ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, September 2, 2012

ಗಾಂಧೀಜಿಯವರ ಒಂದು ತಪ್ಪು ದೇಶವನ್ನೇ ದಹಿಸುತ್ತಿದೆ; ದೇಶದ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ !

ಚಿತ್ರಕೃಪೆ : ಅಂತರ್ಜಾಲ

ಗಾಂಧೀಜಿಯವರ ಒಂದು ತಪ್ಪು ದೇಶವನ್ನೇ ದಹಿಸುತ್ತಿದೆ; ದೇಶದ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ !

ಚಕ್ರವರ್ತಿಯೊಬ್ಬನ ದೊಡ್ಡ  ಆಸ್ಥಾನದಲ್ಲಿ ಬಹುದೊಡ್ಡ ಜ್ಯೋತಿಷಿಯೊಬ್ಬನಿದ್ದ. ಆತನಿಗೆ ಪುತ್ರೋತ್ಸವವಾಯ್ತು. ಪುತ್ರೋತ್ಸವದ ಸಂಭ್ರಮಾಚರಣೆಗಳು ಮುಗಿದಮೇಲೆ ಜ್ಯೋತಿಷಿ ಮಗನ ಜಾತಕವನ್ನು ಕೂಲಂಕಷವಾಗಿ ಅವಲೋಕಿಸಿದ; ಮಗನಿಗೆ ಕಳ್ಳನಾಗುವ ಯೋಗ ಬರೆದಿತ್ತು. ವಿಧಿಲಿಖಿತವನ್ನು ಯಾರೂ ತಪ್ಪಿಸಲು ಸಾಧ್ಯವೇ ಇಲ್ಲ! ಜ್ಯೋತಿಷಿಯ ಯಾವ ಪೂರ್ವಜನ್ಮದ ಕರ್ಮವೋ ಆತ ಅಂತಹ ಮಗನನ್ನು ಪಡೆದಿದ್ದ. ತನಗಿರುವ ಒಳ್ಳೆಯ ಹೆಸರನ್ನೂ ಗೌರವವನ್ನೂ ಕೆಡಿಸುವುದರ ಜೊತೆಗೆ ಸಮಾಜಕ್ಕೆ ತೊಂದರೆಕೊಡಬಹುದಾದ ಕಂದನ ಬಗ್ಗೆ ಯೋಚಿಸುತ್ತಾ ಜ್ಯೋತಿಷಿ ಹೈರಾಣಾಗಿಹೋದ. ಏನಾದರೂ ಮಾಡಿ ತನ್ನ ಮಗ ಕಳ್ಳನಾಗುವುದನ್ನು ತಪ್ಪಿಸಬೇಕೆಂಬುದು ಜ್ಯೋತಿಷಿಯ ಬಯಕೆಯಾಗಿತ್ತು; ಅದಕ್ಕಾಗಿ ತನ್ನಲ್ಲಿರುವ ಏನನ್ನು ಬೇಕಾದರೂ ಆತ ಕೊಡಲು ಸಿದ್ಧನಿದ್ದ. ಆದರೆ ಯಾವ ಪರಿಹಾರವೂ ಇರಲಿಲ್ಲ. ಇರುವ ಯೋಗಗಳನ್ನು ಅವು ಒಳ್ಳೆಯವೇ ಆಗಿರಲಿ ಕೆಟ್ಟವೇ ಆಗಿರಲಿ ತಪ್ಪಿಸಲು ಯಾರಿಂದಲೂ ಆಗುವುದಿಲ್ಲ; ಯಾವ ಹೋಮ-ನೇಮಗಳಿಂದಲೂ ವಿಧಿಬರಹ ಬದಲಾಗುವುದಿಲ್ಲ. ಜ್ಯೋತಿಷಿ ಬಹಳಕಾಲ ಯೋಚಿಸಿದ, ಮಗ ಕಥೆ ಕೇಳುವ ಹಂತಕ್ಕೆ ಬೆಳೆದಮೇಲೆ ಮಗನಿಗೆ ಕಥೆಗಳನ್ನು ಹೇಳಿದ. ಯಾವ ಯಾವ ವಸ್ತುಗಳನ್ನು ಕದ್ದರೆ ನರಕದಲ್ಲಿ ಯಾವ ಯಾವ ಶಿಕ್ಷೆ ಎಂಬುದನ್ನು ಮನಸ್ಸಿಗೆ ನಾಟುವಂತೇ ಮಗನಿಗೆ ಬೋಧಿಸಿದ. ಈ ಮೂಲಕವಾದರೂ ಕಳ್ಳತನದ ಯೋಗವನ್ನು ತಪ್ಪಿಸುವುದು ಜ್ಯೋತಿಷಿಯ ಕೊನೆಯ ಪ್ರಯತ್ನವಾಗಿತ್ತು. ಅಂತೂ ಯಾವುದೇ ಸುವಸ್ತು-ಧನ-ಕನಕಗಳನ್ನು ಕದ್ದರೂ ನರಕ ತಪ್ಪಿದ್ದಲ್ಲಾ ಎಂಬ ಭಾವನೆ ಮಗುವಿನ ಮನದಲ್ಲಿ ಬೇರೂರಿತು.    

ಮಗ ಬೆಳೆದ್ದುನಿಂತಿದ್ದ. ಜ್ಯೋತಿಷಿ  ಕಾಲವಾದ. ಮನೆಯಲ್ಲಿ ಇರುವ ಸಂಪತ್ತು ಕರಗುವವರೆಗೆ ಜ್ಯೋತಿಷಿಯ ಮಗ ಅದನ್ನೇ ಬಳಸುತ್ತಾ ಹೋದ. ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು ಎನ್ನುವ ಹಾಗೇ ಮನೆಯಲ್ಲಿರುವ ಎಲ್ಲಾ ಸಂಪತ್ತೂ ಬರಿದಾಯ್ತು. ಆತನಿಗೆ ಬೇರಾವ ವಿದ್ಯೆಯೂ ಗೊತ್ತಿರಲಿಲ್ಲ. ಕಲಿಯುವ ಇಚ್ಛೆಯೂ ಆಗುತ್ತಿರಲಿಲ್ಲ. ಪರಮ ಆಲಸ್ಯ ಬೇರೆ. ಜೀವನಕ್ಕಾಗಿ ಯಾವ ಮಾರ್ಗವೆಂದು ಯೋಚಿಸಿದ; ಕಳ್ಳತನವೇ ಅತಿ ಸುಲಭದ ಕೆಲಸ ಎನ್ನಿಸಿತು. ಮನದಲ್ಲೇ ಚಿಂತಿಸಿ ಅಪ್ಪ ಹೋಗುತ್ತಿದ್ದ ಚಕ್ರವರ್ತಿಯ ಆಸ್ಥಾನದ ಖಜಾನೆಯಲ್ಲಿ ಹೇರಳವದ ಸಂಪತ್ತು ಇರುವುದರಿಂದ ಅಲ್ಲಿಗೇ ಕನ್ನಹಾಕುವುದು ಉತ್ತಮವೆಂದು ನಿರ್ಧರಿಸಿ ಹಾಗೇ ಮಾಡಿದ. ಕನ್ನಹಾಕಿ ಖಜಾನೆಯ ಒಳಗೆ ನಡೆದ ಅತನಿಗೆ ಎಲ್ಲೆಲ್ಲೂ ಧನ-ಕನಕ ವಜ್ರ ವೈಢೂರ್ಯಗಳ ರಾಶಿಗಳೇ ಕಾಣಿಸಿದವು. ಖಜಾನೆಯ ಪ್ರತೀ ವಸ್ತುಗಳನ್ನು ಎತ್ತಿ ಎತ್ತಿ ನೋಡಿ ಆಮೇಲೆ ಮತ್ತೆ ಅಲ್ಲೇ ಪಕ್ಕ ಇರಿಸಿಬಿಡುತ್ತಿದ್ದ. ಕೊನೆಗೊಮ್ಮೆ ಯಾವುದೂ ಬೇಡವೆನಿಸಿ ಖಜಾನೆಯ ಹೊರಗೆ ಬಂದ. ಕನ್ನದ ಕಿಂಡಿಯಿಂದ ಆಚೆ ಬಂದಾಗ ಹೊರವಲಯದಲ್ಲಿ ಬೂದಿ ತುಂಬಿದ ಮೂಟೆಗಳು ಕಂಡವು. ಅವುಗಳಲ್ಲಿ ಒಂದನ್ನಾದರೂ ತೆಗೆದುಕೊಂಡು ಹೋಗೋಣವೆಂದು ನಿರ್ಧರಿಸಿದ. ಹಾಗೇ ಮಾಡಿದ. 

ಚಕ್ರವರ್ತಿ ಮಾರನೇ ಬೆಳಿಗ್ಗೆ ಆಸ್ಥಾನದ ದರ್ಬಾರಿಗೆ ಬರುವ ಮುನ್ನವೇ ಖಜಾಂಚಿಯಿಂದ ಸಂದೇಶ ಬಂತು: " ಸ್ವಾಮೀ  ನಮ್ಮ ಖಜಾನೆಗೆ ಕಳ್ಳರು ನುಗ್ಗಿದ್ದಾರೆ, ಏನೂ ಕದ್ದೊಯ್ದ ಹಾಗೆ ಕಾಣುತ್ತಿಲ್ಲ ಆದ್ರೂ ಯಾಕೋ ಅನುಮಾನ, ಮಹಾಸ್ವಾಮಿಗಳು ಪರಿಶೀಲಿಸಬೇಕು." ಚಕ್ರವರ್ತಿ ಖಜಾನೆಗೆ ಭೇಟಿ ನೀಡಿದ. ವಸ್ತುಗಳೆಲ್ಲಾ ಅಲ್ಲಲ್ಲೇ ಸ್ಥಾನಪಲ್ಲಟವಾಗಿ ಬಿದ್ದಿದ್ದವು. ಯಾವುದನ್ನೂ ಕಳ್ಳರು ಕದ್ದೊಯ್ದಿರಲಿಲ್ಲ! ಹಾಗಾದರೆ ಯಾಕೆ ಕನ್ನ ಹಾಕಿರಬಹುದು? ಚಕ್ರವರ್ತಿ ಕಳ್ಳರ ಶೋಧಕ್ಕಾಗಿ ಆಜ್ಞಾಪಿಸಿದ. ಬೂದಿ ಉದುರಿದ ಗುರುತು ದಾರಿಯುದ್ದಕ್ಕೂ ಇದ್ದು ಅದು ಅರಮನೆಯ ಮೊದಲಿನ ಜ್ಯೋತಿಷಿಯ ಮನೆಯವರೆಗೆ ಬಿದ್ದಿತ್ತು. [ಬೂದಿಯ ಮೂಟೆಗೆ ಒಂದು ತೂತು ಇದ್ದುದರಿಂದ ಬೂದಿ ಹಾಗೆ ಚೆಲ್ಲುತ್ತಾ ಸಾಗಿತ್ತು; ಕತ್ತಲಲ್ಲಿ ಕಳ್ಳನಿಗೆ ಅದು ಗೊತ್ತಾಗಿರಲಿಲ್ಲ.] ಸಂಗತಿ ತಿಳಿದ ಚಕ್ರವರ್ತಿ ಆ ಜ್ಯೋತಿಷಿಯ ಮಗನನ್ನು ಆಸ್ಥಾನಕ್ಕೆ ಕರೆಸಿದ. ಚಕ್ರವರ್ತಿ ಕಳ್ಳನಲ್ಲಿ ಕೇಳಿದ "ಕಳ್ಳತನಮಾಡಿದ ನೀನು ಏನನ್ನೂ ತೆಗೆದುಕೊಂಡು ಹೋಗದೇ ಕೇವಲ ಬೂದಿಮೂಟೆಯನ್ನು ಹೊತ್ತೆಯಲ್ಲಾ ಯಾಕೆ? "  "ಏನುಮಾಡಲಿ ಸ್ವಾಮೀ ಅದು ನಮ್ಮಪ್ಪನ ಕರ್ಮ! ಏನನ್ನೇ ತೆಗೆದುಕೊಂಡರೂ ಯಾವುದಾದರೊಂದು ಶಿಕ್ಷೆ ನರಕದಲ್ಲಿ ಇದ್ದೇ ಇದೆ, ಬೂದಿಕದ್ದರೆ ಯಾವ ಶಿಕ್ಷೆಯೂ ಇರಲಿಲ್ಲ..ಅದಕ್ಕೇ ಅದನ್ನೇ ಕದ್ದೊಯ್ದೆ." ರಾಜನಿಗೆ ನಗಬೇಕೋ ಅಳಬೇಕೋ ತಿಳಿಯದಾಯ್ತು. ಧರಣಿಪಾಲ ಆಜ್ಞಾಪಿಸಿದ " ಹುಡುಗನೇ, ನೀನು ಎಷ್ಟೆಂದರೂ ನಮ್ಮ ಆಸ್ಥಾನದಲ್ಲಿ ಜ್ಯೋತಿಷಿಯಾಗಿ ಸೇವೆಸಲ್ಲಿಸಿದವರ ಮಗನಿದ್ದೀಯೆ. ಜೀವನ ಪರ್ಯಂತ ನಿನಗೆ ಅನ್ನ-ಬಟ್ಟೆ ವಗೈರೆ ಅರಮನೆಯಿಂದ ನೀಡಲ್ಪಡುತ್ತದೆ, ನೀನಿನ್ನೆಂದೂ ಎಲ್ಲಿಗೂ ಹೋಗಬೇಡ ಮತ್ತು ಕಳ್ಳತನ ಮಾಡಬೇಡ."  ಹುಡುಗ ರಾಜನಿಗೆ ಕೃತಜ್ಞನಾದ. ತನ್ನ ಚಕ್ರಾಧಿಪತ್ಯದಲ್ಲಿ ಒಬ್ಬ ಕಳ್ಳನನ್ನು ನಿಗ್ರಹಿಸಿದ ಭಾವನೆಯಿಂದ ರಾಜ ತೃಪ್ತನಾದ; ಯೋಗದಿಂದ ತನ್ನಮಗ ಕಳ್ಳನಾಗುವುದನ್ನು ತಪ್ಪಿಸಲು ಜ್ಯೋತಿಷಿ ಕೈಗೊಂಡು ತಿಳಿಹೇಳಿದ ಆತನ ಮಹತ್ತರ ಪ್ರಯತ್ನಕ್ಕೆ ರಾಜ ಮೂಕವಿಸ್ಮಿತನಾಗಿ ಮನದಲ್ಲೇ ವಂದಿಸಿದ.

ನಮ್ಮ ಗುರುಗಳು ಹೇಳಿದ ಈ ಕಥೆಯನ್ನು ಕೇಳುತ್ತಿದ್ದಾಗ ೫೦೦೦ ಕ್ಕೂ ಹೆಚ್ಚಿಗೆ ಇದ್ದ ಸಭೆಯಲ್ಲಿ ಸೂಜಿಬಿದ್ದರೂ ಸದ್ದು ಕೇಳುವ ಮೌನ! ಪ್ರಾಜ್ಞರು || ಗುರುಬುದ್ಧಿ ವಿಶೇಷತಃ || ಎನ್ನುವುದು ಇದಕ್ಕೇ ಆಗಿದೆ. ಗುರುವಿಲ್ಲದೇ ಕೆಟ್ಟವಿದ್ಯೆಗಳು ಸಹಜವಾಗಿ ಪ್ರಾಪ್ತವಾಗಿಬಿಡುತ್ತವೆ. ಆದರೆ ಉತ್ತಮ ವಿದ್ಯೆಗಳಿಗೆ ಗುರುಮುಖವೇ ಬೇಕಾಗುತ್ತದೆ. ಒಬ್ಬ ಒಳ್ಳೆಯ ಗುರು ಇಹ-ಪರಗಳೆರಡಕ್ಕೂ ಮಾರ್ಗಗಳನ್ನು ತೋರಿಸಿಬಲ್ಲ; ಆ ಮೂಲಕ ಸಮಾಜಕ್ಕೆ ಸನ್ಮಾರ್ಗವನ್ನು ಬೋಧಿಸುವುದು ಮಾನವಜೀವನ ಧರ್ಮವನ್ನು ಬೋಧಿಸುವುದು ಉತ್ತಮ ಗುರುವಿನ ಆಶಯವಾಗಿರುತ್ತದೆ. ಗುರು ಸೂರ್ಯನಿದ್ದ ಹಾಗೇ. ಆತ ತಂತಾನೇ ಬೆಳಗುತ್ತಾನೆ. ಸೂರ್ಯನಿಗೆ ಯಾವುದೇ ಬ್ರಾಂಡು ಇರುವುದಿಲ್ಲ; ಬದಲಾಗಿ ಸೂರ್ಯನ ಬ್ರಾಂಡಿ[ಗುರ್ತು]ನಲ್ಲಿ ಹಲವು ವಸ್ತುಗಳು ಈ ಜಗತ್ತಿನಲ್ಲಿ ಮಾರಾಟಮಾಡಲ್ಪಡುತ್ತವೆ. ಸೂರ್ಯನಿಗೆ ಸೂರ್ಯ ಎಂದು ನಾಮಫಲಕ ಬರೆದಿಟ್ಟುಕೊಳ್ಳಬೇಕಾದ ಅಗತ್ಯವಿರುವುದಿಲ್ಲ. ಸೂರ್ಯಪ್ರಭೆ ಜಗತ್ತಿನ ಕತ್ತಲನ್ನೇ ಓಡಿಸುತ್ತದೆ. ದೀಪದ ಬುಡದಲ್ಲಾದರೂ ಕತ್ತಲಿರಬಹುದು ಆದರೆ ಸೂರ್ಯನ ಬುಡದಲ್ಲಿ ಕತ್ತಲೆನ್ನುವುದು ಇರುವುದೇ ಇಲ್ಲ. ಅಂತಹ ಕೋಟಿ ಸೂರ್ಯರ ಪ್ರಭೆಯನ್ನು ತನ್ನಾತ್ಮದಲ್ಲಿ ಧರಿಸಿ, ಪ್ರಶಾಂತಮುದ್ರೆಯ ಚಂದ್ರಮನಾಗಿ, ಐಹಿಕವಾಗಿ ಎಳೆಯವಯಸ್ಸಿಗೇ ಮಹತ್ಸಾಧನೆಯನ್ನು ಮಾಡಿದ ಶ್ರೇಷ್ಠ ಗುರುವನ್ನು ಪಡೆದ ಸಂತೃಪ್ತಿ ನನ್ನಪಾಲಿನದಾಗಿದೆ! ಅಂತಹ ಗುರುವಿಗೆ ನನ್ನ ಕೋಟಿ ಪ್ರಣಾಮಗಳನ್ನು ಸಲ್ಲಿಸುತ್ತಾ ಕಥಾನಕವನ್ನು ಮುಂದುವರಿಸುತ್ತಿದ್ದೇನೆ. 

ನಾಥೂರಾಮ್ ಗೋಡ್ಸೆ ಬಹಳ ಒಳ್ಳೆಯ ಮನುಷ್ಯನಾಗಿದ್ದ. ಆತನೊಬ್ಬ ದೇಶಭಕ್ತ. ಗಾಂಧೀಜಿಯೂ ಸೇರಿದಂತೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಎಲ್ಲರಮೇಲೂ ಆತನಿಗೆ ಅಪಾರ ಗೌರವ. ಆದರೆ ಗಾಂಧೀಜಿಯ ಒಂದು ವಾದ ಆತನನ್ನು ಕೆರಳಿಸಿತ್ತು. ಅದೇ ದೇಶವನ್ನು ವಿಭಜಿಸುವುದು. ಮುಸ್ಲಿಂ ಮೂಲಭೂತವಾದಿಗಳ ಅಹವಾಲನ್ನು ಸ್ವೀಕರಿಸಿದ ಗಾಂಧೀಜಿ ದೇಶವನ್ನು ವಿಭಜಿಸುವ ಮಾತುಗಳ್ಳನ್ನಾಡುತ್ತಿದ್ದರು; ಅದು ಆತನಿಗೆ ಸಹಿಸಲಾಗುತ್ತಿರಲಿಲ್ಲ. ಗಾಂಧೀಜಿಯವರನ್ನು ಹೊರತು ಪಡಿಸಿ ಬೇರಾರೂ ಅದಕ್ಕೆ ಅಷ್ಟು ಪ್ರೋತ್ಸಾಹ ನೀಡುತ್ತಿರಲಿಲ್ಲ. ಅದ್ದಕ್ಕೆಂತಲೇ ಮುಸ್ಲಿಂ ಜನ ಗಾಂಧೀಜಿಯನ್ನೇ ಸುತ್ತುವರಿದಿರುತ್ತಿದ್ದರು. ಅಖಂಡವಾಗಿದ್ದ ಭಾರತಕ್ಕೆ ಯಾವಾಗ ವಿದೇಶೀ ಜನಾಂಗಗಳವರು ಕಾಲಿಟ್ಟರೋ ಆಗಲೇ ದೇಶದಲ್ಲಿ ಅಲ್ಲೋಲಕಲ್ಲೋಲ ಆರಂಭವಾಯ್ತು. ಧರ್ಮ ಶಿಥಿಲವಾಗಿ ಅಧರ್ಮಕ್ಕೆ ದಾರಿಗಳು ಹುಟ್ಟಿಕೊಳ್ಳಲು ಆಸ್ಪದವಾಯ್ತು. ಪರಮತಗಳ ಆಳರಸರು ಈ ದೇಶದ ಜನತೆಯ ಮೇಲೆ ಕಡ್ಡಾಯವಾಗಿ ಕೆಲವಷ್ಟು ಆಚರಣೆಗಳನ್ನು ಹೇರಿದರು. ಅದರಲ್ಲಿ ಇಂದಿನ ’ಭಾನುವಾರ ರಜಾ’ ಎಂಬುದೂ ಒಂದು. ಹಿಂದೂ ಸಂಸ್ಕೃತಿಗೆ ಭಾನುವಾರ ವಾರಚಕ್ರದ ಆರಂಭದ ದಿನ. ಅದೂ ದಿನಬೆಳಗುವ ದಿನಕರನ ದಿನ. ಅಂತಹ ದಿನವನ್ನೇ ರಜೆಯಾಗಿ ಪರಿವರ್ತಿಸಿದವರು ಬ್ರಿಟಿಷರು.

ಬ್ರಿಟಿಷರ ಕಪಿಮುಷ್ಠಿಯಿಂದ ದೇಶ ಕಂಗೆಟ್ಟಿತ್ತು ಎನ್ನುವುದನ್ನು ಹಳೆತಲೆಮಾರಿನ ಜನ ಸಂಪೂರ್ಣ ಒಪ್ಪುವುದಿಲ್ಲ; ಬ್ರಿಟಿಷರು ಸಂಪತ್ತನ್ನು ದೋಚಿರಬಹುದು ಆದರೆ ಅಪರಾಧಿಗಳಿಗೆ ಶಿಕ್ಷೆನೀಡುವಲ್ಲಿ ಅವರು ನಿಷ್ಠುರರಾಗಿರುತ್ತಿದ್ದರು. ಈ ನೆಲವನ್ನು ಅದೆಷ್ಟೋ ಆಳರಸರು ಆಳಿ ಅಳಿದರು. ಮ್ಲೇಚ್ಛರು ಮತ್ತು ಯವನರು ಭಾರತಕ್ಕೆ ಬಂದಮೇಲೆ ಭಾರತೀಯ ಜನರಲ್ಲಿ ಬಡವರನ್ನು ಹುಡುಕಿ ಅವರ ಮನಃಪರಿವರ್ತನೆ ಮಾಡಿಬಿಟ್ಟರು. ಅಗ್ಗದ ಆಮಿಷಗಳಿಗೆ ಬಲಿಯಾದ ಅನೇಕ ಜನ ತಮ್ಮ ಧರ್ಮವನ್ನೇ ಮರೆತು ಅ ಮತಗಳಿಗೆ ಪರಿವರ್ತಿತರಾಗಿಹೋದರು. ಅದಕ್ಕೆ ಕಾರಣಗಳು ಹಲವಾರು: ಮೊದಲನೆಯದು ಬಡತನ ನಿವಾರಣೆ ಆಗಬಹುದು ಎಂಬ ಭ್ರಮೆ. ಎರಡನೆಯದು ಅನೇಕರಿಗೆ ತಮಗೆ ಬೇಕಾದ ರೀತಿಯಲ್ಲಿ  ಸ್ವೇಚ್ಛಾಚಾರವನ್ನು ನಡೆಸಲು ಆ ಮತಗಳಲ್ಲಿ ಆಸ್ಪದ ಸಿಗುತ್ತದೆ ಎಂಬುದಾಗಿತ್ತು. ಉದಾಹರಣೆಗೆ : ಎರಡು ವರ್ಷಗಳ ಹಿಂದೆ ಭಜನ್ ಲಾಲನ ಮಗ ಚಂದ್ರಮೋಹನ್ ತನ್ನ ಕಾಮದ ತೆವಲನ್ನು ತೀರಿಸಿಕೊಳ್ಳುವ ಸಲುವಾಗಿ ಅನುರಾಧಾ ಬಾಲಿಯನ್ನು ಬಳಸಿಕೊಳ್ಳುತ್ತಾನೆ. ಮೊದಲೇ ಮದುವೆಯಾಗಿ ವಿಚ್ಛೇದಿಸಲ್ಪಟ್ಟಿದ್ದ ಆಕೆಯ ಹಿಂದೆ ಬಿದ್ದು ಆಕೆಯ ಮನವೊಲಿಸುವಲ್ಲಿ ಯಶಸ್ವಿಯಾಗುತ್ತಾನೆ. ಮಂತ್ರಿಯಾಗಿದ್ದ ಚಂದ್ರಮೋಹನ್ ಮೊದಲೇ ಮದುವೆಯಾಗಿ ಮಕ್ಕಳನ್ನೂ ಪಡೆದಿದ್ದಾತ. ಮೊದಲನೇ ಹೆಂಡತಿಗೆ ಮೋಸಮಾಡಿ ಅನುರಾಧಾಳ ಜೊತೆ ಸಂಸಾರ ಹೂಡುವ ಸನ್ನಾಹದಲ್ಲಿ ಎಲ್ಲಾದರೂ ಸಮಾಜದಿಂದ ವಿರೋಧ ಬರಬಹುದೆಂಬ ಅನಿಸಿಕೆಯಿಂದ ಮುಸ್ಲಿಂ ಆಗಿ ಮತಾಂತರಗೊಳ್ಳುತ್ತಾನೆ! ಮತಾಂತರವನ್ನು ಬೆಂಬಲಿಸಲೇ ಕಾದಿದ್ದ ಮೌಲ್ವಿಯೊಬ್ಬ ಆತನಿಗೆ ಪುರಸ್ಕಾರ ನೀಡುತ್ತಾನೆ. ಹೆಸರನ್ನು ತೀರಾ ಜಾಸ್ತಿ ಬದಲಿಸಲು ಇಷ್ಟಪಡದ ಚಂದ್ರಮೋಹನ್ ಚಾಂದ್ ಮೊಹಮ್ಮದ್ ಆಗುತ್ತಾನೆ; ಅನುರಾಧಾ ಬಾಲಿ ಫಿಜಾ ಎಂದು ಹೆಸರು ಬದಲಾಯಿಸಿಕೊಳ್ಳುತ್ತಾಳೆ. ಮದುವೆ-ಮಧುಚಂದ್ರ ಎಲ್ಲಾ ನಡೆದು ಈಗ ಫಿಜಾ ಎನ್ನುವವಳು ಕೊಲೆಯಾಗಿ ಹೋಗಿದ್ದು ನಿಮಗೆಲ್ಲರಿಗೂ ತಿಳಿದಿರಬಹುದು! ಹೀಗೇ ಅನಾಚಾರಗಳಿಗೆ ಆಸ್ಪದವೀಯುವ ಅನ್ಯ ಮತಗಳನ್ನು ತಮ್ಮ ಚಟ/ತೀಟೆಗಳ ತೀರುವಳಿಗಾಗಿ ಬಳಸಿಕೊಂಡವರೂ ಅನೇಕ ಜನ.

ಸಲ್ಲದ ಮತಗಳಿಗೆ ಪುರಸ್ಕಾರ ನೀಡುವುದನ್ನು ನಾಥೂರಾಮ್ ಗೋಡ್ಸೆ ವಿರೋಧಿಸುತ್ತಿದ್ದ. ಗಾಂಧೀಜಿಯವರ ಭಾಷಣಗಳಿಂದ ಅತ್ಯಂತ ಪ್ರಭಾವಿತನಾಗಿದ್ದ ನಾಥೂರಾಮ್  ಗಾಂಧೀಜಿಯವರ ಸಾತ್ವಿಕ ಶಕ್ತಿಗೆ ಸೋತುಹೋಗಿದ್ದ. ಹಲವು ತಿಂಗಳುಗಳಿಂದ ಆತನಲ್ಲಿ ದ್ವಂದ್ವ ಧೋರಣೆ ಮನೆಮಾಡಿತ್ತು. ಒಂದು ದೇಶಭಕ್ತಿ ಮತ್ತು ಇನ್ನೊಂದು ಗಾಂಧೀಜಿಯಮೇಲಿನ ಅಪಾರ ಗೌರವ. ಗಾಂಧೀಜಿ ದೇಶವಿಭಜನೆಯ ಮಾತುಗಳನ್ನಾಡುತ್ತಾ ಮುಸ್ಲಿಂ ಜನರನ್ನು ಓಲೈಸುವುದಕ್ಕೆ ಮುಂದಾದಾಗ ಆತ ಒಳಗೊಳಗೇ ಕುದಿದುಹೋಗುತ್ತಿದ್ದ. ಗಾಂಧೀಜಿಯನ್ನು ಮನಸಾರೆ ಪ್ರೀತಿಸುತ್ತಿದ್ದ ಮತ್ತು ಗೌರವಿಸುತ್ತಿದ್ದ ನಾಥೂರಾಮ್  ಈ ವಿಷಯದಲ್ಲಿ ಮಾತ್ರ ಗಾಂಧೀಜಿಯ ಮಾತನ್ನು ಒಪ್ಪುತ್ತಿರಲಿಲ್ಲ. ಇದನ್ನು ತಿಳಿಹೇಳಲು ಬಹಳ ಪ್ರಯತ್ನಪಟ್ಟರೂ ಜನಸಾಮಾನ್ಯನಾಗಿದ್ದ ಅವನ ಪ್ರಯತ್ನಗಳು ಯಶಸ್ಸು ಕಾಣಲಿಲ್ಲ. ಗಾಂಧೀಜಿಯನ್ನು ಕೊಲ್ಲುವ ಮೊದಲು ತಿಂಗಳುಗಟ್ಟಲೆ ಕನ್ನಡಿಯೆದುರು ಪಿಸ್ತೂಲು ಹಿಡಿದು ತಾಲೀಮು ನಡೆಸುತ್ತಿದ್ದ. ಆದರೂ ಗಾಂಧೀಜಿ ಎದುರು ಬಂದಾಗ ಅವರ ವ್ಯಕ್ತಿತ್ವದ ಪ್ರಲೋಭನೆಯಲ್ಲಿ ಕರಗಿಹೋಗಿ ತಡೆಹಾಕಿದ ಹಾವಿನ ರೀತಿ ಆಗಿಬಿಡುತ್ತಿದ್ದ. ಕೊನೆಗೊಂದು ಬಾರಿ ತಕ್ಕಡಿಯಲ್ಲಿ ದೇಶವನ್ನೂ ಗಾಂಧೀಜಿಯನ್ನೂ ಒಂದೊಂದು ಕಡೆಗಿಟ್ಟು ತೂಗಿ ದೃಢವಾಗಿ ನಿರ್ಧರಿಸಿ ದೇಶವೇ ಹೆಚ್ಚೆಂದು ಬಗೆದ. ಅದಾದ ಮರುದಿನವೇ ಸಭೆಯಿಂದ ತೆರಳುತ್ತಿದ್ದ ಗಾಂಧೀಜಿಯ ಎದುರಿಗೆ ಬಂದು ಒಮ್ಮೆ "ನಾನು ನಿಮ್ಮ ವ್ಯಕ್ತಿತ್ವವನ್ನು ಪೂಜಿಸುತ್ತೇನೆ ಆದರೆ  ನಿಮ್ಮ ಧೋರಣೆಯನ್ನು ಈ ದೇಶದ ಒಳಿತಿಗಾಗಿ ವಿರೋಧಿಸುತ್ತೇನೆ" ಎಂದು ಕೈಮುಗಿದ, ಮರುಕ್ಷಣವೇ ಪಿಸ್ತೂಲು ತೆಗೆದು ಗುಂಡುಹಾರಿಸಿದ!

ನಾಥೂರಾಮ್ ಗೋಡ್ಸೆಯನ್ನು ಅನುಮೋದಿಸುವ ಬಹಳ ಮಂದಿ ಇದ್ದರು. ಆದರೆ ಗಾಂಧೀಜಿಯ ಮೇಲಿನ ಗೌರವದಿಂದ ಅವರು ಮಾತನಾಡುತ್ತಿರಲಿಲ್ಲ. ಗಾಂಧೀಜಿ ಮಡಿದರು. ದೇಶ ಮತ್ತೆ ವಿಭಜನೆಯಾಯ್ತು. ಗಾಂಧೀಜಿಯ ಅಂದಿನ ಸಾಫ್ಟ್ ಕಾರ್ನರ್ ಫಲವಾಗಿ ಭಾರತ ತನ್ನ ಎಡ ಮತ್ತು  ಬಲ ತೋಳುಗಳನ್ನು ಕಳೆದುಕೊಂಡಿತು. ಅವೇ ಇಂದಿನ ಪಾಕಿಸ್ತಾನ ಮತ್ತು ಬಾಂಗ್ಲಾದೇಶ. ಕೇವಲ ಮುಸ್ಲಿಂ ಮೂಲಭೂತವಾದಿಗಳ ವಾದಕ್ಕೆ ಮಣಿದ ಸರಕಾರ ದೇಶವನ್ನು ವಿಭಜಿಸಿತು. ಒಡೆದು ಹೊರಹೋದಮೇಲೂ ಪಾಕಿಸ್ಥಾನದಲ್ಲಿರುವ ಜನ ಮತ್ತೆ ತಮಗೆ ಹಸಿವು ಎಂದರು, ಕಾಶ್ಮೀರದ ಬಹುಭಾಗವನ್ನು ಅತಿಕ್ರಮಿಸಿಕೊಂಡರು. ಮನೆಯ ಆಸ್ತಿ ವಿಭಜನೆಯಾದಮೇಲೆ ಮಕ್ಕಳು ಮೂಲಮನೆಯಿಂದ ಹೊರಗೆ ಹೋದಮೇಲೆ ಮತ್ತೆ ಅಲ್ಲಿನ ಆಸ್ತಿಗಾಗಿ ಹವಣಿಸುವ ಪ್ರಮೇಯ ಹೇಗೆ ಒಳಿತಲ್ಲವೋ ಹಾಗೇ ತಮಗೆ ಎಂತಲೇ ಬೇರೇ ದೇಶವನ್ನು ಕಟ್ಟಿಕೊಂಡ ಮುಸ್ಲಿಮರು ಮತ್ತೆ ಭಾರತದಮೇಲೆ ಆಕ್ರಮಣಮಾಡುವುದು ಧರ್ಮಮಾರ್ಗವಲ್ಲ. ದೇಶ ವಿಭಜಿಸುವಾಗ ಭಾರತದಲ್ಲಿರುವ ಮುಸ್ಲಿಂ ಜನರನ್ನೆಲ್ಲಾ ಅಲ್ಲಿಗೇ ಕಳಿಸುವ ಕೆಲಸ ಆಗಬೇಕಿತ್ತು ಮತ್ತು ಅಲ್ಲಿ ಅಲ್ಪಸಂಖ್ಯಾತರಾಗಿ ಇಂದು ನರಕಯಾತನೆ ಅನುಭವಿಸುತ್ತಿರುವ ಹಿಂದೂಗಳನ್ನು ಭಾರತಕ್ಕೆ ಕರೆಯಿಸಿಕೊಳ್ಳುವ ಕೆಲಸ ಆಗಬೇಕಿತ್ತು. ಭಾರತೀಯರ ಮೃದುಮಧುರ ಧೋರಣೆಯಿಂದ ಆ ಕೆಲಸ ಆಗಲೇ ಇಲ್ಲ.

ನಮ್ಮವರಿಗೇ ಜಾಗ ಇರದಿದ್ದರೂ, ನಾವು ಅನೇಕ ನಿರಾಶ್ರಿತರಿಗೆ ಜಾಗ ಕೊಡುತ್ತೇವೆ. ಅವರಲ್ಲಿ ಬಾಂಗ್ಲಾದಿಂದ ಬಂದ ಮುಸ್ಲಿಂ ಜನ ಬಹಳ ಇದ್ದಾರೆ. ಅವರು ಆಸ್ಸಾಂ ನಲ್ಲಿ ಆಶ್ರಯ ಕಂಡುಕೊಂಡಿದ್ದಾರೆ. ಯಾಕೆ ಹೀಗಾಯ್ತು ಎಂದರೆ ಬಾಂಗ್ಲಾದಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ! ಮುಸ್ಲಿಂ ಜನಾಂಗದಲ್ಲಿ ನಾಲ್ಕು ಮದುವೆಗಳು ಅಧಿಕೃತವಾಗಿ ಒಪ್ಪಿತ. ಮಕ್ಕಳ ಸಂಖ್ಯೆಗೆ ಮಿತಿಯೇ ಇಲ್ಲ!-ಇದು ಭಾರತದ ಮುಸ್ಲಿಂ ಸಮುದಾಯಕ್ಕೂ ಅನ್ವಯಿಸುತ್ತದೆ. ಭಾರತೀಯ ಮೂಲ ನಿವಾಸಿಗಳಾದ ಹಿಂದೂಗಳಿಗೆ ಸಂತಾನ ನಿಯಂತ್ರಕ ಶಸ್ತ್ರ ಚಿಕಿತ್ಸೆಯನ್ನು ಕಡ್ಡಾಯವಾಗಿ ಮಾಡಿಸುತ್ತೇವೆ ಆದರೆ ಮುಸ್ಲಿಂ ಜನಾಂಗಕ್ಕೆ ಇದು ಇಲ್ಲ-ಯಾಕೆಂದರೆ ಅದನ್ನು ಅವರ ಮತದಲ್ಲಿ ಹೇಳಲಿಲ್ಲ ಎಂಬ ಕಾರಣಕೊಡುತ್ತೇವೆ! ನಮ್ಮೂರಲ್ಲಿ ಒಬ್ಬನೇ ಒಬ್ಬ ಸಾಬಿ ಇದ್ದ; ಈಗ ನೂರಾರು ಕುಟುಂಬಗಳು ನೆಲೆಸಿವೆ-ಅವೆಲ್ಲಾ ಅವನ ಸಂತಾನಗಳೇ ಅಂತೆ. ಒಬ್ಬ ಸಾಬಿಗೆ ೧೦೦ ಮಕ್ಕಳೂ ಆಗಬಹುದು, ಊರತುಂಬಾ ಅವನ ಮಕ್ಕಳೇ ತುಂಬಬಹುದು. ಆದರೆ ಒಂದು ಬೇಕು-ಎರಡು ಸಾಕುಎನ್ನುತ್ತಿದ್ದ ನಾವು ಒಂದಕ್ಕೇ ಮುಗಿಸಿಕೊಳ್ಳುತ್ತಿದ್ದೇವೆ. ಜನಸಂಖ್ಯೆಯನ್ನು ಜಾಸ್ತಿ ಮಾಡುವುದು ಅವರ ಮತವನ್ನು ಪ್ರಸಾರಮಾಡಲಿಕ್ಕೆ ಮತ್ತು ಇಡೀ ಭಾರತನ್ನೂ ಜಗತ್ತನ್ನೂ ತಮ್ಮದೇ ಎಂದು ಘೋಷಿಸಿಕೊಳ್ಳಲಿಕ್ಕೆ ಎಂದು ಹೊಸದಾಗಿ ಬಿಡಿಸಿ ಹೇಳಬೇಕೆ?

ಆಸ್ಸಾಂನಲ್ಲಿ ಸಂಖ್ಯೆಯಲ್ಲಿ ಮಿತಿಮೀರಿ ಬೆಳೆಯುತ್ತಿರುವ ಮುಸ್ಲಿಂ ಸಮುದಾಯ ಆಸ್ಸಾಂ  ತನ್ನದೇ ಎಂದು ಮತ್ತೆ ಪ್ರತ್ಯೇಕವಾಗಿಸಿಕೊಳ್ಳುವ ಸನ್ನಾಹದಲ್ಲಿದೆ. ಮೊನ್ನೆ ಬೆಂಗಳೂರಿನಲ್ಲಿ ೧೧ ಮಂದಿ ಉಗ್ರರನ್ನು ಹಿಡಿದರು. ಉಗ್ರರು ಹೊರಗಿನಿಂದ ನೋಡಿದರೆ ಬಹಳ ಸಾಚಾ; ಒಬ್ಬ ಡಾಕ್ಟರು-ಇನ್ನೊಬ್ಬ ಎಂಜಿನೀಯರು-ಇನ್ನೊಬ್ಬ ಗಾರೆ ಕೆಲಸದವ-ಮತ್ತೊಬ್ಬ ಕೂಲಿ ಮಾಡುವವ ..ಹೀಗೇ ಈ ಪಟ್ಟಿ ಬೆಳೆಯುತ್ತದೆ, ಈಗ ಹಿಡಿದಿದ್ದು ಕೇವಲ ೧೧, ದೇಶವ್ಯಾಪೀ ಹನ್ನೊಂದು ಲಕ್ಷಕ್ಕೂ ಅಧಿಕ ಸಂಖ್ಯೆಯ ಉಗ್ರರು ಅಡಗಿದ್ದಾರೆ! ನಮ್ಮ ಪಕ್ಕದಲ್ಲೇ ಇರುತ್ತಾರೆ, ನಮ್ಮಗಳ ಗುಂಪಿನ ಮಧ್ಯೆಯೇ ಇದ್ದು ಚಹಾ ಕುಡಿಯುತ್ತಾರೆ, ನಮ್ಮೊಂದಿಗೆ ತೋರಿಕೆಗೆ ಕೆಲಸಮಾಡುತ್ತಾರೆ. ಅವರಿಗೆ ಹಣ, ಮದ್ದು-ಗುಂಡು, ಅಧುನಿಕ ಶಸ್ತ್ರಾಸ್ತ್ರ, ಇಲೆಕ್ಟ್ರಾನಿಕ್ ವಸ್ತುಗಳು ಎಲ್ಲವೂ ಗೊತ್ತಿಲ್ಲದ ಮೂಲದಿಂದ ಬರುತ್ತವೆ! ಯಾಕೆ ಬರುತ್ತವೆ? ಹೇಗೆ ಬರುತ್ತವೆ? ಅದು ಅವರಿಗೆ ಗೊತ್ತು-ನಮಗೆ ಗೊತ್ತಿಲ್ಲ. ದೇಶವ್ಯಾಪೀ ಅನೇಕ ಉಗ್ರ ಸಂಘಟನೆಗಳು ಹುಟ್ಟಿಕೊಂಡಿವೆ. ಕೇರಳದಲ್ಲಿ ಬಹುದೊಡ್ಡ ಗ್ಯಾಂಗೇ ಅಡಗಿದೆ! ಅವರಿಗೆ ಹಣದ ಕೊರತೆಯಿಲ್ಲ, ಬೇಕಾದ ಮಾಹಿತಿಗಳ ಕೊರತೆಯಿಲ್ಲ; ಎಲ್ಲಾ ಮೊಬೈಲ್ ಮತ್ತು ಅಂತರ್ಜಾಲದ ವ್ಯವಹಾರಗಳ ಮೂಲಕ ಸಾಂಕೇತಿಕ ಭಾಷೆಯ ಮೂಲಕ ನಡೆಯುತ್ತವೆ! ತಾಂತ್ರಿಕತೆ ಬೆಳೆದಂತೇ, ಇಂಟರ್ನ್ಯಾಷನಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯ ಇವೆಲ್ಲಾ ಬೆಳೆದಂತೇ ವ್ಯವಹಾರ ಇನ್ನೂ ಸುಗಮವಾಗಿದೆ. ಲಿವರ್ ಕ್ಯಾನ್ಸರ್ ಎಂಬುದು ಕೊನೆಯ ಹಂತದವರೆಗೂ ತಿಳಿಯುವುದಿಲ್ಲವಂತೆ, ಹಾಗೆಯೇ ಈ ಉಗ್ರರ ಪಡೆಯ ಹಬ್ಬುವಿಕೆ ನಮಗೆ ತಿಳಿಯುತ್ತಲೇ ಇಲ್ಲ.

ದೇಶಭಕ್ತರಲ್ಲಿ ನಾಲ್ಕುವಿಧ: ಒಳಗೂ ಹೊರಗೂ ಒಂದೇ ತೆರನಾಗಿರುವವರು, ಒಳಗೆ ದೇಶಭಕ್ತ-ಹೊರಗೆ ಅಂಥಾದ್ದೇನಿಲ್ಲ ಎಂದುಕೊಳ್ಳುವವರು, ಒಳಗೂ ಹೊರಗೂ ದೇಶದ್ರೋಹದ ಕೆಲಸವನ್ನೇ ನಡೆಸುವ ಪ್ರವೃತ್ತಿ ಉಳ್ಳವರು[ಇವರಂತೂ ಕಾಯ್ದೆಬದ್ಧವಾಗಿ ತೋರಿಸಿಕೊಳ್ಳಲಾಗುವುದಿಲ್ಲ] ಮತ್ತು ಒಳಗೆ ದೇಶದ್ರೋಹಿಗಳಾಗಿದ್ದು ಹೊರಗೆ ದೇಶಭಕ್ತರ ಮುಖವಾಡ ಧರಿಸುವವರು. ಇವರಲ್ಲಿ ಒಳಗೆ ದೇಶದ್ರೋಹಿಗಳಾಗಿ ಹೊರಗೆ ದೇಶಭಕ್ತಿ ಹೊಂದಿರುವವರೇ ಮಹಾ ಕೆಡುಕು ಬುದ್ಧಿಯುಳ್ಳವರು; ದೇಶವನ್ನು ಬಲಿಹಾಕುವವರು. ಇಂಥವರನ್ನು ನಂಬಲೇಬಾರದು; ಆದರೆ ಇಂಥಾ ಜನರನ್ನು ಗುರುತಿಸುವುದು ಸುಲಭವಲ್ಲ. ಧರ್ಮಸೌಹಾರ್ದ ಎಂದೆಲ್ಲಾ ಬೊಗಳೆಬಿಟ್ಟು ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ತುತ್ತೂರಿ ಊದುತ್ತಾ ಚೌತಿಯ ಗಣೇಶನಿಗೆ ಪೂಜೆ ಸಲ್ಲಿಸುವವರು, ಸಾಮೂಹಿಕ ಸತ್ಯನಾರಾಯಣ ಪೂಜೆ ಮಾಡಿಸುವವರು ಎಲ್ಲಾ ಇದ್ದಾರೆ!! ಕೇವಲ ಈ ಬಾಹ್ಯಾಚರಣೆಗಳಿಂದ ಮುಸ್ಲಿಂ ಸಮುದಾಯವನ್ನು ನಂಬಲು ಸಾಧ್ಯವೇ ಇಲ್ಲ. ಭಾರತ-ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ನಲ್ಲಿ ಭಾರತ ಸೋತಾಗ ಪಟಾಕಿ ಹೊಡೆದ ಜನರನ್ನು ನಾನು ಕಂಡಿದ್ದೇನೆ ಮತ್ತು ಪ್ರಶ್ನಿಸಿದ್ದೇನೆ! ಉತ್ತರಕರ್ನಾಟಕದಲ್ಲಿ ಅಲ್ಲಲ್ಲಿ ಆಗಾಗ ಪಾಕಿಸ್ತಾನದ ಬಾವುಟಗಳು ಹಾರುವ ಸುದ್ದಿ ಬರುತ್ತಿರುತ್ತದೆ. 

ಮತವನ್ನು ಪ್ರಚಾರಮಾಡಲಿಕ್ಕಾಗಿ ಜಿಹಾದ್ ಮಾಡು, ಒಂದೇ ಹೊಕ್ಕಾದರೂ ಬಡಿ ಇಲ್ಲಾ ಹೊಡೆದಾದರೂ ಜಡಿ, ರಕ್ತಪಾತವಾದರೂ ಚಿಂತೆಯಿಲ್ಲಾ ಅಂತೂ ಮತವನ್ನು ಪ್ರಚಾರಮಾಡು ಎಂಬುದು  ಯಾವ ಮತದ ಗ್ರಂಥದಲ್ಲಿ ಹೇಳಲ್ಪಟ್ಟಿದೆಯೋ ಅಂಥಾ ಮತವನ್ನು ಎಂದೂ ನಂಬಬೇಡಿ. ಜಗತ್ತಿನ ಉತ್ತಮ ಮತಗಳಲ್ಲಿ ಹಿಂಸಾತ್ಮಕವಾಗಿ ಮನಪರಿವರ್ತಿಸುವ ಯಾವುದೇ ಮತವಿದ್ದರೂ ಅದಕ್ಕೆ ನಿಷೇಧ ಹೇರಬೇಕು. ಜಾಗತಿಕ ಮಟ್ಟದಲ್ಲಿ ಅಮೇರಿಕಾದಂತಹ ಬುದ್ಧಿವಂತ ಮತ್ತು ಪ್ರಥಮ ಸ್ಥಾನದಲ್ಲಿರುವ ದೇಶದ ಉನ್ನತ ವಾಣಿಜ್ಯ ಸಂಕೀರ್ಣಗಳನ್ನೇ ಹೊಕ್ಕು ಕೆಡವಿದ ಉದಾಹರಣೆ ನಮ್ಮೆದುರಿಗಿದೆ. ಅದಾದ ಕೆಲವೇ ವರ್ಷಗಳಲ್ಲಿ ಭಾರದ ಮುಂಬೈ ಮೇಲೆ ಆಕ್ರಮಣ ಮಾಡಿದ ಈ ಮತಾಂಧ ರಕ್ಕಸರ ಕೈಚಳಕ ಯಾವ ಧೂರ್ತ ಹಿನ್ನೆಲೆಯದ್ದು ಎಂಬುದನ್ನು ಅಧಿಕೃತ ದಾಖಲೆ ಸಹಿತ ಮುಂದೆ ಹಿಡಿದರೂ ಒಪ್ಪಿಕೊಳ್ಳದ ಲಜ್ಜಾರಹಿತ ಕ್ರೂರಿಗಳು ಅವರಾಗಿದ್ದಾರೆ. ಶತಶತಮಾನಗಳಿಂದ ಭಾರತದ ಜನತೆ ಸಹನೆಯಿಂದಲೇ ತಾಳಿಕೊಂಡು ಬಂದಿದೆ; ಈ ಅತೀವ ಸಹನೆಯೇ ನಮ್ಮ ಮುಳುವಿಗೆ ಕಾರಣವಾಗುತ್ತದೆ. ವಾಜಪೇಯಿಯಂತಹ ಮುತ್ಸದ್ಧಿ ನಿಂತುಹೋಗಿದ್ದ ಸಂಬಂಧವನ್ನು ಮರುಸ್ಥಾಪಿಸಿ ಸ್ನೇಹಹಸ್ತವನ್ನು ಚಾಚಿದ್ದು ಪರೋಕ್ಷವಾಗಿ ಈ ಜನಾಂಗಕ್ಕೆ ವರವಾಗಿ ಪರಿಣಮಿಸಿದೆ! ಇನ್ನು ತಡಮಾಡಿ ಪ್ರಯೋಜನವಿಲ್ಲ. ಮುಸ್ಲಿಂ ಜನಾಂಗ ವಿಶ್ವಾಸ ಕಳೆದುಕೊಂಡಿದೆ; ಅಕ್ಕ-ಪಕ್ಕದ ಮನೆಯಲ್ಲಿದ್ದವರನ್ನೂ ಸಂಶಯಿಸುವ ಕಾಲ ಬಂದುಬಿಟ್ಟಿದೆ!! ಹೆಚ್ಚಿನ ಮಾಹಿತಿಗೆ ಈ ಲೇಖನಗಳನ್ನು ಓದಿ :ಈ ಲೇಖನ-ಚಿತ್ರಗಳ ಕೃಪೆ: ಹೊಸದಿಗಂತ ದಿನಪತ್ರಿಕೆ

ನೇರವಾಗಿ ಹೇಳುತ್ತಿರುವುದಕ್ಕೆ ಬೇಸರಿಸಬೇಡಿ, ಇದ್ದುದನ್ನು ಹೇಳುವ ಸ್ವಭಾವ ನನಗೆ. ಸೌಹಾರ್ದ ಹಾಳಾಗುತ್ತದೆಂದು ಹಾಲಾಹಲವನ್ನು ಹಾಲು ಎಂದೇ ಕುಡಿಯಲು ಮುಂದಾಗುವುದು ಎಷ್ಟು ಕಾಲ ನಡೆದೀತು? ತಮ್ಮ ಮಕ್ಕಳು ಅಂಥವರಲ್ಲಾ ಎನ್ನುವ ಮೊದಲು ಮಕ್ಕಳು ಏನುಮಾಡುತ್ತಾರೆ ಎಂಬುದರ ಅರಿವು ಎಲ್ಲಾ ಪಾಲಕರಿಗೂ ಇರಬೇಕು. ವ್ಯಕ್ತಿಗಿಂತ ಕುಟುಂಬ ದೊಡ್ಡದು, ಕುಟುಂಬಕ್ಕಿಂತಾ ಊರು ದೊಡ್ಡದು, ಊರಿಗಿಂತಾ ತಾಲೂಕು-ತಾಲೂಕಿಗಿಂತಾ ಜಿಲ್ಲೆ-ಜಿಲ್ಲೆಗಿಂತಾ ರಾಜ್ಯ-ರಾಜ್ಯಕ್ಕಿಂತಾ ದೇಶ ಹೀಗೇ ಗಣನೆ ಸಾಗುತ್ತದೆ. ಲೀಟರುಗಟ್ಟಲೆ ಹಾಲನ್ನು ಕೆಡಿಸಲು ಒಂದೇ ಹುಂಡು ಹುಳಿ ಸಾಕು! ಸಮಾಜವನ್ನು ಕೆಡಿಸಲು ಕೆಲವೇ ಕೇಡಿಗಳು ಭಯೋತ್ಫಾದಕರು ಸಾಕು! ಪಾತಕಿಗಳು ಯಾರೇ ಆಗಿರಲಿ, ನಾಳೆ ನಮ್ಮ ಮನೆಯಲ್ಲೇ ಯಾರದರೂ ಇದ್ದರೂ ಅವರನ್ನು ಬಿಡಬಾರದು, ಅವರಿಗೆ ತಕ್ಕ ಶಿಕ್ಷೆ ವಿಧಿಸಲೇ ಬೇಕು.

೧. ಭಾರತೀಯ ಮುಸ್ಲಿಮರಲ್ಲಿ ಬುರ್ಖಾ ಪದ್ಧತಿಯನ್ನು ಮೊದಲು ನಿಷೇಧಿಸಬೇಕು: ಬುರ್ಖಾದ ಒಳಗಿರುವುದು ಗಂಡಸೋ ಹೆಂಗಸೋ ಭಯೋತ್ಫಾದಕರೋ ಅರಿಯುವುದು ಹೇಗೆ? ಅಂಗಡಿಗಳಲ್ಲಿ ಅವರು ಸಾಮಾನು ಕದ್ದು ಬುರ್ಖಾದಲ್ಲಿ ಅಡಗಿಸಿಕೊಂಡರೆ ತಿಳಿಯುವುದು ಹೇಗೆ?

೨. ಬಹುಪತ್ನಿತ್ವವನ್ನು ನಿಷೇಧಿಸಬೇಕು, ಅದು ಆ ಜನಾಂಗಕ್ಕೂ ಮಿಕ್ಕುಳಿದ ಜನರಿಗೂ ಮತ್ತು ಈ ದೇಶಕ್ಕೂ ಒಳ್ಳೆಯದು.

೩. ಜನಸಂಖ್ಯಾ ನಿಯಂತ್ರಣ ಮುಸ್ಲಿಮ್ ಬಾಂಧವರಿಗೂ ಕಡ್ಡಾಯವಾಗಿ ಅಪ್ಲೈ ಆಗಬೇಕು; ಕಾಲ ಬದಲಾಗಿದೆ- ವೋಟ್ ಬ್ಯಾಂಕ್ ವ್ಯವಹಾರಕ್ಕಾಗಿ ಅಲ್ಪಸಂಖ್ಯಾತರು ಎಂಬ ಓಲೈಕೆ ಬೇಕಾಗಿಲ್ಲ; ಈಗ ಅಲ್ಪ ಸಂಖ್ಯಾತರ ಸಂಖ್ಯೆ ದೇಶದ ಒಟ್ಟೂ ಜನಸಂಖ್ಯೆಯ ೩೦% ಕ್ಕೂ ಹೆಚ್ಚಿದೆ! ಎಂದಮೇಲೆ ಯಾರೂ ಅಲ್ಪಸಂಖ್ಯಾತರಲ್ಲ.

೪. ಮನುಷ್ಯನ ಆಹಾರವೇ ಮನುಷ್ಯನ ಮೆದುಳಿನ ವ್ಯವಹಾರಕ್ಕೆ ಕಾರಣ, ಭಾರತೀಯರಾದ ನಾವು ನಿತ್ಯ ಸೇವಿಸುವ ಹಾಲನ್ನು ಕೊಡುವ ಎರಡನೇ ತಾಯಿಯಾದ ಗೋವನ್ನು ಭುಂಜಿಸುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು.

೫. ಸಮಾಜದಲ್ಲಿ ನಡೆಯುವ ಪ್ರತಿಯೊಂದೂ ಕ್ರಿಮಿನಲ್ ಘಟನೆಗಳಲ್ಲಿ/ಮೊಕದ್ದಮೆಗಳಲ್ಲಿ ಒಬ್ಬನದಾದರೂ ಮುಸ್ಲಿಂ ಹೆಸರು ಕೇಳಿಬರುತ್ತದೆ! ಮುಸ್ಲಿಂ ಬಾಂಧವರು ತಮ್ಮ ಸಮಾಜದ ಯುವಕರಿಗೆ ತಿಳಿಹೇಳುವ ತರಬೇತಿ ಶಿಬಿರಗಳನ್ನು ನಡೆಸುವುದು ಅನಿವಾರ್ಯವಾಗಿ ಕಾಣುತ್ತದೆ.

ದೇಶವ್ಯಾಪೀ ಕೋಟ್ಯಾವಧಿ ಸಂಖ್ಯೆಯಲ್ಲಿ ನಾಥೂರಾಮರು ಹುಟ್ಟಿ, ಧೂರ್ತ ರಾಜಕಾರಣಿಗಳನ್ನು ಬಲಿಹಾಕಿ,  ಸನಾತನ ಹಿಂದೂಸ್ಥಾನವನ್ನು ಕಾಪಾಡಲಿ ಎಂದು ಹಾರಿಸುತ್ತಾ,  ಸ್ವರ್ಗಸ್ಥ ನಾಥೂರಾಮ್ ಗೋಡ್ಸೆಯಂತಹ ದೇಶಭಕ್ತರಿಗೆ ನಮನ ಸಲ್ಲಿಸುವುದರೊಂದಿಗೆ ಸದ್ಯಕ್ಕೆ ವಿರಮಿಸುತ್ತಿದ್ದೇನೆ


ಜೈ ಹಿಂದ್   ಜೈ ಹಿಂದ್


ಜೈ ಹಿಂದ್ 

31 comments:

 1. bahala uththama saandarbhika avasyaka lekhana, manada maatugalige aksharagalannodagisidderi, Nimage shubhavaagali

  ReplyDelete
 2. ವಿ.ಆರ್.ಭಟ್ ಅವರೇ, ದೇಶ ವಿಭಜನೆ ಆಗಿರದೇ ಇರುತ್ತಿದ್ದರೆ ಇಂದಿನ ಸ್ಥಿತಿ ಹೇಗಿರುತ್ತಿತ್ತು ಎಂಬುದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಯಲು ಉತ್ಸುಕನಾಗಿದ್ದೇನೆ.

  ಇತಿ,
  ಕೃಷ್ಣ ಶಾಸ್ತ್ರಿ

  ReplyDelete
  Replies
  1. ಕೃಷ್ಣ ಶಾಸ್ತ್ರಿಗಳೇ, ಇಲಿ ಸೇರಿಕೊಂಡಿದೆ ಎಂದು ಮನೆಗೆ ಬೆಂಕಿಹಾಕುತ್ತಾರ್ಯೇ? ಇಲಿಗೆ ತಕ್ಕ ಮದ್ದು ಅರೆಯಬೇಕಪ್ಪ. ವಿಭಜಿಸಲಾಗುವುದಿಲ್ಲ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿದ್ದರೆ ದಂಗೆಯಾಗಿ ಆಗಲೇ ಒಂದು ರೂಪಕ್ಕೆ ಮುಗಿದುಹೋಗುತ್ತಿತ್ತು. ಅಷ್ಟಕ್ಕೂ ಸಂಖ್ಯಾಬಲ ವೃದ್ಧಿಯಲ್ಲಿ ವೈರಸ್ ಗಳ ರೀತಿ ಇರುವ ಅವರ ಇವತ್ತಿನ ಸಂಖ್ಯೆ ನೋಡಿ. ದೇಶವಾಸಿಗಳಾದ ಹಿಂದೂಗಳಿಗೇ ಬೇರೆ ಮತ್ತು ಅವರಿಗೇ ಬೇರೆ ಕಾಯ್ದೆ ಯಾವ ನ್ಯಾಯ ಹೇಳಿ? ಗಾಂಧೀಜಿಯನ್ನುಳಿದು ಉಳಿದ ನಾಯಕರು ಸೇರಿ ನಿರ್ಧಾರ ಕೈಗೊಂಡಿದ್ದರೆ ಆಗ ಗೊತ್ತಾಗುತ್ತಿತ್ತು. ಅಷ್ಟಕ್ಕೂ ಗಾಂಧೀಜಿಯ ಕಿವಿಯನ್ನು ಬಲವಾಗಿ ಕಚ್ಚಿಯೇ ಹಿಡಿದಿದ್ದ ನೆಹರೂ ಬಿಡಲೇ ಇಲ್ಲ. ಹೀಗಾಗಿ ಗಾಂಧೀಜಿ ಒಪ್ಪಿದರು.

   ಧನ್ಯವಾದ.

   Delete
  2. @Kashnaa shastri: ದೇಶ ವಿಭಜನೆ ಆಗದಿದ್ದರೆ ಪಾಕಿಸ್ಥಾನದಲ್ಲಿರುವ ಹಿಂದೂಗಳು, ಕ್ರಿಶ್ಚಿಯನ್ನರು ಇಂದು ಗಂಭೀರವಾದ ತೊಂದರೆಯನ್ನು ಅನುಭವಿಸುತ್ತಿರಲಿಲ್ಲವೇನೋ.ಆದಾಗ್ಯೂ ದೇಶ ವಿಭಜನೆಯಾದ ಹಂತದಲ್ಲಿ ಭಾರತದಲ್ಲಿರುವ ಎಲ್ಲಾ ಮುಸ್ಲೀಮರೂ ಪಾಕಿಸ್ತಾನಕ್ಕೆ ಹೋಗಿದ್ದರೆ ಮತ್ತು ಪಾಕಿಸ್ತಾನದ ಎಲ್ಲಾ ಹಿಂದುಗಳೂ ಭಾರತಕ್ಕೆ ತಿರುಗಿ ಬಂದಿದ್ದರೆ ದೇಶ ವಿಭಜನೆ ಒಳ್ಳೆಯದೇ ಆಗಿರುತ್ತಿತ್ತು.

   Delete
  3. ಚೆನ್ನಾಗಿದೆ ಬಾಲಚಂದ್ರರೇ, ನಾನೂ ಅದನ್ನೇ ಹೇಳಿದ್ದೇನೆ ಲೇಖನದಲ್ಲಿ, ಇವತ್ತಿಗೂ ಅದನ್ನು ಜಾರಿಗೆ ತರಲಿ, ಅದಕ್ಕೆ ಸ್ವಾಗತ! ಪಾಕಿಸ್ತಾನದಲ್ಲಿರುವವರು ನರಕದಲ್ಲಿದ್ದಹಾಗಿದ್ದಾರೆ, ಭಾರತದಲ್ಲಿರುವ ಮುಸ್ಲಿಂ ಜನ ಮಾತ್ರ ರಾಜವೈಭೋಗದಲ್ಲಿದ್ದಾರೆ, ಅವರ ವಿರುದ್ಧ ಮಾರ್ತನಾಡುವ ಹಾಗಿಲ್ಲ, ಅಲ್ಪಸಂಖ್ಯಾತರು ಎನ್ನುತ್ತಾರೆ; ಹಿಂದೂ ಎಡಪಂಥೀಯ ’ಬುದ್ಧಿ ಜೀವಿಗಳು’ ಬ್ಯಾಗು, ಕನ್ನಡಕ ಹಾಕಿಕೊಂಡು ಯಾಕೆ ಹಾಗೆ ಮಾಡಿದಿರಿ ಎನ್ನುತ್ತಾ ಮೇಳಕಟ್ಟಿಕೊಂಡು ಬರುತ್ತಾರೆ! ಜಿ.ಕೆ.ಗೋವಿಂದರಾವ್, ಅನಂತ್ ಮೂರ್ತಿ, ಗೌರಿ ಲಂಕೇಶ್, ಅಗ್ನಿ ಶ್ರೀಧರ್ ಈ ರೀತಿಯ ಎಲ್ಲರೂ ಮೊನ್ನೆ ಉಗ್ರರನ್ನು ಹಿಡಿದಾಗಿಂದ ಊಟ ಮಾಡದೇ ಇದ್ದಾರೋ ಏನೋ! ಇದು ಭಾರತ, ಮೊದಲು ಹಿಂದೂಸ್ಥಾನವಾಗಿತ್ತು,ಇದೇ ರೀತಿ ಇದ್ದರೆ ಇನ್ನುಮುಂದೆ ಇನ್ಯಾವುದೋ ..ಸ್ಥಾನ ಆಗಿಯೇ ಹೋಗಬಹುದು, ಕಾಲ ಸನ್ನಿಹಿತವಾಗಿದೆ, ನಾವು ಸಿದ್ಧರಾಗಬೇಕಾಗಿದೆ.

   Delete
  4. ಸರಿಯಾಗಿ ಹೆಳಿದಿರಿ ವಿ.ಆರ್.ಭಟ್ ಅವರೆ ಇಂಥಹ ಬುದ್ದಿಗೇಡಿ ಬುದ್ದಿಜೀವಿಗಳು
   ಹುಟ್ಟಿದ ಧರ್ಮದವಿರುದ್ದ ಹೆಳಿಕೆನೀಡಿ ತಮ್ಮ ಬೆನ್ನನ್ನು ತಾವು ತಟ್ಟಿಕೊಂಡು ಬರಿ ಜನಪ್ರಿಯರಾಗಿತ್ತಾರೆ ಹೊರತು ಮತ್ತೇನು ಸಾಧಿಸುವದಿಲ್ಲಾ. ಹಿಂದು ಧರ್ಮಕ್ಕೆ ಯಾವ ಗ್ರಂಥವಿದೆ ಅಪ್ಪ ಅಮ್ಮ ಯಾರು ಎಂದು ಕೇಳುವ ಈ ಬುದ್ದಿಗೇಡಿಗಳಿಗೆ ಸ್ವಂತ ಹೆಸರು ಹಿಂದು ಧರ್ಮದ ಮಹಾಮಾತೆಯದು ಎಂದು ಮರೆತಿದ್ದಂತಿದೆ.

   ಬೇರೆ ಎಲ್ಲಾ ಧರ್ಮಕ್ಕೆ ಒಂದೊಂದು ಗ್ರಂಥವಿದ್ದರೆ ಹಿಂದು ಧರ್ಮಕ್ಕೆ ಒಂದು ಮಾನವ ಜನ್ಮದಲ್ಲಿ ಓದಿ ಮುಗಿಸಲಾಗದ್ದಂತ ೪ ವೆದಗಳು, ೧೬ ಪುರಾಣಗಳು, ೩೦ ಸಂಹಿತೆಗಳು ,ಹಲವಾರು ಭಗವದ್ ಗೀತೆ ಯಂತಹ ಉತ್ತಮ ಗ್ರಂಥಗಳಿವೆ.

   Delete
  5. ಬದುಕಲು ನೂರೆಂಟು ಕಳ್ಳದಾರಿಯನ್ನು ಹುಡುಕುವ ಜನ, ಬಿಟ್ಟಿ ಪ್ರಚಾರಕ್ಕಾಗಿ ಎಡಪಂಥೀಯರಾದರೆ, ಕೆಲವರು ಅನ್ಯ ಜನಾಂಗದ ಹೆಣ್ಣನ್ನು ಮದುವೆಯಾಗಲು ಅಡ್ಡಿಪಡಿಸಿದ ಮನೆಯವರ ವಿರುದ್ಧವೇ ತಿರುಗಿ ಬಿದ್ದು ಎಡಪಂಥೀಯರಾಗಿ ಜನತೆಯ ಮಧ್ಯೆಯೇ ಇರುವ ನಕ್ಸಲೈಟ್ ಗಳಾಗಿದ್ದಾರೆ. ಅವರಿಗೆಲ್ಲಾ ಕಾಲ ಕೂಡಿಬರುತ್ತದೆ; ಅನುಭವಿಸುತ್ತಾರೆ.

   Delete
 3. I fully agree with you , expecting u r eye opener write ups , thanx

  ReplyDelete
  Replies
  1. thank you Indresh, the younger generation of Indian Origin must know the truth & reality facts, else India will be no more one day !

   Delete
 4. This comment has been removed by the author.

  ReplyDelete
 5. ಕಣ್ಣು ತೆರೆಸುವ ಲೇಖನ. ಜನರ ಹೊಂದಿಕೊಂಡು ಹೊಗೊಣ ಬಿಡು ಎನ್ನುವ ಭಾವನೆ ಮತ್ತು
  ಕಾಲಬುಡಕ್ಕೆ ನೀರು ಬರುವತನಕ ಆರಾಮಾಗಿ ಇರೊಣ ಎನ್ನುವ ಭಾವ, ಇಂದು ನಮ್ಮನ್ನು ಬಿಸಿತುಪ್ಪ ಬಾಯಲ್ಲಿ ಕೆಂಡ ಕಾಲಕೆಳಗೆ ಎನ್ನುವ ಪರಿಸ್ತಿಥಿಗೆ ತಲುಪಿಸಿದೆ.
  ಇನ್ನಾದರು ಜನ ಕಣ್ಬಿಟ್ಟುನೊಡಿದರೆ ಬಹುಶ್ಃ ಮನೆಯ ಬಾಗಿಲಲ್ಲಿ ರಕ್ತದ ಹೊಳೆ ಹರಿಯುವದನ್ನು ತಪ್ಪಿಸಬಹುದೇನೊ!.

  ಅಥಿತಿ ದೆವೊ ಭವ ಒಪ್ಪೊಣ ಆದರೆ ಅಪಾತ್ರನಾದ ಅಥಿತಿಯು ಮ್ರುತ್ಯುವಿಗೆ (ಪ್ರಾಣಹಾನಿ),ಅನಿಸ್ಟಕ್ಕೆ ಸಮಾನ.

  ಇಂದಿನ ರಾಜಕೀಯ ವ್ಯಕ್ತಿಗಳು ತಮ್ಮ ಲಾಭಕ್ಕಾಗಿ ಇಡಿ ದೇಶವನ್ನೆ ಮಾರಲು ಹೊರಟಿದ್ದಾರೆ, ಎಂಥಹ ಪ್ರಾರಬ್ದ ಕರ್ಮ ನಮ್ಮದು ?!

  ReplyDelete
 6. according to me,best thing happened to India is division. At least some extremist left the country. otherwise India would have been ruled by Muslims because of undivided votes.We deserve this humiliation also long as we not not united.

  ReplyDelete
 7. According to me,best thing happened to India is division. At least some extremist left the country. otherwise India would have been ruled by Muslims because of undivided votes.We deserve this humiliation as long as we not not united. At least we have now have courage to speak.

  ReplyDelete
 8. ಧರ್ಮ ಅನ್ನೊದು ಇರುವುದೇ ಮಾನವನ ಒಳಿತಿಗೆ, ಆದರೆ ಇನ್ನೊಬ್ಬರನ್ನ ನಾಶಮಾಡಿ ನಾನು ಬೆಳೆಯುತ್ತೇನೆ ಅನ್ನುವ ಆಚರಣೆಗಳನ್ನ "ಧರ್ಮ" ಅನ್ನುವ ಶಬ್ದದಿಂದ ಹೇಗೆ ಕರೆಯೋದು?
  ನಮ್ಮಲ್ಲಿ ಎಷ್ಟೆಲ್ಲಾ ಉಗ್ರವಾದದ ವಿಧ್ವಂಸಕ ಕೃತ್ಯಗಳಾಯಿತು. ಎಷ್ಟುಜನರು ಬೀದಿಗೆ ಬಿದ್ದಿದ್ದಾರೆ, ಆದರೂ ನಾವು ಸುಮ್ಮನಿದ್ದೇವೆ ಅಂದರೆ ಅದು ನಮ್ಮ ತಾಳ್ಮೆ, ನಮ್ಮ ಸಹಿಷ್ಣುತೆ ಅಂದರೆ ಖಂಡಿತ ಸುಳ್ಳು. "ಎಲ್ಲೋ ಎನೋ ಆಯಿತು ನಮಗೇನು?" ಅನ್ನುವ ಮನೋಭಾವನೆಯೆ ನಮ್ಮ ಇವತ್ತಿನ ಸ್ಥಿತಿಗೆ ಕಾರಣ. ಅಭಿವೃದ್ದಿ ಅಂತ ವಿದೇಶವನ್ನ ಬೊಟ್ಟು ಮಾಡುತ್ತೇವೆ. ಅವರ ಜೀವನ ಶೈಲಿಯನ್ನ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿತ್ತೀವಿ, ದಿವಸಕ್ಕೆ 8ಗಂತ ಜಾಸ್ತಿ ಕೆಲಸ ಮಾಡುತ್ತೀವಿ, Week End ಗಳಲ್ಲಿ ಎಂಜಾಯ್ ಮಾಡ್ತೀವಿ, ಆದರೆ ದೇಶದ ವಿಷಯ ಬಂದಾಗ ಮಾತ್ರ ನಾನು ಯಾಕೆ ಅವರಂತೆ ಮುಂದೆ ಬರೊಲ್ಲ??? ನಮ್ಮಲ್ಲಿ ಯಾಕೆ "ನಮಗೇನು?" ಅನ್ನುವ ಮನಸ್ಥಿತಿ ಹುಟ್ಟುತ್ತೆ? ಲಾಡನ್ ನನ್ನು ಅಮೇರಿಕ ಪಡೆ ಕೊಂದಾಗ ಇಡಿ ದೇಶಕ್ಕೆ ದೇಶವೆ ಸಂಭ್ರಮಿಸುತ್ತೆ. ಆದರೆ ನಮ್ಮಲ್ಲಿ ವರ್ಷಂಪ್ರತಿ ಬರುವ ಸ್ವಾತಂತ್ರ್ಯ ದಿನ, ಗಣರಾಜ್ಯ ದಿನಗಳಲ್ಲೂ ನಮಗೂ ಇದಕ್ಕು ಸಂಬಂಧವೇ ಇಲ್ಲವೇನೋ ಅನ್ನುವಂತೆ ಇರುವ ಜನರೇ ನಮ್ಮಲ್ಲಿ ಹೆಚ್ಚು.
  ದೇಶ ಭಕ್ತಿ ಕೇವಲ ಕ್ರಿಕೇಟಿಗೆ ಮಾತ್ರ ಮೀಸಲಿಡದೆ, ಉಳಿದ ವಿಚಾರಗಳಲ್ಲೂ ನಮ್ಮ ದೇಶ ಅನ್ನುವ ಮನ ಸ್ಥಿತಿಯನ್ನ ಇನ್ನಾದರೂ ಬೆಳೆಸಿಕೊಳೋದು ಉತ್ತಮ ಅಲ್ಲವೆ?

  ReplyDelete
  Replies
  1. ತಾವು ಹೇಳಿರುವುದು ಅಕ್ಷರಶಃ ಸತ್ಯ. ನಿನ್ನೆಯಿಂದ ನಾನೂ ನೋಡುತ್ತಿದ್ದೇನೆ. ಫೇಸ್ ಬುಕ್ ನಲ್ಲಿ ನಾನು ಬೇರೇ ಮೂಲದಿಂದ ಶೇರ್ ಮಾಡಿದ ಮಾಹಿತಿ ಲೇಕನಗಳ ಕುರಿತು ಲಿಂಕ್ ಹಾಕಿದೆ; ಕೆಲವರು ಕಿತ್ತೇಹಾಕಿದರು, ಇನ್ನೂ ಹಲವರು ಪ್ರತಿಕ್ರಿಯಿಸದೇ ಸುಮ್ಮನಾಗಿದ್ದಾರೆ. ಬರೆದವ ಹಾಳಾದರೆ ಆಗಲಿ ತಾವು ಅನ್ಯ ಜನಾಂಗದೊಡನೆ ಸರಿಯಾಗಿ ಇದ್ದುಬಿಡೋಣ ಎಂಬ ಭಾವನೆಯ ಜೊತೆಗೆ ಎಲ್ಲೋ ಯಾರಿಗೋ ಏನೋ ಆದರೆ ತಮಗೇನು ಎನ್ನುವ ಉದಾಸೀನ ಭಾವವೂ ಸೇರಿದೆ. ಕೆಲವರು ಎಲ್ಲವನ್ನೂ ಓದುತ್ತಾರೆ ಆದರೆ ಬುದ್ಧ್ಯಾ ಪ್ರತಿಕ್ರಿಯಿಸುವುದಿಲ್ಲ. ನಿನ್ನೆ ಈ ಲೇಖನದ ಕೊನೆಯಲ್ಲಿ ಹಾಕಿರುವ ಷರತ್ತುಗಳ ಕುರಿತು ಮೂರು ಮುಸ್ಲಿಂ ನಡುವಯಸ್ಕರು ವಿರೋಧಿಸಿದರು, ಅವರಿಗೆಲ್ಲಾ ಉತ್ತರಿಸಿದ್ದೇನೆ. ಸಹನೆ ಎನ್ನುವುದಕ್ಕಿಂತಾ ಉದಾಸೀನ ಮನೋಭಾವ ಎಂಬುದೇ ಸರಿ ಎಂದುದಕ್ಕೆ ನಿಮಗೆ ಧನ್ಯವಾದಗಳು; ಅಂತೂ ನಮ್ಮ ಜನ ಇನ್ನೂ ಎಚ್ಚೆತ್ತಿಲ್ಲಾ ಎಂಬುದು ತಿಳಿಯುತ್ತದೆ.

   Delete
 9. ಮಾನ್ಯ ವಿ.ಆರ್.ಭಟ್ಟ್ ಅವರೇ ನಿಮ್ಮ ಸಾಮಾಜಿಕ ಕಳಕಳಿಗೆ ನಾವೆಲ್ಲರೂ ಆಭಾರಿಯಾಗಿದ್ದೇವೆ, ಮೊದಲು ಮುಸಲ್ಮಾನರಿಗೆ ಬುರ್ಖಾ ಪದ್ದತಿ ಕಿತ್ತೊಗೆಯಬೇಕು, ಹಾಗು ಭಾರತದಲ್ಲಿ ರಾಜಕಾರಣಿಗಳು ಅಲ್ಪಸಂಖ್ಯಾತರನ್ನು ಓಲೈಸುವುದು ಬಿಟ್ಟರೆ ಖಂಡಿತಾ ಭಾರತಕ್ಕೆ ಉಜ್ವಲ ಭವಿಷ್ಯವಿದೆ. ಹಾಗೆಯೇ ಹಜ್ಜ್ ಯಾತ್ರೆಗೆ ಸರಕಾರದಿಂದ ಕೊಡುವ ಸಂಪೂರ್ಣ ಸವಲತ್ತುಗಳನ್ನೂ ಕೇಂದ್ರ ಹಾಗು ರಾಜ್ಯ ಸರ್ಕಾರಗಳೂ ಈ ಕೂಡಲೇ ನಿಲ್ಲಿಸಬೇಕು. ಮತ್ತು ಸರ್ವರಿಗೂ ಜನಸಂಖ್ಯಾ ನಿಯಂತ್ರಣ ಹದ್ದುಬಸ್ತಿನಲ್ಲಿ ಇಡದಿದ್ದರೆ ಮುಂದೊಂದು ದಿನ ತಿನ್ನುವ ಆಹಾರ ಹಾಗು ಕುಡಿಯುವ ನೀರಿಗೂ ಎಲ್ಲೆಡೆ ಹಾಹಾಕಾರ ಈಗಾಗಲೇ ಶುರುವಾಗಿದ. ಸರಕಾರ ಈ ನಿಟ್ಟಿನಲ್ಲಿ ಮೊದಲು ಕಾರ್ಯ ಪ್ರವೃತ್ತರಾಗಬೇಕು. ಹಾಗೆಯೇ ಕಾನೂನು ಎಲ್ಲರಿಗೂ ಒಂದೇ ಆಗಬೇಕು.

  ReplyDelete
 10. ಗಾಂಧೀ ಹಾಗು ನೆಹರು ಅವರ ತಪ್ಪುನಿರ್ಧಾರಗಳಿಂದ ಇಂದು ಭಾರತ ದೇಶ ಒದ್ದಾಡುತ್ತಿದೆ.

  ReplyDelete
  Replies
  1. ಸನ್ಮಾನ್ಯ ಕುಮಾರರಾಯರೇ,

   ಶತಮಾನಗಳ ಹಿಂದೆ ಭಾರತಕ್ಕೆ ಪಾರ್ಸಿಗಳು ಬಂದರು. ಗುಜರಾತ್ ನಲ್ಲಿ ಅವರು ಇಳಿದುಕೊಂಡಾಗ ಬಂದರಿನ ಬಾಗಿಲಿಗೆ ಅಲ್ಲಿಯ ರಾಜ ಹಾಲುತುಂಬಿ ಭರ್ತಿಯಾಗಿರುವ ಟಾಕಿಯೊಂದನ್ನು "ನಮ್ಮ ರಾಜ್ಯದಲ್ಲಿ ಖುಲ್ಲ ಜಾಗ ಇಲ್ಲಾ" ಎಂದು ಸಾಂಕೇತಿಕವಾಗಿ ಕಳಿಸಿದ. ನಿರಾಶ್ರಿತರಾಗಿ ಬಂದ ಪಾರ್ಸಿಗಳ ಹೃದಯ ಅಪ್ಪಟವಾಗಿತ್ತು. ಪಾರ್ಸಿಗಳ ಗುರು ಜತುರಾಷ್ಟ್ರ ಯೋಚಿಸಿ, ತಮ್ಮಲ್ಲಿದ್ದ ಸಕ್ಕರೆ ಮೂಟೆಯನ್ನು ಹಾಲಿನ ಟಾಕಿಗೆ ಸುರಿದು ರಾಜಭಟರ ಮೂಲಕ ರಾಜನಿಗೆ ಸಂದೇಶ ಕಳಿಸಿದ: ’ದೊರೆಯೇ, ನಿಮ್ಮ ರಾಜ್ಯದಲ್ಲಿ ನಮಗೆ ಆಶ್ರಯವಿತ್ತರೆ ನಿಮ್ಮ ಜನರೊಟ್ಟಿಗೆ ನಾವು ಬೆರೆತುಹೋಗುತ್ತೇವೆ ಮತ್ತು ನಿಮ್ಮ ರಾಜ್ಯದ ಜನತೆಯ ಶ್ರೇಯೋಭಿವೃದ್ಧಿಗಾಗಿ ನಾವು ಶ್ರಮಿಸುತ್ತೇವೆ." ಪಾರ್ಸಿಗಳಿಗೆ ಅಗ್ನಿ ಪೂಜನೀಯ. ಅವರಲ್ಲಿ ಹೆಂಗಸರೂ ಗಂಡಸರೂ ಎಲ್ಲರಿಗೂ ಜನಿವಾರ ಹಾಕುವ ಒಂದು ಕ್ರಮವಿದೆ. ಅವರು ಹಾಗೆ ಥ್ರೆಡ್ ಸೆರೆಮನಿ ಮಾಡುವ ಮೊದಲು ಗೋಮೂತ್ರ ಕುಡಿಯುತ್ತಾರೆ. ಪಾರ್ಸಿಗಳು ಶವವನ್ನು ಹದ್ದು-ಕಾಗೆಗಳಿಗೆ ತಿನ್ನಲುಬಿಡುತ್ತಾರೆ! ಇಂಥಾ ಪಾರ್ಸಿ ಜನಾಂಗಕ್ಕೆ ರಾಜ ಆಶ್ರಯ ನೀಡಿದ. ಗುರು ಜತುರಾಷ್ಟ್ರನ ಅಣತಿಯಂತೇ ಪ್ರತಿಯೊಬ್ಬ ಪಾರ್ಸಿಯೂ ದೇಶಕ್ಕಾಗಿ ದುಡಿದ. ಅವರ ಜನಾಂಗದ ಪುರೋಹಿತರಲ್ಲಿ[ಪ್ರೀಸ್ಟ್]ಒಂದಿಬ್ಬರು ಹೊಸ ಉದ್ದಿಮೆಗಳನ್ನು ಸ್ಥಾಪಿಸಲು ಮುಂದಾದರು; ದೇಶಕ್ಕಾಗಿ ಏನನ್ನಾದರೂ ಕೊಡುವ ಪ್ರಯತ್ನದ ಜೊತೆಗೆ ಗುರುವಾಣಿಗೆ ಮರ್ಯಾದೆ ಕೊಡುವ ಮಾರ್ಗವೂ ಅದಾಗಿತ್ತು. ಹಾಗೆ ಹುಟ್ಟಿದ್ದು ಟಾಟಾ ಸಮೂಹ! ಇವತ್ತಿಗೂ ಇದೆ, ಯಾವುದೇ ಲಂಚ-ರುಷುವತ್ತು ಇಲ್ಲದೇ ಬೆಳೆಯುತ್ತಿದೆ; ದೇಶದ ಕೋಟ್ಯಂತರ ಜನರಿಗೆ ಕೆಲಸ ಒದಗಿಸಿದೆ. ಪಾರ್ಸಿಗಳು ಬರುವ ಮೊದಲು ದೇಶದಲ್ಲಿ ಆ ಮಟ್ಟದ ಅಭಿವೃದ್ಧಿ ಅಧುನಿಕವಾಗಿ ಆಗಿರಲಿಲ್ಲ! ಪಾರ್ಸಿಗಳನ್ನು ನೋಡಿ ಎಲ್ಲರೂ ನೀತಿಯನ್ನು ಕಲಿಯಬೇಕಾಗಿದೆ.

   ಇತಿಹಾಸದಲ್ಲಿ ಗಜನೀ ಮಹಮ್ಮದ್ ಬಂದ, ಹುಚ್ಚ್ ಮಹಮ್ಮದ್ ಬಂದ[ಮಹಮ್ಮದ್ ಬೀನ್ ತುಘಲಕ್], ಬಂದವರೆಲ್ಲರೂ ಎರಗಿದ್ದು ಹಿಂದೂಸ್ಥಾನದ ಮೂಲನಿವಾಸಿಗಳ ಪ್ರಮುಖ ಆರಾಧನಾ ಸ್ಥಳಗಳಿಗೆ. ಲಗ್ಗೆಹಾಕಿ ಧ್ವಂಸಮಾಡಿ ಧನ-ಕನಕಗಳನ್ನು ಲೂಟಿಹೊಡೆದರು, ದೇವಸ್ಥಾನಗಳ ಜಾಗದಲ್ಲಿ ಮಸೀದಿ ಕಟ್ಟಿಸಿದರು! ನಮ್ಮದೇ ನೆಲದಲ್ಲಿ ನಮ್ಮ ಆರಾಧ್ಯ ದೈವವಾದ ಶ್ರೀರಾಮ ಹುಟ್ಟಿದ ಸ್ಥಳವಾದ ಅಯೋಧ್ಯೆಗೂ ಧಕ್ಕೆಮಾಡಿ ಬಬರಿ ಮೆರೆದ; ಅದು ಇಂದು ನಮ್ಮ ಔದಾರ್ಯದಿಂದ ನಿರ್ಬಂಧಿತ ಪ್ರದೇಶವಾಗಿ ಕೋರ್ಟಿನಲ್ಲಿ ಕೇಸು ಕೂತಿದೆ. ಇತಿಹಾಸದುದ್ದಕ್ಕೂ ಮುಸ್ಲಿಮರಿಂದ ಆದ ಕೆಟ್ಟ ಘಟನೆಗಳೂ ವಿಧ್ವಂಸಕ ಕೃತ್ಯಗಳು ಕಾಣುತ್ತವೆ. ಇವರು ನಮ್ಮಲ್ಲಿ ಅಲ್ಲ ದೇಶದ ಯಾವ ಜನಾಂಗದಲ್ಲೂ ಬೆರೆಯುವುದಿಲ್ಲ. ಆ ಮತವೇ ರಕ್ಕಸಕುಲಮತ. ಅವರ ಗ್ರಂಥದಲ್ಲೇ ಹೇಳಿದೆ: ರಕ್ತಪಾತಮಾಡಿಯಾದರೂ ಮತಾಂತರ ಮಾಡು ಎಂದು. ಎಂದಮೇಲೆ ಅವರೇನು ಮಾಡುತ್ತಾರೆ. ಆಸ್ವಚ್ಛತೆ ಮತ್ತು ಅಂಧಕಾರವೇ ತುಂಬಿರುವ ಆ ಮತದಲ್ಲಿ ಸಂಸ್ಕಾರವನ್ನು ತುಂಬಲು ಪ್ರಯತ್ನಿಸಿ ಜನ ಸೋತಿದ್ದಾರೆ.

   ಪಕ್ಕದಲ್ಲೇ ನಿಂತಿರುವ ಸ್ನೇಹಿತ ಚಕ್ಕನೆ ಚಾಕುಹಾಕಿದರೆ ಮಾಡುವುದಾದರೂ ಏನು? ಅಂತಹ ವಿಶ್ವಾಸಘಾತುಕ ಪ್ರವೃತ್ತಿ ಮುಸ್ಲಿಮರದ್ದು. ಹೊರಗಿನಿಂದ ಎಷ್ಟೇ ಸಾಚಾ ಇದ್ದರೂ ಒಳಗಿನಿಂದ ಅವರ ಕಥೆಯೇ ಬೇರೆ! ಒಬ್ಬ ಅಪ್ಪನಿಗೆ ಊರುತುಂಬಾ ಮಕ್ಕಳು, ಹಾಗಾಗಿ ಬಡತನ. ಮಕ್ಕಳನ್ನು ಹುಟ್ಟಿಸುವಾಗ ಮುಂದಿನ ಯೋಚನೆಯಿಲ್ಲ, ಬಡತನದಲ್ಲಿ ಬೆಳೆಯುವ ಮಕ್ಕಳಿಗೆ ಸ್ವಲ್ಪ ದೊಡ್ಡವರಾದಾಗ ಐ.ಎಸ್.ಐ ನಂತಹ ಅನೇಕ ದ್ರೋಹಿಗಳ ಸಂಪರ್ಕ ದೊರೆತು ಅರೆಕ್ಷಣಕ್ಕೆ ಶ್ರೀಮಂತಿಕೆ ಕೊಡುವ ಆಮಿಷ ದೊರೆಯುತ್ತದೆ. ಅದಕ್ಕೆ ಬಲಿಯಾಗುವ ಇವರು ಅವರು ಹೇಳಿದ್ದನ್ನೆಲ್ಲಾ ಮಾಡುತ್ತಾರೆ. ಪಾಲಕರಿಗೆ ಮಕ್ಕಳು ಹಣ ಸಂಪಾದಿಸುವುದಷ್ಟೇ ಗೊತ್ತು; ಕಳ್ಳಕಿಂಡಿಯಲ್ಲಿ ಸಂಪಾದಿಸಿದರೂ ಪರವಾಗಿಲ್ಲ-ಅವರ ಸಂಸ್ಕಾರವೇ ಅಂಥದ್ದು!

   ಮನೆಯನ್ನು ಹೊಕ್ಕ ಇಲಿ ಹಲವು ಮರಿಗಳನ್ನು ಹಾಕಿದೆ. ಇಲಿಮರಿಗಳು ಬೆಳೆದು ಹುಲಿಗಳಾಗಿಬಿಟ್ಟಿವೆ! ಬೆಳೆದ ’ಹುಲಿಗಳು’ ಮನೆಯ ಜನರನ್ನೇ ತಿಂದುಹಾಕಲು ಹವಣಿಸುತ್ತಿವೆ. ಈಗ ಇರುವುದು ಎರಡೆ ಮಾರ್ಗ:

   ೧. ’ಹುಲಿಗಳನ್ನು’ ಹಿಡಿದು ಬಂಧಿಸಿ ಪಳಗಿಸಿ ಸಾಧುಪ್ರಾಣಿಗಳನ್ನಾಗಿ ಮಾಡುವುದು.

   ೨. ಶ್ರೀಲಂಕಾ ಸರಕಾರ ಎಲ್.ಟಿ.ಟಿಈ. ಮಂದಿಯನ್ನು ಹೊಡೆದುಹಾಕಿದಂತೇ ನಾಶಮಾಡುವುದು.

   ಈ ಎರಡರಲ್ಲಿ ಅವರಿಗೆ ಯಾವುದು ಬೇಕು ಎಂದು ಕೇಳಿಕೊಂಡು ಕಾರ್ಯಗತಗೊಳಿಸಬೇಕಾದ ತುರ್ತು ಕೆಲಸವಿದು.

   ’ಹುಲಿಗಳ’ ವಾರಸುದಾರರು ಏನೇ ಅತ್ತರೂ ಕರೆದರೂ ಅದೆಲ್ಲಾ ಮೊಸಳೆ ಕಣ್ಣೀರು. ಈ ದೇಶದ ಉಪ್ಪನ್ನವನ್ನು ಉಂಡ ಅ ಜನ ದೇಶದ ವಿರುದ್ಧ ಸತತವೂ ಏನನ್ನು ಬೇಕಾದರೂ ಮಾಡಲು ಸಿದ್ಧರು.

   ದೇಶಭಕ್ತರು ಅಧಿಕಾರವನ್ನು ಕೈಗೆ ತೆಗೆದುಕೊಳ್ಳಬೇಕು, ಧೂರ್ತ ರಾಜಕಾರಣಿಗಳನ್ನು ಮನೆಗೆ ಕಳಿಸಬೇಕು. ದೇಶದ ಪ್ರತಿಯೊಬ್ಬ ಮುಸ್ಲಿಂ ಮನೆಯನ್ನೂ ಕಾಲಕಾಲಕ್ಕೆ ತಲಾಶ್ ಮಾಡಬೇಕು. ಅವರ ವಿದೇಶೀ ವ್ಯವಹಾರಗಳ ಮೇಲೆ ಸತತವಾಗಿ ಕಣ್ಣಿಟ್ಟಿರಬೇಕು. ವೀಸಾ-ಪಾಸ್ ಪೋರ್ಟ್ ಕೊಡುವಾಗಲೂ ಮತ್ತು ಪರಿಶೀಲಿಸುವಾಗಲೂ ಅವರಿಗೇ ಬೇರೇ ವಿಶೇಷ ಸಂಶೋಧಕ ತಂಡ ರಚಿಸಬೇಕು-ಆ ತಂಡದ ಅಧಿಕಾರಿಗಳೂ ವಿಶ್ವಾಸದವರಾಗಿರಬೇಕು. [ಲೇಖನದಲ್ಲಿ ಹೇಳಿದ ಷರತ್ತುಗಳನ್ನೂ ಅನುದಾನ-ಸೌಲಭ್ಯ ರಹಿತ ಹಜ್ ಯಾತ್ರೆಗೆ ಬೇಕದರೆ ಅವಕಾಶ ಕೊಡಲಿ]ಇಷ್ಟನ್ನೂ ಮಾಡಿದರೆ ಕೆಲಮಟ್ಟಿಗೆ ಪರಿಹಾರ ಸಿಕ್ಕೀತು; ಅದೂ ಕಷ್ಟವೇ ಸರಿ.

   ತಮ್ಮ ಪ್ರತಿಕ್ರಿಯೆಯಲ್ಲಿ ಹೊಸ ಅಂಶವನ್ನೂ ಹೊರಗೆಡಹಿದ್ದೀರಿ. ಹಜ್ ವಖ್ಪ್ ಅಂತೆಲ್ಲಾ ಕಮಿಟಿ, ಅದರ ಸಭೆಯಲ್ಲಿ ಬಂದ ಜಮೀರ್ ಗಮಾರನಂತೇ ಸರಕಾರದ ವಿರುದ್ಧ ಸಿಡಿದೆದ್ದು ಗ್ಲಾಸಿನ ಟೇಬಲ್ ಎತ್ತಿ ಒಡೆದುಹಾಕುವುದು-ಇಲ್ಲಿಯೇ ನೋಡಿ ಅವರ ದರ್ಪ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. ಒಬ್ಬ ದಾವೂದ್ ಇದ್ದಾನೆ, ಚೋಟಾ ಶಕೀಲ್ ಇದ್ದಾನೆ ಇನ್ಯಾರ್ಯಾರೋ ಇದ್ದಾರೆ-ಹಣ ಬರುತ್ತದೆ. ಆ ಹಣದ ಝಣತ್ಕಾರಕ್ಕೆ ದೇಶವನ್ನು ಮಾರುವ ಜನ ಇವತ್ತಿನ ಇಲ್ಲಿನ ಅನೇಕ ಮುಸ್ಲಿಮರು. ನನಗಂತೂ ಸಂಪೂರ್ಣ ವಿಶ್ವಾಸ ಹೊರಟುಹೋಗಿದೆ.

   ನಿಮ್ಮ ಅನಿಸಿಕೆಗೆ ಧನ್ಯವಾದಗಳು.   Delete
  2. ಎಲ್ಲ ನಿಜ. ಆದರೆ ಒಂದು ಸಣ್ಣ ಬದಲಾವಣೆ ಇದೆ ಎನಿಸುತ್ತದೆ. ಪಾರ್ಸಿಗಳ ಗುರು ಜರಾತುಸ್ತ್ರ.(Zoroaster). ಆತ ಬದುಕಿದ್ದ ಕಾಲ ಕ್ರಿಸ್ತಪೂರ್ವಕ್ಕೂ ಮೊದಲು ೨ ಶತಮಾನಗಳ ಹಿಂದೆ ಎಂದು ಅಂದಾಜು ಇದೆ. ಆದ್ರೆ ಪಾರ್ಸಿಗಳು ಭಾರತಕ್ಕೆ ಆಶ್ರಯ ಕೇಳಿ ಬಂದದ್ದು ಸುಮಾರು ಕ್ರಿ.ಶ 10 ನೆಯ ಶತಮಾನ ಇರಬಹುದು. ಮೂಲತಹ ಕೆಲವು ಇತಿಹಾಸಕಾರರ ಪ್ರಕಾರ ಪಾರ್ಸಿಗಳು ಮತ್ತು ಹಿಂದೂಗಳು ಒಂದೇ. ಸಂಸ್ಕ್ರತಿ ಮತ್ತು ಎರಡೂ ಧರ್ಮಗಳಲ್ಲಿ ಬಹಳಷ್ಟು ಸಾಮ್ಯತೆ ಇದೆ. ಅವರ ಮಂತ್ರೋಕ್ತಿಯಲ್ಲಿ ಅನೇಕ ಸಂಸ್ಕ್ರತ ಶಬ್ದಗಳನ್ನು ಕಾಣಬಹುದು. ಭಾರತದಲ್ಲಿ ಅಲ್ಪಸಂಖ್ಯಾತರಾಗಿದ್ದರೂ ಅವರು ಯಾವುದೇ ರಿಯಾಯತಿಯನ್ನು ಪಡೆಯಲಿಲ್ಲ. ಇನ್ನು ಉಳಿದ ಪಾರ್ಸಿಗಳು ಈಗ ಅವರದೇ ನಾಡಿನಲ್ಲಿ (ಇರಾನ್) ಅವರು ಎರಡನೇ ದರ್ಜೆಯ ನಾಗರೀಕರು. ಒಂದಂತೂ ನಿಜ. ಮುಸ್ಲೀಮರು ಎಲ್ಲಿಯವರೆಗೆ ಕಡಿಮೆ ಸಂಖ್ಯೆಯಲ್ಲಿರುತ್ತಾರೋ ಅಲ್ಲಿಯ ತನಕ ಸಹನೆ ಶಾಂತಿಯಿಂದಿರುತ್ತಾರೆ. ಯಾವಾಗ ಅವರ ಜನಸಂಖ್ಯೆ ಬೆಳೆಯಿತೋ ಅವರು 'ಖುರಾನ್' ಆಡಳಿತ ಬೇಕೆನ್ನುತ್ತಾರೆ. ಪ್ರಪಂಚದಲ್ಲಿ ಯಾವ ಮುಸ್ಲಿಂ majority ದೇಶಗಳಲ್ಲೂ ಪ್ರಜಾಪ್ರಭುತ್ವವಿಲ್ಲ; ಶಾರಿಯ ಆಡಳಿತ. ಈಗ ಪಾಕಿಸ್ತಾನದ ISI ಮತ್ತು ಬಾಂಗ್ಲಾ ದೇಶಗಳೆರಡೂ ಸೇರಿ ಒಂದು ಪ್ಲಾನ್ ಮಾಡಿವೆ. "ಮುಘಲಿಸ್ತಾನ್" ಎಂದು. ವಿವರ ಇಲ್ಲಿದೆ:
   http://www.indiandefence.com/forums/strategic-geopolitical-issues/18927-pakistan-bangladesh-plan-mughalistan-split-india.html

   http://www.bengalgenocide.com/mughalistan.php

   Delete
  3. ಹೌದು, ನಿಮ್ಮ ಹೇಳಿಕೆಯನ್ನು ಒಪ್ಪುತ್ತೇನೆ, ಹೆಸರು ನಾನು ತರ್ಜುಮೆ ಮಾಡುವಾಗ ತಪ್ಪಾಗಿ ಗ್ರಹಿಸಿದ್ದೇನೆ, ಜರಾತುಷ್ಟ್ರ ಎಂಬುದೇ ಸರಿ, ಆದರೆ ಆತನ ಕಾಲಮಾನದ ಬಗ್ಗೆ ವಿವಾದ ಇದೆ, ಆತ ಪಾರ್ಸಿಗಳ ಮೂಲಗುರುವೋ ಅಥವಾ ನಡುವೆ ಭಾರತಕ್ಕೆ ಬರುವ ಸಮಯದಲ್ಲಿ ಇದ್ದ ಗುರುವೋ ತಿಳಿಯದು, ಒಂದು ಆಧಾರದ ಪ್ರಕಾರ ಭಾರತಕ್ಕೆ ಅವರು ಸಾಗಿಬಂದ ನೌಕೆಯಲ್ಲಿ ಪಾರ್ಸಿಗಳಿಗೆ ಸಲಹೆನೀಡುತ್ತಾ ಆತನೇ ಇದ್ದ, ಆದರೆ ಇದೇ ಪರಮ ಸತ್ಯವೋ ನೀವು ಹೇಳಿದ್ದು ಸತ್ಯವೋ ನನಗೂ ಅರಿವಿಗಿಲ್ಲ! ಒಂದಂತೂ ಸತ್ಯ: ಇಲ್ಲಿ ಮೈನಾರಿಟಿ ಎಂಬ ’ಬಿರುದ’ನ್ನೂ ಪಟ್ಟವನ್ನೂ ಕೇಳದೇ/ಪಡೆಯದೇ ಅವರೇ ಭಾರತವನ್ನು ಕಟ್ಟುವಲ್ಲಿ ಮುಂದೆನಿಂತರು. ಮುಸ್ಲಿಮರ ಕುರಿತು ನೀವು ಹೇಳಿದ್ದರಲ್ಲಿ ೧೦೦೦% ಸಹಮತವಿದೆ.

   Delete
 11. ನೀತಿಕಥೆಯಿಂದ ಆರಂಭವಾಗಿ , ದೇಶದ ಇತಿಹಾಸದ ಪುಟಗಳ ಒಮ್ಮೆ ತಿರುವಿ ನೋಡಿ ಹಾಕುವಂತೆ ಮಾಡಿದ ಲೇಖನ.. ಯಾವ ಸಂದರ್ಭಗಳು ಹೇಗೆ ಹುಟ್ಟಿದ್ದು ಎಂಬ ಆಲೋಚನೆಗಳನ್ನು ವಿಧವಿಧವಾಗಿ ಮೂಡಿಸುತ್ತಾ , ಒಳಿತು ಕೆಡಕುಗಳ ಬಗ್ಗೆ ಬೆಳಕು ಚೆಲ್ಲುತ್ತಾ , ಜಾತಿವಾದ , ಉಗ್ರಗಾಮಿ ಚಟುವಟಿಕೆ , ವೈಜ್ಞಾನಿಕ ದುರ್ಬಳಕೆ ಮತ್ತು ಭ್ರಷ್ಟ ರಾಜಕೀಯ ವ್ಯವಸ್ಥೆಯ ಬಗ್ಗೆ ವಿವರವಾಗಿ ಮತ್ತು ನೇರವಾಗಿ ಹಾಗೂ ಕಥೆಯ ಮೂಲಕ ಒಂದು ಚಿತ್ರಣ ರೂಪದಲ್ಲಿ ಪ್ರಸ್ತುತಪಡಿಸಿದ , ಉತ್ತಮ ಸಂದೇಶ ಸಾರುವ ಈ ಲೇಖನವನ್ನು ಒಮ್ಮೆ ಎಲ್ಲರೂ ಓದಲೇಬೇಕು ಮತ್ತು ದೇಶದ ಒಳಿತಿಗಾಗಿ ಚಿಂತನೆಗಳನ್ನು ಮಾಡಬೇಕು .. :)
  ತುಂಬಾ ಚೆಂದ ಬರೆದಿದ್ದೀರಾ ಸರ್.. :)

  ReplyDelete
  Replies
  1. ಧನ್ಯವಾದಗಳು ಪ್ರಶಾಂತ್, ಬಹಳ ಜನ ಆರ್.ಎಸ್.ಎಸ್ ಬಗ್ಗೆ ಬೈಯ್ಯುತ್ತಾರೆ. ಇವತ್ತಿಗೆ ಆರ್.ಎಸ್.ಎಸ್ ಇರದಿದ್ದರೆ ಭಾರತದ ಸ್ಥಿತಿ ಹೇಗಿರಬಹುದಿತ್ತು ಎಂಬುದನ್ನು ಊಹಿಸಿಕೊಳ್ಳಿ-ಅದು ಊಹಿಸಿಕೊಳ್ಳಲೂ ಅಸಾಧ್ಯವಾದುದು.

   Delete
 12. ನಿಮ್ಮ ಲೇಖವನ್ನ ನೀವೇ ಹೊರಗಿನಿ೦ದ ಓದಿ ನೋಡಿ , ಜಾಗತಿಕ ಕಾಲಘಟ್ಟದಲ್ಲಿ ನೀವು ಪ್ರತಿ ಪಾದಿಸುತ್ತಿರುವ ನಿಲುವು ಸಮರ್ಥನೀಯವಲ್ಲ .ಎಲ್ಲಕ್ಕಿ೦ತಮಿಗಿಲಾಗಿ ನೀವುಕೆಲವು ಪೊರ್ವ ನಿರ್ಧಾರಿತ ಅ೦ಶಗಳಿ೦ದಲೆ ಲೇಖನ ಬರೆದ್ದಿದಿರಿ .ಯಾರು ಪ್ರಚಾರಕ್ಕಾಗಿ ಎಡಪ೦ಥೀಯರಾದ ಇತಿಹಾಸ ಭಾರತದ ಚರಿತ್ರೆಯಲ್ಲೆ ಇಲ್ಲ .

  ReplyDelete
  Replies
  1. ಶಿವಪ್ರಸಾದರೇ, ಈಗ ಎಡಪಂಥೀಯರಾಗುವುದೇ ಅಗ್ಗದ ಪ್ರಚಾರ ಪಡೆಯಲಿಕ್ಕಾಗಿ, ಭಾರತೀಯ ಚರಿತ್ರೆ ನಿಮಗೆಷ್ಟು ಗೊತ್ತು? ಹಿಂದೆ ಎಡಪಂಥವೆಂಬುದು ಇರಲಿಲ್ಲ, ಅದು ಅಧುನಿಕ ನಾಗರಿಕತೆ ಅಧೋಗತಿಗಿಳಿಯುತ್ತಿರುವುದರ ಪ್ರತೀಕ.

   Delete
  2. ನೀವು ನಿಮ್ಮಗೆ ತಿಳಿದಿರುವುದೇ ಚರಿತ್ರೆ ಅ೦ದರೆ ನಿಮ್ಮ ಲೇಖನ ಅಧ್ಬುತ .ಯಾವುದೇ ಯಾರದೆ ವಾದ ಸರಿ ಎನ್ನಿಸಬೇಕಾದರೆ ,ಅವು ಈ ನೆಲದ ಬೇರುಗಳೊ೦ದಿಗೆ ಸ೦ಬ೦ಧ ಪಟ್ಟವಾಗಿರಬೇಕು ಹಾಗೊ ಅವು ಸಾರ್ವತ್ರಿಕವಾಗಿ ಮಾನ್ಯವಾಗಬೇಕಲ್ಲವೆ ? ನಾನು ಸಹ ಬಸವಣ್ಣ ಮತ್ತು ಕಾರ್ಲ್ ಮಾರ್ಕ್ಸ್ ಒ೦ದು ಸಾಮಾಜಿಕ ಅಧ್ಯಯನ ಎ೦ಬುದರ ಕುರಿತು ದೀರ್ಘ ಅಧ್ಯಯನ ಮಾಡಿದವನು .ಈ ನೆಲದ ದುಡಿಯುವ ವರ್ಗವನ್ನ ಹೊರತಾದ ಚರಿತ್ರೆಯನ್ನ ಏನ೦ತ ಕರೆಯುವುದು .ಕಮ್ಯೊನಿಸ್ಟ್ ಶಬ್ದ ಮರೆತುಬಿಡಿ , ಈ ನೆಲದ ರೈತ, ಕೂಲಿ ಕಾರ್ಮಿಕ ಹಾಗೂ ಎಲ್ಲ ಶ್ರಮ ಜೀವಿ ವರ್ಗಗಳಿ೦ದ ಮಾತ್ರ ನಿಜ ಚರಿತ್ರೆ ಚಲಿಸುತ್ತದೆ ಅವರನ್ನ ಮರೆತ ಚರಿತ್ರೆ ಜಗತ್ತಿನಲ್ಲೆ ಇಲ್ಲ. ನೀವು ನಿಗಧಿ ಪಡಿಸಿದ ಧರ್ಮ ಜಾತಿ ಹ೦ಗು ಅವಕ್ಕಿಲ್ಲ.

   Delete
  3. ನೋಡೀ ಪ್ರಸಾದರೇ, ಕೋಟಿವಿದ್ಯೆಗಳಲ್ಲಿ ಮೇಟಿ ವಿದ್ಯೆ ಮೇಲು ಎಂಬುದನ್ನು ನಾನೂ ಮತ್ತು ನನ್ನಂಥಾ ಅನೇಕರು ಒಪ್ಪುತ್ತೇವೆ. ನಾವೆಲ್ಲಾ ಮೂಲದಲ್ಲಿ ರೈತರೇ-ಈಗ ನಾವು ಮಕ್ಕಳು ಮಾತ್ರ ನಗರವಾಸಿಗಳು. ನಮ್ಮನೆಯಲ್ಲಿ ನಮ್ಮ ಕೆಲಸಗಳನ್ನು ಸ್ವತಃ ನಾವೇ ಮಾಡಿಕೊಳ್ಳುತ್ತೇವೆ. ನಾವೂ ಕಾರ್ಮಿಕರೇ. ಎಂದಮೇಲೆ ನೀವು ಹೇಳಿದ ದುಡಿಯುವ ವರ್ಗದ ಬಗ್ಗೆ ಇಲ್ಲಿ ಯಾಕೆ ಬರೆದಿರಿ ಎಂಬುದು ಸ್ಪಷ್ಟವಾಗಲಿಲ್ಲ. ಮನುಷ್ಯ ಜೀವನಕ್ಕೆ ಉದ್ಯೋಗ ಬೇಕೇ ಬೇಕು. ಜೀವನದ ಅಂಗಾಂಗಗಳಾಗಿ ಆಹಾರೋತ್ಫನ್ನಗಳ ಜೊತೆಗೆ ಬಟ್ಟೆ, ಪಾತ್ರೆ, ಉಪಯೋಗೀ ಸಾಮಾನುಗಳು, ಉಪಕರಣಗಳಿ ಇತ್ಯಾದಿ ಇತ್ಯಾದಿ ಎಲ್ಲಾ ಬೇಕಲ್ಲವೇ? ಅಲ್ಲೆಲ್ಲಾ ಕಾರ್ಮಿಕಜರಿದ್ದಾರಲ್ಲಾ? ದುಡಿಯುವ ವರ್ಗದಲ್ಲಿ ಧರ್ಮ, ಜಾತಿ ಭೇದ ಇದೆ ಎಂದು ಯಾರು ಹೇಳಿದರು ಸ್ವಾಮೀ? ಎಲ್ಲರೂ ದುಡಿಯಲೇ ಬೇಕು; ಅಂದರೇ ಹೊಟ್ಟೆಗೆ ಅನ್ನ.

   Delete
 13. ಭಟ್ಟರೇ,
  ನಿಮ್ಮ ಸುದೀರ್ಘ ಲೇಖನದಲ್ಲಿ ಅಖ೦ಡ ಭಾರತದ ವಿಭಜನೆ, ಪಾಕಿಸ್ತಾನದ ಉದಯ, ಗಾ೦ಧೀಜಿ ತಳೆದ ಧೋರಣೆ ಇವೆಲ್ಲವನ್ನೂ ಸಾದ್ಯ೦ತ ಚರ್ಚಿಸಿದ್ದೀರಿ. ಜೊತೆಗೆ ಸನ್ನಿವೇಶಕ್ಕೆ ತಕ್ಕ ಕಥೆ ಗಳನ್ನೂ ಕೊಟ್ಟಿದ್ದೀರಿ. ಹೌದು, ಸ್ವಾತ೦ತ್ರ್ಯಾ ನ೦ತರದಲ್ಲಿ ನಡೆದ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬ೦ದವರಿಗೆ ಅಧಿಕಾರಸ್ಥರ ನಡವಳಿಕೆ ವಿಚಿತ್ರವಾಗಿ ತೋರುತ್ತದೆ. ಅವರು ಮುಸ್ಲಿಮರಿಗೆ ಅಲ್ಪಸ೦ಖ್ಯಾತರೆ೦ಬ ಓಲೈಕೆಯಲ್ಲಿ ಅನೇಕ ಸಲ್ಲದ ಸವಲತ್ತುಗಳನ್ನು ಕೊಟ್ಟು ಭಾರತೀಯತೆಯನ್ನು ತುಳಿಯುತ್ತಿದ್ದಾರೆ. ಜನಾ೦ಗಗ ಮಧ್ಯೆ ಕ೦ದಕ ಸೃಷ್ಟಿಯಾಗುವ೦ತೆ ಮಾಡಿದ್ದಾರೆ. ಅವರ ವೈಯ್ಯಕ್ತಿಕ ಹಕ್ಕುಗಳಿಗೆ ಮನೆ ಹಾಕಿ, ಇತರೆ ಜನಾಂಗದವರ ಆಚರಣೆಗಳನ್ನು ತುಚ್ಚೀಕರಿಸುವ ಹೀಗಳೆಯುವ ಪ್ರವೃತ್ತಿ ನಡೆದೇ ಇದೆ. ನೀವು ಹೇಳಿದ ಬುರ್ಖಾ ನಿಷೇಧ ಸರಿಯಾದ ಒತ್ತಾಯವೇ? ನಾನು ನಿಮ್ಮ ಲೇಖನವನ್ನು ಬಲವಾಗಿ ಪ್ರತಿಪಾದಿಸುತ್ತೇನೆ. ಕಣ್ತೆರೆಸುವ ಲೇಖನ.

  ReplyDelete
 14. ಇಸ್ಲಾಂ

  " ಇಸ್ಲಾಂ " ಎಂದರೆ ಪ್ರೀತಿ ಮತ್ತು ಶಾಂತಿಯಲ್ಲಿ ಶರಣಾಗು ಎಂದರ್ಥ ಈಗ ಏಲ್ಲಿಯು ಪ್ರೀತಿ ಮತ್ತು ಶಾಂತಿ ಇಲ್ಲದಿರುವುದೇ ದುಃಖದ ಸಂಗತಿ. ಸರ್ವಶಕ್ತನಾದ ಆ ನಿರಾಕಾರನಾದ ಭಗವಂತನನ್ನು ಬಿಟ್ಟು ಯಾರನ್ನು, ಯಾವುದನ್ನು ದೇವರೆಂದು ತಲೆ ಬಾಗಬೇಡವೆಂದು ಹೇಳುತ್ತದೆ. ತಾಯಿ ತಂದೆಯಾಗಲಿ ಗುರು ಹಿರಿಯರೇ ಆಗಲಿ ಭೂವಿಯಲ್ಲಿ ಹುಟ್ಟಿದ ಮನುಷ್ಯರನ್ನು ದೇವರೆಂದು ಮಾತೃಭೂಮಿಯಾಗಲೀ ನದಿಯಾಗಲೀ ಸಾಗರವನ್ನಾಗಲೀ ಹೀಗೆ ಪ್ರಕೃತಿಯ ಯಾವ ಚರಾಚರ ಜೀವರಾಶಿಗಳನ್ನು ದೇವರೆಂದು ಭಾವಿಸದಿರೀ, ಕಾರಣ ಇವೇಲ್ಲಾ ಸರ್ವಙ್ಞನಾದ ಭಗವಂತನ ಸೃಷ್ಟಿ ಮಾತ್ರ. ಅವನಿಗೆ ಸಮನಾದುದ್ದು ಈ ಪ್ರಪಂಚದಲ್ಲಿ ಯಾವುದು ಇಲ್ಲ. ಅವನೊಂದಿಗೆ ಯಾರನ್ನು, ಯಾವುದನ್ನು ಹೊಲಿಕೆ ಮಾಡದಿರಿ.
  ಆದರೇ, ತಂದೆ ತಾಯಿಯ ಸೇವೆಯನ್ನು ಮಾಡಿರಿ ಕಾರಣ, ಅವರ ಕಾಲಡಿಯಲ್ಲಿಯೇ ಸ್ವರ್ಗವಿದೆಯೆಂದು ಹೇಳುತ್ತದೆ.
  ನೆರೆ ಹೊರೆಯವರು ಹಸಿವಿನಿಂದ ಉಪವಾಸದಿಂದಿರುವಾಗ ಒಬ್ಬ ನೈಜ ಮುಸ್ಲೀಮರು ಹೊಟ್ಟೆತುಂಬ ತಿನ್ನಬಾರದು ಎಂದು ಹದ್ದಿಸ್ ಹೇಳುತ್ತದೆ.
  ಇಸ್ಲಾಂನಲ್ಲಿ ಅಸ್ಪೃರ್ಶತೆ ಎಂಬ ಕಲ್ಪನೆಯೇ ಇಲ್ಲ.
  ಸ್ತೀ ಮತ್ತು ಪುರುಷರಲ್ಲಿ ಸಮಾನತೆಗೆ ಹೊತ್ತು ನೀಡುತ್ತದೆ.
  ಸಮಾಜದ ಕ್ಷೋಭೆ ಕೊಲೆಗಿಂತ ಕೆಟ್ಟದ್ದು
  ನಿಮ್ಮೊಡನೆ ಯುದ್ಧ ಮಾಡಬೇಕೆಂದು ಬಂದಿರುವವರೊಡೆ ಯುದ್ಧಮಾಡಿ ಆದರೆ ಅತಿಕ್ರಮ ಮಾತ್ರ ಬೇಡಎನ್ನುತ್ತದೆ.
  ೩ ಮೂರು ಹೆಣ್ಣುಮಕ್ಕಳಿಗೆ ಮದುವೆ ಮಾಡಿಕೊಟ್ಟರೇ ಹಜ಼್ ಮಾಡಿದಷ್ಟು ಪುಣ್ಯ ದೊರೆಯುತ್ತದೆ.

  ಇಸ್ಲಾಂನ ಪ್ರವಾದಿ ಮಹಮದ್ ಪೈಗಂಬರ್ ಹೇಳುತ್ತರೆ. ಮನುಷ್ಯನಿಗೆ ಬಹು ಮುಖ್ಯವಾದದ್ದು ಶುದ್ಧತೆ ಅದನ್ನು ಪ್ರತಿಯೊಬ್ಬ ಮುಸ್ಲಲ್ಮಾನನು ಕಡ್ಡಾಯ ಪಾಲಿಸಬೇಕು. ಕಾರಣ, ಅದು ೨/೩ ಶುದ್ಧತೆಯಿದ್ದು, ೧ ಭಾಗ ಮಾತ್ರ ಸರ್ವಶಕ್ತ ಆ ಭಗವಂತನ ೫ ವೇಳೆ ಪ್ರಾರ್ಥನೆಮಾಡಿ ಹೀಗಿದ್ದವನ ಪ್ರಾರ್ಥನೆ ದೇವರಿಗೆ ಸಮರ್ಪಣೆಯಾಗುತ್ತದೆ ಮಿಕ್ಕೆಲ್ಲಾ ಪ್ರಾರ್ಥನೆ ವ್ಯೆರ್ಥವಾಗುತ್ತದೆ ಎನ್ನುತ್ತದೆ.
  ಆ ಶುದ್ಧತೆಯಲ್ಲಿ ಮುಖ್ಯವಾಗಿ ದೇಹಶುದ್ಧಿ, ನಡೆಶುದ್ಧಿ, ಅಂತರಂಗಶುದ್ಧಿ,( ಮನಶುದ್ಧಿ )ಬಹಿರಂಗಶುದ್ಧಿ, ( ಮನೆವಾತವರಣ ಶುದ್ಧಿ )ವಾಕ್‍ಶುದ್ಧಿ, ಕರ್ತವ್ಯ ಉದ್ಯೋಗದಲ್ಲಿಯು ಶುದ್ಧತೆ ಇರಬೇಕೆಂದು ಹೇಳುತ್ತಾರೆ.

  " ಜ಼ಿಹಾದ್ " ಅಥವಾ " ಧರ್ಮಯುದ್ಧ "
  ಜ಼ಿಹಾದ್ ಎಂದರೆ ಅದು "ಧರ್ಮಯುದ್ಧ" ಧರ್ಮಯುದ್ಧದ ಅರ್ಥವೇ ಬೇರೆ ಅದನ್ನು ತಪ್ಪಾಗಿ ಇಂದಿನ ಕಾಲಗುಣಕ್ಕೆ ತಕ್ಕಂಥೆ ಅರ್ಥೈಸುತ್ತಾರೆ.
  ಆ ಯುದ್ಧ ಅಙ್ಞಾನದ ವಿರುದ್ಧ, ಬಡತದ ವಿರುದ್ಧ, ಶೋಷಣೆಯ ವಿರುದ್ಧ, ಮನುಕುಲದ ಆಪತ್ತಿನ ವಿರುದ್ಧ,ಹೋರಾಡುವುದೇ ಜ಼ಿಹಾದ್ ಆಗುತ್ತದೆ.

  ಅದರಲ್ಲಿ ಕಾನೂನುಗಳಿವೆ :-
  ನ್ಯಾಯ ಪರವಾಗಿರು
  ಅನ್ಯಾಯ ಮಾಡದಿರು
  ಅದೈರ್ಯ ಗೊಳ್ಳದೇ ದೈರ್ಯವಾಗಿರು
  ಕರುಣೆವುಳ್ಳವರಾಗಿರು
  ಮಕ್ಕಳನ್ನು ಕೊಲ್ಲದಿರು
  ಹೆಣ್ಣುಗಳನ್ನು, ವೃದ್ಧರನ್ನು ಕೊಲ್ಲದಿರು
  ಅತ್ಯಾಚಾರಮಾಡದಿರು
  ಹಣ್ಣು ಆಹಾರ ದಾನ್ಯವನ್ನು ಪ್ರಾಣಿ ಪಕ್ಷಿಗಳನ್ನು ನಾಶಮಾಡದಿರು
  ಶತೃಗಳಿಗೆ ನೀಡಿದ ಮಾತು ಉಳಿಸಿಕೊಳ್ಳು
  ಒಬ್ಬ ಮನುಷ್ಯನಕೊಂದರೇ ಅವನು ಮನುಕುಲವನ್ನೇ ಕೊಂದಂತೆ ಜೀವದಾನ ಮಾಡಿದರೇ ಮನುಕುಲಕ್ಕೆ ಜೀವದಾನ ಕೊಟ್ಟಂತೆ .
  ಶರಣಾಗದಿರು ಶರಣಾಗುವುದಕಿಂತ ಸಾವುದೇ ಮೇಲು

  ReplyDelete
 15. This comment has been removed by the author.

  ReplyDelete