂದರೆ ಭಾರತೀಯ ಮೂಲನಿವಾಸಿಗಳಾದ ಹಿಂದೂಗಳಿಗೆ ಜೀವ ಇಲ್ಲವೇ? ಎಂಬ ಪ್ರಶ್ನೆ ಧುತ್ತನೆ ಎದ್ದುನಿಲ್ಲುತ್ತದೆ. ಅನೇಕಬಾರಿ ನಾನು ಹೇಳಿದ್ದೇನೆ: ಸ್ವಾತಂತ್ರ್ಯ ಬಂದಿದ್ದು ಭಾರತಕ್ಕಲ್ಲ ಬದಲಾಗಿ ಇಂಡಿಯಾಕ್ಕೆ, ಹಿಂದೂಗಳಿಗಲ್ಲ ಬದಲಾಗಿ ಮುಸ್ಲಿಮರಿಗೆ! ಪ್ರಜಾಸತ್ತೆಯ ದುರಂತವೆಂದರೆ ಇದೇ: ಅನೇಕ ಪಕ್ಷಗಳ ತೇಪೆಹಾಕಿದ ಸರಕಾರ, ಮತ್ತೆ ಜಗಳ-ದೊಂಬಿ ಮತ್ತೆ ನಡುಗಾಲ ಚುನಾವಣೆ, ಮತ್ತದೇ ತೇಪೆಹಾಕುವ ಕೆಲಸ-ಮತ್ತೆ ತೇಪೆ ಸರಕಾರ-ಈ ಚಕ್ರ ಜರಾಮರಣದ ಚಕ್ರದಂತೇ ಮುಗಿಯುವುದಂತೂ ಇಲ್ಲ- ಈ ಅನಿಷ್ಟ ಪದ್ಧತಿ ಜಾರಿಯಲ್ಲಿರುವವರೆಗೂ ಪ್ರಜೆಗಳಿಗೆ ಅದರಿಂದ ಬರುವ ಚುನಾವಣಾ ಖರ್ಚಿನ ಹೊಣೆ ತಪ್ಪಿದ್ದಲ್ಲ. ಹಿಂದೂಗಳ ಪ್ರಾತಸ್ಮರಣೀಯ ಆರಾಧ್ಯದೈವ, ಹಿಂದೂಗಳ ಜೀವನದ ಅವಿಭಾಜ್ಯ ಅಂಗ ಶ್ರೀರಾಮ ಜನಿಸಿದ ಅಯೋಧ್ಯೆಯಲ್ಲಿ ರಾಮನ ಮಂದಿರಕ್ಕೇ ಅವಕಾಶ ಕೊಡದ ಹಿಂದೂ ರಾಜಕೀಯ ಧುರೀಣರನ್ನು ಹಿಂದೂಗಳೆನ್ನಬೇಕೋ ಅಥವಾ ಅವರಿಗೂ ಬುರ್ಖಾತೊಡಿಸಿ ಪಾಕಿಸ್ತಾನಕ್ಕೆ ಓಡಿಸಬೇಕೋ ನೀವೇ ಯೋಚಿಸಬೇಕಾಗಿದೆ. ಒಂದು ವಿಷಯ ಗೊತ್ತಿರಲಿ: ಅಯೋಧ್ಯೆ, ಬಾಬಾ ಬುಡನ್ ಗಿರಿ ಇಲ್ಲೆಲ್ಲಾ ಹಿಂದಕ್ಕೆ ಜಗಳಗಳಿರಲಿಲ್ಲ, ಜಗಳವನ್ನು ತಂದಿಟ್ಟಿಅ ನೈತಿಕ ಜವಾಬ್ದಾರಿಯನ್ನು  ಮರ್ಯಾದೆಯಿದ್ದರೆ[?] ಇಂದಿರಾ ಕಾಂಗ್ರೆಸ್ಸು ಹೊರಬೇಕಾಗುತ್ತದೆ. 

ದೇಶಭಕ್ತರ ಸಾಲನ್ನು ನೆನಪಿಸಿಕೊಂಡಾಗ ನಮಗೆ ಹಲವರ ನೆನಪಾಗುತ್ತದೆ; ಹಲವು ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಯಾಗುತ್ತದೆ. ಆ ಗುಂಪಿನಲ್ಲಿ ಯಾರೊಬ್ಬರೂ ಆಧಿಕಾರ ದಾಹಿಗಳಾಗಿರಲಿಲ್ಲ. ಭಾರತ ಪರಕೀಯ ಹಸ್ತದಿಂದ ಮುಕ್ತವಾಗಲಿ ಎಂಬುದಷ್ಟೇ ಉದ್ದೇಶವಾಗಿತ್ತೇ ಹೊರತು ಸ್ವಾತಂತ್ರ್ಯ ಬಂದಮೇಲೆ ತಮಗೆಷ್ಟು ದಕ್ಕುತ್ತದೆ ಎಂಬ ದುರಾಸೆಯ ಲೆಕ್ಕಾಚಾರವನ್ನು ಇಟ್ಟುಕೊಂಡವರಾಗಿರಲಿಲ್ಲ. ಅಲ್ಲೊಬ್ಬ ಇದ್ದ, ಆತ ಹೋರಾಡಲಿಲ್ಲ, ಆದರೆ ಒಳಗಿಂದೊಳಗೇ ಆತ ಕಾರಸ್ಥಾನ ನಡೆಸಿದ್ದ, ಡಾರ್ಜಿಲಿಂಗ್ ನಲ್ಲಿ ಆರಾಮಾಗಿ ಕೂತು ಮಗಳಿಗೆ ಪತ್ರಬರೆಯುತ್ತಿದ್ದ. ತನಗೆ ಸಿಗಬಹುದಾದ ಪ್ರಧಾನಿಯ ಹುದ್ದೆ ಅಕಸ್ಮಾತ್ ಕೈತಪ್ಪಿಹೋಗಬಹುದೆಂಬ ಅನಿಸಿಕೆಯಿಂದ ಪರಾಮರ್ಶಿಸದೇ ’ನೇತಾಜಿ ಸತ್ತರೆ’ಂಬ ಸುದ್ದಿಯನ್ನೇ ಆತ ಪಕ್ಕಾ ಮಾಡಿಬಿಟ್ಟ! ಆದರೆ ನೇತಾಜಿ ಸತ್ತಿರಲಿಲ್ಲ!! ಬದುಕೇ ಇದ್ದರು. ನೆಹರೂ ದುರಾಡಳಿತ ಮತ್ತು ಧೂರ್ತತನ ಅವರಿಗೆ ಬೇಸರ ತರಿಸಿತ್ತು. ಸ್ವಾತಂತ್ರ್ಯಾನಂತರ ದೇಶ ವಿಭಜನೆಯಾಗಿ ಇಂಡಿಯಾ ಆದ ಭಾರತಕ್ಕೆ ನೇತಾಜಿ ಮರಳಿದರೂ, ಅವರನ್ನು ಯಾರೂ ಗುರುತು ಹಿಡಿಯಲಾಗಲಿಲ್ಲ. ಮನದ ತುಂಬಾ ವೈರಾಗ್ಯದ ಭಾವನೆ ತುಂಬಿಕೊಂಡಿದ್ದ ನೇತಾಜಿ ಕಾವಿಯನ್ನು ಧರಿಸಿ ಸಾಧುವಾಗಿದ್ದರು-ಅಯೋಧ್ಯೆಯಲ್ಲೇ ಇದ್ದರು. ಹದಿನೈದು ವರ್ಷಗಳ ಕೆಳಗೆ ಈ ವಿಷಯವನ್ನು ಯಾರೋ ನನಗೆ ಹೇಳಿದಾಗ ಅದನ್ನು ನಾನೂ ಒಪ್ಪಿರಲಿಲ್ಲ; ಈಗ ನೇತಾಜಿಯವರ ಪುತ್ರಿ ಅನಿತಾ ಬೋಸ್ ಕೂಡ ಇದ್ದಾರೆ ಎಂಬುದು ತಿಳಿಯಿತು, ನೇತಾಜಿ ಅಯೋಧ್ಯೆಯಲ್ಲಿ ತಮ್ಮ ಉಳಿದ ಜೀವಿತವನ್ನು ಕಳೆದ ಬಗೆಯನ್ನು ಬಣ್ಣಿಸುವ ಹೊತ್ತಗೆಗಳು ಬಂದವು. ಹಾಗಾದರೆ ಭಾರತದ ಇನ್ಯಾವ ಭಾಗದಲ್ಲೂ ಬದುಕಲು ಇಷ್ಟಪಡದ ನೇತಾಜಿ ತನ್ನ ಉಳಿದ ಜೀವಿತವನ್ನು ಅಯೋಧ್ಯೆಯಲ್ಲೇ ಯಾಕೆ ಕಳೆದರು ಎಂದರೆ ಅದು ಒಂದಾನೊಂದು ಕಾಲಕ್ಕೆ ಮರ್ಯಾದಾ ಪುರುಷೋತ್ತಮ ಎನಿಸಿದ್ದ ಶ್ರೀರಾಮ ಬದುಕಿದ್ದ ಜಾಗ. ಅವನ ಮನೆತನ ಆಡಳಿತ ನಡೆಸಿದ್ದ ಜಾಗ. ಸತ್ಯವಾನ್ ಸತ್ಯ ಸಂಕಲ್ಪ ಎಂಬ ಭಗವಂತ ಧರ್ಮಸ್ಥಾಪನೆಗಾಗಿ ಪೂರ್ಣಾವತಾರವೆತ್ತಿ, ಏಕಪತ್ನೀ ವ್ರತಸ್ಥನಾಗಿ ’ಹೀಗೆ ಬದುಕಬೇಕು’ ಎಂಬ ಆದರ್ಶವನ್ನು ತೋರಿಸಿಕೊಟ್ಟ ಜಾಗ.   

ಕೃಷ್ಣನ ಕೊಳಲಿನ ಕರೆಗೆ ಗೋವುಗಳೂ ಗೋಪಬಾಲರೂ ಎಲ್ಲೆಲ್ಲಿಂದಲೋ ಓಡೋಡಿ ಬರುತ್ತಿದ್ದುದುಂಟಂತೆ. ಕೃಷ್ಣನೊಬ್ಬ ಶಕ್ತಿಯುತ ರಾಜಕಾರಣಿಯಾದರೂ ಗದ್ದುಗೆ ಹಿಡಿದು ಅಧಿಕಾರ ನಡೆಸಲು ಮುಂದಾಗಲಿಲ್ಲ! ಆತ ಸನಾತನ ಧರ್ಮಪ್ರವರ್ಧಕನಾಗಿದ್ದ, ಮಾರ್ಗದರ್ಶಕನಾಗಿದ್ದ. ರಾಜಾಧಿರಾಜರುಗಳಿಗೇ ದರ್ಶನ ನೀಡುವುದಕ್ಕೆ ಸಮಯ ವಿಳಂಬ ಮಾಡಬಹುದಾಗಿದ್ದ ಶ್ರೀಕೃಷ್ಣ ಕುಚೇಲನಂಥಾ ಯಕ್ಕಶ್ಚಿತ ಬಡಪಾಯಿಗಳನ್ನೂ ಮರೆಯಲಿಲ್ಲ, ಎಲ್ಲೆಲ್ಲಿ ಯಾವ ರೀತಿಯಲ್ಲಿ ಹೇಗೆ ಹೇಗೆ ರಾಜನೀತಿಯನ್ನು ಉಪಯೋಗಿಸಬೇಕು ಎಂಬುದನ್ನು ಭಾರತಕಥೆಯುದ್ದಕ್ಕೂ ಕೃಷ್ಣ ತೋರಿಸಿಕೊಟ್ಟ. ಅದೇ ರೀತಿಯಲ್ಲಿ ಗುಜರಾತಿನಲ್ಲಿ ಹಿಂದಕ್ಕೆ  ಬಂದು ನೆಲೆಸಿದ್ದ ಪಾರ್ಸಿಗಳು ತಮ್ಮ ಗುರುವಿನ ಅಣತಿಯಂತೇ ಈ ದೇಶದ ಭಾಗವಾಗಿ, ಈ ದೇಶದ ಅನೇಕ ರಂಗಗಳಲ್ಲಿ ಮರೆಯಲಾರದ ಕೊಡುಗೆಗಳನ್ನು ಕೊಟ್ಟರು. ತಮಗೆ ಬಡತನವೆಂದಾಗಲೀ, ವಿದ್ಯೆ-ಉದ್ಯೋಗ-ಸ್ಥಾನಮಾನ-ಮೀಸಲಾತಿ ಕೊಡಿ ಎಂದಾಗಲೀ, ತಾವು ಅಲ್ಪಸಂಖ್ಯಾತರು ಎಂದಾಗಲೀ ಹೇಳಿಕೊಳ್ಳಲಿಲ್ಲ. ಒಬ್ಬನೇ ಒಬ್ಬ ಪಾರ್ಸಿ ಈ ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳಲಿಲ್ಲ. ಪಾರ್ಸಿಗಳಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುವ ಒಂದು ತಲೆಯೂ ಕಾಣಲಿಲ್ಲ!! ಜೆ.ಎನ್.ಟಾಟಾ, ಜೆ.ಆರ್.ಡಿ ಟಾಟಾ, ರತನ್ ಟಾಟಾ, ನಾನಿ ಪಾಲ್ಕೀವಾಲ್, ಹೋಮಿ ಜಹಾಂಗೀರ್ ಭಾಭಾ ಇವರೆಲ್ಲರ ಕೊಡುಗೆಗಳನ್ನು ಇಂಡಿಯಾವಾಸಿ ಭಾರತೀಯರು ಮರೆಯಬಾರದಲ್ಲಾ! ಅಂದಹಾಗೇ ಭ್ರಷ್ಟಾಚಾರಕ್ಕೆ ಎಳ್ಳಷ್ಟೂ ಅವಕಾಶವಿಲ್ಲ ಎಂಬ ಸಂಸ್ಥೆಯೊಂದಿದ್ದರೆ ಅದು ಟಾಟಾ ಸಮೂಹ ಮಾತ್ರ! ಒಂದರ್ಥದಲ್ಲಿ ಪಾರ್ಸಿಗಳೇ ಭ್ರಷ್ಟಾಚಾರವನ್ನು ಒಪ್ಪುವ ಜನವಲ್ಲ.

ಒಂದು ಕಾಲಕ್ಕೆ ಪಾರ್ಸಿಗಳು ಬಂದು ನೆಲೆಸಿದ ಗುಜರಾತ್, ಅವರು ದೇಶವ್ಯಾಪೀ ಚದುರಿ ಹೋದಮೇಲೆ ಬರಡಾಗಲು ತೊಡಗಿತ್ತು. ಮೂಲಸೌಕರ್ಯಗಳು ಕಮ್ಮಿಯಿದ್ದ ಆ ರಾಜ್ಯ ಸೊರಗುತ್ತಲಿತ್ತು. ಆಗ ಅನಿರೀಕ್ಷಿತವಾಗಿ ಅಲ್ಲೊಂದು ಹೊಸಗಾಳಿ ಬೀಸಿತು: ಅದೇ ಮೋದಿ. ಭ್ರಷ್ಟಾಚಾರದಿಂದ ಹಡಾಲೆದ್ದುಹೋದ ಇವತ್ತಿನ ಮಾಧ್ಯಮಗಳು ಮೋದಿಯನ್ನು ಸ್ವಾರ್ಥಿಯೆಂದೋ, ಅಧಿಕಾರ ದಾಹಿಯೆಂದೋ, ’ಅಲ್ಪಸಂಖ್ಯಾತ ಮುಸ್ಲಿಮರ’ ವಿರೋಧಿಯೆಂದೋ ಅಥವಾ ಸರ್ವಾಧಿಕಾರಿಯೆಂದೋ ಟೀಕಿಸಿದರೆ/ಬಿಂಬಿಸಿದರೆ ಅದು ಮಾಧ್ಯಮಗಳ ತಪ್ಪೇ ಹೊರತು ಮೋದಿ ಹಾಗಿಲ್ಲ! ಗೋಧ್ರಾ ಮೊದಲಾದ ಕೆಲವು ದುರ್ಘಟನೆಗಳನ್ನು ವಿನಾಕಾರಣ ಮೋದಿಗೆ ಅಂಟಿಸಿದ್ದಾರೆಯೇ ಹೊರತು ಮೋದಿ ಆ ಪ್ರಕರಣಗಳಿಗೆ ಸೂತ್ರಧಾರರಲ್ಲ. "ಕರ್ನಾಟಕದಲ್ಲೂ ಗುಜರಾತ್ ಮಾದರಿಯ ಸರಕಾರ ಕೊಡುತ್ತೇನೆ" ಎಂದು ಒದರುತ್ತಾ, ಡಿನೋಟಿಫೈ ಮಾಡಿ ಭೂಮಿ ಒಳಗೆ ಬಿಟ್ಟುಕೊಳ್ಳುತ್ತಾ, ಮಾಡಿದ ಅನ್ಯಾಯಕ್ಕೆ ಸ್ಥಾನವನ್ನು ಕಳೆದುಕೊಳ್ಳಬೇಕಾಗಿ ಬಂದರೂ ಇನ್ನಿಲ್ಲದ ಅಸದಳ ಸರ್ಕಸ್ಸುಗಳಿಂದ ತನ್ನದೇ ರಾಷ್ಟ್ರೀಯ ಪಕ್ಷದ ಪ್ರಮುಖರಿಗೇ ಬಲಪ್ರದರ್ಶನಮಾಡತೊಡಗಿ, ಕೊನೆಗೆ ಯಾವ ಆಟವೂ ನಡೆಯದಿದ್ದಾಗ ರಾಜ್ಯದಲ್ಲಿ ಪಕ್ಷವನ್ನೇ ವಿಭಜಿಸಲು ಪ್ರಯತ್ನಿಸಿ, ಕೆಲವೇ ಬಾಲಬಡುಕರೊಟ್ಟಿಗೆ ಹೊರನಡೆದು ಈಗ ಮುಂದೇನು ಎಂದು ಕಂಗಾಲಾಗಿರುವ ಸನ್ಮಾನ್ಯ ಯಡಯೂರಪ್ಪನಂಥವರೂ ಇರ್ತಾರೆ, ಈಗ ಅವರೂ ಮಕ್ಮಲ್ ಟೋಪಿ ಹಾಕಿಕೊಂಡು "ನಿಮ್ದುಕಿ ನಮ್ದು ಸಹಾಯ ಮಾಡ್ತರೆ ನೀವು ನಮ್ಗೇ ಓಟು ಕೊಡಿ" ಎಂದು ತಿರುಗುತ್ತಿದ್ದಾರೆ. ಮಣ್ಣಿನಮಗ ದೇವೇಗೌಡರು ಇನ್ನೊಂದು ಜನ್ಮ ಎಂಬುದೊಂದಿದ್ದರೆ ಮುಸಲ್ಮಾನನಾಗಿಯೇ ಜನಿಸುತ್ತಾರಂತೆ[ನಾವೆಲ್ಲಾ ತಥಾಸ್ತು ಎಂದುಬಿಟ್ಟಿದ್ದೇವೆ ಬಿಡಿ] ಆದರೆ ಈಗಲೇ ಅವರಿಗೆ ಗಡ್ಡ ಹಚ್ಚಿ- ಟೋಪಿ ಇಟ್ಟು-ಕಣ್ಣಿಗೆ ಕಾಡಿಗೆ ಬರೆದು ಹಬೆಬುಲ್ಲಾ ಅಂತಲೋ ಹರ್ಕತ್ತಿಲ್ಲಾ ಬರ್ಕತ್ತಿಲ್ಲಾ ಖಾನ್  ಅಂತಲೋ ಬೇರೇ ನಾಮಕರಣಮಾಡಿದ್ದರೂ ಆಗಬಹುದಿತ್ತಲ್ಲಾ ಎಂಬುದು ಹಲವರ ಅಂಬೋಣ!! ಈ ಯಾವುದೇ ಥರದ ಅಸಹ್ಯಕರ ಪ್ರವೃತ್ತಿಯನ್ನು ಇಟ್ಟುಕೊಳ್ಳದೇ, ಆನೆ ಹೋದದ್ದೇ ದಾರಿ ಎಂಬರೀತಿಯಲ್ಲಿ, ಗುಜರಾತಿನಲ್ಲಿ ಅತ್ಯುತ್ತಮ ಆಡಳಿತ ನೀಡುವ ಮೂಲಕ ಈ ದೇಶದ ಸಮಗ್ರ ಜನತೆ ಕಣ್ಮುಚ್ಚಿ ಒಪ್ಪಿಕೊಳ್ಳಬಹುದಾದ ಆಡ್ಯತೆಯನ್ನು ತೋರಿಸಿದವರು ನರೇಂದ್ರ ಮೋದಿ. 

ವಿದ್ಯುತ್ತಿನ ಕೊರತೆಯಿತ್ತು, ನೀರಾವರಿ ಸರಿಯಾಗಿ ಇರಲಿಲ್ಲ, ಏಕಕಾಲಕ್ಕೆ ಎರಡನ್ನೂ ಸಾಧಿಸುವ ಮನಸ್ಸಿನಿಂದ ಯೋಚನೆಗಿಳಿದ ಮೋದಿ, ನೀರಾವರಿಯ ಕಾಲುವೆಯ ಮೇಲೆ ಉದ್ದಕ್ಕೂ ಸೋಲಾರ್ ಸೆಲ್ಸ್ ಅಳವಡಿಸಿ ಸೋಲಾರ್ ವಿದ್ಯುತ್ತನ್ನು ಪಡೆಯುವಲ್ಲಿ ಯಶಸ್ವಿಯಾದರು, ಬಿಸಿಲಿಗೆ ನೀರು ಆರಿಹೋಗಲಿಲ್ಲ, ಜಾಗವೂ ಉಳಿಯಿತು-ವ್ಯವಸ್ಥೆಯೂ ಪಸಂದಾಯ್ತು. ಇಂಥಾ ಒಂದಲ್ಲಾ ಎರಡಲ್ಲಾ ಹಲವು ನೂರು ಕಾರ್ಯಕ್ರಮಗಳನ್ನು ಮೋದಿ ಜಾರಿಗೆ ತಂದರು. ಅವರಿಂದ ಸಹಾಯ ಪಡೆದವರಲ್ಲಿ ಮುಸಲ್ಮಾನರೂ ಇದ್ದಾರೆ ಎಂಬುದನ್ನು ಮರೆಯಬಾರದು. ಇಂತಹ ಮೋದಿಯನ್ನು ರೂಪಿಸುವ ಹಿಂದಿನ ಸಂಸ್ಕಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ್ದು ಎಂಬುದನ್ನೂ ಕೂಡ ಮರೆಯಬಾರದಲ್ಲಾ! ಮೋದಿ ನಿಷ್ಕಳಂಕ ದೇಶಭಕ್ತರಾಗಿ ಬೆಳೆಯಲು ಸರಸಂಘ ಕೊಟ್ಟ ಉತ್ತಮ ಸಂಸ್ಕಾರಗಳೇ ಕಾರಣವಾದವು. ತನ್ನ ಅಧಿಕಾರಕ್ಕಾಗಿ, ತನ್ನ ಕುರ್ಚಿಯ ಉಳಿಯುವಿಕೆಗಾಗಿ ಮೋದಿ ಸರ್ಕಸ್ಸು ನಡೆಸಬೇಕಾದ ಪ್ರಮೇಯ ಬರಲಿಲ್ಲ ಯಾಕೆಂದರೆ ವಿರೋಧಿಗಳೆನಿಸಿದವರು ವಿರೋಧವ್ಯಕ್ತಪಡಿಸಲು ಯಾವ ಕಾರಣಗಳೂ ಇರಲೇ ಇಲ್ಲ. ಆಗ ವಿರೋಧಿಗಳೂ ಮಾಧ್ಯಮಗಳ ಭ್ರಷ್ಟರೂ ಸೇರಿಕೊಂಡು ಮೋದಿ ಅಂಥವ ಇಂಥವ ಎಂದೆಲ್ಲಾ ಕಥೆ-ಕಟ್ಟಿ ಕಟಕಿಯಾಡಿದರು, ಯಾವ್ಯಾವುದೋ ಘಟನೆಗಳಿಗೆ ಮೋದಿಯೇ ಕಾರಣ ಎಂದು ಬಿಂಬಿಸಿದರು. ಇವತ್ತು ಗುಜರಾತಿನಲ್ಲಿ ಅದೂ ಮೋದಿಯ ವಿರುದ್ಧವಾಗಿ ನಿಲ್ಲಲು ಹದಿನೆಂಟೆದೆಯ ಬಂಟನಿಗೂ ಕಷ್ಟ! ಇಡಗಂಟು ಕಳಕೊಳ್ಳುವ ಪ್ರಸಂಗ! ಅಧಿಕಾರ ಸಿಕ್ಕಾಗ ಅಹಂಕಾರವನ್ನು ಹೆಚ್ಚಿಸಿಕೊಳ್ಳದೇ, ದುರಾಸೆಯನ್ನು ಇಟ್ಟುಕೊಳ್ಳದೇ ರಾಜ್ಯದ ಶ್ರೀಸಾಮಾನ್ಯನೊಬ್ಬ  ತನ್ನಿಂದ ಏನನ್ನು ಬಯಸುತ್ತಾನೆ? [ಆಡಳಿತಗಾರರು ಪೂರೈಸಬಹುದಾದ]ಅವನ ಬಯಕೆಗಳು ಈಡೇರಿದವೋ ಹೇಗೆ? ಈಡೇರದಿದ್ದರೆ ಅದನ್ನು ಈಡೇರಿಸಲು ಮಾಡಬೇಕಾದ ಕರ್ತವ್ಯಗಳೇನು? ರಾಜ್ಯದ ಜನತೆಯ ಸರ್ವತೋಮುಖ ಸಮಸ್ಯೆಗಳೇನು? ಅವುಗಳಿಗೆ ಪರಿಹಾರ ಹೇಗೆ? ಪರಿಹಾರವನ್ನೇ ನೀಡಲಾಗದ ಸಮಸ್ಯೆಗಳಿವೆಯೇ? ಹಾಗೊಮ್ಮೆ ಇದ್ದರೆ ಅವುಗಳನ್ನು ನಿಭಾಯಿಸುವ ಬಗೆ ಎಂತು? ಹೀಗೇ  ಆಡಳಿತ ಯಂತ್ರವನ್ನು ಉತ್ತಮ ರಾಜನೀತಿಯಿಂದ ನಡೆಸುವುದರ ಬಗ್ಗೆಯೇ ದಿನದ ಬಹುಪಾಲು ಚಿಂತನೆ ನಡೆಸುತ್ತಾ ಕಾರ್ಯಶೀಲರಾದವರು ಮೋದಿ. 

ಒಟ್ಟಿನಲ್ಲಿ ಹೇಳುವುದಾದರೆ ಮೋದಿಯೊಬ್ಬ ಸಮರ್ಥ ರಾಜಕಾರಣಿ ಎಂಬುದನ್ನು ಪಕ್ಷಾತೀತವಾಗಿ ಜನತೆ ಒಪ್ಪಿಕೊಳ್ಳಬೇಕಾಗುತ್ತದೆ. ಮೋದಿಯ ಸಾಧನೆಗಳ ಬಗ್ಗೆ ಹೆಚ್ಚಿನ ವಿವರಣೆ ಇಲ್ಲಿ ಅನಗತ್ಯ. ನಿಜವಾದ ಅಧಿಕಾರದ ಚುಕ್ಕಾಣಿ ಇನ್ನೆಲ್ಲೋ ಇದ್ದು, ಬರಿದೇ ಪ್ರಧಾನಿ ಹುದ್ದೆಯಲ್ಲಿ ಅನೇಕರು ಕುಳಿತಿರುತ್ತಾರೆ-ಈಗಲೂ ಇಲ್ಲವೇ ಹಾಗೇ!! ನಮಗೆ ಅಂತಹ ಪ್ರಧಾನಿಗಳ ಅಗತ್ಯವಿಲ್ಲ. ಪ್ರಧಾನಿಯೊಬ್ಬ ದಕ್ಷನಾಗಿರಬೇಕು, ಇಂಡಿಯಾ ದೇಶಕ್ಕಿಂತಾ ಭಾರತದೇಶಕ್ಕೆ ಬದ್ಧನಾದ ದೇಶಭಕ್ತನಾಗಿರಬೇಕು, ಆತನೊಬ್ಬ ಸನಾತನಿಯಾಗಿರಬೇಕು, ಸಜ್ಜನನಾಗಿರಬೇಕು, ದಕ್ಷನಾಗಿರಬೇಕು,  ದೇಶದ ಮೂಲನಿವಾಸಿಗಳ ಆಶೋತ್ತರಗಳಿಗೂ ಸ್ಪಂದಿಸುವವನಾಗಿರಬೇಕು, ಕ್ರಿಯಾಶೀಲನಾಗಿರಬೇಕು, ಉನ್ನತ ಚಿಂತನೆಯುಳ್ಳವನಾಗಿರಬೇಕು, ’ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು’ಎಂಬುದನ್ನು ಸರಕಾರೀ ಪುಸ್ತಕದ ಅಕ್ಷರಗಳಿಂದ ಸಾರ್ವಜನಿಕರ ಬದುಕಿನ ಹೆಜ್ಜೆಗಳಲ್ಲಿ/ಮಜಲುಗಳಲ್ಲಿ ಕ್ರಿಯಾತ್ಮಕವಾಗಿ ಭಟ್ಟಿ ಇಳಿಸಿ ತೋರಿಸುವಂತವನಾಗಿರಬೇಕು, ಮತಾಂಧರಿಗೆ-ಜಿಹಾದಿಗಳಿಗೆ, ದೇಶದ್ರೋಹಿಗಳಿಗೆ, ಪಾಕಿಸ್ತಾನ-ಅಪ್ಘಾನಿಸ್ತಾನ-ಚೀನಾ-ಸೂಡಾನ್ ಮೊದಲಾದ ವೈರಿಗಳಿಗೆ ಕ್ರಿಯಾತ್ಮಕವಾಗಿಯೇ ಉತ್ತರಹೇಳುವ ದಾರ್ಷ್ಟ್ಯ ಮನೋಭಾವದವನಾಗಿರಬೇಕು, ಯಾರಿಗೆ-ಯಾವಾಗ-ಎಲ್ಲಿ-ಹೇಗೆ ಉತ್ತರಿಸಬೇಕೆಂಬುದನ್ನು ಮುಕ್ತವಾಗಿ ಅಳವಡಿಸಿಕೊಂಡ ಆಡಳಿತ ತಜ್ಞನಾಗಿರಬೇಕು, ಇಂಥಾ ಹಲವು ವಿಶೇಷಣಗಳ ಸಂಗಮವನ್ನು ಒಂದೇ ಪದದಲ್ಲಿ ಹೇಳುವುದಾದರೆ ಅದು ಮೋದಿ. ಮೋದಿಗೆ ಪರ್ಯಾಯವಾಗಿ ಅಂತಹ ವ್ಯಕ್ತಿತ್ವವನ್ನು ಹಿಂದೊಮ್ಮೆ ನಾವು ಕಂಡಿದ್ದೆವು-ಅವರೇ ಅಟಲ್ಜಿ, ಸ್ವಾತಂತ್ರ್ಯಾನಂತರ ಸುದೀರ್ಘಕಾಲ ಆಡಳಿತ ನಡೆಸಿದ ನೆಹರೂ-ಇಂದಿರಾ ಕಾಂಗ್ರೆಸ್ಸಿಗರು ಸಾಧಿಸದ ಸವಾಲುಗಳನ್ನು ತನ್ನ[೨೪ ಪಕ್ಷಗಳ ಸಮ್ಮಿಶ್ರ ಸರಕಾರವಿದ್ದರೂ] ನಾಲ್ಕೂವರೆ ವರ್ಷಗಳ ಆಡಳಿತದಲ್ಲಿ ಸಾಧಿಸಿ ತೋರಿಸಿದ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ. ಅದೇ ಛಾಪಿನ ಆದರೆ ಇನ್ನೂ ವಯಸ್ಸಿನಲ್ಲಿ ತುಸು ಕಿರಿಯ ವ್ಯಕ್ತಿ ಬೇಕೆಂದು ನಾವು ಹುಡುಕುವುದಾದರೆ ಅದು ಮೋದಿಯೊಬ್ಬರೇ!!!! ಈಗ ಯೋಚಿಸಿ ನೋಡಿ ಮತ್ತದೇ ನನ್ನ ಮಾತು: ಮೋದಿಯೇ ಪ್ರಧಾನಿಯಾಗಬೇಕು ಯಾಕೆಂದರೆ ಮೋದಿಯಂತಹ ವ್ಯಕ್ತಿತ್ವವನ್ನು ಸರಿದೂಗಿಸುವ ಮೌಲ್ಯಯುತ ವ್ಯಕ್ತಿತ್ವ ಸದ್ಯಕ್ಕೆ ಇನ್ನಾವ ಪಕ್ಷದಲ್ಲೂ ನಮಗೆ ಕಾಣಸಿಗುವುದಿಲ್ಲ. ಈ ವಿಷಯದಲ್ಲಿ 'ಮೋದಿ ಜೆರಾಕ್ಸ್' ನಮಗೆಲ್ಲೂ ಕಾಣಸಿಗುವುದಿಲ್ಲ! ಮೋದಿಯೇ ಮುಂದಿನ ಪ್ರಧಾನಿಯಾಗಲಿ, ರಾಮನಾಳಿದ್ದ ಈ ದೇಶದಲ್ಲಿ-ರಾಮನ ಜನ್ಮಭೂಮಿಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗಿ ದೇಶದಲ್ಲಿ ಸುಭಿಕ್ಷವಾಗಲಿ, ಸಮೃದ್ಧಿ ನೆಲೆಸಲಿ ಎಂದು ಹಾರೈಸೋಣ, ನಮಸ್ಕಾರ.         

5 comments: