ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, January 18, 2013

ಇಂಡಿಯಾ ಅಲ್ಲ ಭಾರತ-ನನ್ನ ಜನ್ಮ ಸಿದ್ಧ ಹಕ್ಕು.

ಚಿತ್ರಋಣ : ಅಂತರ್ಜಾಲ
ಇಂಡಿಯಾ ಅಲ್ಲ ಭಾರತ-ನನ್ನ ಜನ್ಮ ಸಿದ್ಧ ಹಕ್ಕು.

ವಿಬುಧಂ ಸಜ್ಜನ ಸೇವಿತಂ ಭಯಹರಂ ಮಗಧಾಧಿಪಂ ಸುಂದರಂ
ಸಬಲಂ  ಸಾಧುಜನೋಪಜೀವನ ಸಖಂ ಸುಗುಣಾಂತರಂಗಪ್ರಿಯಂ |
ಸುಭಗಂ ಭಾರತ ದೇಶ ರಕ್ಷಕನೃಪಂ ಸನ್ಮಿತ್ರ-ಸುಖದಾಯಿನಂ
ಪ್ರಭವಂ ರಾಜಸಶ್ರೇಷ್ಠ ರಾಜಮುದಿತಂ ಶ್ರೀಖಾರವೇಲಾಖ್ಯಕಂ ||    

ಸ್ವರಚಿತ ಸಂಸ್ಕೃತ ಶ್ಲೋಕದೊಂದಿಗೆ ರಾಜಾ ಖಾರವೇಲನಿಗೆ ವಂದಿಸಿದ್ದೇನೆ. ಮಗಧ ಸಾಮ್ರಾಜ್ಯದಲ್ಲಿ ಪ್ರಾಗೈತಿಹಾಸದಲ್ಲಿ ಕಾಣುವ ಮಾಗಧ ಅಥವಾ ಜರಾಸಂಧನೊಬ್ಬನನ್ನು ಬಿಟ್ಟರೆ ಮಗಧ ಒಂದು ಉತ್ತಮ ಸಾಮ್ರಾಜ್ಯವಾಗಿತ್ತು. ಅಲ್ಲಿನ ದೊರೆಗಳು ಸಬಲರೂ ಸಶಕ್ತರೂ ಆಗಿದ್ದರು. ರಾಜಾ ಖಾರವೇಲನ ಬಗ್ಗೆ ಹಿಂದೊಮ್ಮೆ ಹೇಳಿದ್ದೇನೆ; ಆತನೊಬ್ಬ ಭಾರತದೇಶ ಭಕ್ತ. ತನ್ನ ಸೋಲು ಗೆಲುವಿಗಿಂತಲೂ, ತನ್ನ ಸಾಮ್ರಾಜ್ಯ ವಿಸ್ತರಣೆಗಿಂತಲೂ ಚಪ್ಪನ್ನೈವತ್ತಾರು ದೇಶಗಳಿಂದೊಡಗೂಡಿದ ಭವ್ಯ ಭಾರತ ಎಂದಿಗೂ ಪರಕೀಯರ, ಅನ್ಯ ಖಂಡೀಯರ, ಅನ್ಯಧರ್ಮೀಯರ ವಶವಾಗಬಾರದು ಎಂಬುದು ಆತನ ಘನ ಉದ್ದೇಶವಾಗಿತ್ತು. ಆತನ  ಆ ಶಕೆ ಇರುವವರೆಗೆ, ಆತ ಜೀವಿತದಲ್ಲಿರುವವರೆಗೆ ಭಾರತದಲ್ಲಿ ಪರಕೀಯರಿಗೆ ಸ್ಥಾನ ಸಿಗದಂತೇ ನೋಡಿಕೊಂಡ ಮಹಾನುಭಾವ. ರಾಜನೆಷ್ಟು ಸುಂದರನಾಗಿದ್ದನೋ ಅವನ ಮನಸ್ಸೂ ಕೂಡ ಅಷ್ಟೇ ಅಥವಾ ಅದಕ್ಕೂ ಅಧಿಕತಮ ಸುಂದರವಾಗಿತ್ತು. ರಾಮರಾಜ್ಯದಂತಹ ರಾಜ್ಯ ಅದೆಂದು ಹೇಳಬಹುದು. ಆತನ ಕಾಲಾನಂತರ ಮಗಧವನ್ನು ಬಿಂದುಸಾರ ಆಳಿದ, ನಂತರ ಆತನ ಮಗ ಅಶೋಕ ಆಳಿದ. ಅಶೋಕನಲ್ಲಿ ಹರೆಯದ ರಕ್ತ ಉಕ್ಕಿ ಹರಿಯುವ ವೇಳೆ ಕಳಿಂಗದ ಮೇಲೂ ಮತ್ತು ಭಾರತದ ಹಲವು ರಾಜ್ಯಗಳಮೇಲೂ ಆತ ದಾಳಿ ನಡೆಸಿದ. ಶಾಂತಿಪ್ರಿಯವಾಗಿದ್ದ ಕಳಿಂಗ ರಕ್ತಸಿಕ್ತವಾಯ್ತು; ಯುದ್ಧಭೂಮಿಯಲ್ಲಿ ಲಕ್ಷೋಪಲಕ್ಷಜನ ಸತ್ತರು. ಕೈಕಾಲು ಕಳೆದುಕೊಂಡು ನರಳಾಟದಲ್ಲಿ ತೊಡಗಿದ ಸೈನಿಕರನ್ನೂ ಅರೆಜೀವವಾಗಿ ಬಿದ್ದ ಸಹಸ್ರ ಸಹಸ್ರ ಸೈನಿಕರನ್ನೂ ಯುದ್ಧಭೂಮಿಯಲ್ಲಿ ಕಂಡ ಅಶೋಕ ಅದೇ ತನ್ನ ಕೊನೆಯ ಯುದ್ಧವೆಂತಲೂ ಇನ್ನುಮೇಲೆ ಯುದ್ಧಮಾಡುವುದಿಲ್ಲವೆಂತಲೂ ಪ್ರತಿಜ್ಞೆ ಕೈಗೊಂಡ. ಸಾಮ್ರಾಟ ಅಶೋಕನ ತರುವಾಯದ ತಲೆಮಾರು ಮಗಧವನ್ನಾಳುವಾಗ ಮತ್ತೆ ಕದನಗಳು ಘಟಿಸಿದವು. ಅದಾಗಲೇ ಭಾರತಕ್ಕೆ ಮ್ಲೇಚ್ಛರ ಆಗಮನವಾಗಿತ್ತು! 

ವಿಬುಧಜನರು ಇನ್ನೊಂದು ಜನಾಂಗದ ವಿಷಯಗಳನ್ನು ದೋಷಗಳನ್ನು ಇಷ್ಟಪಟ್ಟು ಬರೆಯುವುದಿಲ್ಲ, ಅಂಥಾ ಸಾರಸ್ವತರ ಕ್ಷಮೆಕೋರಿ ಭಾರತದ ಈಗಿನ ಕಥೆಯನ್ನು ನಿಮ್ಮ ಮುಂದಿಡಬೇಕಾಗಿದೆ-ಅದು ಅನಿವಾರ್ಯ. ೬ನೇ ಶತಮಾನಕ್ಕೂ ಮೊದಲು ಈ ಪ್ರಪಂಚದಲ್ಲಿ ಮ್ಲೇಚ್ಛ ಜನಾಂಗವೆಂಬುದು ಇರಲೇ ಇಲ್ಲ! ಅನಿರೀಕ್ಷಿತವಾಗಿ ಹುಟ್ಟಿದ ಜನಾಂಗ ಅಷ್ಟೇ ಅಬ್ಬರದಲ್ಲಿ ಬೆಳೆದಿದೆ, ಬೆಳೆಯುತ್ತಿದೆ, ಬೆಳೆಯುತ್ತದೆ ಮತ್ತು ಅಷ್ಟೇ ಬೇಗ ಈ ಜಗತ್ತಿನಿಂದ ಮಾಯವಾಗುತ್ತದೆ. ಗೀತೆಯಲ್ಲಿನ ಒಂದು ಮಾತು ನೆನಪಿಗೆ ಬರುತ್ತಿದೆ: ಯಾವ ಧರ್ಮ ಸಹನಾ ಶಕ್ತಿಯನ್ನು ಅತಿಯಾಗಿ ಹೊಂದಿದೆಯೋ ಅದು ಬಾಳುತ್ತದೆ ಮತ್ತು ತನ್ನದಲ್ಲದ್ದರ ಹೊರೆ, ಆಘಾತಗಳನ್ನು ಸಹಿಸಿಕೊಂಡೂ ಅದು ಬದುಕುತ್ತದೆ-ಎಂಬುದು, ನಿಜ. ಸತ್ಯಯುಗದಲ್ಲಿ ಪ್ರಪಂಚವೇ ಸನಾತನವಾಗಿತ್ತು, ನಾಲ್ಕು ಕಾಲಿನ ಮಂಚದ ಒಂದು ಕಾಲಿನ ಕೀಲು ಮುರಿದಾಗ ತ್ರೇತಾಯುಗ ಬಂತು. ಆಗಲೂ ಪ್ರಪಂಚದ ಬಹುಪಾಲು ಸನಾತನವಾಗಿತ್ತು. ಕ್ಷೀಣಿಸಿದ ಆಚರಣೆಗಳಿಂದ ಮಂಚದ ಮತ್ತೊಂದು ಕಾಲು ಮುರಿಯಿತು, ಆಗ ಬಂದುದು ದ್ವಾಪರಯುಗ, ಅಲ್ಲೂ ಸನಾತನತೆಗೆ ಕೊರತೆಯಿರಲಿಲ್ಲ,ದ್ವಾಪರ ಕಳೆದು ಕಲಿಯ ಪ್ರವೇಶವಾಗುವ ಹೊತ್ತಿಗೆ ಮಂಚದ ಮೂರನೇಕಾಲು ಮುರಿದಿತ್ತು. ಈಗಿರುವುದು ಒಂದೇ ಕಾಲಿನ ಮಂಚ; ಮೂರು ಕಾಲುಗಳಿಲ್ಲದೇ ಅಲ್ಲಾಡುವಾಗ ಇಲ್ಲದ ಉಪದ್ವ್ಯಾಪ ಉದ್ಭವಿಸುತ್ತದೆ! ಹಾಗಂತ ಆರ್ಷೇಯ ಸನಾತನ ಜೀವನ ಧರ್ಮದಲ್ಲಿ ಯಾವುದೇ ಲೋಪವಿಲ್ಲ, ಅದು ದೋಷಪೂರಿತವಲ್ಲ. ಹಾಗಾದರೆ ಮುರಿದಿದ್ದು ಯಾವ ಮಂಚದ ಕಾಲು? ಅದು ಜೀವನಧರ್ಮದ ಆಚರಣೆಗಳಲ್ಲಾದ ಲೋಪದೋಷಗಳ ತುಲನೆ ಅಷ್ಟೇ. ಸತ್ಯ, ಅಹಿಂಸೆ, ತ್ಯಾಗ ಮತ್ತು ತಪಸ್ಸು ಇವುಗಳೇ ಆ ನಾಲ್ಕು ಕಾಲುಗಳು ಎಂದರೆ ತಪ್ಪಾಗಲಾರದು. ಈ ದಿನಮಾನದಲ್ಲಿ ಸತ್ಯ ಎಂದರೆ ಏನು ಎಂಬುದು ದೊಡ್ಡ ಪ್ರಶ್ನೆ, ಅಹಿಂಸೆ ಪಠ್ಯದಲ್ಲಿ ಕಾಣುವ ಅಕ್ಷರ, ತ್ಯಾಗ-ಹಿಂದೆ ಯಾರೋ ಮಾಡಿದ್ದರು ಎಂಬುದನ್ನು ಕೇಳಿಗೊತ್ತಷ್ಟೆ, ತಪಸ್ಸು-ಅರ್ಥವಿಲ್ಲದ ಕೆಲಸ! ಆಯ್ತಲ್ಲಾ?  ಆತುಕೊಂಡ ವ್ಯಕ್ತಿಯ ಒಳಿತನ್ನೂ ಮತ್ತು ಸುತ್ತಲ ಸಮಾಜದ ಒಳಿತನ್ನೂ, ಪ್ರಪಂಚದ ಒಳಿತನ್ನೂ ಏಕಕಾಲದಲ್ಲಿ, ಪ್ರಕೃತಿ ಸಹಜ ಗತಿಯಲ್ಲಿ ಬಯಸುವ ಜೀವನಧರ್ಮ ಪ್ರಪಂಚದಲ್ಲೇ ಒಂದು ಮಾತ್ರ!-ಅದು ಸನಾತನ ಜೀವನ ಧರ್ಮ.

ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವ ಚಾರ್ಜುನ |
ತಾನ್ಯಹಂ ವೇದ ಸರ್ವಾಣಿ ನ ತ್ವಂ ವೇತ್ಥ ಪರಂತಪ ||

--ಭಗವಂತ ಅರ್ಜುನನಿಗೆ ಹೇಳಿದ್ದಾನೆ:  ಹೇ ಅರ್ಜುನಾ, ನನ್ನ ಮತ್ತು ನಿನ್ನ ಅನೇಕ ಜನ್ಮಗಳು ಆಗಿಹೋಗಿವೆ. ಅವೆಲ್ಲವುಗಳ ಅರಿವು ನಿನಗಿಲ್ಲ, ನನಗಿದೆ!

ಈ ಬ್ರಹ್ಮಾಂಡದ ಮನೆಯಲ್ಲಿ ಭಾರತ ದೇವರಕೋಣೆ; ಇದು ದೈವೀ ಸಂಕಲ್ಪ ಮತ್ತು ನಮ್ಮೆಲ್ಲರ ಸುದೈವ. ಜಗತ್ತಿನ ಅತ್ಯುತ್ತಮ ಮಾನವ ಸಹಜ ಜೀವನಧರ್ಮದ ಉಳಿವಿಗಾಗಿ ಜಗನ್ನಿಯಾಮಕನೇ ಸ್ವಯಂ ಮಾನವ ರೂಪಧರಿಸಿಯೋ ಜೀವಿಗಳ ರೂಪ ಧರಿಸಿಯೋ ಭೂಮಿಗೆ ಬರುತ್ತಾನೆ, ಹಾಗೆ ಬಂದವನು ದುಷ್ಟರನ್ನು ವಧಿಸಿ ಶಿಷ್ಟರನ್ನು ರಕ್ಷಿಸಿ, ಅಧರ್ಮ ಮತ್ತು ಧರ್ಮಗಳ ನಡುವಿನ ಅಂತರವನ್ನು ತಿಳಿಸಿ ಅಧರ್ಮವನ್ನು ತೊಡೆದುಹಾಕುತ್ತಾನೆ. ಮಲಿನವಾದ ಬಟ್ಟೆಯನ್ನು ತೊಳೆದು, ಒಣಗಿಸಿ ಶುಭ್ರಗೊಳಿಸುವಂತೇ ಸ್ಥಾಪಿತವಾದ ಧರ್ಮ ಮಧ್ಯೆ ಮಧ್ಯೆ ತುಸು ಮಲಿನಗೊಂಡಾಗ ಪುಣ್ಯಾತ್ಮರಾದ ಸಾಧುಸಂತರು ಅದನ್ನು ತಿಳಿಗೊಳಿಸುವ ಕೆಲಸಮಾಡುತ್ತಾರೆ. ಧರ್ಮ ಸಂಪೂರ್ಣ ಗ್ಲಾನಿಗೊಳಗಾದಾಗ, ಆಚರಿಸುವ ಜನರಿಗೇ ಸಂದೇಹಾಸ್ಪದವಾದಾಗ ಭಗವಂತ ಪುನಃ ಬರುತ್ತಾನೆ-ಈ ಚಕ್ರ ಸತತ ನಡೆದೇ ಇರುತ್ತದೆಯೇ ಹೊರತು ಸನಾತನ ಜೀವನಧರ್ಮ ನಶಿಸುವುದಿಲ್ಲ.    

ಯದಾಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ ||

-- ಯಾವಾಗ ಧರ್ಮ ಹಾನಿಗೊಳಗಾಗಿ ಅಧರ್ಮ ಮೆರಯತೊಡಗುತ್ತದೋ ಆಗ ನಾನು ಸಾಕಾರ ರೂಪದಲ್ಲಿ ಪ್ರಕಟಗೊಳ್ಳುತ್ತೇನೆ.

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ |
ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ||

---ದುಷ್ಟ ಶಿಕ್ಷೆಗೆ, ಶಿಷ್ಟ ರಕ್ಷೆಗೆ ತನ್ಮೂಲಕ ಧರ್ಮಸಂಸ್ಥಾಪನೆಗೆ ಯುಗಯುಗದಲ್ಲೂ ನಾನು ಅವತರಿಸುತ್ತೇನೆ.

ಹೀಗೆ ಭಗವಂತ ಅರ್ಜುನನ ಮೂಲಕ ಜಗತ್ತಿಗೇ ಸಂದೇಶವನ್ನು ನೀಡಿದ. ಅವತಾರಗಳಲ್ಲಿ ಹಲವು ತೆರನಾದ ಅವತಾರಗಳನ್ನು ತಾಳುತ್ತಾನೆ: ಅಂಶಾವತಾರ, ಅಂಶಾಂಶಾವತಾರ, ಪೂರ್ಣಾವತಾರ ಹೀಗೇ ಒಟ್ಟಂದದಲ್ಲಿ ಅದು ದೇವನ ಲೀಲೆ, ಅದನ್ನು ಪ್ರಶ್ನಿಸಲು ನಾವು ಅರ್ಹರಲ್ಲ. ಆದರೂ ಸನಾತನತೆಯ ಆಚರಣೆಯಲ್ಲಿ- ಅನುಸಂಧಾನಗೈವಲ್ಲಿ ಸಂಖ್ಯಾಬಲ ಕ್ಷೀಣಿಸಿದಾಗ ಒಮ್ಮೆ ನಾವು ಕೂತು ಮಾತನಾಡಬೇಕಾಗುತ್ತದೆ-ಅದು ನಮ್ಮ ಸಹಜ ಕರ್ತವ್ಯವೆನಿಸುತ್ತದೆ. ಮಗು ಹೀಗೇ ಆಗಬೇಕು ಎಂದು ಬಯಸುವ ಪಾಲಕರು ಮಾತಿನಾಡಿಕೊಳ್ಳುವಂತೇ ನಮ್ಮ ಮಾತು; ಮಗುವಿನ ಭವಿಷ್ಯ ವಿಧಿಲಿಖಿತದಂತೇ ಆಗುತ್ತದೆ, ಬದಲಾಗಿ ನಾವು ಬಯಸಿದಂತೇ ಆಗಲು ಸಾಧ್ಯವೇ? ಕೆಲವೊಮ್ಮೆ ಕಾಕತಾಳೀಯವಾಗಿ ನಮ್ಮ ನಿರ್ಧಾರವೂ ಮಗುವಿನ ವಿಧಿಲಿಖಿತವೂ ಒಂದೇ ಆಗಿಬಿಟ್ಟಿದ್ದಲ್ಲಿ ನಾವಂದುಕೊಂಡಂತೇ ಸಾಧಿಸಿದ್ದೇವೆ ಎಂದು ನಾವು ಬೆನ್ನು ತಟ್ಟಿಕೊಳ್ಳುತ್ತೇವೆ-ಆದರೆ ಅಹಂಕಾರದಲ್ಲಿ ಮುಳುಗುವ ನಮಗೆ ಅದು ವಿಧಿಯ ಕರುಣಾರ್ದ್ರ ಹೃದಯ ಮತ್ತು ಜಾತನ ಸಂಚಿತಪುಣ್ಯಫಲ ವಿಶೇಷ ಎಂದೆನಿಸುವುದೇ ಇಲ್ಲ! ಪ್ರಸಕ್ತ ಧರ್ಮಗ್ಲಾನಿ ಆಗಬೇಕೆಂಬುದು ವಿಧಿಲಿಖಿತವೇ ಆಗಿದ್ದಲ್ಲಿ ಅದನ್ನು ತಪ್ಪಿಸಲು ನಾವಾರೂ ಸಮರ್ಥರಲ್ಲ, ಆದರೂ ಮಕ್ಕಳಪಾಲಕರು ಕೂತು ಮಾತಾಡುವ ರೀತಿಯಲ್ಲಿ ನಮ್ಮ ಪ್ರಯತ್ನವನ್ನು ಮಾಡುವುದು ಉಚಿತವಾದುದಾಗಿರುತ್ತದೆ.   

ಬಹುವಿಸ್ತಾರವಾಗಿದ್ದ ಭಾರತ ಅಥವಾ ಭರತವರ್ಷವನ್ನು ’ಭರತ’ ಎಂಬ ಹೆಸರಿನ ಇಬ್ಬರು ಚಕ್ರವರ್ತಿಗಳು ಆಳಿದ ಇತಿಹಾಸ ದೊರೆಯುತ್ತದೆ. [ಅದಲ್ಲದೇ ಸಾಕ್ಷಾತ್ ಮಹಾವಿಷ್ಣುವನ್ನೇ ಭರತನೆಂದೂ ಹೆಸರಿಸಿದ್ದು ಭಾಗವತದಲ್ಲಿ ಕಾಣುತ್ತದೆ.] ವಿಷಯ ಏನೇ ಇದ್ದರೂ ಭಾರತ ವಿಸ್ತಾರವಾಗಿತ್ತು ಎಂಬುದಕ್ಕೆ ಇಂದಿನ ಕಾಂಬೋಡಿಯಾದಲ್ಲಿ ಪಾಳುಬಿದ್ದ ಅತಿ ದೊಡ್ಡ ದೇವಸ್ಥಾನ ಸಾಕ್ಷಿಯಾಗಿ ದೊರೆಯುತ್ತದೆ. ಅಲ್ಲಿ ಸನಾತನ ಚಿನ್ಹೆಗಳು ದೊರೆಯುತ್ತವೆ. ಆ ಕಾಲಕ್ಕೆ ಭಾರತವೆಂಬುದು ಜಂಬೂದ್ವೀಪವೆನ್ನಿಸಿಕೊಂಡಿತ್ತು.  ಜಂಬೂ ಎಂದರೆ ಸಹಜವಾಗಿಯೇ ದೊಡ್ಡದು ಎಂಬ ಅರ್ಥವಷ್ಟೇ ? ಆ ಜಂಬೂದ್ವೀಪದ ಜೊತೆಯಲ್ಲಿ ಶಂಖದ್ವೀಪ, ಹವಳದ್ವೀಪ, ಶಾಲ್ಮಲ ದ್ವೀಪ, ಹೀಗೇ ಪ್ರಪಂಚದ ಭೂಭಾಗಗಳನ್ನು ತಿಳಿಯಲಾಗುತ್ತದೆ. ದುಶ್ಯಂತ-ಶಕುಂತಲೆಯರ ಮಗ ಭರತನೆಂಬ ಚಕ್ರವರ್ತಿ ಆಳುವಾಗ ಇದ್ದಿದ್ದು ಭರತವರ್ಷವಾದರೆ, ದೈವಾಂಶ ಸಂಭೂತನಾದ ಋಷಭದೇವನಿಂದ ಬ್ರಹ್ಮಾವರ್ತದ ಕೋರಿಕೆಯ ಮೇರೆಗೆ, ಅಪ್ಸರೆಯಲ್ಲಿ ಜನಿಸಿದ  ಮಗ ಭರತನಾಳುವಾಗ ಭಾರತ ಬಹುವ್ಯಾಪಕತ್ವವನ್ನು ಪಡೆದುಕೊಂಡಿತ್ತು. ಇಂತಹ ಭಾರತದಲ್ಲಿ ಸನಾತನ ಜೀವನ ಧರ್ಮ ನಡಿಗೆಯಲ್ಲಿತ್ತು. ಈ ಭರತನಿಗಿಂತ ಹಿಂದಿನ ಇತಿಹಾಸ ದಾಖಲೆಗೆ ಸಿಗುವುದಿಲ್ಲ, ಪ್ರಾಯಶಃ ಗತಕಾಲದಲ್ಲಿ ಘಟಿಸಿದ ಯುಗಪ್ರಳಯದಲ್ಲಿ ದಾಖಲೆಗಳು ನಾಶವಾದವು. ಹೀಗೇ ಸಹಸ್ರ ಸಹಸ್ರ ಮಾನಗಳಿಂದ ನಡೆದುಬಂದ ಸನಾತನ ಧರ್ಮ ಕಲಿಯುಗದಲ್ಲಿ ೫೦೦೦ ಕ್ಕೂ ಅಧಿಕ ವರ್ಷಗಳನ್ನು ಕಳೆದಿದೆ. ಈ ಕಳೆದ ಐದು ವರ್ಷಗಳ ದಾಖಲೆಗಳು ಹಲವು ರೂಪಗಳಲ್ಲಿ ಇನ್ನೂ ನೋಡಲು ಸಿಗುತ್ತವೆ!

ಕಲಿಪ್ರಭಾವದಿಂದ ಕಲಿಯುಗದಲ್ಲಿ ಅಧರ್ಮ, ಅನಾಚಾರ, ದುರ್ನಡತೆ, ದುರ್ವ್ಯಸನಗಳಿಗೇ ಮನ್ನಣೆ ದೊರೆಯುತ್ತದೆ ಎಂಬುದು ತಿಳಿಯಲ್ಪಟ್ಟ ಅಂಶ. ಅದಕ್ಕೆ ಪೂರಕವಾಗಿ ಅನೇಕ ವೇಶ್ಯೆಯರು-ಬೆಲೆವೆಣ್ಣುಗಳು ಮಾಧ್ಯಮಗಳ ಮೂಲಕ ಖ್ಯಾತಿಗಳಿಸಿದ್ದಾರೆ, ಜೂಜುಕೋರರು ವಿಜೃಂಭಿಸಿದ್ದಾರೆ, ಹೆಂಡದ ದೊರೆಗಳು ಮೆರೆಯುತ್ತಿದ್ದಾರೆ, ಸತಿ-ಪತಿ ಧರ್ಮಗಳಲ್ಲಿ ನೀತಿ ತಪ್ಪಿದವರೇ ಸೈ ಎನಿಸಿಕೊಂಡಿದ್ದಾರೆ, ವಾಮಮಾರ್ಗದಿಂದ ಹಣಗಳಿಸಿದವರೇ ಗುಣಾಢ್ಯರೆನಿಸಿದ್ದಾರೆ, ಅಕ್ಷರದ-ಸಂಸ್ಕೃತಿಯ ಹಂಗಿರದ ರೌಡಿಗಳು ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ, ಶ್ರುತಿ-ಸ್ಮೃತಿ-ಪುರಾಣಗಳು ಸುಳ್ಳೆಂದೋ ಅನರ್ಥಕವೆಂದೋ, ಕೆಲಸಕ್ಕೆ ಬಾರದವೆಂದೋ ಹೇಳುವ ಎಡಪಂಥೀಯರು ಆದ್ಯತೆ ಪಡೆದುಕೊಂಡಿದ್ದಾರೆ. ಅಲ್ಲದೇ ಕಾಡುಗಳ್ಳರು, ಭೂಗಳ್ಳರು, ಧನ-ಕನಕ ಕಳ್ಳರು, ಸ್ತ್ರೀ ಅಪಹರಣಕಾರರು, ಅತ್ಯಾಚಾರಿಗಳು-ಮಾನಭಂಗಿಗಳು, ಲಿವ್-ಇನ್ ರಿಲೇಶನ್ ಶಿಪ್ ಎಂಬ ಪಾಶ್ಚಾತ್ಯ ಶೈಲಿಯ ಅಪವಿತ್ರ ಮೈತ್ರಿಕೂಟದಲ್ಲಿ ಜೀವನ ನಡೆಸಿ ತುಸುಕಾಲ ಸುಖಪಡಲೆತ್ನಿಸುವವರು-ಅವರಿಗೆ ಹುಟ್ಟುವ ಸಂತತಿಗಳು ಹೀಗೇ ಹೇಳುತ್ತಾ ಹೋದರೆ ಅದು ಮುಗಿಯದು; ಒಟ್ಟಾರೆಯಾಗಿ ಹೇಳಿದರೆ ಧರ್ಮದ ದಾರಿಯನ್ನು ತಪ್ಪಿಸುವ ದುಸ್ಸಾಹಸಕ್ಕೆ ಸಮಾಜ ಕೈಹಾಕಿದೆ. ಕೇವಲ ತಮ್ಮ ಮನೆ- ತಮ್ಮ ಜನ ಎಂಬ ಸ್ವಾರ್ಥಲಾಲಸೆಯಿಂದ,ನೀತಿತಪ್ಪಿ ನಡೆದಜನರನ್ನು ಅನುಮೋದಿಸಿದ ಇತರೆ ಸಜ್ಜನರೂ ಪರೋಕ್ಷ ಪಾಪದ ಕೆಲಸಗಳಲ್ಲಿ ಭಾಗವನ್ನು ಭುಂಜಿಸುತ್ತಿದ್ದಾರೆ. ಪರಿಣಾಮವಾಗಿ ಇಂದು ನಮ್ಮಲ್ಲಿ ಶುದ್ಧ ನೀರಿಗೆ, ಶುದ್ಧ ಗಾಳಿಗೆ, ಶುದ್ಧ ವಾತಾವರಣಕ್ಕೆ ಈಗಾಗಲೇ ತೊಡಕು ಸಂಭವಿಸಿದೆ. ಸಹಸ್ರಮಾನಗಳ ಕಾಲ  ತುಂಬಿ ತುಳುಕುತ್ತಿದ್ದ ಕೆರೆಕಟ್ಟೆಗಳು ಬರಿದಾಗಿ ಅಂತರ್ಜಲದ ಮಟ್ಟ ಅಳತೆಮೀರಿದ ಆಳಕ್ಕೆ ಜರುಗಿ ಹೋಗಿದೆ! ಸ್ವಯಂಪ್ರಭೆಯಿಂದ ಸುತ್ತಲ ಹತ್ತಾರು ಊರು-ಕೇರಿ-ಗ್ರಾಮಗಳಿಗೆ ಹೆಸರುವಾಸಿಯಾಗಿದ್ದ ದೇವಸ್ಥಾನಗಳಲ್ಲಿ ಅಂದಿನ ಪ್ರಭಾವಲಯ ಕಳೆಗುಂದಿದೆ! ಧರ್ಮಬಾಹಿರವಾಗಿ, ನೀತಿಗೆಟ್ಟವರಾಗಿ ನಡೆವ ಜನರನ್ನು ದೇವರೆಂಬ ದೇವರಾದರೂ ಯಾಕೆ ಆತುಕೊಂಡಾನು ಅಲ್ಲವೇ?

ಅವನತ ಮುಖಿಯಾದ ಆಚರಣೆಗಳಲ್ಲಿನ ಗಚ್ಚುಗಾರೆಗಳು ಜೀವನಧರ್ಮವನ್ನು ಆಚರಿಸುವ ಜನಾಂಗದಲ್ಲಿ ಶಿಥಿಲಾವಸ್ಥೆಯನ್ನು ತೋರುತ್ತಿವೆ; ಇದಕ್ಕೆಲ್ಲಾ ಕಾರಣ ತಾವು ಅಧುನಿಕರು, ತಾವು ಕಂಡಿದ್ದೇ ಸತ್ಯ, ವಿಜ್ಞಾನ ಕಂಡಿದ್ದು ಮಾತ್ರ ಸತ್ಯ ಎಂಬ ಧೋರಣೆಯಾಗಿದೆ. ಮಹಾನಗರಗಳಲ್ಲಿ ಅಪ್ಪ-ಮಕ್ಕಳು ಒಟ್ಟಿಗೇ ಕುಳಿತು ಮದ್ಯ ಸೇವಿಸುವ ರಿವಾಜು ರೂಢಿಗೆ ಯಾವಾಗ ಬಂತೋ ಅಂದಿನಿಂದ ಕಲಿಪ್ರಭಾವ ಜಾಸ್ತಿಯಾಗುತ್ತಲೇ ನಡೆದಿದೆ. ಬರಿದಾಗುತ್ತ ನಡೆದ ಅಣೆಕಟ್ಟೆಯಲ್ಲಿ ನೀರು ತುಂಬಿರುವಾಗಿನ ಗುರುತು ಅಲ್ಲಲ್ಲಿ ಹೇಗೆ ಕಾಣಿಸುವುದೋ ಆ ರೀತಿಯಲ್ಲಿ ವ್ಯಾಪಕವಾಗಿದ್ದ ಜೀವನಧರ್ಮ ಪ್ರಾದೇಶಿಕವಾಗಿ ತನ್ನನ್ನು ಗುರುತಿಸಿಕೊಳ್ಳಬೇಕಾಗುತ್ತಿದೆ. ಸನಾತನ ಧರ್ಮ ವಿಶಾಲವಾಗಿದ್ದ  ಬೆಂಗಳೂರಿನಂಥಾ ನಗರದಲ್ಲೇ ಶಿವಾಜಿನಗರದಿಂದ ಆರಂಭಗೊಂಡು, ಕೂಕ್ಸ್ ಟೌನ್, ಕಾಕ್ಸ್ ಟೌನ್, ಬೆನ್ಸನ್ ಟೌನ್, ರಿಚ್ಮಂಡ್ ಟೌನ್ ಆ ಟೌನ್ ಈ ಟೌನ್ ಎನ್ನುತ್ತಾ ಸಾಗುವಾಗ ನಾವೇನು ಭಾರತವಾಸಿಗಳೇ ಎನಿಸುವುದು ಬಹುತೇಕರಿಗೆ ಸಹಜವಾಗಿದೆ! ಟ್ಯಾನರಿ ರಸ್ತೆಯಲ್ಲಿ ಹಾಡು ಹಗಲೇ ಪ್ರಾಣಿಗಳನ್ನು ಸೀಳಿ ರಕ್ತಬಸಿಯುತ್ತಿರುವ ಚರ್ಮಗಳನ್ನು ಸೈಕಲ್ಲುಗಳಮೇಲೆ ಹೇರಿಕೊಂಡು ಸಾಗುತ್ತಿರುತ್ತಾರೆ. ಅಂತಹ ಜಾಗಗಳಲ್ಲಿ ತಿಲಕವಿಟ್ಟ ಹಿಂದೂ ಜನ ಒಂಟಿಯಾಗಿ ಕಾಣಿಸಿದರೆ  ಹಿಂಬಾಲಿಸಿಕೊಂಡು ಬರುವ ಜನ ಕೂಡ ಇದ್ದಾರೆ!! ಹೆಸರಿಗೆ ಶಿವಾಜಿ ಎಂದು ನಾಮಕರಣ ಮಾಡಿಸಿಕೊಂಡ ಮಹಾನಗರದ ಆ ಭಾಗ ಏನಾಗಿದೆಯೆಂದು ಹೊಸದಾಗಿ ಬಣ್ಣಿಸುವುದು ಬೇಕಾಗಿಲ್ಲ. ೨ ವರ್ಷಗಳ ಹಿಂದೆ ಕೆಲಸದ ನಿಮಿತ್ತ ಶಿವಾಜಿ ನಗರಕ್ಕೆ ತೆರಳಿದ್ದಾಗ ೨ ಘಂಟೆಯ ಬಿಸಿಲಿನಲ್ಲಿ ಮಾಂಸಾಹಾರಿ ಹೋಟೆಲ್ ಒಂದರ ಹಿಂದೆ  ಸಿಂಧಿ ತಳಿಯ ಮುದ್ದಾದ ಬಿಳಿಯ ಹೋರಿಯೊಂದನ್ನು ನಿಲ್ಲಿಸಿದ್ದರು-ಅದು ಅಂದೇ ರಾತ್ರಿ ಈ ಜಗವನ್ನು ಬಿಟ್ಟಿರಬೇಕು!  ತಿನ್ನುವುದಕ್ಕಾಗೇ ಬದುಕುವ ಜನಕುಲ ಸಂಪ್ರದಾಯ ಬೆಳೆದಂತೇ ಮನುಕುಲ ಸಹಜಗತಿಯಲ್ಲಿ ಬದುಕುವುದನ್ನು ಕಳೆದುಕೊಳ್ಳುತ್ತದೆ. ಏಕಕಾಲಕ್ಕೆ ಆತುಕೊಂಡವರಿಗೂ ಮತ್ತು ಸುತ್ತಲ ಪ್ರಪಂಚಕ್ಕೂ ಒಳಿತನ್ನು ಉಂಟುಮಾಡುವ ಧರ್ಮವೇ ನಿಜವಾದ  ಜೀವನಧರ್ಮ ಎಂಬುದು ಮರೆತು ಹೋಗುತ್ತದೆ. ಆದರೆ ಇಂದು ಎಲ್ಲವೂ ರಾಜಕೀಯಮಯ; ಜೀವನಧರ್ಮ ಎಂಬುದು ಏನೆಂಬುದೇ ಇಂಡಿಯಾವನ್ನು ಆಳುತ್ತಿರುವ ಆಳರಸರಿಗೆ ಗೊತ್ತಿಲ್ಲ.   

ಬ್ರಿಟಿಷರನ್ನು ಭಾರತದಿಂದ ಒದ್ದೋಡಿಸಬೇಕೆಂಬ ಅನಿಸಿಕೆಯಲ್ಲಿ ಕಳೆದ ೧೯-೨೦ನೇ ಶತಮಾನಗಳಲ್ಲಿ ಅನೇಕರು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅಂದು ರಾಜರುಗಳ ಆಳ್ವಿಕೆಯಿದ್ದುದರಿಂದ ಭಾರತದಲ್ಲಿ ಮ್ಲೇಚ್ಛರ ಸಂಖ್ಯೆ ಹಿಡಿತದಲ್ಲಿತ್ತು. ಸ್ವತಂತ್ರ ಸೇನಾನಿಗಳಾದ ಝಾನ್ಸಿರಾಣಿ ಲಕ್ಷ್ಮೀಬಾಯಿ, ತಾತ್ಯಾಟೋಪಿ, ಮಂಗಲಪಾಂಡೆ, ಭಗತ್ ಸಿಂಗ್, ಸುಭಾಶ್ಚಂದ್ರ ಬೋಸ್, ಲಾಲಾ ಲಜಪತರಾಯ್, ಮದನಮೋಹನ ಮಾಲವೀಯ, ರಾಜಾರಾಮ್ ಮೋಹನ್ ರಾಯ್, ಲೋಕಮಾನ್ಯ ಬಾಲಗಂಗಾಧರ ತಿಲಕ್, ಸರ್ದಾರ್ ವಲ್ಲಭಭಾಯ್ ಪಟೇಲ್, ಗೋಪಾಲಕೃಷ್ಣ ಗೋಖಲೆ, ಸಂಗೊಳ್ಳಿ ರಾಯಣ್ಣ, ಮೋಹನ್ದಾಸ್ ಗಾಂಧಿ ಇತ್ಯಾದಿ ಸಹಸ್ರಾಕ ಸಂಖ್ಯೆಯ ದೇಶಭಕ್ತರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದರು. ಜಲಿಯನ್ ವಾಲಾಬಾಗ್ ನಲ್ಲಿ ಭಾರತೀಯರ ಹತ್ಯಾಕಾಂಡ ನಡೆದಿದ್ದನ್ನು ಅನೇಕರು ತಿಳಿದಿರುತ್ತೀರಿ ಎಂದುಕೊಂಡಿದ್ದೇನೆ. ಅದನ್ನು ಕಣ್ಣಾರೆ ಕಂಡ ಓರ್ವ ಶತಾಧಿಕಾಯುಷಿಯೊಬ್ಬರು ನನ್ನ ಗಮನದಲ್ಲಿದ್ದಾರೆ-ಇನ್ನೂ ಬದುಕಿ ಉಳಿದಿದ್ದಾರೆ! ಅಂತೂ ಬ್ರಿಟಿಷರು ಭಾರತವನ್ನು ಬಿಟ್ಟುಹೋದರು, ಆದರೆ ಮ್ಲೇಚ್ಛರು ಮತ್ತು ಯವನರು ಭಾರತದಲ್ಲೇ ಉಳಿದುಬಿಟ್ಟರು!  ಭಾರತ ಸ್ವತಂತ್ರವಾದ ಬಳಿಕ ಇಂಪೀರಿಯಲ್ ಸರಕಾರ ಹೋಗಿ ಇಲ್ಲಿನದೇ ಸರಕಾರ ರೂಪಿತವಾಗುವ ಹೊತ್ತಿಗೆ ನೆಹರೂ ಎಂಬಾತನಿಗೆ ಅಧಿಕಾರದ ಆಸೆ ಹುಟ್ಟಿತು. ಗದ್ದುಗೆಗಾಗಿ ಆತ ಮಾಡದ ಲಾಬಿಗಳೇ ಇಲ್ಲ. ಯಾವಾಗ ನೆಹರೂ ಮುಂದಾಳತ್ವ ಆರಂಭಗೊಂಡಿತೋ ಆಗಲೇ ಭ್ರಷ್ಟಾಚಾರದ ಉಗಮವಾಯ್ತು. ಕಡಿಮೆ ಸಂಖ್ಯೆಯಲ್ಲಿದ ಮ್ಲೇಚ್ಛರು ಮಹಮ್ಮದಲಿ ಜಿನ್ನಾ ನೇತೃತ್ವದಲ್ಲಿ ತಮಗೇ ಬೇರೇ ದೇಶಬೇಕೆಂಬ ಹಠವನ್ನು ತೊಟ್ಟಿದ್ದರು. ಆ ಕೂಗು ದಿಲ್ಲಿಯಲ್ಲಿ ವ್ಯಾಪಕವಾಗಿ ಹಬ್ಬುವಂತೇ ನೋಡಿಕೊಂಡರು. ಕಡಿಮೆ ಸಂಖ್ಯೆಯಲ್ಲಿದ್ದರೂ ಹಾಸಿಗೆ ಹೊಕ್ಕ ತಿಗಣೆಗಳಂತೇ ದೇಶದ ಜನತೆಗೆ ನಿದ್ದೆಗೆ ಅವಕಾಶ ಕೊಡಲಿಲ್ಲ. ದೇಶವ್ಯಾಪೀ ಕಾಣದ ಕೈಯ್ಯಾಡಿಸುತ್ತಾ ದೊಂಬಿಗಳನ್ನು ಸುರುಹಚ್ಚಿಕೊಂಡರು.

ಮ್ಲೇಚ್ಛರ ಆ ಕೊಗು ಜಾಸ್ತಿಯಾದಂತೇ ನೆಹರೂಗೆ ಅಧಿಕಾರದ ಅಸೆಯೂ ಅತಿಯಾಗತೊಡಗಿತ್ತು; ಪ್ರಧಾನಿಯ ಹುದ್ದೆ ತನ್ನ ಕೈತಪ್ಪಿ ಸರ್ದಾರ್ ಪಟೇಲರಿಗೆ ದಕ್ಕಿಬಿಟ್ಟರೆ ಎಂಬ ಸಂದೇಹ ಕಾಡುತ್ತಿತ್ತು. ಹೀಗಾಗಿ ಗಾಂಧೀಜಿಯ ಕಿವಿಯೂದಿ ಒಂದಷ್ಟು ಜಾಗವನ್ನು ಮ್ಲೇಚ್ಛರಿಗೆ ಕೊಟ್ಟುಬಿಡಬೇಕೆಂಬ ತೀರ್ಮಾನಕ್ಕೆ ಬರುವಲ್ಲಿ ನೆಹರೂ ಸಾಫಲ್ಯತೆ ಪಡೆದಿದ್ದು ಕಂಡುಬರುತ್ತದೆ. ಅಂತೂ ನಾಯಕರು ಸಭೆ ಸೇರಿ ಶಾಂತಿದೂತನೆಂದೇ ಹೆಸರಾಗಿದ್ದ ಗಾಂಧೀಜಿಯವರ ಮುಂದಾಳತ್ವದಲ್ಲಿ ದೇಶವನ್ನು ವಿಭಜಿಸುವಂತೇ ಮಹಮ್ಮದಲಿ ಜಿನ್ನಾ ನೋಡಿಕೊಂಡ. ಭಾರತ ಇಬ್ಭಾಗವಾಯ್ತು. ಚಿಕ್ಕಭಾಗವನ್ನು ಪಾ[ತ]ಕಿಸ್ತಾನವೆಂದು ಹೆಸರಿಸಿಕೊಂಡರು. ಅದು ಮ್ಲೇಚ್ಛರಿಂದ ಮ್ಲೇಚ್ಛರಿಗಾಗಿಯೇ ಆದ ದೇಶವಿಭಜನೆ! ಆದರೆ ದೇಶದಲ್ಲಿ ಹಲವೆಡೆ ಹರಡಿದ್ದ ಮ್ಲೇಚ್ಛರು ಸಂಪೂರ್ಣವಾಗಿ ಬಿಟ್ಟು ಹೋಗಲೇ ಇಲ್ಲ. ಇಲ್ಲಷ್ಟು ಅಲ್ಲಷ್ಟು ಎಂದು ಹಾಗೇ ಉಳಿದುಕೊಂಡರು. ಮತ್ತೆ ಕಾಲಾನಂತರದಲ್ಲಿ ಒಟ್ಟಾಗಿ ದೇಶದ ಜಾಗದಲ್ಲಿ ತಮಗೆ ಬೇರೇ ಪಾಲು ಕೊಡುವಂತೇ ಆಗ್ರಹಿಸತೊಡಗಿದರು; ಆಗ್ರಹ ಉಗ್ರರೂಪವನ್ನೇ ತಾಳುತ್ತಿತ್ತು. ಸತ್ಕೊಂಡು ಹೋಗಲಿ ಎಂದು ಮತ್ತೆ ದೇಶವನ್ನು ಭಾಗಮಾಡಿದರು. ಅದು ಬಾಂಗ್ಲಾದೇಶವೆಂಬ ಹೆಸರನ್ನು ಪಡೆಯಿತು. ಹೀಗೇ ಅಖಂಡವಾಗಿದ್ದ ಭಾರತ ಸ್ವಾತಂತ್ರ್ಯ ಪೂರ್ವದಲ್ಲೂ ಅನೇಕಾವರ್ತಿ ಭಾಗವಾಗಿದ್ದು ತಿಳಿದುಬರುತ್ತದೆ. ದೇಶ ವಿಭಜನೆಗೆ ಮೂಲ ಕಾರಣವನ್ನು ಹುಡುಕತೊಡಗಿದಾಗ ನಮಗೆ ಅಲ್ಲಿಂದಿಲ್ಲಿಗೂ ಅಧಿಕವಾಗಿ ಕಾಣುವುದು ಮ್ಲೇಚ್ಛರ ಮತಾಂಧತೆ! ಮತಾಂಧ ಮ್ಲೇಚ್ಛರು ಹೀಗೇ ದೇಶವನ್ನು ವಿಭಜಿಸುತ್ತಿದ್ದರೆ ಭಾರತ ನಶಿಸಿಹೋಗುತ್ತದೆಂಬ ಅನಿಸಿಕೆಯಿಂದ ಸ್ವಾತಂತ್ರ್ಯ ಹೋರಾಟಗಾರನೂ ದೇಶಭಕ್ತನೂ ಆಗಿದ್ದ ನಾಥೂರಾಮ್ ಗೋಡ್ಸೆ ಒಳಗೊಳಗೇ ಕೊತಕೊತ ಕುದಿಯುತ್ತಿದ್ದ. ದೇಶವಿಭಜನೆಗೆ ಕೀರ್ದಿಪುಸ್ತಕದಲ್ಲಿ ಶರಾ ಬರೆದು ಸಹಿಮಾಡಿದ ಗಾಂಧೀಜಿಯನ್ನು ಕಂಡರೆ ಅವನಿಗೆ ಅತೀವ ಕೋಪವುಕ್ಕುತ್ತಿತ್ತು. ದೇಶಭಕ್ತಿಯಿಂದ ಭುಗಿಲೆದ್ದು ಉಕ್ಕಿಹರಿದ ಕ್ರೋಧ ಒಂದುದಿನ ಗಾಂಧೀಜಿಯನ್ನೇ ಆತ ಕೊಲ್ಲುವಂತೇ ಪ್ರೇರೇಪಿಸಿತು; ಆತ ನಿಜವಾಗಿ ಸಾಯಿಸಬೇಕಾದ ಜನ ಬೇರೇ ಇದ್ದರು-ಅವರು ಎದುರಿಗೆ ಸಿಗಲಿಲ್ಲ, ಗಾಂಧೀಜಿ ಸುಲಭವಾಗಿ ಸಿಕ್ಕರು-ಅವರೇ ಬಲಿಯಾಗಿಬಿಟ್ಟರು. ಹೀಗೇ ರಾಜಕೀಯದ ಸ್ವಾರ್ಥಲಾಲಸೆಯಿಂದ ಭಾರತ ಇಂಡಿಯಾ ಆಗುವುದಕ್ಕೆ ಕಾರಣವಾಯ್ತು!

ಭಾರತಕ್ಕೆ ಇಂಡಿಯಾ ಎಂದು ಆಂಗ್ಲ ಆಳರಸರು ಅದಾಗಲೇ ಹೆಸರು ಕೊಟ್ಟಿದ್ದರೂ ಸ್ವಾತಂತ್ರ್ಯಾ ನಂತರ ಆ ಹೆಸರನ್ನು ಅಳಿಸಿಹಾಕಬಹುದಿತ್ತು. ಆದರೆ ನಮ್ಮಲ್ಲಿನ ಆಳುವ ಜನ ಹಾಗೆ ಮಾಡಲಿಲ್ಲ. ನಿಜವಾದ ದೇಶಭಕ್ತರು ಆಡಳಿತ ಯಂತ್ರದಿಂದ ವಂಚಿತರಾಗಿದ್ದರು; ಸರ್ದಾರ್ ಪಟೇಲ್ ರಂಥವರು ಒಬ್ಬಿಬ್ಬರು ಇದ್ದರೆ ಅವರ ಮಾತಿಗೆ ಬೆಲೆಯೇ ಸಿಗಲಿಲ್ಲ. ಹೀಗಾಗಿ ಸ್ವಾತಂತ್ರ್ಯಕ್ಕಾಗಿ ಯಾರು ನಿಜವಾಗಿ ಹೋರಾಡಿದರೋ ಅವರು ಆಳುವ ಬದಲು ಆಳುವುದಕ್ಕಾಗಿಯೇ ಲಾಬಿಮಾಡುತ್ತ ಬಂದ ಜನ ಆಳಲುತೊಡಗಿದರು. ಅವರಿಗೆ ಅಧಿಕಾರ, ಸಿರಿವಂತಿಕೆ, ಸುಖೋಪಭೋಗಗಳು, ಐಶಾರಾಮೀ ಜೀವನ, ಜಗದ್ವ್ಯಾಪೀ ತಿರುಗಾಟ, ಹಾರ-ತುರಾಯಿ ಇಂಥವೇ ಬೇಕಿದ್ದವೇ ಹೊರತು ಭಾರತದ ಬಗ್ಗೆ ನಿಜವಾದ ಕಾಳಜಿ ಇರಲೇ ಇಲ್ಲ. ಬ್ರಿಟಿಷರು ಭಾರತದಲ್ಲಿರುವಷ್ಟೂ ಕಾಲ ಭಾರತದ ಇತಿಹಾಸದ ಮೂಲದಾಖಲೆಗಳನ್ನು ಸುಟ್ಟುಹಾಕಿದರು, ಮತ್ತು ಇತಿಹಾಸವನ್ನು ತಮಗೆ ಬೇಕಾದ ರೀತಿ ನಿರೂಪಿಸಿದರು. ಅದರಲ್ಲಿ ’ಆರ್ಯರು ಭಾರತಕ್ಕೆ ಬಂದರು’ ಎಂಬುದೂ ಕೂಡ ಒಂದಂಶ-ಅದನ್ನು ತಿಂಗಳುಗಳ ಹಿಂದೇ ನಿಮಗೆ ಹೇಳಿದ್ದೇನೆ. ತಿರುಚಿದ ಇತಿಹಾಸವನ್ನೇ ಮರಳಿ ಸಂಶೋಧಿಸದೇ ಬಡಿಸಿದವರು ನಮ್ಮಲ್ಲಿನ ಧೂರ್ತ ರಾಜಕಾರಣಿಗಳು. ನಮ್ಮಲ್ಲಿನ ಅನೇಕರಿಗೆ ಭಗತ್ ಸಿಂಗ ತೆರನಾದವರು ನಡೆದುಕೊಂಡಿದ್ದೂ ತಪ್ಪೆನಿಸುವಂತೇ ಆ ಇತಿಹಾಸ ಹೇಳುತ್ತಿತ್ತು. ಭಾರತ ಹಳ್ಳಿಗಳಿಂದ ಕೂಡಿದ ದೇಶವಾದುದರಿಂದಲೂ, ಪ್ರಕೃತಿ ಸಹಜ ಜೀವನಧರ್ಮದ ರೀತಿ-ನೀತಿಯ ದೇಶವಾದುದರಿಂದಲೂ ದೇಶದ ಜನರಲ್ಲಿ ಒಡಕನ್ನು ತರುವುದು ಕಷ್ಟವಾಗಿತ್ತು. ಒಡಕು ತರಲು ಮುಂದಾದ ಬ್ರಿಟಿಷರು ಒಡೆದಾಳುವ ನೀತಿಯನ್ನು ತಮ್ಮೊಳಗೇ ರೂಪಿಸಿ ಅದನ್ನು ಕಾರ್ಯಗತಗೊಳಿಸುವಲ್ಲಿ ಯಶಸ್ಸು ಪಡೆದರು. ಕಪ್ಪು ದ್ರಾವಿಡರು ಭಾರತದ ಮೂಲನಿವಾಸಿಗಳೆಂದೂ ಗೋಧಿಮೈ ಬಣ್ಣದ ಆರ್ಯರೆಂಬ ಜನ ಭಾರತಕ್ಕೆ ವಲಸೆಬಂದು ಇಲ್ಲಿನ ಜನರಮೇಲೆ ದಬ್ಬಾಳಿಕೆ ನಡೆಸಿ ವಸಾಹತುಗಳನ್ನು ಸ್ಥಾಪಿಸಿದರೆಂದೂ ಕಟ್ಟುಕಥೆಗಳನ್ನು ಹರಿಬಿಟ್ಟರು.  ದೇಶದ ಜನರ ಮನೋಧರ್ಮದಲ್ಲಿ ವಿಷದ ಮೊದಲ ಬೀಜವನ್ನು ಬಿತ್ತಿದವರು ಆಂಗ್ಲರು.

ಆಂಗ್ಲರಿರುವಾಗಲೇ ಮ್ಲೇಚ್ಛರ ಮತಾಂತರಗಾರಿಕೆ ನಿರಂತರವಾಗಿ ನಡೆಯುತ್ತಿತ್ತು; ಇಂದಿನ ಅನಧಿಕೃತ ಗಣಿಗಾರಿಕೆಗಿಂತಾ ಜೋರಾಗಿಯೂ ಭೀಕರ-ಭೀಬತ್ಸವಾಗಿಯೂ ನಡೆಯುತ್ತಿತ್ತು. ಅದಕ್ಕೆ ಉದಾಹರಣೆಯಾಗಿ ಈ ಕಥೆಯನ್ನು ನೋಡಿ: ಸಹಜವಾಗಿ ಮುಸ್ಲಿಮರಿಗೆ ಹಿಂದೂ ಆಚರಣೆಗಳಲ್ಲಿ ಜಾತಕ ಫಲಗಳಲ್ಲಿ ಕೆಟ್ಟ ಕುತೂಹಲವಿದೆ. ತನ್ನ ಜಾತಕದಲ್ಲಿ ದೋಷಗಳು, ಸಂಘರ್ಷಗಳು ಕಾಣಬಂದಾಗ ಟಿಪ್ಪು ಬ್ರಾಹ್ಮಣರ, ಮಠ-ಮಾನ್ಯಗಳ ಮೊರೆಹೋಗಿ ಪೂಜೆ, ಯಾಗ ಮಾಡಿಸಿದ್ದನೇ ಹೊರತು ಅದು ಪರಧರ್ಮ ಸಹಿಷ್ಣುತೆಯಲ್ಲ. ಕೇರಳದ ಬಹುಪಾಲು ಮತ್ತು ತಮಿಳುನಾಡು,ಆಂಧ್ರಗಳ ಕೆಲಭಾಗಗಳಲ್ಲಿ ಟಿಪ್ಪುವಿನ ಕಾಲದಲ್ಲಿ ಬಲಾತ್ಕಾರದ ಮತಾಂತರ ಕಾರ್ಯ ನಡೆಯಿತು. ಕೇರಳದ ಸಾವಿರಾರು ನಂಬೂದಿರಿ ಬ್ರಾಹ್ಮಣರ ಶಿಶ್ನವನ್ನು ಕತ್ತರಿಸಿ ಬಾಯಲ್ಲಿ ಗೋಮಾಂಸವಿಟ್ಟು ಮತಾಂತರಿಸಿದ ಘಟನೆ ಕಾಣುತ್ತದೆ. ನಂಜನಗೂಡಿಗೆ ತೆರಳಿ ತನ್ನ ಕುರುಡು ಆನೆಗೆ ಕಣ್ಣುಬರದಿದ್ದರೆ ಪೂಜಿಸುವ ಅರ್ಚಕರುಗಳನ್ನೇ ಕೊಚ್ಚಿಹಾಕುವ ಬೆದರಿಕೆ ಒಡ್ಡಿ ಕೆಲಸಮಾಡಿಸಿಕೊಂಡ ದಾಖಲೆ ಇದೆ. ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಟಿಪ್ಪು ದಾಳಿ ಇಟ್ಟ ಗುರ್ತಿದೆ. ಕೆಲವು ಕಡೆ ಬಾವಿಯ ಕಟ್ಟೆಗಳಿಗೆ ಖಡ್ಗದ ಗುರುತು ಕಾಣುತ್ತದೆ. ಶ್ರೀರಂಗನಾಥ ದೇವಾಲಯ, ಶೃಂಗೇರಿ, ನಂಜನಗೂಡು ಮತ್ತು ಕೊಲ್ಲೂರುಗಳಲ್ಲಿ ತನ್ನ ದಾಳಿಗೆ ಅವು ದಕ್ಕದ ಕಾರಣ ಮತ್ತು ಯಾವುದೋ ಅವ್ಯಕ್ತ ಶಕ್ತಿ ಆತನನ್ನು ಹತ್ತಿಕ್ಕಿದ ಕಾರಣ ಆತ ಹಿಂಜರಿದು ಕೈಮುಗಿದಿದ್ದಾನೆ, ಕಾಣಿಕೆ ಕೊಟ್ಟು ತಾನು ಸಭ್ಯ-ಸಂಭಾವಿತ ಎನಿಸಿಕೊಂಡಿದ್ದಾನೆ. ಟಿಪ್ಪು ಅನಿವಾರ್ಯವಾಗಿ ಬ್ರಿಟಿಷರಲ್ಲಿ ತನ್ನ ಮಕ್ಕಳನ್ನು ಒತ್ತೆಯಿಟ್ಟನೇ ಹೊರತು ಅದು ದೇಶಾಭಿಮಾನದಿಂದಲ್ಲ. ಟಿಪ್ಪು ಮತಾಂತರದ ಕಾರ್ಯಗಳ ಬಗ್ಗೆ ಮತ್ತು ಆ ಕುರಿತಾದ ಆತನ ಸಂವಹನ ಪತ್ರವ್ಯವಹಾರಗಳ ದಾಖಲೆಗಳು ಇಂದಿಗೂ ಸಿಗುತ್ತವೆ. ಟಿಪ್ಪುವಿನ ಮತಾಂಧ ಕೃತ್ಯಗಳ ಬಗ್ಗೆ ಪುಸ್ತಕಗಳಷ್ಟು ಬರೆಯಬಹುದು. ಇವತ್ತಿಗೂ ದಕ್ಷಿಣ ಭಾರತದಲ್ಲಿ ಕೇರಳದಲ್ಲೇ ಮದರಸಾಗಳ ಸಂಖ್ಯೆ ಜಾಸ್ತಿ ಇರುವುದಕ್ಕೆ ಕಾರಣ ಟಿಪ್ಪುವಿನ ಮತಾಂಧ ರಾಜ್ಯಭಾರ.

ನಿನ್ನೆ ಹಿರಿಯ ಇತಿಹಾಸಕಾರ ಸ್ನೇಹಿತರೊಬ್ಬರಲ್ಲಿ ಮಾತನಾಡುತ್ತಿದ್ದೆ. ಮಥುರಾದಲ್ಲಿ ಶ್ರೀಕೃಷ್ಣ ಜನ್ಮ ಭೂಮಿಯನ್ನು ನೋಡ ಬಯಸುವುದಾದರೆ ಮಸೀದಿಯ ಒಳಹೊಕ್ಕು ಕೆಳಗಿಳಿದು ಹೋಗುವಂತೇ ಮಾಡಿದ ಮೊಘಲರ ದುರಾಡಳಿತದ ಬಗ್ಗೆ ಗಂಟೆಗೂ ಹೆಚ್ಚುಕಾಲ ವಿವರಿಸಿದರು. ಅದು ಕರ್ಣಾನಂದಕರ ಕಥೆಯಲ್ಲ, ನಮ್ಮ ನೋವಿನ ಇತಿಹಾಸ. ಭಾರತದ ಎಡಬಲದ ತೋಳುಗಳಾಗಿದ್ದ ಜಾಗಗಳನ್ನು ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಗೆ ನೀಡಲಾಯ್ತು. ಇಕ್ಕೆಲಗಳಲ್ಲೂ ಮ್ಲೇಚ್ಛರು!! ಇತಿಹಾಸದಲ್ಲಿ ಮೊಘಲರ ಆಳ್ವಿಕೆ ಆರಂಭವಾದ ದಿನ ಕರಾಳದಿನವೆಂದೇ ಆಚರಿಸಬೇಕಾದ ದಿನ. ಲಕ್ಷೋಪಲಕ್ಷ ಭಾರತೀಯ ಹಿಂದೂಜನರನ್ನು ಬಲಾತ್ಕಾರದಿಂದ ಮತಾಂತರಗೊಳಿಸಿದ ಮತಾಂಧ ರಕ್ಕಸರು ಪವಿತ್ರವಾದ ಹಿಂದೂ ದೇವಸ್ಥಾನಗಳನ್ನು ಕೆಡಹಿ, ಮುರಿದು ಅವುಗಳಮೇಲೆ ಮಸೀದಿಯನ್ನು ಕಟ್ಟಿದರು, ಇದು ಟಿಪ್ಪೂವಿನ ಶ್ರೀರಂಗ ಪಟ್ಟಣದಲ್ಲೂ ಕಾಣಸಿಗುತ್ತದೆ! ತಮ್ಮದಲ್ಲದ ದೇಶದಲ್ಲಿ ಇಲ್ಲಿನ ಜನರ ಪವಿತ್ರ ನೆಲೆಯಾದ ಪೂಜಾ ಮಂದಿರಗಳನ್ನೇ ಧ್ವಂಸಗೊಳಿಸಿ ಈಗ ಅದನ್ನು ತಮ್ಮದೇ ಎಂದು ಸಾರುವ ಮೂಲಕ ಅಯೋಧ್ಯೆ, ಮಥುರಾದಂತಹ ಕ್ಷೇತ್ರಗಳಲ್ಲಿ ಬಹುಸಂಖ್ಯಾಕ ಹಿಂದೂಗಳು ಕೈಕಟ್ಟಿ ಕೂರುವಂತೇ ರಾಜಕೀಯ ದಿಗ್ಬಂಧನ ಹಾಕಿಸಿದ್ದಾರೆ! [ವಿ.ಪಿ.ಸಿಂಗ್ ಪ್ರಧಾನಿಯಾಗದಿದ್ದರೆ ಅಯೋಧ್ಯೆ ಹೊಸದಾಗಿ ರೂಪಗೊಳ್ಳುತ್ತಿತ್ತು. ಮಾತಿಗೆ ಒಪ್ಪಿದ್ದ ಕೆಲವು ಮುಸ್ಲಿ ಮುಂದಾಳುಗಳಿಗೆ ೮ ಕಿಲೋಮೀಟರು ಹೊರಗೆ ಪ್ರತ್ಯೇಕ ಜಾಗವನ್ನು ಕೊಡುವುದನ್ನು ಸ್ವೀಕರಿಸಿ ಅವರು ಬಿಟ್ಟುಕೊಡಲು ಸಿದ್ಧರಾಗುತ್ತಿದ್ದರು; ಆದರೆ ಅದನ್ನು ಕೆಡಿಸಿದ್ದು ವಿ.ಪಿ.ಸಿಂಗ್ ನಡೆಸಿದ ರಾಜಕೀಯ!].

ಹಿಂದೂಸ್ಥಾನ ಹೆಸರಿಗೆ ಮಾತ್ರ ಹಿಂದೂಸ್ಥಾನವಾಗಿದೆಯೇ ಹೊರತು ಹಿಂದೂಗಳ ಯಾವ ಮಾತಿಗೆ ಇಲ್ಲಿ ಬೆಲೆಯಿದೆ? ಕರ್ನಾಟಕದಂತಹ ರಾಜ್ಯಗಳಲ್ಲಿ ಮುಜರಾಯಿ ದೇವಸ್ಥಾನಗಳಲ್ಲಿ ಒಟ್ಟಾಗುವ ಅಷ್ಟೂ ಕಾಣಿಕೆ, ದೇಣಿಗೆ ಮೊದಲಾದ ಹಣವನ್ನು ಕೆಟ್ಟ ರಾಜಕಾರಣಿಗಳು ಹಜ್ ಯಾತ್ರೆಗೆ ಉಪಯೋಗಿಸುತ್ತಿದ್ದಾರೆ; ಇಂದಿಗೂ ನಮ್ಮದೇಶದಲ್ಲೇ ಇರುವ ಕಾಶಿ, ತಿರುಪತಿ, ಮಧುರೈ, ಕಾಂಚಿ, ಅವಂತಿ ಇಂತಹ ಕ್ಷೇತ್ರಗಳಿಗೆ ಹೋಗಲು ಪರದಾಡುವ ನಮ್ಮ ಬಡವರಿಗೆ ಯಾವುದೇ ಸಹಾಯ-ಸೌಕರ್ಯ-ಸೌಲಭ್ಯ ಇದೆಯೇ? ಅಲಹಾಬಾದಿನಲ್ಲಿ ೧೫೦ ವರ್ಷಗಳಿಗೊಮ್ಮೆ ಘಟಿಸುವ ಅಪರೂಪದ ಕುಂಭಮೇಳ ನಡೆಯುತ್ತಿದೆ-ಭಾರತ ಸರಕಾರವಾಗಿದ್ದರೆ ಅದಕ್ಕೆ ಪ್ರೋತ್ಸಾಹಧನ, ಸೌಕರ್ಯ ಏರ್ಪಡಿಸಬೇಕಿತ್ತು, ದೇಶವ್ಯಾಪಿ ಅಲ್ಲಿಗೆ ಹೋಗುವ ಮಂದಿಗೆ ವ್ಯವಸ್ಥೆ ಕಲ್ಪಿಸಬೇಕಿತ್ತು, ಹಾಗಿಲ್ಲಾ ಯಾಕೆಂದರೆ ಇಂದು ಇರುವುದು ಇಂಡಿಯಾ ಸರಕಾರ. ಅಲ್ಪಸಂಖ್ಯಾತರು ಬಹುಸಂಖ್ಯಾತರನ್ನು ಆಳುವ ಇಂಡಿಯಾ ಸರಕಾರ! ಮೊಘಲರ ಕಾಲಕ್ಕೆ ಹಿಂದೂ ಪ್ರದೇಶಗಳ ಮೂಲ ಹೆಸರುಗಳನ್ನೇ ಅವರು ಬದಲಾಯಿಸಿದರು: ಅಲಹಾಬಾದ್, ಮುಹಫರಾಬಾದ್, ಸಿಕಂದರಾಬಾದ್, ಹೈದರಾಬಾದ್, ಅಹ್ಮದಾಬಾದ್ ಇಂಥ ಹೆಸರುಗಳನ್ನು ಕೇಳುತ್ತಿದ್ದರೆ ಕಿವಿಯಲ್ಲಿ ಕಾಯಿಸಿದ ಸೀಸವನ್ನು ಸುರಿದ ಭಾಸವಾಗುತ್ತದೆ. ಭಾರತ ಭಾರತವಾಗೇ ಇದ್ದರೆ ಇಂದು ಆ ಹೆಸರುಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು, ಇತಿಹಾಸದಲ್ಲಿ ಮುರಿದ, ಹಾಳುಗೆಡವಿದ ದೇವಸ್ಥಾನಗಳ ಬಗ್ಗೆ ಕಾಳಜಿ ಬರುತ್ತಿತ್ತು, ಆ ಮೂಲಕ ಆ ಯಾ  ಪ್ರದೇಶಗಳ ಹೆಸರುಗಳನ್ನು ನವೀಕರಿಸಿ ದೇವಾಲಯಗಳ ಪುನರ್ನಿರ್ಮಾಣ ನಡೆಸಲ್ಪಡುತ್ತಿತ್ತು. ಆದರೆ ಇಂದಿರುವ ಇಂಡಿಯಾ ಸರಕಾರಕ್ಕೆ ಇಚ್ಛಾಶಕ್ತಿಯನ್ನು ಪಡೆದುಕೊಳ್ಳುವ ತಾಕತ್ತೇ ಮೊದಲಿಗೆ ಇಲ್ಲ. ಇದಕ್ಕೆ ಕಾರಣ ಸಂವಿಧಾನದ ಲೋಪದೋಷಗಳು. 

ಅಂದೆಂದೋ ಗಡಿಬಿಡಿಯಲ್ಲಿ ಅಂಬೇಡ್ಕರರು ಬರೆದ ಸಂವಿಧಾನ ಸಾರ್ವಕಾಲಿಕವೆಂದುಕೊಳ್ಳುತ್ತಾ ರಾಜಕೀಯದ ಜನ ಹಾಗೇ ಕೂತಿದ್ದಾರೆ. ಈಗ ಅಲ್ಪಸಂಖ್ಯಾತರೆಂಬ ಹಂಗಿಲ್ಲ-ಎಲ್ಲರೂ ಬಹುಸಂಖ್ಯಾಕರೇ. ಅವರಿಗೆ ಹಾಕಿದ ನೀತಿ-ನಿಯಮಗಳು ನವೀಕರಣಗೊಳ್ಳಬೇಕು. ಮ್ಲೇಚ್ಛ ಧರ್ಮ ಹೇಗೇ ಇರಲಿ ಅವರು ಭಾರತದಲ್ಲಿ ವಾಸವಿರಬೇಕು ಎಂದರೆ ಅವರು ಒಂದೇ ಮದುವೆಯಾಗಬೇಕು, ಬುರ್ಖಾ ಪದ್ಧತಿ ರದ್ದುಗೊಳಿಸಬೇಕು, ಕುಟುಂಬ ಯೋಜನೆಗೆ ಬದ್ಧರಾಗಬೇಕು ಎಂಬ ಕಾಯ್ದೆಗಳನ್ನು ಖಡಾಖಂಡಿತವಾಗಿ ಜಾರಿಗೊಳಿಸಬೇಕಿತ್ತು. ಎದ್ದರೆ ಬೆಳಿಗ್ಗೆ ಹಾಲನ್ನು ಕುಡಿಯುವ ಜನ ಹಾಲುಕೊಡುವ ಹಸುವನ್ನೇ ವಧಿಸಿ ತಿನ್ನುವ ಧರ್ಮವೆಂದರೆ ಎಂಥಾ ಕೆಟ್ಟದ್ದಿರಬೇಕೆಂದು ನೀವೇ ಯೋಚಿಸಿ. ಗೋಹತ್ಯೆಯನ್ನು ನಿಷೇಧಿಸುವ ದಾರ್ಷ್ಟ್ಯ ನಮ್ಮ ರಾಜಕೀಯ ಪುಢಾರಿಗಳಿಗಿಲ್ಲ ಯಾಕೆಂದರೆ ಅವರಿಗೆ ಅಧಿಕಾರ ಬೇಕು, ಗದ್ದುಗೆಯ ಏರುವುದಕ್ಕೆ ಮ್ಲೇಚ್ಛರ ವೋಟುಬೇಕು! ಬಡ್ಡೀಮಕ್ಕಳಿಗೆ ಅವರ ಸಾಮಾನು ಕೊಯ್ದು, ಕಿವಿಯಲ್ಲಿ ಸೀಸಹೊಯ್ದು, ಬಾಯಲ್ಲಿ ಕತ್ತೆಮಾಂಸ ತುರುಕಿ ಬಲಾತ್ಕಾರವಾಗಿ ಮತಾಂತರ ಮಾಡಿ ಅವರ ಹೆಂಗಸರಿಗೆ ಬುರ್ಖಾ ತೊಡಸುವವರೆಗೂ ರಾಜಕೀಯದ ಬಡ್ಡೀಮಕ್ಕಳು ಎಚ್ಚೆತ್ತುಕೊಳ್ಳುವುದಿಲ್ಲ. ತಮ್ಮ ಬೇಳೇ ಬೇಯಿಸಿಕೊಳ್ಳಲಿಕ್ಕಾಗಿ ಸೆಕ್ಯುಲರಿಸಂ ಎಂಬ ಪದ ಹುಟ್ಟುಹಾಕಿ ಸರಸಂಘವನ್ನೇ ದೂಷಿಸಿದರು, ದೂಷಿಸುತ್ತಾರೆ. ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿ ಹಿಂದೆ ಯಾವುದೋ ಪ್ರಸಿದ್ಧ ಹೆಸರಿನಿಂದ ಕರೆಯಲ್ಪಡುತ್ತಿತ್ತಂತೆ. ಆ ಹೆಸರನ್ನೇ ಮಾಯವಾಗಿಸಿದ ಚಾಕಚಕ್ಯತೆ ಮ್ಲೇಚ್ಛರದು. ಅಲ್ಲಿಯೂ ದತ್ತಪಾದುಕೆಗಳು ಮೊದಲೇ ಇದ್ದವು, ಅದೂ ತಮ್ಮದೇ ಜಾಗ ಎಂದು ಕೂತ ಮ್ಲೇಚ್ಛರಿಗೆ ಸರಕಾರ ಉತ್ತರ ಹೇಳುವಲ್ಲಿ ವಿಫಲವಾಗುತ್ತಿದೆ ಯಾಕೆಂದರೆ ರಾಜಕಾರಣಿಗಳಿಗೆ ಮ್ಲೇಚ್ಛರ ವೋಟು ಬೇಕು!      

ಬೀದಿಗೊಂದು ಪಕ್ಷ, ಮನೆಗೊಂದು ಪಕ್ಷ ಹೀಗೆಲ್ಲಾ ಹುಟ್ಟಿಕೊಂಡು ಅದನ್ನೇ ರಾಷ್ಟ್ರೀಯ ಪಕ್ಷವೆಂದು ಬಿಂಬಿಸಿಕೊಂಡ ಅಧಿಕಾರ ದಾಹಿಗಳು ದೇಶದ ಏಕೀಕರಣ, ದೇಶದ ಭದ್ರತೆ, ಸುರಕ್ಷತೆ, ದೇಶವಾಸಿ ಬಹುಸಂಖ್ಯಾಕ ಹಿಂದೂಗಳಿಗೆ ಆದ್ಯತೆ ಇವನ್ನೆಲ್ಲಾ ಮರೆತು ಹೇಲುತಿನ್ನುವ ಹಂದಿಯಹಾಗೇ ಬೀದಿಯ ಬದಿಗೆ ಹೊರಕಡೆಗೆ[ಬಹಿರ್ದೆಶೆಗೆ] ಕುಳಿತವರ ಹಿಂದೆ ಸಾಗಿಬಿಟ್ಟರು! ದೇಶಭಕ್ತರನೇಕರು ಹೇಳುತ್ತಲೇ ಇರುವುದು ಕೋಣನ ಮುಂದೆ ಕಿನ್ನರಿ ಬಾರಿಸಿದಂತೇ ಕೆಲಸಕ್ಕೆ ಬರದೇ ಹೋಯ್ತು. ಬಹುಮತ ಸಿಗದ ಪಕ್ಷಗಳ ಮೇಲಾಟದಿಂದ ಕೇಂದ್ರದಲ್ಲೂ ರಾಜ್ಯಗಳಲ್ಲೂ ಸಮ್ಮಿಶ್ರ ಸರಕಾರಗಳೆಂಬ ಹೊಸ ರೂಪ ಹಾದಿ ಹಿಡಿಯಿತು. ಅಪವಿತ್ರ ಮೈತ್ರಿಗಳಿಂದುಂಟಾಗುವ ಪಕ್ಷ-ಪಕ್ಷಗಳ ನಡುವಣ ತೇಪೆ ವಿನಾಕಾರಣ ಹರಿದುಹೋಗುತ್ತಲೂ ಮುರಿದುಬೀಳುತ್ತಲೂ ಇರುವುದನ್ನು ಕಾಣಬಹುದಾಗಿದೆ; ಪುನಃ ಚುನಾವಣೆ, ಪುನಃ ಮರುಚುನಾವಣೆ. ಐದು ವರ್ಷಗಳಕಾಲ ಸ್ಥಿರವಾಗಿ ನಿಲ್ಲುವ ಸರಕಾರ ಸ್ಥಾಪನೆಯಾಗುವುದು ಕನಸಿನ ಮಾತಾಗಿದೆ-ಇದಕ್ಕೆಲ್ಲಾ ಕಾರಣ ನಮ್ಮ ಸಂವಿಧಾನದ ಲೋಪದೋಷಗಳು. ಇಲ್ಲಿ ಆಳುವ ಮತ್ತು ವಿರೋಧಿಸುವ ಎರಡೇ ಪಕ್ಷಗಳಿದ್ದರೆ ಈ ರೀತಿ ಮೇಲಾಟಗಳೂ ಕುದುರೆ ವ್ಯಾಪಾರಗಳೂ ಇರುತ್ತಿರಲಿಲ್ಲ. ರಾಜಕೀಯ ಸನಾತನ ಧರ್ಮಾಧಾರಿತವಾಗಿದ್ದರೆ ಈ ಸ್ಥಿತಿ ದೇವರಾಣೆಗೂ ಬರುತ್ತಿರಲಿಲ್ಲ!  ಅಂದು ರಾಜರಿದ್ದರು, ಪ್ರಜೆಗಳ ಅಹವಾಲನ್ನು ಹೊತ್ತುಬಂದ ಮಂತ್ರಿಗಳೆಲ್ಲರ ಸಭೆಯನ್ನು ಕರೆದು ಚರ್ಚಿಸಿ ಯಥಾಯೋಗ್ಯ ನಿರ್ಧಾರವನ್ನು ಕೈಗೊಳ್ಳುತ್ತಿದ್ದರು; ಇಂದು ಪ್ರಜೆಗಳೇ ರಾಜರು ಹೇಳುವುದಕ್ಕೂ ಕೇಳುವುದಕ್ಕೂ ಸಮಯವೇ ಇಲ್ಲ-ಬರೇ ವೋಟು ತೆಗೆದುಕೊಳ್ಳುವುದಕ್ಕೆ ಮಾತ್ರ ಸಮಯ ಸಿಗುತ್ತದೆ! ವಿರೋಧ ಪಕ್ಷಗಳ ಸ್ಥಾನದಲ್ಲಿ ಕೂರುವ ಕೋಮುವಾದಿ ಪ್ರಾದೇಶಿಕ ಪಕ್ಷಗಳು ’ಜಾತ್ಯಾತೀತ’ ಎಂಬ ಬೋರ್ಡನ್ನು ನಿಧಾನಕ್ಕೆ ಮುಂದಿಟ್ಟುಕೊಂಡು ಪೆಟ್ಟಿ ಅಂಗಡಿಯನ್ನು ತೆರೆಯುತ್ತಾರೆ, ಪೆಟ್ಟಿ ಅಂಗಡಿಯಲ್ಲಿ ನಡೆಯುವ ಅವ್ಯವಹಾರದ ಸೂತ್ರಗಳಿಂದ ಪೆಟ್ಟಿ ಹೋಗಿ ಕಟ್ಟಡವಾಗುತ್ತದೆ, ಕಟ್ಟಡಗಳಾಗುತ್ತವೆ,  ೧೧ ಎಕರೆ ಭೂಮಿಯುಳ್ಳ ರೈತನ ಮಗ ೧೨೦೦ ಕೋಟಿಗಳಿಗೂ ಅಧಿಕ ಆಸ್ತಿಗೆ ಒಡೆಯನಾಗುತ್ತಾನೆ! ಮೂರ್ಖಜನ ಮಣ್ಣಿನ ಮಗನ ಬಗ್ಗೆ ಖ್ಯಾತೆ ತೆಗೆಯದೇ ಜೈಕಾರ ಹಾಕುತ್ತಾರೆ-ಎಂಜಲು ಕಾಸಿಗೆ ಕೈ ಒಡ್ಡುತ್ತಾರೆ. ಕೇವಲ ಗಳಿಕೆಯ ಉದ್ದೇಶಕ್ಕಾಗಿಯೇ ಇನ್ವೆಸ್ಟ್ ಮೆಂಟ್  ಇಂಡಷ್ಟ್ರಿ ರಾಜಕೀಯ ಮಾಡುವ ಖೂಳರಿಗೆ ದೇಶದ/ರಾಜ್ಯದ ಹಿತಾಸಕ್ತಿಯ ಬಗ್ಗೆ ಗಮನವೀಯಲು ಸಾಧ್ಯವೇ?     

ಪಂಚತಂತ್ರದ ಕಥೆಯೊಂದು ನೆನಪಿಗೆ ಬರುತ್ತಿದೆ; ಅದು ಅವಿವೇಕಿ ಆಮೆಯ ಕಥೆ. ಸಾರಾಂಶ ಹೇಳಿಬಿಡುತ್ತೇನೆ: ಶಕಟ-ವಿಕಟರೆಂಬ ಎರಡು ಹಂಸಗಳು ಮತ್ತು ಕಂಬುಗ್ರೀವನೆಂಬ ಆಮೆಯೂ ಕೇರಳರಾಜ್ಯದ ಕೊಳವೊಂದರಲ್ಲಿ ವಾಸವಾಗಿದ್ದವು. ಅಲ್ಲೊಮ್ಮೆ ಬರಗಾಲ ಬಂದು ಕೊಳದ ನೀರು ಬರಿದಾಗುತ್ತಾ ಬಂತು.  ಹಲವು ಚಿಕ್ಕಪುಟ್ಟ ಜಲಚರಗಳು ಸತ್ತು ಕೆಲವುಮಾತ್ರ ಉಳಿದುಕೊಂಡಿದ್ದವು. ಚಿಂತಾಕ್ರಾಂತವಾದ ಶಕಟ-ವಿಕಟರು ತಮ್ಮ ದುಃಖವನ್ನು ಕಂಬುಗ್ರೀವನಲ್ಲಿ ತೋಡಿಕೊಂಡವು. ವಾಚಾಳಿಯಾದ ಆ ಆಮೆ ತನ್ನನ್ನೇನು ಕೇಳುತ್ತೀರಿ, ತನ್ನನ್ನು ಬಿಟ್ಟುಹೋದರೆ ತಾನು ಇಲ್ಲೇ ಸಾಯುತ್ತೇನಷ್ಟೇ, ನೀವಾದರೋ ಹಾರಬಲ್ಲವರು ಏನಾದರೂ ಉಪಾಯಮಾಡಿ ಎಂದು ಹೇಳಿತು. ದಿನವೆರಡು ಕಳೆದಮೇಲೆ ಶಕಟ-ವಿಕಟ ಮತ್ತು ಕಂಬುಗ್ರೀವ ಮತ್ತೆ ಮೀಟಿಂಗು ಸೇರಿದವು. ತಾವೊಂದು ಉಪಾಯ ಹುಡುಕಿದ್ದೇವೆಂತಲೂ ಆ ಪ್ರಕಾರವಾಗಿ ಚಿಕ್ಕ ಕೋಲೊಂದರ ಎರಡು ತುದಿಗಳನ್ನು ತಾವು ಕಚ್ಚಿಹಾರುವಾಗ ಮಧ್ಯದ ಭಾಗದಲ್ಲಿ ಕಂಬುಗ್ರೀವ ಅದನ್ನು ಗಟ್ಟಿಯಾಗಿ ಕಚ್ಚಿಹಿಡಿದರೆ ನೀರಿರುವ ದೂರಕ್ಕೆ ತೆರಳಬಹುದೆಂದೂ, ಮಧ್ಯೆ ಅಪ್ಪಿತಪ್ಪಿ ಕಂಬುಗ್ರೀವ ಮಾತನಾಡಿದರೆ ಅದಕ್ಕೆ ಅಪಘಾತ ಸಂಭವಿಸುತ್ತದೆಂದೂ ಹಂಸಗಳು ತಿಳಿಸಿದವು. ಆನಂದ ತುಂದಿಲನಾದ ಕಂಬುಗ್ರೀವ ಅಸ್ತು ಎಂದ ನಂತರ ಚಿಕ್ಕ ಕೋಲನ್ನು ಅವು ಕಚ್ಚಿಹಿಡಿದವು. ಕಡ್ಡಿಯ ಮಧ್ಯ ಭಾಗವನ್ನು ಕಂಬುಗ್ರೀವ ಕಚ್ಚಿಹಿಡಿದ, ಹೊರಟಿತು ಸವಾರಿ, ಕಾಡುಮೇಡು-ಗುಡ್ಡ-ಗೋಪುರ-ನದಿ-ಕೊಳ ಎಂದೆಲ್ಲಾ ಸಿಗುವ ಕೇರಳದ ಬರಡಾದ ಪ್ರಾಂತವನ್ನು ಬಿಟ್ಟು ನೀರಿರುವ ದೂರದ ರಾಜ್ಯಕ್ಕೆ ಹಾರತೊಡಗಿದವು. ಹಾರಿಹೋಗುವ ದಾರಿಯಲ್ಲಿ ಹಾಗೊಮ್ಮೆ ಸಾಗುವಾಗ ಶಾಲೆಮುಗಿಸಿ ಮರಳುತ್ತಿದ್ದ ಮಕ್ಕಳು ಈ ವಿಚಿತ್ರವನ್ನು ನೋಡಿದವರೇ ಕೈತಟ್ಟಿ "ಹೋ" ಎಂದು ನಕ್ಕವು. ತಾವು ಎಂದೆಂದೂ ನೋಡಿರದ ವಿಚಿತ್ರವೆಂದೂ ಅದೇನೋ ವಿಷ್ಣುಚಕ್ರವೋ ತಿರುಗುವ ಗಿರಿಗಿಟಿಯೋ ಎಂದೆಲ್ಲಾ ತಲೆಗೊಂದರಂತೇ ಆಶ್ಚರ್ಯದಿಂದ ಕೂಗಿದವು. ಆ ಕೂಗು ಕೋಲನ್ನು ಬಾಯಲ್ಲಿ ಕಚ್ಚಿ ಹಿಡಿದಿದ್ದ ಕಂಬುಗ್ರೀವನಿಗೂ ಕೇಳಿಸಿತು. ತಾನು ಯಾರೆಂದು ಗುರುತಿಸಿಕೊಂಡು ಮಕ್ಕಳಿಗೆಲ್ಲಾ ಬೈಯ್ಯುವ ಮನಸ್ಸಾಗಿ  ಅದು ತಾನು ಯಾವುದೇ ಚಕ್ರವಲ್ಲಾ ಕಂಬುಗ್ರೀವನೆಂಬ ಆಮೆ, ಕೇರಳಕೊಳದವನು ಎನ್ನಲು ಬಾಯ್ದೆರೆದು ಸಾವಿರಾರು ಅಡಿಗಳ ಎತ್ತರದಿಂದ ಕೆಳಕ್ಕೆ ಬಂಡೆಯೊಂದರ ಮೇಲೆ ಧೊಪ್ಪನೆ ಬಿದ್ದುಬಿಟ್ಟಿತು; ಬಿದ್ದ ರಭಸಕ್ಕೆ ಅದರ ಚಿಪ್ಪು ನುಚ್ಚುನೂರಾಗಿ ಆಮೆ ಸತ್ತುಹೋಯ್ತು. ಸಂಗಾತಿಗಳಾಗಿ ಅದನ್ನು ಸಾಗಿಸುತ್ತಿದ್ದ ಶಕಟ-ವಿಕಟಗಳು ಕಂಬುಗ್ರೀವನ ಮೂರ್ಖತನದ ಫಲಶ್ರುತಿಗೆ ಕಣ್ಣೀರ್ಗರೆದವು-ತಮ್ಮ ಹಾದಿ ತಾವು ಹಿಡಿದವು. 

ಕಥೆಯನ್ನು ಕೇಳಿದ ನಿಮಗೆ ಕಥೆಯ ಇಂದಿನ ಅಗತ್ಯತೆಯ ಬಗ್ಗೆ ಸಂಶಯ ಮೂಡಬಹುದು ಅಥವಾ ಗ್ರಹಿಸದಿದ್ದರೆ ಅಸಡ್ಡೆಯನ್ನೂ ತೋರಬಹುದು. ಇಲ್ಲಿ ನಮ್ಮ ಶ್ರುತಿ-ಸ್ಮೃತಿ-ಪುರಾಣಗಳು ಶಕಟವೆಂಬ ಹಂಸವಾದರೆ, ಭಾರತದ ಸಾಧುಸಂತರು-ಸರಸಂಘ ಎಲ್ಲಾಸೇರಿ ವಿಕಟವೆಂಬ ಹಂಸವೆಂದು ನಾವು ತಿಳಿಯಬೇಕಾಗುತ್ತದೆ. ಸನಾತನ ಜೀವನಧರ್ಮವೆಂಬ ಕೋಲನ್ನು ಹಿಡಿದು ’ಇಂಡಿಯಾ’ ಎಂಬ ಬರಗಾಲದ ಕೊಳದಲ್ಲಿ ಸದ್ಯ ವಾಸಿಸುತ್ತಿರುವ ಹಿಂದೂ ಜನಸಂದೋಹವೆಂಬ ಕಂಬುಗ್ರೀವನನ್ನು ’ಭಾರತ’ವೆಂಬ ನೀರಿರುವ ಕೊಳದೆಡೆ ಅವು ಸಾಗಿಸುತ್ತವೆ. ವಾಚಾಳಿಗಳೂ ದೂಷಿತ ರಾಜಕೀಯದಿಂದ ಕೂಡಿದವರೂ ಆದ ನಾವು ಕೋಲನ್ನೇನೋ ಕಚ್ಚಿಕೊಳ್ಳುತ್ತೇವೆ. ಎಡಪಂಥೀಯರು ಶಾಲಾಮಕ್ಕಳಾಗಿ ನಮ್ಮೆಡೆಗೆ ಕಲ್ಲುಬಿಸುಡುತ್ತಾರೆ, ವಿಚಿತ್ರವೆಂದು ಟೀಕಿಸುತ್ತಾರೆ. ಅವರ ಜೊತೆಗೆ ದೇಶದ್ರೋಹಿ ಮ್ಲೇಚ್ಛರು, ಯವನರು ಕುಮ್ಮಕ್ಕು ನೀಡಿ ಇನ್ನೂ ಹೆಚ್ಚು ಅಟಕಾಯಿಸುತ್ತಾರೆ.  ಸ್ವಭಾವಜನ್ಯ ದೋಷದಿಂದ ನಮ್ಮನ್ನು ನಾವು ’ಜಾತ್ಯಾತೀತರು’, ’ಮಾನವಕುಲತಾನೊಂದೇವಲಮ್’ ಎಂದೆಲ್ಲಾ ಬಿಂಬಿಸಿಕೊಂಡು ’ದೊಡ್ಡವರಾಗಲು’ ಬಾಯ್ದೆರೆಯುತ್ತೇವೆ-ಪರಿಣಾಮವನ್ನು ನಾನು ಘೋಷಿಸಬೇಕಾಗಿಲ್ಲ, ನೀವು ಅರಿಯದವರಲ್ಲ!  ನೋಡಿ ಪಂಚತಂತ್ರ ಇಲ್ಲಿ ಹೇಗೆ ಕೆಲಸಮಾಡಿತು ಎಂಬ ಕೌತುಕ ನಿಮ್ಮದಾಗಿರುತ್ತದೆ. ’ಮಾನವಕುಲ ತಾನೊಂದೇವಲಮ್’ ಎಂಬುದು ಸನಾತನ ಧರ್ಮದ ಚೌಕಟ್ಟಿಗೆ ಮಾತ್ರ ಮೀಸಲಾಗಿರಲಿ. ಅನ್ಯ ಮತೀಯರು ಇದನ್ನು ಒಪ್ಪಿಕೊಳ್ಳುವುದಾದರೆ ಬರಲಿ, ಬರದಿದ್ದರೆ ಅವರನ್ನು ದೂರವಿಡಿ, ಮಾತು ಕೇಳದೇ ಬಾಲಬಿಚ್ಚಿ ಬುಸುಗುಟ್ಟಿದರೆ ಹೆಡೆಯನ್ನೇ ತುಳಿದುಬಿಡಿ! ಓ ನನ್ನ ಭಾರತ ವಾಸಿಗಳೇ ಇಂಡಿಯಾ ಅಲ್ಲ ಇದು ಭಾರತವಾಗಬೇಕು; ಇಂಡಿಯಾ ಅಲ್ಲ ಭಾರತ-ಅದು ನನ್ನ ಜನ್ಮಸಿದ್ಧ ಹಕ್ಕು. ಏಳಿ, ಅದಕ್ಕಾಗಿ ಸಿದ್ಧರಾಗಿ, ಭಾರತವೆಂಬ ಹೆಸರಂತೂ ನಶಿಸಿಹೋಗಿದೆ, ಭಾರತವೇ ಮ್ಲೇಚ್ಛಮಯವಾಗಿಹೋಗುವುದರ ಮೊದಲು ಇಂಡಿಯಾ ಭಾರತವಾಗಬೇಕು, ಇಂಡಿಯಾ ಭಾರತವಾಗಬೇಕು, ಇಂಡಿಯಾ ಭಾರತವಾಗಲೇಬೇಕು-ಅದೂ ಅಖಂಡ ಭಾರತವಾಗಬೇಕು.

ಜೈ ಹಿಂದ್   ಜೈ ಹಿಂದ್

ಜೈ ಹಿಂದ್

7 comments:

 1. ಹೋಯ್ ವಿ. ಆರ್ . ಭಟ್ರು ,

  ಭಾರಿ ಬರೆತ್ರಿ.

  ನಮಗಿನ್ನೂ ಕಾಶ್ಮೀರಿ ಪಂಡಿತರ ಸಮಸ್ಯೆನೇ ಸುಧಾರ್ಸುಲಾಯ್ದಿಲ್ಲೇ. ಮುಸ್ಲಿಮ್ಸ್ ಎಲ್ಲ ಓಡ್ಸಿ , ಆಮೇಲೆ ಮುಸ್ಲಿಂ ದೇಶದಿಂದ ಬಪ್ಪೋ ಹಿಂದೂ ತಂಡಗಳನ್ನೆಲ್ಲಾ ಹೆಂಗ್ರೋ ಸುಧಾರ್ಸುದು ?

  ReplyDelete
  Replies
  1. ಹರಿಹರ ಭಟ್ಟರೇ, ಸ್ವಾತಂತ್ರ್ಯಾನಂತರ ಭಾರತ ವಿಭಜನೆಗೂ ಮುನ್ನ, ಕಾಶ್ಮೀರದಲ್ಲಿ ರಾಜನೊಬ್ಬ ಆಳುತ್ತಿದ್ದ, ಏಕೀಕರಣ ಆದಾಗ ಅವನು ಇನ್ನೂ ಭಾರತದೊಟ್ಟಿಗೆ ಮಿಲನಾವಾಗಿರಲಿಲ್ಲ, ಪಾಕಿಗಳು ಬೇರೇ ಆದಮೇಲೆ ಆತ ಭಾರತಕ್ಕೆ ಸೇರಿಕೊಂಡ ಎಂಬುದು ಮುಲ್ಲಾಗಳ ಹೇಳಿಕೆ. ಕಾಶ್ಮೀರ ಹಾಗಾಗಿ ಅವರದೇ ಅಂತೆ! ಕಾಶ್ಮೀರದ ಸಮಸ್ಯೆಗೆ ಪರಿಹಾರ ಪಾಕಿಸ್ತಾನವನ್ನು ನಾಶಗೊಳಿಸಿದರೆ ಮಾತ್ರ ಸಿಗುತ್ತದೆ. ಈ ದೇಶದಲ್ಲೂ ಮೂಲೆ ಮೂಲೆಗಳಲ್ಲಿ ಇರುವ ಮುಲ್ಲಾಗಳು, ಮೌಲ್ವಿಗಳು ಅದಕ್ಕೆ ಕುಮ್ಮಕ್ಕು ನೀಡುತ್ತಲೇ ಬಂದಿದ್ದಾರೆ.

   ಇನ್ನು ಹಿಂದೂ ಒಲಪಂಗಡಗಳ ಸಮಸ್ಯೆ ಪರಿಹರಿಸುವುದು ದೊಡ್ಡವಿಷಯವಲ್ಲ. ಅದನ್ನು ಇಲ್ಲಿ ಮಾತನಾಡುವುದು ಬೇಡ ಎಂಬುದು ನನ್ನ ಕೋರಿಕೆ. ಅಭಿಪ್ರಾಯ ತಿಳಿಸಿದ್ದಕ್ಕೆ ನಿಮಗೆ ಧನ್ಯವಾದ.

   Delete
 2. ಲೇಖನ ಚೆನ್ನಾಗಿದೆ. ನಮ್ಮ ಹಣೆಬರಹಕ್ಕೆ ನಾವೇ ಹೊಣೆಗಾರರೇ? ಅಯ್ಯೋ ವಿಧಿಯೇ!

  ReplyDelete
  Replies
  1. ಧನ್ಯವಾದ, ಯುದ್ಧಕ್ಕೆ ಸನ್ನದ್ಧರಾಗಿಯೇ ಇರಿ :)

   Delete
 3. This comment has been removed by the author.

  ReplyDelete
  Replies
  1. ಸಮಯವಿದ್ದಾಗ ನಿಮ್ಮ ಲೇಖನಗಳನ್ನ ಓದುತ್ತ ಇರುತ್ತೇನೆ. ನಿಮ್ಮ point and shoot style ಇಷ್ಟವಾಗುತ್ತದೆ. ಆದರೆ ಸಂಪೂರ್ಣ ಬದಲಾವಣೆ ಈಗಿನ ಹೊಲಸು ರಾಜಕೀಯದಲ್ಲಿ ಅಸಾದ್ಯದ ಮಾತು. ಏನಂತೀರ ಭಟ್ರೇ ...

   Delete
  2. ನೀವು ಹೇಳಿದ್ದು ಸರಿ, ಆದರೆ ಪ್ರಮುಖ ರಾಜಕೀಯ ನಿರ್ಧಾರಗಳು ಈ ದೇಶದ ಮೂಲನಿವಾಸಿಗಳಿಗೆ ಆದ್ಯತೆ ನೀಡಬೇಕು, ಹಾಗೆ ಮುನ್ನಡೆಯುವಲ್ಲಿ ನಾವು ರಾಜಕೀಯದ ದೊರೆಗಳ ಜುಟ್ಟು ಜನಿವಾರ ಹಿಡಿದು ಝಾಡಿಸಬೇಕು, ಧನ್ಯವಾದ

   Delete