ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, February 10, 2013

ಉಗ್ರ ಅಫ್ಜಲ್ ಗುರು ಹೇಳಿದ್ದ ಒಂದೇ ಒಂದು ಸತ್ಯ ಮತ್ತು ಭಟ್ಟ ಎಂದರೆ ಅಡುಗೆ ಭಟ್ಟ ಅಲ್ಲ ಎಂಬ ಇನ್ನೊಂದು ಸತ್ಯ !

ಚಿತ್ರಋಣ : ಅಂತರ್ಜಾಲ 
ಉಗ್ರ ಅಫ್ಜಲ್ ಗುರು ಹೇಳಿದ್ದ ಒಂದೇ ಒಂದು ಸತ್ಯ ಮತ್ತು ಭಟ್ಟ ಎಂದರೆ ಅಡುಗೆ ಭಟ್ಟ ಅಲ್ಲ ಎಂಬ ಇನ್ನೊಂದು ಸತ್ಯ !

ಈ ಕಥೆಯ ಆರಂಭದಲ್ಲೇ ಆದಿಶಂಕರರಿಗೆ ಸಾಷ್ಟಾಂಗ ನಮಸ್ಕಾರಗಳನ್ನು ಸಲ್ಲಿಸಿಬಿಡುತ್ತೇನೆ ಯಾಕೆಂಬುದು ನಿಮಗೆ ಕಥೆಯ ಕೊನೆಗೆ ತಿಳಿಯುತ್ತದೆ. ಮ್ಲೇಚ್ಛರು ೬ನೇ ಶತಮಾನದಲ್ಲಿ ಉದಯಿಸಿದರು ಎಂದು ಹಿಂದೊಮ್ಮೆ ಹೇಳಿದ್ದೇನೆ. ಶಂಕರರ ಭಾರತಪರ್ಯಟನ-ಪರಿಕ್ರಮ ಕಾಲದಲ್ಲಿ ಸನಾತನ ರಾಜರುಗಳ ಚಪ್ಪನ್ನೈವತ್ತಾರು ರಾಜ್ಯಗಳಿದ್ದವೇ ಹೊರತು ಮ್ಲೇಚ್ಛರ ಆಗಮನ ಆಗಿರಲಿಲ್ಲ; ಎಲ್ಲೂ ಶಂಕರರಿಗೆ ಮುಸ್ಲಿಮರು ಎದುರಾದ ಸನ್ನಿವೇಶ ಕಾಣುವುದಿಲ್ಲ. ಅಂದರೆ ಮ್ಲೇಚ್ಛರ ಉದಯಾನಂತರದ ೨ ಶತಮಾನಗಳಲ್ಲೂ ಭಾರತಕ್ಕೆ ಅವರು ಬಂದಿರಲಿಲ್ಲ. ಆಮೇಲೆ ಅರಬ್ಬರು ವ್ಯಾಪಾರ ಎಂಬ ಒಂದು ಉದ್ದೇಶ ಮತ್ತು ಮತಪ್ರಚಾರ ಇನ್ನೊಂದು ಬಹುದೊಡ್ಡ ಉದ್ದೇಶ-ಈ ಎರಡು ಉದ್ದೇಶಗಳಿಂದ ಭಾರತದಂತಹ ದೇಶಗಳನ್ನು ಹುಡುಕಿಕೊಂಡು ಬಂದರು. ಸನಾತನವಾಗಿದ್ದ ಭಾರತದಲ್ಲಿ ಆಳುತ್ತಿದ್ದ ರಾಜರುಗಳ ಒಳಜಗಳಗಳ ಲಾಭವನ್ನು ಪಡೆದು ಇಲ್ಲಿ ತಮ್ಮ ವಸಾಹತುಗಳನ್ನು ಆರಂಭಿಸಿದರು. ಹಾಗೆ ಇಲ್ಲಿಯೇ ನಿಧಾನಕ್ಕೆ ತಳವೂರಲು ಪ್ರಯತ್ನಿಸಿದವರಲ್ಲಿ ಕೆಲವರು ದೊರೆಗಳಾದರು: ಮೊಘಲರಾದರು. ಮ್ಲೇಚ್ಛ/ಮುಸಲ್ಮಾನ/ಮಹಮ್ಮದೀಯ/ಸೂಫಿ/ಮುಸ್ಲಿಂ ಎಲ್ಲಾ ಪರ್ಯಾಯ ಪದಗಳು ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು. ಅತಿಕ್ರಮಣಶೀಲ ಮತ್ತು ಆಕ್ರಮಣ ಶೀಲರಾಗಿದ್ದ ಮೊಘಲರು ನಿರ್ದಯ ಕ್ರೂರಿಗಳಾಗಿದ್ದರು; ಸನಾತನ ಧರ್ಮವೂ ಸೇರಿದಂತೇ ಇಸ್ಲಾಮೇತರ ಮತಗಳನ್ನು ಅವರು ಸಹಿಸುತ್ತಿರಲಿಲ್ಲ.

ಯುಗಯುಗಗಳಲ್ಲೂ ಆದಿಯಲ್ಲಿ ಅನೇಕ ಮಹರ್ಷಿಗಳು ಕಾಣಿಸಿಕೊಳ್ಳುತ್ತಾರೆ. ಅವು ಪರಮಾತ್ಮ ಸ್ವರೂಪಿಗಳೇ ಎಂದು ಭಾವಿಸಿದರೆ ತಪ್ಪಾಗಲಾರದು. ಅವರಲ್ಲಿ ಅನೇಕರು ಚಿರಂಜೀವಿಗಳು, ಕೆಲವರು ಪುನರವತರಿಸುವವರು. ಹೀಗೇ ೫೧೧೩ ವರ್ಷಗಳಹಿಂದೆ ಕಲಿಯುಗದ ಆರಂಭದಲ್ಲೂ ಸಹ ಅಂಥಾ ಋಷಿಗಳು ಕಾಣಿಸಿಕೊಂಡರು. ಮಾನವ ಶರೀರದಲ್ಲಿದ್ದು, ಘೋರಾರಣ್ಯಗಳಲ್ಲಿ ಧ್ಯಾನ ನಿರತರಾದ ಅವರಿಗೆ ಬ್ರಹ್ಮ ಪ್ರೇರೇಪಿಸಿದಾಗ, ಅವರ ಮುಖದಿಂದ [ಬಾಯಿಂದ] ಹೊರಟ ನಾದರೂಪದ ಜ್ಞಾನ ನಿಧಿಯೇ ವೇದ. ಏಕಕಾಲಕ್ಕೆ ಎಲ್ಲರೂ ಧ್ಯಾನಸ್ಥರಾಗಿರದ ಕಾರಣ ಧ್ಯಾನಸ್ಥ ಋಷಿಗಳ ಪಕ್ಕದಲ್ಲಿದ್ದ ಹಲವು ಋಷಿಗಳು ಅದನ್ನು ಮನದಟ್ಟುಮಾಡಿಕೊಂಡು ಕಂಠಸ್ಥವಾಗಿ ಹಾಡಲು ಕಲಿತರು. ಅವರಿಗೆಲ್ಲಾ ನಿರ್ದಿಷ್ಟವಾದ ಉದ್ದೇಶ, ವಿಶಿಷ್ಟ ಮನೋದಾರ್ಢ್ಯತೆ, ಹೆಚ್ಚಿನ ದೈಹಿಕಬಲ ಮತ್ತು ಮಾನವ ಶಾರೀರಿಕ ಆಯುಸ್ಸು ಇವೆಲ್ಲವೂ ಪ್ರಾಪ್ತವಾಗಿದ್ದರಿಂದಲೂ ಪೂರ್ವಜನ್ಮಗಳ, ಪೂರ್ವಯುಗಗಳ ಮಾಹಿತಿ ಅವರ ಮನಃಪಟಲಗಳಲ್ಲಿ ಮೂಡುತ್ತಿದ್ದುದರಿಂದಲೂ ಗ್ರಾಹ್ಯವಾದ-ಸಂಗ್ರಾಹ್ಯವಾದ  ಅಗಾಧ ಮಾಹಿತಿ ಭಂಡಾರವನ್ನು ತುಂಬಿಸಿಕೊಳ್ಳುವ ಮನೋಕೋಶಗಳ ಖಜಾನೆ ಅವರಲ್ಲಿತ್ತು. ಜ್ಞಾನದ ಅಂಗಗಳು ನಾಲ್ಕು ಎಂದು ವೇದ ಹೇಳುತ್ತದೆ: ಸಮೀಕ್ಷಾ, ಉಪದೇಶ, ಮೀಮಾಂಸೆ ಮತ್ತು ಅನುಭೂತಿ--ಇವು ನಾಲ್ಕು ಜ್ಞಾನದ ಪ್ರಮುಖ ಅಂಗಗಳು. ಸುತ್ತಲಿನ ಜಗತ್ತನ್ನು ವೀಕ್ಷಿಸುವುದರ ಮೂಲಕ, ಗುರುವಿನಿಂದ ಪಡೆದ ಉಪದೇಶಗಳ ಮೂಲಕ, ಮನೋದಾರ್ಢ್ಯತೆಯಿಂದ ಸಿಕ್ಕ ಮಾಹಿತಿಗಳನ್ನು ವಿಮರ್ಶಿಸುವುದರ ಮೂಲಕ ಮತ್ತು ಅಂಥಾ ಮಾಹಿತಿಗಳನ್ನು ಅನುಭದ ಮೂಸೆಗೆ ಒರೆಹಚ್ಚಿ ನೋಡುವ ಮೂಲಕ ಜ್ಞಾನ ಪರಿಪೂರ್ಣವೆನಿಸುತ್ತಿತ್ತು. ಲೋಕೋಪಕಾರಾರ್ಥವಾಗಿ, ತಾನೇ ಆಡುವ ನಾಟಕದ ಪ್ರಪಂಚದಲ್ಲಿ ಮಾನವರಾಗಿ ಜನಿಸಿದವರಿಗೆ ಮೊದಲಾಗಿ ಗುರುವೆನಿಸಿದವನು ನಾರಾಯಣನೇ/ಪರಬ್ರಹ್ಮನೇ ಆಗಿದ್ದಾನೆ. ಸಂಪಾದಿತ ಆ ಜ್ಞಾನ ಭಂಡಾರವನ್ನು ಸಂರಕ್ಷಿಸಲು ದೇವರು ಋಷಿಗಳನ್ನು ಸೃಜಿಸಿದ, ಋಷಿಗಳ ಜೀವನದ ಮುಖ್ಯ ಉದ್ದೇಶವೇ ಲೋಕೋಪಕಾರವಾಯ್ತು.     

ಕಠಿಣತಮವಾದ ವೇದವನ್ನು ಶ್ರುತಿ ರೂಪದಿಂದ ಬರಹದ ರೂಪಕ್ಕೆ ತರಬೇಕೆಂಬ ಉದ್ದಿಶ್ಯದಿಂದ, ವ್ಯಾಸಪದವಿಯಲ್ಲಿ ಆಸೀನರಾಗಿದ್ದ ಇಂದಿನ ವೇದವ್ಯಾಸರು ವೇದಮಂತ್ರಗಳನ್ನು ನಾಲ್ಕುವೇದಗಳಾಗಿ ವಿಂಗಡಿಸಿದರು. ಆದರೂ ಯಾಜ್ಞ್ಯವಲ್ಕ್ಯ ಮಹರ್ಷಿಯ ಕಾಲಕ್ಕೆ ಸೂರ್ಯೋಪಾಸನೆಯಿಂದ ಅವರು ಪಡೆದ ಯಜುರ್ವೇದದ ಭಾಗ ಶುಕ್ಲಯಜುರ್ವೇದ ಎನಿಸಿದೆ. ಗಹನವಾದ ವೇದಗಳ ಅರ್ಥವನ್ನು ಗ್ರಹಿಸುವಲ್ಲಿ ಎಲ್ಲರೂ ಬಳಲಬಾರದೆಂಬ ಸದುದ್ದೇಶದಿಂದ ವ್ಯಾಸರು, ವೇದಗಳನ್ನೂ ವೇದಗಳ ಅಂತ್ಯಭಾಗವಾದ ಉಪನಿಷತ್ತುಗಳನ್ನೂ ಸೇರಿಸಿ, ಅವುಗಳ ಸಾರಸರ್ವಸ್ವವೆನಿಸಿದ ಬ್ರಹ್ಮಸೂತ್ರವನ್ನು ಬರೆದರು. ಹಾಗೆ ವ್ಯಾಸರಿಂದ ಬರೆಯಲ್ಪಟ್ಟ ಬ್ರಹ್ಮಸೂತ್ರ ಕೂಡ ಜನಸಾಮಾನ್ಯರಿಗೆ ಅರ್ಥವಾಗುವುದು ಕಷ್ಟವೆನಿಸಬಹುದೆಂದು, ಜೀವನಮೌಲ್ಯಗಳನ್ನು ಹೇಳುವ ಸಲುವಾಗಿ ನೈಜ ಘಟನೆಗಳನ್ನಾಧರಿತ ಕಥೆಯರೂಪವಾಗಿ ಮಹಾಭಾರತವಾಗಿ ನಿರೂಪಿಸಿದರು. ಹೀಗೇ ಶ್ರುತವಾದ ಜ್ಞಾನ ಭಂಡಾರ ಬ್ರಾಹ್ಮಣ್ಯದ ಸಹಜ ಜೀವನಕ್ರಮದಲ್ಲಿ ಹಾಸುಹೊಕ್ಕಾಗಿ, ಅದನ್ನು ಬರಹರೂಪದಲ್ಲಿ ಪಡೆಯುವವರೆಗೆ, ಸಹಸ್ರಾರು ವರ್ಷಗಳವರೆಗೆ-ತಲೆತಲಾಂತರದಿಂದ ಮೌಖಿಕವಾಗಿ ಉಚ್ಚರಿಸುತ್ತಾ ಮನಸ್ಸಿನಲ್ಲಿ ಉಳಿಸಿಕೊಳ್ಳುವ ವಿಶೇಷ ಸಾಮರ್ಥ್ಯ ಪಡೆದು, ಇಂದು ನಮಗೆಲ್ಲರಿಗೂ ಲಭ್ಯವಾಗುವಂತೇ ಉಪಕರಿಸಿದ ಆ ಅವಿರತ ಶ್ರಮಕ್ಕೆ ಬೆಲೆಕಟ್ಟಲು ಸಾಧ್ಯವಾಗುವುದಿಲ್ಲ. ಇದನ್ನು ಮನದಂದು ರಾಜರುಗಳು ಅನೂಚಾನವಾಗಿ ಈ ಕೆಲಸಕ್ಕೆ ಮಹತ್ವವನ್ನು ಒದಗಿಸಿದ್ದರು; ಬ್ರಾಹ್ಮಣರಿಗೆ ಉಪಜೀವನಕ್ಕೆ ಜೀವನಕ್ಕೆ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದರು. ಬ್ರಾಹ್ಮಣ ಎಂಬ ಪದ ವೇದಗಳ ಭಾಗವೇ ಆಗಿದೆ, ಪ್ರತೀವೇದದಲ್ಲೂ ಬ್ರಾಹ್ಮಣ ಎಂಬ ವಿಭಾಗವಿದೆ-ಇದನ್ನು ಧಾರಣಮಾಡಿಕೊಂಡಿದ್ದ ಆಚಾರವಂತ ವ್ಯಕ್ತಿಯೂ ಬ್ರಾಹ್ಮಣನಾಗಿರುತ್ತಿದ್ದ-ಆಚಾರ ಬ್ರಾಹ್ಮಣ್ಯವೆನಿಸಿತ್ತು. ಓದಿದವರೆಲ್ಲರಿಗೂ ಬರೆಯಲು ಪದಗಳು ಸಿಗುವುದಿಲ್ಲ, ಬರೆಯಬಲ್ಲವರೆಲ್ಲರೂ ಪಂಡಿತರೆನ್ನಲು ಸಾಧ್ಯವಾಗುವುದಿಲ್ಲ, ಪಂಡಿತರಾದವರು ವಾಗ್ಮಿಗಳಾಗಿರಬೇಕೆಂಬುದೇನೂ ಕಟ್ಟುನಿಟ್ಟಲ್ಲ. Thinking capacity & wavelength of my thoughts will definitely differ from others, similarly from one to one it differs. ಕಾಲಾನುಕ್ರಮದಲ್ಲಿ ಜನಸಿದ ಅನೇಕ ಜನ ಪಂಡಿತರು, ಜ್ಞಾನಿಗಳು ತಂತಮ್ಮ ನೇರಕ್ಕೆ ತಮಗೆ ನಿಲುಕಿದ ಅರ್ಥವನ್ನೇ ಸಮರ್ಪಕವೆಂದು ಗ್ರಹಿಸುತ್ತಾ ವೇದಮಂತ್ರಗಳ ಪದಗಳ ಅರ್ಥವ್ಯಾಪ್ತಿಯನ್ನು ಹೇಳತೊಡಗಿದರು. ಕಾಲಾನುಕ್ರಮದಲ್ಲಿ ಅನೇಕ ಮೌಢ್ಯಗಳೂ, ಗೊಡ್ಡು ಸಂಪ್ರದಾಯಗಳೂ ಧರ್ಮಾಚರಣೆಯ ಹೆಸರಿನಲ್ಲಿ [ವೇದೋಕ್ತವಲ್ಲದೇ] ಇಂಥಾ ಬರವಣಿಗೆಗಾರರಿಂದ, ಸಾಹಿತಿಗಳಿಂದ ಸೇರಿಸಲ್ಪಟ್ಟವು.  

ಸಮಾಜದಲ್ಲಿ ಮೇಳೈಸಿದ ಅಜ್ಞಾನ-ಅಂಧಕಾರಗಳ ನಡುವೆಯೇ, ಉತ್ತರ ಭಾರತದಲ್ಲಿ ಸಿದ್ಧಾರ್ಥ ಜನಿಸಿ ಭಗವಾನ್ ಬುದ್ಧನಾದ. ಆಸೆಯೇ ದುಃಖಕ್ಕೆ ಮೂಲ ಕಾರಣ ಮತ್ತು ಅಹಿಂಸಾತ್ಮಕ ಜೀವನವೇ ಸನ್ಮಾರ್ಗ ಎಂದು ಸಮಾಜಕ್ಕೆ ಬೋಧಿಸಿದ.  ಆ ಕಾಲದಲ್ಲೂ ಸಹ ಸಂಪ್ರದಾಯ ಶರಣರು ಬಹಳವಾಗೇ ಇದ್ದರು. ಅನೇಕರು  ಬುದ್ಧನನ್ನು ಅನುಸರಿಸಿದರೂ ಕೆಲವರು ತಮ್ಮ ಹಳೆಯ ಗೊಡ್ಡು ಸಂಪ್ರದಾಯಗಳನ್ನು ಬಿಡಲಿಲ್ಲ. ತೂರಿಕೊಂಡ ಕೆಟ್ಟ ಬರಹಗಳ ಪರಿಣಾಮವಾಗಿ ವೇದ-ನಾದ ಎಲ್ಲಾ ಮರೆತುಹೋಗಿ ಯಾವುದು ಏನು ಎಂಬಂತಹ ವಿಚಿತ್ರಗತಿ ಸಮಾಜದಲ್ಲಿ ಉದ್ಭವವಾಗಿತ್ತು. ಬುದ್ಧನ ನಂತರ ಬೌದ್ಧರಲ್ಲಿ ಹೀನಾಯಾನ ಮತ್ತು ಮಹಾಯಾನ ಎಂಬೆರಡು ಪಂಥಗಳು ಕಾಣಿಸಿಕೊಂಡವು. ಅಷ್ಟಕ್ಕೂ ಸೀಮಿತವಾಗದೇ ಇಂದ್ರಿಯನಿಗ್ರಹವನ್ನು ಆಚರಿಸಲಾಗದ ಮತ್ತು ಲೌಕಿಕ ಸುಖೋಪಭೋಗಗಳನ್ನು ಬಯಸುವ ಒಂದಷ್ಟು ಜನ ಸೇರಿ ವಜ್ರಾಯಾನ ಎಂಬ ಹೊಸ ಪಂಥವನ್ನು ಕಟ್ಟಿದರು. ಕಾಲಾನಂತರದಲ್ಲಿ ಪಂಥಗಳೂ ಮೂಲೆಗುಂಪಾಗಿ ವಜ್ರಾಯಾನದ ಅನುಯಾಯಿಗಳು ಮಾಂಸಭಕ್ಷಣೆ, ಮದಿರೆಯ-ಮಾನಿನಿಯರ ಬಳಕೆಗಳಲ್ಲಿ ತೊಡಗಿಕೊಂಡರು. ಅವರಲ್ಲೇ ಅನೇಕರು ಕಾಪಾಲಿಕರಾದರು ಮಾಂಸಭಕ್ಷಣೆ, ಮದಿರೆ-ಮಾನಿಯರ ಸಂಗ ಬಯಸದ ಕೆಲವರು ಶಾಕ್ತೇಯರಾದರು[ಶಕ್ತಿ ಉಪಾಸಕರು]. ಯಾವುದು ಧರ್ಮ ಯಾವುದು ಅಧರ್ಮ ಎಂಬುದನ್ನು ಜನ ನಿರ್ಧರಿಸಲಾಗದ ಹಂತಕ್ಕೆ ಕೆಟ್ಟ ಸಂಪ್ರದಾಯಗಳು ಬೆಳೆದು ನಿಂತಿದ್ದವು. ಅಂಥಾ ಕಾಲದಲ್ಲಿ ಕೇರಳದ ಕಾಲಟಿಯಲ್ಲಿಮಾನವ ಮಗುವಾಗಿ ಆವಿರ್ಭಸಿದವರೇ ಶ್ರೀ ಶಂಕರಾಚಾರ್ಯರು.[ಅವರ ಜೀವನಗಾಥೆಯನ್ನು ಪ್ರತ್ಯೇಕವಾಗಿ ಚಿಕ್ಕದಾಗಿ ಬರೆಯುತ್ತಲೇ ಬಂದಿದ್ದೇನೆ] ಹೀಗೇ ಸನಾತನ ಧರ್ಮ ಯಾವುದೆಂದು ಯಾರೂ ಎತ್ತಿಹೇಳಲಾಗದ ಸ್ಥಿತಿಯಲ್ಲಿದ್ದಾಗ ಶಂಕರರು ಜನಿಸಿ, ಎಳವೆಯಲ್ಲೇ ಗುರುಕುಲದಲ್ಲಿ ವೇದ-ಶಾಸ್ತ್ರಗಳನ್ನು ಅತ್ಯಾಶ್ಚರ್ಯಕರ ರೀತಿಯಲ್ಲಿ ಓದಿ ಪಂಡಿತರಾಗಿ, ಆತುರಸನ್ಯಾಸವನ್ನು ಸ್ವೀಕರಿಸಿ, ೧೦೦೦ ಮೈಲು ದೂರದಲ್ಲಿದ್ದ ಗೋವಿಂದ ಭಗವತ್ಪಾದರನ್ನು ಕಂಡು-ಸನ್ಯಾಸ ದೀಕ್ಷೆ-ಉಪದೇಶ ಪಡೆದು, ಗುರುವಿನ ಆಜ್ಞೆಯಂತೇ ಕಾಶಿಗೆ ತೆರಳಿ ಬ್ರಹ್ಮಸೂತ್ರಾದಿ ಗ್ರಂಥಗಳಿಗೆ ಭಾಷ್ಯಗಳನ್ನು ಬರೆದರು. [ಭಾಷ್ಯಗಳೆಂದರೆ ಟಿಪ್ಪಣಿ-ಅರ್ಥವಿವರಣೆಗಳು ಎಂದರ್ಥ]      

ಶಂಕರರಿಗೂ ಲೌಕಿಕವಾದ ಅನೇಕ ಸಂದಿಗ್ಧಗಳು ಎದುರಾಗಿದ್ದರೂ ಎಲ್ಲವನ್ನೂ ತನ್ನ ಪ್ರಾತ್ಯಕ್ಷಿಕೆಯಿಂದ ಪರಾಮರ್ಶಿಸಿಕೊಂಡು ಯಾವುದು ಸನಾತನ ಧರ್ಮ? ಏನದರ ಮಹತ್ವ? ಯಾವೆಲ್ಲಾ ಆಧಾರಗಳು-ಸೂತ್ರಗಳು ಅದಕ್ಕಿವೆ? ಯಾವುದನ್ನು ಒಪ್ಪಿ ಆಚರಿಸಬೇಕು? ಯಾವುದು ಸರಿಯಲ್ಲ ? ಇಂತಹ ಸಾವಿರಾರು ಪ್ರಶ್ನೆಗಳಿಗೆ ತಮಗೇ ತಾವು ಉತ್ತರ ಹೇಳಿಕೊಂಡವರು ಶ್ರೀ ಶಂಕರರು. ವ್ಯಾಸರ ಹೆಸರಿನಲ್ಲಿ ರಚಯಿತವಾದ ಪುರಾಣಗಳಿಗೆ ಬಹಳವಾದ ಆದ್ಯತೆಯನ್ನು ಕೊಡದ ಶಂಕರರು ಪ್ರಸ್ಥಾನತ್ರಯಗಳಿಗೇ[ಉಪನಿಷತ್ತುಗಳು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆ] ಜಾಸ್ತಿ ಒತ್ತುಕೊಟ್ಟರು.He was  more of a philosopher rather than a saint.Vision what he had-had wide angle & anyone could approch for anykind of doubt they had on Sanatana Dharma. ಬ್ರಹ್ಮಸೂತ್ರಕ್ಕೆ ಆದಿಶಂಕರರಿಗಿಂತಾ ಮೊದಲೇ ಭರ್ತೃಪ್ರಪಂಚ ಎಂಬ ಮುನಿಬರೆದ ಭಾಷ್ಯವಿತ್ತೆಂದು ಹೇಳಲಾಗುತ್ತದೆ; ಆದರೆ ಆ ಭಾಷ್ಯ ಶಂಕರರಿಗಾಗಲೀ ಅಥವಾ ಅವರ ಮೊದಲಿನ ಶತಮಾನದವರಿಗಾಗಲೀ ಅಥವಾ ನಂತರದ ಶತಮಾನಗಳವರಿಗಾಗಲೀ ಸಿಗಲಿಲ್ಲ. ಅಭಿಪ್ರಾಯಗಳನ್ನು ಸ್ಪಷ್ಟವಾಗಿ ಹೇಳಲು ಪದಗಳು ಇಲ್ಲವಾದ್ದರಿಂದ, ವ್ಯಾಸರ ಕೆಲವು ಒಗಟೊಗಟಾದ ಪದಗಳಿಂದ ಕೂಡಿದ ಸೂತ್ರಗಳಿಗೆ ಆಯಾ ಮತ ಧರ್ಮದವರು ತಂತಮ್ಮ ಸಿದ್ಧಾಂತಗಳಿಗೆ ಅನುಕೂಲವಾಗುವಂತೇ ಅರ್ಥಕಲ್ಪನೆಯನ್ನು ಹಚ್ಚಿದರು. ಪ್ರಾರಂಭದಲ್ಲಿ ಉಪವರ್ಷ ಎನ್ನುವವರು ಪೂರ್ವಮೀಮಾಂಸೆಯು ಸೇರಿದಂತೇ ಇಪ್ಪತ್ತು ಅಧ್ಯಾಯಗಳಿಗೆ ತಮ್ಮ ವ್ಯಾಖ್ಯಾನ ಬರೆದರು. ಭವದಾಸ, ಬೋಧಾಯನ, ಟಂಕ, ದ್ರವಿಡ, ಕಪರ್ದಿ, ಗುಹದೇವ ಇವರೆಲ್ಲಾ ಭಾಷ್ಯಗಳನ್ನು ಬರೆದಿದ್ದಾರೆ. ಆದರೆ ಇವಾವುವೂ ನಮಗಾಗಲೀ ಶಂಕರರಿಗಾಗಲೀ ಲಭ್ಯವಾಗಲಿಲ್ಲ. ಮಂಡನಮಿಶ್ರರು ಶಂಕರಾಚಾರ್ಯರ ಕಾಲದಲ್ಲಿಯೇ ಬ್ರಹ್ಮಸೂತ್ರ ಸಾರಾಂಶವನ್ನು ಬ್ರಹ್ಮಸಿದ್ಧಿಯಲ್ಲಿ ಬರೆದರು. ತತ್ವಜ್ಞಾನಿಗಳಾಗಿ ಶಂಕರರು ಮಂಡಿಸಿದ ತಮ್ಮ ವ್ಯಾಖ್ಯಾನಕ್ಕೆ ಆ ಕಾಲದಲ್ಲಿ ಅಸಂಖ್ಯ ಜನರು ಆಕರ್ಷಿತರಾದರು. ವಿರೋಧಿಗಳಿಗೆ ಪಣವೊಡ್ಡಿ ರುಜುವಾತು ಪಡಿಸುವ ಶಂಕರರ ಚಾತುರ್ಯ ಮತ್ತು ಅವರು ಪಡೆದಿದ್ದ ದಿವ್ಯಶಕ್ತಿಯಿಂದ ಅಳಿದುಹೋಗಿದ್ದ ಸನಾತನ ಧರ್ಮದ ಪುನರುತ್ಥಾನ ಸಾಧ್ಯವಾಯ್ತು. ಅಂತೆಯೇ ಅವೈದಿಕ ಆಚರಣೆಗಳನ್ನು ನಿವಾರಿಸಿ ವೈದಿಕಧರ್ಮ[ವೇದೋಕ್ತ ಜೀವನ ಧರ್ಮ]ವನ್ನು ಪ್ರತಿಷ್ಠಾಪಿಸಿದರು. 

ಶಂಕರರು ವೈದಿಕಧರ್ಮವನ್ನು ಪ್ರತಿಷ್ಠಾಪಿಸಿದ ನಂತರ ಬಂದ ಆಚಾರ್ಯರುಗಳಿಗೆ ಅವರವರ ದಾರಿ ಸುಗಮವಾಗಿತ್ತು. ಶಂಕರರ ನಂತರ ರಾಮಾನುಜಚಾರ್ಯರೂ, ಮಧ್ವಾಚಾರ್ಯರೂ, ವಲ್ಲಭಾಚಾರ್ಯರು, ನಿಂಬಾರ್ಕರ್, ವಿಜ್ಞಾನಭಿಕ್ಷು ಮತ್ತು ಬಲರಾಮ ಉಪಾಧ್ಯಾಯ ಮೊದಲಾದವರು ಭಾಷ್ಯಗಳನ್ನು ಬರೆದು ತಮ್ಮ ತಮ್ಮ ಸಿದ್ಧಾಂತಗಳನ್ನೇ ನಿರೂಪಿಸಿದ್ದಾರೆ. ಇವರಲ್ಲಿ ಶಂಕರರು ನಿರ್ಗುಣ ಬ್ರಹ್ಮವಾದಿಗಳು. ಅದ್ವೈತ ಎಂದರೆ ದ್ವೈತ ನಿಷೇಧ, ಅಂದರೆ ದೇವರು ಒಬ್ಬನೇ ಎಂದರ್ಥ. ರಾಮಾನುಜರು ಮತ್ತು ಮಧ್ವರು ವೈಷ್ಣವ ಮತವನ್ನು ನಂಬಿ, ವಿಷ್ಣುವಿನ ಸರ್ವೋತ್ತಮತ್ವವನ್ನು ಸಾಧಿಸಲು ಅವೈದಿಕವಾದ ಪಾಂಚರಾತ್ರಾಗಮವನ್ನು ಅವಲಂಬಿಸಿದ್ದಾರೆ! ನಿಂಬಾರ್ಕರ್ ಮತ್ತು ವಲ್ಲಭಾಚಾರ್ಯರು ಕೃಷ್ಣನನ್ನೇ ಪರದೈವವೆಂದರು. ವಿಜ್ಞಾನಭಿಕ್ಷುಗಳು ಬ್ರಹ್ಮಸೂತ್ರದಲ್ಲಿ ಸಾಂಖ್ಯಮತವನ್ನು ಖಂಡಿಸಿದ್ದಾರೆ. ಶ್ರೀಕಂಠ ಶಿವಾಚಾರ್ಯರು ಅವೈದಿಕವಾದ ಶೈವಾಗಮವನ್ನು ಅಲವಂಬಿಸಿ ಶಿವನೇ ಶ್ರೇಷ್ಠವೆಂದು ನಿರೂಪಿಸಿದ್ದಾರೆ. ಹೀಗಾಗಿ ಒಂದೇ ಪ್ರಸ್ಥಾನತ್ರಯದ ಮೇಲೆ ಅದ್ವೈತ, ವಿಶಿಷ್ಟಾದ್ವೈತ, ದ್ವೈತ ಪುಷ್ಠಿಮಾರ್ಗ, ಶೈವ ಮೊದಲಾದ ಹಲವು ಮತಗಳು ಹುಟ್ಟಿ ದೇವರ ವಿಷಯದಲ್ಲಿ ಒಂದು ನಿರ್ಣಯವನ್ನು ಕೊಡಲಾರದೇ ಹೋದರು! ವೇದದಲ್ಲಿ ಮೂರ್ತಿಪೂಜೆಯ ಬಗ್ಗೆ ಉಲ್ಲೇಖವಿರುವುದಿಲ್ಲ, ನಿರ್ಗುಣಬ್ರಹ್ಮನ ಮುಖ,ಕೈ-ಕಾಲುಗಳಂತಹ ಹೋಲಿಕೆಯಿದೆಯೇ ಹೊರತು ವಿಷ್ಣುವೆಂದರೆ ಹೀಗೇನೇ: ಆತ ಶಂಖ-ಚಕ್ರ-ಗದಾ-ಪದ್ಮಧಾರಿ ಎಂಬುದಾಗಿ ಎಲ್ಲಿಯೂ ಚಿತ್ರಿಸುವ ಮಾಹಿತಿ ಸಿಗುವುದಿಲ್ಲ. ೧೦ ಪ್ರಧಾನ ಉಪನಿಷತ್ತುಗಳನ್ನು ಬಿಟ್ಟು ಮಿಕ್ಕುಳಿದ ಉಪನಿಷತ್ತುಗಳಿಗೂ ಜ್ಞಾತಿಗಳು ಪ್ರಾಧಾನ್ಯತೆಯನ್ನು ಕೊಡುವುದಿಲ್ಲ. ಹೀಗಿರುವಾಗ  ಶೈವ, ಶಾಕ್ತ, ವೈಷ್ಣವ, ಗಾಣಪತ್ಯ, ಕಾರ್ತಿಕೇಯ, ಕಾಪಾಲಿಕ, ನಾಗ, ಸಾಂಖ್ಯ ಮೊದಲಾದ ಪಂಥ-ಸಿದ್ಧಾಂತಕ್ಕೊಂದೊಂದರಂತೇ ಆಯಾಯ ದೇವರುಗಳನ್ನು ಚಿತ್ರಿಸಿದ್ದರಿಂದಲೂ, ಜನಸಾಮಾನ್ಯರು ಏಕಾಗ್ರತೆಯನ್ನು ಸಾಧಿಸಲು ಅವು ಸಹಕಾರಿಯೆಂಬ ಭಾವದಿಂದಲೂ ಪಥಿಕರು ನಡೆಸುವ ಮೂರ್ತಿಪೂಜೆಯನ್ನು ಶಂಕರರು ಅಲ್ಲಗಳೆಯಲಿಲ್ಲ-ಪುರಸ್ಕರಿಸಿ ಪಂಚಾಯತನ ಪೂಜವಿಧಾನವನ್ನು ಹೇಳಿಕೊಟ್ಟಿದ್ದಾರೆ. ಹೇಳಬೇಕೆಂದರೆ ಶಂಕರರಂತಹ ಬ್ರಹ್ಮಜ್ಞಾನಿಗಳು ತಂದೆಯೊಬ್ಬ ಮಗುವಿನ ಖುಷಿಗಾಗಿ,ತನ್ನ ಮಗುವಿನೊಡನೆ ಮಗುವಾಗಿ ಆಡುವಂತೇ ಪರಬ್ರಹ್ಮ ಸ್ವರೂಪವನ್ನು ಸಾಂಸಾರಿಕರಾದ ನಮ್ಮೆಲ್ಲರ ಸಲುವಾಗಿ ವಿವಿಧ ರೂಪಗಳಲ್ಲಿ ಕಂಡು ಸ್ತುತಿಸಿದ್ದಾರೆ-ಆದರೆ ಅವೆಲ್ಲವುಗಳ ಗಮ್ಯ ಒಂದೇ ಎಂಬುದು ಅಚಾರ್ಯರಿಗೆ ತಿಳಿದಿತ್ತು!   

ಮತಧರ್ಮ, ವಿಜ್ಞಾನ ಮತ್ತು ವೇದಾಂತ ಈ ಮೂರನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾಗಿದೆ. ಪ್ರಮಾಣಪೂರ್ವಕವಾಗಿ ಪರೀಕ್ಷಿಸಿ ವಿಷಯವನ್ನು ಸಮರ್ಥಿಸುವುದು ವಿಜ್ಞಾನ; ಪ್ರಮಾಣವಿಲ್ಲದ್ದನ್ನು ಅದು ಒಪ್ಪುವುದಿಲ್ಲ. ಆದರೆ ತನಗೆ ತಿಳಿಯದೇ ಇರುವ ವಿಷಯಗಳು ಇಲ್ಲವೆಂದೂ ಅದು ಹೇಳುವುದಿಲ್ಲ; ಸದ್ಯಕ್ಕೆ ತಾನು ಒಪ್ಪಿದ್ದನ್ನು ಸಮರ್ಥಿಸುತ್ತದೆ. ಮತ-ಧರ್ಮಗಳು ಹಾಗಲ್ಲ!! ಇದು ಲಂಗು ಲಗಾಮಿಲ್ಲದೇ ಜನಸಾಮಾನ್ಯರಲ್ಲಿ ಬೇರೂರಿ ಅನೇಕ ಮೂಢನಂಬಿಕೆಗಳಿಗೂ, ಆಚರಣೆಗಳಿಗೂ, ಅರ್ಥವಿಲ್ಲದ ತತ್ವಗಳಿಗೂ ಎಡೆಕೊಟ್ಟಿದೆ. ಮತಧರ್ಮವು ವಿಮರ್ಶೆಗೆ ನಿಲ್ಲುವುದಿಲ್ಲ! ಮರಳಿನಲ್ಲಿ ತೋಡಿದ ಹಳ್ಳದಹಾಗೇ ಅದು ಮುಚ್ಚಿಕೊಳ್ಳುತ್ತದೆ. ವೇದಾಂತವು ಹಾಗಲ್ಲ!! ಅದು ವಿಜ್ಞಾನದಿಂದ ತರ್ಕವನ್ನು, ಮತ-ಧರ್ಮಗಳಿಂದ ಹಲವು ನ್ಯಾಯವಾದ ವಿಷಯಗಳನ್ನು ಆರಿಸಿಕೊಂಡು, ಅವುಗಳನ್ನು ತರ್ಕದಿಂದ ಪರಿಶೋಧಿಸಿ-ರೂಪರೇಖೆಗಳನ್ನು ಕೊಟ್ಟು ಜನರಿಗೆ ನಿಖರವಾಗಿ ಇಂಥದು ಎಂದು ಹೇಳುತ್ತದೆ. ವಿಜ್ಞಾನವು ಕೈಬಿಟ್ಟ ಅತೀಂದ್ರಿಯ ಕ್ಷೇತ್ರದಲ್ಲಿಯೂ ವೇದಾಂತವು ಮುನ್ನಡೆದು, ಅನೇಕ ಅಮೂಲ್ಯವಾದ ವಿಷಯಗಳನ್ನು ಬೆಳಕಿಗೆ ತಂದು ಜನರಿಗೆ ಉಪಕಾರಮಾಡಿದೆ! ಅತೀಂದ್ರಿಯಜ್ಞಾನವನ್ನು ಕೇವಲ ಅನುಭೂತಿಯಿಂದ ಅನುಭವಿಸಬಹುದೇ ಹೊರತು ಅದು ತರ್ಕಕ್ಕೆ ನಿಲುಕುವ ಕೆಳಹಂತದಲ್ಲಿರುವುದಿಲ್ಲ. Science can't experiment on such super natural powers which are experienced purely by deep meditation. ಏನೇ ಇರಲಿ, ತಮ್ಮ ಕಾಲಘಟ್ಟದಲ್ಲೇ ಹತ್ತು-ಹಲವು ಪಂಥಗಳ ಅನುಯಾಯಿಗಳನ್ನು ಕಂಡಿದ್ದ ಶಂಕರರು, ಪಥಿಕರಿಗೆ ಪಂಚಾಯತನ ಪೂಜಾವಿಧಾನವನ್ನು ಹೇಳಿದರು; ಬ್ರಹ್ಮಜ್ಞಾನಿಗಳಾದವರಿಗೆ ಪೂಜೆ-ಪುನಸ್ಕಾರ ಮೊದಲಾದ ಕರ್ಮಗಳು ಬೇಡವೇ ಬೇಡವೆಂದರು.

ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನಗಳನ್ನು ಬರೆದದ್ದನ್ನು ಸಮರ್ಥಿಸಿ ಕೊಳ್ಳುವ ಅವರವರ ಅನುಯಾಯಿಗಳ ನಡುವೆ ಪ್ರಜ್ಞಾವಂತ ಜಿಜ್ಞಾಸುಗಳು, ಮುಮುಕ್ಷುಗಳು, ಸಾಧಕರು, ಚಿಂತನಶೀಲರು, ಜ್ಞಾನಿಗಳು, ವಿದ್ವಾಂಸರು, ಅನುಭಾವಿಗಳು ಶಂಕರರು ಬರೆದ ಬ್ರಹ್ಮಸೂತ್ರ ಭಾಷ್ಯವನ್ನು ತಗಾದೆಯಿಲ್ಲದೇ ಒಪ್ಪಿದ್ದಾರೆ. ಸಂಕುಚಿತ ಸ್ವಭಾವದ, ಸಿದ್ಧಾಂತಿಗಳ ಅನುಯಾಯಿಗಳು ಮಾತ್ರ ವ್ಯಕ್ತಿ ಪೂಜೆ ಮತ್ತು ಅವರ  ಗುರುಗಳು ಹೇಳಿದ ಮೂರ್ತಿಪೂಜೆಯಲ್ಲೇ ತಲ್ಲೀನರಾಗುತ್ತಾ ತತ್ವವಿಷಯಗಳನ್ನು ಪ್ರಸ್ಥಾನತ್ರಯಗಳಿಗೂ ಹೊರತಾದ ಮತ್ತು ಅವೈದಿಕವಾದ ಧೋರಣೆಯಿಂದ ತುಲನೆಮಾಡಿಕೊಂಡು ತಮ್ಮದೇ ಸತ್ಯವೆಂದೂ ಶಾಂಕರಭಾಷ್ಯ ಸರಿಯಿಲ್ಲವೆಂದೂ ದೂಷಿಸುತ್ತಾರೆ. ಶಂಕರರ ದೃಷ್ಟಿಕೋನ ಸಂಕುಚಿತವಾಗಿರಲಿಲ್ಲ, ಅವರ ಜಿಹ್ವೆಯಲ್ಲಿ ಸರಸ್ವತಿ ಸದಾ ನೆಲೆನಿಂತಿದ್ದು ’ಅಸ್ತಿಕಸ್ಚಿದ್ವಾಗ್ವಿಶೇಷಃ ’ ಎಂಬಂತೇ ಶಂಕರರ ವಾಗ್ವೈಖರಿಯಲ್ಲಿ ಮತ್ತು ಪಾಂಡಿತ್ಯಪೂರ್ಣ ವಿಷಯ ಸಮರ್ಥನೆಯಲ್ಲಿ ಎದುರಾಳಿಗಳಾಗಿ ಬಂದವರು ಸಣ್ಣಗಾಗುತ್ತಿದ್ದರು. ಸಮೂಹ ಮಾಧ್ಯಮಗಳೇ ಇಲ್ಲದ ಆ ಕಾಲಘಟ್ಟದಲ್ಲಿ ಜಗದ್ಯಾಪಿ ಈ ಬಾಲಸನ್ಯಾಸಿಯ ಸುದ್ದಿ ಹಬ್ಬಿತ್ತು! ಅಖಂಡ ಭಾರತವನ್ನು ಕಾಲ್ನಡಿಗೆಯಲ್ಲೇ ಹಲವುಬಾರಿ ಸುತ್ತಿದರು-ಎಲ್ಲಿಯೂ ಶಂಕರರು ಬರದೇ ಹೋದ ಜಾಗವಿಲ್ಲ!! ಜಗನ್ಮಿಥ್ಯಾವಾದದ ವಿರುದ್ಧವಾಗಿ ಹಲವು ಜನ ವಾದಿಸಿದರೂ, ಶಂಕರರ ಸಿದ್ಧಾಂತ ಸರಿಯಿದೆಯೆಂಬುದಕ್ಕೆ ಇಂದಿಗೂ ಹಲವು ಉದಾಹರಣೆಗಳು ಸಿಗುತ್ತವೆ. ಶಾಸ್ತ್ರ ಹೇಳುತ್ತದೆ: ಚಂದ್ರ ದೊಡ್ಡದಾಗಿದ್ದಾನೆ ಎಂದು, ಆದರೆ ನಮ್ಮಕಣ್ಣಿಗೆ ಕಾಣುವ ಚಂದ್ರ ರೊಟ್ಟಿಯ ಆಕಾರದಷ್ಟಿದ್ದಾನೆ ಅಷ್ಟೇ! ಹಾಗಾದರೆ ನಾವು ನೋಡಿದ ಚಂದ್ರನ ಗಾತ್ರ ದೊಡ್ಡದೇ? ಅಲ್ಲ, ಚಂದ್ರ ಗಾತ್ರದಲ್ಲಿ ನಾವು ನೋಡಿರುವುದಕ್ಕಿಂತ ದೊಡ್ಡದಾಗಿಲ್ಲವೇ? ಇದ್ದಾನೆ. ಎಂದಮೇಲೆ ಶಾಸ್ತ್ರ ಸರಿಯೆಂದಾಯ್ತು. ನೀರಿನ ಲೋಟದ ತಳದಲ್ಲಿ ಬಿದ್ದಿರುವ ನಾಣ್ಯವನ್ನು ಮೇಲಿಂದ ನಾವು ಬೆರಳಿಟ್ಟು ಹುಡುಕುವಾಗ ನಾಣ್ಯ ಇದೆಯೆಂದು ಗೋಚರವಾದ ಸ್ಥಳಕ್ಕಿಂತಾ ಆಚೀಚಿನ ಜಾಗದಲ್ಲಿ ನಾಣ್ಯ ಇರುತ್ತದಲ್ಲಾ!  ಜಾಗ್ರತ್, ಸುಷುಪ್ತಿ, ಸ್ವಪ್ನ ಎಂಬ ಅವಸ್ಥಾತ್ರಯಗಳಲ್ಲಿ ಎಚ್ಚರವಿರುವಾಗ[ಜಾಗ್ರತ್] ಮತ್ತು ಸ್ವಪ್ನದಲ್ಲಿರುವಾಗ ನಾವು ದ್ವೈತವನ್ನು ಅನುಭವಿಸುತ್ತೇವೆ, ಆದರೆ ಗಾಢನಿದ್ರೆಯಲ್ಲಿ[ಸುಷುಪ್ತಿ]ಯಲ್ಲಿರುವಾಗ ಅದು ಅದ್ವೈತವಾಗಿರುತ್ತದೆ!

ಅಂದಹಾಗೇ ದೀರ್ಘವಾಗುತ್ತಿರುವ ಈ ಲೇಖನವನ್ನು ಮುಗಿಸುವ ಪ್ರಯತ್ನವಾಗಿ ಮತ್ತು ತಲೆಬರಹಕ್ಕೆ ವಿಶ್ಲೇಷಣೆ ನೀಡುವ ಸಲುವಾಗಿ ಮುಂದೆ ಸಾಗುತ್ತಿದ್ದೇನೆ: ತಮ್ಮ ತಮ್ಮ ಮತಗಳಲ್ಲಿ ಒಂದೇ ದೇವರು, ಮತ್ತು ಜಾತಿಭೇದಗಳಿಲ್ಲ-ಎಲ್ಲರೂ ಒಂದೇ-ಎಲ್ಲರಿಗೂ ಸಮಾನತೆ-ಸಮಾನ ಅವಕಾಶ ಎಂಬ ಅಸ್ತ್ರವನ್ನು ತೂರಿಬಿಟ್ಟ  ಮ್ಲೇಚ್ಛರು ಮತ್ತು ಯವನರು ಅವಿದ್ಯೆಯಿಂದ ಬಳಲುತ್ತಿದ್ದ ಸನಾತನಿಗಳ ಮನಸ್ಸಿಗೆ ಮೋಡವನ್ನು ಕವಿಸಿಬಿಟ್ಟರು; ತಮ್ಮ ಮಾರ್ಗವನ್ನು ಸರಿಯಾಗಿ ಅರಿಯಲಾರದ ಸನಾತನಿಗಳಲ್ಲಿ ಅನೇಕರು ಮ್ಲೇಚ್ಛರ ಬಲವಂತಕ್ಕೆ, ಬಲಾತ್ಕಾರಕ್ಕೆ ಬಗ್ಗಿ, ಹೆದರಿ ಅವರ ಮತಕ್ಕೆ ಸೇರಿಕೊಂಡರು; ಇನ್ನೂ ಕೆಲವರು ತಮ್ಮ ಆರ್ಥಿಕ ಹೀನಾಯಸ್ಥಿತಿ ಸುಧಾರಿಸಬಹುದೆಂದು ಮದರಸಾದಿಂದ ಕಳಿಸಿದ ಏಜೆಂಟರುಗಳು ಹೇಳಿದ್ದನ್ನು ಕೇಳಿ ಅವರ ಜೊತೆ ಮುಸ್ಲಿಮರಾಗಿ ಮತಾಂತರಗೊಂಡರು! ಈ ಮತಾಂತರ ಪ್ರಕ್ರಿಯೆ ಕೆಲವು ಮತಾಂಧರ ಸಂಚಾಲಕತ್ವದಲ್ಲಿ ಚಾಲನೆಯಲ್ಲೇ ಉಳಿಯಿತು. ೧೨ನೇ ಶತಮಾನದ ನಂತರ ಭಾರತದ ಬಹುಭಾಗಗಳಲ್ಲಿ ಮ್ಲೇಚ್ಛರು ವ್ಯಾಪಿಸುತ್ತಾ ಹೋದರು, ಅಕ್ಬರ್, ಬಾಬರಿ ಮೊದಲಾದ ಮ್ಲೇಚ್ಛ ದೊರೆಗಳ ಕಾಲದಲ್ಲಿ ಮತಾಂತರ ಹೇರಳವಾಗಿ ನಡೆಯಿತು. ೧೪ನೇ ಶತಮಾನದಲ್ಲಿ ಅಕ್ಬರ್ ಆಳುತ್ತಿದ್ದಾಗ ಅಖಂಡ ಭಾರತದ ಜಮ್ಮು-ಕಾಶ್ಮೀರದಲ್ಲಿ ಶಾರದಾ-ಸರ್ವಜ್ಞಪೀಠವಿತ್ತು. ಹೇರಳವಾಗಿ ಕಾಶ್ಮೀರಿ ಪಂಡಿತರು ಅಲ್ಲಿ ನೆಲೆಸಿದ್ದರು. ಜೊತೆಗೆ ಅನ್ಯ ಸನಾತನ ಜಾತಿಗಳವರೂ ಇದ್ದರು. ಅಲ್ಲೊಂದು ಸಂಸ್ಕೃತ ವಿಶ್ವವಿದ್ಯಾನಿಲಯವಿತ್ತು, ಜನ ಜ್ಞಾನಾಕಾಂಕ್ಷಿಗಳಾಗಿದ್ದರು. ಅನೇಕರು ಸಾಧಕರೂ ಆಗಿದ್ದು ಶಾರದಾ ದೇವಸ್ಥಾನದ ಸಮೀಪವಿರುವ ನದಿಯಲ್ಲಿ ಹುಣ್ಣಿಮೆ ಮತ್ತು ಅಮಾವಾಸ್ಯೆಯ ರಾತ್ರಿಗಳಲ್ಲಿ ಅತೀಂದ್ರಿಯ ಶಕ್ತಿಯ ವಿಚಿತ್ರ ಆಟಗಳು ಗೋಚರಿಸಿರುವುದಾಗಿ ಅಕ್ಬರನ ಆಸ್ಥಾನಿಕನಾಗಿದ್ದ ಅಮೀರ್ ಖುಸ್ರು ಎಂಬ ಮ್ಲೇಚ್ಛಮಂತ್ರಿಯೊಬ್ಬ ದಾಖಲಿಸಿದ್ದಾನೆ. ಕಾಲಾನಂತರದಲ್ಲಿ ಮ್ಲೇಚ್ಛರ ಸತತವಾದ ದಾಳಿಗಳಿಂದ ಜಮ್ಮು-ಕಾಶ್ಮೀರದ ನಿವಾಸಿಗಳು ಬಲಾತ್ಕಾರಕ್ಕೊಳಪಟ್ಟು ಮುಸ್ಲಿಂ ಮತವನ್ನು ಸ್ವೀಕರಿಸಬೇಕಾಗಿ ಬಂತು. ೪-೫ ಶತಮಾನಗಳ ಹಿಂದೆ ಹಾಗೆ ಮತಾಂತರಗೊಂಡ, ಮೂಲ ಕಾಶ್ಮೀರಿ ಪಂಡಿತರಾಗಿದ್ದು-ಈಗ ಮುಸ್ಲಿಮರಾಗಿರುವ ಕುಟುಂಬದಲ್ಲೇ ಉಗ್ರ ಅಫ್ಜಲ್ ಗುರು ಜನಿಸಿದ್ದ!! ತನ್ನನ್ನು ಬಂಧಿಸಿಟ್ಟ ಜೈಲಿನ ಸುಪರಿಂಟೆಂಡೆಂಟ್ ಆದ ದ್ವಿವೇದಿಯವರನ್ನೂ ಬ್ರೇನ್ ವಾಶ್ ಮಾಡಿ ಇಸ್ಲಾಂ ಮತಕ್ಕೆ ಮತಾಂತರಗೊಳ್ಳುವಂತೇ ಆತ ಪ್ರೇರೇಪಿಸುತ್ತಿದ್ದನಂತೆ! ಸಪ್ಟೆಂಬರ್ ೨೦೧೧ರಲ್ಲಿ ದ್ವಿವೇದಿಯವರೊಟ್ಟಿಗೆ ಮಾತನಾಡುತ್ತಾ ತನ್ನ ಪೂರ್ವಜರು ಬ್ರಾಹ್ಮಣರೇ ಆಗಿದ್ದರು ಎಂಬುದನ್ನಾತ ಒಪ್ಪಿದ್ದಾನೆ. ಮುಸ್ಲಿಮರ ಮತಾಂತರ ಮನೋವ್ಯಾಧಿ ಈ ರೀತಿ ಹಬ್ಬುತ್ತಲೇ ಇರುತ್ತದೆ! ದ್ವಿವೇದಿಗಳು ಪರಿವರ್ತಿತರಾಗಲಿಲ್ಲ ಎಂಬುದು ಗಮನಾರ್ಹ! ಹಿಂದೆ,  ಗಲ್ಲಿಗೇರಿಸಲ್ಪಟ್ಟ ಇನ್ನೊಬ್ಬ ಕಾಶ್ಮೀರಿ ಮಕ್ಬೂಲ್ ಭಟ್ ಕೂಡ ಅದೇ ರೀತಿ.         

ಅನೇಕಕಡೆ ನನ್ನಲ್ಲಿ "ನಿಮ್ಮ ಹೆಸರು ಭಟ್ ಅಂತ ಅಂದ್ರೆ ನಿಮ್ಮ ಕುಟುಂಬದವರು ಅಡುಗೆಭಟ್ಟರಾ?" ಎಂದು ಕೇಳಲೋ ಬೇಡವೋ ಎಂಬ ಅಳುಕಿನಲ್ಲೇ ಕೇಳಿದವರೂ ಇದ್ದಾರೆ. ಭಟ್ಟ, ವಟ್ಟ, ವಟ್ಟಂ, ಭಟ್ಟರ್ ಇವೆಲ್ಲಾ ಪ್ರಾದೇಶಿಕವಾಗಿ, ವೇದಾಧ್ಯಯನ ಮಾಡಿದ ಪಂಡಿತರ ಕುಟುಂಬಗಳನ್ನು ಗುರುತಿಸುವ ಸಲುವಾಗಿ ಇಟ್ಟ ಕುಲಸೂಚಕ ಹೆಸರುಗಳು. ಕಾಶ್ಮೀರದಲ್ಲಿರುವ ಮುಸ್ಲಿಮರಲ್ಲೂ ’ಭಟ್’ ಎನ್ನುವ ಸರ್ ನೇಮ್ ಅಥವಾ ಕುಲಸೂಚಕ ಪದ ಇದ್ದರೆ ಅವರು ಶತಮಾನಗಳ ಹಿಂದೆ ಸನಾತನೀ ಬ್ರಾಹ್ಮಣರಾಗಿದ್ದು ಮ್ಲೇಚ್ಛರ ದಬ್ಬಾಳಿಕೆ ಸಹಿಸಲಾಗದೇ ಬಲಾತ್ಕಾರಕ್ಕೊಳಗಾಗಿ ಮತಾಂತರಗೊಂಡ ಜನ ಎಂದು ತಿಳಿಯಬೇಕು. ಅದರಲ್ಲೂ ೩ ಲಕ್ಷಕ್ಕೂ ಅಧಿಕ ಕಾಶ್ಮೀರಿ ಪಂಡಿತರು ನಿರಾಶ್ರಿತರಾಗಿ ದೇಶವ್ಯಾಪಿ ಚದುರಿಹೋಗುವ ಮುನ್ನ ಅವರ ಮುಂದಿದ್ದ ಆಯ್ಕೆಗಳು ಎರಡೇ: ಒಂದೋ ಉಗ್ರರು ಹೇಳಿದಹಾಗೇ ಮತಾಂತರಗೊಂಡು ಮದರಸಾಗಳಲ್ಲಿ ಖುರಾನ್ ಪಠಿಸುತ್ತಾ ಮತ್ತಷ್ಟು ಜನರ ಮತಾಂತರಕ್ಕೆ ಸಹಕರಿಸಬೇಕು ಅಥವಾ ತಮ್ಮ ವಸಾಹತುಗಳನ್ನು ಬಿಟ್ಟು ಕಾಶ್ಮೀರ ತ್ಯಜಿಸಿ ಭಾರತದ ಇತರ ಪ್ರದೇಶಗಳಿಗೋ ಬೇರೇ ರಾಷ್ಟ್ರಗಳಿಗೋ ತೆರಳಬೇಕು-ಇಂಥಾ ಅನಿವಾರ್ಯತೆಯಲ್ಲಿ, ತಮ್ಮ ಮನೆ-ಮಠ-ದನಕರು ಮಿಕ್ಕುಳಿದ ಸ್ಥಿರ-ಚರ ಸ್ವತ್ತನ್ನೆಲ್ಲಾ ಬಿಟ್ಟು ಹಗಲೂ ರಾತ್ರಿಯೆನ್ನದೇ ಗುಂಪುಗುಂಪಾಗಿ ಇಂಡಿಯಾ ಆಗಿರುವ ಭಾರತದ ದಕ್ಷಿಣಮುಖವಾಗಿ ಓಡಿಬಂದರು. ಮತಾಂತರಗೊಳ್ಳದೇ ಸ್ಥಳವನ್ನೂ ತೊರೆಯದೇ ತಮ್ಮದೇ ಹಠದಲ್ಲಿರುವ ಪಂಡಿತರ ಕುಟುಂಬಗಳ ಸದಸ್ಯರನ್ನು ಉಗ್ರರು ಗುಂಡಿಟ್ಟೋ, ಕತ್ತರಿಸಿಯೋ ಸಾಯಿಸಿದ್ದಾರೆ. ಅವರ ಜಾನುವಾರುಗಳನ್ನು ಅವರೆದುರೇ ಕತ್ತರಿಸಿ ತಿಂದು ತೇಗಿ ಕೇಕೇ ಹಾಕಿ ಕುಣಿದಿದ್ದಾರೆ. ಪಾಲಕರನ್ನು ಕಳೆದುಕೊಂಡ ಎಳೆಯಮಕ್ಕಳ, ಗಂಡಂದಿರನ್ನು ಕಳೆದುಕೊಂಡ ಮಡದಿಯರ, ಮಗ-ಸೊಸೆ-ಮಗಳು-ಅಳಿಯಂದಿರನ್ನು ಕಳೆದುಕೊಂಡು ಮುಪ್ಪಿನಲ್ಲಿ ದುಡಿಯಲಾರದೇ ಉಪವಾಸ ಬೀಳಬೇಕಾಗಿ ಬಂದ ವೃದ್ಧ ದಂಪತಿಗಳ ಗೋಳಿನ ಕಥೆ ಹೇಳತೀರದ್ದಲ್ಲ. ಮಾತೆತ್ತಿದರೆ ಗೋಧ್ರಾ ಹಾಗೆ ಹೀಗೆ ಎನ್ನುವ ಇಂಡಿಯಾವಾಸಿ ಹಿಂದೂ ಎಡಪಂಥೀಯರಿಗೆ ಇಂಥದ್ದು ಕಣ್ಣಿಗೆ ಕಂಡರೂ ಕಾಣುವುದಿಲ್ಲ! ಇಷ್ಟೆಲ್ಲಾ ಅನಾಹುತಕ್ಕೆ ಮೂಲಕಾರಣ ಸನಾತನಿಗಳನೇಕರಲ್ಲಿನ ಅವಿದ್ಯೆ-ಅಜ್ಞಾನ ಎಂಬುದನ್ನು ನಾವಿಂದು ಮನಗಾಣಬೇಕಿದೆ; ಇಂದಿಗೂ ಸನಾತನಿಗಳಲ್ಲಿದ್ದು ’ಬುದ್ಧಿಜೀವಿಗಳೆ’ಂದು ಬೋರ್ಡು ಅಂಟಿಸಿಕೊಂಡು, ಬಗಲುಚೀಲ-ದೊಗಳೆ ಬಟ್ಟೆ-ದಪ್ಪ ಫ್ರೇಮಿನ ಕನ್ನಡಕ ತೊಡುವ ಈ ಜನ, ಜಗತ್ತಿನಲ್ಲಿಯೇ ಅತಿ ಶ್ರೇಷ್ಠವಾದ ಸನಾತನ ಜೀವನ ಧರ್ಮವನ್ನು ಅರಿಯದೇ ಹಳಿಯುತ್ತಾರೆ; ಮ್ಲೇಚ್ಛರನ್ನು ಬೆಂಬಲಿಸುತ್ತಾರೆ-ಅವರ ಅವಿದ್ಯೆಗೆ ಮರುಗೋಣವೇ? ಕಂಬನಿಗರೆಯೋಣವೇ? ಅಥವಾ ನಕ್ಕು ಸುಮ್ಮನಾಗೋಣವೇ? 

7 comments:

 1. ದಯೆಯೆ ಧರ್ಮ ದಾಕ್ಷಿಣ್ಯ ಪರನು ನಾನಲ್ಲ |
  ಲೋಕ ವಿರೋಧ ಶರಣನಾರಿಂಗಂಜುವನಲ್ಲ |

  ReplyDelete
  Replies
  1. ಗೋಪ್ರೇಮಿಯೇ ನಿಜವಾದ ಭಾರತೀಯ ಎನ್ನುತ್ತದೆ ಸನಾತನ ಧರ್ಮ. ಗೋವನ್ನು ವಧಿಸುವವರನ್ನು ಮರ್ದಿಸು, ಗೋವಿಗಾಗಿ ಹೋರಾಡಿ ಪ್ರಾಣತ್ಯಜಿಸಿದರೆ ಅಂಥವನ ಆತ್ಮ ಸೂರ್ಯನ ಮೂಲಕ ಸಾಗಿ ನೇರವಾಗಿ ಪರಬ್ರಹ್ಮನನ್ನು ಸೇರುವುದಂತೆ! ಇದು ಋಷಿಪ್ರಣೀತ ಸಂದೇಶ, ಅಂಥಾ ವೀರರು ನಾವಾಗೋಣ, ಸನಾತನ ಧರ್ಮಕ್ಕಾಗಿ ಬದುಕೋಣ, ಧನ್ಯವಾದ

   Delete
 2. Dear V R Bhat,

  Very much impressed with the way you explained some of the complex things in a very simple manner. Veda's or Shruti's are the blood of Sanaatana Dharma, which talks about universal acceptance, at the same time standing for right thing at the cost of life, if the situation exists (as it is been preached to Arjuna in Bhagavadgeeta - Nothing should stop us from speaking truth and acting to bring justice). Thanks and Congratulations for a beautiful write up.

  Regards,
  Vinayaka

  ReplyDelete
  Replies
  1. ಧನ್ಯವಾದ ವಿನಾಯಕರೇ, ಇರುವ ಪ್ರಾಮಾಣಿಕ ವಿಷಯವನ್ನು ಹೇಳಲು ಇದೊಂದು ಪ್ರಯತ್ನ

   Delete
 3. ಭಟ್ರೆ ಮಾಹಿತಿಗಾಗಿ ಧನ್ಯವಾದಗಳು...ಅದ್ವೈತದ ನಿಮ್ಮ ವಿಶ್ಲೇಷಣೆಗೆ ನನ್ನ ಸಹಮತವಿದೆ. ಆದರೆ ಅದನ್ನು ತಿಳಿಯದೇ ತಮ್ಮತಮ್ಮಲ್ಲೇ ಕಚ್ಚಾಡುತ್ತಿರುವ ಬ್ರಾಹ್ಮಣರ ಬಗ್ಗೆ ಬೇಸರವೂ ಇದೆ. ಪ್ರತಿಯೊಬ್ಬ ವಿಗ್ರಹಾರಾಧಕ ದ್ವೈತಿಯೇ. ಯಾವಾಗ ಧ್ಯಾನದ ಅಂತಿಮ ಸ್ಥಿತಿಯನ್ನು ವ್ಯಕ್ತಿ ತಲುಪಿದಾಗ ಅವನು ಅದ್ವೈತಿ ಆಗುತ್ತಾನೆ ಎಂಬುದು ನಾನು ಅರ್ಥೈಸಿಕೊಂಡ ರೀತಿ.

  "ಶಾರದಾ ದೇವಸ್ಥಾನದ ಸಮೀಪವಿರುವ ನದಿಯಲ್ಲಿ ಹುಣ್ಣಿಮೆ ಮತ್ತು ಅಮಾವಾಸ್ಯೆಯ ರಾತ್ರಿಗಳಲ್ಲಿ ಅತೀಂದ್ರಿಯ ಶಕ್ತಿಯ ವಿಚಿತ್ರ ಆಟಗಳು ಗೋಚರಿಸಿರುವುದಾಗಿ ಅಕ್ಬರನ ಆಸ್ಥಾನಿಕನಾಗಿದ್ದ ಅಮೀರ್ ಖುಸ್ರು ಎಂಬ ಮ್ಲೇಚ್ಛಮಂತ್ರಿಯೊಬ್ಬ ದಾಖಲಿಸಿದ್ದಾನೆ."
  ಇದರ ಕನ್ನಡ,ಹಿಂದಿ ಅಥವಾ ಆಂಗ್ಲ ಅನುವಾದ ಸಿಗಬಹುದೆ. ಎಲ್ಲಿ ಸಿಗಬಹುದು ದಯವಿಟ್ಟು ತಿಳಿಸುತ್ತೀರಾ...

  ReplyDelete